ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸೋಮವಾರ ಅಯೋಧ್ಯೆಯ ರಾಮಮಂದಿರಕ್ಕೆ (Ram Mandir) ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆಮ್ ಆದ್ಮಿ ಪಕ್ಷದ (AAP) ನಾಯಕ ಅವರ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ಭೇಟಿ ನೀಡಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಕೂಡ ಪವಿತ್ರ ತಾಣಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ದರ್ಶನಕ್ಕೆ ಅಯೋಧ್ಯೆಗೆ ಬಸ್‌ನಲ್ಲಿ ತೆರಳಿದ ಯುಪಿ ಶಾಸಕರು
ಜ.22 ರಂದು ನಡೆದ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ತನಗೆ ಔಪಚಾರಿಕ ಆಹ್ವಾನ ಬಂದಿಲ್ಲ ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು. ಅವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದಾರೆ ಎನ್ನಲಾಗಿತ್ತು.
ಬಿಜೆಪಿ, ಕಾಂಗ್ರೆಸ್, ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಒಪಿ ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ ಮತ್ತು ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ ಸೇರಿದಂತೆ ಇತರ ಪಕ್ಷಗಳ ಶಾಸಕರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
– 75ನೇ ಗಣರಾಜ್ಯೋತ್ಸವಕ್ಕೂ ಮುನ್ನ ದಿನ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮಾತು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು (ಬುಧವಾರ) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದು ಯುಗ ಬದಲಾವಣೆಯ ಅವಧಿಯಾಗಿದೆ ಆಶಯ ವ್ಯಕ್ತಪಡಿಸಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ರಾಷ್ಟ್ರಪತಿ ಸ್ಮರಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ದೇಶಕ್ಕೆ ಐತಿಹಾಸಿಕ ಮತ್ತು ಮಹತ್ವದ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಭವಿಷ್ಯದ ಇತಿಹಾಸಕಾರರು ಭಾರತದ ನಾಗರಿಕತೆಯ ಪರಂಪರೆಯ ಮರು ಅನ್ವೇಷಣೆಯಲ್ಲಿ ಹೆಗ್ಗುರುತಾಗಿ ನೋಡುತ್ತಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ದೇವಾಲಯದ ನಿರ್ಮಾಣವು ಪ್ರಾರಂಭವಾಯಿತು. ಈಗ ಅದು ಭವ್ಯ ಸೌಧವಾಗಿ ನಿಂತಿದೆ. ಇದು ಜನರ ನಂಬಿಕೆಗೆ ಸೂಕ್ತವಾದ ಅಭಿವ್ಯಕ್ತಿಯನ್ನು ನೀಡುತ್ತದೆ. ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ಅಗಾಧ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ಪೂರಿ ಜೀ ಅವರ ಕೊಡುಗೆಯಿಂದ ಸಾರ್ವಜನಿಕ ಜೀವನವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ದ್ರೌಪದಿ ಮುರ್ಮು ತಿಳಿಸಿದ್ದಾರೆ.
1988 ರಲ್ಲಿ ನಿಧನರಾದ ಎರಡು ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರು ಬಡವರು ಮತ್ತು ಹಿಂದುಳಿದ ವರ್ಗಗಳ ಉನ್ನತಿಗೆ ನೀಡಿದ ಕೊಡುಗೆಗಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಭಾಜನರಾಗಿದ್ದಾರೆ. ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಜ.22 ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿತು.
500 ವರ್ಷಗಳ ಮತ್ತೊಂದು ವನವಾಸ ಮುಗಿಸಿ ಭಗವಾನ್ ರಾಮ ಅಯೋಧ್ಯೆಯಲ್ಲಿ (Ayodhya) ಮತ್ತೆ ಪಟ್ಟಕ್ಕೇರಿ ವಿರಾಜಮಾನನಾಗಿದ್ದಾನೆ. ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆ ಕಡೆ ಧಾವಿಸುತ್ತಿದೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆಯಾಗಿದೆ. ದೇಶ-ವಿದೇಶಗಳಲ್ಲಿ ರಾಮ ಜಪ, ಭಜನೆ ಇನ್ನೂ ಮಾರ್ಧನಿಸುತ್ತಿದೆ. ಇದು ತೀರದ ಭಕ್ತಿ.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ – ಮಂಕುತಿಮ್ಮ
ಕನ್ನಡದ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿಗೆ ಹೇಳಿಮಾಡಿಸಿದಂತೆ ಅಯೋಧ್ಯೆ ರಾಮಮಂದಿರ ವಿನ್ಯಾಸ. ಈ ಭವ್ಯ ದೇವಾಲಯ ನಿರ್ಮಾಣಕ್ಕೆ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪ ಹಾಗೂ ಆಧುನಿಕ ವಿಜ್ಞಾನ, ಎಂಜಿನಿಯರಿಂಗ್, ತಾಂತ್ರಿಕ ವಿಧಾನವನ್ನು ಸಂಯೋಜಿಸಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಶತಶತಮಾನಗಳ ವರೆಗೂ ರಾಮಭಕ್ತಿಯ ಪ್ರತಿಬಿಂಬವಾಗಿ ಈ ದೇವಾಲಯ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ‘ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲಾಗಿದೆ. ಇದನ್ನು ಹಿಂದೆಂದೂ ಕಾಣದಂತಹ ಅಪ್ರತಿಮ ರಚನೆಯನ್ನಾಗಿ ಮಾಡಲು ಭಾರತದ ಉನ್ನತ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ದೇವಾಲಯದಲ್ಲಿ ಇಸ್ರೋ ತಂತ್ರಜ್ಞಾನಗಳನ್ನು ಸೂಕ್ತವಾಗಿ ಬಳಸಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!
ನಾಗರ ಶೈಲಿ ದೇವಾಲಯ
ಅಯೋಧ್ಯೆಯಲ್ಲಿ ಈಗ ಕಟ್ಟಲಾಗಿರುವ ರಾಮಮಂದಿರ ಸಂಪೂರ್ಣ ನಾಗರ ವಾಸ್ತು ಶೈಲಿಯಲ್ಲಿದೆ. ಉತ್ತರ ಭಾರತದ ಪುರಾತನ ದೇವಸ್ಥಾನಗಳೆಲ್ಲ ನಾಗರ ಶೈಲಿಯಲ್ಲೇ ಇವೆ. ಮುಖ್ಯವಾಗಿ ಗುಪ್ತರ ಕಾಲದಲ್ಲಿ ಶೈಲಿಯ ಹಲವು ದೇವಾಲಯಗಳನ್ನು ಕಾಣಬಹುದು. ನಾಗರ ಶೈಲಿಯ ವಿಶೇಷ ಏನೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಪಗಳಿರುತ್ತವೆ (ರಾಮಮಂದಿರಕ್ಕೆ 5 ಮಂಟಪಗಳಿವೆ). ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ.
ಈ ದೇವಾಲಯದ ಶಿಲ್ಪಿ ಯಾರು?
ರಾಮಮಂದಿರ ವಾಸ್ತು ಶಿಲ್ಪಿ ಚಂದ್ರಕಾಂತ್ ಸೋಂಪುರ. ಅವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಪ್ರಭಾಕರ್ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ಕಟ್ಟುವ ಶಿಲ್ಪಿ ಅವರು. ತಲೆಮಾರುಗಳಿಂದ ಈ ಕುಟುಂಬ, ಸಂಪ್ರದಾಯದಂತೆ ಪರಂಪರೆಯ ದೇವಾಲಯ ರಚನೆಗಳನ್ನು ವಿನ್ಯಾಸಗೊಳಿಸಿಕೊಂಡು ಬಂದಿದೆ. ಈ ಕುಟುಂಬ 100 ಕ್ಕೂ ಹೆಚ್ಚು ದೇವಾಲಯಗಳನ್ನು ವಿನ್ಯಾಸಗೊಳಿಸಿದೆ. ಕೋಟ್ಯಂತರ ಭಾರತೀಯರ ಶತಶತಮಾನಗಳ ಕನಸಾಗಿದ್ದ ಭವ್ಯ ರಾಮಮಂದಿರವನ್ನು ವಿನ್ಯಾಸಗೊಳಿಸಿದ್ದು ಚಂದ್ರಕಾಂತ್ ಸೋಂಪುರ ಅವರ ಪುಣ್ಯ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!
ವಾಸ್ತುಶಿಲ್ಪಿ ಹೇಳೋದೇನು?
ವಾಸ್ತುಶಿಲ್ಪದ ವಾರ್ಷಿಕಗಳಲ್ಲಿ ಶ್ರೀರಾಮ ದೇವಾಲಯವು ಭಾರತದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಯಾವುದೇ ಸ್ಥಳದಲ್ಲಿ ಇದುವರೆಗೆ ಕಲ್ಪಿಸಲಾಗದ ಅಪರೂಪದ, ವಿಶಿಷ್ಟ ರೀತಿಯ ಭವ್ಯವಾದ ಸೃಷ್ಟಿಯಾಗಿದೆ ಎಂದು ಚಂದ್ರಕಾಂತ್ ಸೋಂಪುರ ಹೇಳುತ್ತಾರೆ.
ಮಂದಿರ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್ ಬಳಕೆಯಿಲ್ಲ
ರಾಮಮಂದಿರದ ಮತ್ತೊಂದು ವೈಶಿಷ್ಟ್ಯವೆಂದರೆ, ಪುರಾತನ ಕಾಲದಲ್ಲಿ ಶಿಲೆಯನ್ನಷ್ಟೇ ಬಳಸಿ ನಿರ್ಮಿಸುತ್ತಿದ್ದಂತೆಯೇ ಇದನ್ನೂ ನಿರ್ಮಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಬೃಹತ್ ಗಾತ್ರದ ಕಲ್ಲುಗಳನ್ನಷ್ಟೇ ಬಳಸಲಾಗಿದೆ. ಕಬ್ಬಿಣ, ಸಿಮೆಂಟ್ ಯಾವುದನ್ನೂ ಬಳಸಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮಂದಿರ ಡ್ಯಾಮೇಜ್ ಆಗಬಾರದು. ಅದರ ಆಯುಷ್ಯವೂ ಹೆಚ್ಚಿನ ವರ್ಷ ಬರಬೇಕು ಎಂಬ ದೃಷ್ಟಿಯಿಂದ ನಿರ್ಮಾಣ ಕಾರ್ಯದಲ್ಲಿ ಪಾರಂಪರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!
ದೇವಾಲಯದ ಒಟ್ಟು ವಿಸ್ತೀರ್ಣ 2.7 ಎಕರೆ. ನಿರ್ಮಿತ ಪ್ರದೇಶವು ಸುಮಾರು 57,000 ಚದರ ಅಡಿಗಳಾಗಿದೆ. ಇದು ಮೂರು ಅಂತಸ್ತಿನ ರಚನೆಯಾಗಲಿದೆ. ಕಬ್ಬಿಣದ ಜೀವಿತಾವಧಿಯು ಕೇವಲ 80-90 ವರ್ಷಗಳಾಗಿರುತ್ತದೆ. ಹೀಗಾಗಿ, ದೇವಾಲಯದಲ್ಲಿ ಯಾವುದೇ ಕಬ್ಬಿಣ ಅಥವಾ ಉಕ್ಕು, ಸಿಮೆಂಟ್ ಬಳಸಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳುತ್ತಾರೆ. ದೇವಾಲಯದ ಎತ್ತರವು 161 ಅಡಿ. ಅಂದರೆ, ಕುತಾಬ್ ಮಿನಾರ್‌ನ ಎತ್ತರದ ಸುಮಾರು 70% ಇದೆ.
ಉತ್ತಮ ಗುಣಮಟ್ಟದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ. ಜಾಯಿಂಟ್ (joints) ಮಾಡುವಂತಹ ಭಾಗಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳ ಬಳಕೆ ಮಾಡಿಲ್ಲ. ಸಂಪೂರ್ಣ ರಚನೆಯ ನಿರ್ಮಾಣದಲ್ಲಿ ಲಾಕ್ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯನ್ನು ಮಾತ್ರ ಬಳಸಲಾಗಿದೆ ಎಂದು ನಿರ್ಮಾಣ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ
2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದ್ರೂ ತಡೆದುಕೊಳ್ಳುತ್ತೆ
ಪ್ರಾಕೃತಿಕ ವಿಕೋಪಗಳು ತಂದೊಡ್ಡಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರವನ್ನು ನಿರ್ಮಿಸಲಾಗಿದೆ. ಮಂದಿರದ ಆಯುಷ್ಯ ಹೆಚ್ಚು ವರ್ಷ ಇರಬೇಕು ಎಂಬ ದೃಷ್ಟಿಯಿಂದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಕೆಲಸ ಮಾಡಿದೆ. 2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದರೂ ಮಂದಿರಕ್ಕೆ ಯಾವುದೇ ಅಪಾಯವಿರುವುದಿಲ್ಲ. ಅದೆಲ್ಲವನ್ನೂ ತಡೆದುಕೊಂಡು ಸುರಕ್ಷಿತವಾಗಿ ನಿಲ್ಲುವಂತೆ ಮೂರು ಅಂತಸ್ತಿನ ಭವ್ಯ ಮಂದಿರ ನಿರ್ಮಿಸಲಾಗಿದೆ (ಈಗಾಗಲೇ ಮೊದಲ ಅಂತಸ್ತಿನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2025 ರ ಹೊತ್ತಿಗೆ ಪೂರ್ಣಗೊಳ್ಳಲಿದೆ).
ರಾಮಮಂದಿರ ಹೇಗೆ ಕಟ್ಟಲಾಗ್ತಿದೆ?
ಇಡೀ ದೇವಾಲಯದ ಪ್ರದೇಶಕ್ಕೆ ಮಣ್ಣನ್ನು 15 ಮೀಟರ್ ಆಳಕ್ಕೆ ಅಗೆಯಲಾಗಿದೆ. 12-14 ಮೀಟರ್ ಆಳದಲ್ಲಿ ಇಂಜಿನಿಯರ್ಡ್ ಮಣ್ಣನ್ನು ಹಾಕಲಾಗಿದೆ. ಯಾವುದೇ ಕಬ್ಬಿಣದ ಸರಳುಗಳನ್ನು ಬಳಸಿಲ್ಲ. ರೋಲ್ ಮಾಡುವಾಗ 48 ಲೇಯರ್ (ಪದರ)ಗಳನ್ನು ಹಾಕಲಾಗಿದೆ. ಇದರ ಮೇಲೆ 1.5 ಮೀಟರ್ ದಪ್ಪದ M-35 ದರ್ಜೆಯ ಲೋಹ ಮುಕ್ತ ಕಾಂಕ್ರೀಟ್ ತೆಪ್ಪವನ್ನು ಬಲವರ್ಧನೆಯಾಗಿ ಹಾಕಲಾಗಿದೆ. ಅಡಿಪಾಯವನ್ನು ಮತ್ತಷ್ಟು ಬಲಪಡಿಸಲು ದಕ್ಷಿಣ ಭಾರತದಿಂದ ತಂದಿರುವ 6.3 ಮೀಟರ್ ದಪ್ಪದ ಗ್ರಾನೈಟ್ ಕಲ್ಲಿನ ಸ್ತಂಭವನ್ನು ಇರಿಸಲಾಗಿದೆ. ಈ ಕಲ್ಲುಗಳನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?
ರಾಜಸ್ಥಾನದ ಭರತ್‌ಪುರ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶದಲ್ಲಿ ಗುಲಾಬಿ ಬಣ್ಣದ ಸ್ಯಾಂಡ್ ಸ್ಟೋನ್ ಸಿಗುತ್ತದೆ. ಆ ಕಲ್ಲುಗಳನ್ನು ಬಳಸಿ ಈ ಮಂದಿರದ ನಿರ್ಮಾಣ ಆಗಿದೆ. ಕೆತ್ತನೆ ಆಗಿಯೇ ಬಂದಿರುವ ಕಲ್ಲುಗಳಿವು. ಇದರಿಂದಾಗಿ ಈ ಮಂದಿರಕ್ಕೆ ಪ್ರಾಚೀನತೆಯ ಮೆರುಗು ಸಿಕ್ಕಿದೆ. CBRI ಪ್ರಕಾರ, ನೆಲ ಅಂತಸ್ತಿನ ಒಟ್ಟು ಅಂಕಣಗಳ ಸಂಖ್ಯೆ 160, ಮೊದಲ ಮಹಡಿ 132 ಮತ್ತು ಎರಡನೇ ಮಹಡಿ 74. ಇವೆಲ್ಲವೂ ಮರಳುಗಲ್ಲಿನಿಂದ ಮಾಡಲ್ಪಟ್ಟಿವೆ. ಅಲಂಕರಿಸಿದ ಗರ್ಭಗುಡಿಯು ರಾಜಸ್ಥಾನದಿಂದ ತೆಗೆದ ಬಿಳಿ ಮಕ್ರಾನ ಅಮೃತಶಿಲೆಯಿಂದ ಕೂಡಿದೆ. ತಾಜ್‌ಮಹಲ್ ನಿರ್ಮಾಣಕ್ಕೂ ಇದೇ ಶಿಲೆ ಬಳಸಲಾಗಿದೆ. ತಾಜ್‌ಮಹಲ್ ಅನ್ನು ಮಕ್ರಾನಾ ಗಣಿಗಳಿಂದ ತೆಗೆದ ಅಮೃತಶಿಲೆ ಬಳಸಿ ನಿರ್ಮಿಸಲಾಗಿದೆ. CBRI ಸಂಸ್ಥೆಯು 2020 ರ ಆರಂಭದಿಂದಲೂ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.
ಅತ್ಯಾಧುನಿಕ ಸಾಫ್ಟ್‌ವೇರ್ ಉಪಕರಣಗಳು ಮತ್ತು 21ನೇ ಶತಮಾನದ ಕಟ್ಟಡ ಸಂಕೇತಗಳು ರಾಮಮಂದಿರವನ್ನು ಪ್ರತಿನಿಧಿಸುತ್ತವೆ. ಈಗಿನ ಕಲೆಯ ಜ್ಞಾನದ ಆಧಾರದ ಮೇಲೆ ರಾಮಮಂದಿರವು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಅತ್ಯಂತ ಆನಂದದಾಯಕ ಅನುಭವ. ಉತ್ತಮ ಕಲಿಕೆಯ ಕಾರ್ಯವಾಗಿತ್ತು ಎಂದು ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!
ನ್ಯೂಯಾರ್ಕ್: ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ, ಶ್ರೀರಾಮ ಸ್ಮರಣೆ, ರಾಮೋತ್ಸವ (Ayodhya Ram Mandir Consecration) ಸಂಭ್ರಮ-ಸಡಗರ ಕಂಡು ಬಂತು. ವಿಶ್ವದೆಲ್ಲೆಡೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಲೈವ್ ಆಗಿ ಬಿತ್ತರಿಸಲಾಗಿದೆ. ಎಲ್ಲೆಲ್ಲಿ ಹೇಗಿತ್ತು ರಾಮೋತ್ಸವ ವೈಭವ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಕ್ಯಾಲಿಫೋರ್ನಿಯಾ, ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಂತೂ ಹಿಂದೂ ಧರ್ಮೀಯರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ನೂರಾರು ಮಂದಿ ಒಂದೆಡೆ ಸೇರಿ ರಾಮಮಂತ್ರ ಜಪಿಸುತ್ತಾ ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡದ ನಿವಾಸಿಗಳಾಗಿರುವ ಶಶಿಧರ್ ಚಾಕಲಬ್ಬಿ, ಸಾನ್ವಿ ದಂಪತಿ ಅಮೆರಿದ ಸನ್‌ಡಿಯಾನ್‌ನಲ್ಲಿ ರಾಮೋತ್ಸವ ಮಾಡಿದ್ದಾರೆ. ಅನಿವಾಸಿ ಭಾರತೀಯರಿಗೆ ಅನ್ನಪ್ರಸಾದ ವಿತರಿಸಿದ್ದಾರೆ.
ಐಫೆಲ್ ಟವರ್, ಪ್ಯಾರಿಸ್: ಪ್ಯಾರಿಸ್‌ನ ಐಫೆಲ್ ಟವರ್ ಬಳಿ ಜಮಾಯಿಸಿದ ನೂರಾರು ರಾಮಭಕ್ತರು ಭಾರತದ ಧ್ವಜ, ರಾಮಧ್ವಜ ಪ್ರದರ್ಶಿಸುತ್ತಾ ರಾಮನ ಜಪ ಮಾಡಿದರು. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!
ಖೊರೆಟರೋ, ಮೆಕ್ಸಿಕೋ: ಬಾಲರಾಮನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲೇ ಮೆಕ್ಸಿಕೋ ದೇಶದ ಖೊರೆಟರೋ ನಗರದಲ್ಲಿ ಮೊದಲ ರಾಮಮಂದಿರ ಶಾಸ್ತ್ರೋಕ್ತವಾಗಿ ಲೋಕಾರ್ಪಣೆಗೊಂಡಿದೆ.
ಅಯೋಧ್ಯೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ram Mandir) ಭವ್ಯವಾಗಿ ನೆರವೇರಿತು. ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:34 ರವರೆಗಿನ 84 ಸೆಕೆಂಡ್‌ಗಳ ಶುಭ ಅಭಿಜಿನ್ ಲಗ್ನದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು. ಶ್ರೀರಾಮೋತ್ಸವದ ಪ್ರಧಾನ ಯಜಮಾನ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ, ಮಂತ್ರಘೋಷಗಳ ನಡುವೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ.
ಮೋದಿ ಕೈಯಲ್ಲಿತ್ತು ಕಮಲ!
ಗರ್ಭಗುಡಿಯನ್ನು ಪ್ರವೇಶಿಸಿದ ಮೋದಿ ಕಮಲದ ಹೂವನ್ನು (Lotus Flower) ತೆಗೆದುಕೊಂಡು ಅನುಷ್ಠಾನ ವಿಧಿವಿಧಾನ ಆರಂಭಿಸಿದರು. ಇವೆಲ್ಲ ಕಾರ್ಯಗಳ ಬಳಿಕ ಮೋದಿ ಅವರು ಕಮಲದ ಹೂವನ್ನು ಬಾಲರಾಮನ ಪಾದಕ್ಕೆ ಸಮರ್ಪಿಸಿದರು. ನಂತರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರತಿ ಬೆಳಗಿದರು. ನಂತರ ಮೋದಿ ಬಾಲರಾಮನ ಮುಂದೆ ಸಾಷ್ಟಾಂಗ ವಂದಿಸಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?
ಅಯೋಧ್ಯೆ (ಉತ್ತರ ಪ್ರದೇಶ): ನಾನು ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ. ನನ್ನ ಪೂರ್ವಜರು, ಕುಟುಂಬ ಸದಸ್ಯರು, ಭಗವಾನ್ ರಾಮಲಲ್ಲಾನ ಆಶೀರ್ವಾದ ಎಂದಿಗೂ ನನ್ನ ಮೇಲಿದೆ ಎಂದು ರಾಮಲಲ್ಲಾನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ (Arun Yogiraj) ಭಾವುಕರಾಗಿ ನುಡಿದಿದ್ದಾರೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಷ್ಟ್ರವು ಕುತೂಹಲದಿಂದ ಕಾಯುತ್ತಿದೆ. ಅರುಣ್ ಯೋಗಿರಾಜ್ ಅವರು ಸಮರ್ಪಣೆ ಮತ್ತು ಸಾರ್ಥಕತೆಯ ಸಂಕೇತವಾಗಿ ಅಯೋಧ್ಯೆಯಲ್ಲಿ ನಿಂತಿದ್ದಾರೆ. ಈ ಸ್ಮರಣೀಯ ಘಳಿಗೆಯು ಯೋಗಿರಾಜ್ ಅವರ ಕುಶಲತೆ ಮತ್ತು ಶ್ರೀರಾಮನ ಭಕ್ತಿಗೆ ಸಾಕ್ಷಿಯಾಗಿದೆ.
ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ವಿಗ್ರಹ ಕೆತ್ತನೆಗಾಗಿ ಅವರು 6 ತಿಂಗಳು ತೆಗೆದುಕೊಂಡಿದ್ದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ತಾರಾ ದಂಡು: ಭಾಗಿಯಾದವರು ಯಾರೆಲ್ಲ?
ಚೆನ್ನೈ: ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರಪ್ರಸಾರವನ್ನು ತಮಿಳುನಾಡು (Tamil Nadu) ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವೆ, ತಮಿಳುನಾಡಿನ ದೇವಸ್ಥಾನಗಳಲ್ಲಿ ಸೋಮವಾರ ರಾಮನ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಅನ್ನದಾನ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನು ಹಿಂದೂ, ಧಾರ್ಮಿಕ ಮತ್ತು ದತ್ತಿ ದತ್ತಿಗಳು ಬಲವಾಗಿ ತಳ್ಳಿಹಾಕಿವೆ. (HR & CE) ಇಲಾಖೆ. ಇದನ್ನೂ ಓದಿ: 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನಿಗೆ 200 ಕ್ಕೂ ಹೆಚ್ಚು ದೇವಾಲಯಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಯಾವುದೇ ಪೂಜೆ/ಭಜನೆ/ಪ್ರಸಾದ/ಅನ್ನದಾನವಿಲ್ಲ. ಶ್ರೀರಾಮನ ನಾಮಸ್ಮರಣೆಗೆ ಅವಕಾಶವಿದೆ. ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಪೆಂಡಾಲ್‌ಗಳನ್ನು ಕಿತ್ತುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸಿ ಎಂದು ಕೇಂದ್ರ ಸಚಿವೆ ಬರೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ತಮ್ಮ ಪೋಸ್ಟ್ ಜೊತೆಗೆ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ ಹಂಚಿಕೊಂಡಿದ್ದಾರೆ. ರಾಮನ ಹೆಸರಿನಲ್ಲಿ ಯಾವುದೇ ಪೂಜೆಗೆ ಅವಕಾಶ ನೀಡದಂತೆ ದೇವಾಲಯದ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಲಾಗಿದೆ ಎಂದು ಲೇಖನದಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ನಡೆಯುವುದನ್ನು ವೀಕ್ಷಿಸಲು, ಭಜನೆ-ಕೀರ್ತನೆ ಕಾರ್ಯಕ್ರಮ ಆಯೋಜಿಸಲು, ಬಡವರಿಗೆ ಪ್ರಸಾದ ವಿತರಿಸಲು, ಸಿಹಿ ಹಂಚಿ ಸಂಭ್ರಮಾಚರಿಸಲು ಬಿಡದೇ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದು I.N.D.I.A ಮೈತ್ರಿಕೂಟದ ಪಾಲುದಾರ ಡಿಎಂಕೆಯ ಹಿಂದೂ ವಿರೋಧಿ ಪ್ರಯತ್ನಗಳು ಎಂದು ನಿರ್ಮಲಾ ಸೀತಾರಾಮನ್ ದೂರಿದ್ದಾರೆ.
ಕೇಂದ್ರ ಸಚಿವರ ಆರೋಪಗಳನ್ನು ತಮಿಳುನಾಡು ಮಾನವ ಸಂಪನ್ಮೂಲ ಮತ್ತು ಸಿಇ ಸಚಿವ ಪಿ.ಕೆ.ಶೇಖರ್‌ಬಾಬು ತಳ್ಳಿಹಾಕಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ನಿಸ್ಸಂಶಯವಾಗಿ ಸುಳ್ಳು ಮತ್ತು ನಕಲಿ ಸುದ್ದಿಯನ್ನು ಹರಡಲು ತೊಡಗಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನೆ; ವಿವಿಧ ರಾಜ್ಯಗಳ 50 ವಾದ್ಯಗಳಿಂದ ಹೊಮ್ಮಲಿದೆ ಮಂಗಳ ನಾದ
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ದೇಶದೆಲ್ಲೆಡೆ ರಾಮಭಕ್ತರಲ್ಲಿ ಸಂಭ್ರಮ-ಸಡಗರ ಮನೆ ಮಾಡಿದೆ. 500 ವರ್ಷಗಳ ನಂತರ ಶ್ರೀರಾಮ ಮತ್ತೆ ಪಟ್ಟಕ್ಕೇರಲು ಸಿದ್ಧನಾಗಿದ್ದಾನೆ. ಸೋಮವಾರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆ ಕಂಗೊಳಿಸುತ್ತಿದೆ.
ವಾಲ್ಮೀಕಿ ರಾಮಾಯಣದ ಕೇಂದ್ರಬಿಂದು, ಪುಣ್ಯಪುರುಷ ಭಗವಾನ್ ರಾಮನ (Lord Rama) ಜೀವನ ಚರಿತ್ರೆಯೇ ರೋಚಕ. ಅಂತೆಯೇ ಅಯೋಧ್ಯೆ ನಗರ, ಸರಯೂ ನದಿ, ಭವ್ಯ ರಾಮಮಂದಿರ, ಅದರ ಶಿಲ್ಪಿ, ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲರಾಮನ ವಿಗ್ರಹವೂ ತನ್ನದೇ ಆದ ವಿಶೇಷತೆ ಹೊಂದಿದೆ. ಅಯೋಧ್ಯೆಗೆ ಹೋಗುವಾಗ ಈ 10 ಅಂಶಗಳ ವಿಚಾರ ನಿಮಗೆ ತಿಳಿದಿರಲಿ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನೆ; ವಿವಿಧ ರಾಜ್ಯಗಳ 50 ವಾದ್ಯಗಳಿಂದ ಹೊಮ್ಮಲಿದೆ ಮಂಗಳ ನಾದ
1. ಅಯೋಧ್ಯೆ ಯಾವ ನದಿಯ ದಡದ ಮೇಲಿದೆ?
ಹಿಂದೂಗಳ ಏಳು ಪವಿತ್ರ ಕ್ಷೇತ್ರಗಳಲ್ಲಿ ಅಯೋಧ್ಯೆಯೂ ಒಂದು. ಆದಿ ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಿದಂತೆ ಅಯೋಧ್ಯೆಯು ಕೋಸಲ ದೇಶದ ರಾಜಧಾನಿ. ಈಗ ಉತ್ತರ ಪ್ರದೇಶ ರಾಜ್ಯದ ನಗರವಾಗಿದೆ. ಅಯೋಧ್ಯೆಯು ಸರಯೂ ನದಿಯ ದಡದ ಮೇಲಿರುವ ನಗರ. 234 ಕಿಮೀ ಸುತ್ತಳತೆ ಭೂಪ್ರದೇಶ ಹೊಂದಿದೆ. ಸರಯೂ ಭಾರತದ ಒಂದು ಪುರಾತನ ನದಿ. ರಾಮಾಯಣದ ಶ್ರೀರಾಮ ರಾಜ್ಯವಾಳಿದ್ದು, ಇದೇ ಸರಯೂ ತೀರದ ಅಯೋಧ್ಯೆಯಲ್ಲಿ. ಇದು ಹಿಮಾಲಯ ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ. ಶ್ರೀರಾಮ ತನ್ನ ಅವತಾರವನ್ನು ಸಮಾಪ್ತಿಗೊಳಿಸುವಾಗ, ತನ್ನ ಪರಿವಾರದೊಂದಿಗೆ ಸರಯೂ ನದಿಯಲ್ಲಿ ಮುಳುಗಿದನೆಂಬ ವಿವರಣೆ ಉತ್ತರ ರಾಮಾಯಣದಲ್ಲಿ ಬರುತ್ತದೆ.
2. ಅಯೋಧ್ಯೆ ರಾಮಮಂದಿರ ಯಾವ ಶೈಲಿಯಲ್ಲಿದೆ?
ರಾಮಮಂದಿರ ಭಾರತೀಯ ನಾಗರ ಶೈಲಿಯಲ್ಲಿದೆ. ಸಾಮಾನ್ಯವಾಗಿ ಉತ್ತರ ಭಾರತದ ಪುರಾತನ ದೇವಾಲಯಗಳೆಲ್ಲವೂ ನಾಗರ ಶೈಲಿಯಲ್ಲಿವೆ. ಗುಪ್ತರ ಕಾಲದ ದೇವಾಲಯಗಳು ಈ ಶೈಲಿಯಲ್ಲಿದ್ದವು. ನಾಗರ ಶೈಲಿಯ ವಿಶೇಷವೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆ ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಗಳಿರುತ್ತವೆ. ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ. ಕೋನಾರ್ಕದ ಸೂರ್ಯ ದೇವಾಲಯ, ಒಡಿಶಾದ ಜಗನ್ನಾಥ ಮಂದಿರ, ಖಜುರಾಹೋದ ಲಕ್ಷ್ಮಣ ದೇವಾಲಯಗಳು ನಾಗರ ಶೈಲಿಯಲ್ಲೇ ಇವೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..
3. ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದವರು ಯಾರು?
ಅಯೋಧ್ಯೆ ರಾಮಮಂದಿರಕ್ಕೆ 2020 ರ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ರಾಮಮಂದಿರ ನಿರ್ಮಾಣ ಪ್ರಾರಂಭವಾಯಿತು. ಭೂಮಿಪೂಜೆ ಕಾರ್ಯಕ್ರಮಕ್ಕೂ ಮುನ್ನ ಮೂರು ದಿನಗಳ ಕಾಲ ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು. ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆಯಾಗಿ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಅಡಿಗಲ್ಲು ಹಾಕಿದರು. ಭೂಮಿಪೂಜೆಗೆ ಭಾರತದ ಹಲವಾರು ಪುಣ್ಯ ದೇವಾಲಯಗಳಿಂದ ಮಣ್ಣು ಮತ್ತು ಅನೇಕ ಪವಿತ್ರ ನದಿಗಳ ನೀರನ್ನು ಅಯೋಧ್ಯೆಗೆ ಕಳುಹಿಸಲಾಗಿತ್ತು. ಜೊತೆಗೆ ಬೇರೆ ಬೇರೆ ಧರ್ಮದ ಗುರುಗಳನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
4. ರಾಮಮಂದಿರದಲ್ಲಿರುವ ಕಂಬಗಳು ಮತ್ತು ಬಾಗಿಲುಗಳ ಸಂಖ್ಯೆ ಎಷ್ಟು?
ಅಯೋಧ್ಯೆ ರಾಮಮಂದಿರವು ನಾಗರ ವಾಸ್ತುಶಿಲ್ಪದ ಶೈಲಿಯಾಗಿದೆ. ಮಂದಿರವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಮಂದಿರದ ಪ್ರವೇಶವು ಪೂರ್ವದಿಂದ, ಸಿಂಗ್ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರುತ್ತದೆ. ಮಂದಿರದ ಒಟ್ಟು ಬಾಗಿಲುಗಳ ಪೈಕಿ 42 ಚಿನ್ನ ಲೇಪಿತ ಬಾಗಿಲುಗಳನ್ನು ಅಳವಡಿಸಲಾಗುವುದು. ಈಗಾಗಲೇ 13 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ ಫೋಟೋ ವೈರಲ್ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ
5. ರಾಮಮಂದಿರ ನಿರ್ಮಾಣ ಕಂಪನಿ ಯಾವುದು?
ರಾಮಮಂದಿರ ನಿರ್ಮಾಣ ಮತ್ತು ವಿನ್ಯಾಸವನ್ನು ಎಲ್ & ಟಿ (ಅಂದರೆ, ಲಾರ್ಸೆನ್ ಮತ್ತು ಟುಬ್ರೋ) ಕಂಪನಿಗಳು ಮಾಡಲಿವೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಕನ್ಸಲ್ಟಿಂಗ್ ಎಂಜಿನಿಯರ್ಸ್ ವಹಿಸಿಕೊಂಡಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಐಐಟಿಯು ತಾಂತ್ರಿಕ ನೆರವು ಒದಗಿಸಲಿದೆ.
6. ರಾಮಮಂದಿರ ಎತ್ತರ ಎಷ್ಟು?
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಂದಿರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಮಮಂದಿರದ ಎತ್ತರ 161 ಅಡಿ. 380 ಅಡಿ ಈ ದೇವಾಲಯದ ಉದ್ದ. 250 ಅಡಿ ಅಗಲ. 84,000 ಚದರ ಅಡಿ ದೇವಾಲಯದ ವಿಸ್ತೀರ್ಣ. ದೇವಾಲಯ ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿ 20 ಅಡಿ ಎತ್ತರವಿದೆ. ಇದನ್ನೂ ಓದಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನಿಂದ ಅಸಮಾಧಾನ; ಗುಜರಾತ್‌ನ ‘ಕೈ’ ಶಾಸಕ ರಾಜೀನಾಮೆ
7. ರಾಮಮಂದಿರ ವಾಸ್ತುಶಿಲ್ಪಿ ಯಾರು?
ರಾಮಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ. ಇವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಚಂದ್ರಕಾಂತ್ ಅವರ ಅಜ್ಜ ಪ್ರಭಾಕರ್ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ನಿರ್ಮಿಸಿದ ಶಿಲ್ಪಿ. ಗುಜರಾತ್‌ನ ಪ್ರಸಿದ್ಧ ಅಕ್ಷರಧಾಮ ದೇವಾಲಯದ ವಿನ್ಯಾಸವೂ ಇವರದೇ. ಅಂತೆಯೇ ರಾಮಮಂದಿರ ದೇವಾಲಯವು ಅತ್ಯುತ್ತಮ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪಕ್ಕೆ ವಿಶಿಷ್ಟ ಉದಾಹರಣೆಯಾಗಿದೆ.
8. ರಾಮಮಂದಿರದಲ್ಲಿರುವ ಮಂಟಪಗಳ ಸಂಖ್ಯೆ ಎಷ್ಟು?
ದೇವಾಲಯವು ಐದು ಮಂಟಪಗಳನ್ನು (ಸಭಾಂಗಣ) ಒಳಗೊಂಡಿದೆ. ಅವುಗಳೆಂದರೆ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ. ದೇವಾನುದೇವತೆಗಳ ಮೂರ್ತಿ ಕೆತ್ತನೆಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸಿವೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ
9. ದೇವಾಲಯದ ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತೀಯ ಸಂಪ್ರದಾಯವನ್ನು ಅನುಸರಿಸಿ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಒಟ್ಟು 70 ಎಕರೆ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. 70% ಹಸಿರು ಪ್ರದೇಶ ಇದೆ. ದೇವಾಲಯದಲ್ಲಿ ಮಣ್ಣಿನ ತೇವಾಂಶ ತಪ್ಪಿಸಲು ೨೧ ಅಡಿ ಗ್ರಾನೈಟ್ ಅಡಿಪಾಯ ನಿರ್ಮಿಸಲಾಗಿದೆ.
10. ಅಯೋಧ್ಯೆಯ ರಾಮಲಲ್ಲಾ ವಿಗ್ರಹ ನಿರ್ಮಿಸಿದವರು ಯಾರು?
ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾನ ವಿಗ್ರಹವನ್ನು ಕೆತ್ತಿದವರು ಶಿಲ್ಪಿ ಅರುಣ್ ಯೋಗಿರಾಜ್. ಇವರು ಕರ್ನಾಟಕದ ಮೈಸೂರು ಮೂಲದ ಶಿಲ್ಪಿ. ಮಕ್ಕಳ ಮುಖಭಾವನೆ ಕಲ್ಪಿಸಿಕೊಂಡು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಮೂರ್ತಿ ಕೆತ್ತನೆ ವೇಳೆ ಕಟ್ಟುನಿಟ್ಟಿನ ಸಾತ್ವಿಕ ಆಹಾರ ಸೇವನೆ ಮಾಡುತ್ತಿದ್ದರು. ಮೂರ್ತಿ ಕೆತ್ತನೆ ವೇಳೆ ಅವರ ಕಣ್ಣಿಗೆ ತೊಂದರೆಯಾಗಿತ್ತು. ವಿಗ್ರಹ ಕೆತ್ತನೆ ಕೆಲಸ ಪೂರ್ಣಗೊಳಿಸುವವರೆಗೆ (ಸುಮಾರು 6 ತಿಂಗಳು) ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಿರಲಿಲ್ಲ. ಎಲ್ಲಾ ಅಡೆತಡೆ, ಸವಾಲುಗಳನ್ನು ಎದುರಿಸಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ
ಮುಖ್ಯವಾಗಿ ಅಯೋಧ್ಯೆ (Ayodhya) ಮತ್ತು ವಾರಣಾಸಿಯಿಂದ 102 ಬಗೆಯ ಆರತಿಗಳನ್ನ ತರಿಸಲಾಗಿದೆ. ಈ ಆರತಿಯನ್ನ ದೇಶದಲ್ಲಿ ಎಲ್ಲಿಯೂ ಮಾಡುತ್ತಿಲ್ಲ. ಸೋಮವಾರ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಮೈಸೂರು ನಗರದ ಆಲಮ್ಮ ಛತ್ರದಲ್ಲಿ 102 ಬಗೆಯ ಆರತಿ ನೆರವೇರಿಸಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಬೆಳೆದಿರುವ ವಿವಿಧ ಬಗೆಯ ಪುಷ್ಪಗಳಿಂದ ರಾಮನ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುವಂತೆ ಇಲ್ಲಿಯೂ ನೆರವೇರಿಸಲಾಗುತ್ತದೆ ಎಂದು ವಾಸವಿ ಟ್ರಸ್ಟ್ ಸಿಬ್ಬಂದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಜ.22 ರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ನಾಯಕನಿಗೆ ಆಹ್ವಾನ
ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ (Ram Temple) ‘ಪ್ರಾಣ ಪ್ರತಿಷ್ಠೆ’ ಸಮಾರಂಭದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ (LK Advani) ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಬುಧವಾರ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಕೃಷ್ಣ ಗೋಪಾಲ್ ಮತ್ತು ರಾಮ್ ಲಾಲ್ ಅವರು ಅಲೋಕ್ ಕುಮಾರ್ ಅವರೊಂದಿಗೆ ಎಲ್‌ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿ ಬುಧವಾರ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಆಹ್ವಾನ
ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಎಲ್‌ಕೆ ಅಡ್ವಾಣಿ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಕಾಂಗ್ರೆಸ್ ನಿರಾಕರಿಸಿದೆ. ಕಾಂಗ್ರೆಸ್‌ನ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಸಮಾರಂಭದ ಆಹ್ವಾನ ತಿರಸ್ಕರಿಸಿದ್ದಾರೆ.