Tag: Ram Lalla

  • ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.. ಕಲಾ ಸೇವೆಯಲ್ಲೇ ಮುಂದುವರಿಯುತ್ತೇನೆ: ಶಿಲ್ಪಿ ಅರುಣ್‌ ಯೋಗಿರಾಜ್‌

    ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.. ಕಲಾ ಸೇವೆಯಲ್ಲೇ ಮುಂದುವರಿಯುತ್ತೇನೆ: ಶಿಲ್ಪಿ ಅರುಣ್‌ ಯೋಗಿರಾಜ್‌

    ಮೈಸೂರು: ನನಗೆ ರಾಜಕೀಯ ಆಸಕ್ತಿ ಇಲ್ಲ. ಕಲಾ ಸೇವೆಯಲ್ಲಿ ಮುಂದುವರಿಯುತ್ತೇನೆ ಎಂದು ಅಯೋಧ್ಯೆ ರಾಮಮಂದಿರ (Ayodhya Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಹೇಳಿದ್ದಾರೆ.

    ತವರು ನೆಲ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕೆಲಸವನ್ನ ನಾನು ಶ್ರದ್ಧೆಯಿಂದ ಮಾಡಿದ್ದೇನೆ. ನನಗೆ ಇಷ್ಟೊಂದು ಪ್ರೀತಿ, ಅದ್ದೂರಿ ಸ್ವಾಗತ ಸಿಗುತ್ತೆ ಅಂತಾ ಅಂದುಕೊಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ‌ಶಿಲ್ಪಿ ಅರುಣ್‌ ಯೋಗಿರಾಜ್

    ಯುವಕರು ಕುಲಕಸುಬು ನಂಬಿದರೆ ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದು. ಅದಕ್ಕೆ ನಾನೇ ಉದಾಹರಣೆ. ರಾಜಕೀಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ರಾಜಕೀಯಕ್ಕೆ ಬರುವ ಆಸಕ್ತಿಯೂ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ನನ್ನನ್ನು ನೋಡಲು ತುಂಬಾ ಜನ ಬಂದಿದ್ದರು. ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಮೈಸೂರಿಗೆ ಬರುತ್ತಿದ್ದಂತೆ ಅರಮನೆಗೆ ಭೇಟಿ ನೀಡಿದ್ದೆ. ಯದುವೀರ್‌ ಅವರನ್ನು ಮಾತನಾಡಿಸಿ ಬಂದಿದ್ದೇನೆ. ಅವರೊಂದಿಗೆ ನನ್ನ ಅನುಭವ ಹೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

    ಕಲೆ ಬೆಳೆಯಲು ಮಹಾರಾಜರ ಕೊಡುಗೆ ಅಪಾರವಾಗಿದೆ. ನಮ್ಮ ರಾಜಗುರು ಶಿಲ್ಪಿ ಸಿದ್ದಲಿಂಗಸ್ವಾಮಿ ಅವರಿಗೆ ಮೈಸೂರು ಮಹಾರಾಜರು ಆಶ್ರಯ ಕೊಟ್ಟಿದ್ದರು. ನಾಳೆ ಸುತ್ತೂರು ಸ್ವಾಮೀಜಿ ಅವರನ್ನು ಭೇಟಿ ಆಗುತ್ತೇನೆ. ಅದಕ್ಕಾಗಿ ಸ್ವಾಮೀಜಿ ಅವರ ಸಮಯ ಕೇಳಿದ್ದೇನೆ. ಮಧ್ಯಾಹ್ನ ನಮ್ಮೂರಿನಲ್ಲಿರುವ ತಂದೆಯವರ ಸಮಾಧಿ ಬಳಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.

  • ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ‌ಶಿಲ್ಪಿ ಅರುಣ್‌ ಯೋಗಿರಾಜ್

    ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ‌ಶಿಲ್ಪಿ ಅರುಣ್‌ ಯೋಗಿರಾಜ್

    ಬೆಂಗಳೂರು: ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಬಾಲಕರಾಮ ನೆಲೆಯಾಗಿದ್ದಾರೆ. ಈ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದತೂ ಪಕ್ಕಾ. ಈ ಕಣ್ಣುಗಳ ಕೆತ್ತನೆಯ ವೇಳೆ ತನಗಾದ ಅನುಭವವನ್ನು ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಪಬ್ಲಿಕ್‌ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಅಯೋಧ್ಯೆಯಿಂದ ಬೆಂಗಳೂರಿಗೆ ವಾಪಸ್‌ ಆಗ್ತಿದ್ದಂತೆಯೇ ಹೆಚ್‌.ಆರ್‌ ರಂಗನಾಥ್‌ (HR Ranganath) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಣ್ಣಗಳನ್ನು ಗರ್ಭಗುಡಿ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್‌ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ ಎಂದು ಹೇಳಿದರು.

