Tag: Rakhi

  • ಕಾರ್ತಿಕ್‌ಗೆ ರಾಖಿ ಕಟ್ಟಿದ ಸಂಗೀತಾ

    ಕಾರ್ತಿಕ್‌ಗೆ ರಾಖಿ ಕಟ್ಟಿದ ಸಂಗೀತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಖಿ ಕಟ್ಟಿಕೊಂಡಿದ್ದ ಮಕ್ಕಳಿಗೆ ಕ್ಷಮಾಪಣೆ ಪತ್ರ ಕೇಳಿದ ಮುಖ್ಯಶಿಕ್ಷಕಿ

    ರಾಖಿ ಕಟ್ಟಿಕೊಂಡಿದ್ದ ಮಕ್ಕಳಿಗೆ ಕ್ಷಮಾಪಣೆ ಪತ್ರ ಕೇಳಿದ ಮುಖ್ಯಶಿಕ್ಷಕಿ

    – ಮುಖ್ಯಶಿಕ್ಷಕಿ ವರ್ತನೆಗೆ ಪೋಷಕರು, ವಿಹೆಚ್‌ಪಿ ಮುಖಂಡರ ಆಕ್ರೋಶ

    ಶಿವಮೊಗ್ಗ: ಬುಧವಾರ ನಾಡಿನೆಲ್ಲೆಡೆ ರಾಖಿ (Rakhi) ಹಬ್ಬದ ಸಂಭ್ರಮ. ಅಣ್ಣ ತಂಗಿಯರ ನಡುವೆ ಸಹೋದರ ಭ್ರಾತೃತ್ವ ಗಟ್ಟಿಯಾಗುವ ಸಲುವಾಗಿ ಈ ರಾಖಿ ಹಬ್ಬ ಆಚರಿಸುತ್ತಾರೆ. ಆದರೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರದ (Sagara) ಖಾಸಗಿ ಶಾಲೆಯಲ್ಲಿ ರಾಖಿ ಕಟ್ಟಿಕೊಂಡಿದ್ದೇ ರಾದ್ಧಾಂತಕ್ಕೆ ಕಾರಣವಾಗಿದೆ.

    ಸಾಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಮಕ್ಕಳು ಬುಧವಾರ ರಾಖಿ ಕಟ್ಟಿಕೊಂಡು ತರಗತಿಗೆ ಬಂದಿದ್ದರು. ರಾಖಿ ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕಿ ಕೋಲನ್ ದೇವಿ ಥೆರೆಸಾ ಅವರು ತರಗತಿಯಿಂದ ಹೊರಗೆ ನಿಲ್ಲಿಸಿ, ಕ್ಷಮಾಪಣೆ ಪತ್ರ (Apology Letter) ಬರೆದುಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕಿಯ ಈ ವರ್ತನೆ ಪೋಷಕರು ಹಾಗು ವಿಶ್ವ ಹಿಂದು ಪರಿಷತ್ ಮುಖಂಡರನ್ನು ಕೆರಳಿಸಿದೆ. ಇದನ್ನೂ ಓದಿ: ಕಿಡ್ನಿ ವೈಫಲ್ಯ – ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

    ಶಾಲೆಗೆ ತೆರಳಿದ ಪೋಷಕರು ಹಾಗು ವಿಹೆಚ್‌ಪಿ ಕಾರ್ಯಕರ್ತರು ಮುಖ್ಯ ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಾಗರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲಿನಿಂದ ಹೊಡೆದು ಯುವಕನ ಹತ್ಯೆಗೈದ ದುಷ್ಕರ್ಮಿಗಳು – ಸಿಸಿ ಟಿವಿಯಲ್ಲಿ ಕೃತ್ಯ ಸೆರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    ಪಾಟ್ನಾ: ಜನಪ್ರಿಯ ಆನ್‌ಲೈನ್ ಬೋಧಕ, ಪಾಟ್ನಾದ ಖಾನ್ ಸರ್ (Khan Sir) 7,000 ರಾಖಿಗಳನ್ನು (Rakhi) ಕಟ್ಟಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ (World Record) ಬರೆದಿದ್ದಾರೆ. ರಕ್ಷಾ ಬಂಧನ (Raksha Bandhan) ದಿನದಂದು ಕೋಚಿಂಗ್ ಸೆಂಟರ್‌ನಲ್ಲಿ (Coaching Centre) ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು (Students) ಖಾನ್ ಸರ್‌ಗೆ ರಾಖಿ ಕಟ್ಟಲು ಮುಗಿಬಿದ್ದರು.

    ಅಪಾರ ಜನಸ್ತೋಮದಿಂದಾಗಿ ಎಲ್ಲರಿಗೂ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಖಾನ್ ಸರ್ ಅವರು ಪ್ರತಿಯೊಬ್ಬ ವಿದ್ಯಾರ್ಥಿನಿಯನ್ನೂ ಖುದ್ದಾಗಿ ಭೇಟಿಯಾಗಿ ರಾಖಿ ಕಟ್ಟುವಂತೆ ನೋಡಿಕೊಂಡರು. ಈ ಘಟನೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು. ಇಂತಹ ಘಟನೆ ಹಿಂದೆಂದೂ ಸಂಭವಿಸಿಲ್ಲ. ಇದು ವಿಶ್ವ ದಾಖಲೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಮುಖ್ಯ ವಕ್ತಾರೆ

    ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಖಾನ್ ಸರ್, ನನಗೆ ಸ್ವಂತ ಸಹೋದರಿಯರು ಇಲ್ಲ. ಆದ್ದರಿಂದ ಈ ಎಲ್ಲಾ ಹುಡುಗಿಯರನ್ನು ತನ್ನ ಸಹೋದರಿಯರಂತೆ ಪರಿಗಣಿಸುತ್ತೇನೆ. ಪ್ರತಿ ವರ್ಷ ನನ್ನ ವಿದ್ಯಾರ್ಥಿಗಳಿಂದ ರಾಖಿಗಳನ್ನು ಕಟ್ಟಲಾಗುತ್ತದೆ. ಅವರಷ್ಟು ರಾಖಿಗಳನ್ನು ಜಗತ್ತಿನಲ್ಲಿ ಯಾರೂ ಯಾರಿಗೂ ಕಟ್ಟುತ್ತಿರಲಿಲ್ಲ ಎಂದು ವಿಶ್ವಾಸದಿಂದ ಹೇಳಿದರು. ಇದನ್ನೂ ಓದಿ: ನಾಳೆಯಿಂದ INDIA ಒಕ್ಕೂಟದ 3ನೇ ಸಭೆ – ‘ಬಿಜೆಪಿ ಚಲೇ ಜಾವೋ’ ಅಭಿಯಾನಕ್ಕೆ ಚಾಲನೆ ನಿರೀಕ್ಷೆ

    ವಿದ್ಯಾರ್ಥಿನಿಯರು ಕೋಚಿಂಗ್ ಪಡೆಯಲು ಬೇರೆ ಬೇರೆ ಸ್ಥಳಗಳಿಂದ ಬರುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ತಮ್ಮ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಾರೆ. ಅವರು ತಮ್ಮ ಕುಟುಂಬಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಅವರಿಗೆ ಸಹೋದರನ ಸ್ಥಾನ ನೀಡುತ್ತೇನೆ. ಶಿಕ್ಷಣದ ಮೂಲಕ ತನ್ನ ಸಹೋದರಿಯರು ಯಶಸ್ಸನ್ನು ಸಾಧಿಸಲು ಮತ್ತು ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುವುದು ನನ್ನ ಗುರಿಯಾಗಿದೆ ಎಂದರು. ಇದನ್ನೂ ಓದಿ: Chandrayaan-3: ‘ಸ್ಮೈಲ್ ಪ್ಲೀಸ್’ – ವಿಕ್ರಂನ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಖಾನ್ ಸರ್ ಅವರನ್ನು ವಿಶ್ವದ ಅತ್ಯುತ್ತಮ ಶಿಕ್ಷಕ, ಗುರು ಮತ್ತು ಸಹೋದರ ಎಂದು ಶ್ಲಾಘಿಸಿದರು. ಅವರಿಗಿಂತ ಉತ್ತಮ ಸಹೋದರ ಇಲ್ಲ ಎಂದು ಪ್ರತಿಪಾದಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಖಾನ್ ಸರ್ ಅವರ ಕೈಗೆ ರಾಖಿ ಕಟ್ಟುವುದನ್ನು ಮುಂದುವರಿಸುತ್ತೇವೆ ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣ, ತಂಗಿಯರ ಬಾಂಧವ್ಯದ ಹಬ್ಬವೇ ರಕ್ಷಾ ಬಂಧನ – ವಿಶೇಷತೆ ಏನು?

    ಅಣ್ಣ, ತಂಗಿಯರ ಬಾಂಧವ್ಯದ ಹಬ್ಬವೇ ರಕ್ಷಾ ಬಂಧನ – ವಿಶೇಷತೆ ಏನು?

    ಶ್ರಾವಣ ಮಾಸ ಬಂತೆಂದರೆ ಸಾಲು ಸಾಲಾಗಿ ಹಬ್ಬಗಳು ಬರುತ್ತವೆ. ಮೊದಲಿಗೆ ವರಮಹಾಲಕ್ಷ್ಮಿ ಹಬ್ಬ ಬರುತ್ತದೆ. ನಂತರ ಬರುವುದೇ ಸಂಬಂಧವನ್ನು ಬೆಸೆಯುವ ಬಾಂಧವ್ಯದ ರಾಖಿ ಹಬ್ಬ. ಸಹೋದರ ಮತ್ತು ಸಹೋದರಿ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯದೆ ಉಳಿಯಲು ಪ್ರತೀ ವರ್ಷ ರಕ್ಷಾ ಬಂಧನವನ್ನು (Raksha Bandhan) ಆಚರಿಸಲಾಗುತ್ತದೆ.

