Tag: rallt

  • ಕಾಫಿ ನಾಡಿನಲ್ಲಿ ಕಾರ್ ರ‍್ಯಾಲಿ- ಜಿಪ್ಸಿ, ಕಾರ್ ಪಲ್ಟಿ

    ಕಾಫಿ ನಾಡಿನಲ್ಲಿ ಕಾರ್ ರ‍್ಯಾಲಿ- ಜಿಪ್ಸಿ, ಕಾರ್ ಪಲ್ಟಿ

    ಚಿಕ್ಕಮಗಳೂರು: ಐ.ಎನ್.ಆರ್.ಸಿ ಕಾರ್ ರ‍್ಯಾಲಿ ವೇಳೆ ವೇಗವಾಗಿದ್ದ ಜಿಪ್ಸಿ ಹಾಗೂ ಕಾರ್ ಪಲ್ಟಿಯಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಾಪುರ ಎಸ್ಟೇಟ್‍ನಲ್ಲಿ ನಡೆದಿದೆ.

    ಕಾಫಿ ಡೇ ಪ್ರಾಯೋಜಕತ್ವದಲ್ಲಿ ನಡೆಯುತ್ತಿರೋ ಐ.ಎನ್.ಆರ್.ಸಿ ಕಾರ್ ರ‍್ಯಾಲಿಯ ನಾಲ್ಕನೇ ಸುತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಎರಡನೇ ದಿನ ಕಾರ್ ರ‍್ಯಾಲಿಯ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಕಾರು ಹಾಗೂ ಜಿಪ್ಸಿಯ ಡ್ರೈವರ್ ಹಾಗೂ ಕೋ-ಡ್ರೈವರ್ ಅನಾಹುತದಿಂದ ಪಾರಾಗಿದ್ದು, ಕಾರಿನಲ್ಲಿ ಡ್ರೈವರ್ ಧ್ರುವ ಹಾಗೂ ಕೋ-ಡ್ರೈವರ್ ಅರ್ಜುನ್ ಮತ್ತೆ ಅದೇ ಕಾರನ್ನ ಓಡಿಸಿದ್ದಾರೆ. ಕಾಫಿ ಕಣಿಯ ಹಾವುಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಈ ರ‍್ಯಾಲಿ ನಡೆಯುತ್ತಿದ್ದು, ಕಾರುಗಳು ಅತಿ ವೇಗವಾಗಿ ಓಡೋದ್ರಿಂದ ಈ ಅವಘಡ ಸಂಭವಿಸಿದೆ.

    ಇಂಡಿಯನ್ ನ್ಯಾಷನಲ್ ಕಾರ್ ರ‍್ಯಾಲಿ:
    ಕಾಫಿ ಡೇ ಗ್ಲೋಬಲ್‍ರವರ ಪ್ರಯೋಜತ್ವದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‍ನ ಎಂಆರ್‍ಎಫ್ ಹಾಗೂ ಎಫ್‍ಎಂಎಸ್‍ಸಿಐ ರ‍್ಯಾಲಿ ಇದಾಗಿದೆ. ಏಕ ಕಾಲದಲ್ಲಿ ಮೂರು ವಿಭಾಗಗಳಿಗೆ ನಡೆದ ರ‍್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದವು. ಮಾರುತಿ ಎಸ್ಟೀಮ್, ಬೊಲೆರೋ, ಮೀಟ್ಸ್ ಮೀಷನ್, ಓಕ್ಸ್ ವ್ಯಾಗನ್, ಸ್ಕೋಡ ಕಾರುಗಳ ಜೊತೆ ಜಿಪ್ಸಿ ಕೂಡ ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗ್ಗಿದ್ದವು. ಮೊದಲ ದಿನದ ಅಂಕಗಳಿಗಾಗಿ ಅಖಾಡಕ್ಕಿಳಿದಿದ್ದ ಕಾರುಗಳು ನೋಡುಗರಿಗೆ ಸಖತ್ ಥ್ರಿಲ್ ನೀಡಿತ್ತು.

    2.2 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡುಗರ ಎದೆ ಮೇಲೆ ಹೋದಂತಿತ್ತು. ಹೆಸರು ನೊಂದಾಯಿಸಿದ್ದ 47 ಸ್ಪರ್ಧಿಗಳಲ್ಲಿ 47 ರೈಡರ್‍ಳು ಕೂಡ ನೋಡುಗರಿಗೆ ಮನೋರಂಜನೆ ನೀಡಿದರು. ಈ ಬಾರಿಯ ರ‍್ಯಾಲಿಯಲ್ಲಿ ದೆಹಲಿ, ದುಬೈ, ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈಡರ್ ಗಳಿಗೆ ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆಗಳು ಸೆಡ್ಡು ಹೊಡೆದರು. ಅರುಣಾಚಲ ಪ್ರದೇಶ, ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ರ‍್ಯಾಲಿ ನಡೆದಿದ್ದು, ನಾಲ್ಕನೇ ಹಂತದಲ್ಲಿ ನಡೆಯುತ್ತಿರುವ ಇಲ್ಲಿನ ಗೆಲುವು ಕಂಡವರು ರ‍್ಯಾಲಿಯ ಚಾಂಪಿಯನ್ ಆಗುತ್ತಾರೆ.

    ಪ್ರೇಕ್ಷಕರ ರಂಜನೆಗಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಷ್ಟ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. ಗಂಟೆಗೆ 150 ರಿಂದ 200 ಕಿ.ಮೀ. ವೇಗದಲ್ಲಿ ಓಡುತ್ತಿರೋ ಕಾರುಗಳನ್ನ ನೋಡಿ ಜನ ಫುಲ್ ಫಿದಾ ಆಗಿದ್ದಾರೆ.

    https://www.youtube.com/watch?v=bujems-COc0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv