Tag: rakshitha reddy

  • ಹೆಣ್ಣು ಮಗುವಿಗೆ ತಂದೆಯಾದ ಸಂಭ್ರಮದಲ್ಲಿ ಶರ್ವಾನಂದ್

    ಹೆಣ್ಣು ಮಗುವಿಗೆ ತಂದೆಯಾದ ಸಂಭ್ರಮದಲ್ಲಿ ಶರ್ವಾನಂದ್

    ಟಾಲಿವುಡ್ ನಟ ಶರ್ವಾನಂದ್ (Sharwanand) ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶರ್ವಾನಂದ್ ಪತ್ನಿ ರಕ್ಷಿತಾ ರೆಡ್ಡಿ (Rakshitha Reddy) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮುದ್ದು ಮಗಳ ಆಗಮನದ ಬಗ್ಗೆ ನಟ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

    ಮಾರ್ಚ್ 6 ಶರ್ವಾನಂದ್ ಹುಟ್ಟುಹಬ್ಬವಾಗಿದ್ದು, ಮಗಳ ಆಗಮನದ ಬಗ್ಗೆ ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ವಿಶ್ ಮಾಡಿದಕ್ಕೆ ನಟ ಧನ್ಯವಾದಗಳನ್ನು ತಿಳಿಸಿದ್ದು, ಮಗಳು (Baby Girl) ಹುಟ್ಟಿರುವ ಸುದ್ದಿ ತಿಳಿಸಿ, ಈ ವರ್ಷ ಆಶೀರ್ವಾದದೊಂದಿಗೆ ಹೊಸ ವರ್ಷವನ್ನು ಪ್ರವೇಶಿಸುತ್ತಿದ್ದೇನೆ ಎಂದಿದ್ದಾರೆ.

     

    View this post on Instagram

     

    A post shared by Sharwanand (@imsharwanand)

    ‘ಲೀಲಾ ದೇವಿ ಮೈನೇನಿ’ ಎಂದು ಮಗಳಿಗೆ ಹೆಸರಿಟ್ಟಿರೋದಾಗಿ ನಟ ರಿವೀಲ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಪತ್ನಿ ರಕ್ಷಿಕಾ ಮಗಳ ಕಾಲು ಹಿಡಿದುಕೊಂಡಿರುವ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ. ಆದರೆ ಎಲ್ಲೂ ಕೂಡ ಮಗಳ ಮುಖ ರಿವೀಲ್ ಮಾಡಿಲ್ಲ.

     

    View this post on Instagram

     

    A post shared by Sharwanand (@imsharwanand)

    ರನ್ ರಾಜಾ ರನ್, ಎಕ್ಸ್‌ಪ್ರೆಸ್‌ ರಾಜಾ, ಜಾನು, ಮಹಾಸಮುದ್ರಂ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಶರ್ವಾನಂದ್ ನಟಿಸಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಮೆಚ್ಚಿದ ‘ಕೆರೆಬೇಟೆ’ ಟ್ರೈಲರ್

    ಕಳೆದ ವರ್ಷ ಜೂನ್‌ನಲ್ಲಿ ರಕ್ಷಿತಾ ರೆಡ್ಡಿ ಜೊತೆ ಶರ್ವಾನಂದ್ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಶರ್ವಾನಂದ್ ಮದುವೆ ಸಂಭ್ರಮದಲ್ಲಿ ಅದಿತಿ ರಾವ್ ಹೈದರಿ, ಸಿದ್ಧಾರ್ಥ್, ಮೆಗಾ ಸ್ಟಾರ್ ಚಿರಂಜೀವಿ- ರಾಮ್ ಚರಣ್ ಕುಟುಂಬ ಭಾಗಿಯಾಗಿತ್ತು.

  • ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ತೆಲುಗು ಆಕ್ಟರ್ ಶರ್ವಾನಂದ್ (Sharwanand) ಅವರು ಜೂನ್ 3ರಂದು ರಕ್ಷಿತಾ ರೆಡ್ಡಿ (Rakshitha Reddy) ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಶರ್ವಾನಂದ್ ಮದುವೆಯಾದರು. ಇದೀಗ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಟನ ಆರತಕ್ಷತೆ ಜರುಗಿದೆ. ಈ ಸಂಭ್ರಮದಲ್ಲಿ ಸಿನಿ ತಾರೆಯರು ಭಾಗಿಯಾಗಿದ್ದಾರೆ.

    ಟಾಲಿವುಡ್ (Tollywood) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟ ಶರ್ವಾನಂದ್ ಸಂಚಲನ ಮೂಡಿಸಿದ್ದಾರೆ. ಜಾನೂ, ಮಹಾಸಮುದ್ರಂ, ಓಕೆ ಓಕಾ ಜೀವಿತಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಿನ್ನ ಕಥೆ, ವಿಭಿನ್ನ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

    ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾದರು. ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಜೈಪುರ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದ ಶರ್ವಾನಂದ್ ಇದೀಗ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಆಪ್ತರಿಗೆ ರಿಸೆಪ್ಷನ್‌ಗೆ ಆಹ್ವಾನ ನೀಡಿದ್ದರು. ಸೆಲೆಬ್ರಿಟಿಗಳ ದಂಡೇ ನಟನ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಸೂಟ್‌ನಲ್ಲಿ ಶರ್ವಾನಂದ್ ಕಾಣಿಸಿಕೊಂಡಿದ್ದರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಶರ್ವಾನಂದ್ ರೆಸೆಪ್ಷನ್ ಸಂಭ್ರಮದಲ್ಲಿ ರಾಮ್ ಚರಣ್ (Ram Charan) ದಂಪತಿ, ಬಾಲಯ್ಯ, ನಟ ವೆಂಕಟೇಶ್, ರಾಣಾ ದಗ್ಗುಭಾಟಿ, ಲಕ್ಷ್ಮಿ ಮಂಚು, ನಿಖಿಲ್ ಸಿದ್ಧಾರ್ಥ್, ನಟಿ ರೀತು ವರ್ಮಾ ಸೇರಿದಂತೆ ಹಲವು ಭಾಗಿಯಾಗಿ, ಶುಭಕೋರಿದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್‌ ನಟ ಶರ್ವಾನಂದ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್‌ ನಟ ಶರ್ವಾನಂದ್

    ತೆಲುಗು ನಟ ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಅವರು ಜೂನ್ 3ರಂದು ರಾತ್ರಿ 11 ಗಂಟೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬದಸ್ಥರ ಸಮ್ಮುಖದಲ್ಲಿ ಶರ್ವಾನಂದ್ (Actor sharwanand) ಅವರು ರಕ್ಷಿತಾ ಜೊತೆ ಸಪ್ತಪದಿ ತುಳಿದರು. ನಟನ ಮದುವೆ ಸಂಭ್ರಮದಲ್ಲಿ ನಟ ರಾಮ್‌ಚರಣ್ (Ramcharan), ಸಿದ್ಧಾರ್ಥ್, ನಿರ್ಮಾಪಕ ವಂಶಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾಗಿದ್ದಾರೆ. ಜೈಪುರದ (Jaipur) ಲೀಲಾ ಪ್ಯಾಲೇಸ್‌ನಲ್ಲಿ ಈ ಅದ್ದೂರಿ ಮದುವೆ ನಡೆದಿದೆ.

    ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸದ್ಯ ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಭಿಷೇಕ್ ಮದುವೆಗೆ ಬಂದು ಶುಭ ಹಾರೈಸಿದ ರಜನಿಕಾಂತ್

    ನಟ ಶರ್ವಾನಂದ್ ಮದುವೆಗೆ ರಾಮ್‌ಚರಣ್, ಸಿದ್ಧಾರ್ಥ್ ಸೇರಿದಂತೆ ಸಿನಿಮಾ ತಾರೆಯರು ಮತ್ತು ರಾಜಕೀಯ ರಂಗದ ಗಣ್ಯರು ಭಾಗವಹಿಸಿ, ಹಾರೈಸಿದ್ದಾರೆ. ನವಜೋಡಿಗೆ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ.

  • ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಟಾಲಿವುಡ್ (Tollywood) ಅಂಗಳದಲ್ಲಿ ಬಿಸಿ ಬಿಸಿ ಸಮಾಚಾರವೊಂದು ಸದ್ದು ಮಾಡ್ತಿದೆ. ಸ್ಟಾರ್ ನಟ ಶರ್ವಾನಂದ್(Sharwanand), ಖಾಸಗಿ ಸಮಾಚಾರವೊಂದು ಭಾರಿ ಸೌಂಡ್ ಮಾಡ್ತಿದೆ. ಇತ್ತೀಚಿಗಷ್ಟೇ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಶರ್ವಾನಂದ್ ನಿಶ್ಚಿತಾರ್ಥ (Engagement) ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟ ಶರ್ವಾನಂದ್, ಭಿನ್ನ ಪಾತ್ರಗಳ ಮೂಲಕ ರೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಇತ್ತೀಚಿಗಷ್ಟೇ ರಕ್ಷಿತಾ (Rakshitha Reddy) ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದರು.

    ಈ ವರ್ಷದ ಆರಂಭ ಜನವರಿಯಲ್ಲಿ ಗುರುಹಿರಿಯರು ಸಮ್ಮತಿಸಿದ ಹುಡುಗಿ ರಕ್ಷಿತಾ ಶರ್ವಾನಂದ್ ಎಂಗೇಜ್ ಆಗಿದ್ದರು. ಆದರೆ ಈಗ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಈ ನಿಶ್ಚಿತಾರ್ಥ ಮುರಿದು ಬಿದ್ದಿದೆ (Break Up) ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ಈ ಸುದ್ದಿಯನ್ನ ಶರ್ವಾನಂದ್ ಟೀಂ ನಿರಾಕರಿಸಿದೆ. ಶರ್ವಾನಂದ್- ರಕ್ಷಿತಾ ನಡುವೆ ಸಂಬಂಧ ಚೆನ್ನಾಗಿದೆ. ಸದ್ಯ ನಟ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಷ್ಟೇ, ಲಂಡನ್‌ನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನ ಮುಗಿಸಿ, ಮದುವೆ ಆಗ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಿಶ್ಚಿತಾರ್ಥ ಮುರಿದಿರುವ ಸುದ್ದಿ ಬಗ್ಗೆ ನೇರವಾಗಿ ಶರ್ವಾನಂದ್- ರಕ್ಷಿತಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಟಾಲಿವುಡ್ ನಟ ಶರ್ವಾನಂದ್ (Sharwanand) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಕ್ಷಿತಾ ರೆಡ್ಡಿ ಜೊತೆ ಶರ್ವಾನಂದ್ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ನಟ ಶರ್ವಾನಂದ್‌ಗೆ  ಶುಭಹಾರೈಸಲು ಟಾಲಿವುಡ್‌ನ ನಟ-ನಟಿಯರು ಕೂಡ ಭಾಗಿಯಾಗಿದ್ದಾರೆ.

    ಗೆಳತಿ ರಕ್ಷಿತಾ ರೆಡ್ಡಿ ಜೊತೆ ಗುರುವಾರ (ಜ.26)ರಂದು ಶರ್ವಾನಂದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಉಂಗುರ ತೊಡಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಶರ್ವಾನಂದ್ ಮತ್ತು ರಕ್ಷಿತಾ ಪ್ರೀತಿಸುತ್ತಿದ್ದರು. ಈಗ ಹಿರಿಯರ ಒಪ್ಪಿಗೆಯ ಮೇರೆಗೆ ಎಂಗೇಜ್ ಆಗಿದ್ದಾರೆ.

     

    View this post on Instagram

     

    A post shared by Sharwanand (@imsharwanand)

    ನಟ ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ (Raskshitha Reddy). ಸಾಫ್‌ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದಾರೆ. ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಎಂಗೇಜ್‌ಮೆಂಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇನ್ನೂ ನಟ ಶರ್ವಾನಂದ್ ಎಂಗೇಜ್‌ಮೆಂಟ್‌ಗೆ ರಾಮ್ ಚರಣ್ (Ramcharan) ದಂಪತಿ, ಸಿದ್ಧಾರ್ಥ್- ಅದಿತಿ ಜೋಡಿ, ನಟ ಚಿರಂಜೀವಿ, ನಾನಿ, ನಟ ನಾಗಾರ್ಜುನ ದಂಪತಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k