Tag: Rakul Preet Singh

  • ಮದುವೆ ನಂತರ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ನಟಿ ರಕುಲ್

    ಮದುವೆ ನಂತರ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ನಟಿ ರಕುಲ್

    ಗಾಗಲೇ ಅನೇಕ ನಟ ನಟಿಯರು ನಟನೆಯ ಜೊತೆ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಅನೇಕರು ಹೋಟೆಲ್ (Hotel) ಉದ್ಯಮದತ್ತ ಮುಖ ಮಾಡಿದ್ದಾರೆ. ಆ ಸಾಲಿಗೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಸೇರಿಕೊಂಡಿದ್ದಾರೆ. ಮದುವೆ ನಂತರ ಅವರು ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

    ಏಪ್ರಿಲ್ 16ರಿಂದ ರಕುಲ್ ಅವರ ಹೋಟೆಲ್ ಹೈದರಾಬಾದ್ (Hyderabad) ನಲ್ಲಿ ಆರಂಭವಾಗಲಿದ್ದು, ಆ ರೆಸ್ಟೋರೆಂಟ್ ಗೆ ಆರಂಭಮ್ ಎಂದು ಹೆಸರಿಟ್ಟಿದ್ದಾರೆ. ಹೋಟೆಲ್ ಗಿಂತ ಮೊದಲು ಅವರು ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ಜಿಮ್ ಕೂಡ ಹೊಂದಿದ್ದಾರೆ.

    ಇತ್ತೀಚೆಗಷ್ಟೇ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ (Jackky Bhagnani) ಜೋಡಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. 5 ವರ್ಷಗಳ ಡೇಟಿಂಗ್‌ ನಂತರ ಮದುವೆಯ ಮುದ್ರೆ ಒತ್ತಿದ್ದರು.

     

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಈ ಜೋಡಿಗೆ ಶುಭಾಶಯ ಕೋರಿದ್ದರು.

  • ಮದುವೆ ಬಳಿಕ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸಿದ ರಕುಲ್

    ಮದುವೆ ಬಳಿಕ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸಿದ ರಕುಲ್

    ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ ಫೆ.21ರಂದು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ರಕುಲ್ ದಂಪತಿಗೆ ಅಯೋಧ್ಯೆಯಿಂದ ಪ್ರಸಾದ ಸಿಕ್ಕಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಮದುವೆ ಸಂಭ್ರಮ ಮುಗಿಸಿ ಇದೀಗ ರಕುಲ್ ದಂಪತಿ, ಮುಂಬೈ ನಿವಾಸಕ್ಕೆ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಅಯೋಧ್ಯೆಯಿಂದ ರಕುಲ್‌ಗೆ ಪ್ರಸಾದ ಸಿಕ್ಕಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಮ್ಮ ಮದುವೆಯ ನಂತರ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸುತ್ತಿರೋದು ನಮಗೆ ಸಿಕ್ಕ ಆಶೀರ್ವಾದ. ನಮ್ಮ ಮುಂದಿನ ಹೆಜ್ಜೆಗೆ ದೈವಿಕ ಆರಂಭ ಎಂದು ರಕುಲ್ ಬರೆದುಕೊಂಡಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿ ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದರು. ಫೆ.21ರಂದು ಎರಡು ಸಂಪ್ರದಾಯದಂತೆ ವಿವಾಹ ಜರುಗಿತ್ತು. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಕುಲ್- ಜಾಕಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

    ರಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಕುಲ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ನಟಿಸಿದ್ದಾರೆ. ಕನ್ನಡದ ‘ಗಿಲ್ಲಿ’ (Gilli Kannada Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ರಕುಲ್ ಮದುವೆಗೆ ಶುಭ ಹಾರೈಸಿದ ಪಿಎಂ ನರೇಂದ್ರ ಮೋದಿ

    ರಕುಲ್ ಮದುವೆಗೆ ಶುಭ ಹಾರೈಸಿದ ಪಿಎಂ ನರೇಂದ್ರ ಮೋದಿ

    ಬಾಲಿವುಡ್ ನಟಿ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ (Jackky Bhagnani) ಜೋಡಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭ ಹಾರೈಸಿದ್ದಾರೆ. ಇದೇ ಫೆ.21ರಂದು ಗೋವಾದಲ್ಲಿ ಅದ್ಧೂರಿಯಾಗಿ ಈ ಜೋಡಿ ಮದುವೆ ಆಗಿತ್ತು. ಮದುವೆಗೆ ಮೋದಿ ಶುಭ ಹಾರೈಸಿ ಪತ್ರ ಬರೆದಿದ್ದಾರೆ. ಅದನ್ನು ರಕುಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಜೋಡಿಯ ಎರಡು ಸಂಪ್ರದಾಯದಂತೆ ವಿವಾಹ (Marriage) ನಡೆದಿದೆ. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಕುಲ್- ಜಾಕಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯ ಶಾಸ್ತ್ರವೆಲ್ಲ ಫೆ.19ರಿಂದಲೇ ಆರಂಭವಾಗಿತ್ತು. ಫೆ.21ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ರಕುಲ್- ಜಾಕಿ ಜೋಡಿ ಮದುವೆಯಾಗಿದ್ದಾರೆ.

    ರಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

     

    ಈ ಸಮಯದಲ್ಲಿ ರಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  • ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ

    ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ

    ನ್ನಡದ ‘ಗಿಲ್ಲಿ’ ನಟಿ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ (Jackky Bhagnani) ಜೋಡಿ ಇದೇ ಫೆ.21ರಂದು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು. 5 ವರ್ಷಗಳ ಡೇಟಿಂಗ್‌ ನಂತರ ಮದುವೆಯ ಮುದ್ರೆ ಒತ್ತಿದ್ದರು. ಇದೀಗ ಮದುವೆ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ರಕುಲ್ ದಂಪತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬರಲಿದೆ ‘ಜೈಲರ್ ಪಾರ್ಟ್ 2’- ತಲೈವಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಜಾಕಿ ಭಗ್ನಾನಿ ಸಹೋದರ ನಿಕ್ಕಿ ಜೊತೆ ನವಜೋಡಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಧು ರಕುಲ್ ಮಾಡ್ರನ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಎದುರಿಗೆ ರಕುಲ್ ಜೋಡಿ ಬಂದಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದಾರೆ. ನವಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    ಎರಡು ಸಂಪ್ರದಾಯದಂತೆ ವಿವಾಹ ನಡೆದಿದೆ. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಕುಲ್- ಜಾಕಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯ ಶಾಸ್ತ್ರವೆಲ್ಲ ಫೆ.19ರಿಂದಲೇ ಆರಂಭವಾಗಿತ್ತು. ಫೆ.21ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ರಕುಲ್- ಜಾಕಿ ಜೋಡಿ ಮದುವೆಯಾಗಿದ್ದಾರೆ.

    ರಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಸಮಂತಾ ನಿಜವಾದ ವಯಸ್ಸು ಎಷ್ಟು? ಮೆಟಾಬಾಲಿಕ್ ಏಜ್‌ ಅಂದ್ರೆ ಏನು? – ಖಾಸಗಿ ವಿಚಾರ ಬಾಯ್ಬಿಟ್ಟ ನಟಿ

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೇಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್

    ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್

    ನ್ನಡದ ‘ಗಿಲ್ಲಿ’ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಹುಕಾಲದ ಗೆಳೆಯ ಜಾಕಿ ಭಗ್ನಾನಿ (Jackky Bhagnani) ಜೊತೆ ಹೊಸ ಬಾಳಿಗೆ (Wedding) ಕಾಲಿಟ್ಟಿದ್ದಾರೆ. ಗೋವಾದಲ್ಲಿ ರಾಕುಲ್ ದಂಪತಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಾಕುಲ್‌ ಶೇರ್‌ ಮಾಡಿದ್ದಾರೆ. ಕ್ರೀಮ್‌- ಗೋಲ್ಡನ್‌ ಉಡುಗೆಯಲ್ಲಿ ರಾಕುಲ್‌ ದಂಪತಿ ಮಿಂಚಿದ್ದಾರೆ. ನವಜೋಡಿಗೆ ಫ್ಯಾನ್ಸ್‌ ಶುಭಹಾರೈಸುತ್ತಿದ್ದಾರೆ.

    ಎರಡು ಸಂಪ್ರದಾಯದಂತೆ ವಿವಾಹ ನಡೆದಿದೆ. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಾಕುಲ್‌- ಜಾಕಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯ ಶಾಸ್ತ್ರವೆಲ್ಲ ಫೆ.19ರಿಂದಲೇ ಆರಂಭವಾಗಿತ್ತು. ಫೆ.21ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ರಾಕುಲ್- ಜಾಕಿ ಜೋಡಿ ಮದುವೆಯಾಗಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

    ರಾಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಧನುಷ್ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದ ಟೈಟಲ್ ಫಿಕ್ಸ್

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಾಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಾಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೇಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ನ್ನಡದ ‘ಗಿಲ್ಲಿ’ (Gilli Kannada Film) ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಇದೀಗ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ (Jackky Bhagnani) ಜೊತೆ ಇದೇ ಫೆ.21ರಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ವಿಶೇಷವಾಗಿ ರಾಕುಲ್ ಮದುವೆಯಲ್ಲಿ ಕರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ರಾಜ್ ಕುಂದ್ರಾ ದಂಪತಿ ಹೆಜ್ಜೆ ಹಾಕಲಿದ್ದಾರೆ.

    ರಾಕುಲ್ ಮತ್ತು ಜಾಕಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಲು ಇಡೀ ಬಾಲಿವುಡ್ ರಂಗ ಕಾಯುತ್ತಿದೆ. ನಿರ್ಮಾಪಕ ಜಾಕಿ ತಂದೆ ವಶು ಭಗ್ನಾನಿ ಜೊತೆ ರಾಜ್ ಕುಂದ್ರಾಗೆ ಉತ್ತಮ ಬಾಂಧವ್ಯವಿದೆ. ಹಲವು ವರ್ಷಗಳಿಂದ ಪರಿಚಯ ಇರುವ ಕಾರಣ, ಜಾಕಿ ಮದುವೆಯಲ್ಲಿ ರಾಜ್ (Raj Kundra) ಮತ್ತು ಶಿಲ್ಪಾ ಶೆಟ್ಟಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ.

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು. ಇದನ್ನೂ ಓದಿ:ವಿದ್ಯಾರ್ಥಿನಿಯರ ವಿಚಿತ್ರ ಬೇಡಿಕೆ- ವಿಜಯ್ ದೇವರಕೊಂಡ ಪ್ರತಿಕ್ರಿಯೆ

    ಈ ಸಮಯದಲ್ಲಿ ರಾಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್‌ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ಗೆಳೆಯನ ಜೊತೆಯೆ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ರಾಕುಲ್ ಮದುವೆಯಲ್ಲಿ ವರುಣ್ ಧವನ್, ಇಶಾ ಡಿಯೋಲ್, ಆದಿತ್ಯಾ ರಾಯ್ ಕಪೂರ್- ಅನನ್ಯಾ ಪಾಂಡೆ, ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ದಂಪತಿ, ಶಾರುಖ್ ಖಾನ್ ಫ್ಯಾಮಿಲಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಜೊತೆ ಮೃಣಾಲ್ ಠಾಕೂರ್ ರೊಮ್ಯಾನ್ಸ್

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಾಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೆಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ಗೋವಾದಲ್ಲಿ ನಟಿ ರಕುಲ್ ಮದುವೆ: ಪ್ರೀತಿಸಿದ ಹುಡುಗನ ಕೈ ಹಿಡಿದ ನಟಿ

    ಗೋವಾದಲ್ಲಿ ನಟಿ ರಕುಲ್ ಮದುವೆ: ಪ್ರೀತಿಸಿದ ಹುಡುಗನ ಕೈ ಹಿಡಿದ ನಟಿ

    ಗಿಲ್ಲಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ರಕುಲ್ ಪ್ರೀತಿ ಸಿಂಗ್ (Rakul Preet Singh) ಫೆ.21ರಂದು ಗೋವಾದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್ ನ ಅನೇಕ ನಟಿಯರು ವಿದೇಶಗಳಲ್ಲಿ ಮದುವೆ ಪ್ಲ್ಯಾನ್ ಮಾಡಿದ್ದರೆ, ರಕುಲ್ ಮಾತ್ರ ಗೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಈಗಾಗಲೇ ಆಹ್ವಾನ ಕೂಡ ನೀಡಲಾಗಿದೆ.

    ಮೊನ್ನೆಯಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಕುಲ್ ಪ್ರೀತಿ ಸಿಂಗ್ ಅವರ ಬಾಯ್‍ಫ್ರೆಂಡ್ ನಟ, ನಿರ್ಮಾಪಕ ಜ್ಯಾಕಿ ಭಗ್ನಾನಿ ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಇನ್‌ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜ್ಯಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್‍ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್ ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ಗೆಳೆಯನ ಜೊತೆಯೆ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೈಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ‌Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

    ‌Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

    ಬಾಲಿವುಡ್‌ನಲ್ಲಿ ಸದ್ಯ ಸಂಚಲನ ಸೃಷ್ಟಿಸುತ್ತಿರುವ ಸಿನಿಮಾ ಅಂದರೆ ರಾಮಾಯಣ. ನಿತೇಶ್ ತಿವಾರಿ ಅವರು ಅಧಿಕೃತ ಘೋಷಣೆ ಮಾಡುವ ಮುನ್ನವೇ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಜಾನ್ವಿ ಕಪೂರ್ ನಟಿಸಿದ್ರೆ ಶೂರ್ಪನಖಿ ಪಾತ್ರಕ್ಕೆ ಕನ್ನಡದ ‘ಗಿಲ್ಲಿ’ (Gilli Kannada Film) ನಟಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ್ದ ಅಧಿಕಾರಿ ಎತ್ತಂಗಡಿ

    ಆದಿಪುರುಷ್ ಸಿನಿಮಾ ನಂತರ ‘ರಾಮಾಯಣ’ (Ramayana) ಕಾವ್ಯ ಆಧರಿಸಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ರಾಮಾಯಣ ಸಿನಿಮಾ ದಿನಕ್ಕೊಂದು ಅಪ್‌ಡೇಟ್ ಹೊರಬೀಳುತ್ತಿದೆ. ಹೀಗಿರುವಾಗ ಬಾಲಿವುಡ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಈಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.

    ರಾಮಾಯಣದಲ್ಲಿ ಇಡೀ ಕಥೆಗೆ ತಿರುವುದು ರಾವಣನ ಸಹೋದರಿ ಶೂರ್ಪನಖಿ. ಹಾಗಾಗಿ ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಈಗ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಇಡೀ ಕಥೆಯಲ್ಲಿ ಶೂರ್ಪನಖಿ ಪಾತ್ರ ಚಿಕ್ಕದು. ಆದರೆ ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಸದ್ಯ ಈ ಪಾತ್ರಕ್ಕಾಗಿ ರಾಕುಲ್ ಪ್ರೀತ್ ಸಿಂಗ್ ಜೊತೆ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

    3 ಭಾಗಗಳಾಗಿ ‘ರಾಮಾಯಣ’ ಚಿತ್ರವನ್ನು ತೆರೆಗೆ ತರುತ್ತಾರೆ ಎನ್ನಲಾಗ್ತಿದೆ. ಮುಂದಿನ ವರ್ಷ ಪಾರ್ಟ್-1 ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಕೈಕೆಯಿ ಪಾತ್ರಕ್ಕೆ ಲಾರಾ ದತ್ತಾ, ವಿಭಿಷಣ ಪಾತ್ರಕ್ಕೆ ವಿಜಯ್ ಸೇತುಪತಿ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಲಾಗಿತ್ತು. ಇದೀಗ ಶೂರ್ಪನಖಿ ಪಾತ್ರಕ್ಕಾಗಿ ಈಗಾಗಲೇ ಕನ್ನಡದ ‘ಗಿಲ್ಲಿ’ ನಟಿ ಲುಕ್ ಟೆಸ್ಟ್ ಸಹ ನಡೆದಿದೆ ಎನ್ನಲಾಗ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ.

    ದೆಹಲಿ ಬೆಡಗಿ ರಾಕುಲ್ ಮೊದಲು ನಟಿಸಿದ್ದು, ಕನ್ನಡದ ‘ಗಿಲ್ಲಿ’ ಸಿನಿಮಾದಲ್ಲಿ ಎಂಬುದು ವಿಶೇಷ. ಖ್ಯಾತ ನಟ ಜಗ್ಗೇಶ್ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ರಾಕುಲ್ ಸಿನಿಮಾ ಜರ್ನಿ ಶುರು ಮಾಡಿದ್ದರು. ಇದೀಗ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ರಾಕುಲ್ ನೆಲೆ ಗಿಟ್ಟಿಸಿಕೊಂಡಿದ್ದಾರೆ.

  • ಬಾಲಿವುಡ್ ನಿರ್ಮಾಪಕನ ಜೊತೆ ಮದುವೆಗೆ ಸಜ್ಜಾದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಬಾಲಿವುಡ್ ನಿರ್ಮಾಪಕನ ಜೊತೆ ಮದುವೆಗೆ ಸಜ್ಜಾದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ನ್ನಡದ ‘ಗಿಲ್ಲಿ’ (Gilli Kannada Film) ನಾಯಕಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ಮದುವೆಗೆ (Wedding)  ರಾಕುಲ್ ಸಜ್ಜಾಗಿದ್ದಾರೆ. ಅದಷ್ಟೇ ಅಲ್ಲ, ಮದುವೆಗೆ ಡೇಟ್ ಕೂಡ ಫಿಕ್ಸ್ ಆಗಿದೆ.

