Tag: Ram Charan Teja

  • ತೆಲುಗು ನಟ ರಾಮ್ ಚರಣ್ ಅಭಿನಯದ ಹೊಸ ಸಿನಿಮಾ ಘೋಷಣೆ

    ತೆಲುಗು ನಟ ರಾಮ್ ಚರಣ್ ಅಭಿನಯದ ಹೊಸ ಸಿನಿಮಾ ಘೋಷಣೆ

    ರ್​ಆರ್​ಆರ್’ ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ‘ಮೆಗಾ ಪವರ್ ಸ್ಟಾರ್’ ರಾಮ್​ ಚರಣ್ ತೇಜ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿನಯದ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

    ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಆದ ‘ಉಪ್ಪೆನಾ’ ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ, ಈಗ ರಾಮ್​ ಚರಣ್​ ಅವರನ್ನು ಈ ಹೊಸ ಚಿತ್ರದಲ್ಲಿ ನಿರ್ದೇಶಿಸಲಿದ್ದಾರೆ. ಪ್ಯಾನ್​ ಇಂಡಿಯಾಗೆ ಆಗುವ ಚಿತ್ರಕಥೆಯೊಂದನ್ನು ಬುಚ್ಚಿ ಬಾಬು ಸಿದ್ಧಪಡಿಸಿದ್ದು, ಈ ಚಿತ್ರದಲ್ಲಿ ನಟಿಸುವುದಕ್ಕೆ ರಾಮ್​ ಚರಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಮೈತ್ರಿ ಮೂವಿ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿರುವ ವೆಂಕಟ ಸತೀಶ್ ಕಿಲಾರು ಅವರು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಹೆಸರಿಡದ ಚಿತ್ರದ ಮುಂದಿನ ವರ್ಷ ಪ್ರಾರಂಭವಾಗಲಿದೆ.

    ಸದ್ಯ ಶಂಕರ್​ ನಿರ್ದೇಶನದ ಪ್ಯಾನ್​ ಇಂಡಿಯಾ ಚಿತ್ರದ ಚಿತ್ರೀಕರಣದಲ್ಲಿ ರಾಮ್​ ಚರಣ್​ ತೇಜ ಭಾಗವಹಿಸಿದ್ದು, ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಅಧಿಕೃತ ಘೋಷಣೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್

    ಸಿನಿಮಾಗಿಂತ ಸುದ್ದಿಯಲ್ಲೇ ಉಳಿದು ಬಿಡ್ತಾರಾ ‘ಮಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್

    ಳೆದೊಂದು ವರ್ಷದಿಂದ ಮಫ್ತಿ (Mufti) ಖ್ಯಾತಿಯ ನಿರ್ದೇಶಕ ನರ್ತನ್ (Nartan) ಕೇವಲ ಸುದ್ದಿಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅವರು ತಮ್ಮ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ. ಹಾಗಾಗಿಯೇ ಸದಾ ಗಾಸಿಪ್ ಕಾಲಂನಲ್ಲೇ ಉಳಿದುಬಿಟ್ಟಿದ್ದಾರೆ. ಕೆಜಿಎಫ್ 2 (KGF 2) ಸಿನಿಮಾ ಮುಗಿಯುತ್ತಿದ್ದಂತೆಯೇ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿ ಆಯಿತು. ನರ್ತನ್ ಆಗಲಿ, ಯಶ್ ಆಗಲಿ ಖಚಿತ ಪಡಿಸೇ ಇದ್ದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಯಿತು.

    ಕೆಲ ತಿಂಗಳ ಹಿಂದೆಯಷ್ಟೇ ಯಶ್ ಗಾಗಿ ನರ್ತನ್ ಸಿನಿಮಾ ಮಾಡುತ್ತಿಲ್ಲ ಎನ್ನುವ ಸುದ್ದಿ ಹೊರ ಬಿತ್ತು. ನರ್ತನ್ ಮಾಡಿದ ಕಥೆ ಸದ್ಯಕ್ಕೆ ಯಶ್ (Yash) ಗೆ ಒಪ್ಪುತ್ತಿಲ್ಲ. ಹಾಗಾಗಿಯೇ ಕಥೆಯನ್ನು ಯಶ್ ತಿರಸ್ಕರಿಸಿದ್ದಾರೆ ಎಂದು ಗಾಂಧಿನಗರ ಮಾತನಾಡಿಕೊಂಡಿತು. ಈ ಕುರಿತಾಗಿಯೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಒಂದೂವರೆ ವರ್ಷದಿಂದ ಯಶ್ ಗಾಗಿಯೇ ಕಥೆ ಬರೆದುಕೊಂಡಿದ್ದ ನರ್ತನ್ ಮುಂದೇನು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಯಿತು. ಇದೀಗ ಮತ್ತೆ ನರ್ತನ್ ಸುದ್ದಿಯಾಗಿದ್ದಾರೆ. ಇವರ ಸಿನಿಮಾದಲ್ಲಿ ಯಶ್ ಗೆ ಬದಲಾಗಿ ಬೇರೆ ನಟರೊಬ್ಬರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಯಶ್ ಜೊತೆ ನರ್ತನ್ ಸಿನಿಮಾಡುತ್ತಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಇದೀಗ ಯಶ್ ಬದಲಾಗಿ ತೆಲುಗಿನ ರಾಮ್ ಚರಣ್ ತೇಜ ಅವರ ಹೆಸರು ಕೇಳಿ ಬರುತ್ತಿದೆ. ನರ್ತನ್ ಅವರ ಮುಂದಿನ ಸಿನಿಮಾದಲ್ಲಿ ರಾಮ್ ಚರಣ್ ತೇಜ (Ram Charan Teja) ಹೀರೋ ಆಗಿ ನಟಿಸಲಿದ್ದಾರೆ ಎನ್ನುವುದು ಲೆಟೆಸ್ಟ್ ನ್ಯೂಸ್. ದೊಡ್ಡಮಟ್ಟದಲ್ಲಂತೂ ಇದು ಸುದ್ದಿ ಆಗಿದೆ. ಆದರೆ, ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ಅವರಿಬ್ಬರೇ ಹೇಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

    ಆರ್.ಆರ್.ಆರ್ : ಬಾಕ್ಸ್ ಆಫೀಸ್ ಗಳಿಕೆ ಸುಳ್ಳು ಸುಳ್ಳು ಎಂದ ಬಾಲಿವುಡ್ ಖಾನ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದೆ. ಈವರೆಗಿನ ಎಲ್ಲಾ ದಾಖಲೆಗಳನ್ನು ಅದು ಮುರಿದು ಮುನ್ನುಗ್ಗುತ್ತಿದೆ. ಹತ್ತಿರ ಹತ್ತಿರ ಸಾವಿರ ಕೋಟಿ ಸಮೀಪಕ್ಕೆ ಸಿನಿಮಾ ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಬಾಲಿವುಡ್ ನ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಹೇಳುವುದೇ ಬೇರೆ. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್‌ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ

    ಭಾರತೀಯ ಬಹುತೇಕ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಇತರ ದೇಶಗಳ ಭಾಷೆಗಳಿಗೂ ಅದು ಡಬ್ ಆಗಿ ಬಿಡುಗಡೆ ಆಗಿದೆ. ಮೊದಲ ಮೂರು ದಿನಗಳ ಗಳಿಕೆಯಲ್ಲೇ ಅದು ದಾಖಲೆ ನಿರ್ಮಿಸಿತ್ತು. ರಿಲೀಸ್ ಆದ ವಾರದೊಳಗೆ ಹಿಂದಿಯೊಂದರಲ್ಲೇ ಅದು ನೂರು ಕೋಟಿ ಕ್ಲಬ್ ಸೇರಿ ಆಗಿದೆ. ಆದರೆ, ಅದೆಲ್ಲ ಸುಳ್ಳು ಪ್ರಚಾರ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ. ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ

    ಬಾಲಿವುಡ್ ನ ಸ್ವಯಂ ವಿಮರ್ಶಕ ಖ್ಯಾತಿಯ ಈ ಕಮಲ್ ಆರ್ ಖಾನ್ ಇಂತಹ ಅಚ್ಚರಿಯ ಹೇಳಿಕೆಯನ್ನು  ಕೊಡುವುದು ಇದೇ ಮೊದಲೇನೂ ಅಲ್ಲ. ಬಾಲಿವುಡ್ ನ ಬಹುತೇಕ ಸ್ಟಾರ್ ನಟ ನಟಿಯರನ್ನು ಕಾಲೆಳೆದು ಕಂಗೆಣ್ಣಿಗೆ ಗುರಿಯಾದವರು ಇವರು. ನಿರ್ದೇಶಕರನ್ನೂ, ನಿರ್ಮಾಪಕರನ್ನೂ ಬಿಡದೇ ತಮ್ಮದೇ ಆದ ರೀತಿಯಲ್ಲಿ ಕಟುವಾಗಿ ಟೀಕಿಸುತ್ತಲೇ ಇರುತ್ತಾರೆ ಕಮಲ್. ಇದೀಗ ಆರ್.ಆರ್.ಆರ್ ವಿಷಯದಲ್ಲೂ ಅದನ್ನೇ ಮಾಡಿದ್ದಾರೆ.

     

    ‘ನನ್ನ ಪ್ರಕಾರ ಆರ್.ಆರ್.ಆರ್ ಸಿನಿಮಾವನ್ನು ಜನರು ತಿರಸ್ಕರಿಸಿದ್ದಾರೆ. ಅಷ್ಟೊಂದು ಪ್ರಮಾಣದಲ್ಲಿ ಬಾಕ್ಸ್ ಆಫೀಸ್ ತುಂಬುವುದಕ್ಕೆ ಹೇಗೆ ಸಾಧ್ಯ? ನಿರ್ಮಾಪಕರು ಮತ್ತು ನಿರ್ದೇಶಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಈ ಸಿನಿಮಾ 680 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಅದು ಕೂಡ ಸುಳ್ಳು. ಜನರಿಗೆ ಬಜೆಟ್ ಅರ್ಥವಾಗಲ್ಲ. ಆ ಪ್ರಮಾಣದಲ್ಲಿ ಈ ಚಿತ್ರಕ್ಕೆ ಹಣ ಹೂಡಿಲ್ಲ ಎಂದು ಮುಂದಿನ ದಿನಗಳಲ್ಲಿ ಸಾಬೀತು ಮಾಡುವುದಾಗಿ’ ನಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಕಮಲ್ ಈ ರೀತಿ ಟ್ವಿಟ್ ಮಾಡುತ್ತಿದ್ದಂತೆಯೇ ರಾಜಮೌಳಿ, ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್ ಮತ್ತು ಆಲಿಯಾ ಭಟ್ ಅಭಿಮಾನಿಗಳು ಒಟ್ಟಾಗಿ ಕಮಲ್ ಮೇಲೆ ಮುಗಿಬಿದ್ದಿದ್ದಾರೆ. ಕಮಲ್ ಕುರಿತಾಗಿ ನಿಂದಿಸಿದ್ದಾರೆ. ಕಮಲ್ ಯಾರು ಎನ್ನುವುದನ್ನೂ ಕೆಲವರು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿರುವ ಆರ್.ಆರ್.ಆರ್ ತನ್ನದೇ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಅತೀ ಶೀಘ್ರದಲ್ಲೇ ಅದು ಮೈಲುಗಲ್ಲು ಸ್ಥಾಪಿಸಲಿದೆ ಎಂದಿದ್ದಾರೆ ಅಭಿಮಾನಿಗಳು.

  • ಹಿಂದಿಯಲ್ಲಿ 100 ಕೋಟಿ ಕ್ಲಬ್ ತಲುಪಿದ ಆರ್.ಆರ್.ಆರ್ : ಯಾವ ದಿನ ಎಷ್ಟು ಲೆಕ್ಕ?

    ಹಿಂದಿಯಲ್ಲಿ 100 ಕೋಟಿ ಕ್ಲಬ್ ತಲುಪಿದ ಆರ್.ಆರ್.ಆರ್ : ಯಾವ ದಿನ ಎಷ್ಟು ಲೆಕ್ಕ?

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದೆ. ವಿಶ್ವದಾದ್ಯಂತ ಮೂರೇ ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ್ದ ಈ ಸಿನಿಮಾ, ಹಿಂದಿಯಲ್ಲಂತೂ ಸಖತ್ ಕಮಾಯಿ ಮಾಡಿದೆ.  ಕೇವಲ ನಾಲ್ಕೇ ದಿನಕ್ಕೆ ಹಿಂದಿಯಲ್ಲಿ ಅದು 100 ಕೋಟಿ ಕ್ಲಬ್ ಸೇರಿದೆ. ಅತೀ ಕಡಿಮೆ ಅವಧಿಯಲ್ಲಿ ನೂರು ಕೋಟಿ ಕ್ಲಬ್ ಸೇರಿದ ದಕ್ಷಿಣದ ಮೊದಲ ಸಿನಿಮಾ ಇದಾಗಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಮೊದಲ ದಿನ 19 ಕೋಟಿ, ಎರಡನೇ ದಿನ 24 ಕೋಟಿ, ಮೂರನೇ ದಿನ 31.5 ಕೋಟಿ ಮತ್ತು ನಾಲ್ಕನೇ ದಿನಕ್ಕೆ 17 ಕೋಟಿ ರೂಪಾಯಿಗಳ ಕೆಲಕ್ಷನ್ ಆಗಿದ್ದು, ಮಂಗಳವಾರ ನೂರು ಕೋಟಿಗೂ ಅಧಿಕ ಹಣ ಆರ್.ಆರ್.ಆರ್ ನಿರ್ಮಾಪಕರ ಜೇಬಿಗೆ ಬೀಳಲಿದೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ಮೂರು ದಿನದ ವಿಶ್ವದ ಲೆಕ್ಕಾಚಾರ

    ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ, ವೀಕೆಂಡ್ ನಲ್ಲಿ ವಿದೇಶದಲ್ಲೂ ಸಖತ್ ಕಮಾಯಿ ಮಾಡಿದೆಯಂತೆ. ಇದೇ ವೇಗದಲ್ಲೇ ಒಂದು ವಾರ ಪ್ರದರ್ಶನ ಕಂಡರೆ, ಒಂದು ವಾರದಲ್ಲಿ ಸಾವಿರ ಕೋಟಿ ಹಣ ಗಳಿಸಿದ ಮೊದಲ ಚಿತ್ರ ಇದಾಗಲಿದೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ, ಉತ್ತರ ಭಾರತದಲ್ಲಿ 25 ಕೋಟಿ, ಹೀಗೆ ಭಾರತದಲ್ಲೇ ಮೊದಲ ದಿನ ಆರ್.ಆರ್.ಆರ್ ಗಳಿಸಿದ ಒಟ್ಟು ಮೊತ್ತ 156 ಕೋಟಿ ಆಗಿತ್ತು. ವಿದೇಶದಲ್ಲೂ ಕೂಡ ಹಿಂದೆ ಬಿದ್ದಿರಲಿಲ್ಲ. ಯುಎಸ್ ನಲ್ಲೇ 42 ಕೋಟಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ದೇಶಗಳಿಂದ 25 ಕೋಟಿ ಬಂದಿತ್ತು. ವಿಶ್ವದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ 223 ಕೋಟಿ ಆಗಿತ್ತು.

  • ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ತಮ್ಮ ದಾಖಲೆಗಳನ್ನು ಮುರಿದುಕೊಂಡು ನಿರಾತಂಕವಾಗಿ ಮುನ್ನುಗ್ಗುತ್ತಿದ್ದಾರೆ ರಾಜಮೌಳಿ.  ಈ ಹಿಂದಿನ ಬಾಹುಬಲಿ ಚಿತ್ರಕ್ಕಿಂತಲೂ ಈ ಬಾರಿ ಕಲೆಕ್ಷನ್ ವೇಗ ಜೋರಾಗಿದೆಯಂತೆ. ಹಾಗಾಗಿ ರಿಲೀಸ್ ಆದ ಮೂರೇ ಮೂರು ದಿನಕ್ಕೆ 500 ಕೋಟಿ ಹಣ ಹರಿದು ಬಂದಿದೆ ಎನ್ನುತ್ತಾರೆ ಸಿನಿ ಲೆಕ್ಕಚಾರ ಪಂಡಿತರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ, ವೀಕೆಂಡ್ ನಲ್ಲಿ ವಿದೇಶದಲ್ಲೂ ಸಖತ್ ಕಮಾಯಿ ಮಾಡಿದೆಯಂತೆ. ಇದೇ ವೇಗದಲ್ಲೇ ಒಂದು ವಾರ ಪ್ರದರ್ಶನ ಕಂಡರೆ, ಒಂದು ವಾರದಲ್ಲಿ ಸಾವಿರ ಕೋಟಿ ಹಣ ಗಳಿಸಿದ ಮೊದಲ ಚಿತ್ರ ಇದಾಗಲಿದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ, ಉತ್ತರ ಭಾರತದಲ್ಲಿ 25 ಕೋಟಿ, ಹೀಗೆ ಭಾರತದಲ್ಲೇ ಮೊದಲ ದಿನ ಆರ್.ಆರ್.ಆರ್ ಗಳಿಸಿದ ಒಟ್ಟು ಮೊತ್ತ 156 ಕೋಟಿ ಆಗಿತ್ತು. ವಿದೇಶದಲ್ಲೂ ಕೂಡ ಹಿಂದೆ ಬಿದ್ದಿರಲಿಲ್ಲ. ಯುಎಸ್ ನಲ್ಲೇ 42 ಕೋಟಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ದೇಶಗಳಿಂದ 25 ಕೋಟಿ ಬಂದಿತ್ತು. ವಿಶ್ವದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ 223 ಕೋಟಿ ಆಗಿತ್ತು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಹಿಂದಿ ವರ್ಷನ್ ಒಂದರಲ್ಲೇ ಶುಕ್ರವಾರ 19 ಕೋಟಿ, ಶನಿವಾರ 24 ಕೋಟಿ ಹಾಗೂ ಭಾನುವಾರ 31.50 ಕೋಟಿ ಏರಿಕೆ ಕಂಡಿದೆ. ಹೀಗಾಗಿ ಶನಿವಾರ ಮತ್ತು ಭಾನುವಾರ ಎರಡನೇ ದಿನದ ಗಳಿಕೆ ವೀಕೆಂಡ್ ಕಾರಣಕ್ಕಾಗಿ ಮತ್ತಷ್ಟು ಏರಿಕೆ ಕಂಡು ಮೂರೇ ದಿನದಲ್ಲಿ 500 ಕೋಟಿ ರೂಪಾಯಿಗಳನ್ನು ಈ ಸಿನಿಮಾ ಬಾಚಿದೆ.

  • ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಕೇವಲ ಬೆಂಗಳೂರು ಒಂದರಲ್ಲೇ ಇಂದು 700ಕ್ಕೂ ಅಧಿಕ ಶೋಗಳು ನಡೆದಿವೆ. ಹಾಗಾಗಿ ಇಂದು ಗಾಂಧಿನಗರದಲ್ಲಿ ಬರೀ ಆರ್.ಆರ್.ಆರ್ ಸಿನಿಮಾದ್ದೇ ಮಾತು ಕೇಳಿ ಬರುತ್ತಿದೆ.

    ಮಧ್ಯರಾತ್ರಿ 12.45 ರಿಂದ ಶುರುವಾದ ಶೋಗಳು ನಿರಂತರವಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸು ತುಂಬಿ ತುಳುಕುತ್ತಿದೆ. ಟಿಕೆಟ್ ದರದಲ್ಲೂ ಭಾರೀ ಏರಿಕೆ ಕಂಡಿದ್ದರೂ, ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಳ್ಳದೇ ಸಿನಿಮಾ ನೋಡುತ್ತಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    700 ಸ್ಕ್ರೀನ್ ಗಳಲ್ಲಿ 600ಕ್ಕೂ ಹೆಚ್ಚು ತೆಲುಗು ಆರ್.ಆರ್.ಆರ್ ಪ್ರದರ್ಶನ  ಕಾಣುತ್ತಿದ್ದರೆ, 28 ಸ್ಕ್ರೀನ್ ಗಳಲ್ಲಿ ಕನ್ನಡ ಆರ್.ಆರ್.ಆರ್ ರಿಲೀಸ್ ಆಗಿದೆ. ಉಳಿದಂತೆ ಬೆರಳೆಣಿಕೆಯಲ್ಲಿ ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಆರ್.ಆರ್.ಆರ್ ರಿಲೀಸ್ ಆಗಿದೆ. ಅಂದಾಜು ಒಂದೇ ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿದೆ.

  • ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಬೆಂಗಳೂರು: ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟ ರಾಮ್ ಚರಣ್ ತೇಜಾ ಅವರು ಪುನೀತ್ ನೆನೆದು ಭಾವುಕರಾಗಿ ಮಾತನಾಡಿದ್ದಾರೆ.

    ಪುನೀತ್ ಸಾವನ್ನು ಯಾರಿಗೂ ನಂಬಲು ಆಗುತ್ತಿಲ್ಲ. ಇವರು ಬರೀ ಕನ್ನಡಿಗರಿಗೆ ಮಾತ್ರವಲ್ಲ, ಅಪ್ಪು ಎಲ್ಲೇ ಹೋದರು ಅವರಿಗೆ ಫ್ಯಾನ್ಸ್ ಮತ್ತು ಸ್ನೇಹಿತರು ಜಾಸ್ತಿ. ಅಪ್ಪುವನ್ನು ಮಾತನಾಡಿಸಿದರೆ ಎಷ್ಟೋ ವರ್ಷಗಳ ಸ್ನೇಹ ಇದೆ ಎಂಬಂತೆ ಬೇಗ ಹೊಂದಿಕೊಳ್ಳುತ್ತಾರೆ. ಅದೇ ರೀತಿ ರಾಮ್ ಚರಣ್ ತೇಜ ಸಹ ಪುನೀತ್ ವಿಚಾರದಿಂದ ದುಃಖಿತರಾಗಿದ್ದು, ಇಂದು ಶಿವಣ್ಣನ ಮನೆಗೆ ಬಂದು ಅವರಿಗೆ ಸಾಂತ್ವನವನ್ನು ಹೇಳಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ದುಃಖವಾಗುತ್ತಿದೆ. ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾರಿಗೆ ಏನಾದರೂ ಆದರೆ ನಮಗೆ ಅರ್ಥವಾಗುತ್ತೆ. ಆದರೆ ಪುನೀತ್ ಅವರಿಗೆ ಈ ರೀತಿಯಾಗಿದ್ದು, ನನಗೆ ನಿಜವಾಗಿಯೂ ತುಂಬಾ ದುಃಖ ತಂದಿದೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ನನಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಾತು ಸಹ ಬರುತ್ತಿಲ್ಲ. ಇದು ನಡೆಯಿತಾ, ಇಲ್ಲವಾ ಎಂದು ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇಂತಹ ಹಂಬಲ್ ವ್ಯಕ್ತಿಗೆ ಈ ರೀತಿ ಆಗಿರುವುದನ್ನು ನನಗೆ ತುಂಬಾ ದುಃಖ ತಂದಿದೆ. ಇಂತಹ ಪ್ರೀತಿ ತುಂಬಿದ ವ್ಯಕ್ತಿ ಎಲ್ಲಿಯೂ ಹುಟ್ಟಿಲ್ಲ. ನಮ್ಮ ಮನೆಗೆ ಬಂದು ಅವರು ನಮ್ಮ ಮನೆಯವರಂತೆ ಬೇಗ ಹೊಂದಿಕೊಂಡಿದ್ದರು ಎಂದು ನೆನೆದರು.

    ಪುನೀತ್ ಎಂದಿಗೂ ನಮ್ಮ ಮನೆಗೆ ಬಂದಾಗ ಅತಿಥಿ ಎಂಬ ಭಾವನೆಯೇ ಬಂದಿಲ್ಲ. ನಮ್ಮ ಮನೆಗೆ ಬಂದರೆ ಅವರು ನಮ್ಮವರು ಎಂಬಂತೆ ಎಲ್ಲರ ಜೊತೆ ಬೇಗ ಹೊಂದಿಕೊಳ್ಳುವ ಗುಣ ಇತ್ತು. ಎಲ್ಲರನ್ನು ನಮ್ಮವರು ಎಂದು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅವರು ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ನಾನು ಅವರನ್ನು ಭೇಟಿಯಾದಗಲೆಲ್ಲ ಮಾನವೀಯತೆ ಏನು? ಸಾಮಾನ್ಯವಾಗಿ ಹೇಗೆ ಇರಬೇಕು? ಎಂಬುದನ್ನು ನೋಡಿ ಕಲಿಯುತ್ತಿದೆ. ಪುನೀತ್ ಎಲ್ಲೇ ಇದ್ದರೂ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಚಿತ್ರರಂಗಕ್ಕೆ ನೀವು ಕೊಟ್ಟ ಕೂಡುಗೆಗೆ ಧನ್ಯವಾದ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಅಭಿಮಾನಿಗಳು ಮತ್ತು ಪುನೀತ್ ಅವರ ಕುಟುಂಬದವರ ಜೊತೆ ಯಾವಾಗಲೂ ನಾವು ಇರುತ್ತೇವೆ ಎಂದು ಹೇಳಿದರು.