    ಈ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿತ್ತು. ಈ ಸಮಯದಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಅಂತಾ ಕೇಳಬೇಕಿತ್ತು. ಆದರೆ ಅಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಭಯ ತಡೆದುಕೊಳ್ಳಲು ಆಗದೆ ಕೊನೆಗೆ ನನ್ನ ಸಹಪಾಠಿಗಳ ಜೊತೆ ಕಣ್ಣಿನ ಬಗ್ಗೆ ಹೇಳಿಕೊಂಡೆ ಎಂದರು.

    ಪ್ರಭಾವಳಿಯ ತೀರ್ಮಾನ ಮಾಡಿದ್ದು ಯಾರು..?: ಪ್ರಭಾವಳಿಯ ತೀರ್ಮಾನವನ್ನು ನಾನೇ ಮಾಡಿದ್ದಾಗಿದೆ. ವಿಷ್ಣುವಿನ ಒಂದು ರೂಪ ಆಗಿರುವುದರಿಂದ ಪ್ರಭಾವಳಿಯಲ್ಲಿ ದಶಾವತಾರ ತಗೊಂಡೆ ಎಂದು ಹೇಳಿದರು. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್‌ ಯೋಗಿರಾಜ್‌ ವಿವರಿಸಿದ್ದು ಹೀಗೆ

    ಮುಂದೆ ಏನು?: ಕೊಡುವ ಜವಾಬ್ದಾರಿಗಳನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕಲು ಎಂಬುದು ನನ್ನ ಮುಂದಿರುವ ಚಾಲೆಂಜ್‌ ಆಗಿದೆ. ಉನ್ನತ ಮಟ್ಟದಲ್ಲಿ ಹೇಗೆ ಕೆಲಸ ಮಾಡಿ ವಾಪಸ್ ಕೊಡಬಹುದು ಎಂಬುದಷ್ಟೇ ನನ್ನ ಯೋಚನೆಗಳಾಗಿವೆ ಎಂದು ತಿಳಿಸಿದರು.

    ಒಟ್ಟಿನಲ್ಲಿ ಪ್ರಪಂಚದ ಅತೀ ಅದೃಷ್ಟವಂತ ನಾನು ಅಂತಾ ಅರುಣ್‌ ಯೋಗಿರಾಜ್‌ ಹೇಳಿದರು. ನಮ್ಮ ಕುಟುಂಬ ಸಾಕಷ್ಟು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಅಷ್ಟು ದೊಡ್ಡ ದೇವಸ್ಥಾನಕ್ಕೆ ನಾನೇ ವಿಗ್ರಹ ಮಾಡಿಕೊಟ್ಟೆ ಎಂಬುದನ್ನು ನನಗೆ ನಂಬೋಕೆ ಆಗ್ತಿಲ್ಲ. ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನನಗೆ ಮಗುವನ್ನು ಅರಮನೆಗೆ ತಂದಂತೆ ಭಾಸವಾಗ್ತಿತ್ತು ಎಂದರು.

    ಫೋಟೋಗಳಲ್ಲಿ ನೋಡುವುದಕ್ಕಿಂತಲೂ ರಾಮಲಲ್ಲಾರನ್ನು ಎದುರುಗಡೆ ನೋಡುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ನಾನೇ ಮಾಸ್ಕ್‌ ಹಾಕಿಕೊಂಡು ಹೋಗಿ ಎಲ್ಲರನ್ನೂ ಹೇಗಿದೆ ವಿಗ್ರಹ ಎಂದು ಕೇಳುತ್ತಿದ್ದೆ. ಎಲ್ಲರೂ ತುಂಬಾ ಚೆನ್ನಾಗಿದೆ ಅಂತ ಹೇಳಿದರು. ಅವತ್ತು ಹೋಗಿ ಒಳ್ಳೆ ನಿದ್ದೆ ಮಾಡಿದೆ ಎಂದರು.

  • ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

    ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

    ರಾಮ್ ಲಲ್ಲಾ ಮೂರ್ತಿ (Ram Lalla)ಮಾಡುವ ಮೂಲಕ ಜಗತ್ ಪ್ರಸಿದ್ಧಿ ಪಡೆದಿರುವ ಮೈಸೂರಿನ ಅರುಣ್ ಯೋಗಿರಾಜ್ (Arun Yogiraj)ಗೂ ಸಿನಿಮಾ ರಂಗಕ್ಕೂ ನಂಟಿದೆ. ಮೈಸೂರಿನ ವಿಷ್ಣುವರ್ಧನ್ (Vishnuvardhan) ಸ್ಮಾರಕದಲ್ಲಿ ತಲೆಯೆತ್ತಿ ನಿಂತಿರುವ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು (Putthali) ತಯಾರು ಮಾಡಿದ್ದು ಇದೇ ಅರುಣ್ ಯೋಗಿರಾಜ್.

     

    ಅರುಣ್ ಯೋಗಿರಾಜ್ ಸ್ಥಳೀಯ ಮಟ್ಟದಲ್ಲಿ ಶಿಲ್ಪಿಕಾರರಾಗಿ ಗುರುತಿಸಿಕೊಂಡಿದ್ದರೂ, ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಸಿನಿಮಾ ರಂಗಕ್ಕೂ ಪರಿಚಿತ ಆದರು. ಅದರಲ್ಲೂ ಸ್ಮಾರಕದ ಉದ್ಘಾಟನೆ ದಿನದಂದು ವಿಷ್ಣುವರ್ಧನ್ ಪುತ್ಥಳಿ ಹಾಗೂ ಭಾರತಿ ವಿಷ್ಣುವರ್ಧನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು.

     

    ಇದೀಗ ಅರುಣ್ ಯೋಗಿರಾಜ್ ನ್ಯಾಷಿನಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಇವರದ್ದೇ ಕಲ್ಪನೆಯಲ್ಲಿ ತಯಾರಾದ ರಾಮ್ ಲಲ್ಲಾ ಮೂರ್ತಿಯು ಆಯ್ಕೆಯಾದ ನಂತರ ಅರುಣ್ ಸಖತ್ ಫೇಮಸ್ ಆಗಿದ್ದಾರೆ. ಇವರ ಕಲ್ಪನೆಯಲ್ಲಿ ಅರಳಿದ ಪ್ರತಿಮೆಗಳು ಇದೀ ಒಂದೊಂದೇ ಬೆಳಕಿಗೆ ಬರುತ್ತಿವೆ.

     

    ನಿನ್ನೆಯಷ್ಟೇ ಅರುಣ್ ಯೋಗಿರಾಜ್ ಬೆಂಗಳೂರಿಗೆ ಬಂದಿಳಿದ್ದಾರೆ. ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಅವರ ಜೊತೆ ಎಕ್ಸ್ ಕ್ಲ್ಯೂಸಿವ್ ಆಗಿ ಸಂದರ್ಶನಕ್ಕೆ ಕೂತಿದ್ದಾರೆ. ಸಾಕಷ್ಟು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದಾರೆ.

  • ಅಯೋಧ್ಯೆಗೆ ಮೊದಲ ದಿನದ ಆನ್ಲೈನ್ ಕಾಣಿಕೆ 3.17 ಕೋಟಿ

    ಅಯೋಧ್ಯೆಗೆ ಮೊದಲ ದಿನದ ಆನ್ಲೈನ್ ಕಾಣಿಕೆ 3.17 ಕೋಟಿ

    – ಒಂದೇ ದಿನಕ್ಕೆ ಕೋಟಿ ಒಡೆಯನಾದ ಅಯೋಧ್ಯೆ ರಾಮಲಲ್ಲಾ
    – ಪ್ರತಿ ಸೋಮವಾರ ಮಂದಿರದ ಹುಂಡಿ ಎಣಿಕೆ ಕಾರ್ಯ

    ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಾದ ನಂತರದ ಮೊದಲ ದಿನವಾದ ಮಂಗಳವಾರ ರಾಮಲಲ್ಲಾಗೆ (Ram Lalla) ಆನ್‌ಲೈನ್‌ನಲ್ಲಿ 3 ಕೋಟಿ 17 ಲಕ್ಷ ರೂ. ಕಾಣಿಕೆ ಹರಿದುಬಂದಿದೆ.

    ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಮಾತನಾಡಿ, ಪ್ರಾಣ ಪ್ರತಿಷ್ಠೆಯ ದಿನದಂದು 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಇದಲ್ಲದೆ, ದೇಶ ಮತ್ತು ಪ್ರಪಂಚದಾದ್ಯಂತದ ಅನೇಕ ಭಕ್ತರು ಶ್ರೀರಾಮನಿಗೆ ಆನ್‌ಲೈನ್ ದೇಣಿಗೆಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: ಧನ್ಯವಾದಗಳು ಅಯೋಧ್ಯೆ – ಧರ್ಮಭೂಮಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ ಮೈಸೂರಿನ ಶಿಲ್ಪಿ

    ಮಂಗಳವಾರ 5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಬುಧವಾರ ಅಷ್ಟೇ ಸಂಖ್ಯೆಯಲ್ಲಿ ಭೇಟಿ ನೀಡಿದರು. ಮಂಗಳವಾರ ಆನ್‌ಲೈನ್‌ನಲ್ಲಿ 3.17 ಕೋಟಿ ರೂ. ಕಾಣಿಕೆ ಬಂದಿದೆ. ಬುಧವಾರ ಪಡೆದ ಮೊತ್ತವನ್ನು ಮರುದಿನ ಕೋಷ್ಟಕದ ನಂತರ ಬಹಿರಂಗಪಡಿಸಲಾಗುವುದು ಎಂದು ಮಿಶ್ರಾ ಅವರು ತಿಳಿಸಿದ್ದಾರೆ.

    ಪ್ರತಿ ಸೋಮವಾರ ಮಂದಿರದ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ರಾಮಮಂದಿರ ಆವರಣದಲ್ಲಿ 10 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಪ್ರಾಣ ಪ್ರತಿಷ್ಠಾಪನೆ ದಿನ ದೇಣಿಗೆ ಸ್ವೀಕರಿಸಲು 10 ಕೌಂಟರ್ ಶುರು ಮಾಡಲಾಗಿತ್ತು. ಇದರ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ದೇವಸ್ಥಾನದಲ್ಲಿ ದರ್ಶನವನ್ನು ವ್ಯವಸ್ಥಿತವಾಗಿ ಮಾಡಲು ಆಡಳಿತದೊಂದಿಗೆ ಸಮಾಲೋಚಿಸಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ದೇವಶಿಲ್ಪಿ ಅರುಣ್‌ ಯೋಗಿರಾಜ್‌ ಅಯೋಧ್ಯೆಯಿಂದ ತಾಯ್ನಾಡಿಗೆ ಆಗಮನ – ರಾಮಭಕ್ತರಿಂದ ಭವ್ಯ ಸ್ವಾಗತ, ಮೊಳಗಿದ ‘ಜೈ ಶ್ರೀರಾಮ್’‌ ಘೋಷಣೆ

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಟ್ರಸ್ಟ್‌ನ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಯೋಧ್ಯೆಯ ಸುತ್ತಮುತ್ತಲಿನ ಸಂಘದ ಕಾರ್ಯಕರ್ತರಿಗೆ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳಲು ಮತ್ತು ಸುವ್ಯವಸ್ಥಿತ ದೇವಾಲಯ ದರ್ಶನಕ್ಕೆ ಸಹಕರಿಸುವಂತೆ ಸೂಚನೆ ನೀಡಿದ್ದಾರೆ.

  • ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್ ಮಾರ್ಬಲ್ ಬಾಲರಾಮನ ಲುಕ್ ಹೇಗಿದೆ?

    ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್ ಮಾರ್ಬಲ್ ಬಾಲರಾಮನ ಲುಕ್ ಹೇಗಿದೆ?

    – ರಾಜಸ್ಥಾನದ ಶಿಲ್ಪಿ ಕೆತ್ತಿದ ಮೂರ್ತಿಯ ಫೋಟೋ

    ನವದೆಹಲಿ: ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್‌ ಮಾರ್ಬಲ್‌ ಬಾಲರಾಮ ಮೂರ್ತಿಯ ಲುಕ್‌ ವೈರಲ್‌ ಆಗಿದೆ. ರಾಜಸ್ಥಾನದ (Rajasthan) ಶಿಲ್ಪಿ ಕೆತ್ತಿದ ಮೂರ್ತಿ ಇದು.

    ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ಕಪ್ಪು ಶಿಲೆಯ ರಾಮಲಲ್ಲಾ (Ram Lalla) ವಿಗ್ರಹ ಅಯೋಧ್ಯೆಯ ಭವ್ಯ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಇನ್ನು ಎರಡು ವಿಗ್ರಹಗಳನ್ನು ದೇವಾಲಯದ ಇತರ ಭಾಗಗಳಲ್ಲಿ ಇರಿಸಲಾಗುವುದು. ಅವುಗಳಲ್ಲಿ ಒಂದು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇದೆ. ಈ ವಿಗ್ರಹದ ಛಾಯಾಚಿತ್ರಗಳು ವೈರಲ್‌ ಆಗಿವೆ. ಇದನ್ನೂ ಓದಿ: ಕಬ್ಬಿಣ, ಸಿಮೆಂಟ್‌ ಬಳಸಿಲ್ಲ – ಕಲ್ಲಿನಿಂದಲೇ ಭವ್ಯ ರಾಮಮಂದಿರ ನಿರ್ಮಾಣ; ಯಾಕೆ ಗೊತ್ತಾ?

    ರಾಜಸ್ಥಾನದ ಶಿಲ್ಪಿ ಕೆತ್ತಿರುವ ವಿಗ್ರಹವು ದೇವಾಲಯದ ‘ಗರ್ಭಗೃಹ’ಕ್ಕೆ ಬರಲು ಮೈಸೂರು ಶಿಲ್ಪಿಯ ಮೂರ್ತಿ ಎದುರು ಪೈಪೋಟಿ ನಡೆಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಮೂರ್ತಿಯನ್ನು ರಾಮಮಂದಿರದಲ್ಲಿ ಬೇರೆಡೆ ಇರಿಸಲಾಗುತ್ತದೆ.

    ಬಿಳಿ ಅಮೃತಶಿಲೆಯ ವಿಗ್ರಹವು ಪ್ರಸ್ತುತ ಟ್ರಸ್ಟ್‌ನಲ್ಲಿದೆ. ರಾಮಲಲ್ಲಾ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ವಿಗ್ರಹ ಇದಾಗಿದೆ. ಬಾಲರಾಮನ ಹಿಂದೆ ಕಮಾನಿನಂತಿರುವ ರಚನೆಯು ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ ಸಣ್ಣ ಶಿಲ್ಪಗಳನ್ನು ಒಳಗೊಂಡಿದೆ. ಬಾಲರಾಮನನ್ನು ಅಲಂಕರಿಸುವ ಆಭರಣಗಳು ಮತ್ತು ಬಟ್ಟೆಗಳನ್ನು ಅಮೃತಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಇದು ವಿಗ್ರಹ ಕೂಡ ಗಮನಾರ್ಹ ಕುಶಲತೆಗೆ ಹಿಡಿದ ಕೈಗನ್ನಡಿಯಂತಿದೆ. ಇದನ್ನೂ ಓದಿ: ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ಈಗ ದೇವಾಲಯದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ 51 ಇಂಚಿನ ಕಪ್ಪು ಗ್ರಾನೈಟ್ ವಿಗ್ರಹವನ್ನು 2.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಬಂಡೆಯಿಂದ ಕೆತ್ತಲಾಗಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಹೆಚ್‌.ಎಸ್.ವೆಂಕಟೇಶ್ ತಿಳಿಸಿದ್ದಾರೆ.

  • ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನನ್ನು ‘ಬಾಲಕ ರಾಮ’ (Balak Ram) ಎಂದು ಕರೆಯಲಾಗುವುದೆಂದು ಪ್ರತಿಷ್ಠಾಪನೆಯ ಅರ್ಚಕ ಅರುಣ್‌ ದೀಕ್ಷಿತ್‌ (Arun Dixit) ಮಾಹಿತಿ ನೀಡಿದ್ದಾರೆ.

    ಶ್ರೀರಾಮಜನ್ಮಭೂಮಿ ದೇವಸ್ಥಾನದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ಅರ್ಚಕರಾಗಿದ್ದರು ಅರುಣ್‌ ದೀಕ್ಷಿತ್‌. 51 ಇಂಚು ಎತ್ತರದ ಭಗವಾನ್ ರಾಮಲಲ್ಲಾನ ವಿಗ್ರಹವನ್ನು ‘ಬಾಲಕ ರಾಮ’ ಎಂದು ಹೆಸರಿಡಲಾಗಿದೆ. ಇದು ರಾಮನ ಮಗುವಿನ ರೂಪವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ಜನವರಿ 22 ರಂದು ಪ್ರತಿಷ್ಠಾಪನೆಯಾದ ಶ್ರೀರಾಮನ ವಿಗ್ರಹಕ್ಕೆ ‘ಬಾಲಕ ರಾಮ’ ಎಂದು ಹೆಸರಿಡಲಾಗಿದೆ. ಈ ಹೆಸರಿಡಲು ಪ್ರಮುಖ ಕಾರಣವೆಂದರೆ, ವಿಗ್ರಹವು ಐದು ವರ್ಷ ವಯಸ್ಸಿನ ಮಗುವಿನ ರೂಪದ ಮಾದರಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾನ ವಿಗ್ರಹವನ್ನು ಕೆತ್ತಿದ್ದಾರೆ. ಮೈಸೂರಿನ ಹೆಚ್‌.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಿಂದ ಶಿಲ್ಪಕ್ಕೆ ಬಳಸಲಾದ ನೀಲಿ ಬಣ್ಣದ ಕೃಷ್ಣ ಶಿಲೆಯನ್ನು (ಕಪ್ಪು ಶಿಲೆ) ಹೊರತೆಗೆಯಲಾಗಿತ್ತು. ಸೋಪ್‌ಸ್ಟೋನ್ ಎಂದು ಪ್ರಸಿದ್ಧವಾದ ಆಕಾಶ-ನೀಲಿ ಮೆಟಾಮಾರ್ಫಿಕ್ ಬಂಡೆಯು ವಿಗ್ರಹಗಳನ್ನು ಕೆತ್ತಲು ಶಿಲ್ಪಿಗಳಿಗೆ ಉತ್ತಮ ಆಯ್ಕೆಯಾಗಿದೆ. ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ, ಆರತಿ ಸಮಯ, ಭಗವಾನ್ ರಾಮನಿಗೆ ಅರ್ಪಣೆ ಮತ್ತು ಇತರ ಕಾರ್ಯವಿಧಾನಗಳನ್ನು ದೇವಾಲಯದಲ್ಲಿ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    ಸೋಮವಾರ (ಜ.22) ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಗಣ್ಯರು ಅಯೋಧ್ಯೆಯಲ್ಲಿ ನೆರೆದಿದ್ದರು. ರಾಮಲಲ್ಲಾನನ್ನು ಕಣ್ತುಂಬಿಕೊಂಡು ಪುನೀತರಾದರು.

  • ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ಗಾಂಧೀನಗರ: 11 ಕೋಟಿ ರೂ. ಮೌಲ್ಯದ ಕಿರೀಟವನ್ನು  ರಾಮಲಲ್ಲಾ ಮೂರ್ತಿಗೆ ಗುಜರಾತ್‍ನ ಸೂರತ್ ಮೂಲದ ವಜ್ರ ವ್ಯಾಪಾರಿ (Gujarat diamond trader) ದೇಣಿಗೆ ನೀಡಿದ್ದಾರೆ.

    ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿ ಮಾಲೀಕರಾದ ಮುಕೇಶ್ ಪಟೇಲ್ (Mukesh Patel) ದೇಣಿಗೆ ನೀಡಿರುವ ವ್ಯಕ್ತಿ. ಸೂರತ್‍ನಲ್ಲಿ ವಜ್ರ ವ್ಯಾಪಾರಿಯಾಗಿರುವ ಮುಕೇಶ್ ಅವರು ಪ್ರಭು ಶ್ರೀರಾಮನಿಗಾಗಿ 6 ಕೆ.ಜಿ ತೂಕದ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟವನ್ನು ಕೊಡುಗೆಯಾಗಿ ನೀಡಿದ್ದಾರೆ.

    ನಿನ್ನೆಯಷ್ಟೇ ನಡೆದ ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ (Ram Lalla Pran Prathistha ceremony) ಇಡೀ ದೇಶವೇ ಸಾಕ್ಷಿಯಾಗಿತ್ತು. ಪ್ರಭು ಶ್ರೀರಾಮ ಚಿನ್ನದ ಅಭರಣಗಳಿಂದ ಕಂಗೊಳಿಸುತ್ತಿದ್ದನು. ಇದೇ ಹೊತ್ತಲ್ಲಿ ಸೂರತ್‍ನ (Surat) ವಜ್ರ ವ್ಯಾಪಾರಿ ನೀಡಿರುವ 11 ಕೋಟಿ ರೂಪಾಯಿ ಮೌಲ್ಯ ಬೆಲೆ ಬಾಳುವ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟ ದಾನ ಮಾಡಿದ್ದಾರೆ . ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಮುಕೇಶ್ ಪಟೇಲ್ ಅಯೋಧ್ಯೆಗೆ (Ayodhya Ram Mandir) ಆಗಮಿಸಿದ್ದರು. ಬಳಿಕ ಖುದ್ದಾಗಿ ಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಿಗೆ ಸೂಕ್ಷ್ಮವಾಗಿ ರಚಿಸಲಾದ ಕಿರೀಟವನ್ನು ಹಸ್ತಾಂತರ ಮಾಡಿದ್ದಾರೆ.

    ಹಲವಾರು ಸಂಶೋಧನೆಯ ಬಳಿಕ ಮುಕೇಶ್ ಅವರು ಚಿನ್ನ ಮತ್ತು ವಜ್ರದ ಕಿರೀಟವನ್ನು ನೀಡಲು ನಿರ್ಧರಿಸಿದ್ದರು. ನಂತರ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ರಾಮನ ಪ್ರತಿಮೆಯನ್ನು ಅಳೆಯಲು ಅಯೋಧ್ಯೆಗೆ ಕಳುಹಿಸಿದ್ದರು. ಆ ಅಧಾರದ ಮೇರೆಗೆ ಕಿರೀಟವನ್ನು ತಯಾರಿಸಲಾಗಿದೆ. ಉದ್ಘಾಟನೆಯಾದ ರಾಮಮಂದಿರದ ಶ್ರೀರಾಮನಿಗೆ ಇನ್ನಿತರ ಕೆಲವು ಆಭರಣಗಳನ್ನೂ ಮುಕೇಶ್ ಪಟೇಲ್ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಖಜಾಂಚಿ ದಿನೇಶ್ ಭಾಯಿ ನವಿಯಾ ತಿಳಿಸಿದ್ದಾರೆ.

    ಕಿರೀಟದ ವಿಶೇಷತೆ?: ಕಿರೀಟ ಒಟ್ಟು ಆರು ಕೆ.ಜಿ ಇದೆ. ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ ನಾಲ್ಕು ಕೆಜಿಗಳಷ್ಟು ಚಿನ್ನವನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಕಿರೀಟದ ಮೌಲ್ಯ ಬರೋಬ್ಬರಿ 11 ಕೋಟಿ ರೂಪಾಯಿಗಳಾಗಿವೆ.

  • ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

    ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಇಂದು ನಡೆದ ರಾಮಲಲ್ಲಾ (Ram Lalla) ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲರಾಮನ ದರ್ಶನ ಪಡೆದ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರದ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಿರ್ವಿಘ್ನವಾಗಿ ನೇರವೇರಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಮುಖ ನಾಯಕರು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗುವ ಮೂಲಕ ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಕಣ್ತುಂಬಿಕೊಂಡರು. ಈ ಕಾರ್ಯಕ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಲ್ಲದೇ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಮುಕೇಶ್ ಅಂಬಾನಿ ದೇಣಿಗೆ ನೀಡಿರುವ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಮಗಳು ಇಶಾ ಮತ್ತು ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಭಾಗಿಯಾಗಿದ್ದರು. ಇದನ್ನೂ ಓದಿ: ಅಯೋಧ್ಯೆಯಿಂದ ಹಿಂದಿರುಗಿದ ನಂತರ ನನ್ನ ಮೊದಲ ನಿರ್ಧಾರ – ಹೊಸ ಯೋಜನೆ ಘೋಷಿಸಿದ ಮೋದಿ

    ಬಾಲರಾಮನ ಪ್ರಾಣಪ್ರತಿಷ್ಠೆ ಕುರಿತು ಮಾತನಾಡಿದ ಅಂಬಾನಿ, ಇಂದು ಭಗವಾನ್ ರಾಮ ಆಗಮಿಸಿದ್ದಾರೆ. ಜನವರಿ 22 ಇಡೀ ದೇಶಕ್ಕೆ ರಾಮ ದೀಪಾವಳಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕುರಿತು ಮಾತನಾಡಿದ ನೀತಾ ಅಂಬಾನಿ, ‘ಇದೊಂದು ಐತಿಹಾಸಿಕ ದಿನ’ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ವಿಧಿವಿಧಾನಗಳನ್ನು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಮಾರಂಭವು ಹೊಸ ಯುಗದ ಆಗಮನವನ್ನು ಸೂಚಿಸುತ್ತದೆ ಎಂದರು. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

  • ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಅಯೋಧ್ಯೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ram Mandir) ಭವ್ಯವಾಗಿ ನೆರವೇರಿತು. ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:34 ರವರೆಗಿನ 84 ಸೆಕೆಂಡ್‌ಗಳ ಶುಭ ಅಭಿಜಿನ್ ಲಗ್ನದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು. ಶ್ರೀರಾಮೋತ್ಸವದ ಪ್ರಧಾನ ಯಜಮಾನ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ, ಮಂತ್ರಘೋಷಗಳ ನಡುವೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ.

    ಮೋದಿ ಕೈಯಲ್ಲಿತ್ತು ಕಮಲ!
    ಗರ್ಭಗುಡಿಯನ್ನು ಪ್ರವೇಶಿಸಿದ ಮೋದಿ ಕಮಲದ ಹೂವನ್ನು (Lotus Flower) ತೆಗೆದುಕೊಂಡು ಅನುಷ್ಠಾನ ವಿಧಿವಿಧಾನ ಆರಂಭಿಸಿದರು. ಇವೆಲ್ಲ ಕಾರ್ಯಗಳ ಬಳಿಕ ಮೋದಿ ಅವರು ಕಮಲದ ಹೂವನ್ನು ಬಾಲರಾಮನ ಪಾದಕ್ಕೆ ಸಮರ್ಪಿಸಿದರು. ನಂತರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರತಿ ಬೆಳಗಿದರು. ನಂತರ ಮೋದಿ ಬಾಲರಾಮನ ಮುಂದೆ ಸಾಷ್ಟಾಂಗ ವಂದಿಸಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಈ ವೇಳೆ ದೇವಸ್ಥಾನ ಒಳಗೆ ಮತ್ತು ಹೊರಗೆ ಸೇರಿದ್ದವರು ಶ್ರೀರಾಮ, ಜಯರಾಮ ಘೋಷಣೆ ಕೂಗಿದರು. ಸೇನಾ ಹೆಲಿಕಾಪ್ಟರ್ ಮೂಲಕ ಮಂದಿರದ ಮೇಲೆ ಪುಷ್ಪವೃಷ್ಟಿಯನ್ನೂ ಮಾಡಲಾಯಿತು. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!

  • ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಅಯೋಧ್ಯೆ: ಜಗವೇ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ (Ayodhya) ಶ್ರೀರಾಮನ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿದೆ. ನಾಳೆಯಿಂದ (23 ಜನವರಿ 2024) ರಾಮಮಂದಿರದಲ್ಲಿ (Ram Mandir) ಭಕ್ತರು ಬಾಲರಾಮನ ದರ್ಶನ ಪಡೆದು ಕಣ್ತುಂಬಿಕೊಳ್ಳಬಹುದು.

    ಬೆಳಗ್ಗೆ 7ರಿಂದ 11.30ರವರೆಗೆ:
    ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದರ್ಶನ ಪಡೆಯಲು ನೀವು ಬೆಳಗಿನ ಹೊತ್ತು ಹೋಗುವವರಾಗಿದ್ದರೆ ಬೆಳಗ್ಗೆ 7ರಿಂದ ದರ್ಶನ ಭಾಗ್ಯ ಸಿಗಲಿದೆ. 7.00 ಗಂಟೆಗೆ ತೆರೆಯುವ ರಾಮನ ಮಂದಿರ 11.30ಕ್ಕೆ ಬಾಗಿಲು ಮುಚ್ಚಲಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ – Photos ನೋಡಿ..

    ಮಧ್ಯಾಹ್ನ 2ರಿಂದ ರಾತ್ರಿ 7.00ರವರೆಗೆ:
    ಮಧ್ಯಾಹ್ನ ನಂತರದ ರಾಮಲಲ್ಲಾನ (Ram Lalla) ದರ್ಶನಕ್ಕೂ ಸಮಯ ನಿಗದಿಯಾಗಿದ್ದು ಭಕ್ತರು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ಬಾಲರಾಮನ ದರ್ಶನ ಪಡೆಯಬಹುದು. ಜೊತೆಗೆ ಅಕ್ಕಪಕ್ಕದಲ್ಲಿರುವ ಹನುಮಾನ್‌ಗಡಿ, ಸರಯೂ ನದಿ (Sarayu River) ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್

    500 ವರ್ಷಗಳ ಕಾತರದ ಕಾಯುವಿಕೆ ಬಳಿಕ ಇಂದು ಭಗವಾನ್ ಶ್ರೀರಾಮ ರಾಮಮಂದಿರಕ್ಕೆ ಬಾಲರಾಮನ ಆಗಮನವಾಗಿದೆ. ಇಂದು ಬೆಳಗ್ಗೆ ನಡೆದ ಶುಭ ಸಮಾರಂಭದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಯಿತು. ಈ ಸಮಾರಂಭದಲ್ಲಿ ಯಜಮಾನನಾಗಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ರಾಜಕಾರಣಿಗಳು, ಚಿತ್ರರಂಗ, ಕ್ರೀಡಾಕೂಟ, ಸಾಧು ಸಂತರು, ಸ್ವಾಮೀಜಿಗಳು ಹಾಗೂ ಇನ್ನೂ ಕೆಲವು ವಿವಿಐಪಿ ಗಣ್ಯರಿಗೆ ರಾಮಲಲ್ಲಾ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ದೇಶ ಗುಲಾಮಗಿರಿಯಿಂದ ಮುಕ್ತವಾಗಿದೆ, ಸಾವಿರಾರು ವರ್ಷಗಳ ನಂತರವೂ ಈ ಕ್ಷಣ ನೆನಪಿಸಿಕೊಳ್ತಾರೆ: ಮೋದಿ