    ಅಣ್ಣ-ತಂಗಿಯ (Brother Sister) ಬಂಧನಕ್ಕೆ ಬೆಲೆ ಕಟ್ಟಲಾಗದು. ಮನೆಯಲ್ಲಿ ಅಣ್ಣ ಅಥವಾ ತಮ್ಮನಿಗೆ ತಂಗಿ ಅಥವಾ ಅಕ್ಕ ಯಾವಾಗಲೂ ಬೆಂಬಲವಾಗಿ ನಿಲ್ಲುವರು. ಸಹೋದರ ಮತ್ತು ಸಹೋದರಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು ಹೆಚ್ಚಾಗಿ ಆಚರಿಸುತ್ತಾರೆ. ಅಣ್ಣನ ಕೈಗೆ ತಂಗಿ ರಾಖಿ ಕಟ್ಟುವ ಮೂಲಕ ತಂಗಿ ಅಣ್ಣ ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನು ನೀಡುತ್ತಾನೆ ಎಂಬ ನಂಬಿಕೆ ಇಟ್ಟುಕೊಂಡಿರುತ್ತಾಳೆ.

    ರಕ್ಷಾ ಬಂಧನ ಹಬ್ಬವನ್ನು ರಾಷ್ಟ್ರದೆಲ್ಲೆಡೆಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಇದು ಹಿಂದೂಗಳ ಹಬ್ಬವಾದರೂ ಹೆಚ್ಚಿನ ಧರ್ಮಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ದಿನ ಸೋದರಿಯು ತನ್ನ ಸೋದರನ ಕೈಗೆ ರಕ್ಷೆಯ ದಾರವನ್ನು ಕಟ್ಟುತ್ತಾಳೆ. ಅದನ್ನೇ ರಾಖಿ ಎಂದು ಕರೆಯಲಾಗುತ್ತದೆ. ಈ ದಾರವನ್ನು ಕಟ್ಟುವ ವೇಳೆ ತಂಗಿ ತನ್ನ ಅಣ್ಣನಿಗೆ ದೀರ್ಘಾಯುಷ್ಯ, ಆರೋಗ್ಯವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾಳೆ.

    ಇದಕ್ಕೆ ಪ್ರತಿಯಾಗಿ ಸಹೋದರನು ಕೂಡ ತನ್ನ ಸಹೋದರಿಯನ್ನು ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ. ಅಷ್ಟೇ ಅಲ್ಲದೇ ತನ್ನ ಪ್ರೀತಿಯ ತಂಗಿಗೆ ಇಷ್ಟವಾಗಿರುವ ಉಡುಗೊರೆ ನೀಡುತ್ತಾನೆ. ರಕ್ಷಾಬಂಧನ ಎಂಬುದರಲ್ಲಿ ಎರಡು ಪದಗಳಿವೆ. ಒಂದು ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಅಣ್ಣ-ತಂಗಿ ಇಬ್ಬರು ಪರಸ್ಪರ ಹಂಚಿಕೊಳ್ಳುವ ಪ್ರೀತಿ ಯಾವತ್ತೂ ಕೊನೆಗೊಳ್ಳದು.

    ರಾಖಿ ಕಟ್ಟುವುದು: ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು, ನೆತ್ತಿಯ ಮೇಲೆ ಅಕ್ಕಿ ಅಥವಾ ಅಕ್ಷತೆಯನ್ನು ಹಾಕಬೇಕು. ಬಳಿಕ ಅಣ್ಣಿನಿಗೆ ಆರತಿ ಬೆಳಗಬೇಕು. ಕೊನೆಯಲ್ಲಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು. ತಂಗಿ ರಾಖಿ ಕಟ್ಟಿದ ನಂತರ ಅಣ್ಣ ಪ್ರೀತಿಯ ಸಹೋದರಿಗೆ ಉಡುಗೊರೆ ಕೊಡುತ್ತಾನೆ.

    ರಕ್ಷಾ ಬಂಧನದ ಹಿನ್ನೆಲೆ ಏನು?
    ಪ್ರತಿಯೊಂದು ಹಬ್ಬಕ್ಕೂ ಪುರಾಣದಲ್ಲಿ ತನ್ನದೇ ಆದ ಹಿನ್ನೆಲೆ ಇತಿಹಾಸವನ್ನು ಹೊಂದಿರುತ್ತವೆ. ಅದೇ ರೀತಿ ರಕ್ಷಾ ಬಂಧನಕ್ಕೂ ಕೂಡ ಅನೇಕ ಇತಿಹಾಸಗಳಿವೆ. ಭಗವಾನ್ ಕೃಷ್ಣನು ಶಿಶುಪಾಲನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಈ ವೇಳೆ ಆತನ ಕೈ ಬೆರಳಿಗೆ ಗಾಯವಾಗುತ್ತದೆ. ಎಲ್ಲರೂ ಕೈಬೆರಳಿಗೆ ಕಟ್ಟಲು ಬಟ್ಟೆಯನ್ನು ತರಲು ಹೋಗುತ್ತಾರೆ. ಆದರೆ ದ್ರೌಪದಿ ತನ್ನ ಸೀರೆಯ ಒಂದು ತುಂಡನ್ನು ಕತ್ತರಿಸಿ ರಕ್ತ ಸುರಿಯುತ್ತಿರುವ ಕೃಷ್ಣನ ಕೈಗೆ ಕಟ್ಟುತ್ತಾಳೆ. ಇದಕ್ಕೆ ಪ್ರತಿಫಲವನ್ನು ನೀಡಿದ ಶ್ರೀಕೃಷ್ಣ ಹಸ್ತಿನಾಪುರದ ಅರಮನೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆದಾಗ ಅದು ಎಳೆದಷ್ಟು ಉದ್ದವಾಗುವಂತೆ ಮಾಡಿ ದ್ರೌಪದಿಯ ಮಾನ ಕಾಪಾಡುತ್ತಾನೆ.

    ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದ್ದಳು. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಭರವಸೆ ನೀಡುತ್ತಾನೆ.

    ಇನ್ನೊಂದು ಕಥೆಯೆಂದರೆ, ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ. ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮೀ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ. ಹೀಗೆ ರಕ್ಷಾ ಬಂಧನಕ್ಕೆ ತನ್ನದೆ ಆದ ಹಿನ್ನೆಲೆಯನ್ನು ಹೊಂದಿದೆ.

    ಮಹತ್ವ:
    ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುತ್ತದೆ. ಈ ಹಬ್ಬದ ಮೂಲಕ ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತದೆ. ರಾಖಿಯನ್ನು ಕಟ್ಟುವ ಸೋದರಿಯು ತನ್ನ ಸೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಸಂಕೇತವಾಗಿದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗೂ ಶಕ್ತಿಯನ್ನು ಸೋದರನಿಗೆ ನೆನಪು ಮಾಡಿಕೊಡುತ್ತದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಬಾಲಿವುಡ್ (Bollywood) ನಟಿ ರಾಖಿ ಸಾವಂತ್ (Rakhi Sawant) ಮೈಸೂರು ಹುಡುಗ ಆದಿಲ್ ಖಾನ್ (Adil Khan) ಜೊತೆ ವೈವಾಹಿಕ ಜೀವನ ಆರಂಭಿಸುತ್ತಿರುವ ಬೆನ್ನಲ್ಲೇ ನಟಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರಾಖಿ ಸಾವಂತ್‌ನ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಇತ್ತೀಚೆಗೆ ತಮ್ಮ ಮದುವೆ ವಿಚಾರವಾಗಿ ರಾಖಿ ಸಖತ್ ಸುದ್ದಿಯಲ್ಲಿದ್ದರು. ಆದಿಲ್ ಜೊತೆಗಿನ ಮದುವೆ ವಿವಾದ ಸುಖಾಂತ್ಯ ಕಂಡ ಬೆನ್ನಲ್ಲೇ ʻಬಿಗ್ ಬಾಸ್ʼ ಖ್ಯಾತಿಯ ರಾಖಿ ಸಾವಂತ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಶೆರ್ಲಿನ್ ಚೋಪ್ರಾ (Sherlyn Chopra) ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಾಖಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ಯುವ ನಟ ಧನುಷ್ ನಿಧನ

    ರಾಖಿ ಬಂಧನ ಬಗ್ಗೆ ಟ್ವಿಟ್ಟರ್‌ನಲ್ಲಿ ನಟಿ ಶೆರ್ಲಿನ್ ಮಾಹಿತಿ ಹಂಚಿಕೊಂಡಿದ್ದಾರೆ. ಅಂಬೋಲಿ ಪೊಲೀಸರು ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. (ಜ.18)ರಂದು ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ಸ್‌ ಕೋರ್ಟ್ ತಿರಸ್ಕರಿಸಿತ್ತು ಎಂದು ಶೆರ್ಲಿನ್ ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಮೀ ಟೂ ಆರೋಪಿ ಸಾಜಿದ್ ಖಾನ್ (Sajid Khan) ವಿರುದ್ಧ ನೀಡಿದ ಹೇಳಿಕೆಗಾಗಿ ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ಟೋಬರ್ 29ರಂದು ಸಾಜಿದ್ ಖಾನ್ ವಿರುದ್ಧ ಹೇಳಿಕೆಯನ್ನು ದಾಖಲಿಸಿದ ನಂತರ ಶೆರ್ಲಿನ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಲ್ಮಾನ್ ಖಾನ್ (Salman Khan), ಸಿನಿಮಾ ನಿರ್ಮಾಪಕನನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಬಳಿಕ ರಾಖಿ, ಶೆರ್ಲಿನ್ ಹೇಳಿಕೆಯನ್ನು ಖಂಡಿಸಿದರು. ಪಾಪರಾಜಿಗಳೊಂದಿಗೆ ಮಾತನಾಡಿದ್ದ ರಾಖಿ, ಯಾವ ದೂರಿನಲ್ಲಿ ಅರ್ಹತೆ ಇದೆ ಮತ್ತು ಯಾವುದು ಇಲ್ಲ ಎಂದು ಪೊಲೀಸರಿಗೆ ತಿಳಿದಿದೆ ಎಂದು ಹೇಳಿದರು. ನಂತರ ಶೆರ್ಲಿನ್ ಚೋಪ್ರಾ, ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದರು.

