Tag: Ram Kadam

  • ಸ್ಟಾರ್ ನಟಿ ತುನಿಷಾ ಸಾವು: ಬಿಜೆಪಿ ಶಾಸಕನಿಂದ ಲವ್ ಜಿಹಾದ್ ಅನುಮಾನ

    ಸ್ಟಾರ್ ನಟಿ ತುನಿಷಾ ಸಾವು: ಬಿಜೆಪಿ ಶಾಸಕನಿಂದ ಲವ್ ಜಿಹಾದ್ ಅನುಮಾನ

    ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಷಾ ಶರ್ಮಾ (Tunisha Sharma) ಎರಡು ದಿನಗಳ ಹಿಂದೆಯಷ್ಟೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ (Shijan) ಕಾರಣ ಎಂದು ಆರೋಪಿಸಲಾಗಿತ್ತು. ಸಿಕ್ಕಿರುವ ಡೆತ್ ನೋಟ್ ನಲ್ಲಿ ಶಿಜಾನ್ ಹೆಸರನ್ನು ಆಕೆ ಉಲ್ಲೇಖಿಸಿದ್ದರು ಎಂದು ಹೇಳಲಾಗುತ್ತಿದೆ. ಈಗಾಗಲೇ ಶಿಜಾನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಈ ಆತ್ಮಹತ್ಯೆ ಪ್ರಕರಣಕ್ಕೆ ಲವ್ ಜಿಹಾದ್ ಕಳಂಕ ಅಂಟಿಕೊಂಡಿದೆ.

    ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ (Ram Kadam)  ಈ ಕುರಿತು ಮಾತನಾಡಿದ್ದು, ಮೃತ ತುನಿಷಾ ಮತ್ತು ಶಿಜಾನ್ ನಡುವೆ ಪ್ರೇಮವಿತ್ತು. ಪರಸ್ಪರ ಗಲಾಟೆ ಮಾಡಿಕೊಂಡು ಅವರು ದೂರವಾಗಿದ್ದರು. ಆ ನೋವಿನಲ್ಲೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಲವ್ ಜಿಹಾದ್ (Love Jihad) ಅನಿಸುತ್ತಿದೆ. ಕೂಡಲೇ ಈ ದಿಕ್ಕಿನಲ್ಲಿ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

    ಪ್ರಕರಣದ ಕುರಿತಂತೆ ತನಿಖೆ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳು ಕೂಡ ಈಗಲೇ ಇದೊಂದು ಆತ್ಮಹತ್ಯೆ ಎಂದು ಪರಿಗಣಿಸಲಾಗಲ್ಲ. ಎಲ್ಲ ಆಯಾಮದಿಂದಲೂ ಈ ಪ್ರಕರಣವನ್ನು ತನಿಖೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಶೂಟಿಂಗ್ ಬ್ರೇಕ್ ಟೈಮ್‍ ನಲ್ಲಿ ವಿಶ್ರಾಂತಿಗೆಂದು ರೂಮಿಗೆ ಹೋಗಿದ್ದ ತುನಿಷಾ ಬಾತ್ ರೂಮ್ ನಲ್ಲೇ ಶವವಾಗಿ ಪತ್ತೆಯಾಗಿದ್ದರಿಂದ ನಾನಾ ಕೋನಗಳಲ್ಲಿ ಈ ಪ್ರಕರಣವನ್ನು ತನಿಖೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಲಿ ಬಾಬಾ ದಸ್ತಾನ್ ಇ –ಕಾಬೂಲ್’ ಶೋನಲ್ಲಿ ತುನಿಷಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಶೋ ಶೂಟಿಂಗ್ ಗಾಗಿ ಹೋದವರು ಶವವಾಗಿ ಮನೆಗೆ ಬಂದಿದ್ದಾರೆ. ಕೇವಲ 15 ದಿನಗಳ ಹಿಂದೆಯಷ್ಟೇ ಅವರಿಗೆ ಲವ್ ಬ್ರೇಕ್ ಅಪ್ ಆಗಿತ್ತು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹುಡ್ಗಿ ಪ್ರೀತಿಯನ್ನ ಒಪ್ಪಿಲ್ಲಂದ್ರೆ, ಆಕೆಯ ಕಿಡ್ನಾಪ್‍ಗೆ ಸಹಾಯ ಮಾಡ್ತೀನಿ: ಬಿಜೆಪಿ ಶಾಸಕ

    ಹುಡ್ಗಿ ಪ್ರೀತಿಯನ್ನ ಒಪ್ಪಿಲ್ಲಂದ್ರೆ, ಆಕೆಯ ಕಿಡ್ನಾಪ್‍ಗೆ ಸಹಾಯ ಮಾಡ್ತೀನಿ: ಬಿಜೆಪಿ ಶಾಸಕ

    ಮುಂಬೈ: ಬಿಜೆಪಿ ಶಾಸಕ ರಾಮನಾಥ್ ಕದಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಡುಗಿಯರು ನಿಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಅಂದ್ರೆ ನನಗೆ ಹೇಳಿ, ಆಕೆಯನ್ನು ಕಿಡ್ನಾಪ್ ನಾನು ಸಹಾಯ ಮಾಡ್ತೀನಿ ಎಂದು ಯುವಕರಿಗೆ ಭರವಸೆ ನೀಡಿದ್ದಾರೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಹೇಳ್ತಿದ್ದರೆ, ಇತ್ತ ಅವರದ್ದೇ ಪಕ್ಷದ ನಾಯಕರ ಈ ರೀತಿಯ ಹೇಳಿಕೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಶ್ಚಿಮ ಗೊಠಕ್ ಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಮ್ ಕದಮ್ ನೀಡಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ‘ದಹೀ ಹಂಡಿ’ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದ್ದರು. ಜನತೆಯನ್ನು ಕುರಿತು ಮಾತನಾಡುವಾಗ ಸ್ಥಳದಲ್ಲಿದ್ದ ಯುವಕನೋರ್ವ, ನಾನು ಒಬ್ಬ ಹುಡುಗಿಗೆ ಪ್ರಪೋಸ್ ಮಾಡಿದ್ದೀನಿ. ಆದ್ರೆ ಆಕೆ ಒಪ್ಪುತ್ತಿಲ್ಲ. ಈ ವಿವಾಚಾರದಲ್ಲಿ ನನಗೆ ನಿಮ್ಮ ಸಹಾಯ ಬೇಕಿದೆ ಅಂತಾ ಮನವಿ ಮಾಡಿಕೊಂಡಿದ್ದಾನೆ.

    ಯುವಕನ ಮನವಿಗೆ ಪ್ರತಿಕ್ರಿಯಿಸಿದ ರಾಮ್ ಕದಮ್, ನಾನು ನಿನಗೆ ನೂರಕ್ಕೆ ನೂರರಷ್ಟು ಸಹಾಯ ಮಾಡ್ತೀನಿ. ಮೊದಲು ನನ್ನೊಂದಿಗೆ ನಿನ್ನ ಪೋಷಕರನ್ನು ಭೇಟಿ ಮಾಡಿಸು, ಅಲ್ಲಿ ಅವರು ಒಪ್ಪಿಕೊಂಡರೆ ಮುಂದೆ ಏನು ಮಾಡಬೇಕೆಂದು ನಿರ್ಣಯಿಸಬಹುದು ಅಂತಾ ಹೇಳಿದ್ದಾರೆ. ಇದೇ ಗುಂಪಿನಲ್ಲಿ ಮತ್ತೊಬ್ಬ ಯುವಕ, ಹಾಗಾದ್ರೆ ನಾವು ಪ್ರೀತಿಸಿದ ಹುಡುಗಿ ಜೊತೆ ನಮ್ಮ ಮದುವೆ ಮಾಡಿಸ್ತೀರಾ ಎಂದು ಪ್ರಶ್ನಿಸಿದ್ದಾನೆ. ಕೂಡಲೇ ಶಾಸಕರು, ನೀವು ಆಕೆಯನ್ನು ಅಪಹರಿಸಲು ನಿಮಗೆ ಸಹಾಯ ಮಾಡ್ತೀನಿ. ಬೇಕಾದ್ರೆ ಎಲ್ಲ ಯುವಕರು ನನ್ನ ಮೊಬೈಲ್ ನಂಬರ್ ತೆಗೆದುಕೊಳ್ಳಿ. ಯಾವುದೇ ಸಮಯದಲ್ಲಿ ನನಗೆ ಕರೆ ಮಾಡಿ ಸಹಾಯ ಕೇಳಬಹುದು ಎಂದು ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ

    ಹೇಳಿಕೆಗೆ ಸ್ಪಷ್ಟನೆ:
    ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಮ್ ಕದಮ್, ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲರೂ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ಯುವಕರನ್ನು ಕುರಿತು ಮಾತನಾಡಿದ್ದೇನೆ. ಆದ್ರೆ ವೈರಲ್ ಆಗಿರುವ ವಿಡಿಯೋದಲ್ಲಿ ನಾನು ಮಾತನಾಡಿದ ಹಿಂದಿನ ಹಾಗು ಮುಂದಿನ ದೃಶ್ಯಗಳನ್ನು ಕಟ್ ಮಾಡಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv