Tag: Rakesh

  • ಕೈ ಮುಗಿದು ತಪ್ಪಾಯ್ತೆಂದು ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ

    ಕೈ ಮುಗಿದು ತಪ್ಪಾಯ್ತೆಂದು ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ

    ಬೆಂಗಳೂರು: ಬಿಸ್‍ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳಾದ ರಾಕೇಶ್ ಮತ್ತು ಅಕ್ಷತಾ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ಅಕ್ಷತಾ ರಾಕೇಶ್ ಕಾಲಿಗೆ ಬಿದ್ದು ಕ್ಷಮೆ ಕೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಬಿಗ್ ಮನೆಯ ಮಂದಿಗೆ ಬಿಗ್‍ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಹೆಸರು ‘ಮಡಿಕೆ ಒಡಿ, ಲಕ್ಷುರಿ ಪಡಿ’. ಇದರ ಅರ್ಥ ಮಡಿಕೆಯನ್ನು ಒಡೆದು ಬಜೆಟ್ ಗಳಿಸುವುದಾಗಿದೆ. ಈ ಟಾಸ್ಕ್ ನಲ್ಲಿ ಮಡಿಕೆ ಒಡೆಯುವ ಜವಾಬ್ದಾರಿಯನ್ನು ರಶ್ಮಿ ಪಡೆದಿದ್ದು, ಮಡಿಕೆ ಒಡೆದ ಬಳಿಕ ಅದರಲ್ಲಿರುವ ಚೀಟಿಗಳನ್ನು ಓದಿ ಅಕ್ಷತಾ ಹೇಳಬೇಕಾಗಿತ್ತು.

    ಕೃಪೆ: ಕಲರ್ಸ್ ಸೂಪರ್

    ಟಾಸ್ಕ್ ಶುರುವಾಗಿ ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಮಡಿಕೆ ಒಡೆಯುತ್ತಿದ್ದರು. ಉಳಿದ ಸ್ಪರ್ಧಿಗಳು ಅವರಿಗೆ ಗೈಡ್ ಮಾಡಲು ಎಲ್ಲರೂ ಕೂಗಾಡುತ್ತಿದ್ದರು. ಈ ನಡುವೆ ಅಕ್ಷತಾ ಮಡಿಕೆಯಲ್ಲಿ ಸಿಕ್ಕ ಚೀಟಿಗಳನ್ನು ಓದಿ ಪದಾರ್ಥಗಳ ಹೆಸರನ್ನು ಹೇಳುತ್ತಿದ್ದರು. ಅಕ್ಷತಾ ಹೇಳುವ ಪದಾರ್ಥವನ್ನು ಆಂಡಿ ಬರೆಯುತ್ತಿದ್ದರು. ಆದರೆ ಎಲ್ಲರೂ ಕೂಗಾಡುತ್ತಿದ್ದ ಕಾರಣ ಅಕ್ಷತಾ ಹೇಳುತ್ತಿದ್ದ ಪದಾರ್ಥಗಳ ಹೆಸರು ಕೇಳಿಸುತ್ತಿರಲಿಲ್ಲ.

    ಕೆಲವು ಬಾರಿ ಅಕ್ಷತಾ, ಆಂಡಿ ಬಳಿ ಬಂದು ಹೇಳುತ್ತಿದ್ದರು. ಈ ವೇಳೆ ಬಝರ್ ಶಬ್ಧ ಬಂತು. ಆಗ ಪಾಯಿಂಟ್ಸ್ ಇನ್ನೂ ಉಳಿದಿತ್ತು. ಹೀಗಾಗಿ ಕೋಪಗೊಂಡ ರಾಕೇಶ್, ಅಕ್ಷತಾ ವಿರುದ್ಧ ಕೂಗಾಡುತ್ತಿದ್ದರು. ಆಗ ರಾಕೇಶ್, ನೀನು ಹತ್ತಿರ ಬಂದು ಹೇಳಬೇಕಿತ್ತು. ಯಾಕಂದ್ರೆ ಇನ್ನು ಪಾಯಿಂಟ್ಸ್ ಇತ್ತು ಅಂತ ಅಕ್ಷತಾಗೆ ಹೇಳಿದ್ರು. ಆಗ ಅಕ್ಷತಾ, ಎಲ್ಲರೂ ಕೂಡಾಗುತ್ತಿದ್ದರು ಆದ್ದರಿಂದ ನನ್ನ ಧ್ವನಿ ಕೇಳಿಸುತ್ತಿರಲಿಲ್ಲ ಎಂದು ರಾಕೇಶ್‍ಗೆ ಉತ್ತರ ಕೊಟ್ಟರು.

    ಮಾತು ಮುಂದುವರಿಸಿದ ರಾಕೇಶ್, ನೀನು ಎಲ್ಲರ ಧ್ವನಿಗಿಂತ ಜೋರಾಗಿ ಕೇಳಿಸುವ ರೀತಿ ಹೇಳಬೇಕಿತ್ತು ಎಂದು ಅಕ್ಷತಾಗೆ ಹೇಳಿದರು. ಇದರಿಂದ ಬೇಸರಗೊಂಡ ಅಕ್ಷತಾ ತಪ್ಪು ನನ್ನದೆ, ಕ್ಷಮಿಸಿ ಎಂದು ಹೇಳಿ ಕೈ ಮುಗಿದು ರಾಕೇಶ್ ಕಾಲಿಗೆ ಬಿದ್ದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಅಕ್ಷತಾ ಮತ್ತು ರಾಕೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಈ ವಾರ ಸ್ಪರ್ಧಿ ರಾಕೇಶ್ ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಶನ್ ನಡೆಯುತ್ತೆ. ಈ ವಾರ ಕೂಡ ನಾಮಿನೇಶನ್ ನಡೆದಿದ್ದು, ಆಂಡ್ರ್ಯೂ, ಶಶಿ ಹಾಗೂ ಧನರಾಜ್ ಮೂವರು ರಾಕೇಶ್ ಅವರನ್ನು ನಾಮಿನೇಟ್ ಮಾಡಿದರು. 3 ವೋಟ್ ಪಡೆದು ರಾಕೇಶ್ ನಾಮಿನೇಟ್ ಆಗಿದ್ದರು.

    ನಾಮಿನೇಶನ್ ನಂತರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳಿಗೆ ಚಟುವಟಿಕೆಯನ್ನು ನೀಡಿದರು. `ನನ್ ಬಲೂನೇ ಸ್ಟ್ರಾಂಗು ಗುರು’ ಎಂದು ಟಾಸ್ಕ್ ನೀಡಿ ಯಾರ ಬಲೂನ್ ಕೊನೆಯವರೆಗೂ ಒಡೆಯದೇ ಹಾಗೇ ಇರುತ್ತದೆಯೋ ಅವರು ಸೇಫ್ ಆಗಬಹುದು. ಅಷ್ಟೇ ಅಲ್ಲದೇ ಸೇಫ್ ಆಗಿರುವ ಸ್ಪರ್ಧಿಯನ್ನು ನಾಮಿನೇಟ್ ಮಾಡಬಹುದು ಎಂದು ಬಿಗ್‍ಬಾಸ್ ಕಡೆಯಿಂದ ಆದೇಶ ಬಂತು.

    ರಾಕೇಶ್ ಈ ಟಾಸ್ಕ್ ನಲ್ಲಿ ಭಾಗವಹಿಸಿ ಕೊನೆಯವರೆಗೂ ಬಲೂನ್ ಒಡೆಯದೇ ನೋಡಿಕೊಂಡರು. ಬಳಿಕ ಈ ಟಾಸ್ಕ್ ನಲ್ಲಿ ಗೆದ್ದು ಅವರು ಸೇಫ್ ಆದರು. ಸೇಫ್ ಆದ ನಂತರ ರಾಕೇಶ್ ಅವರು ಜಯಶ್ರೀಯನ್ನು ನಾಮಿನೇಟ್ ಮಾಡಿದರು.

    ಈ ವಾರ ಬಿಗ್‍ಬಾಸ್ ಮನೆಯಲ್ಲಿ ಜಯಶ್ರೀ, ಆಂಡ್ರ್ಯೂ, ಸೋನು, ಅಕ್ಷತಾ, ಧನರಾಜ್, ನವೀನ್, ರ‍್ಯಾಪಿಡ್ ರಶ್ಮಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬೀಳಲಿದ್ದಾರೆ ಎಂಬುದು ಶನಿವಾರ ಕಿಚ್ಚ ಸುದೀಪ್ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೃಜಾಗೆ ಹರಿಪ್ರಿಯಾ ನಾಯಕಿ!

    ಸೃಜಾಗೆ ಹರಿಪ್ರಿಯಾ ನಾಯಕಿ!

    ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಸೃಜನ್ ಲೋಕೇಶ್ ಒಂದಷ್ಟು ಕಾಲದಿಂದ ಚಿತ್ರರಂಗದಿಂದ, ನಟನೆಯಿಂದ ದೂರವಿದ್ದಂತಿದ್ದರು. ಆದರೀಗ ಅವರು ಮತ್ತೆ ನಾಯಕನಾಗಿ ಮರಳಿದ್ದಾರೆ.

    ‘ಎಲ್ಲಿದ್ದೆ ಇಲ್ಲಿ ತನಕ’ ಎಂಬುದು ಅವರು ನಟಿಸಲಿರೋ ಹೊಸ ಚಿತ್ರದ ಶೀರ್ಷಿಕೆ. ಈ ಚಿತ್ರವನ್ನು ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರಂತೆ. ಈ ಚಿತ್ರಕ್ಕೀಗ ಹರಿಪ್ರಿಯಾ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ.

    ಸೃಜನ್ ತಂದೆ ಲೋಕೇಶ್ ಅವರು ನಟಿಸಿದ್ದ ಪ್ರಸಿದ್ಧ ಚಿತ್ರ ಪರಸಂಗದ ಗೆಂಡೆತಿಮ್ಮ. ಎಲ್ಲಿದ್ದೆ ಇಲ್ಲೀ ತನಕ ಎಂಬುದು ಅದರ ಜನಪ್ರಿಯ ಹಾಡಿನ ಸಾಲು. ತಮ್ಮ ತಂದೆಯ ಹಾಡಿನ ಸಾಲುಗಳನ್ನೇ ಸೃಜನ್ ತಮ್ಮ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಜಾ ಟಾಕೀಸ್ ಕಂತುಗಳಿಗೆ ಸಂಭಾಷಣೆ ಬರೆಯುತ್ತಾ ಬಂದಿರೋ ರಾಕೇಶ್ ಸಂಭಾಷಣೆ ಬರೆಯಲಿದ್ದಾರೆ.

    ಸೃಜನ್ ಲೋಕೇಶ್ ಸ್ವತಃ ನಿರ್ಮಾಣ ಮಾಡಲಿರೋ ಇದು ಪಕ್ಕಾ ಕಮರ್ಶಿಯಲ್ ಕಥನ ಹೊಂದಿರೋ ಚಿತ್ರವಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಲ್ಲಿಯೇ ಹಾರ ಬದ್ಲಾಯಿಸಿಕೊಂಡ್ರು ಕವಿತಾ-ರಾಕೇಶ್!

    ಬಿಗ್ ಮನೆಯಲ್ಲಿಯೇ ಹಾರ ಬದ್ಲಾಯಿಸಿಕೊಂಡ್ರು ಕವಿತಾ-ರಾಕೇಶ್!

    ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವಾಗಲೂ ಒಂದು ಜೋಡಿ ಮಧ್ಯೆ ಗಾಸಿಪ್ ಹರಿದಾಡುತ್ತಿದೆ. ಅದೇ ರೀತಿ ಬಿಗ್‍ಬಾಸ್ ಸೀನಸ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಯಾವಾಗಲೂ ಜೊತೆಯಲ್ಲಿರುತ್ತಾರೆ. ಆದ್ದರಿಂದ ಇವರಿಬ್ಬರ ಬಗ್ಗೆ ಗಾಸಿಪ್ ಇದೆ. ಆದರೆ ಈಗ ಸ್ಪರ್ಧಿ ಕವಿತಾ ಮತ್ತು ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

    ಬಿಗ್‍ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೂ ಒಂದು ಟಾಸ್ಕ್ ನೀಡಿತ್ತು. ಅದೆನೆಂದರೆ ‘ಇಷ್ಟ ಕಷ್ಟ’. ಈ ಟಾಸ್ಕ್ ನ ಪ್ರಕಾರ ತಮಗೆ ಇಷ್ಟ ಆಗುವ ಒಬ್ಬರಿಗೆ ಸ್ಪರ್ಧಿಗಳು ಹಾರ ಹಾಕಬೇಕಿತ್ತು. ಇಷ್ಟ ಪಡದ ಇಬ್ಬರು ಸದಸ್ಯರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿಯಬೇಕಿತ್ತು.

    ಕಳೆದ ವಾರ ಆಂಡ್ರ್ಯೂ ಮತ್ತು ಕವಿತಾ ಮಧ್ಯೆ ಜಗಳವಾಗಿತ್ತು. ಇದರಿಂದ ಮನೆಯಲ್ಲಿ ಎಲ್ಲರಿಗೂ ಬೇಸರವಾಗಿತ್ತು. ಕೊನೆಗೆ ಕವಿತಾ ಅವರು ಆಂಡ್ರ್ಯೂ ಬಳಿ ಕ್ಷಮೆ ಕೇಳಿದ್ದರು. ಇದರಿಂದ ರಾಕೇಶ್ ಕವಿತಾ ಗುಣವನ್ನು ಅಭಿನಂದಿಸಿ ಹಾರ ಹಾಕಿದರು. ಇತ್ತ ಬೇಸರದಿಂದ ಇದ್ದ ಕವಿತಾ ಜೊತೆ ಸಂತೋಷದಿಂದ ಮಾತನಾಡಿದ್ದಕ್ಕೆ ಕವಿತಾ ಕೂಡ ರಾಕೇಶ್‍ಗೆ ಹಾರ ಹಾಕಿದರು. ಹೀಗಾಗಿ ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಕವಿತಾ-ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

    ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಬರೀ ಕವಿತಾ-ರಾಕೇಶ್ ಮಾತ್ರ ಹಾರ ಹಾಕಿಲ್ಲ. ಶಶಿ-ಧನರಾಜ್ ಹಾಗೂ ರಶ್ಮಿ-ಮುರಳಿ ಕೂಡ ಪರಸ್ಪರ ಹಾರ ಹಾಕಿಕೊಂಡಿದ್ದಾರೆ.

    ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಗಾಸಿಪ್ ಇದೆ ಎಂದು ಮಾತನಾಡಿಕೊಳ್ಳುತ್ತಿದಾಗ, ‘ನಾವಿಬ್ಬರು ಒಳ್ಳೆಯ ಗೆಳೆಯರು’ ಎಂದು ರಾಕೇಶ್ ಎಲ್ಲರ ಮುಂದೆ ಸ್ಪಷ್ಟಪಡಿಸಿದ್ದರು. ಆಗ ಕೂಡಲೇ ಅಕ್ಷತಾ ‘ಐ ಲವ್ ಯು ರಾಕಿ” ಅಂತ ಬಹಿರಂಗವಾಗಿ ಹೇಳಿದ್ದರು. ಇದರಿಂದ ಸ್ಪರ್ಧಿಗಳು ಗೊಂದಲಕ್ಕೀಡಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಸಾವಿನ ಕುರಿತು ರೆಡ್ಡಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ಮಗನ ಸಾವಿನ ಕುರಿತು ರೆಡ್ಡಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಹಿರಿಯ ಮಗ ರಾಕೇಶ್ ಸಾವು ಸಿದ್ದರಾಮಯ್ಯಗೆ ದೇವರು ಕೊಟ್ಟ ಶಿಕ್ಷೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಿಎಂ, ನಿಮ್ಮ ಪಾಪದ ಶಿಕ್ಷೆಯನ್ನು ಮಕ್ಕಳಿಗೆ ದೇವರು ನೀಡದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಟ್ವೀಟ್ ಅನ್ನು ಐಎನ್‍ಸಿ ಕರ್ನಾಟಕ ಎಂಬ ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ.

    ಮಾಜಿ ಸಿಎಂ ಟ್ವೀಟ್ ನಲ್ಲೇನಿದೆ?:
    ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

    ಜನಾರ್ದನ ರೆಡ್ಡಿ ಹೇಳಿದ್ದೇನು?:
    ಸಿದ್ದರಾಮಯ್ಯ ಅವರು 4 ವರ್ಷ ನನ್ನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಅದಕ್ಕೆ ದೇವರು ಅವರ ಹಿರಿಯ ಮಗ ರಾಕೇಶ್ ಸಾವಿನ ಮುಖಾಂತರ ಶಿಕ್ಷೆ ಕೊಟ್ಟಿದ್ದಾರೆ ಅಂತ ಪಬ್ಲಿಕ್ ಟಿವಿಯ ಸಂದರ್ಶನದ ವೇಳೆ ಹೇಳಿದ್ದರು.

    ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ನನ್ನನ್ನು ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ಶ್ರವಣ ಕುಮಾರನನ್ನು ದಶರಥ ಮಹರಾಜ ಕೊಂದಾಗ ವೃದ್ಧ ತಂದೆ-ತಾಯಿ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಅಂತ ಶಾಪ ಕೊಟ್ಟಿದ್ರು. ನಾಲ್ಕು ವರ್ಷ ನನ್ನಿಂದ ದೂರಾಗಿ ನನ್ನ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದ್ರು ಅದನ್ನ ಕಾರಣವಾದ ಎಲ್ಲರು ಅನುಭವಿಸ್ತಾರೆ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=KUjH3iqmpEM

  • ‘ಪತಿಬೇಕು ಡಾಟ್ ಕಾಮ್’ ನಿಜವಾದ ನಾಯಕಿ ಭಾಗ್ಯ ಅಂದರು ಶೀತಲ್ ಶೆಟ್ಟಿ!

    ‘ಪತಿಬೇಕು ಡಾಟ್ ಕಾಮ್’ ನಿಜವಾದ ನಾಯಕಿ ಭಾಗ್ಯ ಅಂದರು ಶೀತಲ್ ಶೆಟ್ಟಿ!

    ಪತಿಬೇಕು ಡಾಟ್ ಕಾಮ್ ಚಿತ್ರಕ್ಕೆ ಶೀತಲ್ ಶೆಟ್ಟಿ ನಾಯಕಿಯೂ ಹೌದು, ನಾಯಕನೂ ಹೌದು ಅಂತ ಖುದ್ದು ನಿರ್ದೇಶಕ ರಾಕೇಶ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಶೀತಲ್ ಶೆಟ್ಟಿ ಹೇಳೋ ಪ್ರಕಾರ ಈ ಚಿತ್ರದ ನಿಜವಾದ ನಾಯಕಿ ಭಾಗ್ಯ ಅಂತೆ!

    ಭಾಗ್ಯ ಈ ಇಡೀ ಚಿತ್ರದ ಕೇಂದ್ರ ಬಿಂದುವಾಗಿರೋ ಪಾತ್ರ. ಅದು ಕೆಳ ಮಧ್ಯಮವರ್ಗದಿಂದ ಬಂದ ಮೂವತ್ತು ದಾಟಿದ ಹೆಣ್ಣುಮಗಳೊಬ್ಬಳ ಭಾವಕೋಶವನ್ನು ಬಿಚ್ಚಿಡುವ ಪಾತ್ರ. ಅದು ಸಮಸ್ತ ಹೆಣ್ಮಕ್ಕಳ ಮನೋಭೂಮಿಕೆಯನ್ನು ಪ್ರತಿನಿಧಿಸುವ ಪಾತ್ರವೂ ಹೌದು. ಆ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ ಖುಷಿಯಷ್ಟೇ ತಮ್ಮದು ಅನ್ನುವ ಶೀತಲ್ ಶೆಟ್ಟಿ ಒಟ್ಟಾರೆ ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಭರವಸೆ ಹೊಂದಿದ್ದಾರೆ.

    ಖಾಸಗಿ ವಾಹಿನಿಯೊಂದರಲ್ಲಿ ಖ್ಯಾತ ನಿರೂಪಕಿಯಾಗಿದ್ದುಕೊಂಡು ಕನ್ನಡಿಗರೆಲ್ಲರ ಮನ ಗೆದ್ದವರು ಶೀತಲ್ ಶೆಟ್ಟಿ. ವರ್ಷಗಟ್ಟಲೆ ಅದೇ ಕೆಲಸ ಮಾಡಿ ಏಕತಾನತೆ ಕಾಡಿಸಿಕೊಂಡಿದ್ದ ಅವರ ಪಾಲಿಗೆ ಸಿನಿಮಾ ಎಂಬುದು ತಾವು ಬಯಸಿದ ಬದಲಾವಣೆಗೊಂದು ದಾರಿ. ಆ ದಾರಿಯಲ್ಲಿ ಹಂತ ಹಂತವಾಗಿ ಬಹುದೂರ ಸಾಗಿ ಬಂದಿರುವ ಅವರ ಪಾಲಿಗೆ ಪತಿಬೇಕು ಡಾಟ್ ಕಾಮ್ ಚಿತ್ರ ಮಹತ್ವದ ಮೈಲಿಗಲ್ಲು.

    ನಟಿಸುವ ನಿರ್ಧಾರ ಮಾಡಿದ ಶೀತಲ್ ಶೆಟ್ಟಿಯವರಿಗೆ ಹೀರೋಯಿನ್ ಆಗಿ ಮಿಂಚುವ ಇರಾದೆ ಇಲ್ಲದಿದ್ದರೂ ಒಂದೊಳ್ಳೆ ಕಥೆ ಹೊಂದಿರೋ ಚಿತ್ರದಲ್ಲಿ ನಟಿಸೋ ಆಸೆಯಂತೂ ಇದ್ದೇ ಇತ್ತು. ನಿರ್ದೇಶಕ ರಾಕೇಶ್ ಮೊದಲ ಸಲ ಬಂದು ಕಥೆ ಹೇಳಿದಾಗ ಆ ಆಸೆ ನೆರವೇರಿದ ಸೂಚನೆ ಪಡೆದುಕೊಂಡಿದ್ದ ಶೀತಲ್‍ಗೆ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಕ್ಷಣದಲ್ಲೊಂದು ಆತ್ಮತೃಪ್ತಿಯಿದೆಯಂತೆ.