     

    ನಟಿ ರಾಕುಲ್ ಅವರು ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆ ಫೆಬ್ರವರಿ 22ರಂದು ಮದುವೆಗೆ ಪ್ಲ್ಯಾನ್ ಮಾಡಿದ್ದಾರೆ. ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

     

    ಸದ್ಯ ರಾಕುಲ್ ಅವರು ಬಾಯ್‌ಫ್ರೆಂಡ್ ಜಾಕಿ ಜೊತೆ ವಿದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದಾರೆ.

     

    ಅಂದಹಾಗೆ, ರಾಕುಲ್- ಜಾಕಿ ಜೋಡಿ ಕಳೆದ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಗೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಹೆಣ್ಣು ಮಕ್ಕಳನ್ನು ಫುಶ್‌ ಮಾಡಲಾಗ್ತಿದ್ಯಾ? ಮೈಕಲ್‌ ಆರೋಪಕ್ಕೆ ಸುದೀಪ್‌ ಸ್ಪಷ್ಟನೆ

    ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಾಕುಲ್ ಅವರು ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  • ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ಬಾಲಿವುಡ್‌ನಲ್ಲಿ 7 ಸಿನಿಮಾಗಳು ಫ್ಲಾಪ್, ಮತ್ತೆ ಸೌತ್‌ನತ್ತ ‘ಗಿಲ್ಲಿ’ ನಟಿ

    ನ್ನಡದ ‘ಗಿಲ್ಲಿ’ ಸಿನಿಮಾ (Gilli Film) ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸೌತ್ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಹಾರಿದ್ದರು. ಸತತ 7 ಸಿನಿಮಾಗಳ ಸೋಲಿನ ನಂತರ ಈಗ ಮತ್ತೆ ದಕ್ಷಿಣ ಸಿನಿಮಾಗಳತ್ತ ರಾಕುಲ್ ಮುಖ ಮಾಡಿದ್ದಾರೆ. ತಮಿಳಿನ ನಟ ಶಿವಕಾರ್ತಿಕೇಯನ್‌ಗೆ ‘ಗಿಲ್ಲಿ’ ಬ್ಯೂಟಿ ಹೀರೋಯಿನ್ ಆಗಿದ್ದಾರೆ.

    ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯಿರುವಾಗಲೇ ಇಲ್ಲಿನ ಸಿನಿಮಾ ಬೇಡ ಅಂತಾ ಕಡೆಗಣಿಸಿ ಬಾಲಿವುಡ್ ಚಿತ್ರಗಳಿಗೆ ರಾಕುಲ್ ಮಣೆ ಹಾಕಿದ್ದರು. 2014ರಿಂದಲೇ ಹಿಂದಿ ಸಿನಿಮಾರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದರು. ಬಳಿಕ ಅಟ್ಯಾಕ್, ರನ್‌ವೇ 34, ಕಟ್‌ಪುತ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್, ಐ ಲವ್ ಯೂ, ಛತ್ರಿವಾಲಿ ಸಿನಿಮಾಗಳು ಮಕಾಡೆ ಮಲಗಿವೆ. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ

    ಬಾಲಿವುಡ್‌ನ 7 ಸಿನಿಮಾಗಳು ಸೋತ ಮೇಲೆ ಈಗ ಸೌತ್ ಸಿನಿಮಾಗಳಿಗೆ ನಟಿ ಮಣೆ ಹಾಕಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ನಟನೆಯ ‘ಅಲಾಯನ್’ (Ayalaan) ಸಿನಿಮಾಗೆ ರಾಕುಲ್ ನಾಯಕಿಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ (Indian 2) ಹೀರೋಯಿನ್ ಆಗಿ ಸಾಥ್ ನೀಡಿದ್ದಾರೆ. 7 ಸಿನಿಮಾ ಸೋತ ಮೇಲೆ ಬುದ್ಧಿ ಬಂತಾ ಎಂದು ನೆಟ್ಟಿಗರು ರಾಕುಲ್ ಕಾಲೆಳೆದಿದ್ದಾರೆ.

    ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಾಕುಲ್, ಪಾಕೆಟ್ ಮನಿಗಾಗಿ ‘ಗಿಲ್ಲಿ’ ಸಿನಿಮಾ ಮಾಡಿದೆ ಎಂದು ಮಾತನಾಡಿದ್ದರು. ಅಂದು ಅವರ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]