Tag: Ram Madhav

  • ಕರ್ಮ ಯಾರನ್ನು ಬಿಡಲ್ಲ, ಹಿಂಬಾಲಿಸುತ್ತಲೇ ಇರುತ್ತದೆ: ರಾಮ್ ಮಾಧವ್

    ಕರ್ಮ ಯಾರನ್ನು ಬಿಡಲ್ಲ, ಹಿಂಬಾಲಿಸುತ್ತಲೇ ಇರುತ್ತದೆ: ರಾಮ್ ಮಾಧವ್

    ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಅಧಿಕಾರ ಸ್ಥಾಪನೆ ಮಾಡಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸರ್ಕಾರ ಸ್ಥಾಪನೆಗೆ ಮುಂದಾಗುತ್ತಿದೆ.

    ಈ ನಡುವೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ವಾಟ್ಸಪ್ ನಲ್ಲಿ ಬಂದಿರುವ ಒಂದು ಮೆಸೇಜ್ ಅನ್ನು ಫೇಸ್‍ಬುಕ್‍ನಲ್ಲಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಪೋಸ್ಟ್ ನಲ್ಲಿ ಏನಿದೆ?
    1996ರಲ್ಲಿ ಗುಜರಾತಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ನಾಯಕರಾದ ಶಂಕರ್ ಸಿಂಗ್ ವಘೇಲಾ ಮತ್ತು ದಿಲೀಪ್ ಫಾರೀಕ್ ಅವರು ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಿಜೆಪಿ ಇಬ್ಭಾಗವಾಗಿತ್ತು.

    ವಿಶ್ವಾಸ ಮತಯಾಚನೆಯ ವೇಳೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಗದ್ದಲ, ಗಲಾಟೆ ಎಬ್ಬಿಸಿತ್ತು. ಗದ್ದಲ ಎಬ್ಬಿಸಿದ್ದಕ್ಕೆ ವಿರೋಧ ಪಕ್ಷದ ಸದಸ್ಯರನ್ನು ಸ್ಪೀಕರ್ ಒಂದು ದಿನ ಅಮಾನತುಗೊಳಿಸಿದರು. ನಂತರ ನಡೆದ ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಸರ್ಕಾರ ತನ್ನ ಬಹುಮತವನ್ನು ತೋರಿಸಿ ಪಾಸ್ ಆಗಿತ್ತು.

    ನಂತರ ನಡೆದ ರೋಚಕ ವಿದ್ಯಮಾನದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಅಷ್ಟೇ ಅಲ್ಲದೇ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿ ರಾಜ್ಯಪಾಲರಾದ ಕೃಷ್ಣಪಾಲ್ ಸಿಂಗ್ ಅವರು ತುರ್ತು ಪರಿಸ್ಥಿತಿ ಇರುವ ಕಾರಣ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು.

    ಪ್ರಧಾನಿ ಕಚೇರಿಗೆ ಶಿಫಾರಸು ತಲುಪಿದ 15 ನಿಮಿಷದ ಒಳಗಡೆ ಗುಜರಾತ್ ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ವಿಶೇಷ ಏನೆಂದರೆ ಸದನದಲ್ಲಿ ಬಹುಮತ ಸಾಬೀತು ಪಡಿಸಿದರೂ ರಾಷ್ಟ್ರಪತಿ ಆಳ್ವಿಕೆ ಬಂದಿತ್ತು.

    ನಂತರ ವಘೇಲಾ ಒಂದು ವರ್ಷಕ್ಕೆ, ಫರೀಕ್ 5 ತಿಂಗಳು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದಾಗ ಕಾಂಗ್ರೆಸ್ ತಾನು ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿತು. ಇದಾದ ನಂತರ ನಡೆದ ಚುನಾವಣೆಯಲ್ಲಿ ವಘೇಲಾ ಅವರು ಹೊಂದಿದ್ದ ಶಾಸಕರ ಸಂಖ್ಯಾಬಲ 47 ರಿಂದ 4ಕ್ಕೆ ಇಳಿಯಿತು ಅಷ್ಟೇ ಅಲ್ಲದೇ ಕಾಂಗ್ರೆಸ್ಸಿಗೆ ಸೋಲಾಯಿತು. ಕೇಶುಭಾಯಿ ಪಟೇಲ್ ಮತ್ತೆ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದರು.

    22 ವರ್ಷಗಳ ನಂತರವೂ ಈ ಘಟನೆ ಈಗ ಪ್ರಸ್ತುತ ಯಾಕೆಂದರೆ ಚುನಾಯಿತ ಸರ್ಕಾರಗಳು ಹೇಗೆ ಕೆಲವೊಮ್ಮೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ನೆಹರೂ ಅವರ ಕಾಲದಿಂದಲೂ ಸಂವಿಧಾನ ಉಲ್ಲಂಘನೆಯಾಗುತ್ತಲೇ ಇದೆ.

    1996 ರಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದಾಗ ವಜುಭಾಯಿ ವಾಲಾ ಗುಜರಾತ್ ಬಿಜೆಪಿಯ ಅಧ್ಯಕ್ಷರಾಗಿದ್ದರು. ಈಗ ವಿ.ಆರ್. ವಾಲಾ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ. ರಾಜ್ಯಪಾಲರ ಶಿಫಾರಸಿಗೆ ರಾಷ್ಟ್ರಪತಿ ಆಡಳಿತವನ್ನು ಗುಜರಾತ್ ನಲ್ಲಿ ಹೇರಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಅಂದಿನ ಪ್ರಧಾನಿ ಎಚ್‍ಡಿ ದೇವೇಗೌಡರೇ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಪಾಲರು ಅವರ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಕೇಳಿಕೊಳ್ಳುತ್ತಿವೆ. ಅದಕ್ಕೆ ಹೇಳೋದು ಕರ್ಮ ಯಾರನ್ನು ಬಿಡವುದಿಲ್ಲ ಹಿಂಬಾಲಿಸುತ್ತಲೇ ಇರುತ್ತದೆ ಅಂತ.

     

  • ಇಮೇಜ್ ವೃದ್ಧಿಗೆ ಹೊಸ, ಹೊಸ ಪ್ರಚಾರ ತಂತ್ರದ ಮೊರೆ ಹೋದ ಬಿಜೆಪಿ

    ಇಮೇಜ್ ವೃದ್ಧಿಗೆ ಹೊಸ, ಹೊಸ ಪ್ರಚಾರ ತಂತ್ರದ ಮೊರೆ ಹೋದ ಬಿಜೆಪಿ

    ಬೆಂಗಳೂರು: ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಟ್ಟುನಿಟ್ಟಿನ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಹೊಸ ಹೊಸ ಪ್ರಚಾರ ತಂತ್ರ ಅಳವಡಿಸಿಕೊಂಡು ಪಕ್ಷದ ಇಮೇಜ್ ವೃದ್ಧಿಸಲು ಬಿಜೆಪಿ ಪ್ಲಾನ್ ಮಾಡಿದೆ.

    ಈಗ ಪ್ರಚಾರ ಚಾಣಕ್ಯ ರಾಮ್ ಮಾಧವ್ ಸೂಚನೆ ಹಿನ್ನೆಲೆಯಲ್ಲಿ, “ನಮ್ಮ ಮನೆ ಬಿಜೆಪಿ ಮನೆ” ಮೂಲಕ ಪ್ರಚಾರಕ್ಕೆ ಬಿಜೆಪಿ ಮುಂದಾಗಿದೆ.

    ಏಪ್ರಿಲ್ 25 ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಮನೆ ಬಿಜೆಪಿ ಮನೆ ಆಚರಿಸಲು ಸೂಚನೆ ನೀಡಲಾಗಿದೆ. ಒಂದು ಕ್ಷೇತ್ರದಲ್ಲಿ ಕನಿಷ್ಟ 5 ಸಾವಿರ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವಂತೆ ಸೂಚನೆ ನೀಡಲಾಗಿದೆ.

    ರಾಜ್ಯಾದ್ಯಂತ 11,20,000 ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸಬೇಕು. ಮನೆ ಮೇಲೆ ಹಾರಿಸಲಾದ ಧ್ವಜದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

    ಅಭ್ಯರ್ಥಿಗಳ ಜೊತೆ ಮಾತು:
    ರಾಜ್ಯದ ಎಲ್ಲ 224 ಕ್ಷೇತ್ರಗಳ ಮೇಲೆ ಪ್ರಧಾನಿ ಮೋದಿ ಕಣ್ಣು ಹಾಕಿದ್ದು, ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಜೊತೆ ಏಪ್ರಿಲ್ 26 ರಂದು ಟೆಲಿಕಾನ್ಫರೆನ್ಸ್ ಮೂಲಕ ಮೋದಿ ಮಾತನಾಡಲಿದ್ದಾರೆ. ಏಪ್ರಿಲ್ 26 ರಂದು ಬೆಳಿಗ್ಗೆ 9 ರಿಂದ 10 ಗಂಟೆಯ ಅವಧಿಯಲ್ಲಿ 30 ನಿಮಿಷಗಳ ಕಾಲ ಚುನಾವಣೆ ಸಿದ್ಧತೆ, ಬೂತ್ ಸಶಕ್ತೀಕರಣ ನಡೆಸುವುದು ಹೇಗೆ ಎನ್ನುವ ಬಗ್ಗೆ ಮಾತನಾಡಲಿದ್ದಾರೆ. 224 ಕ್ಷೇತ್ರದ ಬಗ್ಗೆಯೂ ಮೋದಿ ಸಂಪೂರ್ಣ ಮಾಹಿತಿ ಹಿಡಿದುಕೊಂಡು ಮಾತನಾಡಲಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

  • ರಾಜ್ಯಕ್ಕೆ ಬಿಜೆಪಿ ಗೆಲುವಿನ ಸೂತ್ರಧಾರ ಎಂಟ್ರಿ – ಆರ್ ಎಸ್‍ಎಸ್ ನಾಯಕರ ಜೊತೆ ರಾಮ್ ಮಾಧವ್ ಗುಪ್ತ ಸಭೆ

    ರಾಜ್ಯಕ್ಕೆ ಬಿಜೆಪಿ ಗೆಲುವಿನ ಸೂತ್ರಧಾರ ಎಂಟ್ರಿ – ಆರ್ ಎಸ್‍ಎಸ್ ನಾಯಕರ ಜೊತೆ ರಾಮ್ ಮಾಧವ್ ಗುಪ್ತ ಸಭೆ

    ಬೆಂಗಳೂರು: ತ್ರಿಪುರಾ ಮತ್ತು ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಗೆಲುವಿನ ಸೂತ್ರಧಾರರಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಇದೀಗ ರಾಜ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

    ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ನಿಡದೇ ಆರ್ ಎಸ್‍ಎಸ್ ನಾಯಕರ ಜೊತೆ ಗುಪ್ತ ಸಭೆ ನಡೆಸಿದ್ದಾರೆ. ತಡರಾತ್ರಿವರೆಗೂ ನಡೆದ ಈ ಮಹತ್ವದ ಸಭೆಯಲ್ಲಿ ಚುನಾವಣೆ ಪ್ರಚಾರ ಕುರಿತಾಗಿ ಚರ್ಚಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಮೋದಿ ಭಾಗವಹಿಸುವ ಬೃಹತ್ ಸಮಾವೇಶ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ರಾಜ್ಯದಲ್ಲಿ ಸದ್ಯದ ವಿಪಕ್ಷಗಳ ಪ್ರಚಾರ ತಂತ್ರ ಕುರಿತು ಆರ್‍ಎಸ್‍ಎಸ್ ನಾಯಕರಿಂದ ಮಾಹಿತಿ ಪಡೆದಿದ್ದಾರೆ. ಬಹಿರಂಗ ಸಭೆ ಅವಧಿ ಮುಕ್ತಾಯ ದಿನಾಂಕದವರೆಗೆ ಕೈಗೊಳ್ಳಬೇಕಾದ ಪ್ರಚಾರ ತಂತ್ರ ಕುರಿತು ಚರ್ಚಿಸಿದ್ದು, ಇನ್ನು ಎರಡು ದಿನಗಳ ಕಾಲ ರಾಮ್ ಮಾಧವ್ ಅವರು ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಬಿಜೆಪಿ ಮುಖಂಡ ರಾಮ್ ಮಾಧವ್ ಸೆಕ್ಸ್ ಹಗರಣದ ಸುದ್ದಿ ನಿಜವೇ?

    ಬಿಜೆಪಿ ಮುಖಂಡ ರಾಮ್ ಮಾಧವ್ ಸೆಕ್ಸ್ ಹಗರಣದ ಸುದ್ದಿ ನಿಜವೇ?

    ಬೆಂಗಳೂರು: ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮೇಲೆ ಸೆಕ್ಸ್ ಹಗರಣದ ಗಂಭೀರ ಆರೋಪ ಕೇಳಿ ಬಂದಿದೆ.

    The News Joint ವೆಬ್‍ಸೈಟ್ ಒಂದು ನಾಗಾಲ್ಯಾಂಡ್ ಕನ್ಯೆಯರ ಜೊತೆ ಹೊಟೇಲ್‍ನಲ್ಲಿ ರೆಡ್ ಹ್ಯಾಂಡ್ ಆಗಿ ರಾಮ್ ಮಾಧವ್ ಸಿಕ್ಕಿ ಬಿದ್ದಿದ್ದಾರೆ ಎಂದು ಸುದ್ದಿಯನ್ನು ಪ್ರಕಟಿಸಿತ್ತು.

    ರಾಮ್ ಮಾಧವ್ ಮೇಲೆ ಬಂದಿರುವ ಆರೋಪವನ್ನು ನಾಗಾಲ್ಯಾಂಡ್ ಬಿಜೆಪಿ ತಳ್ಳಿ ಹಾಕಿದೆ. ಇದೊಂದು ಸುಳ್ಳು ಆರೋಪವಾಗಿದ್ದು, ಪ್ರಕಟವಾಗಿದ್ದ ವೆಬ್‍ಸೈಟ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು ಸೈಬರ್ ಕ್ರೈಂ ನಲ್ಲಿ ದೂರು ನೀಡಿದೆ. ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ರಾಮ್ ಮಾಧವ್ ಮೇಲೆ ಬಂದಿರುವ ಸುದ್ದಿ ಈಗ ವೆಬ್‍ಸೈಟ್ ನಿಂದ ಡಿಲೀಟ್ ಆಗಿದೆ. ಅಷ್ಟೇ ಅಲ್ಲದೇ ಡೊಮೈನ್ ಈಗ 63.46 ರೂ. ಮಾರಾಟಕ್ಕಿದೆ.

    ಸುದ್ದಿ ಡಿಲೀಟ್ ಆಗಿದ್ದರೂ ಈ ವೆಬ್‍ಸೈಟ್ ನಲ್ಲಿ ಪ್ರಕಟಗೊಂಡ ಸುದ್ದಿಯ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಬಿಜೆಪಿ ವಿರೋಧಿಸುವ ಮಂದಿ ಈ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

    ವಿಶೇಷ ಏನೆಂದರೆ ಈ ವೆಬ್‍ಸೈಟ್ ಆರಂಭಗೊಂಡು 9 ದಿನ ಆಗಿತ್ತು. ನಾಗಲ್ಯಾಂಡ್ ವಿಧಾನಸಭಾ ಚುನಾವಣೆ ಇದೇ 27 ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ವೆಬ್‍ಸೈಟ್ ತೆರೆದು ರಾಮ್ ಮಾಧವ್ ಅವರ ತೇಜೋವಧೆ ಮಾಡಲು ಮುಂದಾಗಿದೆ ಎಂದು ಬಿಜೆಪಿ ಹೇಳಿದೆ.

    https://twitter.com/raghavwrong/status/963020140236259329