Tag: Rakul Preet Singh

  • ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ನ್ನಡದ ‘ಗಿಲ್ಲಿ’ (Gilli Kannada Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rakul Singh (@rakulpreet)

    ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ (Gururaj) ನಟನೆಯ ‘ಗಿಲ್ಲಿ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ರಾಕುಲ್ ಸಿನಿಪಯಣ ಶುರು ಮಾಡಿದರು. ಇದೀಗ ಸೌತ್-ಬಾಲಿವುಡ್ ರಂಗದಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚ್ತಿದ್ದಾರೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆಗೆ ಕಿಚ್ಚ ಕೊಟ್ಟ ಉಡುಗೊರೆ ಏನು?

     

    View this post on Instagram

     

    A post shared by Rakul Singh (@rakulpreet)

    ಸದ್ಯ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೆಲ ದಿನಗಳಿಂದ ನಟಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಬಿಕಿನಿಯ ಹಸಿ ಬಿಸಿ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಈಗ ಮತ್ತೆ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ರೆಡ್ ಕಲರ್ ಬಿಕಿನಿ (Bikini) ಧರಿಸಿ ಬೀಚ್ ಬಳಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಫೋಟೋಗಳು ಎಲ್ಲೆಡೆ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Rakul Singh (@rakulpreet)

    ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ರಾಕುಲ್ ಡೇಟ್ ಮಾಡ್ತಿದ್ದಾರೆ. ಸದ್ಯ ಸ್ಟಾರ್‌ಗಳ ಮದುವೆ ಸೀಸನ್ ನಡೆಯುತ್ತಿರುವ ಕಾರಣ, ಈ ಜೋಡಿ ಕೂಡ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಮಾಲ್ಡೀವ್ಸ್ ನಲ್ಲಿ ಮೈಮರೆತು ಬಿಕಿನಿಯಲ್ಲಿ ಕುಣಿದ ರಕುಲ್ ಪ್ರೀತ್ ಸಿಂಗ್

    ಮಾಲ್ಡೀವ್ಸ್ ನಲ್ಲಿ ಮೈಮರೆತು ಬಿಕಿನಿಯಲ್ಲಿ ಕುಣಿದ ರಕುಲ್ ಪ್ರೀತ್ ಸಿಂಗ್

    ಬಾಲಿವುಡ್ (Bollywood) ನ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ಮಾಲ್ಡೀವ್ಸ್ (Maldives) ಪ್ರವಾಸದಲ್ಲಿ ಇದ್ದಾರೆ. ಸಮುದ್ರದ ದಂಡೆಯಲ್ಲಿ ಮೈಮರೆತು ಬಿಕಿನಿಯಲ್ಲಿ (Bikini) ಕುಣಿದಿದ್ದಾರೆ. ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ. ಅರಿಶಿಣ ಬಣ್ಣದ ಬಿಕಿನಿ ಧರಿಸಿರುವ ರಕುಲ್ ಪ್ರೀತ್ ಸಮುದ್ರಕ್ಕೂ ಬಿಸಿ ಮುಟ್ಟಿಸುವಷ್ಟು ಹಾಟ್ ಹಾಟ್ ಆಗಿ ಕಂಡಿದ್ದಾರೆ.

    ಈ ಹಿಂದೆ ಡೇಟಿಂಗ್ ವಿಚಾರವಾಗಿ ರಕುಲ್ ಪ್ರೀತ್ ಸಿಂಗ್ (Rakul Preet Singh)  ಸಾಕಷ್ಟು ಸುದ್ದಿಯಲ್ಲಿದ್ದರು. ಅವರ ಬಾಯ್‍ಫ್ರೆಂಡ್ ನಟ, ನಿರ್ಮಾಪಕ ಜ್ಯಾಕಿ ಭಗ್ನಾನಿ ‘ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್’ ಎಂದು ಇನ್‌ಸ್ಟಾಗ್ರಾಮ್‍ನಲ್ಲಿ ಬರೆದುಕೊಳ್ಳುವ ಮೂಲಕ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಜೆಕೆ ಗುಡ್‌ ಬೈ- ಅಷ್ಟಕ್ಕೂ ಆಗಿದ್ದೇನು.?

    ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜ್ಯಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್‍ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್ ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

     

    ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೈಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ಮೈನಸ್‌ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಮುಳುಗೆದ್ದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಮೈನಸ್‌ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಮುಳುಗೆದ್ದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ನ್ನಡದ ‘ಗಿಲ್ಲಿ’ (Gilli) ಸಿನಿಮಾ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಾಲಿವುಡ್- ಸೌತ್ ಸಿನಿಮಾರಂಗದಲ್ಲಿ ಸದ್ದು ಮಾಡ್ತಿದ್ದಾರೆ. ಸದ್ಯ ಅವರು ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿದೇಶದಲ್ಲಿ ಪ್ರವಾಸ ಮಾಡ್ತಿದ್ದಾರೆ. ಬಿಕಿನಿನಲ್ಲಿ ಸಖತ್ ಹಾಟ್ ಆಗಿ ರಾಕುಲ್ ಪ್ರೀತ್ ಕಾಣಿಸಿಕೊಂಡಿದ್ದಾರೆ.

    ಇತ್ತೀಚಿಗೆ ಥ್ಯಾಂಕ್ ಗಾಢ್, ಛತ್ರಿವಾಲಿ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ರಾಕುಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ನಟಿಸಿರುವ ಸಿನಿಮಾದಿಂದ ಸದ್ಯ ಯಾವುದೇ ಬ್ರೇಕ್ ಸಿಗದೇ ಇದ್ದರು. ಗಿಲ್ಲಿ ನಾಯಕಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕತ್ರಿನಾ ದಂಪತಿ? ನಟಿ ಸ್ಪಷ್ಟನೆ

     

    View this post on Instagram

     

    A post shared by Rakul Singh (@rakulpreet)

    ರಾಕುಲ್ ಪ್ರೀತ್ ಸಿಂಗ್ ಅವರು ಮೈನಸ್ 15 ಡಿಗ್ರಿ ಸೆಲ್ಸಿಯಸ್ ಇರುವ ನೀರಿನಲ್ಲಿ ಮುಳುಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಕಿನಿ(Bikini) ಧರಿಸಿದ್ದರು ಅನ್ನೋದು ವಿಶೇಷ. ಸದ್ಯ ಈ ಸಖತ್ ವಿಡಿಯೋ ವೈರಲ್ ಆಗಿದೆ. ರಾಕುಲ್ ಮಾತ್ರ ತುಂಡು ಬಟ್ಟೆ ಹಾಕಿ ಐಸ್ ನೀರಲ್ಲಿ ಮುಳುಗೆದ್ದಿದ್ದರು. ಈ ಮೂಲಕ ನಟಿ ರಾಕುಲ್ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

    ರಾಕುಲ್ ಪ್ರೀತ್ ಸಿಂಗ್ ಮುಳುಗೆದ್ದ ಬಳಿಕ ನೀರು ಬಿಸಿಯಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಾಕುಲ್ ಹಾಟ್ ಆಗಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ

  • ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ : ಶಿವಕಾರ್ತಿಕೇಯನ್ ಹೀರೋ

    ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ : ಶಿವಕಾರ್ತಿಕೇಯನ್ ಹೀರೋ

    ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ (Shivakarthikeyan) ತುಂಬಾ ಪರಿಶ್ರಮಪಟ್ಟು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದವರು. ರಿಯಾಲಿಟಿ ಶೋಗಳಿಂದ ಗುರುತಿಸಿಕೊಂಡು ನಂತರ ಕಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ, ನಟನಾಗಿ, ಬರಹಗಾರನಾಗಿ, ನಿರ್ಮಾಪಕನಾಗಿ ತಮ್ಮದೇ ರೀತಿಯಲ್ಲಿ ಛಾಪೂ ಮೂಡಿಸಿದ್ದಾರೆ. ಮಾಸ್ ಆಗಿ ತಮಿಳು ಸಿನಿಪ್ರಿಯರನ್ನು ರಂಜಿಸುತ್ತಿರುವ ಶಿವಕಾರ್ತಿಕೇಯನ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ‘ಅಯಲಾನ್’ (Ayalaan) ಬಿಡುಗಡೆಗೆ (released) ಹೊಸ್ತಿಲಿನಲ್ಲಿ ನಿಂತಿದೆ.

    ಆರ್.ರವಿಕುಮಾರ್ ಕಥೆ ಬರೆದು ನಿರ್ದೇಶಿಸುತ್ತಿರುವ ಅಯಲಾನ್ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವದಾದ್ಯಂತ ಚಿತ್ರ ರಿಲೀಸ್ ಆಗಲಿದೆ. 24ಎಎಂ ಸ್ಟುಡಿಯೋಸ್ ನಡಿ ಆರ್. ಡಿ. ರಾಜ ಅದ್ಧೂರಿಯಾಗಿ ನಿರ್ಮಿಸಿರುವ ಫ್ಯಾಂಟಸಿ ಎಂಟರ್ ಟೈನರ್ ಅಲಯಾನ್ ಸಿನಿಮಾವನ್ನು ಕೆಜೆಆರ್ ಸ್ಟುಡಿಯೋನ ಕೋಟಪಾಡಿ ಜೆ ರಾಜೇಶ್ ವರ್ಲ್ಡ್ ವೈಡ್ ಬಿಡುಗಡೆ ಮಾಡಲಿದೆ. ಇದನ್ನೂ ಓದಿ:ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ ಕನ್ನಡದ ಮತ್ತೋರ್ವ ನಟ ಸರ್ದಾರ್ ಸತ್ಯ

    ಹೇಳಿಕೇಳಿ ಅಲಯಾನ್ ಫ್ಯಾಂಟಿಸಿ ಎಂಟಟ್ರೈನರ್ ಸಿನಿಮಾ. ಹೀಗಾಗಿ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿಯಾಗದೇ ಅದ್ಭುತ ಸಿಜಿ ವರ್ಕ್ ಸಿನಿಮಾದಲ್ಲಿರಲಿದೆ. ಭಾರತೀಯ ಚಿತ್ರರಂಗದಲ್ಲಿ 4500+ VFX ಶಾಟ್‌ಗಳನ್ನು ಹೊಂದಿರುವ ಮೊದಲ ಪೂರ್ಣ-ಉದ್ದದ ಲೈವ್-ಆಕ್ಷನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಅಲಯಾನ್ ಪಾತ್ರವಾಗಿದೆ. ಅದ್ಭುತ ಸಿಜಿ ಕೆಲಸ ಹಿಂದಿನ ಕೃರ್ತ ಫ್ಯಾಂಟಮ್ FX ಸಂಸ್ಥೆ. ಹಾಲಿವುಡ್ ಹಲವು ಚಿತ್ರಗಳಿಗೆ ಸಿಜಿ ವರ್ಕ್ ಮಾಡಿರುವ ಈ ಕಂಪನಿ ಈಗ ಅಲಯಾನ್ ಚಿತ್ರಕ್ಕೂ ಕೈ ಜೋಡಿಸಿದೆ. ಇನ್ನೂ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಕನ್ನಡದ ಗಿಲ್ಲಿ ಸಿನಿಮಾ ಬ್ಯೂಟಿ ರಕುಲ್ ಪ್ರೀತ್ ಸಿಂಗ್  (Rakul Preet Singh) ನಟಿಸಿದ್ದು, ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಬಾನುಪ್ರಿಯಾ, ಬಾಲಸರವಣನ್ ಸೇರಿದಂತೆ ಹಲವರು ತಾರಾಬಳಗ ಚಿತ್ರದ ಭಾಗವಾಗಿದ್ದಾರೆ. ಆಸ್ಕರ್ ವಿಜೇತ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಅಲಯಾನ್ ಚಿತ್ರಕ್ಕಿದೆ.

  • ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ನ್ನಡದ `ಗಿಲ್ಲಿ’ (Gilli Kannada Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಈಗ ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಮಿಂಚ್ತಿದ್ದಾರೆ. ಇದೀಗ ತಮ್ಮ ಸತತ ಸಿನಿಮಾಗಳ ಸೋಲಿನ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:`ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ

    ರಾಕುಲ್ (Actress Rakul)  ನಟನೆಯ ಅಟ್ಯಾಕ್, ರನ್‌ವೇ 34, ಕಟ್‌ಪುಟ್ಲಿ, ಡಾಕ್ಟರ್ ಜೀ, ಥ್ಯಾಂಕ್ ಗಾಡ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ತಮ್ಮ ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಇತ್ತೀಚೆಗಷ್ಟೆ ಸಂದರ್ಶನದಲ್ಲಿ ಮಾತನಾಡಿದ ರಾಕುಲ್ ಪ್ರೀತ್ ಸಿಂಗ್ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಬಾಕ್ಸಾಫೀಸ್ ಸಂಖ್ಯೆ ಎಷ್ಟು ಪ್ರಮುಖವಾಗುತ್ತದೆ ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಕುಲ್, ಜನರ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಹಣವಿಲ್ಲದ ಕಾರಣ ಜನರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

    ಪ್ರೇಕ್ಷಕರ ಪ್ರೀತಿಯೇ ಮುಖ್ಯ ಎಂದಿರುವ ರಾಕುಲ್ ಬಾಕ್ಸಾಫೀಸ್ ಸಂಖ್ಯೆ ಅಥವಾ ಜಡ್ಜಮೆಂಟ್ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸೌತ್ ಸಿನಿಮಾಗಳ ಬಾಲಿವುಡ್‌ನಲ್ಲಿ ಸಕ್ಸಸ್ ಕಾಣುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾದೇಶಿಕ ಮತ್ತು ಬಾಲಿವುಡ್ ಸಿನಿಮಾಗಳು ಎಲ್ಲವೂ ಭಾರತದ ಸಿನಿಮಾಗಳಾಗಿದೆ. ಚಿತ್ರವು ಉತ್ತಮವಾಗಿದ್ದರೆ ಅದು ಭಾಷೆಯ ಹೊರತಾಗಿ ತನ್ನ ಪ್ರೇಕ್ಷಕರನ್ನು ಕಂಡುಕೊಳ್ಳುತ್ತದೆ ಎಂದು ರಾಕುಲ್ ಮಾತನಾಡಿದ್ದಾರೆ.

    ಇನ್ನೂ ನಿರ್ಮಾಪಕ ಜಾಕಿ ಭಗ್ನಾನಿ (Producer Jackky Bhagnani) ಜೊತೆ ರಾಕುಲ್‌ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಚಿತ್ರರಂಗದ ನಟ-ನಟಿಯರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶುಭ ವೇಳೆಯಲ್ಲಿ ಜಾಕಿ-ರಾಕುಲ್‌ ಜೋಡಿ ಕೂಡ ಮದುವೆಯ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಕಮಲ್ ಹಾಸನ್ `ಇಂಡಿಯನ್ 2’ಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ

    ಕಮಲ್ ಹಾಸನ್ `ಇಂಡಿಯನ್ 2’ಗೆ ರಾಕುಲ್ ಪ್ರೀತ್ ಸಿಂಗ್ ನಾಯಕಿ

    `ವಿಕ್ರಮ್’ (Vikram) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಕಮಲ್ ಹಾಸನ್ (Kamal Haasan) ಇದೀಗ `ಇಂಡಿಯನ್ 2′ (Indian 2) ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಕಮಲ್ ಹಾಸನ್‌ಗೆ ರಾಕುಲ್ ಪ್ರೀತ್‌ ಸಿಂಗ್‌ (Rakul Preet Singh) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ತಮಿಳಿನ `ವಿಕ್ರಮ್’ ಚಿತ್ರ ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಚಿತ್ರದ ಸಕ್ಸಸ್ ನಂತರ ಕಮಲ್ ಹಾಸನ್, ತಮ್ಮ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಎಸ್. ಶಂಕರ್ ನಿರ್ದೇಶನದ ಇಂಡಿಯನ್ 2ನಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಬಾಲಯ್ಯ ಮುಂದೆ ಅಬ್ಬರಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಇನ್ನೂ ಈ ಸಿನಿಮಾಗೆ ನಾಯಕಿ ಯಾರು ಎಂಬುದರ ಬಗ್ಗೆ ಸಖತ್ ಚರ್ಚೆಯಾಗಿತ್ತು.ಅದಕ್ಕೀಗ ಉತ್ತರ ಸಿಕ್ಕಿದೆ. ನಟ ಕಮಲ್‌ಗೆ ನಾಯಕಿಯಾಗಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ತಮ್ಮ ಪಾತ್ರದ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ.

    `ಇಂಡಿಯನ್ 2’ನಲ್ಲಿ ನಟಿಸಲು ಕಾಯುತ್ತಿದ್ದೇನೆ. ನಾನು ತುಂಬಾ ಲಕ್ಕಿ ಕಮಲ್ ಹಾಸನ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಮಾತನಾಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

    ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

    ಬಾಲಿವುಡ್ (Bollywood) ರಾಕುಲ್ ಪ್ರೀತ್ ಸಿಂಗ್ (Rakul Preet Singh) ತಮ್ಮ ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ (Jackky Bhagnani) ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ನಟಿಯ ಸ್ಪೆಷಲ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ರಾಕುಲ್ ಪ್ರೀತ್ ಸಿಂಗ್ ಡ್ರಗ್ಸ್ (Drugs) ವಿಚಾರವಾಗಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ಸ್ಪೆಷಲ್ ಆಗಿ ಶುಭಹಾರೈಸಿದ್ದಾರೆ. ಈ ಮೂಲಕ ಇಬ್ಬರ ಡೇಟಿಂಗ್ ವಿಷ್ಯಕ್ಕೆ ಅಂತ್ಯ ಬಿದ್ದಿದೆ. ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಕ್ರಿಸ್‌ಮಸ್ ಹಬ್ಬದ ಜೊತೆ ಜಾಕಿ ಬರ್ತ್‌ಡೇಗೆ ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

    ಸಾಂತಾ ನನಗೆ ಜೀವನಕ್ಕೆ ಉತ್ತಮವಾದ ಉಡುಗೊರೆಯನ್ನು ಕೊಟ್ಟಿದ್ದಾರೆ. ಹ್ಯಾಪಿ ಬರ್ತ್‌ಡೇ ಮೈ ಲವ್, ನನ್ನ ಜೀವನವನ್ನು ತುಂಬಾ ಸಂತೋಷದಿಂದ ಮತ್ತು ಶಾಂತಿಯಿಂದ ತುಂಬಿದ್ದಕ್ಕಾಗಿ ಧನ್ಯವಾದಗಳು. ನೀವು ಬಯಸುವ ಎಲ್ಲವನ್ನೂ ಜಯಿಸಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನಗುತ್ತೀರಿ ಎಂದು ಪ್ರಿಯಕರ ಜಾಕಿ ಭಗ್ನಾನಿ ನಟಿ ರಾಕುಲ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

     

    View this post on Instagram

     

    A post shared by rakul preet (@rakulxmagix)

    ಇನ್ನೂ ನಟ, ನಿರ್ಮಾಪಕ ಜಾಕಿ ಹುಟ್ಟುಹಬ್ಬಕ್ಕೆ ಅನೇಕ ಸೆಲೆಬ್ರೆಟಿಗಳು ಸಾಕ್ಷಿಯಾಗಿದ್ದಾರೆ. ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಕೇಸ್: ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ

    ಡ್ರಗ್ಸ್ ಕೇಸ್: ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟ

    ಟಿ ರಾಕುಲ್ ಪ್ರೀತ್  ಸಿಂಗ್‌ (Rakul Preet Singh) ಅವರು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಡ್ರಗ್ಸ್ (Drugs) ವಿಚಾರವಾಗಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ (Money Laundering) ವಿಚಾರಣೆಗೆ ಹಾಜರಾಗುವಂತೆ ನಟಿ ರಾಕುಲ್‌ಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಮತ್ತೆ ನಟಿಗೆ ಸಂಕಷ್ಟ ಎದುರಾಗಿದೆ.

    ಟಾಲಿವುಡ್ (Tollywood) ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (Enforcement Directorate) ರಾಕುಲ್ ಪ್ರೀತ್ ಸಿಂಗ್ ಶಾಕ್ ನೀಡಿದೆ. ಈ ಹಿಂದೆ ಸೆ. 3, 2021ರಂದು ನಟಿ ರಾಕುಲ್ ಪ್ರೀತ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.

    ಅವರ ಜೊತೆಗೆ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಶಾಸಕ ಪೈಲಟ್ ರೋಹಿತ್ ರೆಡ್ಡಿ (Pilot Rohith Reddy) ಅವರನ್ನೂ ಪ್ರತ್ಯೇಕ ಪ್ರಕರಣದಲ್ಲಿ ವಿಚಾರಣೆಗೆ ಕರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇಡಿ ಮಾದಕವಸ್ತು ಕಳ್ಳಸಾಗಣೆ ಮತ್ತು ಸೇವನೆಯ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಹಲವಾರು ತೆಲುಗು ಕಲಾವಿದರನ್ನು ಪ್ರಶ್ನಿಸಲಾಗಿದೆ. ಇದೀಗ ಮತ್ತೆ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಮನ್ಸ್ (Notice) ನೀಡಲಾಗಿದೆ.‌ ಇದನ್ನೂ ಓದಿ: ದೀಪಿಕಾ ಕೇಸರಿ ಬಿಕಿನಿ ವಿವಾದ: `ಪಠಾಣ್’ ನಟಿಯ ಪರ ನಿಂತ ನಟಿ ರಮ್ಯಾ

    2017ರಲ್ಲಿ ಡ್ರಗ್ಸ್ ಪ್ರಕರಣ ಇಡೀ ಟಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ತನಿಖೆ ಇನ್ನೂ ಕೂಡ ನಡೆಯುತ್ತಿದೆ. ತೆಲುಗಿನ ಸ್ಟಾರ್ಸ್ ರವಿತೇಜ (Ravi Teja), ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ತನಿಶ್, ನಂದು, ತರುಣ್ ಮತ್ತು ಬಾಹುಬಲಿ ನಟ ರಾಣಾ ದಗ್ಗುಬಾಟಿ (Rana Daggubati) ಸೇರಿದಂತೆ ಇನ್ನೂ ಅನೇಕರಿಗೆ ಈ ಹಿಂದೆಯೇ ಇಡಿ ಸಮನ್ಸ್ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

    ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

    ಬಹುಮುಖ ಪ್ರತಿಭೆ ಶ್ರದ್ಧಾ, ಸೋಷಿಯಲ್ ಮೀಡಿಯಾದಲ್ಲಿ ಪಟ ಪಟ ಮಾತಿನ ಮೂಲಕ `ಅಯ್ಯೋ ಶ್ರದ್ಧಾ’ (Aiyyo Shraddha) ಆಗಿ ಖ್ಯಾತಿಯಾಗಿದ್ದಾರೆ. ಮಂಗಳೂರು ಬ್ಯೂಟಿ ಶ್ರದ್ಧಾ ಪ್ರತಿಭೆ ಇದೀಗ ಬಿಟೌನ್‌ವೆರೆಗೂ ಮುಟ್ಟಿದೆ. ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ಕನ್ನಡತಿ ಶ್ರದ್ಧಾಗೆ ನಟಿಸಲು ಚಾನ್ಸ್ ಸಿಕ್ಕಿದೆ.

    ಮಂಗಳೂರು ಚೆಲುವೆ ಶ್ರದ್ಧಾ ಇದೀಗ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ನಾವು ನಿತ್ಯ ನೋಡುವ ವಿಚಾರವನ್ನೇ ನಮ್ಮ ಕಣ್ಣಿಗೆ ಕಟ್ಟುವಂತೆ ವಿಡಿಯೋ ಮೂಲಕ ತೋರಿಸೋ ಶ್ರದ್ಧಾ ಅವರ ಪ್ರತಿಭೆಗೆ ಕನ್ನಡಿಗರು ಮಾತ್ರವಲ್ಲ, ಹೊರ ರಾಜ್ಯದ ಮಂದಿಯೂ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶ್ರದ್ಧಾ ಬಿಟೌನ್‌ನಲ್ಲಿ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಇದನ್ನೂ ಓದಿ: ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ಬಾಲಿವುಡ್ ನಟ ಆಯುಷ್ಮಾನ್ ಖುರಾನ(Ayushman khurran) ಜೊತೆ `ಡಾಕ್ಟರ್ ಜಿ’ (Doctor G) ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ. ಆಯುಷ್ಮಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಜತೆ ಶ್ರದ್ಧಾ ಕೂಡ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಪಾತ್ರಕ್ಕೆ ಕನ್ನಡದ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Shraddha (@aiyyoshraddha)

    ಅನುಭೂತಿ ನಿರ್ದೇಶನದ ʻಡಾಕ್ಟರ್‌ ಜಿʼ ಚಿತ್ರದಲ್ಲಿ  ಕನ್ನಡದ ನಟಿರೊಬ್ಬರು ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿರೋದು ಅಯ್ಯೋ ಶ್ರದ್ಧಾ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಅವರ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲವ್ ಸ್ಟೋರಿ ಬಹಿರಂಗ ಪಡಿಸಿದ ರಕುಲ್ ಪ್ರೀತ್ ಸಿಂಗ್

    ಲವ್ ಸ್ಟೋರಿ ಬಹಿರಂಗ ಪಡಿಸಿದ ರಕುಲ್ ಪ್ರೀತ್ ಸಿಂಗ್

    ಮುಂಬೈ: ನಟಿ ರಕುಲ್ ಪ್ರೀತ್ ಸಿಂಗ್ ನಿನ್ನೆ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಲವ್ ಸ್ಟೋರಿಯನ್ನು ಬಹಿರಂಗ ಪಡಿಸಿದ್ದರು. ಈಗ ಮುಂಬೈನ ಪಾಪರಾಜಿ ಫೋಟೋಗ್ರಾಫರ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

    ಸದ್ಯ ಬಹುಬೇಡಿಕೆಯಲ್ಲಿ ಇರುವ ನಟಿಯ ಸಾಲಿಗೆ ರಕುಲ್ ಪ್ರೀತ್ ಸಿಂಗ್ ಕೂಡಾ ಸೇರುತ್ತಾರೆ. ಇವರು ನಿನ್ನೆ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಇಂದು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದಾರೆ.

    ಫೋಟೋಗ್ರಾಫರ್ ಮತ್ತು ಕ್ಯಾಮರಾಮ್ಯಾನ್‍ಗಳ ಜೊತೆಗೆ ಕೇಕ್ ಕತ್ತರಿಸಿ ನಟಿ ರಕುಲ್ ಪ್ರೀತ್ ಸಿಂಗ್ ಸಂಭ್ರಮಿಸಿದ್ದಾರೆ. ಸಿಂಗ್ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಹಸಿರು ಬಣ್ಣದ ಉಡುಪು ತೊಟ್ಟಿದ್ದ ನಟಿ ರಕುಲ್ ಪ್ರೀತ್ ಸಿಂಗ್ ಮಿರಿ ಮಿರಿ ಮಿಂಚಿದ್ದಾರೆ. ಇದನ್ನೂ ಓದಿ: ಗಾನಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

    ರಕುಲ್ ಪ್ರೀತಿ ಸಿಂಗ್ ಅವರ ಬಾಯ್‍ಫ್ರೆಂಡ್ ನಟ, ನಿರ್ಮಾಪಕ ಜ್ಯಾಕಿ ಭಗ್ನಾನಿ ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಇನ್‌ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ಸೊಸೆ ಕತ್ತು ಸೀಳಿದ ಮಾವ- 8ರ ಕಂದಮ್ಮ ಅನಾಥ

    ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜ್ಯಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್‍ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್ ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೈಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.