Tag: RakshaBandan

  • Rocky ಇರೋವಾಗ ನಿಶ್ಚಿಂತೆಯಿಂದ ಇರು, Rakhi ಇರೋವಾಗ ನನಗೆ ಚಿಂತೆ ಇಲ್ಲ: ಯಶ್

    Rocky ಇರೋವಾಗ ನಿಶ್ಚಿಂತೆಯಿಂದ ಇರು, Rakhi ಇರೋವಾಗ ನನಗೆ ಚಿಂತೆ ಇಲ್ಲ: ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಹೋದರಿ ಜೊತೆಯಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಇಂದು ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಯಶ್ ಅವರ ಸಹೋದರಿ ನಂದಿನಿ ಅವರು ರಾಖಿ ಕಟ್ಟಿದ್ದಾರೆ. ಈ ವೇಳೆ ಯಶ್ ತಮ್ಮ ಸಹೋದರಿ ನಂದಿನಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಾಕಿ, “ರಾಕಿ ಇರೋವಾಗ ನೀನು ನಿಶ್ಚಿಂತೆಯಿಂದ ಇರು, ನೀನು ಕಟ್ಟಿದ ರಾಕಿ ಇರೋವಾಗ ನನಗೆ ಚಿಂತೆ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ರಾಧಿಕಾ ಪಂಡಿತ್ ಅವರು ಕೂಡ ಅಮೆರಿಕಾದಲ್ಲಿ ನೆಲೆಸಿರುವ ತಮ್ಮ ಸಹೋದರನಿಗೆ ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ. ರಾಧಿಕಾ, ತಮ್ಮ ಅಣ್ಣನೊಂದಿಗಿರುವ ಬಾಲ್ಯದ ಫೋಟೋ ಹಾಕಿ “ನನ್ನ ಪ್ರೀತಿ ಮತ್ತು ರಾಖಿಯನ್ನು ಚಿಕಾಗೋಗೆ ಕಳುಹಿಸುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಐ ಲವ್ ಯೂ, ಅಲ್ಲಿರುವ ಎಲ್ಲ ಸಹೋದರ, ಸಹೋದರಿಯರಿಗೆ ರಾಕ್ಷ ಬಂಧನದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ದರ್ಶನ್ ಅವರ ಫ್ಯಾಮಿಲಿ ಫ್ರೆಂಡ್ ಆಗಿರುವ ಕವಿತಾ ಕೆಂಪಯ್ಯ ಅವರು ರಾಖಿ ಕಟ್ಟುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕವಿತಾ ಅವರು ದರ್ಶನ್ ಅವರಿಗೆ ರಾಖಿ ಕಟ್ಟಿ ತಿಲಕವಿಟ್ಟು ಶುಭ ಹಾರೈಸಿದ್ದಾರೆ.