Tag: Rakul Preet Singh

  • ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಗಿಲ್ಲಿ’ ನಟಿ ರಕುಲ್

    ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಗಿಲ್ಲಿ’ ನಟಿ ರಕುಲ್

    ನ್ನಡದ ‘ಗಿಲ್ಲಿ’ (Gilli Kannada Film) ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಬೆಡ್‌ರೂಮ್ ಫೋಟೋಶೂಟ್‌ ಹಂಚಿಕೊಂಡು ಸಖತ್‌ ವೈರಲ್‌ ಆಗ್ತಿದ್ದಾರೆ. ನಟಿಯ ಪೋಸ್ಟ್‌ ನೋಡಿ ‘ನಿನ್ನ ಗಂಡ ಎಲ್ಲಮ್ಮ’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ:ನಾನು ಸಿನಿಮಾ ಸಕ್ಸಸ್‌ಗೆ ಪ್ರಾರ್ಥಿಸಲ್ಲ: ಸೀಕ್ರೆಟ್ ಬಿಚ್ಚಿಟ್ಟ ಸಲ್ಮಾನ್ ಖಾನ್

    ಪಿಂಕ್ ಡ್ರೆಸ್‌ನಲ್ಲಿ ರಕುಲ್ ಮಿಂಚಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ನಗುವುದು ಕೂಡ ಜೀವನದ ಒಂದು ವಿಧಾನ’ ಎಂದು ಹೊಸ ಪೋಸ್ಟ್‌ಗೆ ರಕುಲ್ ಅಡಿಬರಹ ನೀಡಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲು ಇದು ನಿಮ್ಮ ದಾರಿ ಎಂದೆಲ್ಲಾ ನಟಿಗೆ ನೆಟ್ಟಿಗರು ಟೀಕಿಸಿದ್ದಾರೆ. ಬಗೆ ಬಗೆಯ ಕಾಮೆಂಟ್‌ಗಳು ನಟಿಯ ಪೋಸ್ಟ್‌ಗೆ ಹರಿದು ಬರುತ್ತಿವೆ. ಇದನ್ನೂ ಓದಿ:ಯುಗಾದಿ ಸಂಭ್ರಮ ಹೆಚ್ಚಿಸುವ ಸಿನಿಮಾ ಹಾಡುಗಳು

    ರಕುಲ್‌ಗೆ ಈಗ ಬೇಡಿಕೆ ಕಮ್ಮಿಯಾಗಿದೆ. ಆಗೊಂದು ಈಗೊಂದು ಸಿನಿಮಾ ಮಾಡ್ತಿರುತ್ತಾರೆ. ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

    ತಮಿಳಿನ ‘ದಿಶಾ’, ಬಾಲಿವುಡ್‌ನ ‘ದೇ ದೇ ಪ್ಯಾರ್ ದೇ 2’ ಸಿನಿಮಾಗಳಲ್ಲಿ ರಕುಲ್ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಸೋಲುಗಳಿಂದ ಕಂಗಲಾಗಿರೋ ನಟಿ, ಈಗ ಯಶಸ್ಸಿಗಾಗಿ ಎದುರು ನೋಡ್ತಿದ್ದಾರೆ.

    2024ರಲ್ಲಿ ನಿರ್ಮಾಪಕ ಕಮ್‌ ನಟ ಜಾಕಿ ಭಗ್ನಾನಿ ಜೊತೆ ರಕುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದರು.

    ಕನ್ನಡದ ‘ಗಿಲ್ಲಿ’ ಸಿನಿಮಾದಲ್ಲಿ ಜಗ್ಗೇಶ್ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಅವರು ಬಣ್ಣದ ಬದುಕಿಗೆ ಕಾಲಿಟ್ಟರು.

  • ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ: ರಕುಲ್ ಪ್ರೀತ್ ಸಿಂಗ್

    ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ: ರಕುಲ್ ಪ್ರೀತ್ ಸಿಂಗ್

    ಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಸೌತ್ ಮತ್ತು ಬಾಲಿವುಡ್ (Bollywood) ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನ್‌ವೊಂದರಲ್ಲಿ ನೆಪೋಟಿಸಂನಿಂದ ಎದುರಿಸಿದ ಸಮಸ್ಯೆಯ ಕುರಿತು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಕೆಜಿಎಫ್‌ 2’ ಸಿಂಗರ್‌ ಜೊತೆ ಎಂಗೇಜ್‌ ಆದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್‌ ಮರವಂತೆ

    ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ. ಇದರಿಂದ ಹಲವು ಅವಕಾಶಗಳು ಕೈತಪ್ಪಿವೆ. ಅದನ್ನೇ ಇಟ್ಟುಕೊಂಡು ದ್ವೇಷ ಸಾಧಿಸುವ ವ್ಯಕ್ತಿ ನಾನಲ್ಲ. ನನ್ನ ತಂದೆ ಸೈನ್ಯದಲ್ಲಿದ್ದವರು. ನಾನು ಕೂಡ ಸೈನ್ಯಕ್ಕೆ ಸೇರಲು ನಿರ್ಧರಿಸಿದ್ದರೆ, ಅವರು ನನಗೆ ಸಹಾಯ ಮಾಡುತ್ತಿದ್ದರು, ಸಲಹೆ ನೀಡುತ್ತಿದ್ದರು. ಅದನ್ನು ತಪ್ಪು ಎಂದು ಹೇಳಲಾಗದು ಎಂದು ನೆಪೋಟಿಸಂ ಪರವಾಗಿಯೇ ರಕುಲ್ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಇದೀಗ ಪರ ವಿರೋಧದ ಚರ್ಚೆಯಾಗುತ್ತಿದೆ.

    ಇನ್ನೂ ಜುಲೈ 12ರಂದು ‘ಇಂಡಿಯನ್ 2’ (Indian 2) ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕಮಲ್ ಹಾಸನ್, ಸಿದ್ಧಾರ್ಥ್ ಜೊತೆ ರಕುಲ್ ನಟಿಸಿದ್ದರು. ಇದೀಗ ಅಜಯ್ ದೇವಗನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಜೊತೆ ಟಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

    2009ರಲ್ಲಿ ಕನ್ನಡದ ಗಿಲ್ಲಿ ಸಿನಿಮಾದಲ್ಲಿ ಜಗ್ಗೇಶ್‌ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ರಕುಲ್‌ ನಟಿಸಿದರು. ಬಳಿಕ ಸೌತ್‌ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡರು.

  • ರಕುಲ್ ದಾಂಪತ್ಯ ಮುರಿದು ಬೀಳಲಿದೆ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ರಕುಲ್ ದಾಂಪತ್ಯ ಮುರಿದು ಬೀಳಲಿದೆ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

    ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಕುರಿತು ಭವಿಷ್ಯ ಹೇಳುತ್ತಾ ಆಗಾಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ಜ್ಯೋತಿಷಿ ವೇಣುಸ್ವಾಮಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡದ ‘ಗಿಲ್ಲಿ’ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ದಾಂಪತ್ಯ ಬದುಕು ಮುರಿದು ಬೀಳಲಿದೆ ಎಂದು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಪುತ್ರನ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ಹಲವು ವರ್ಷಗಳು ಪ್ರೀತಿಸಿ ಇತ್ತೀಚೆಗೆ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಕುಲ್ ಮದುವೆಯಾದರು. ಖುಷಿಯಿಂದ ಜೀವನ ಸಾಗಿಸುತ್ತಿರುವ ಈ ಜೋಡಿಯ ಬಗ್ಗೆ ವೇಣುಸ್ವಾಮಿ ಸ್ಪೋಷಕ ಭವಿಷ್ಯ ಹೇಳಿದ್ದಾರೆ. ರಕುಲ್ ದಾಂಪತ್ಯದಲ್ಲಿ ಬಿರುಕು ಮೂಡಲಿದೆ. ಸಾಲದ ಕಾರಣ ಇಬ್ಬರೂ ಬೇರೆಯಾಗುತ್ತಾರೆ. ರಕುಲ್‌ಗೆ ಪತಿಯೇ ಡಿವೋರ್ಸ್ ನೀಡಲಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.

    ಇತ್ತೀಚೆಗೆ ಶೋಭಿತಾ ಜೊತೆಗಿನ ನಾಗಚೈತನ್ಯ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದರು. ಈ ಮದುವೆ ಕೂಡ ಹೆಚ್ಚು ದಿನ ಬಾಳಲ್ಲ ಎಂದಿದ್ದರು. ಅವರ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಕೋಪದ ಕಾವು ಮಾಸುವ ಮುನ್ನವೇ ರಕುಲ್ ಬಗ್ಗೆ ಜ್ಯೋತಿಷಿ ಮಾತನಾಡಿರೋದು ಫ್ಯಾನ್ಸ್‌ಗೆ ಕೋಪ ತರಿಸಿದೆ.

    ಅಂದಹಾಗೆ, ಕೆಲ ವರ್ಷಗಳ ಹಿಂದೆ ನಾಗಚೈತನ್ಯ ಜೊತೆ ಸಮಂತಾ (Samantha) ಮದುವೆ ಸಮದರ್ಭದಲ್ಲಿ, ಇವರ ದಾಂಪತ್ಯದಲ್ಲಿ ಬಿರುಕಾಗಲಿದೆ ಎಂದಿದ್ದರು. ಅದರಂತೆಯೇ ಆಯಿತು. 2021ರಲ್ಲಿ ಇಬ್ಬರೂ ಡಿವೋರ್ಸ್ ಘೋಷಿಸಿದ್ದರು.

  • ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್; 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

    ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್; 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

    ಮಾದಕ ವಸ್ತು ಪ್ರಕರಣದಲ್ಲಿ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸಹೋದರ ಅಮನ್ ಪ್ರೀತ್‌ ಸಿಂಗ್ (Aman Preet Singh) ಅವರನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಗನ ಮದುವೆ ಬೆನ್ನಲ್ಲೇ ಕ್ಷಮೆಯಾಚಿಸಿದ ನೀತಾ ಅಂಬಾನಿ

    ಸೈಬರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾರ್ಕೋಟಿಕ್ಸ್ ಬ್ಯೂರೋ ಮತ್ತು ರಾಜೇಂದ್ರ ನಗರ ಎಸ್‌ಒಟಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ನಂತರ ಮಾದಕವಸ್ತು ಪ್ರಕರಣದಲ್ಲಿ ಸಂಬಂಧಪಟ್ಟಿರುವುದಾಗಿ ಅವರನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮೂಲಗಳ ಪ್ರಕಾರ, ಅಮನ್ ಪ್ರೀತ್ ನಾಲ್ವರು ನೈಜೀರಿಯನ್ನರಿಂದ ಕೊಕೇನ್‌ ಖರೀದಿಸುತ್ತಿದ್ದರು. ಈ ವೇಳೆ ಅವರನ್ನ ಬಂಧಿಸಲಾಗಿದೆ. ಇದೇ ವೇಳೆ ಸುಮಾರು 2 ಕೋಟಿ ರೂ. ಮೌಲ್ಯದ 200 ಗ್ರಾಮ್ ಕೊಕೇನ್ ಸಹ ವಶಪಡಿಸಿಕೊಂಡಿದ್ದಾರೆ. ಇದನ್ನು ಅನ್ನು ಅಮತ್ ಪ್ರೀತ್ ಖರೀದಿಸಿದ್ದರು ಎಂದು ಹೇಳಲಾಗಿದೆ.


    ಈ ಹಿಂದೆ ಮಾದಕ ವಸ್ತು ಸೇವನೆ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ವಿಚಾರಣೆ ಎದುರಿಸಿದ್ದರು. ಹಲವು ಬಾರಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಸದ್ಯ ಅಮನ್‌ಪ್ರೀತ್ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಈ ಕಂಡೀಷನ್‌ಗೆ ಓಕೆ ಅಂದ್ರೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಲು ಸಿದ್ಧ: ರಕುಲ್

    ಈ ಕಂಡೀಷನ್‌ಗೆ ಓಕೆ ಅಂದ್ರೆ ಲಿಪ್‌ಲಾಕ್ ದೃಶ್ಯದಲ್ಲಿ ನಟಿಸಲು ಸಿದ್ಧ: ರಕುಲ್

    ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ‘ಇಂಡಿಯನ್ 2’ (Indian 2) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಲಿಪ್‌ಲಾಕ್ ದೃಶ್ಯದಲ್ಲಿ ನಟಿಸುವ ಬಗ್ಗೆ ನಟಿಗೆ ಪ್ರಶ್ನೆ ಎದುರಾಗಿದ್ದು, ನಟಿ ಖಡಕ್‌ ಆಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:ವೀರ್ ಪಹಾರಿಯಾ ಜೊತೆ ನಟಿ ಮಾನುಷಿ ಚಿಲ್ಲರ್ ಡೇಟಿಂಗ್

    ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ರಕುಲ್ ನಟಿಸುತ್ತಿದ್ದಾರೆ. ಮದುವೆಯಾದ್ಮೇಲೆ ಕೂಡ ಸಿನಿಮಾಗಳಲ್ಲಿ ನಟಿ ಆ್ಯಕ್ಟೀವ್ ಆಗಿದ್ದಾರೆ. ‘ಇಂಡಿಯನ್ 2’ ಚಿತ್ರದಲ್ಲಿ ತಮಿಳು ನಟ ಸಿದ್ಧಾರ್ಥ್‌ಗೆ ರಕುಲ್ ನಾಯಕಿಯಾಗಿ ನಟಿಸಿದ್ದಾರೆ. ಜು.12ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬೋಲ್ಡ್ ಆಗಿ ಹೇಳಿಕೆ ನೀಡಿರೋದು ವೈರಲ್ ಆಗಿದೆ.

    ನೀವು ಲಿಪ್‌ಲಾಕ್ ದೃಶ್ಯದಲ್ಲಿ ನಟಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ರಕುಲ್, ಅದು ಕಥೆಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಮೊದಲು ಹಾಗೇ ನಟಿಸಿದ್ದೇನೆ. ಸಿನಿಮಾ ಕಥೆಗೆ ಬೇಕಾದರೆ ಮಾಡುತ್ತೇನೆ. ಆದರೆ ಪ್ರಚಾರಕ್ಕಾಗಿ ಲಿಪ್‌ಲಾಕ್ ದೃಶ್ಯ ಹಾಕಿದರೆ ನಟಿಸಲ್ಲ ಕಂಡೀಷನ್‌ ಅಪ್ಲೈ ಆಗಲಿದೆ ಎಂದು ಮಾತನಾಡಿದ್ದಾರೆ.

    ಅಂದಹಾಗೆ, ಕನ್ನಡದ ‘ಗಿಲ್ಲಿ’ (Gilli Kannada) ಸಿನಿಮಾದ ಮೂಲಕ ನವರಸ ನಾಯಕ ಜಗ್ಗೇಶ್ ಪುತ್ರನಿಗೆ ನಾಯಕಿಯಾಗಿ ರಕುಲ್ ನಟಿಸಿದ್ದರು.

  • 250 ಕೋಟಿ ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಪತಿ

    250 ಕೋಟಿ ಸಾಲದ ಸುಳಿಯಲ್ಲಿ ರಕುಲ್ ಪ್ರೀತ್ ಸಿಂಗ್ ಪತಿ

    ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಪತಿ ಜಾಕಿ ಭಗ್ನಾನಿಗೆ (Jackky Bhagnani) ಸಂಕಷ್ಟ ಎದುರಾಗಿದೆ. ಮದುವೆಯಾಗಿ ಜಾಕಿ ಮನೆಗೆ ಕಾಲಿಟ್ಟ ಬೆನ್ನಲ್ಲೇ ನಟಿಯ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 250 ಕೋಟಿ ರೂ. ಸಾಲದ ಸುಳಿಯಲ್ಲಿ ಭಗ್ನಾನಿ ಕುಟುಂಬ ಸಿಲುಕಿದ್ದಾರೆ. ಇದನ್ನೂ ಓದಿ:ಸಮಂತಾ ಜೊತೆ ಶಾರುಖ್ ಖಾನ್ ರೊಮ್ಯಾನ್ಸ್

    ನಟಿ ರಕುಲ್ ಮಾವ ವಶು ಭಗ್ನಾನಿ ನೇತೃತ್ವದ ಪೂಜಾ ಎಂಟೈನ್‌ಮೆಂಟ್ ಸಂಸ್ಥೆ ಅಡಿ ಕಳೆದ 30 ವರ್ಷಗಳಿಂದ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ಆದರೆ ಇತ್ತೀಚೆಗೆ ನಿರ್ಮಾಣ ಮಾಡಿದ 2 ಸಿನಿಮಾಗಳಿಂದ ಭಗ್ನಾನಿ ಕುಟುಂಬಕ್ಕೆ ನಷ್ಟವಾಗಿದೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆರೆಕಂಡ ‘ಗಣಪತ್’ ಸಿನಿಮಾವನ್ನು ವಿಕಾಸ್ ಬಹ್ಲ್ ನಿರ್ದೇಶನ ಮಾಡಿದ್ದರೆ, ಟೈಗರ್ ಶ್ರಾಫ್ ಇದರ ಹೀರೋ ಆಗಿದ್ದರು. ಅದರಲ್ಲಿ ಬಿಗ್ ಬಿ ಪ್ರಮುಖ ಪಾತ್ರ ಮಾಡಿದ್ದರು. 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವು ಕಲೆಕ್ಷನ್ ಮಾಡಿದ್ದು 15+ ಕೋಟಿ ರೂ. ಮಾತ್ರ ಗಳಿಸಿದೆ.

    ಪೂಜಾ ಎಂಟರ್‌ಟೇನ್‌ಮೆಂಟ್ ಸಂಸ್ಥೆ ಚೇತರಿಸಿಕೊಳ್ಳುವುದಕ್ಕೂ ಸಮಯ ನೀಡಲಿಲ್ಲ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ. ಇದರಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟಿಸಿದ್ದರು. 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಕೇವಲ 100 ಕೋಟಿ ರೂ. ಕಲೆಕ್ಷನ್ ಮಾಡೋದ್ರಲ್ಲಿ ಸೋಸಿತ್ತು. ಈ ಪರಿಣಾಮ, ಭಗ್ನಾನಿ ಕುಟುಂಬವು ಈಗ ಸಂಕಷ್ಟ ಎದುರಿಸುತ್ತಿದೆ.

    ಅದಕ್ಕಾಗಿ ಪೂಜಾ ಎಂಟೈನ್‌ಮೆಂಟ್ ಸಂಸ್ಥೆಯ 7 ಅಂತಸ್ತಿನ ಕಚೇರಿಯನ್ನೇ ಮಾಡಲಾಗಿದೆ ಎನ್ನಲಾಗಿದೆ. ಇದಷ್ಟೇ ಅಲ್ಲ, 80% ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಇದುವರೆಗೂ ಮಾಡಿದ ಕೆಲಸಕ್ಕೆ 2 ತಿಂಗಳಿನಿಂದ ಉದ್ಯೋಗಿಗಳಿಗೆ ಸರಿಯಾದ ಸಂಬಳ ನೀಡಿಲ್ಲ. ಇದರಿಂದ ನೌಕರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಗೆ ಹಾಕಿದ್ದಾರೆ. ಭಗ್ನಾನಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ.

  • ಹೊಸ ಸಿನಿಮಾ ಒಪ್ಪಿಕೊಂಡ ರಕುಲ್ ಪ್ರೀತ್ ಸಿಂಗ್

    ಹೊಸ ಸಿನಿಮಾ ಒಪ್ಪಿಕೊಂಡ ರಕುಲ್ ಪ್ರೀತ್ ಸಿಂಗ್

    ಬಾಲಿವುಡ್ ಬೆಡಗಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮದುವೆ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆ ನಂತರ ಉದ್ಯಮ ಕ್ಷೇತ್ರಕ್ಕೆ ನಟಿ ಕಾಲಿಟ್ಟಿದ್ದರು. ಇದೀಗ ಹೊಸ ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾರೆ. ಮತ್ತೆ ಸಿನಿಮಾ ಚಿತ್ರೀಕರಣದತ್ತ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ರವೀನಾ ಟಂಡನ್ ರಸ್ತೆ ಅಪಘಾತ: ಪ್ರತಿಕ್ರಿಯೆ ಕೊಟ್ಟ ಕೆಜಿಎಫ್ ರಮಿಕಾ

    ಅಜಯ್ ದೇವಗನ್ (Ajay Devgn) ಜೊತೆ ಮತ್ತೆ ರಕುಲ್ ಕೈಜೋಡಿಸಿದ್ದಾರೆ. ‘ದೇ ದೇ ಪ್ಯಾರ್ ದೇ 2’ (De De Pyaar De 2) ಎಂಬ ಸಿನಿಮಾದಲ್ಲಿ ರಕುಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಸೆಟ್‌ನ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ‘ನನ್ನ ಫೇವರೇಟ್ ಸೆಟ್ ಹಿಂದಿರುಗಿದ್ದೇನೆ’ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ಇದನ್ನೂ ಓದಿ:ಡೇಟಿಂಗ್‌ಗೆ ಸಿಕ್ತು ಸಾಕ್ಷಿ- ಯುರೋಪ್‌ನಲ್ಲಿ ಸಿಕ್ಕಿಬಿದ್ದ ನಾಗಚೈತನ್ಯ, ಶೋಭಿತಾ ಜೋಡಿ

    ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಟಬು ಜೊತೆ ಅಜಯ್ ದೇವಗನ್, ರಕುಲ್ ನಟಿಸಿದ್ದರು. ಈ ಸಿನಿಮಾದ ಮುಂದುವರೆದ ಭಾಗವನ್ನು ಇದೀಗ ಶೂಟಿಂಗ್ ಮಾಡಲಾಗುತ್ತಿದೆ. ಮುಂದಿನ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ.

    ಚಿತ್ರದ ಪಾರ್ಟ್ 1ರಲ್ಲಿ ಅಜಯ್ ಮತ್ತು ರಕುಲ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಹಿಡಿಸಿತ್ತು. ‘ದೇ ದೇ ಪ್ಯಾರ್ ದೇ 2’ನಲ್ಲಿ ಕಥೆ ಮತ್ತು ಇಬ್ಬರ ರೊಮ್ಯಾನ್ಸ್ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • Ramayana: ಯಶ್ ಸಿನಿಮಾದಲ್ಲಿ ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್

    Ramayana: ಯಶ್ ಸಿನಿಮಾದಲ್ಲಿ ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್

    ನ್ನಡದ ‘ಗಿಲ್ಲಿ’ (Gilli Film) ನಟಿ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಇದೀಗ ಯಶ್ (Yash) ನಿರ್ಮಾಣದ‌ ರಾಮಾಯಣ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಶೂರ್ಪನಕಿಯಾಗಿ ‘ರಾಮಾಯಣ’ ಚಿತ್ರಕ್ಕೆ ರಕುಲ್ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ; ಮ್ಯೂಸಿಕ್‌ ಡೈರೆಕ್ಟರ್ ಜಿ.ವಿ ಪ್ರಕಾಶ್

    ನ್ಯಾಷನಲ್ ಸ್ಟಾರ್ ಯಶ್ ಸಹ ನಿರ್ಮಾಪಕನಾಗಿ ಕೈಜೋಡಿಸಿರುವ ‘ರಾಮಾಯಣ’ ಸಿನಿಮಾತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಲಂಕಾಧೀಶ ರಾವಣನ ಸಹೋದರಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ.

    ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಬಣ್ಣದ ಹಚ್ಚಿದ ನಟಿ ರಕುಲ್ ತೆಲುಗು ಸಿನಿಮಾಗಳ ನಂತರ ಬಾಲಿವುಡ್‌ನಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಇದೀಗ ರಾಮಾಯಣ ಸಿನಿಮಾದ ಆಫರ್ ಸಿಕ್ಕಾಗ ಸೂಕ್ತ ಅವಕಾಶ ಎನಿಸಿ ನಟಿ ಓಕೆ ಎಂದಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ರಕುಲ್ ಭಾಗಿಯಾಗಲಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕವೂ ನಟಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

  • ಅಂದು ಐದು, ಇಂದು ಮೂರೇ ಭಾಷೆ: ಏನಿದು ‘ಇಂಡಿಯನ್ 2’ ಪೋಸ್ಟರ್

    ಅಂದು ಐದು, ಇಂದು ಮೂರೇ ಭಾಷೆ: ಏನಿದು ‘ಇಂಡಿಯನ್ 2’ ಪೋಸ್ಟರ್

    ಮಲ್ ಹಾಸನ್ (Kamal Haasan) ನಟನೆಯ ಇಂಡಿಯನ್ 2 ಸಿನಿಮಾ ಮೂಲ ಭಾಷೆ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಮಾಡಲಾಗುವುದು ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿತ್ತು. ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಯಲ್ಲಿ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ಕೇವಲ ಮೂರು ಭಾಷೆ ಮಾತ್ರವಿದೆ. ಹಾಗಾಗಿ ಮೂರು ಭಾಷೆಯಲ್ಲಿ ಮಾತ್ರ ಸಿನಿಮಾ ಬರಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

    ಇಂಡಿಯನ್ -2 (Indian 2) ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ಹೀಗಾಗಿ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ಸದ್ಯ ‘ಇಂಡಿಯನ್ 2’ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.

    ಇಂಡಿಯನ್ ಸೀಕ್ವೆಲ್‌ಗೆ ಎಸ್.ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 1996ರ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ (Rakul Preet Singh), ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

     

    ಎಸ್. ಶಂಕರ್ (Kamal Haasan) ನಿರ್ದೇಶನದಲ್ಲಿ ‘ಇಂಡಿಯನ್ 2’ ಸಿನಿಮಾ ಮೂಡಿ ಬರುತ್ತಿದ್ದು, ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

  • Indian 2: ಶೂಟಿಂಗ್‌ ಮುಗಿಸಿದ ಕಮಲ್‌ ಹಾಸನ್‌, ರಕುಲ್‌ ಸಿನಿಮಾ

    Indian 2: ಶೂಟಿಂಗ್‌ ಮುಗಿಸಿದ ಕಮಲ್‌ ಹಾಸನ್‌, ರಕುಲ್‌ ಸಿನಿಮಾ

    ಮಲ್ ಹಾಸನ್ (Kamal Haasan) ನಟನೆಯ ಬಹುನಿರೀಕ್ಷಿತ ಇಂಡಿಯನ್ -2 (Indian 2) ಸಿನಿಮಾ ಜೂನ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ಸದ್ಯ ‘ಇಂಡಿಯನ್ 2’ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.

    ಇಂಡಿಯನ್ ಸೀಕ್ವೆಲ್‌ಗೆ ಎಸ್.ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 1996ರ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

    ಎಸ್. ಶಂಕರ್ ನಿರ್ದೇಶನದಲ್ಲಿ ‘ಇಂಡಿಯನ್ 2’ ಸಿನಿಮಾ ಮೂಡಿ ಬರುತ್ತಿದ್ದು, ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.