    ಈಗಾಗಲೇ ಈ ಚಿತ್ರ ಟ್ರೈಲರ್, ಸಂಭಾಷಣೆ ಮತ್ತು ಹಾಡುಗಳ ಮೂಲಕ ಎಲ್ಲ ವರ್ಗದವರನ್ನೂ ತಲುಪಿಕೊಂಡಿದೆ. ‘ಯಾಕಪ್ಪ ದೇವರೆ ಆಡಿಸ್ತಿ ಕ್ಯಾಬರೆ’ ಹಾಡಂತೂ ಅದೆಷ್ಟೋ ಹೆಣ್ಣು ಜೀವಗಳನ್ನು ಪ್ರಾತಿನಿಧಿಕ ಗೀತೆಯಂತೆಯೇ ಕಾಡಿದೆ. ಅದುವೇ ಹೆಂಗಳೆಯರನ್ನೆಲ್ಲ ಥೇಟರಿನತ್ತಲೂ ಸೆಳೆದುಕೊಳ್ಳೋದು ಖಚಿತ. ಬರೀ ಹೆಣ್ಣುಮಕ್ಕಳು ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಕಚಗುಳಿ ಇಟ್ಟಿರೋ ಈ ಚಿತ್ರ ಶೀತಲ್ ಶೆಟ್ಟಿಯವರ ಪಾಲಿಗೆ ಅತ್ಯಂತ ಮಹತ್ವದ್ದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಡುಗೀರಿಗೆ ಹುಚ್ಚು ಹಿಡಿಸಿತು ಶೀತಲ್ ಡೈಲಾಗ್!

    ಹುಡುಗೀರಿಗೆ ಹುಚ್ಚು ಹಿಡಿಸಿತು ಶೀತಲ್ ಡೈಲಾಗ್!

    ‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’…….. ಒಂದು ಚಿತ್ರದ ಡೈಲಾಗು, ಹಾಡು ಜನರಿಗಿಷ್ಟವಾಗಿ ಅವರ ನಡುವೆ ಹರಿದಾಡಿದರೆ ಅದಕ್ಕಿಂತಲೂ ಅದ್ಭುತವಾದ ಪ್ರಚಾರ ಬೇರೊಂದಿಲ್ಲ. ಅಂಥಾದ್ದೊಂದು ಭರಪೂರ ಪ್ರಚಾರ ಶೀತಲ್ ಶೆಟ್ಟಿ ಅಭಿನಯದ ಪತಿಬೇಕು ಡಾಟ್ ಕಾಮ್ ಚಿತ್ರಕ್ಕೀಗ ಸಿಗಲಾರಂಭಿಸಿದೆ!

    ರಾಕೇಶ್ ನಿರ್ದೇಶನದ ಪತಿಬೇಕು ಡಾಟ್ ಕಾಮ್ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದನ್ನು ಜನ ಮೆಚ್ಚಿಕೊಂಡಿದ್ದೂ ಆಗಿದೆ. ಇದರಲ್ಲಿ ಶೀತಲ್ ಶೆಟ್ಟಿ ಹೇಳಿರೋ ಬಿಂದಾಸ್ ಡೈಲಾಗೊಂದೀಗ ಹುಡುಗೀರಿಗೆಲ್ಲ ಹುಚ್ಚು ಹಿಡಿಸಿಬಿಟ್ಟಿದೆ. ಡಬ್ ಸ್ಮ್ಯಾಶ್ ರೂಪದಲ್ಲಿ ಈ ಡೈಲಾಗು ಎಲ್ಲೆಡೆ ಹರಡಿಕೊಂಡು ಪತಿಬೇಕು ಡಾಟ್ ಕಾಮ್ ಚಿತ್ರ ಮಿಂಚಲಾರಂಭಿಸಿದೆ.

    ‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’ ಎಂಬ ಡೈಲಾಗನ್ನು 1300ಕ್ಕೂ ಹೆಚ್ಚು ಹುಡುಗಿಯರು ಡಬ್ ಸ್ಮ್ಯಾಶ್ ಮಾಡಿ ಸಂಭ್ರಮಿಸಿದ್ದಾರೆ. ಡಬ್ ಸ್ಮ್ಯಾಶ್ ನಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಮ್ಯೂಸಿಕಲಿ ಸೇರಿದಂತೆ ನಾನಾ ಆಪ್ ಗಳಲ್ಲೀಗ ಪತಿಬೇಕು ಡಾಟ್ ಕಾಮ್ ಚಿತ್ರದ ಈ ಡೈಲಾಗೇ ರಿಂಗಣಿಸಲಾರಂಭಿಸಿದೆ!

    ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಇದೊಂದೇ ಒಂದು ಮಜಾಕಾದ ಡೈಲಾಗಿನಿಂದ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿರೋದರಿಂದ ಚಿತ್ರ ತಂಡ ಹ್ಯಾಪಿ ಮೂಡಿನಲ್ಲಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ನಾಳೆ ‘ಪತಿ ಬೇಕು ಡಾಟ್ ಕಾಮ್’ ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ ಸುದೀಪ್!

    ನಾಳೆ ‘ಪತಿ ಬೇಕು ಡಾಟ್ ಕಾಮ್’ ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ ಸುದೀಪ್!

    – ಇದು ಶೀತಲ್ ಶೆಟ್ಟಿಯ ಕಾಮಿಡಿ ಟ್ರ್ಯಾಕ್!

    ಆಂಕರ್ ಆಗಿ ತನ್ನ ಸ್ಫುಟವಾದ ಕನ್ನಡ ಉಚ್ಛಾರದಿಂದಲೇ ಖ್ಯಾತರಾಗಿದ್ದವರು ಶೀತಲ್ ಶೆಟ್ಟಿ. ಆಂಕರಿಂಗ್ ಗೆ ಗುಡ್ ಬೈ ಹೇಳಿದ ನಂತರ ಬಿಗ್ ಬಾಸ್ ಪ್ರವೇಶ ಮಾಡಿದ್ದ ಶೀತಲ್ ಇದೀಗ ನಟನೆಯತ್ತಲೇ ಗಮನ ಕೇಂದ್ರೀಕರಿಸಿದ್ದಾರೆ. ಸದ್ಯ ಅವರು ವಿಶಿಷ್ಟವಾದ ಪಾತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವ ಚಿತ್ರ `ಪತಿಬೇಕು ಡಾಟ್ ಕಾಮ್’!

    ಈ ಚಿತ್ರದ ಕಡೆಯಿಂದ ಇದೀಗ ಖುಷಿಯ ವಿಚಾರವೊಂದು ಹೊರ ಬಿದ್ದಿದೆ. ಸೆನ್ಸಾರ್ ಮುಗಿಸಿಕೊಂಡ ಬೆನ್ನಲ್ಲಿಯೇ ನಾಳೆ ಈ ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ಅವರಿಂದಲೇ ಬಿಡುಗಡೆಯಾಗಲಿದೆ. ರಾಕೇಶ್ ನಿರ್ದೇಶನ ಮಾಡಿ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿರುವ ಪತಿ ಬೇಕು ಡಾಟ್ ಕಾಮ್ ಚಿತ್ರ ಈ ಹಿಂದೆ ಟೀಸರ್ ಮೂಲಕವೇ ಅಲೆಯೆಬ್ಬಿಸಿತ್ತು. ಆದ್ದರಿಂದಲೇ ನಾಳೆ ಬಿಡುಗಡೆಯಾಗಲಿರುವ ಟ್ರೇಲರ್ ಬಗ್ಗೆ ಸಹಜವಾಗಿಯೇ ಕುತೂಹಲವಿದೆ.

    ರಾಕೇಶ್ ಒಂದು ಸರಳವಾದ ಆದರೆ ಸಂಕೀರ್ಣವಾದ, ಬದುಕಿಗೆ ಹತ್ತಿರಾದ ಕಥಾ ಹಂದರವೊಂದನ್ನು ಹಾಸ್ಯದ ಶೈಲಿಯಲ್ಲಿ ಪ್ರೇಕ್ಷಕರಿಗೆ ದಾಟಿಸಲು ಸನ್ನದ್ಧರಾಗಿದ್ದಾರೆ. ಮಧ್ಯಮ ವರ್ಗದ ಪೋಷಕರ ಪಾಲಿಗೆ ಮಗಳಿಗೆ ಮದುವೆ ಮಾಡೋದೆಂದರೆ ಜೀವನದ ಪ್ರಮುಖ ಘಟ್ಟ. ಅದರಲ್ಲಿಯೂ ಮಗಳು ಮೂವತ್ತು ವರ್ಷ ದಾಟಿಸಿದರೆ ಅದರ ಪಡಿಪಾಟಲುಗಳನ್ನು ಹೇಳಲಾಗೋದಿಲ್ಲ. ಅಂಥಾ ಮೂವತ್ತು ವರ್ಷ ದಾಟಿದ ಮದುವೆಗೆ ತಯಾರಾದ ಹುಡುಗಿಯ ಪಾತ್ರದಲ್ಲಿ ಶೀತಲ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಶೀತಲ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದೆಲ್ಲವೂ ಗಂಭೀರವಾದ ಪಾತ್ರಗಳೇ. ಆದರೆ ಈ ಚಿತ್ರದಲ್ಲಿ ಶೀತಲ್ ನಗಿಸುವಂಥಾ ನಟನೆಯನ್ನು ನೀಡಲಿದ್ದಾರಂತೆ.

  • ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಇಂದು ಭಾವುಕರಾದ್ರು.

    ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅವನು ಕಾಯಿಲೆ ಇತ್ತು, ಸತ್ತು ಹೋದ ಅಂತ ಮಗನನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ರು.

    ನಾನು ವರುಣಾದಲ್ಲಿ 30 ಸಾವಿರ ವೋಟುಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ತಾನೆ ಅಂತ ಮುಖ್ಯಮಂತ್ರಿ ಭಾವುಕ ಭಾಷಣ ಮಾಡಿದ್ರು.

    ಮಣ್ಣಿನ ಮಗನಿಗೆ ಮತ ಹಾಕ್ತಿರೋ? ಅವನ್ಯಾರಿಗೋ ಮತ ಹಾಕ್ತೀರಾ? ಅವನಿಗೂ ಕ್ಷೇತ್ರಕ್ಕೂ ಸಂಬಂಧ ಏನು? ಅವರ ಮಗ, ಇವರ ಮಗ ಅಂದವ್ರಿಗೆ ಮತ ಹಾಕ್ತೀರಾ? ವರುಣಾ ಮತ್ತು ಚಾಮುಂಡೇಶ್ವರಿ ನನ್ನ ಕಣ್ಣು ಅಂತ ಸಿದ್ದರಾಮಯ್ಯ ಯಡಿಯೂರಪ್ಪರ ಕಿರಿಯ ಮಗ ವಿಜಯೇಂದ್ರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ರು.

  • ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ನಟಿಸಿದ್ದ ರಾಕೇಶ್ ಇನ್ನಿಲ್ಲ

    ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ನಟಿಸಿದ್ದ ರಾಕೇಶ್ ಇನ್ನಿಲ್ಲ

    ಬೆಂಗಳೂರು: ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟಿ ಆಶಾರಾಣಿ ಪುತ್ರ ರಾಕೇಶ್ ಮೃತಪಟ್ಟಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಕೇಶ್ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.

    ಎರಡು ತಿಂಗಳ ಹಿಂದೆ ರಾಕೇಶ್ ಅವರಿಗೆ ಆಪರೇಷನ್ ಮಾಡಲಾಗಿತ್ತು. ತದನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ 7.30ರ ವೇಳೆಗೆ ಮೃತಪಟ್ಟಿದ್ದಾರೆ.

    ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ಬುಲ್ಲಿ – ಪಪ್ಪುಸಿ ಎನ್ನುವ ಹೆಸರಿನಿಂದ ರಾಕೇಶ್ ಫೇಮಸ್ ಆಗಿದ್ದರು. ಸದ್ಯ ಧೂಮಪಾನ ಸಿನಿಮಾದಲ್ಲಿ ನಾಯಕ ನಟನಾಗಿ ರಾಕೇಶ್ ನಟಿಸುತ್ತಿದ್ದರು.

     ಶಿವರಾಜ್ ಕುಮಾರ್ ಅಭಿನಯದ ಬಂಧು ಬಳಗ, ದುನಿಯಾ ವಿಜಯ್ ಅಭಿನಯದ ಚಂಡ, ದರ್ಶನ್ ಜೊತೆ ಚಿತ್ರಗಳಲ್ಲಿ ರಾಕೇಶ್ ಅಭಿನಯಿಸಿದ್ದರು.