Tag: Rakhi

  • ಮೋದಿ ನಮಗೆ ಹಿರಿಯಣ್ಣ- ಪ್ರಧಾನಿಗೆ ವಿಶೇಷ ರಾಖಿ ಕಳಿಸಿದ ಮುಸ್ಲಿಂ ಮಹಿಳೆಯರು

    ಮೋದಿ ನಮಗೆ ಹಿರಿಯಣ್ಣ- ಪ್ರಧಾನಿಗೆ ವಿಶೇಷ ರಾಖಿ ಕಳಿಸಿದ ಮುಸ್ಲಿಂ ಮಹಿಳೆಯರು

    ವಾರಣಾಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಮಹಿಳೆಯರು ತಮ್ಮ ಕೈಯಿಂದಲೇ ತಯಾರಿಸಿದ ವಿಶೇಷ ರಾಖಿಯೊಂದನ್ನು ರಕ್ಷಾಬಂಧನ್‍ಗೆ ಕಳುಹಿಸಿಕೊಟ್ಟಿದ್ದಾರೆ.

    ವಾರಣಾಸಿ ಕ್ಷೇತ್ರದ ಸಂಸದರು ಆಗಿರುವ ಮೋದಿ ಅವರಿಗೆ ಇದೇ ನಗರದ ರಾಂಪುರದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಷೇಧ ಮಾಡಿದ್ದಕ್ಕೆ ಸಂತೋಷ ಪಟ್ಟು, ಮೋದಿ ನಮ್ಮೆಲ್ಲರ ಹಿರಿಯ ಸಹೋದರ ಎಂದು ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ.

    ಈ ವಿಚಾರದ ಬಗ್ಗೆ ಖುಷಿಯಿಂದ ಮಾತನಾಡಿರುವ ಹುಮಾ ಬಾನೊ ಎಂಬ ಮುಸ್ಲಿಂ ಮಹಿಳೆ, ತ್ರಿವಳಿ ತಲಾಖ್ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ತ್ರಿವಳಿ ತಲಾಖ್ ಎಂಬ ದುಷ್ಟ ನೀತಿಯನ್ನು ಅಂತ್ಯ ಮಾಡಿದ ಮೋದಿ ಅವರು ನಮಗೆ ಹಿರಿಯ ಅಣ್ಣನಂತೆ. ಆದ್ದರಿಂದ ಅವರಿಗೆ ನಮ್ಮ ಕೈಯಿಂದ ಮಾಡಿದ ರಾಖಿಯನ್ನು ಕಳುಹಿಸುತ್ತಿದ್ದೇವೆ. ದೇಶದ ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಮೋದಿ ಹಿರಿಯ ಸಹೋದರನಂತೆ ಎಂದು ಹೇಳಿದ್ದಾರೆ.

    ಇದನ್ನು “ಪ್ರಚಾರ”ಕ್ಕಾಗಿ ಮಾಡಿರುವುದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಲೇವಡಿ ಮಾಡಿದೆ. ಇದರ ಬಗ್ಗೆ ಮಾತನಾಡಿರುವ ಐಯುಎಂಎಲ್‍ನ ರಾಜ್ಯ ಅಧ್ಯಕ್ಷ ಮತಿನ್ ಖಾನ್, “ಆರ್‍ಎಸ್‍ಎಸ್‍ನ ಮುಸ್ಲಿಂ ಅಂಗಸಂಸ್ಥೆ ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದೆ. ಇದನ್ನು ಮಾಡಲು ಅವರು ಮುಸ್ಲಿಮರನ್ನು ನೇಮಿಸಿಕೊಂಡಿದ್ದಾರೆ. ಅಧಿಕಾರದಲ್ಲಿವವರು ಜನರ ಮೇಲೆ ಒತ್ತಡ ಹಾಕಿ ಮಾಡಿಸಲಾಗುತ್ತದೆ. ಸರ್ಕಾರದ ಪ್ರಚಾರಕ್ಕಾಗಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