    ಇನ್ನೂ ಪತಿ ಆದಿಲ್ ಜೊತೆ ಸೇರಿ ರಾಖಿ ಡ್ಯಾನ್ಸ್ ಅಕಾಡೆಮಿಯನ್ನ ಶುರು ಮಾಡಿದ್ದರು. ಅದರ ಉದ್ಘಾಟನೆ ಮಾಡಬೇಕಿತ್ತು. ಜ.19 ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮುನ್ನವೇ ನಟಿಯ ಬಂಧನವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ಹೊರಟ್ಟಿದ್ದವನ ಜೀವ ತೆಗೆದ ಗಾಳಿಪಟ ದಾರ

    ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ಹೊರಟ್ಟಿದ್ದವನ ಜೀವ ತೆಗೆದ ಗಾಳಿಪಟ ದಾರ

    ನವದೆಹಲಿ: ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ತೆರಳುತ್ತಿದ್ದ ಬೈಕ್ ಸವಾರನ ಗಂಟಲನ್ನು ಗಾಜಿನ ಲೇಪಿತ ಗಾಳಿಪಟದ ದಾರ ಸೀಳಿದ್ದು, ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಇದೇ ರೀತಿ ಈ ಹಿಂದೆ ಹಲವಾರು ಅಪಘಾತಗಳಿಗೆ ಕಾರಣವಾಗಿದ್ದ ಚೈನೀಸ್ ಮಾಂಜಾ ಎಂದು ಕರೆಯಲಾಗುವ ಗಾಜಿನ ಲೇಪಿತ ಗಾಳಿಪಟದ ದಾರವನ್ನು ದೆಹಲಿಯಲ್ಲಿ 2016 ರಿಂದ ನಿಷೇಧಿಸಲಾಗಿತ್ತು. ಆದರೆ ಇದೀಗ ಎಲ್ಲೆಡೆ ವ್ಯಾಪಕವಾಗಿ ಈ ದಾರವನ್ನು ಬಳಸಲಾಗುತ್ತಿದ್ದು, ಈ ತಿಂಗಳಿನಲ್ಲಿ ದೆಹಲಿಯಲ್ಲಿ ಈ ರೀತಿಯ ಘಟನೆ ಎರಡನೇ ಬಾರಿಗೆ ಸಂಭವಿಸಿದೆ. ಇದನ್ನೂ ಓದಿ: ಅರೆಸ್ಟ್ ಮಾಡೋ ಭಯ – ಅಗ್ನಿಪಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಆತ್ಮಹತ್ಯೆ

    ಮೃತ ವ್ಯಕ್ತಿಯನ್ನು ವಿಪಿನ್ ಕುಮಾರ್ ಲೋನಿ ಎಂದು ಗುರುತಿಸಲಾಗಿದ್ದು, ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ತಮ್ಮ ಸಹೋದರಿ ಮನೆಗೆ ನಾಗ್ಲೋಯ್‍ನ ರಾಜಧಾನಿ ಪಾರ್ಕ್‍ನಿಂದ ತೆರಳುತ್ತಿದ್ದರು. ಪಾರ್ಕ್ ಮೇಲ್ಸೇತುವೆ ಬಳಿ ಪತ್ನಿಯನ್ನು ಹಿಂದೆ ಕೂರಿಸಿಕೊಂಡು ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಹರಿತವಾದ ದಾರ ಕುತ್ತಿಗೆಗೆ ತಗುಲಿ ಕ್ಷಣಾರ್ಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ನಡುವಿನ ಅಂದವನ್ನು ಹೆಚ್ಚಿಸುವ ವೆರೈಟಿ ಸೊಂಟದ ಚೈನ್‍ಗಳು

    ನಂತರ ಸ್ಥಳೀಯರ ಸಹಾಯದಿಂದ ವಿಪಿನ್ ಕುಮಾರ್ ಲೋನಿ ಪತ್ನಿ ಅವರನ್ನು ಸಿವಿಲ್ ಲೈನ್ಸ್‌ನಲ್ಲಿರುವ ಟ್ರಾಮಾ ಸೆಂಟರ್‌ಗೆ ಕರೆದೊಯ್ದರು. ಆದರೆ ವ್ಯಕ್ತಿ ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಯಗೊಂಡ ಚಿರತೆ ಕೈಗೆ ರಾಖಿ ಕಟ್ಟಿದ ಮಹಿಳೆಯ ಫೋಟೋ ವೈರಲ್

    ಗಾಯಗೊಂಡ ಚಿರತೆ ಕೈಗೆ ರಾಖಿ ಕಟ್ಟಿದ ಮಹಿಳೆಯ ಫೋಟೋ ವೈರಲ್

    ಜೈಪುರ: ಮಹಿಳೆಯೊಬ್ಬರು ಚಿರತೆ ಕೈಗೆ ರಾಖಿ ಕಟ್ಟಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.

    ಈ ಘಟನೆ ರಾಜಸ್ಥಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಫೊಟೋದಲ್ಲಿ ಗುಲಾಬಿ ಬಣ್ಣದ ಸೀರೆ ಉಟ್ಟ ಮಹಿಳೆ ಕುಳಿತುಕೊಂಡು ಗಾಯಗೊಂಡು ಕುಳಿತಿದ್ದ ಚಿರತೆಯ ಕೈಗೆ ರಾಖಿ ಕಟ್ಟುತ್ತಿರುವುದನ್ನು ಕಾಣಬಹುದಾಗಿದೆ. ರಾಖಿ ಕಟ್ಟಿದ ಬಳಿಕ ಮಹಿಳೆ ಚಿರತೆಯನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ.

    ಇದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ಫೋಟೋವನ್ನು ಇಂಡಿಯನ್ ಫಾರೆಸ್ಟ್ ಆಫೀಸರ್(ಐಎಫ್‍ಎಸ್) ಸುಶಾಂತ್ ನಂದ ಶುಕ್ರವಾರ ತಮ್ಮ ಟ್ವಿಟ್ಟರ್ ಅಕೌಂಟ್‍ನಿಂದ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಯುಗ ಯುಗಗಳಿಂದಲೂ ಭಾರತದಲ್ಲಿ ಮನುಷ್ಯ ಮತ್ತು ಪ್ರಾಣಿಗಳು ಪ್ರೀತಿ, ಸಾಮರಸ್ಯದಿಂದ ಬದುಕುತ್ತಿವೆ. ರಾಜಸ್ಥಾನದಲ್ಲಿ ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು ಅನಾರೋಗ್ಯಕ್ಕೀಡಾದ ಚಿರತೆಗೆ ಪ್ರೀತಿ ಹಾಗೂ ಸಹೋದರತ್ವದ ಸಂಕೇತವಾಗಿರುವ ರಾಖಿ ಕಟ್ಟುವ ಮೂಲಕ ಪ್ರೀತಿಯನ್ನು ತೋರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಸುಶಾಂತ್ ಅವರು ಈ ರೀತಿ ಹಾಕುತ್ತಿದ್ದಂತೆಯೇ ಹಲವಾರು ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಅಲ್ಲದೆ ಹಲಬಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಮಹಿಳೆಯ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

    ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

    -ಬಂಜರು ಭೂಮಿಯಲ್ಲಿ ಭತ್ತ ಬೆಳೆದಿದ್ದ ಮಹಿಳೆಯರನ್ನು ಶ್ಲಾಘಿಸಿದ ಅಶ್ವತ್ಥನಾರಾಯಣ

    ಮಂಗಳೂರು: ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಬಿಗಳಾಗಲು ಹಾಗೂ ಉದ್ಯಮಶೀಲರಾಗಲು ಸರ್ಕಾರ ಎನ್‍ಆರ್‍ಎಲ್‍ಎಂ ಯೋಜನೆ ಮೂಲಕ ರಾಜ್ಯದ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ.ಗಳಿಗೂ ಹೆಚ್ಚಿನ ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ashwathnarayan

    ದಕ್ಷಿಣ ಕನ್ನಡ ಜಿಲ್ಲೆಯ ಕುರ್ನಾಡು ಗ್ರಾಮ ಪಂಚಾಯತಿಯ ಮುಡಿಪು ಗ್ರಾಮದಲ್ಲಿ ಬಂಜರು ಬಿದ್ದಿದ್ದ ಭೂಮಿಯನ್ನು ಸಾಗುವಳಿ ಮಾಡಿ ಭತ್ತ ಬೆಳೆಯುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ ಸಾಧನೆಯನ್ನು ಖುದ್ದು ವೀಕ್ಷಿಸಿದ ನಂತರ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರದ ನೆರವಿನಿಂದ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಮಾತು ಕೇಳದ ಪಾಲಿಕೆ ಅಧಿಕಾರಿಗಳು- ಸಲಾಕೆ ಹಿಡಿದು ಚರಂಡಿ ಸ್ವಚ್ಛತೆಗೆ ನಿಂತ ಶಾಸಕ ದೇವಾನಂದ

    ashwathnarayan

    ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಸಂಘಟನೆಗೊಂಡು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಹಲವಾರು ಜೀವನೋಪಾಯ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉನ್ನತೀಕರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಬಹಳ ಸಂತೋಷದ ವಿಷಯವಾಗಿದೆ. ಹಳ್ಳಿ ಮಹಿಳೆಯರಲ್ಲಿ ಕುಶಲತೆಯನ್ನು ಬೆಳೆಸಿ ಅವರಲ್ಲಿ ಉದ್ಯಮಶೀಲತೆ ವೃದ್ಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕರಾವಳಿ ಭಾಗದ ಮಹಿಳೆಯರು ಸರಕಾರದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

    ashwathnarayan

    ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಪ್ರಧಾನ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ನಿರ್ವಹಿಸುತ್ತಿರುವ ಕರ್ತವ್ಯ ಅತ್ಯಂತ ಶ್ಲಾಘನೀಯವಾದದ್ದು. ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಈ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ರಾಷ್ಟ್ರದಲ್ಲಿ ಮಾದರಿ ರಾಜ್ಯವನ್ನಾಗಿ ರೂಪಿಸಲು ತಾವೆಲ್ಲರೂ ಸಹಕರಿಸುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಸಚಿವರಿಗೆ ರಾಖಿ ಕಟ್ಟಿದ ಮಹಿಳೆಯರು:
    ಈ ಸಂದರ್ಭದಲ್ಲಿ ಮುಡಿಪು ಗ್ರಾಮದ ಮಹಿಳೆಯರು ಅಶ್ವತ್ಥನಾರಾಯಣ ಅವರಿಗೆ ರಕ್ಷಾ ಬಂಧನ ಕಟ್ಟಿ ಆರತಿ ಬೆಳಗಿದರು. ಇದರಿಂದ ಭಾವುಕರಾದ ಸಚಿವರು, ಈ  ದಿನ ತಾವುಗಳು ನನಗೆ ರಾಖಿ ಕಟ್ಟಿ ಸೋದರನ ಸ್ಥಾನವನ್ನು ನಿಮ್ಮ ಮನದಲ್ಲಿ ನೀಡಿದ್ದೀರಿ. ಇದಕ್ಕೆ ನಾನು ನಿಮಗೆಲ್ಲರಿಗೂ ಚಿರಋಣಿ. ನಾನು ಮತ್ತೊಮ್ಮೆ ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ನನ್ನ ಮನಸ್ಸು ಭಾರವಾಗಿದೆ ಎಂದು ನುಡಿದಿದ್ದಾರೆ.

  • ತಮ್ಮನಿಗೆ ಮೊದಲ ವರ್ಷದ ರಾಖಿ ಕಟ್ಟಿದ ಐರಾ ಬೇಬಿ

    ತಮ್ಮನಿಗೆ ಮೊದಲ ವರ್ಷದ ರಾಖಿ ಕಟ್ಟಿದ ಐರಾ ಬೇಬಿ

    ಬೆಂಗಳೂರು: ರಾಕಿಂಗ್ ದಂಪತಿಯ ಪುತ್ರಿ ಐರಾ ತಮ್ಮನಿಗೆ ಮುದ್ದಾಗಿ ರಾಖಿ ಕಟ್ಟುತ್ತಿರುವ ಫೋಟೋವನ್ನು ನಟಿ ರಾಧಿಕಾ ಪಂಡಿತ್ ಅವರು ಹಮಚಿಕೊಂಡಿದ್ದಾರೆ.

    ಇಂದು ಇಡೀ ಭಾರತದಲ್ಲಿ ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ. ಒಡಹುಟ್ಟಿದ ಸಹೋದರರು ಚೆನ್ನಾಗಿ ಇರಲಿ ಎಂದು ಹರಸಿ ಸಹೋದರಿಯರು ರಾಖಿ ಕಟ್ಟುತ್ತಾರೆ. ಅಂತಯೇ ಯಶ್ ಅವರ ಪುತ್ರಿ ಐರಾ ಕೂಡ ಮುದ್ದು ತಮ್ಮನಿಗೆ ರಾಖಿ ಕಟ್ಟಿ ಖುಷಿಪಟ್ಟಿದ್ದಾಳೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    https://www.instagram.com/p/CDbkuKngALF/

    ಐರಾ ತನ್ನ ತಮ್ಮನಿಗೆ ಆರತಿ ಬೆಳಗಿ ರಾಖಿ ಕಟ್ಟುತ್ತಿರುವ ಎರಡು ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು, ಅವರ ಮೊದಲ ರಕ್ಷಾಬಂಧನ, ಒಡಹುಟ್ಟಿದವರ ಅಮೂಲ್ಯವಾದ ಬಂಧನಕ್ಕೆ ಬೆಲೆಕಟ್ಟು ಆಗಲ್ಲ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಜೂನಿಯರ್ ರಾಕಿಭಾಯ್ ಬಿಳಿ ಬಣ್ಣದ ಪೈಜಾಮ ತೊಟ್ಟು ಮಿಂಚುತ್ತಿದ್ದರೆ, ಮುದ್ದು ಬೇಬಿ ಐರಾ ಕೇಸರಿ ಮತ್ತು ಗಿಳಿ ಹಸಿರು ಬಣ್ಣದ ಬಟ್ಟೆ ತೊಟ್ಟುಕೊಂಡಿದ್ದಾಳೆ.

    ಇಂದು ಬೆಳಗ್ಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದ ರಾಧಿಕಾ ಪಂಡಿತ್ ಅವರು, “ಈ ಬಾರಿ ರಾಖಿಯನ್ನು ಕಳುಹಿಸಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಚಿಕಾಗೋದಲ್ಲಿರುವ ನನ್ನ ಪ್ರೀತಿಯ ಗೌರಂಗ್‍ಗೆ ಎಲ್ಲ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ. ನೀನಿನ್ನೂ ನನ್ನ ಚಿಕ್ಕ ಮಗು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಗೊಲ್ಲು” ಎಂದು ರಾಧಿಕಾ ಸಹೋದರನ ಬಗ್ಗೆ ಬರೆದುಕೊಂಡಿದ್ದರು.

    https://www.instagram.com/p/CDbo1rKHWDN/

    ಸದಾ ಸಾಮಾಜಿಕ ಜಾಲತಾಣದಲ್ಲಿ ಯಶ್ ಮತ್ತು ರಾಧಿಕಾ ಸಕ್ರಿಯವಾಗಿ ಇರುತ್ತಾರೆ. ರಾಧಿಕಾ ಅಣ್ಣನಿಗಾಗಿ ವಿಶ್ ಮಾಡಿದರೆ, ಇತ್ತ ತಂಗಿಗಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಯಶ್ ಅವರು, ಹ್ಯಾಪಿ ರಕ್ಷಾಬಂಧನ ನಂದು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನನ್ನ ಎಲ್ಲ ಸಹೋದರ ಮತ್ತು ಸಹೋದರಿಯರಿಗೆ ಹ್ಯಾಪಿ ರಕ್ಷಾಬಂಧನ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  • ‘ರಾಖಿ ಕಳುಹಿಸಲು ಸಾಧ್ಯವಾಗಿಲ್ಲ’ – ಬೇಸರದ ನಡುವೆಯೇ ಸಂಜೆ ಸರ್ಪ್ರೈಸ್ ಕೊಡಲಿರೋ ರಾಧಿಕಾ

    ‘ರಾಖಿ ಕಳುಹಿಸಲು ಸಾಧ್ಯವಾಗಿಲ್ಲ’ – ಬೇಸರದ ನಡುವೆಯೇ ಸಂಜೆ ಸರ್ಪ್ರೈಸ್ ಕೊಡಲಿರೋ ರಾಧಿಕಾ

    ಬೆಂಗಳೂರು: ಇಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನದ ಹಬ್ಬವನ್ನು ಆಚರಿಸುತ್ತಿದ್ದಾರೆ. ಅದೇ ರೀತಿ ನಟಿ ರಾಧಿಕಾ ಪಂಡಿತ್ ಪ್ರೀತಿಯ ಸಹೋದರನಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಈ ಸಂಜೆ ಸರ್ಪ್ರೈಸ್ ಇದೆ ತಿಳಿಸಿದ್ದಾರೆ.

    ನಟಿ ರಾಧಿಕಾ ಪಂಡಿತ್ ಪ್ರತಿ ವರ್ಷವೂ ತಮ್ಮ ಸಹೋದರ ಗೌರಂಗ್‍ಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸುತ್ತಿದ್ದರು. ಆದರೆ ಈ ಬಾರಿ ರಾಖಿಯನ್ನು ಕಳುಹಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಸಹೋದರನೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ರಕ್ಷಾ ಬಂಧನದ ಶುಭಾಶಯವನ್ನು ತಿಳಿಸಿದ್ದಾರೆ.

    “ಈ ಬಾರಿ ರಾಖಿಯನ್ನು ಕಳುಹಿಸಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಚಿಕಾಗೋದಲ್ಲಿರುವ ನನ್ನ ಪ್ರೀತಿಯ ಗೌರಂಗ್‍ಗೆ ಎಲ್ಲ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ. ನೀನಿನ್ನೂ ನನ್ನ ಚಿಕ್ಕ ಮಗು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಗೊಲ್ಲು” ಎಂದು ರಾಧಿಕಾ ಸಹೋದರನ ಬಗ್ಗೆ ಬರೆದುಕೊಂಡಿದ್ದಾರೆ.

    ಕೊನೆಯಲ್ಲಿ “ನನ್ನ ಎಲ್ಲ ವಿಶೇಷ ಸಹೋದರರು ಹಾಗೂ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು” ಎಂದು ತಿಳಿಸಿದ್ದಾರೆ. ಜೊತೆಗೆ ಈ ಸಂಜೆ ನಮ್ಮ ಸಣ್ಣದೊಂದು ಸರ್ಪ್ರೈಸ್ ಇದೆ, ನೋಡಿ ಎಂದು ಹೇಳುವ ಮೂಲಕ ರಾಧಿಕಾ ಕುತೂಹಲ ಮೂಡಿಸಿದ್ದಾರೆ.

    ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಪಂಡಿತ್, ಪತ್ನಿ ಮತ್ತು ಮಗಳ ಜೊತೆ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ.

    https://www.instagram.com/p/CDa1RszAsUj/?igshid=1pxg1g332f8gl