ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಗಟ್ಟಿ ಮೇಳ’ದ ಕೊನೆಯ ಸಂಚಿಕೆ ಇಂದು ಪ್ರಸಾರವಾಗಲಿದೆ. ಈ ಮೂಲಕ ಜನಪ್ರಿಯ ಧಾರಾವಾಹಿಯೊಂದು ಅಂತ್ಯ ಕಾಣುತ್ತಿದೆ. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ರಕ್ಷ್ ಮತ್ತು ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಕೊನೆಯ ಸಂಚಿಕೆಯ ಸಂದರ್ಭದಲ್ಲಿ ವಾಹಿನಿಯು ಪ್ರಶ್ನೆಯೊಂದನ್ನು ವೀಕ್ಷಕರಿಗೆ ಕೇಳಿದ್ದು, ನಿಮ್ಮ ನೆಚ್ಚಿನ ಗಟ್ಟಿಮೇಳ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ನೀವು ಏನನ್ನು ಮಿಸ್ ಮಾಡಿಕೊಳ್ತೀರಿ’ ಎಂದು ಜೀ ವಾಹಿನಿಯು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಅನೇಕ ನಾನಾ ರೀತಿಯ ಉತ್ತರಗಳನ್ನು ನೀಡಿದ್ದಾರೆ. ಈ ಧಾರಾವಾಹಿಯ ವೇದಾಂತ್ ಮತ್ತು ಅಮೂಲ್ಯ ಜೋಡಿಯನ್ನು ತುಂಬಾ ಮಿಸ್ ಮಾಡಿಕೊಳ್ಳೋದಾಗಿ ಕಾಮೆಂಟ್ ಮಾಡಿದ್ದಾರೆ.
ಈ ಜನಪ್ರಿಯ ಧಾರಾವಾಹಿ ಆರಂಭವಾಗಿದ್ದು ಮಾರ್ಚ್ 2019ರಂದು. ಈಗಾಗಲೇ 1243 ಸಂಚಿಕೆಗಳನ್ನು ಧಾರಾವಾಹಿ ಪೂರೈಸಿದೆ. ಇಂದು ತನ್ನ ಕೊನೆಯ ಎಪಿಸೋಡ್ ಅನ್ನು ಪ್ರಸಾರ ಮಾಡುವ ಮೂಲಕ ಜನಪ್ರಿಯ ಧಾರಾವಾಹಿಯೊಂದು ಅಂತ್ಯ ಹಾಡಿದಂತಾಗಿದೆ.
ಬೆಂಗಳೂರು: ನಾವು ಆ ರೀತಿಯ ಕುಟುಂಬದಿಂದ ಬಂದಿಲ್ಲ, ಫಾಝಿಲ್ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಕಿರುತೆರೆ ನಟ ರಕ್ಷ್ ಸ್ಪಷ್ಟಪಡಿಸಿದ್ದಾರೆ.
ಫಾಝಿಲ್ ಜೊತೆ ರಕ್ಷ್ ಇರುವ ಫೋಟೋ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಖಾಸಗಿ ಸಮಾರಂಭಕ್ಕೆ ಹೋದಾಗ ಸುನಿಲ್ ಗವಾಸ್ಕರ್ ಬಂದಿರುವುದು ತಿಳಿಯಿತು. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ಫಾಝಿಲ್ ಯಾರು ಅಂತ ಗೊತ್ತಿಲ್ಲ. ಅದು ಯಾರ ಮನೆ ಎಂದೂ ಸಹ ಗೊತ್ತಿಲ್ಲ. ಸುನಿಲ್ ಗವಾಸ್ಕರ್ ಅವರೊಂದಿಗೆ ತೆಗೆಸಿದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲೂ ಹಾಕಿಕೊಂಡಿದ್ದೇನೆ. ಫಾಝಿಲ್ ಯಾರು ಅಂತ ನನಗೆ ಗೊತ್ತಿಲ್ಲ. ನಾವು ಆ ರೀತಿಯ ಕುಟುಂಬದಿಂದ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನಗೂ ಅಪ್ರೋಚ್ ಮಾಡಿದ್ರು, ಆದ್ರೆ ನಾನು ಅದನ್ನ ಮುಟ್ಟಿಲ್ಲ – ‘ಗಟ್ಟಿಮೇಳ’ ಖ್ಯಾತಿಯ ನಟ ರಕ್ಷ್
ಯಾರ ಪರಿಚಯ ನನಗಿಲ್ಲ: ಫಾಝಿಲ್, ವೈಭವ್ ಯಾರ ಪರಿಚಯವೂ ಇಲ್ಲ. ಅವರ ಫೋನ್ ನಂಬರ್ ಸಹ ನನ್ನ ಬಳಿ ಇಲ್ಲ. ಏನು ಬೇಕಾದರೂ ಚೆಕ್ ಮಾಡಿ, ಯಾರು ಕರೆದರೂ ನಾನು ಹೋಗಿ ಸ್ಪಷ್ಟನೆ ನೀಡುತ್ತೇನೆ. ನನ್ನ ಕಾಲ್ ಲಿಸ್ಟ್ ಚೆಕ್ ಮಾಡಿ, ಮೆಸೇಜ್ ಚೆಕ್ ಮಾಡಿ. ಫಾಝಿಲ್ ಯಾರೆಂಬುದು ನನಗೆ ಗೊತ್ತಿಲ್ಲ. ನಾವು ಕೇವಲ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ಕೇವಲ ಫೋಟೋ ತೆಗೆಸಿಕೊಂಡು ಬಂದಿದ್ದೇವೆ. ಅದು ಯಾರ ಮನೆ ಎಂಬುದು ಸಹ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲ ಕಾರ್ಯಕ್ರಮಗಳಿಗೂ ನಾವು ಹೋಗಲ್ಲ. ಪ್ರಮುಖ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತೇನೆ. ಗಣೇಶ ಹಬ್ಬಗಳಿಗೂ ಹೋಗಲು ಹಲವು ಬಾರಿ ಯೋಚಿಸುತ್ತೇನೆ. ಇದಕ್ಕೂ ನನಗೂ ಎಳ್ಳಷ್ಟೂ ಸಂಬಂಧವಿಲ್ಲ. ನಾವು ಆ ರೀತಿಯ ಕುಟುಂಬದಿಂದಲೂ ಬಂದಿಲ್ಲ.
ನಾವು ಧಾರಾವಾಹಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸಿನಿಮಾ ಮಾಡಿಕೊಂಡು ಒಂದು ಮಟ್ಟಕ್ಕೆ ಬೆಳೆಯಬೇಕು ಎಂಬ ಕನಸು ಹೊತ್ತಿರುತ್ತೇವೆ. ಇದಕ್ಕಾಗಿ ಹಲವು ನಿರ್ಮಾಪಕರನ್ನು ಸಹ ಭೇಟಿಯಾಗುತ್ತಿರುತ್ತೇವೆ. ಸಿನಿಮಾ ಮಾಡುವುದರಲ್ಲೇ ಕಾಲ ಕಳೆಯುತ್ತಿರುತೇವೆ. ಈ ರೀತಿ ಮಾಡಿ ಜೀವನ, ಹೆಸರು ಹಾಳು ಮಾಡಿಕೊಂಡರೆ ತಂದೆ, ತಾಯಿ ತುಂಬಾ ಚಿಂತೆಗೀಡಾಗುತ್ತಾರೆ. ಮೂಲವಾಗಿ ನಾವು ಈ ರೀತಿ ಬೆಳೆದವರೇ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
– ಚಿರು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ, ಮೇಘನಾಗೆ ನೋವು ಕೊಡಬೇಡಿ
– ಡ್ರಗ್ಸ್ ದಾಸರು ತಂದೆಗೆ ಒಳ್ಳೆ ಮಗ, ಹೆಂಡ್ತಿಗೆ ಒಳ್ಳೆ ಗಂಡ ಆಗಿರಲ್ಲ
ಬೆಂಗಳೂರು: ಪಾರ್ಟಿಗೆ ಹೋದಾಗ ನನಗೂ ಅಪ್ರೋಚ್ ಮಾಡುವರು, ಆದರೆ ನಾನು ತೆಗೆದುಕೊಳ್ಳುತ್ತಿರಲಿಲ್ಲ. ಈಗ ಇಡೀ ಇಂಡಸ್ಟ್ರಿ ಡ್ರಗ್ಸ್ ಜಾಲದಲ್ಲಿ ಇದೆ ಅನ್ನೋದು ತಪ್ಪು ಎಂದು ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷ್ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ರಕ್ಷ್, ಕನ್ನಡ ಚಿತ್ರರಂಗಕ್ಕೆ ಉದಯ್‍ಕುಮಾರ್, ರಾಜ್‍ಕುಮಾರ್ ಸರ್ ಅಡಿಪಾಯ ಹಾಕಿಕೊಟ್ಟಿದ್ದಾರೆ. ಈಗ ಹಿರಿಯ ನಾಯಕರಾದ ಜಗದೀಶ್, ಶಿವಣ್ಣ ಸರ್ ಸೇರಿದಂತೆ ಅನೇಕರು ಆ ಸಂಸ್ಕಾರ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿ ಯಾರೋ ಒಬ್ಬರು, ಇಬ್ಬರು ಮಾಡೋ ತಪ್ಪಿಗೆ ಇಡೀ ಸ್ಯಾಂಡಲ್‍ವುಡ್ ಪೂರ್ತಿ ಅನ್ನೋದು ತಪ್ಪು. ಇದನ್ನ ನಾನು ಒಪ್ಪಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಈ ಸಂದರ್ಭದಲ್ಲಿ ಇಡೀ ಸ್ಯಾಂಡಲ್‍ವುಡ್ ಒಂದಾಗಬೇಕು. ಈ ರೀತಿ ಆರೋಪ, ಪ್ರತ್ಯಾರೋಪ ಮಾಡೋದು ಸರಿಯಲ್ಲ ಎಂದರು.
ಡ್ರಗ್ಸ್ ಅನ್ನೋದು ಎಲ್ಲಾ ಕಡೆ ಇದೆ. ಕೆಲವು ಕಡೆ ಬೆಳಕಿಗೆ ಬರಲ್ಲ ಅಷ್ಟೆ. ಸ್ಯಾಂಡಲ್‍ವುಡ್ ಅಲ್ಲ, ರಾಜಕೀಯ ಮಕ್ಕಳು ಇರಬಹುದು. ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮಕ್ಕಳು ಇರಬಹುದು, ಮಾಡಿರಬಹುದು. ಇಡೀ ಇಂಡಸ್ಟ್ರಿ ಜಾಲ ಅನ್ನೋದು ತಪ್ಪು. ನಾನು ಅನೇಕ ಹಿರಿಯ ಕಲಾವಿದರ ಜೊತೆ ಒಡನಾಟ ಹೊಂದಿದ್ದೇನೆ. ಅವರ ಮನೆಗೆ ಊಟಕ್ಕೆ ಹೋಗಿದ್ದೀನಿ. ಆದರೆ ಆ ರೀತಿಯ ಪದ್ಧತಿ ಸ್ಯಾಂಡಲ್‍ವುಡ್‍ನಲ್ಲಿ ಇಲ್ಲ ಎಂದು ರಕ್ಷ್ ಭರವಸೆಯಿಂದ ಹೇಳಿದರು.
ಡ್ರಗ್ಸ್ ದಾಸರು ಆಗಿರುವವರು ತಂದೆಗೆ ಒಳ್ಳೆಯ ಮಗ ಆಗಿರಲ್ಲ, ಹೆಂಡತಿಗೆ ಒಳ್ಳೆಯ ಗಂಡ ಆಗಿರಲ್ಲ. ಮಗುವಿಗೆ ಒಳ್ಳೆಯ ತಂದೆ ಆಗಲು ಸಾಧ್ಯವಿಲ್ಲ. ನನಗೂ ಪಾರ್ಟಿಗೆ ಹೋದಾಗ ಅಪ್ರೋಚ್ ಮಾಡುವರು. ಆದರೆ ನಾನು ತೆಗೆದುಕೊಳ್ಳುತ್ತಿರಲಿಲ್ಲ. ನಾನು ಕಣ್ಣಾರೆ ನೋಡಿದ್ದೇನೆ. ಆದರೆ ಎಲ್ಲರೂ ನೋಡಿದ್ದನ್ನು ಹೇಳುವುದಿಲ್ಲ. ಅವರು ಸ್ಯಾಂಡಲ್‍ವುಡ್‍ನವರು ಅಲ್ಲ, ಸ್ಯಾಂಡಲ್‍ವುಡ್ ಜೊತೆ ಸಂಬಂಧ ಇದ್ದವರು. ಆದರೆ ಇಡೀ ಇಂಡಸ್ಟ್ರಿ ಡ್ರಗ್ಸ್ ಜಾಲದಲ್ಲಿ ಇದೆ ಅನ್ನೋದು ತಪ್ಪು ಎಂದು ರಕ್ಷ್ ಹೇಳಿದರು.
ಇಂದ್ರಜಿತ್ ಲಂಕೇಶ್ ಅವರು ಯಾಕೆ ಈ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ಮೇಘನಾ ಅವರು ಈಗ ಗರ್ಭಿಣಿ. ಅವರಿಗೆ ನೋವು ಕೊಡುವುದು ಬೇಡ. ಯಾಕೆ ಸುಮ್ಮನೆ ಅವರ ಮೇಲೆ ಆರೋಪ ಮಾಡುವುದು. ಚಿರು ನಾನು ಒಳ್ಳೆಯ ಸ್ನೇಹಿತರು. ರಿಯಾಲಿಟಿ ಶೋ, ಫುಡ್ ಫೆಸ್ಟಿವಲ್ ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀವಿ. ಪಾರ್ಟಿಯಲ್ಲಿ ಭಾಗವಹಿಸುತ್ತಾ ಇದ್ವಿ. ಚಿರಂಜೀವಿ ಸರ್ಜಾ ಯಾವತ್ತೂ ಡ್ರಗ್ಸ್ ಬಗ್ಗೆ ಮಾತನಾಡಿಲ್ಲ, ಅವರು ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಈ ರೀತಿಯಾ ಮಾತನಾಡುವುದು ತಪ್ಪು ಎಂದು ಇಂದ್ರಜಿತ್ ಹೇಳಿಕೆಗೆ ರಕ್ಷ್ ಪ್ರತಿಕ್ರಿಯಿಸಿದರು.
ನನ್ನ ಜೀವನದಲ್ಲಿ ರೇವ್ ಪಾರ್ಟಿ ನೋಡಿಲ್ಲ. ನಾನು ಇದುವರೆಗೂ ರೇವ್ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಗೆಟ್ ಟುಗೆದರ್ ಪಾರ್ಟಿಯಲ್ಲಿ ಭಾಗವಹಿಸುತ್ತಾ ಇದ್ದೀವಿ. ಆದರೆ ಈ ರೀತಿ ಡ್ರಗ್ಸ್ ಪಾರ್ಟಿಗೆ ಹೋಗಿಲ್ಲ. ದೊಡ್ಡ ದೊಡ್ಡ ನಟರು ಕೂಡ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಯಾರು ಈ ರೀತಿ ಡ್ರಗ್ಸ್ ದಾಸರು ಯಾರೂ ಆಗಿರಲಿಲ್ಲ. ಸ್ಯಾಂಡಲ್‍ವುಡ್‍ನಲ್ಲಿ ಇದಕ್ಕೆಲ್ಲಾ ಜಾಗ ಎಲ್ಲಿದೆ ಎಂದು ರಕ್ಷ್ ಪ್ರಶ್ನಿಸಿದರು.
ಎನ್‍ಸಿಬಿ ಅವರು ಲಿಸ್ಟ್ ಇದೆ ಎಂದು ಹೇಳಿದ್ದಾರೆ. ಮೊದಲು ಲಿಸ್ಟ್ ಬಿಡುಗಡೆ ಮಾಡಲಿ. ಯಾರ‍್ಯಾರ ಹೆಸರು ಇದೆಯೋ ಅವರಿಗೆ ಶಿಕ್ಷೆ ಆಗಲಿ. ಯಾರ‍್ಯಾರ ಹೆಸರು ಬರುತ್ತೋ ಕಾದು ನೋಡಬೇಕು ಎಂದಿದ್ದಾರೆ.