  • ರಾಕಿ ಕಟ್ಟಿದ ಯುವತಿ- ಅಭಿಮಾನಿಗಳ ಸವಾಲು ಸ್ವೀಕರಿಸಿ ಎಳನೀರು ಕುಡಿದ ನಿಖಿಲ್

    ರಾಕಿ ಕಟ್ಟಿದ ಯುವತಿ- ಅಭಿಮಾನಿಗಳ ಸವಾಲು ಸ್ವೀಕರಿಸಿ ಎಳನೀರು ಕುಡಿದ ನಿಖಿಲ್

    ಮಂಡ್ಯ: ಮೈತ್ರಿ ಸರ್ಕಾರ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮೇಲುಕೋಟೆಯಲ್ಲಿ ಇಂದು ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಅವರಿಗೆ ರೈತರು ಕುಡಿಯಲು ಎಳನೀರು ಕೊಡುತ್ತಿದ್ದು, ಪ್ರೀತಿಯಿಂದ ಸ್ವಾಗತಿಸಿದ್ದಾರೆ.

    ಜಿ.ಮಲ್ಲಿಗೆರೆ ಗ್ರಾಮದಲ್ಲಿ ನಿಖಿಲ್ ಪ್ರಚಾರ ಮಾಡುವಾಗಿ ಅಭಿಮಾನಿಯೊಬ್ಬರು ನಿಖಿಲ್‍ಗೆ ಅಪ್ಪುಗೆ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಮಂಡ್ಯ ಶೈಲಿಯಲ್ಲಿ ಒಂದೇ ಬಾರಿಗೆ ಎಳನೀರು ಕುಡಿಯಲೇ ಬೇಕು ಸವಾಲು ಎಂದು ಹಾಕಿದ್ದರು. ಆಗ ನಿಖಿಲ್ ಅಭಿಮಾನಿಯ ಆಸೆಯಂತೆ ಮಂಡ್ಯದ ಶೈಲಿಯಲ್ಲಿ ಒಂದೇ ಬಾರಿಗೆ ಎಳನೀರು ಕುಡಿದಿದ್ದಾರೆ.

    ಒಮ್ಮೆ ಎಳನೀರು ಕುಡಿದಿದ್ದರೂ ಮತ್ತೆ ಎಳನೀರು ಕುಡಿಯುವಂತೆ ಅಭಿಮಾನಿ ಒತ್ತಾಯಿಸಿದ್ದಾರೆ. ಕೊನೆಗೆ ಅಭಿಮಾನಿಯ ಒತ್ತಾಯಕ್ಕೆ ಮಣಿದು ಒಂದೇ ಬಾರಿಗೆ ಕೆಳಗಿಳಿಸದೇ ನಿಖಿಲ್ ಪೂರ್ತಿ ಎಳನೀರು ಕುಡಿದಿದ್ದಾರೆ. ಬಳಿಕ ಅಜ್ಜಿಯ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.

    ಗೊರವಾಲೆ ಗ್ರಾಮದಲ್ಲಿ ಹೆಣ್ಣುಮಕ್ಕಳು ನಿಖಿಲ್‍ಗೆ ಬೆಲ್ಲದಾರತಿ ಬೆಳಗಿದ್ದು, ಯುವತಿ ಬಲಗೈಗೆ ರಾಖಿ ಕಟ್ಟಿದ್ದಾಳೆ. ಗ್ರಾಮದಲ್ಲಿ ಬೈಕಿನಲ್ಲಿ ಕುಳಿತು ನಿಖಿಲ್ ಪ್ರಚಾರ ಮಾಡಿದ್ದಾರೆ. ಆಗ ನಿಖಿಲ್ ಅವರಿಗೆ ರಸ್ತೆ ಮತ್ತು ಚರಂಡಿ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಜನರ ಕಷ್ಟ ಆಲಿಸಿದ ನಿಖಿಲ್ ಟೆಂಡರ್ ಆಗಿದೆ. ಸಮಸ್ಯೆ ಬಗೆ ಹರಿಸೋದಾಗಿ ಹೇಳಿದರು.

    ಬಳಿಕ ವೃದ್ಧರೊಬ್ಬರು ನಿಖಿಲ್‍ಗೆ ಹಾರ, ಪೇಟ ಹಾಕಿ ಸನ್ಮಾನ ಮಾಡಲು ಬಂದಿದ್ದಾರೆ. ಆಗ ನೀವು ಹಿರಿಯರು ನಿಮಗೇ ನಾನು ಸನ್ಮಾನ ಮಾಡಬೇಕು ಎಂದು ಸನ್ಮಾನ ಮಾಡಲು ಬಂದ ವೃದ್ಧನಿಗೆ ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಇನ್ನು ಹೊಳಲು ಗ್ರಾಮದಲ್ಲಿ ಪ್ರಚಾರದ ನಡುವೆ ನಿಖಿಲ್ ಟೀ ಅಂಗಡಿಯಲ್ಲಿ ಟೀ ಕುಡಿದರು. ಈ ವೇಳೆ ನಿಖಿಲ್‍ಗೆ ಅಭಿಮಾನಿಯೊಬ್ಬ ಮುತ್ತುಕೊಟ್ಟಿದ್ದಾರೆ.

  • ತಂಗಿಗೆ ರಾಖಿ ಗಿಫ್ಟ್ ಕೊಟ್ಟ ಅಣ್ಣ – ಪತ್ನಿಯಿಂದ ಆತ್ಮಹತ್ಯೆ ಯತ್ನ

    ತಂಗಿಗೆ ರಾಖಿ ಗಿಫ್ಟ್ ಕೊಟ್ಟ ಅಣ್ಣ – ಪತ್ನಿಯಿಂದ ಆತ್ಮಹತ್ಯೆ ಯತ್ನ

    ಲಕ್ನೋ: ಸಹೋದರನೊಬ್ಬ ರಕ್ಷಾಬಂಧನದ ಪ್ರಯುಕ್ತ ತಂಗಿಗಾಗಿ ಉಡುಗೊರೆ ನೀಡಿದ್ದಕ್ಕಾಗಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಆಶಿಶ್ ಸಹೋದರಿಗೆ ಗಿಫ್ಟ್ ಕೊಟ್ಟ ಅಣ್ಣ. ತಂಗಿಗೆ ಗಿಫ್ಟ್ ಕೊಟ್ಟಿದ್ದಕ್ಕೆ ಪತ್ನಿ ಕವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಶಿಶ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಪೋಷಕರ ಜತೆ ಕಾನ್ಪುರದ ಗೋವಿಂದ ನಗರದಲ್ಲಿ ವಾಸವಾಗಿದ್ದಾರೆ.

    ಭಾನುವಾರ ರಕ್ಷಾ ಬಂಧನ ಇದ್ದ ಕಾರಣ ಆಶಿಶ್ ಸಹೋದರಿ ಮನೆಗೆ ಬಂದಿದ್ದಾರೆ. ನಂತರ ಅಣ್ಣನ ಕೈಗೆ ರಾಖಿ ಕಟ್ಟಿದ್ದಾರೆ. ರಾಖಿ ಕಟ್ಟಿದ ಸಹೋದರಿಗೆ ಉಡಗೊರೆಯಾಗಿ ಆಶಿಶ್ 2,000 ರೂ. ನೀಡಿದ್ದಾರೆ. ಇದರಿಂದ ಕೋಪಗೊಂಡ ಪತ್ನಿ ರೂಮಿಗೆ ಹೋಗಿ ಲಾಕ್ ಮಾಡಿಕೊಂಡು ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ತಕ್ಷಣ ಪತಿ ಆಶಿಶ್ ನೋಡಿ ಆಕೆಯನ್ನು ರಕ್ಷಿಸಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪತ್ನಿ ಕವಿತಾ ತನ್ನ ಪತಿ ಸಹೋದರಿಗೆ 2 ಸಾವಿರ ರೂ. ಹಣ ನೀಡಿದ್ದಕ್ಕೆ ಬೇಸರಗೊಂಡು ಪತಿ ಆಶಿಶ್ ಜೊತೆ ಜಗಳವಾಡಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಬಳಿಕ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ನೋಡಿದ ಆಶಿಶ್ ಬಾಗಿಲು ಮುಗಿದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ.

    ಸದ್ಯಕ್ಕೆ ವೈದ್ಯರು ಕವಿತಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಗೋವಿಂದನಗರದ ಸ್ಟೇಷನ್ ಹೌಸ್ ಆಫೀಸರ್ ಸಂಜೀವ್ ಕಾಂತ್ ಮಿಶ್ರಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸರಿಗೆ ರಾಖಿ ಕಟ್ಟಿ ಮದುವೆಗೆ ಬೇಡಿಕೆಯಿಟ್ಟ ಯುವತಿ!

    ಪೊಲೀಸರಿಗೆ ರಾಖಿ ಕಟ್ಟಿ ಮದುವೆಗೆ ಬೇಡಿಕೆಯಿಟ್ಟ ಯುವತಿ!

    ಲಕ್ನೋ: ರಕ್ಷಾಬಂಧನ ಹಬ್ಬದಂದು ಪೊಲೀಸರಿಗೆ ರಾಖಿ ಕಟ್ಟಿ ಉತ್ತರ ಪ್ರದೇಶದ ಯುವತಿಯೊಬ್ಬಳು ತನ್ನ ಮದುವೆಗೆ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾಳೆ.

    ನರ್ಗೀಸ್ ಶಹಾಜಪುರ್ ನಿವಾಸಿ ರಾಜುನನ್ನು ಪ್ರೀತಿಸುತ್ತಿದ್ದಳು. ರಾಜು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೇ ಇಬ್ಬರ ಕುಟುಂಬದವರು ಸಂಬಂಧಿಕರಾಗಿದ್ದು, ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.

    ನಾಲ್ಕು ತಿಂಗಳ ಹಿಂದೆ ಇಬ್ಬರ ಕುಟುಂಬದವರು ಒಪ್ಪಿ ಮದುವೆಯನ್ನು ನಿಶ್ಚಯಿಸಿದ್ದರು. ದೀಪಾವಳಿ ಮೊದಲು ಇಬ್ಬರ ಮದುವೆಯಾಗಬೇಕಿತ್ತು. ಆದರೆ ಮದುವೆ ಮೊದಲು ಇಬ್ಬರು ಓಡಾಡುವುದು ನೋಡಿ ನರ್ಗೀಸ್ ಪೋಷಕರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದರು. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು. ಶನಿವಾರ ಒತ್ತಾಯಪೂರ್ವಕವಾಗಿ ಬೇರೆ ಯುವಕನೊಂದಿಗೆ ನರ್ಗೀಸ್ ಮದುವೆ ಮಾಡಲು ಮುಂದಾಗಿದ್ದರು.

    ಮದುವೆ ನಿಶ್ಚಯ ಆಗುವ ಮೊದಲು ನರ್ಗೀಸ್ ತಂದೆ ರಾಜುವಿಗೆ ನೋಯ್ಡಾದಲ್ಲಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಷರತ್ತು ಹಾಕಿದ್ದರು. ಈ ಮನೆ ಕಟ್ಟಲು ಒಂದು ವರ್ಷ ಅವಧಿಯನ್ನು ಕೂಡ ನೀಡಿದ್ದರು. ಆದರೆ ರಾಜುಗೆ ಸೈಟ್ ಖರೀದಿಸಿ ಮನೆ ಕಟ್ಟಲು ಹಣವಿರಲಿಲ್ಲ. ಇದ್ದರಿಂದ ನರ್ಗೀಸ್ ತಂದೆ ಬೇಸರಗೊಂಡು ಮದುವೆ ಮುರಿದ್ದರು. ಅಲ್ಲದೇ ತನ್ನ ಮಗಳನ್ನು ಬೇರೆ ಯುವಕನ ಜೊತೆ ಮದುವೆ ಮಾಡಿಸಲು ಮುಂದಾಗಿದ್ದರು.

    ಈ ವಿಚಾರ ತಿಳಿಯುತ್ತಿದ್ದಂತೆ ರಾಜುವನ್ನೇ ಮದುವೆಯಾಗಬೇಕೆಂದು ನರ್ಗೀಸ್ ಹಠ ಹಿಡಿದು ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿ ಪರಿಚಿತರ ಮನೆಯಲ್ಲಿ ರಾತ್ರಿ ಕಳೆದಿದ್ದಾಳೆ. ನಂತರ ಬೆಳಗ್ಗೆ ರಾಜುವನ್ನು ಕರೆದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ನರ್ಗೀಸ್, ರಾಜು ಜೊತೆ ಸೆಕ್ಟರ್ 49 ಪೊಲೀಸ್ ಠಾಣೆಗೆ ಹೋಗಿ ಕ್ಷೇತ್ರಾಧಿಕಾರಿ ಶ್ವೇತಾಬ್ ಪಾಂಡೆ ಹಾಗೂ ಅಲ್ಲಿದ್ದ ಎಲ್ಲ ಪೊಲೀಸರಿಗೆ ರಾಖಿ ಕಟ್ಟಿದ್ದಾಳೆ. ಪೊಲೀಸರಿಗೆ ರಾಖಿ ಕಟ್ಟಿ ನರ್ಗೀಸ್ ತನ್ನ ಪೋಷಕರು ಇಷ್ಟವಿಲ್ಲದ ಮದುವೆ ಮಾಡಿಸುತ್ತಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಕೇಳಿಕೊಂಡಿದ್ದಾಳೆ.

    ನಂತರ ಪೊಲೀಸರು ಇಬ್ಬರ ಕುಟುಂಬದವರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿದ್ದಾರೆ. ಎರಡು ಕುಟುಂಬದವರು ಈ ಮದುವೆಗೆ ಒಪ್ಪಿದ ಬಳಿಕ ರಾಜು ಮತ್ತು ನರ್ಗೀಸ್ ಮನೆಗೆ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ

    ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ

    ಧಾರವಾಡ: ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನವನ್ನ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ.

    ನಗರದ ಶಿವಾನಂದನಗರದ ಕಲ್ಪತರು ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ರಾಖಿ ಹಬ್ಬದ ಈ ಕಾರ್ಯಕ್ರಮದಲ್ಲಿ ಎಸ್‍ಪಿ ಸಂಗೀತಾ ಅವರು ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ಹಾಗೂ ಸಿಬ್ಬಂದಿಗೆ ರಾಖಿ ಕಟ್ಟಿದ್ದಾರೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಹಿಳಾ ಸಂಘದವರು ಕೂಡಾ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಣೆ ಮಾಡಿದ್ದಾರೆ.

    ಸಾಮಾನ್ಯವಾಗಿ ರಕ್ಷಾ ಬಂಧನದ ದಿನ ತಂಗಿ ಅಣ್ಣನಿಗೆ ರಾಖಿ ಕಟ್ಟುತ್ತಾರೆ. ಆದರೆ ಜಿಲ್ಲೆಯಲ್ಲಿ ಮಹಿಳೆಯರು ಪೊಲೀಸರಿಗೆ ರಾಖಿ ಕಟ್ಟುವ ಮೂಲಕ ಪೊಲೀಸ್ ಅಧಿಕಾರಿಗಳಲ್ಲೂ ಒಬ್ಬ ಅಣ್ಣನನ್ನು ಕಂಡಿದ್ದಾರೆ. ಅದೇ ರೀತಿ ಪೊಲೀಸರು ಕೂಡ ಸದಾ ಕರ್ತವ್ಯದಲ್ಲಿದ್ದು, ಎಲ್ಲ ಸಂಬಂಧದಿಂದ ದೂರು ಇರುತ್ತಾರೆ. ಆದರೆ ಈಗ ಮಹಿಳೆಯರ ಕೈಯಲ್ಲಿ ರಾಖಿ ಕಟ್ಟಿಸಿಕೊಂಡಿದ್ದು, ಸದಾ ನಿಮ್ಮನ್ನು ಕಾಪಾಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

    ಪೊಲೀಸ್ ಇಲಾಖೆ ಸಾರ್ವಜನಿಕರಿಂದ ದೂರ ಇದೆ ಎಂಬ ಮಾತು ಕೇಳಿ ಬರುತ್ತಿರುವ ಈ ದಿನಗಳಲ್ಲಿ, ಇಲಾಖೆ ಜನರ ಸಮೀಪದಲ್ಲಿಯೇ ಇದೆ ಎಂದು ತೋರಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವು ಎಂದು ಕಾರ್ಯಕ್ರಮ ಆಯೋಜಕರಾದ ಆರತಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕ್ಸಲರಿಂದ ಹತನಾಗಿದ್ದ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿದ ಸಹೋದರಿ!

    ನಕ್ಸಲರಿಂದ ಹತನಾಗಿದ್ದ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿದ ಸಹೋದರಿ!

    ರಾಯ್ಪುರ್: ನಕ್ಸಲರ ದಾಳಿಯಿಂದ ವೀರಮರಣವನ್ನಪ್ಪಿದ್ದ ಪೊಲೀಸ್ ಪೇದೆಯ ಪ್ರತಿಮೆಗೆ ಆತನ ತಂಗಿಯು ರಾಕಿ ಕಟ್ಟುವ ಮೂಲಕ ಛತ್ತೀಸಘಡ್‍ದ ದಾಂತೆವಾಡದಲ್ಲಿ ರಕ್ಷಾಬಂಧನವನ್ನು ಆಚರಿಸಿದ್ದಾರೆ.

    ದಾಂತೆವಾಡದ ಶಾಂತಿ ಉದೆ ಅಣ್ಣನ ಪ್ರತಿಮೆಗೆ ರಾಕಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಶಾಂತಿಯ ಅಣ್ಣ ರಾಜೇಶ್ ಗಾಯಕ್ವಾಡ್ ಪೊಲೀಸ್ ಪೇದೆಯಾಗಿದ್ದರು. 2014ರ ನಕ್ಸಲರ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಗೆ ಸಿಲುಕಿ ವೀರಮರಣವನ್ನಪ್ಪಿದ್ದರು. ಅಂದಿನಿಂದಲೂ ತಮ್ಮ ಊರಿನಲ್ಲಿರುವ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಸಂಪ್ರದಾಯವನ್ನು ಆರಂಭಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಅಣ್ಣನನ್ನು 2014ರ ಮಾರ್ಚ್ 11ರಂದು ನಕ್ಸಲ್ ಕಾರ್ಯಾಚರಣೆಗಾಗಿ ಸುಕ್ಮಾದ ತೊಂಗಾಪಾಲ್ ಪ್ರದೇಶಕ್ಕೆ ನೇಮಕ ಮಾಡಿದ್ದರು. ಆದರೆ ಅವನು ನಕ್ಸಲರ ದಾಳಿಗೆ ಹುತಾತ್ಮನಾದ. ನನ್ನ ಒಬ್ಬನೇ ಒಬ್ಬ ಅಣ್ಣನ ಸಾವಿನಿಂದಾಗಿ ನನಗೆ ತುಂಬಾ ದುಃಖವಾಯಿತು. ಕೊನೆಯವರೆಗೂ ರಾಕಿ ಕಟ್ಟುವ ಆಸೆಯಿಟ್ಟುಕೊಂಡಿದ್ದ ನನಗೆ ನಿರಾಸೆಯಾಯಿತು. ಹೀಗಾಗಿ ನಾನು ಅಂದಿನಿಂದಲೂ ನನ್ನ ಅಣ್ಣನ ಪ್ರತಿಮೆಗೆ ರಾಕಿ ಕಟ್ಟುವ ಮೂಲಕ ಸಂಭ್ರಮಪಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿ ಮೋದಿ ಭಾವಚಿತ್ರದ ಚಿನ್ನದ ರಾಖಿಗೆ ಭಾರೀ ಬೇಡಿಕೆ

    ಪ್ರಧಾನಿ ಮೋದಿ ಭಾವಚಿತ್ರದ ಚಿನ್ನದ ರಾಖಿಗೆ ಭಾರೀ ಬೇಡಿಕೆ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗುಜರಾತ್ ಸಿಎಂ ವಿಜಯ್ ರೂಪಾನಿ ಭಾವಚಿತ್ರವಿರುವ ಚಿನ್ನದ ರಾಖಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಈಗಾಗಲೇ ಸಿದ್ಧವರುವ 50 ರಾಖಿಗಳಲ್ಲಿ 47 ಮಾರಾಟವಾಗಿದೆ.

    ಗುಜರಾತ್‍ನ ಸೂರತ್‍ನ ಆಭರಣದ ಅಂಗಡಿಯೊಂದು 22 ಕ್ಯಾರೆಟ್ ಶುದ್ಧ ಚಿನ್ನದಲ್ಲಿ ರಾಖಿಗಳನ್ನು ಸಿದ್ಧಪಡಿಸಿದ್ದು, ಒಂದು ರಾಖಿಗೆ 50 ಸಾವಿರ ದಿಂದ 70 ಸಾವಿರ ರೂ. ನಿಗದಿ ಮಾಡಿದೆ. ಈ ರಾಖಿಯನ್ನು ಸಹೋದರಿನಿಗೆ ಕಟ್ಟಿ ಪ್ರಧಾನಿ ನರೇಂದ್ರ ಮೋದಿ ಹಾಗೆ ನೀವು ಎತ್ತರಕ್ಕೆ ಬೆಳೆ ಶುಭಕೋರುತ್ತೇನೆ ಎಂದು ರಾಖಿ ಖರೀದಿಸಿದ ಶ್ರದ್ಧಾ ಎಂಬ ಯುವತಿಯೊಬ್ಬರು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಹಾಗೂ ವಿಜಯ್ ರೂಪಾನಿ ದೇಶದ ಅಭಿವೃದ್ಧಿಗಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಂದ ವಿಶ್ವದಾದ್ಯಂತ ಲಕ್ಷಾಂತರ ಜನ ಸ್ಫೂರ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಅವರ ಭಾವಚಿತ್ರವಿರುವ ರಾಖಿಯನ್ನು ಸಿದ್ಧ ಪಡಿಸಿದ್ದೇವೆ ಎಂದು ಆಭರಣದ ಅಂಗಡಿಯ ಮಾಲೀಕರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ಬೆಳಗಾವಿ: ಸಹೋದರನಿಗೆ ರಾಖಿ ಖರೀದಿಸಲು ಪತಿ ಹಣ ಕೊಡಲಿಲ್ಲ ಎಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಮಲಪ್ರಭಾ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಮಹಾದೇವಿ ಗೊಲ್ಲರ(23) ನೇಣಿಗೆ ಶರಣಾದ ಮಹಿಳೆ. ಮಹಾದೇವಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಪತಿಯ ಬಳಿ 10 ರೂ. ಕೇಳಿದ್ದಳು. ಆದರೆ ಪತಿ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ನೇಣಿಗೆ ಶರಣಾಗಿದ್ದಾರೆ.

    ಅಶೋಕ್ ಮತ್ತು ಮಹಾದೇವಿ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಸದ್ಯ ಪತಿ ಅಶೋಕ್ ಗೊಲ್ಲರ ವಿರುದ್ಧ ಕೊಲೆ ಯತ್ನ ಎಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಶೋಕನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

    ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

    ಚಿತ್ರದುರ್ಗ: ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಠಿಯಿಂದ ನೋಡೋ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಇವರು ಮಾದರಿ. ಹುಟ್ಟುತ್ತಾ ಅನಾಥನಾದರೂ ನೂರಾರು ಹೆಣ್ಣು ಮಕ್ಕಳಿಗೆ ಅಣ್ಣ. ಇಂತಹ ಅಪರೂಪದ ಅಣ್ಣ ಜಿಲ್ಲೆಯಲ್ಲಿದ್ದಾರೆ.

    ಪ್ರತಿ ವರ್ಷ ರಕ್ಷಾ ಬಂಧನ ಸಮಯದಲ್ಲಿ ನೂರಾರು ಹೆಂಗಳೆಯರು ರಾಖಿ ಕಟ್ಟಿ ಈ ಅಣ್ಣನ ಆರ್ಶೀವಾದ ಪಡಿಯುತ್ತಾರೆ. ಹಾಸ್ಯ ಕವಿ ಎಂದೇ ಗುರುತಿಸಿಕೊಂಡಿರುವ ಜಗನ್ನಾಥ್ ಅದೆಷ್ಟೋ ಸಹೋದರಿಯರಿಗೆ ಪ್ರೀತಿಯ ಅಣ್ಣನಾಗಿದ್ದಾರೆ.

    ರಕ್ಷಾ ಬಂಧನದ ದಿನ ಇವರ ಕೈಗಳು ರಾಖಿಗಳಿಂದ ಕಂಗೊಳಿಸುತ್ತಿರುತ್ತವೆ. ರಾಖಿ ಕಟ್ಟಿದ ಸಹೋದರಿಯರಿಗೆ ನೆನಪಿನ ಕಾಣಿಕೆಯಾಗಿ ಉಡುಗೊರೆಯನ್ನೂ ಕೊಡುವ ವಾಡಿಕೆ ಇದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆಸಿಕೊಂಡು ಬರುತ್ತಿರುವ ಜಗನ್ನಾಥ್ ಈ ಮೂಲಕ ತನಗಿಲ್ಲದ ಹೆತ್ತವರ ಪ್ರೀತಿಯನ್ನ ಕಂಡಿದ್ದಾರೆ.

  • ಮೋದಿಗೆ ಕಳೆದ 20 ವರ್ಷಗಳಿಂದ ರಾಖಿ ಕಟ್ತಿರೋ ಪಾಕ್ ಮಹಿಳೆ!

    ಮೋದಿಗೆ ಕಳೆದ 20 ವರ್ಷಗಳಿಂದ ರಾಖಿ ಕಟ್ತಿರೋ ಪಾಕ್ ಮಹಿಳೆ!

     

    ನವದೆಹಲಿ: ಸದ್ಯ ಭಾರತದಲ್ಲಿ ವಾಸವಿರುವ ಪಾಕಿಸ್ತಾನದ ಮಹಿಳೆಯೊಬ್ಬರು ಕಳೆದ 20 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ.

    ನರೇಂದ್ರ ಭಾಯ್ ಅವರಿಗೆ ನಾನು ಕಳೆದ 22-23 ವರ್ಷಗಳಿಂದ ರಾಖಿ ಕಟ್ಟುತ್ತಾ ಬಂದಿದ್ದೇನೆ. ಈ ವರ್ಷವೂ ಅವರಿಗೆ ರಾಖಿ ಕಟ್ಟಲು ತುಂಬಾ ಉತ್ಸುಕಳಾಗಿದ್ದೀನಿ ಅಂತ ಕಮರ್ ಮೊಹ್ಸಿನ್ ಶೇಖ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

    ಕಮರ್ ಮೊಹ್ಸಿನ್ ಅವರು ಪಾಕಿಸ್ತಾನದವರಾಗಿದ್ದು, ಮದುವೆಯಾದ ನಂತರ ಭಾರತಕ್ಕೆ ಬಂದು ನೆಲೆಸಿದ್ದಾರೆ. ಇವರು ಮೋದಿಗೆ ಮೊದಲನೇ ಬಾರಿಗೆ ರಾಖಿ ಕಟ್ಟಿದ್ದು ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದಾಗ.

    ನಾನು ನರೇಂದ್ರ ಭಾಯ್ ಅವರಿಗೆ ಮೊದಲ ಬಾರಿಗೆ ರಾಖಿ ಕಟ್ಟಿದಾಗ ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದರು. ಅವರ ಧ್ಯೇಯ ಹಾಗೂ ಕಠಿಣ ಪರಿಶ್ರಮದಿಂದ ಇಂದು ಪ್ರಧಾನಿ ಆಗಿದ್ದಾರೆ ಎಂದು ಕಮರ್ ಹೇಳಿದ್ದಾರೆ.

    ಈಗ ಪ್ರಧಾನಿಯವರು ತುಂಬಾ ಬ್ಯುಸಿ ಇರ್ತಾರೆ ಅಂದುಕೊಂಡಿದ್ದೆ. ಆದ್ರೆ ಎರಡು ದಿನಗಳ ಹಿಂದೆ ಅವರು ಕರೆ ಮಾಡಿದ್ದರು. ನನಗೆ ತುಂಬಾ ಖುಷಿಯಾಯ್ತು. ರಕ್ಷಾ ಬಂಧನ್‍ಗೆ ತಯಾರಿ ಶುರು ಮಾಡಿದೆ ಎಂದಿದ್ದಾರೆ.