Tag: Rakshita Reddy

  • ಕಾರು ಅಪಘಾತ: ಆರೋಗ್ಯವಾಗಿದ್ದೇನೆ ಭಯ ಬೇಡ ಎಂದ ನಟ ಶರ್ವಾನಂದ್

    ಕಾರು ಅಪಘಾತ: ಆರೋಗ್ಯವಾಗಿದ್ದೇನೆ ಭಯ ಬೇಡ ಎಂದ ನಟ ಶರ್ವಾನಂದ್

    ತೆಲುಗಿನ ಖ್ಯಾತ ನಟ ಶರ್ವಾನಂದ್ ಅವರ ಕಾರು ಅಪಘಾತವಾಗಿ ಅಭಿಮಾನಿಗಳಿಗೆ ಸಾಕಷ್ಟು ಆತಂಕ ಮೂಡಿಸಿತ್ತು. ಶರ್ವಾನಂದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.  ಅಪಘಾತಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಗೊಂದಲಗಳು ಕೂಡ ಮೂಡಿದ್ದವು. ಈ ಕುರಿತು ಸ್ವತಃ ಶರ್ವಾನಂದ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ‘ರವಿವಾರ ಆಗಿದ್ದು ಸಣ್ಣ ಅಪಘಾತ. ಅದರಿಂದ ನನಗೆ ಸಣ್ಣ ಪುಟ್ಟ ಗಾಯಗಳಾಗಿವೆ ಅಷ್ಟೆ. ಆತಂಕ ಪಡುವಂಥದ್ದು ಏನೂ ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ತಾವೆಲ್ಲ ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಧನ್ಯವಾದಗಳು’ ಎಂದು ಶರ್ವಾನಂದ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    ಜೂನ್ 2 ರಂದು ಶರ್ವಾನಂದ್ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಹೈದರಾಬಾದ್ ನ ಜೂಬ್ಲಿ ಹಿಲ್ಸ್ ಬಳಿ ಅಪಘಾತಕ್ಕೀಡಾಗಿತ್ತು (Accident). ಶರ್ವಾನಂದ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಶರ್ವಾನಂದ್ ಅವರ ಡ್ರೈವರ್ ಆ ಕಾರು ಓಡಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಕಾರು ಪಲ್ಟಿಯಾಗಿದೆ. ಅದು ಐಷಾರಾಮಿ ಕಾರು ಆಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದರು.

    ಶರ್ವಾನಂದ್ (Sharwanand) ತಮ್ಮ ಬಹುಕಾಲದ ಗೆಳತಿ ರಕ್ಷಿತಾ ರೆಡ್ಡಿ ಜೊತೆ ಕೆಲ ತಿಂಗಳ ಹಿಂದೆಯಷ್ಟೇ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದರು. ಇದೀಗ ಜೂನ್ 2 ಮತ್ತು 3 ರಂದು ರಾಜಸ್ಥಾನದ ಜೈಪುರದಲ್ಲಿರುವ ಲೀಲಾ ಪ್ಯಾಲೇಸ್ ನಲ್ಲಿ ಮದುವೆ ಆಗುತ್ತಿದ್ದಾರೆ. ಈಗವರು ಮದುವೆ ಸಿದ್ಧತೆಯಲ್ಲಿದ್ದರು.

    ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ (Raskshitha Reddy). ಸಾಫ್ಟ್ ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದಾರೆ. ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಇವರ ಮದುವೆಗೆ ರಾಮ್ ಚರಣ್ (Ramcharan) ದಂಪತಿ, ಸಿದ್ಧಾರ್ಥ್- ಅದಿತಿ ಜೋಡಿ, ನಟ ಚಿರಂಜೀವಿ, ನಾನಿ, ನಟ ನಾಗಾರ್ಜುನ ದಂಪತಿ ಸೇರಿದಂತೆ ಹಲವರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕಾರು ಅಪಘಾತದಲ್ಲಿ ಗಾಯಗೊಂಡ ನಟ ಶರ್ವಾನಂದ್: ನಟನ ಮದುವೆಗೆ 3 ದಿನವಷ್ಟೇ ಬಾಕಿ

    ಕಾರು ಅಪಘಾತದಲ್ಲಿ ಗಾಯಗೊಂಡ ನಟ ಶರ್ವಾನಂದ್: ನಟನ ಮದುವೆಗೆ 3 ದಿನವಷ್ಟೇ ಬಾಕಿ

    ದೇ ಜೂನ್ 2 ರಂದು ತೆಲುಗಿನ ಖ್ಯಾತ ನಟ ಶರ್ವಾನಂದ್ ಮದುವೆ. ಅವರ ಇಡೀ ಕುಟುಂಬ ಸಡಗರ ಸಂಭ್ರಮದಲ್ಲಿದ್ದರೆ ಅತ್ತ ಶರ್ವಾನಂದ್ ಕಾರು (Car) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಹೈದರಾಬಾದ್ ನ ಜೂಬ್ಲಿ ಹಿಲ್ಸ್ ಬಳಿ ಅಪಘಾತಕ್ಕೀಡಾಗಿದೆ (Accident). ಶರ್ವಾನಂದ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

    ಶರ್ವಾನಂದ್ ಅವರ ಡ್ರೈವರ್ ಆ ಕಾರು ಓಡಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿಯಾಗಿದೆ. ಅದು ಐಷಾರಾಮಿ ಕಾರು ಆಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೂಡಲೇ ಶರ್ವಾನಂದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆತಂಕ ಪಡುವಂಥದ್ದು ಏನೂ ಆಗಿಲ್ಲವೆಂದು ತಿಳಿಸಿದ್ದಾರೆ.

    ಶರ್ವಾನಂದ್ (Sharwanand) ತಮ್ಮ ಬಹುಕಾಲದ ಗೆಳತಿ ರಕ್ಷಿತಾ ರೆಡ್ಡಿ ಜೊತೆ ಕೆಲ ತಿಂಗಳ ಹಿಂದೆಯಷ್ಟೇ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದರು. ಇದೀಗ ಜೂನ್ 2 ಮತ್ತು 3 ರಂದು ರಾಜಸ್ಥಾನದ ಜೈಪುರದಲ್ಲಿರುವ ಲೀಲಾ ಪ್ಯಾಲೇಸ್ ನಲ್ಲಿ ಮದುವೆ ಆಗುತ್ತಿದ್ದಾರೆ. ಈಗವರು ಮದುವೆ ಸಿದ್ಧತೆಯಲ್ಲಿದ್ದರು. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ (Raskshitha Reddy). ಸಾಫ್ಟ್ ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದಾರೆ. ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಇವರ ಮದುವೆಗೆ ರಾಮ್ ಚರಣ್ (Ramcharan) ದಂಪತಿ, ಸಿದ್ಧಾರ್ಥ್- ಅದಿತಿ ಜೋಡಿ, ನಟ ಚಿರಂಜೀವಿ, ನಾನಿ, ನಟ ನಾಗಾರ್ಜುನ ದಂಪತಿ ಸೇರಿದಂತೆ ಹಲವರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಟೆಕ್ಕಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿತ್ತಾ? : ನಟ ಶರ್ವಾನಂದ್ ಆಪ್ತರ ಪ್ರತಿಕ್ರಿಯೆ

    ಟೆಕ್ಕಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿತ್ತಾ? : ನಟ ಶರ್ವಾನಂದ್ ಆಪ್ತರ ಪ್ರತಿಕ್ರಿಯೆ

    ತ್ತೀಚೆಗಷ್ಟೇ ಟೆಕ್ಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ (Tollywood) ನಟ ಶರ್ವಾನಂದ್ (Sharwanand), ಕೆಲವೇ ದಿನಗಳಲ್ಲಿ ಎಂಗೇಜ್ ಮೆಂಟ್ ಮುರಿದುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಟಾಲಿವುಡ್ ಅಂಗಳದಲ್ಲಿ ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದರೂ, ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಶರ್ವಾನಂದ್. ಇದೇ ಮೊದಲ ಬಾರಿಗೆ ಅವರ ಆತ್ಮೀಯರು ಈ ಕುರಿತು ಮಾತನಾಡಿದ್ದಾರೆ. ಅವರು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ಮದುವೆಯನ್ನು ಮುಂದೂಡಲಾಗಿದೆ. ಅದರ ಹೊರತು ನಿಶ್ಚಿತಾರ್ಥ ಮುರಿದು ಬಿದ್ದಿಲ್ಲ ಎಂದಿದ್ದಾರೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟ ಶರ್ವಾನಂದ್, ಭಿನ್ನ ಪಾತ್ರಗಳ ಮೂಲಕ  ಪ್ರೇಕ್ಷಕರ ಮನಗೆದ್ದಿದ್ದರು. ಇತ್ತೀಚಿಗಷ್ಟೇ ರಕ್ಷಿತಾ (Rakshitha Reddy) ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದರು. ಇದನ್ನೂ ಓದಿ:ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ಈ ವರ್ಷದ ಆರಂಭ ಜನವರಿಯಲ್ಲಿ ಗುರುಹಿರಿಯರು ಸಮ್ಮತಿಸಿದ ಹುಡುಗಿ ರಕ್ಷಿತಾ ಶರ್ವಾನಂದ್ ಎಂಗೇಜ್ ಆಗಿದ್ದರು. ಆದರೆ ಈಗ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಈ ನಿಶ್ಚಿತಾರ್ಥ ಮುರಿದು ಬಿದ್ದಿದೆ (Break Up) ಎಂದು ಹೇಳಲಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು.

    ಈ ಸುದ್ದಿಯನ್ನ ಶರ್ವಾನಂದ್ ಟೀಂ ನಿರಾಕರಿಸಿದೆ. ಶರ್ವಾನಂದ್- ರಕ್ಷಿತಾ ನಡುವೆ ಸಂಬಂಧ ಚೆನ್ನಾಗಿದೆ. ಸದ್ಯ ನಟ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಷ್ಟೇ, ಲಂಡನ್‌ನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನ ಮುಗಿಸಿ, ಮದುವೆ ಆಗ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಿಶ್ಚಿತಾರ್ಥ ಮುರಿದಿರುವ ಸುದ್ದಿ ಬಗ್ಗೆ ನೇರವಾಗಿ ಶರ್ವಾನಂದ್- ರಕ್ಷಿತಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.