Tag: Ram Gopal Verma

  • ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವಿಟ್ ವಾಪಸ್ಸು ಅವರ ಬುಡಕ್ಕೆ ಬಂದಿದೆ. ನಿರ್ದೇಶಕ ರಾಜಮೌಳಿ ಅವರನ್ನು ಕಾಲೆಳೆಯಲು ಹೋಗಿ, ಅಭಿಮಾನಿಗಳಿಂದ ತಾವೇ ಕಾಲೆಳಿಸಿಕೊಂಡಿದ್ದಾರೆ ವರ್ಮಾ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ. ಆ ಹುಡುಗಿಯರು ಯಾರು ಎನ್ನುವುದನ್ನೂ ಬಹಿರಂಗ ಪಡಿಸಿದ್ದಾರೆ.  ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಸದ್ಯ ರಾಮ್ ಗೋಪಾಲ್ ವರ್ಮಾ ‘ಖತ್ರಾ ಡೇಂಜರಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಅದು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವ ಮೊದಲ ಲೆಸ್ಬಿಯನ್ ಚಿತ್ರ. ನೈನಾ ಮತ್ತು ಅಪ್ಸರಾ ಲೆಸ್ಬಿಯನ್ ಗಳಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರನ್ನೇ ವರ್ಮಾ ಡೇಂಜರಸ್ ಹುಡುಗಿಯರು ಎಂದು ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ವರ್ಮಾ ಬೆಂಗಳೂರಿಗೆ ಕೂಡ ಬಂದಿದ್ದರು.

    ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಕುರಿತಾಗಿ ಸಾಕಷ್ಟು ಪೋಸ್ಟ್ ಮಾಡಿದ್ದಾರೆ ವರ್ಮಾ. ಅದಕ್ಕೂ ಮುನ್ನ ಈ ಕಲಾವಿದೆಯರ ಜತೆ ಪಬ್, ಹೊಟೇಲ್ ಅಂತ ಸುತ್ತಾಡಿ ಸುದ್ದಿ ಆಗಿದ್ದರು. ಅಲ್ಲದೇ, ಈ ಹುಡುಗಿಯರ ಹಾಟ್ ಹಾಟ್ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಪಡ್ಡೆಗಳ ನಿದ್ದೆ ಗೆಡಿಸಿದ್ದರು.

    ರಾಮ್ ಗೋಪಾಲ್ ವರ್ಮಾ ಅವರ ಟ್ವಿಟ್ ಅನ್ನು ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ತಮ್ಮ ಹುಡುಗಿಯರಿಗೂ ಟ್ಯಾಗ್ ಮಾಡಿದ್ದಾರೆ. ಯಾರೂ, ಅಷ್ಟಾಗಿ ವರ್ಮಾ ಅವರ ಟ್ವಿಟ್ ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ರಾಜಮೌಳಿ ಮತ್ತು ಇತರ ಕಲಾವಿದರ ಅಭಿಮಾನಿಗಳು ಮಾತ್ರ ವರ್ಮಾ ಮೇಲೆ ರೊಚ್ಚಿಗೆದ್ದಿದ್ದಾರೆ. ‘ನೀನು 100 ರೂಪಾಯಿ ಟಿಕೆಟ್ ನ ಸಿನಿಮಾ ಮಾಡುವವನು. ದೊಡ್ಡವರಿಗೆ ಹೋಲಿಸಿಕೊಳ್ಳಬೇಡ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

  • ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾದಲ್ಲಿ ಉಪೇಂದ್ರ?

    ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾದಲ್ಲಿ ಉಪೇಂದ್ರ?

    ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಹಿಂದೆ ಮುತ್ತಪ್ಪ ರೈ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಹೊರಟಿದ್ದರು. ಅದ್ಧೂರಿಯಾಗಿ ಮುಹೂರ್ತ ಕೂಡ ಆಗಿತ್ತು. ಆ ಸಿನಿಮಾ ‘ರೈ’ ಎಂದು ಹೆಸರಿಟ್ಟಿದ್ದರು. ತಮ್ಮ ಬಗೆಗಿನ ಸಿನಿಮಾದ ಬಗ್ಗೆ ಸ್ವತಃ ಮುತ್ತಪ್ಪ ರೈ ಕೂಡ ಕುತೂಹಲದಿಂದ ಎದುರು ನೋಡುತ್ತಿದ್ದರು. ಆದರೆ, ಆ ಸಿನಿಮಾ ಆಗಲೇ ಇಲ್ಲ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    ಬೆಂಗಳೂರಿನಲ್ಲೇ ‘ರೇ’ ಸಿನಿಮಾದ ಮುಹೂರ್ತ ನಡೆದಿತ್ತು. ಮುತ್ತಪ್ಪ ರೈ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕಾಣಿಸಿಕೊಳ್ಳುತ್ತಿದ್ದರು. ಮುತ್ತಪ್ಪ ರೈ ಜತೆಗಿನ ವಿವೇಕ್ ಓಬೆರಾಯ್ ಫೋಟೋ ಭಾರೀ ವೈರಲ್ ಕೂಡ ಆಗಿತ್ತು. ಆದರೆ, ಮುಹೂರ್ತದ ನಂತರ ಸಿನಿಮಾ ಏನಾಯಿತು ಎಂದು ಯಾರಿಗೂ ಗೊತ್ತಾಗಲಿಲ್ಲ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೆ ಅದೇ ಕಥೆಯನ್ನೇ ಬೇರೆ ಟೈಟಲ್ ನೊಂದಿಗೆ ತರಲಿದ್ದಾರೆ ಎನ್ನಲಾಗುತ್ತಿದೆ. ನೆನ್ನೆಯಷ್ಟೇ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೊಸ ಸಿನಿಮಾಗೆ ‘ಆರ್’ ಎಂದು ಹೆಸರಿಟ್ಟಿದ್ದಾರೆ. ಅದೊಂದು ಬೆಂಗಳೂರು ಭೂಗತ ಜಗತ್ತಿನ ಕಥೆ ಎಂದು ಹೇಳುವ ಮೂಲಕ ಮುತ್ತಪ್ಪ ರೈ ಬಗೆಗಿನ ಕಥೆಯೇ ಇದಾಗಿದೆ ಎಂದು ಕೆಲವು ಸೂಚನೆಗಳನ್ನೂ ಕೊಟ್ಟಿದ್ದಾರೆ. ಆದರೆ, ಅದು ಯಾರ ಕಥೆ ಎನ್ನುವುದನ್ನು ವರ್ಮಾ ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ, ಇದು ರೈ ಸಿನಿಮಾದ ಕಥೆಯೇ ಇಲ್ಲಿ ಬಳಕೆ ಆಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ರಾಮ್ ಗೋಪಾಲ್ ವರ್ಮಾ ಅವರು ಶೇರ್ ಮಾಡಿರುವ ‘ಆರ್’ ಸಿನಿಮಾದ ಒಂದೆರಡು ಗ್ಲಿಂಪ್‌ಗಳನ್ನು ಹಾಕಿದ್ದು, ಅದರಲ್ಲಿ ಉಪ್ಪಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೀಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವೀಡಿಯೋದಲ್ಲಿ, ಉಪೇಂದ್ರ ಚಾಕುವಿನಿಂದ ತನ್ನ ಬೆರಳುಗಳನ್ನು ಹುಜ್ಜುವುದು, ನಂತರ ಅದನ್ನು ಚುಂಬಿಸುವುದನ್ನು ಕಾಣಬಹುದು. ಈ ಗ್ಲಿಂಪ್‍ಗಳು ವಿಶಿಷ್ಟ ಶೈಲಿಯಲ್ಲಿವೆ.

  • ಸಲಿಂಗಿಗಳ ಸರಸಕ್ಕೆ ಕ್ಯಾಮೆರಾ ಇಟ್ಟ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ: ಭಾರತದ ಮೊದಲ ಲೆಸ್ಬಿಯನ್ ಸಿನಿಮಾ

    ಸಲಿಂಗಿಗಳ ಸರಸಕ್ಕೆ ಕ್ಯಾಮೆರಾ ಇಟ್ಟ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ: ಭಾರತದ ಮೊದಲ ಲೆಸ್ಬಿಯನ್ ಸಿನಿಮಾ

    ಮ್ಮದೇ ಓಟಿಟಿಗಾಗಿ ಪ್ರಾಯಸ್ಥರು ನೋಡುವಂತಹ ಸಿನಿಮಾಗಳನ್ನು ಮಾಡುತ್ತಿದ್ದಾರೆ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಈ ಹಿಂದೆ ಅವರು ಜಿ.ಎಸ್.ಟಿ, ನೆಕೆಡ್, ಮೇರಿ ಬೇಟಿ ಸನ್ನಿ ಲಿಯೋನ್ ಬನ್ ಚಾತಿ ಹೈ ಸೇರಿದಂತೆ ಹಲವು ವಯಸ್ಕರ ಚಿತ್ರಗಳನ್ನು ಮಾಡಿರುವ ವರ್ಮಾ, ಇದೀಗ ಭಾರತೀಯ ಸಿನಿಮಾ ರಂಗದ ಮೊದಲ ಲೆಸ್ಬಿಯನ್ ಸಿನಿಮಾ ಮಾಡಿದ್ದಾರೆ. ಅದಕ್ಕೆ ಅವರು ‘ಡೇಂಜರ್’ ಎಂದು ಹೆಸರಿಟ್ಟಿದ್ದಾರೆ. ಆ ಸಿನಿಮಾದ 2 ಟ್ರೇಲರ್ ಅನ್ನು ಇಂದು ಸಂಜೆ 7 ಗಂಟೆಗೆ ಮಾಡುವುದಾಗಿ ತಿಳಿಸಿದ್ದಾರೆ.

    ರಾಮ್ ಗೋಪಾಲ್ ವರ್ಮಾ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಬೇಡದೇ ಇರುವ ಕಾರಣಕ್ಕಾಗಿ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ತಮ್ಮ ನಿರ್ದೇಶನದಲ್ಲಿ ಬರುತ್ತಿರುವ ಇತ್ತೀಚಿನ ಚಿತ್ರಗಳ ನಾಯಕಿಯರ ಜತೆ ಪಬ್ ನಲ್ಲಿ ಮೋಜು ಮಸ್ತಿ ಮಾಡುವುದು, ಮಾಡೆಲ್ ಗಳ ಜತೆ ನಿತ್ಯವೂ ಪಾರ್ಟಿಯಲ್ಲಿ ತೊಡಗುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಅವುಗಳನ್ನು ಸಾಕ್ಷಿ ಸಮೇತ ಎನ್ನುವಂತೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಹಾಗೆಯೇ ವಿವಾದವನ್ನೂ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ರಾಮ್ ಗೋಪಾಲ್ ವರ್ಮಾ ಅವರ ಓಟಿಟಿಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚಾಗಿ ವಯಸ್ಕರರೇ ನೋಡುವಂತಹ ಚಿತ್ರಗಳನ್ನು ಇವರು ಮಾಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಬ್ ಸ್ಕ್ರೈಬ್ ಆಗಿದ್ದಾರೆ. ಹೀಗಾಗಿ ಎರಡು ತಿಂಗಳಿಗೆ ಒಂದರಂತೆ ಇಂತಹ ಕಂಟೆಂಟ್ ಅನ್ನು ಅಲ್ಲಿ ತುಂಬುತ್ತಲೇ ಇರುತ್ತಾರೆ ರಾಮ್ ಗೋಪಾಲ್ ವರ್ಮಾ.

    ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು, ಸಲಿಂಗಿಗಳದ್ದು. ಇಬ್ಬರು ಸಲಿಂಗಿ ಹುಡುಗಿಯರ ಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರಂತೆ ರಾಮ್ ಗೋಪಾಲ್ ವರ್ಮಾ. ಆ ಸಿನಿಮಾದ ಒಂದಷ್ಟು ಝಲಕ್ ತೋರಿಸುವುದಕ್ಕಾಗಿಯೇ ಅವರು 2ನೇ ಟ್ರೇಲರ್ ರಿಲೀಸ್ ಮಾಡುತ್ತಿದ್ದಾರೆ. ಹಾಗಂತ ಟ್ವಿಟರ್ ನಲ್ಲಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಇದೊಂದು ಕ್ರೈಂ ಮತ್ತು ಆಕ್ಷನ್ ಸಿನಿಮಾವಾಗಿದ್ದು, ಡೇಂಜರಸ್ ಹೆಸರಿನಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಮಾಡಿರುವ ಪೋಸ್ಟರ್ ಗಳು ಇಬ್ಬರು ಹುಡುಗಿಯರ ನಡುವಿನ ಸಲಿಂಗಕಾಮವನ್ನು ಭಾವೋದ್ರಿಕ್ತಗೊಳಿಸುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.

  • ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

    ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯನ್ನು ಹಿತವಾಗಿ ಹೊಗಳಿದ್ದಾರೆ. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಅಪ್ಸರಾ ರಾಣಿ ಕೆಲವೇ ಗಂಟೆಗಳ ಹಿಂದೆ ಒಂದು ಹಾಟ್ ಹಾಟ್ ಆಗಿರುವ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಪಡ್ಡೆಗಳ ನಿದ್ದೆಗೆಡಿಸುವಂತಹ ಆ ವಿಡಿಯೋಗೆ ರಾಮ್ ಗೋಪಾಲ್ ವರ್ಮಾ ಅಷ್ಟೇ ಸುಂದರವಾಗಿ ಪದಗಳನ್ನು ಪೋಣಿಸಿದ್ದಾರೆ. ‘ಡೇಂಜರೆಸ್ ಹುಡುಗಿಯ ನೋಟವು, ಅಪಾಯಕಾರಿ ಅಲ್ಲವೆಂದು ಹೇಳುತ್ತದೆ’ ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಅಪ್ಸರಾ ರಾಣಿಯು ಬೆಡ್ ಮೇಲೆ ಅರೆಬೆತ್ತಲೆಯಾಗಿ ಮಲಗಿಕೊಂಡು ಮಾದಕ ನೋಟದೊಂದಿಗೆ ಗುಲಾಬಿಯ ಒಂದೊಂದೆ ಪಕಳೆಗಳನ್ನು ಎಸೆಯುತ್ತಾರೆ. ಆ ಮಾದಕ ನಗು ಮತ್ತು ನೋಟಕ್ಕೆ ಆರ್.ಜಿ.ವಿ. ಫಿದಾ ಆಗಿದ್ದಾರೆ. ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಅಪ್ಸರಾ ರಾಣಿ ಹಾಕಿರುವ ವಿಡಿಯೋ ಜತೆ ಅನ್ನಿ ಬ್ರಾಂಟೆ ಅವರ “ಮುಳ್ಳನ್ನು ಹಿಡಿಯಲು ಧೈರ್ಯವಿಲ್ಲದವರು ಹೂವಿಗೆ ಹಂಬಲಿಸಬಾರು” ಎಂಬ ಸಾಲುಗಳನ್ನು ಹಾಕಿದ್ದಾರೆ. ಬಹುಶಃ ಈ ಲೈನ್ ಗಳಿಗೂ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ಕೊಟ್ಟಂತಿದೆ ಅವರು ಸಾಲುಗಳು.

  • ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ

    ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ

    ಯಾವುದೇ ವಿಶೇಷ ದಿನವಿದ್ದರೂ, ಅದಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಪ್ರತಿಕ್ರಯಿಸುತ್ತಾರೆ ಹೆಸರಾಂತ ನಿರ್ದೇಶಕ, ಕಾಂಟ್ರವರ್ಸಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅವರೊಂದು ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ. ಆ ವಿಡಿಯೋದ ವಿಶೇಷತೆ ಅಂದರೆ, ತಮ್ಮದೇ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಡ್ಕಿ’ ಸಿನಿಮಾದ ನಾಯಕಿಯ ವರ್ಕೌಟ್ ವಿಡಿಯೋ ಅನ್ನುವುದು ವಿಶೇಷ. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ಆ ವಿಡಿಯೋದಲ್ಲಿ ಅಂಥದ್ದೇನು ವಿಶೇಷತೆ ಇದೆ ಅಂದರೆ, ಭಾರತೀಯ ಸಿನಿಮಾ ರಂಗದ ಲೇಡಿ ಬ್ರೂಸ್ಲಿ ಎಂದೇ ಖ್ಯಾತರಾಗಿರುವ ಪೂಜಾ ತಾವು ದೇಹವನ್ನು ಹೇಗೆಲ್ಲ ದಂಡಿಸುತ್ತಾರೆ ಎನ್ನುವ ಝಲಕ್ ಇದೆಯಂತೆ. ಇದನ್ನೂ ಓದಿ : ಶಿವಣ್ಣ ನಟನೆಯ ‘ವೇದ’ ಚಿತ್ರದಲ್ಲಿ ರಾಘು ಶಿವಮೊಗ್ಗ : ನಟನೆಯಲ್ಲೂ ಬ್ಯುಸಿಯಾದ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ

    ಲಡ್ಕಿ ಸಿನಿಮಾದಲ್ಲಿ ಪೂಜಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮಹಿಳೆಯರ ರಕ್ಷಣೆ ಕುರಿತಾಗಿಯೂ ಬೆಳಕು ಚೆಲ್ಲುವಂತಹ ಚಿತ್ರವಾಗಿದೆ ಎಂದಿದ್ದಾರೆ ಆರ್.ಜಿ.ವಿ. ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

    ಪೂಜಾ ಈ ಸಿನಿಮಾದಲ್ಲಿ ಸಾಕಷ್ಟು ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರಂತೆ. ಯಾವುದೇ ಡ್ಯೂಪ್ ಬಳಸದೇ ಆ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಹಾಗಾಗಿ ಸ್ಟಂಟ್ ಗಳನ್ನು ಅವರು ಮೊದಲು ಅಭ್ಯಾಸ ಕೂಡ ಮಾಡಿದ್ದಾರಂತೆ. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ

    ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಪೂಜಾ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಂಜೆ 5 ಗಂಟೆಗೆ ಬಿಡುಗಡೆ ಆಗಲಿದೆ. ಆನಂತರ ವಿಡಿಯೋ ನೋಡಿದ ವರ್ಮಾ ಅಭಿಮಾನಿಗಳು ಯಾವ ರೀತಿಯಲ್ಲಿ ಕಾಮೆಂಟ್ ಕೊಡುತ್ತಾರೋ ಕಾದು ನೋಡಬೇಕು.

  • ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಭಾರತೀಯ ಸಿನಿಮಾ ರಂಗದ ಮೋಸ್ಟ್ ಡೆಡ್ಲಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರನ್ನು ಉಪೇಂದ್ರ ಭೇಟಿ ಮಾಡಿದ್ದಾರೆ. ಈ ಕುರಿತು ಸ್ವತಃ ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಾಡಿ, ಉಪೇಂದ್ರ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತ ರಾಮ್ ಗೋಪಾಲ್ ವರ್ಮಾ ಹಸಿ ಹಸಿ ಕಾಮನೆಗಳ ಚಿತ್ರ ಮಾಡುತ್ತಿದ್ದಾರೆ, ಅತ್ತ ಉಪೇಂದ್ರ ಹೊಸ ಸಿನಿಮಾದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿನ ಭೇಟಿ ಭಾರೀ ಕುತೂಹಲವನ್ನಂತೂ ಮೂಡಿಸಿದೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

     

    ಉಪೇಂದ್ರ ನಿರ್ದೇಶನ ಮಾಡಲಿರುವ ಸಿನಿಮಾ ಬಜೆಟ್ ಗಾತ್ರ ದೊಡ್ಡದು. ಅಲ್ಲದೇ, ದಕ್ಷಿಣದ ತಾರೆಯರು ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ, ಆಡಿಷನ್ ಕೂಡ ನಡೆದಿದೆ. ಅಷ್ಟೊಂದು ಕಲಾವಿದರನ್ನು ಹುಡುಕುವುದು ಕಷ್ಟಸಾಧ್ಯವಾಗಿದ್ದರಿಂದ ಎರಡು ತಿಂಗಳುಗಳ ಕಾಲ ಕಲಾವಿದರ ಹುಡುಕಾಟಕ್ಕೆ ಅವರು ಮೀಸಲಿಟ್ಟಿದ್ದಾರಂತೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಈಗಾಗಲೇ ಸಿನಿಮಾದ ಟೈಟಲ್ ಕೂಡ ಲಾಂಚ್ ಮಾಡಿದ್ದಾರೆ ಉಪೇಂದ್ರ. ಈ ಟೈಟಲ್ ಅನ್ನು ಹೇಗೆ ಕರೆಯಬೇಕು ಎನ್ನುವ ಗೊಂದಲದಲ್ಲಿದ್ದಾರೆ ಅಭಿಮಾನಿಗಳು. ಅದೊಂದು ಧಾರ್ಮಿಕ ಚಿಹ್ನೆಯೂ ಆಗಿರುವುದರಿಂದ ಮತ್ತು ‘ಯು’ ಹಾಗೂ ‘ಐ” ಇಂಗ್ಲಿಷ್ ಅಕ್ಷರಗಳು ಇರುವುದರಿಂದ ನಿಮಗೆ ಇಷ್ಟ ಬಂದಂತೆ ಕರೆದುಕೊಳ್ಳಿ ಎನ್ನುವಂತೆ ಅಭಿಮಾನಿಗಳಿಗೆ ಬಿಟ್ಟಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು

    ‘ನೀನು’ ಮತ್ತು ‘ನಾನು’ ಎನ್ನುವ ಎರಡು ಗೂಢಾರ್ಥದ ಶಬ್ದಗಳೊಂದಿಗೆ ಈವರೆಗೂ ಸಿನಿಮಾ ಮಾಡಿರುವ ಉಪೇಂದ್ರ, ಹೊಸ ಸಿನಿಮಾದಲ್ಲೂ ಅದೇ ಹುಳು ಬಿಟ್ಟಿದ್ದಾರೆ. ಈ ಎರಡೇ ಶಬ್ದಗಳಲ್ಲಿ ಇಡೀ ಸಿನಿಮಾ ಅಡಗಿದೆ ಎನ್ನಲಾಗುತ್ತಿದೆ. ಆದರೆ, ಈವರೆಗೂ ಉಪೇಂದ್ರ ಹೊಸ ಸಿನಿಮಾದ ಕಥೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಈ ಎಲ್ಲದನ್ನು ಗಮನಿಸಿದಾಗ ರಾಮ್ ಗೋಪಾಲ್ ವರ್ಮಾ ಜತೆ ಉಪೇಂದ್ರ ಇನ್ನೇನು ಚರ್ಚೆ ಮಾಡಿರಬಹುದು ಎನ್ನುವ ಕ್ಯೂರಿಯಾಸಿಟಿಯಂತೂ ಅಭಿಮಾನಿಗಳಲ್ಲಿ ಮೂಡಿದೆ. ಯಾವತ್ತಾದರೂ ಒಂದು ದಿನ ರಾಮ್ ಗೋಪಾಲ್ ವರ್ಮಾ ಈ ಗುಟ್ಟನ್ನು ರಟ್ಟು ಮಾಡುವುದಂತೂ ಗ್ಯಾರಂಟಿ.

  • ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು: ರಾಮ್ ಗೋಪಾಲ್ ವರ್ಮಾ

    ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು: ರಾಮ್ ಗೋಪಾಲ್ ವರ್ಮಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಹಾಗೂ ನಾಗಚೈತನ್ಯ ಇಂದು ತಾವು ವಿಚ್ಛೇದನ ಪಡೆದುಕೊಳ್ಳುವುದಾಗಿ ಅಧಿಕೃತವಾಗಿ ತಿಳಿಸಿದ್ದು, ಈ ಬೆನ್ನಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮದೇ ಸ್ಟೈಲಿನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಹೌದು. ಇಂದು ನಟ ಹಾಗೂ ನಟಿ ಡಿವೋರ್ಸ್ ನೀಡುತ್ತಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ರಾಮ್ ಗೋಪಾಲ್ ವರ್ಮಾ ಅವರು, ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ವಿಚ್ಚೇದನವನ್ನು ಸಂಭ್ರಮಿಸಬೇಕು ಅನ್ನೋ ನಿರ್ದೇಶಕರ ಟ್ವೀಟ್ ಗಳು ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:  ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    ಇತ್ತೀಚೆಗೆ ಮದುವೆಗಳನ್ನು ಅಲ್ಲ, ಬದಲಾಗಿ ಡಿವೋರ್ಸ್‍ಗಳನ್ನು ಸಂಭ್ರಮಿಸಬೇಕಾದ ಪರಿಸ್ಥಿತಿ ಬಂದಿದೆ. ಮದುವೆಗಳು ಸಾವಿದ್ದಂತೆ, ಡಿವೋರ್ಸ್ ಪುನರ್ಜನ್ಮ ಇದ್ದಂತೆ. ಮದುವೆಗಳು ನರಕದಲ್ಲಿ ಹಾಗೂ ಡಿವೋರ್ಸ್ ಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೇ ಎಂದು ತಮ್ಮದೇ ಶೈಲಿಯಲ್ಲಿ ನಿರ್ದೇಶಕರು ಬರೆದುಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಆರ್‍ಜಿವಿ ಟ್ವೀಟ್ ಗೆ ಸಾಕಷ್ಟು ಪರ-ವಿರೋಧ ಕಾಮೆಂಟ್ ಗಳು ಹರಿದು ಬಂದಿವೆ.

    4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸ್ಟಾರ್ ಜೋಡಿ ಇಂದು ಅಧಿಕೃತವಾಗಿ ತಮ್ಮ ಡಿವೋರ್ಸ್ ವಿಚಾರ ಬಹಿರಂಗಪಡಿಸುವ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ. ನಮ್ಮ ಖಾಸಗಿ ಬದುಕನ್ನು ಎಲ್ಲರೂ ಗೌರವಿಸಿ. ಇಂತಹ ಸಂದರ್ಭಗಳಲ್ಲಿ ನಮ್ಮ ಜೊತೆ ನಿಲ್ಲಿ ಎಂದು ಅಭಿಮಾನಿಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮನವಿ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

    ಇತ್ತ ತಮ್ಮ ಸೊಸೆ ಹಾಗೂ ಪುತ್ರನ ದಾಂಪತ್ಯದಲ್ಲಿ ಬಿರುಕು ಮೂಡಿದ್ದರ ಕುರಿತು ಬೇಸರ ವ್ಯಕ್ತಪಡಿಸಿರುವ ನಾಗಾರ್ಜುನ್, ಅತ್ಯಂತ ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತೇನೆ. ಸ್ಯಾಮ್ ಮತ್ತು ಚಾಯ್ ನಡುವೆ ನಡೆದದ್ದು ತುಂಬಾ ದುರದೃಷ್ಟಕರವಾಗಿದೆ. ದಂಪತಿ ಮಧ್ಯೆ ಏನಾಗುತ್ತಿದೆ ಎನ್ನುವುದು ತುಂಬಾ ವೈಯಕ್ತಿಕವಾಗಿದೆ. ಇಬ್ಬರು ನನಗೆ ಪ್ರಿಯರು. ನನ್ನ ಕುಟುಂಬವು ಸ್ಯಾಮ್ ಜೊತೆ ಕಳೆದ ಕ್ಷಣಗಳನ್ನು ಗೌರವಿಸುತ್ತದೆ. ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ. ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ಬೇಸರ ಹೊರಹಾಕಿದ್ದಾರೆ.

  • ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ಬುದ್ಧಿವಂತ

    ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ಬುದ್ಧಿವಂತ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಇಂದು 53ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾರವರು ಉಪೇಂದ್ರ ಜೊತೆಗೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.

    ತಮ್ಮ ವಿಭಿನ್ನ ಅಭಿನಯ ಮತ್ತು ನಿರ್ದೇಶನ ಮೂಲಕವೇ ಸ್ಯಾಂಡಲ್‍ವುಡ್‍ನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಎಂದರೆ ಉಪೇಂದ್ರ. ಸಿನಿಮಾಗಳಷ್ಟೇ ಅಲ್ಲದೇ ರಾಜಕೀಯಕ್ಕೂ ಇಳಿದಿರುವ ಉಪೇಂದ್ರರವರು ಸದಾ ವಿಭಿನ್ನವಾಗಿ ಯೋಚಿಸುತ್ತಾರೆ. ಶುಕ್ರವಾರವಷ್ಟೇ ತಮ್ಮ ಮುಂದಿನ ಸಿನಿಮಾದ ಟೈಟಲ್ ಲಾಂಚ್ ಮಾಡಿ. ಜನ ಸಾಮಾನ್ಯ ಅಲ್ಲ, ಜನ ಅಸಾಮಾನ್ಯ ಎಂಬ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದ ಉಪೇಂದ್ರವರು, ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: ಪ್ರವಾಸಿ ವಾಹನ ಪಲ್ಟಿ – ಪ್ರವಾಸಿಗರು ಪ್ರಾಣಾಪಾಯದಿಂದ ಪಾರು

    ಹೌದು ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಗೂ ಉಪೇಂದ್ರ ಕಾಂಬೀನೇಷನ್‍ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಲಿದೆ. ಇನ್ನೂ ಈ ಕುರಿತಂತೆ ಸ್ವತಃ ರಾಮ್ ಗೋಪಾಲ್ ವರ್ಮಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಹಾಗೂ ಉಪೇಂದ್ರರವರು ಶೀಘ್ರವೇ ಆ್ಯಕ್ಷನ್ ಸಿನಿಮಾವನ್ನು ಮಾಡಲಿದ್ದೇವೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಹುಟ್ಟು ಹಬ್ಬದ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ  ತಿಳಿಸಿದ್ದಾರೆ. ಇದನ್ನೂ ಓದಿ: ಜನ ಅಸಾಮಾನ್ಯ , ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಉಪೇಂದ್ರ

    ಈ ಮುನ್ನ 2016ರಲ್ಲಿ ಕನ್ನಡದ ಕಿಲ್ಲಿಂಗ್ ವೀರಪ್ಪನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ರಾಮ್‍ಗೋಪಾಲ್ ವರ್ಮಾರವರು ಇದೀಗ ಉಪೇಂದ್ರ ಸಿನಿಮಾವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಇಲ್ಲಿಯವರೆಗೂ ಹಿಂದಿ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ.

  • ದೀಪದ ಬದಲು ಸಿಗರೇಟ್ ಹಚ್ಚಿ ಟೀಕೆಗೆ ಗುರಿಯಾದ ರಾಮ್ ಗೋಪಾಲ್ ವರ್ಮಾ

    ದೀಪದ ಬದಲು ಸಿಗರೇಟ್ ಹಚ್ಚಿ ಟೀಕೆಗೆ ಗುರಿಯಾದ ರಾಮ್ ಗೋಪಾಲ್ ವರ್ಮಾ

    ಬೆಂಗಳೂರು: ಕೊರೊನಾ ಮಹಾಮಾರಿ ಪ್ರಪಂಚವನ್ನೇ ವ್ಯಾಪಿಸಿದ್ದು, ಭಾರತದಲ್ಲೂ ದಿನೇ ದಿನೇ ಆತಂಕ ಹೆಚ್ಚು ಮಾಡುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ದೀಪ ಬೆಳಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದಕ್ಕೆ ಹಲವು ನಟ, ನಟಿಯರು ಸಾಥ್ ನೀಡಿ, ದೀಪ ಬೆಳಗಿ ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ನೀಡಿದ್ದಾರೆ. ಆದರೆ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೀಪ ಬೆಳಗದೇ ಒಂದು ಫೋಟೋ ಪ್ರಕಟಿಸಿದ್ದು ಮೋದಿ ಅಭಿಮಾನಿಗಳ ಕಣ್ಣು ಕೆಂಪು ಮಾಡಿದೆ.

    ಯಾವಾಗಲೂ ವಿವಾದಾತ್ಮಕ ಪೋಸ್ಟ್‍ಗಳ ಮೂಲಕವೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಗಂಭೀರ ವಿಚಾರದಲ್ಲಿ ಉದ್ಧಟತನ ತೋರಿದ್ದಾರೆ. ಹಲವು ನಟ, ನಟಿಯರು, ನಿರ್ದೇಶಕರು, ಸಂಗೀತಗಾರರು, ಧನಿಕರು, ಬಡವರ ಕಷ್ಟ ನೋಡಲಾಗದೇ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಹಲವರು ಹಣದ ಸಹಾಯ ಮಾಡಿದರೆ, ಇನ್ನೂ ಕೆಲವರು ಆಹಾರ, ಅಗತ್ಯ ವಸ್ತುಗಳ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

    ಆರೋಗ್ಯ ತುರ್ತುಪರಿಸ್ಥಿತಿಯ ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿರುವುದು ತುಂಬಾ ಮುಖ್ಯವಾಗಿದೆ. ಸರ್ಕಾರದ ಆದೇಶ ಪಾಲಿಸುವುದು, ಬೇಕಾಬಿಟ್ಟಿಯಾಗಿ ನಡೆದುಕೊಳ್ಳದಿರುವುದು. ಸಾಧ್ಯವಾದರೆ ನೆರೆ ಹೊರೆಯವರಿಗೆ ಸಹಾಯ ಮಾಡುವುದು ಅಗತ್ಯವಾಗಿದೆ. ಬಹುತೇಕರು ಇದನ್ನು ಮಾಡುತ್ತಿದ್ದಾರೆ ಸಹ. ಆದರೆ ಬೆರಳೆಣಿಕೆಯಷ್ಟು ಜನ ಇಂತಹ ಕಷ್ಟದ ಸಂದರ್ಭದಲ್ಲಿಯೂ ಉಡಾಫೆಯಾಗಿ ನಡೆದುಕೊಳ್ಳುತ್ತಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ದೀಪದ ಅಭಿಯಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ದೀಪ ಹಚ್ಚುವ ಬದಲು ಸಿಗರೇಟ್ ಹಚ್ಚಿದ್ದಾರೆ. ಸಿಗರೇಟ್ ಸೇದುತ್ತಿರುವ ಫೋಟೋ ಟ್ವೀಟ್ ಮಾಡಿರುವ ಅವರು, 9 ಪಿಎಂ ಡಿಸ್‍ಕ್ಲೇಮರ್ ಎಂದು ಹಾಕಿ, ಸಿಗರೇಟ್ ಸೇದುವ ಕುರಿತು ಸರ್ಕಾರದ ಎಚ್ಚರಿಕೆ ಪಾಲಿಸದಿರುವುದು, ಕೊರೊನಾ ಎಚ್ಚರಿಕೆಯನ್ನು ಪಾಲಿಸದಿರುವುದಕ್ಕಿಂತ ಅಪಾಯಕಾರಿ ಎಂದು ಬರೆದುಕೊಂಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದು, ದೀಪ ಹಚ್ಚದಿದ್ದರೂ ಪರವಾಗಿಲ್ಲ ಸುಮ್ಮನಾದರೂ ಇರಿ. ದೊಡ್ಡ ನಿರ್ದೇಶಕನಾಗಿ ಈ ರೀತಿ ಕೀಳು ಮಟ್ಟದ ಪೋಸ್ಟ್ ಪ್ರಕಟಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನಿಮ್ಮಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಹೀಗೆ ಹಲವರು ಆರ್ ಜಿವಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಹಿಂದೆ ಏಪ್ರಿಲ್ ಫೂಲ್ ಮಾಡುವ ಧಾವಂತದಲ್ಲಿ ನನಗೆ ಕೊರೊನಾ ಬಂದಿದೆ, ವೈದ್ಯರು ದೃಢಪಡಿಸಿದ್ದಾರೆ ಎಂದು ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗಲೂ ಜನ ನಿಮಗೆ ನಿಜವಾಗಿಯೂ ಕೊರೊನಾ ಬರುತ್ತದೆ ಎಂದೆಲ್ಲ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.

  • ರಾಮ್ ಗೋಪಾಲ್ ವರ್ಮಾರಿಂದ ನಟಿಯ ಬಿಕಿನಿ ಫೋಟೋ ಶೇರ್

    ರಾಮ್ ಗೋಪಾಲ್ ವರ್ಮಾರಿಂದ ನಟಿಯ ಬಿಕಿನಿ ಫೋಟೋ ಶೇರ್

    ಹೈದರಾಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ನೀಲಿತಾರೆಯ ಅರೆನಗ್ನ ಫೋಟೋವನ್ನ ಶೇರ್ ಮಾಡುವ ಮೂಲಕ ಆ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    ವರ್ಮಾ ಅವರು ಟ್ವಿಟ್ಟರ್‌ನಲ್ಲಿ ಅಮೆರಿಕನ್ ನೀಲಿ ತಾರೆ ಮಿಯಾ ಮಲ್ಕೋವಾ ಅವರ ಬಿಕಿನಿ ಫೋಟೋವನ್ನ ಹಂಚಿಕೊಂಡಿದ್ದಾರೆ. ಮೊದಲಿಗೆ ನಟಿ ಬೀಚಿನಲ್ಲಿ ಬಿಕಿನಿ ಧರಿಸಿ ಮಲಗಿರುವ ಫೋಟೋ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಜೊತೆಗೆ ಈ ಫೋಟೋಗೆ ಕ್ಯಾಪ್ಶನ್ ಕೊಡಿ ಎಂದು ಬರೆದಿದ್ದರು.

    ವರ್ಮಾ ಅವರು ಆ ಟ್ವಿಟನ್ನು ಟ್ಯಾಗ್ ಮಾಡಿ “ಆಯತಾಕಾರದ ಪ್ರೀತಿಯ ತ್ರಿಕೋನ ವಕ್ರರೇಖೆ” ಎಂದು ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾಗೆ ನಟಿ ಮಿಯಾ ಮಲ್ಕೋವಾ ಪರಿಚಯವಿದೆ. ಈ ಹಿಂದೆ ‘ಗಾಡ್ ಸೆಕ್ಸ್ ಮತ್ತು ಟ್ರೂತ್’ ಸಾಕ್ಷ್ಯಚಿತ್ರ ಮಾಡಿದ್ದರು.

    ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರು ‘ಕಮ್ಮ ರಾಜ್ಯಂಲೋ ಕಡಪ ರೆಡ್ಡಲು’ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ಅವರಂತೆ ಕಾಣಿಸುವಂತಹ ನಟನೊಬ್ಬನನ್ನ ಕರೆತಂದಿದ್ದಾರೆ. ಇತ್ತೀಚೆಗಷ್ಟೆ ನಕಲಿ ಪವನ್ ಕಲ್ಯಾಣ್ ಅವರ ಲುಕ್ ಕೂಡ ಬಿಡುಗಡೆ ಮಾಡಿದ್ದರು.