Tag: ram setu

  • ಅಯೋಧ್ಯೆ ಸೂರ್ಯ ತಿಲಕದ ವೇಳೆಯೇ ರಾಮಸೇತು ದರ್ಶನ ಪಡೆದ ಮೋದಿ

    ಅಯೋಧ್ಯೆ ಸೂರ್ಯ ತಿಲಕದ ವೇಳೆಯೇ ರಾಮಸೇತು ದರ್ಶನ ಪಡೆದ ಮೋದಿ

    ನವದೆಹಲಿ: ಶ್ರೀಲಂಕಾದಿಂದ ಭಾರತಕ್ಕೆ ಹಿಂದಿರುಗುವಾಗ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಮಸೇತು (Ram Setu) ದರ್ಶನ ಪಡೆದಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಹಿಂತಿರುಗುವಾಗ, ರಾಮಸೇತು ದರ್ಶನ ಪಡೆಯುವ ಪುಣ್ಯ ಸಿಕ್ಕಿತು. ಕಾಕತಾಳೀಯ ಎಂಬಂತೆ ರಾಮನವಮಿಯಂದು (Ram Navami) ಅಯೋಧ್ಯೆಯಲ್ಲಿ ಸೂರ್ಯ ತಿಲಕ ನಡೆಯುತ್ತಿದ್ದ ಸಮಯದಲ್ಲಿ ನನಗೆ ರಾಮಸೇತು ದರ್ಶನ ಭಾಗ್ಯ ಸಿಕ್ಕಿತು. ಪ್ರಭು ಶ್ರೀರಾಮ ನಮ್ಮೆಲ್ಲರಿಗೂ ಒಗ್ಗೂಡಿಸುವ ಶಕ್ತಿ. ಅವನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1996ರ ವಿಶ್ವಕಪ್ ಗೆದ್ದ ಲಂಕಾ ಕ್ರಿಕೆಟ್‌ ದಿಗ್ಗಜರ ಜೊತೆ ಮೋದಿ ಸಂವಾದ!

    ರಾಮಸೇತುವು ಭಾರತದಲ್ಲಿ ಅನೇಕರಿಂದ ರಾಮ ಮತ್ತು ಲಂಕಾಗೆ ಹೋಗಿ ರಾವಣನ ಮೇಲೆ ಯುದ್ಧ ಮಾಡಲು ನಿರ್ಮಿಸಿದ ಸೇತುವೆಯ ಭಾಗ ಎಂದು ನಂಬಲಾಗಿದೆ.

    ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಮತ್ತು ರಾಮನವಮಿಯ ಸಂದರ್ಭದಲ್ಲಿ ಪ್ರಾರ್ಥಿಸಲು ಮೋದಿ ಇಂದು ತಮಿಳುನಾಡಿಗೆ ತೆರಳಿದ್ದಾರೆ. ಇದನ್ನೂ ಓದಿ: ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ

  • ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ

    ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ

    ನವದೆಹಲಿ: ರಾಮ ಸೇತು(Ram Setu) ಇದೆಯೇ ಎಂದು ನಿಖರವಾಗಿ ಹೇಳುವುದು ಕಷ್ಟ ಸಾಧ್ಯ. ಆದರೆ ಅಲ್ಲಿ ಸೇತುವೆ ರೂಪದ ರಚನೆ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ(Rajya Sabha) ಉತ್ತರ ನೀಡಿದೆ.

    ಹರ್ಯಾಣದ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾ ಅವರು, ಈ ಹಿಂದಿನ ಸರ್ಕಾರ ರಾಮ ಸೇತು ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಈಗಿನ ಸರ್ಕಾರ ದೇಶದ ಗತಕಾಲದ ಚರಿತ್ರೆಗೆ ಸಾಕ್ಷಿಯಾಗಿರುವ ರಾಮ ಸೇತು ಬಗ್ಗೆ ವೈಜ್ಞಾನಿಕ ಸಂಶೋಧನೆಗೆ ಮುಂದಾಗಿದೆಯೇ ಎಂದು ಪ್ರಶ್ನೆ ಕೇಳಿದ್ದರು.

    ಈ ಪ್ರಶ್ನೆಗೆ ಉತ್ತರ ನೀಡಿದ ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವ ಜೀತೇಂದ್ರ ಸಿಂಗ್, 18 ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಯ ಬಗ್ಗೆ ಈಗ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆ ಸೇತುವೆಯು ಸುಮಾರು 56 ಕಿಲೋಮೀಟರ್‌ಗಳಷ್ಟು ಉದ್ದವಾಗಿದ್ದು, ಇದನ್ನು ಕಂಡುಹಿಡಿಯಲು ನಮಗೆ ಕೆಲವು ಮಿತಿಗಳಿವೆ ಎಂದು ಹೇಳಿದರು.

    ಸ್ವಲ್ಪ ಮಟ್ಟಿಗೆ ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ತುಣುಕುಗಳು, ಕೆಲವು ರೀತಿಯ ಸುಣ್ಣದ ಕಲ್ಲುಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಇದು ಅವಶೇಷಗಳು ಅಥವಾ ಸೇತುವೆಯ ಭಾಗಗಳೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ಸಂಕ್ಷಿಪ್ತವಾಗಿ ಹೇಳುವುದಾದರೆ ಅಲ್ಲಿ ಅಸ್ತಿತ್ವದಲ್ಲಿದ್ದ ರಚನೆಯನ್ನು ನಿಖರವಾಗಿ ಗುರುತಿಸುವುದು ಕಷ್ಟ, ಆದರೆ ಆ ರಚನೆಗಳು ಅಸ್ತಿತ್ವದಲ್ಲಿವೆ ಎಂಬುದಕ್ಕೆ ನೇರ ಅಥವಾ ಪರೋಕ್ಷವಾಗಿ ಕೆಲವು ರೀತಿಯ ಸೂಚನೆಗಳಿವೆ. ಬಾಹ್ಯಾಕಾಶ ಇಲಾಖೆ ರಾಮಸೇತು ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ ಎಂದು ಸಂಸದರೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದು ಜೀತೇಂದ್ರ ಸಿಂಗ್(Jitendra Singh) ಹೇಳಿದರು. ಇದನ್ನೂ ಓದಿ: ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ಹಿಂದೂ ಪುರಾಣಗಳಲ್ಲಿ ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸಂಯೋಜನೆಯನ್ನು ರಾಮ ಸೇತು ಕರೆಯಲಾಗುತ್ತದೆ. ಯುಪಿಎ-1 ಅವಧಿಯಲ್ಲಿನ ವಿವಾದಿತ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ(Subramanian Swamy) ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    2018ರಲ್ಲಿ ಸೇತುಸಮುದ್ರಂ(Sethusamudram) ಯೋಜನೆಗಾಗಿ ಮೊದಲು ನಿಗದಿಯಾಗಿದ್ದ ಮಾರ್ಗಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗುವುದು. ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವೆಗೆ ಯಾವುದೇ ಹಾನಿ ಮಾಡದಂತೆ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆ ಅಫಿಡವಿಟ್‍ನಲ್ಲಿ ಸುಪ್ರೀಂಗೆ ತಿಳಿಸಿತ್ತು. ಕೇಂದ್ರದಿಂದ ಈ ನಿರ್ಧಾರ ಬಂದ ಕೂಡಲೇ ಸುಬ್ರಮಣಿಯನ್‌ ಸ್ವಾಮಿ ರಾಮ ಸೇತುವೆಯನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ(National Heritage Monument) ಘೋಷಿಸುವಂತೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

    ಪ್ರಾಚೀನ ಪುರಾಣದ ದಂತಕತೆಗಳನ್ನೊಳಗೊಂಡ ರಾಮಸೇತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಇದು ತಮಿಳುನಾಡಿನ ಆಗ್ನೇಯ ಕರಾವಳಿಯ ರಾಮೇಶ್ವರದಿಂದ ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುತ್ತದೆ. ಹಿಂದೂ ಪುರಾಣ ಹಾಗೂ ರಾಮಾಯಣದಲ್ಲಿ ರಾಮನು ರಾವಣನ ವಿರುದ್ಧ ಹೋರಾಡಲು ಲಂಕೆಗೆ ಹೋಗುತ್ತಿದ್ದಾಗ ರಾಮನ ಸೈನ್ಯ ಈ ಸೇತುವೆ ನಿರ್ಮಾಣ ಮಾಡಿದೆ ಎಂದು ಉಲ್ಲೇಖವಿದೆ.

    Live Tv
    [brid partner=56869869 player=32851 video=960834 autoplay=true]

  • ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ

    ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ಆಡಮ್ಸ್ ಬ್ರಿಡ್ಜ್ ಎಂದೂ ಕರೆಯಲ್ಪಡುವ ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಕೋರಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

    ಇದರ ಬೆನ್ನಲ್ಲೇ ಟ್ವೀಟ್ ಮಾಡಿದ ಸುಬ್ರಮಣಿಯನ್ ಸ್ವಾಮಿ, ರಾಮ ಸೇತುವನ್ನು ಪ್ರಾಚೀನ ಪರಂಪರೆಯ ಸ್ಮಾರಕವನ್ನಾಗಿ ಘೋಷಣೆ ಮಾಡಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ನಿರ್ಧಾರದ ಬಗ್ಗೆ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ. ಒಂದು ವೇಳೆ ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆಯಾದರೆ ಅದು ನನ್ನ ಗೆಲುವು. ಇಲ್ಲದೇ ಹೋದರೆ, ಅದು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೋಲು ಎಂದು ಬರೆದಿದ್ದಾರೆ.

    ಪ್ರಾಚೀನ ಪುರಾಣದ ದಂತಕತೆಗಳನ್ನೊಳಗೊಂಡ ರಾಮಸೇತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಇದು ತಮಿಳುನಾಡಿನ ಆಗ್ನೇಯ ಕರಾವಳಿಯ ರಾಮೇಶ್ವರದಿಂದ ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುತ್ತದೆ. ಹಿಂದೂ ಪುರಾಣ ಹಾಗೂ ರಾಮಾಯಣದಲ್ಲಿ ರಾಮನು ರಾವಣನ ವಿರುದ್ಧ ಹೋರಾಡಲು ಲಂಕೆಗೆ ಹೋಗುತ್ತಿದ್ದಾಗ ರಾಮನ ಸೈನ್ಯ ಈ ಸೇತುವೆ ನಿರ್ಮಾಣ ಮಾಡಿದೆ ಎಂದು ಉಲ್ಲೇಖವಿದೆ. ಇದನ್ನೂ ಓದಿ: ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ

    ರಾಮಸೇತು 48 ಕಿ.ಮೀ ಉದ್ದವಿದೆ. ಕೆಲವೆಡೆ ಸೇತುವೆ ಶುಷ್ಕವಾಗಿದ್ದು, ಇನ್ನೂ ಕೆಲವೆಡೆ 1 ಮೀ. ವರೆಗೆ ಸಮುದ್ರದಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಅದರಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಇದನ್ನೂ ಓದಿ: ಸ್ಕಾಲರ್ಶಿಪ್‌ಗಾಗಿ ಜೆಎನ್‌ಯು ವಿದ್ಯಾರ್ಥಿಗಳು, ಸಿಬ್ಬಂದಿ ನಡುವೆ ಸಂಘರ್ಷ- 6 ವಿದ್ಯಾರ್ಥಿಗಳಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಪಾರಂಪರಿಕ ಸ್ಮಾರಕವಾಗುತ್ತಾ ರಾಮ ಸೇತು? – ಜುಲೈ 26ಕ್ಕೆ ಸುಪ್ರೀಂ ವಿಚಾರಣೆ

    ಪಾರಂಪರಿಕ ಸ್ಮಾರಕವಾಗುತ್ತಾ ರಾಮ ಸೇತು? – ಜುಲೈ 26ಕ್ಕೆ ಸುಪ್ರೀಂ ವಿಚಾರಣೆ

    ನವದೆಹಲಿ: ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈ 26ರಂದು ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿ ನೀಡಿದೆ.

    ಇಂದು ಸುಬ್ರಮಣಿಯನ್‌ ಸ್ವಾಮಿ, ಇದೊಂದು ಸಣ್ಣ ವಿಷಯ. ತುರ್ತು ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾ.ಕೃಷ್ಣ ಮುರಾರಿ ಹಾಗೂ ನಾ. ಹಿಮಾ ಕೊಯ್ಲಿ ಅವರಿದ್ದ ಪೀಠಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ಈ ಮನವಿಗೆ ಸಿಜೆಐ ರಮಣ, ನನ್ನ ನಿವೃತ್ತಿಯ ನಂತರ ವಿಚಾರಣೆಗೆ ಪಟ್ಟಿ ಮಾಡೋಣ ಎಂದು ಹೇಳಿದಾಗ ಕೋರ್ಟ್‌ ಹಾಲ್‌ನಲ್ಲಿ ಕ್ಷಣ ಕಾಲ ನಗೆಯ ವಾತಾವರಣ ಮೂಡಿತು. ನಂತರ ನ್ಯಾ. ರಮಣ ಈ ಅರ್ಜಿಯನ್ನು ಜು.26ಕ್ಕೆ ವಿಚಾರಣೆ ನಡೆಸಲು ಪಟ್ಟಿ ಮಾಡುವಂತೆ ಸೂಚಿಸಿದರು. ಇದನ್ನೂ ಓದಿ: ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವೆಗೆ ಯಾವುದೇ ಹಾನಿ ಮಾಡಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ

    ಅರ್ಜಿ ಸಲ್ಲಿಸಿದ್ದು ಯಾಕೆ?
    ಹಿಂದೂ ಪುರಾಣಗಳಲ್ಲಿ ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸಂಯೋಜನೆಯನ್ನು ರಾಮ ಸೇತು ಕರೆಯಲಾಗುತ್ತದೆ. ಯುಪಿಎ-1 ಅವಧಿಯಲ್ಲಿನ ವಿವಾದಿತ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    2018ರಲ್ಲಿ ಸೇತುಸಮುದ್ರಂ ಯೋಜನೆಗಾಗಿ ಮೊದಲು ನಿಗದಿಯಾಗಿದ್ದ ಮಾರ್ಗಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗುವುದು. ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವೆಗೆ ಯಾವುದೇ ಹಾನಿ ಮಾಡದಂತೆ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಫಿಡವಿಟ್‍ನಲ್ಲಿ ಸುಪ್ರೀಂಗೆ ತಿಳಿಸಿತ್ತು.

    ಕೇಂದ್ರದಿಂದ ಈ ನಿರ್ಧಾರ ಬಂದ ಕೂಡಲೇ ಸುಬ್ರಮಣಿಯನ್‌ ಸ್ವಾಮಿ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸುವಂತೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ನವದೆಹಲಿ: ರಾಮ ಸೇತುವೆ ಅಸ್ತಿತ್ವದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಸಾವಿರಾರು ವರ್ಷಗಳ ಹಿಂದೆ ಕಟ್ಟಲಾಗಿರೋ ರಾಮಸೇತುವೆ ಬಗ್ಗೆ ಅಮೆರಿಕದ ವಾಹಿನಿಯೊಂದು ಕಾರ್ಯಕ್ರಮ ಮಾಡಿದೆ. ವಿಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ಸೇತುವೆ ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ ಎಂದು ಹೇಳಿದೆ.

    ಸೈನ್ಸ್ ಚಾನೆಲ್ ಈ ಕಾರ್ಯಕ್ರಮದ ಪ್ರೋಮೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಈ ಸೇತುವೆ ನೈಸರ್ಗಿಕವಾಗಿ ನಿರ್ಮಾಣವಾಗಿಲ್ಲ. ಇದು ಮಾನವ ನಿರ್ಮಿತ ಎಂದು ಹೇಳಿದೆ. ಬುಧವಾರ ರಾತ್ರಿ 7.30ಕ್ಕೆ ಡಿಸ್ಕವರಿ ಕಮ್ಯುನಿಕೇಷನ್ಸ್ ಮಾಲೀಕಕತ್ವದ ಅಮೆರಿಕದ ಸೈನ್ಸ್ ಚಾನೆಲ್‍ನಲ್ಲಿ “ಏನ್ಶಿಯಂಟ್ ಲ್ಯಾಂಡ್ ಬ್ರಿಡ್ಜ್” ಎಂಬ ಕಾರ್ಯಕ್ರಮ ಪ್ರಸಾರವಾಗಲಿದೆ.

    ನಾಸಾದ ಫೋಟೋಗಳನ್ನ ಉದಾಹರಣೆಯಾಗಿ ನೀಡಿ 50 ಕಿ.ಮೀ ಉದ್ದದ ಈ ಸೇತುವೆ ಮಾನವ ನಿರ್ಮಿತವಾದುದು ಎಂದು ಕಾರ್ಯಕ್ರಮದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರು ಹೇಳಿದ್ದಾರೆ.

    https://twitter.com/ScienceChannel/status/940259901166600194?ref_src=twsrc%5Etfw&ref_url=http%3A%2F%2Fzeenews.india.com%2Findia%2Fram-setu-exists-us-promo-reignites-debate-on-the-mythological-bridge-2065734.html

    ಮರಳಿನ ಮೇಲಿರುವ ಕಲ್ಲುಗಳು ಮರಳಿಗಿಂತ ಹಿಂದಿನ ಕಾಲದ್ದಾಗಿರುವುದರಿಂದ, ಕಥೆಯಲ್ಲಿ ಹೆಚ್ಚಿನದ್ದೇನೋ ಇದೆ ಎಂದು ಪ್ರೋಮೋದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರೊಬ್ಬರು ಹೇಳೋದನ್ನ ಕೇಳಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಮರಳು ನೈಸರ್ಗಿಕವಾಗಿ ರಚನೆಯಾಗಿದ್ದು, 7 ಸಾವಿರ ವರ್ಷಗಳಷ್ಟು ಹಳೆಯದ್ದು ಎನ್ನಲಾದ ಕಲ್ಲುಗಳನ್ನು ಅದರ ಮೇಲೆ ಇರಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಪ್ರೋಮೋವನ್ನ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪಕ್ಷದ ಮುಖಂಡರಾದ ತರುಣ್ ವಿಜಯ್ ಹಾಗೂ ಪ್ರತಾಪ್ ಸಿಂಹ ರೀಟ್ವೀಟ್ ಮಾಡಿದ್ದಾರೆ.