ಬೆಂಗಳೂರು: ಕಿರುತೆರೆ ನಟ, ಗಟ್ಟಿಮೇಳ ಖ್ಯಾತಿಯ ವೇದಾಂತ್ ಪಾತ್ರಧಾರಿಯ ರಕ್ಷ್ ಅವರು ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ರಕ್ಷ್, ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಈ ಲೆಜೆಂಡ್ ಅನ್ನು ಭೇಟಿ ಆದ ಕ್ಷಣ ಸುಂದರವಾಗಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಿಮ್ಮ ಜೀವನದಲ್ಲಿ ನೀವು ಭೇಟಿಯಾದ ನೂರು ಜನರನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೀವು ನೂರು ಪುಸ್ತಕಗಳನ್ನು ಓದಿದ್ದೀರಿ ಎಂದು ಅರ್ಥ. ನೀವು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕದಂತೆ. ಕೆಲವು ಬೋರಿಂಗ್, ಕೆಲವು ಅದ್ಭುತ, ಕೆಲವು ಶಕ್ತಿಯುತ, ಕೆಲವು ದುರ್ಬಲ. ಆದರೆ ಅವೆಲ್ಲವೂ ಬಹಳ ಉಪಯೋಗವಾಗಿದೆ. ಏಕೆಂದರೆ ಅವೆಲ್ಲವೂ ವಿಭಿನ್ನ ಅನುಭವಗಳನ್ನು ಹೊಂದಿದೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ರಕ್ಷ್ ತಮ್ಮ ಹುಟ್ಟುಹಬ್ಬಕ್ಕಾಗಿ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದರು. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಹೇಳಿಕೊಂಡಿದ್ದರು. ಈ ಪೋಸ್ಟ್ ನಂತರ ರಕ್ಷ್ ಕ್ರೆಡಿಟ್ಸ್ ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ ಎಂದು ಬರೆದಿದ್ದರು. ರಕ್ಷ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರಿದ್ದರು.
ನಟ ರಕ್ಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಮುಗಿದ ಕೆಲವು ದಿನಗಳ ನಂತರ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು. ಸದ್ಯ ರಕ್ಷ್ ಇದೀಗ `ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: ಕಿರುತೆರೆಯ ಖ್ಯಾತ ನಟ ರಕ್ಷ್ ದುಬಾರಿ ಕಾರು ಖರೀದಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವೇದಾಂತ್ ಪಾತ್ರದಲ್ಲಿ ನಟಿಸುತ್ತಿರುವ ನಟ ರಕ್ಷ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕಾಗಿ ರಕ್ಷ್ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದಾರೆ. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಹೇಳಿಕೊಂಡಿದ್ದಾರೆ.
ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಕಾರಿನ ಫೋಟೋ ಹಾಕಿ ಅದಕ್ಕೆ, “ನಾನು ಕಿರುತೆರೆಯಲ್ಲಿ 10 ವರ್ಷ ದುಡಿದ ಬಳಿಕ ನನ್ನ ಹುಟ್ಟುಹಬ್ಬದಂದು ಈ ದುಬಾರಿ ಕಾರನ್ನು ಖರೀದಿಸಿದ್ದೇನೆ. ಈ ಕಾರನ್ನು ಖರೀದಿಸಲು ನನಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು. ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಇದಾಗಿದ್ದು, ದೇಶದಲ್ಲಿ ಇದು ಬಹಳ ಅಪರೂಪ. ಬಿಎಂಟಿಸಿ ಪಾಸ್ ನಿಂದ ಇಲ್ಲಿಯವರೆಗೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿ ಇಲ್ಲದಿದ್ದರೆ ಇದನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸ್ವಂತ ಹಣದಲ್ಲಿ ಕಾರು ಖರೀದಿಸುವಲ್ಲಿ ಸಿಗುವ ಖುಷಿ ಎಲ್ಲಿಯೂ ಸಿಗಲ್ಲ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನಂತರ ರಕ್ಷ್ ಕ್ರೆಡಿಟ್ಸ್ ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ ಎಂದು ಬರೆದಿದ್ದಾರೆ. ಸದ್ಯ ರಕ್ಷ್ ಅವರ ಪೋಸ್ಟ್ ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ಕಿರುತೆರೆ ನಟ-ನಟಿಯರು ದಾಂಪತ್ಯ ಜೀನವಕ್ಕೆ ಕಾಲಿಡುತ್ತಿದ್ದಾರೆ. ಇದೀಗ `ಪುಟ್ಟಗೌರಿ ಮದುವೆ’ ಧಾರಾವಾಹಿಯ ಖ್ಯಾತಿಯ ಕಿರುತೆರೆ ನಟ ರಕ್ಷ್ ತಮ್ಮ ಗೆಳತಿಯ ಜೊತೆ ಸಪ್ತಪದಿ ತುಳಿದಿದ್ದಾರೆ.
ನಟ ರಕ್ಷ್ ತಮ್ಮ ಗೆಳತಿ ಅನುಷಾ ಅವರನ್ನು ಮದುವೆಯಾಗಿದ್ದಾರೆ. ದಿನಾಂಕ 26 ರಂದು ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ರಕ್ಷ್ ಮತ್ತು ಅನುಷಾ ಅವರು ಕುಟುಂಬದವರ ಸಮ್ಮಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರ ಮದುವೆ ಕಾರ್ಯಕ್ರಮಕ್ಕೆ ಕಿರುತೆರೆ ನಟಿ ರಂಜನಿ ರಾಘವನ್, ಅನುಪಮಾ ಗೌಡ ಸೇರಿದಂತೆ ಅನೇಕರು ಬಂದು ನವಜೋಡಿಗೆ ಹಾರೈಸಿದ್ದಾರೆ. ಇದೀಗ ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಗಷ್ಟೆ ರಕ್ಷ್ ತಾನೂ ಮದುವೆಯಾಗುತ್ತಿರುವುದಾಗಿ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. “ಹೌದು. ನಾನು ಮದುವೆಯಾಗುತ್ತಿದ್ದೇವೆ. ಇದು ನನ್ನ ಪ್ರೀತಿಯ ಜನರಿಗೆ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಇದೇ ತಿಂಗಳ ದಿನಾಂಕ 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು” ಎಂದು ಬರೆದುಕೊಂಡು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು.
https://www.instagram.com/p/Bx6z2_nHTF9/
ನಟ ರಕ್ಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಕೆಲವು ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು. ಇದೀಗ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ರಕ್ಷ್ ನಟಿಸುತ್ತಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ಕಿರುತೆರೆ ನಟ-ನಟಿಯರು ದಾಂಪತ್ಯ ಜೀನವಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಈ ಸಾಲಿಗೆ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಖ್ಯಾತಿಯ ಕಿರುತೆರೆ ನಟ ರಕ್ಷ್ ಸೇರಿದ್ದಾರೆ.
ಹೌದು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ರಕ್ಷ್ ಅವರು ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ನಟ ರಕ್ಷ್ ಅವರು ಇದೇ 26 ರಂದು ಅಂದರೆ ಭಾನುವಾರ ಅನುಷಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ನಟ ರಕ್ಷ್ ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. “ಹೌದು ನಾನು ಮದುವೆಯಾಗುತ್ತಿದ್ದೇವೆ. ಇದು ನನ್ನ ಪ್ರೀತಿಯ ಜನರಿಗೆ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಇದೇ ತಿಂಗಳ ದಿನಾಂಕ 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು” ಎಂದು ಬರೆದುಕೊಂಡಿದ್ದಾರೆ.
ರಕ್ಷ್ ಮದುವೆ ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ನಡೆಯಲಿದೆ. ಆದರೆ ರಕ್ಷ್ ಹುಡುಗಿಯ ಹೆಸರು ಅನುಷಾ ಎಂದು ತಿಳಿಸಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಲ್ಲ. ಕೆಲವು ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು.