Tag: rakesh siddaramaiah

  • ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ ರಾಕೇಶ್‌ ಸಿದ್ದರಾಮಯ್ಯ ವಿಚಾರ ಕೆದಕಿದ ಹೆಚ್‌ಡಿಕೆ

    ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿ ರಾಕೇಶ್‌ ಸಿದ್ದರಾಮಯ್ಯ ವಿಚಾರ ಕೆದಕಿದ ಹೆಚ್‌ಡಿಕೆ

    ಬೆಂಗಳೂರು: ವಿದೇಶ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದ ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ವಿಚಾರ ಎಂಟು ವರ್ಷದ ಬಳಿಕ ಮತ್ತೆ ಚರ್ಚೆಗೆ ಬಂದಿದೆ

    ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪರೋಕ್ಷವಾಗಿ ಸಿದ್ದರಾಮಯ್ಯ ಪುತ್ರನ ವಿಚಾರ ಕೆದಕಿದ್ದಾರೆ. ಇದನ್ನೂ ಓದಿ: ದೇವರಾಜೇಗೌಡಗೆ ಬಿಟ್ರೆ ʼಕೈʼ ಮುಖಂಡರಿಗೆ ನಾನು ವೀಡಿಯೋ ಕೊಟ್ಟಿಲ್ಲ: ಪ್ರಜ್ವಲ್ ಮಾಜಿ ಡ್ರೈವರ್ ‌

     

    ಅಂದು ಸಿದ್ದರಾಮಯ್ಯ (Siddaramaiah) ಕುಟುಂಬದ ಮಾನ ಉಳಿಸಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (Sushma Swaraj). ಆದರೆ ಈಗ ಪ್ರಜ್ವಲ್ ಪ್ರಕರಣದಲ್ಲಿ ಮೋದಿ ಹೆಸರನ್ನು ಉಲ್ಲೇಖ ಮಾಡುತ್ತಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

    ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಕುಮಾರಸ್ವಾಮಿ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಕುಮಾರಸ್ವಾಮಿ ಆರೋಪ ಸುಳ್ಳು, ನಾನು ಮೋದಿ ಜೊತೆಗೆ ಮಾತನಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

     

    ಮುಖ್ಯಮಂತ್ರಿಯ ಹಿರಿಯ ಪುತ್ರ ರಾಕೇಶ್ 2016ರ ಜುಲೈನಲ್ಲಿ ಬೆಲ್ಜಿಯಂ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಬೆಲ್ಜಿಯಂನ ಬ್ರಸೆಲ್ಸ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ನಂತರ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಿ ವಿಮಾನದ ಮೂಲಕ ರಾಕೇಶ್‌ ಸಿದ್ದರಾಮಯ್ಯ ಅವರ ಮೃತದೇಹವನ್ನು ಕರ್ನಾಟಕಕ್ಕೆ ತರಲಾಗಿತ್ತು.

  • ರಾಕೇಶ್‌ನನ್ನು ಶಾಸಕನಾಗಿ ಕಾಣಲು ಬಯಸಿದ್ದ ಸಿದ್ದು – ಆದರೆ ವಿಧಿ ನಿಯಮವೇ ಬೇರೆ ಇತ್ತು!

    ರಾಕೇಶ್‌ನನ್ನು ಶಾಸಕನಾಗಿ ಕಾಣಲು ಬಯಸಿದ್ದ ಸಿದ್ದು – ಆದರೆ ವಿಧಿ ನಿಯಮವೇ ಬೇರೆ ಇತ್ತು!

    ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ ಪುತ್ರ ರಾಕೇಶ್‌ನನ್ನು (Rakesh Siddaramaiah) ಶಾಸಕನಾಗಿ ಕಾಣಲು ಬಯಸಿದ್ದರು. ರಾಜಕೀಯದಲ್ಲಿ ತಮ್ಮ ಉತ್ತರಾಧಿಕಾರಿ ಮಾಡುವ ಆಕಾಂಕ್ಷೆ ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು.

    10 ವರ್ಷಗಳ ಹಿಂದೆಯೇ ಸಿದ್ದರಾಮಯ್ಯ ಅವರು ಹಲವಾರು ಬಾರಿ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ನಂತರ ತಮ್ಮ ನಿಲುವು ಬದಲಿಸಿಕೊಂಡಿದ್ದರು. 2016ರ ಫೆಬ್ರವರಿಯಲ್ಲಿ ನಡೆದ ಜಿಲ್ಲಾ ಹಾಗೂ ತಾ.ಪಂ. ಚುನಾವಣೆ ಕಾಲಕ್ಕೆ ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದರು. ಆಗ ರಾಕೇಶ್‌ಗೆ ತಾವು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂಬ ವಿಶ್ಲೇಷಣೆ ನಡೆದಿತ್ತು. ಎಲ್ಲವೂ ಸಿದ್ದರಾಮಯ್ಯ ಅವರ ಲೆಕ್ಕದಂತೆ ನಡೆದಿದ್ದರೆ 2018ರ ಚುನಾವಣೆಯಲ್ಲಿ ರಾಕೇಶ್ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಆದರೆ ವಿಧಿ ನಿಯಮ ಎಲ್ಲವನ್ನೂ ಉಲ್ಟಾ ಮಾಡಿತ್ತು.

    ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರಿಗೆ ಇಬ್ಬರು ಪುತ್ರರು. ರಾಕೇಶ್ ಹಾಗೂ ಡಾ. ಎಸ್ ಯತೀಂದ್ರ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ವಿದ್ಯಾರ್ಥಿಯಾದ ಯತೀಂದ್ರ (Yathindra Siddaramaiah) ಬಹಿರಂಗವಾಗಿ ಎಂದೂ ಕಾಣಿಸಿಕೊಂಡವರಲ್ಲ. ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ಇದ್ದವರು. ಹೆಚ್ಚಾಗಿ ತಾಯಿ ಪಾರ್ವತಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು.

    ಆದರೆ ರಾಕೇಶ್‌ರದ್ದು ‘ಆ್ಯಂಗ್ರಿ ಯಂಗ್‌ಮ್ಯಾನ್’ ಶೈಲಿ. 2004 ರಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 2ನೇ ಬಾರಿಗೆ ಉಪ ಮುಖ್ಯಮಂತ್ರಿಯಾದ ನಂತರ ವಿಧಾನಸೌಧದಲ್ಲಿ ಕಾಣಿಸಿಕೊಳ್ಳತೊಡಗಿದರು. ಸಮಾಜವಾದದಲ್ಲಿ ನಂಬಿಕೆ ಇರುವ ಸಿದ್ದರಾಮಯ್ಯ ಅವರು ಕುಟುಂಬ ರಾಜಕಾರಣ ಪ್ರೋತ್ಸಾಹಿಸುವವರಲ್ಲ. ಆದರೆ ರಾಕೇಶ್ ಬಹು ವರ್ಷಗಳ ಹಿಂದೆಯೇ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ತೀವ್ರ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಶಸ್ತ್ರಚಿಕಿತ್ಸೆಯೂ ಆಗಿತ್ತು. ಆತನ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಮಗ ಕೈತಪ್ಪಿ ಹೋಗಬಹುದು ಎಂಬ ಕಾರಣದಿಂದ ಹತ್ತಿರ ಬಿಟ್ಟುಕೊಂಡಿದ್ದರು. ಸ್ವಲ್ಪ ಮಟ್ಟಿನ ಪ್ರೀತಿ ತೋರಿಸುತ್ತಿದ್ದರು. ಆದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಕೊಡು, ಬೇರೆ ವಿಚಾರಗಳಿಗೆ ತಲೆ ಹಾಕಬೇಡ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಇದನ್ನೂ ಓದಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?

    2016 ಜು.13 ರಂದು ತಮ್ಮ 39ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ರಾಕೇಶ್, ನನ್ನ ಮೇಲೆ ಅಪ್ಪನ ಪ್ರಭಾವವಿದೆ. ನಾನು ಅವರು ರಾಜಕೀಯದಿಂದ ನಿವೃತ್ತಿಯಾಗುವ ತನಕ ರಾಜಕಾರಣಕ್ಕೆ ಬರುವುದಿಲ್ಲ. ಇಲ್ಲದಿದ್ದಲ್ಲಿ ಅಪ್ಪ-ಮಕ್ಕಳ ರಾಜಕಾರಣ ಎಂಬ ಮಾತು ಬರುತ್ತದೆ. ಅವರು ಸೂಚಿಸಿದರೆ ಮಾತ್ರ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದರು. ಆದರೆ ಬೇಲ್ಜಿಯಂ ಪ್ರವಾಸಕ್ಕೆ ಹೋಗಿದ್ದಾಗ ಅನಾರೋಗ್ಯದಿಂದ ನಿಧನರಾದರು. ಅನಿವಾರ್ಯವಾಗಿ ರಾಜಕೀಯವೇ ಬೇಡ ಅಂತಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿಯಾದರು. ಇದನ್ನೂ ಓದಿ: ದೇವೇಗೌಡರ ಮಕ್ಕಳು ಜಗಳ ಆಡ್ತಾರೆ ಅಂದರೆ ನೀವು ಸುಳ್ಳಾಗ್ತೀರಾ: ಸಿ.ಎಂ ಇಬ್ರಾಹಿಂ

  • ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ

    ಬಿಜೆಪಿಯವ್ರಿಗೆ ಮಾನ-ಮರ್ಯಾದೆ ಇಲ್ಲ, ರಾಕೇಶ್ ಈಗ ಬದುಕಿದ್ದಾರಾ?- ಸಿದ್ದು ಗರಂ

    ಬೆಂಗಳೂರು: ಬಿಟ್ ಕಾಯಿನ್ ಕೆಸರೆರಚಾಟದಲ್ಲಿ ಪುತ್ರನನ್ನು ಎಳೆದು ತಂದ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ರಾಕೇಶ್ ಈಗ ಬದುಕಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲಾ. ಬಿಜೆಪಿಯವರು ಸುಮ್ಮನೆ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಿದ್ದಾರಾ..? ಯಾಕೆ ಎಲ್ಲರೂ ರಿಯಾಕ್ಟ್ ಮಾಡ್ತಿದ್ದಾರೆ. ಅಲ್ಲಿಗೆ ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ…?. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ…?. ಸುಪ್ರಿಂ ಕೋರ್ಟ್ ಹಾಲಿ ನ್ಯಾಯ ಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಲಿ. ಎಲ್ಲವೂ ತನಿಖೆ ಆಗಲಿ 2013 ರಿಂದಲೂ ತನಿಖೆ ನಡೆಸಲಿ ಆದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.

    ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲೇ ನಡೆದಿರಲಿ. ಒಂದು ನ್ಯಾಯಾಂಗ ತನಿಖೆ ಮಾಡಿಸಿ. ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ ರಚನೆ ಮಾಡಿ ತನಿಖೆಗೆ ಕೊಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ

    ಶ್ರೀಕಿ ಬಂಧಿಸಿದಾಗ ಗೃಹ ಸಚಿವರಾಗಿದ್ದವರು ಬೊಮ್ಮಾಯಿ ಅವರಲ್ಲವೇ..? ಶ್ರೀಕಿಯಿಂದ ಬಿಟ್ ಕಾಯಿನ್ ವರ್ಗಾವಣೆಗೆ ಪೊಲೀಸರು wallet ಮಾಡಿಕೊಂಡಿದ್ರು. wallet ಗೆ ವರ್ಗಾವಣೆಯಾದ 0.8 ಬಿಟ್ ಕಾಯಿನ್ ಏನಾಯ್ತು..?ಇದಕ್ಕೆ ಉತ್ತರ ಕೊಡಬೇಕು ಅವರು. ಅಧಿವೇಶನ ಬರಲಿ, ಪಕ್ಷದಲ್ಲಿ ಚರ್ಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಿಎಂ ಬೊಮ್ಮಾಯಿ ಅವರ ಪಾತ್ರವಿದೆ ಅಂತ ನಾನು ನೇರವಾಗಿ ಹೇಳಲ್ಲ. ತನಿಖೆ ನಡೆಯಬೇಕು ಆಗಲೇ ಸತ್ಯ ಬಹಿರಂಗಗೊಳ್ಳಲಿದೆ. ನನ್ನ ಬಳಿ ದಾಖಲೆಗಳಿಲ್ಲ ಆಧಾರ ಇಲ್ಲದೆ ನಾನು ಮಾತಾಡಲ್ಲ ಎಂದರು.

  • ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ

    ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ

    ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಬಿಟ್‍ಕಾಯಿನ್ ಪ್ರಕರಣಕ್ಕೆ ಸಂಬಂಧಿದಂತೆ ಬಿಜೆಪಿ 3 ವರ್ಷದ ಹಿಂದೆ ಮೃತಪಟ್ಟಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಿದ್ದರಾಮಯ್ಯರ ಹೆಸರು ಎಳೆದು ತಂದು ಟ್ವಿಟ್ಟರ್‍ ನಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?:
    ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದರು. ಆದರೆ ಈಗ ದಾಖಲೆಯೇ ಇಲ್ಲ ಎನ್ನುತ್ತಿದ್ದಾರೆ. ನಿಮ್ಮ ಅತ್ಯಾಪ್ತರ ವಹಿವಾಟು ನಿಮ್ಮನ್ನು ಅಸಹಾಕನನ್ನಾಗಿ ಮಾಡಿದೆಯೇ? ಬಿಟ್ ಕಾಯಿನ್ ಪ್ರಭಾ ವಲಯ ನಿಮ್ಮನ್ನೇ ಸುತ್ತಿಕೊಳ್ಳಬಹುದೆಂಬ ಭಯ ಕಾಡುತ್ತಿದೆಯೇ? ಮಾನ್ಯ ಬುರುಡೆರಾಮಯ್ಯ, ನಿಮ್ಮ ಅವಧಿಯಲ್ಲಿ ನಡೆದ ಈ ಹಗರಣವನ್ನು ಮುಚ್ಚಿ ಹಾಕುವುದು ನಿಮಗೆ ತೀರಾ ಅನಿವಾರ್ಯವಾಗಿತ್ತು. ಅಪ್ರಿಯವಾದ ಸತ್ಯ ಹೇಳುತ್ತೇವೆ, ಇಲ್ಲಿ ನಿಮ್ಮ ಅತ್ಯಾಪ್ತರೇ ಇದ್ದರು ಎಂಬ ಅನುಮಾನಕ್ಕೆ ಈ ಚಿತ್ರ ಪುಷ್ಠಿ ನೀಡುತ್ತಿದೆ. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ ಮುಚ್ಚಿಹಾಕೋದು ಅದ್ಕಿಂತ ದೊಡ್ಡ ಸ್ಕ್ಯಾಮ್: ರಾಹುಲ್ ಗಾಂಧಿ

    ಸತ್ಯ ಅನಾವರಣವಾಗುವ ಭಯಕ್ಕೆ ನೀವು ಯೂಟರ್ನ್ ತೆಗೆದುಕೊಳ್ಳುತ್ತಿದ್ದೀರಿ ಅಲ್ಲವೇ? ಮಾನ್ಯ ಸಿದ್ದರಾಮಯ್ಯನವರೇ, ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್‍ನಲ್ಲಿ ನಡೆಯುತ್ತಿದ್ದ ಹುಕ್ಕಾ ಬಾರ್ ಆ ಎಲ್ಲ ಚಟುವಟಿಕೆಯ ಕೇಂದ್ರವಾಗಿತ್ತು. ಸುನೀಶ್ ಹೆಗ್ಡೆ, ಹೇಮಂತ್ ಮುದ್ದಪ್ಪ, ಶ್ರೀಕಿಯಂಥವರು ಆಗ ನಿಮ್ಮ ಮನೆಯ ಸುತ್ತಮುತ್ತಲೂ ಓಡಾಡಿರಲೂ ಬಹುದಲ್ಲವೇ!? ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಅವ್ಯವಹಾರ ಬಹಿರಂಗವಾಗಿದ್ದು ನಿಮ್ಮ ಕಾಲದಲ್ಲಿ. ಒಂದೆರಡು ಕಡೆ ದಾಳಿ ನಡೆದರೂ ತನಿಖೆ ಹಠಾತ್ ಸ್ಥಗಿತಗೊಂಡಿತು.

    ಈ ಚಿತ್ರದಲ್ಲಿರುವ ಸುನೀಶ್ ಹೆಗ್ಡೆ & ಹೇಮಂತ್ ಜೊತೆಗಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ನಿಜವೇ ಆದರೆ ಬಿಟ್‍ಕಾಯಿನ್ ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು. ಸಿದ್ದರಾಮಯ್ಯನವರೇ, ಆ ಬಗ್ಗೆ ನೀವು ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ? ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ಜೊತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಗಾಢ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ & ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ!? ಇಲ್ಲಿ ನೋಡಿ, ಸುನೀಶ್ ಹೆಗ್ಡೆ & ಹೇಮಂತ್ ಯಾರ ಜೊತೆಗಿದ್ದಾರೆ ಎಂದು ಒಮ್ಮೆ ನೋಡಿ. ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್‍ಕಾಯಿನ್ ಹಗರಣದ ಬಗ್ಗೆ ತಾವು ಪ್ರಸ್ತಾಪಿಸಿದ್ದೀರಿ. ಈಗ ನಮಗೆ ಒಂದಿಷ್ಟು ಪ್ರಶ್ನೆಗಳಿವೆ. ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಇದನ್ನೂ ಓದಿ: ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

  • ರಾಕೇಶ್ ನನ್ನ ತಮ್ಮನಿದ್ದಂತೆ ಆತನ ಸಾವಿಗೆ ನಾನೇಕೆ ಕಾರಣವಾಗ್ಲಿ: ಎಂಟಿಬಿಗೆ ಭೈರತಿ ತಿರುಗೇಟು

    ರಾಕೇಶ್ ನನ್ನ ತಮ್ಮನಿದ್ದಂತೆ ಆತನ ಸಾವಿಗೆ ನಾನೇಕೆ ಕಾರಣವಾಗ್ಲಿ: ಎಂಟಿಬಿಗೆ ಭೈರತಿ ತಿರುಗೇಟು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಆರೋಪಿಸಿದ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್‍ಗೆ ಶಾಸಕ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಕೇಶ್ ನನ್ನ ತಮ್ಮನಿಂದ್ದಂತೆ ಅವರ ಸಾವಿಗೆ ನಾನೇಕೆ ಕಾರಣವಾಗಲಿ? ಒಂದು ಸಾವನ್ನ ರಾಜಕೀಯವಾಗಿ ಬಳಸಿಕೊಂಡು ಎಂಟಿಬಿ ನಾಗರಾಜ್ ಹತಾಶೆ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಯಾರನ್ನಾದರೂ ಕುಡಿಸಿ ಸಾಯಿಸೋಕೆ ಆಗುತ್ತಾ? ರಾಕೇಶ್ ಕುಡಿದು ಸಾವನ್ನಪ್ಪಿದ್ದು ಎಂದು ಅವರಿಗೆ ಯಾರು ಹೇಳಿದ್ದು? ರಾಕೇಶ್ ಸಾವಿನ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು. ಮೂರನೇ ವ್ಯಕ್ತಿ ಎಂಟಿಬಿ ನಾಗರಾಜ್‍ಗೆ ಯಾವ ಹಕ್ಕಿದೆ ಎಂದು ಕಿಡಿಕಾರಿದ್ದಾರೆ.

    ನಾನು ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾಗ ಎಂಟಿಬಿ ಎಲ್ಲಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ. ಗ್ರಾ. ಪಂ ಸದಸ್ಯನಿಂದ ಹಿಡಿದು ಈಗ ಶಾಸಕನಾಗಿದ್ದೇನೆ. ನಾನೇನು ಬಚ್ಚಾ ಅಲ್ಲ, ಬೇರೆ ಮನೆಯಿಂದ ಬಂದು ಕಾಂಗ್ರೆಸ್ಸಿನಲ್ಲಿ ವಾಸ ಮಾಡಿಲ್ಲ. ನೀವು ಮಾಡುತ್ತಿರುವುದು ಏನು? ಹೊಸಕೋಟೆಯಲ್ಲಿ ಬಚ್ಚೇಗೌಡ ಅವರು ಕಟ್ಟಿ ಬೆಳೆಸಿದ ಮನೆಯಲ್ಲಿ ನೀವು ವಾಸ ಮಾಡಲು ಹೋಗುತ್ತಿರುವುದು ಎಷ್ಟು ಸರಿ? ಸಿದ್ದರಾಮಯ್ಯ ಅವರನ್ನು ಟೀಕಿಸಲು ನಿಮಗೆ ಯಾವುದೇ ನೈತಿಕತೆ ಇಲ್ಲ. ನಿಮ್ಮ ಬಂಡವಾಳ ನೀವು ನಡೆಸಿರುವ ಹಗರಣಗಳ ಬಗ್ಗೆ ನಮಗೂ ಗೊತ್ತಿದೆ ಎಂದು ಎಂಟಿಬಿಗೆ ವಿರುದ್ಧ ಹರಿಹಾಯ್ದಿದ್ದಾರೆ.

    ಎಂಟಿಬಿ ಹೇಳಿದ್ದೇನು?
    ಭೈರತಿ ಸುರೇಶ್ ಬಡ್ಡಿ ವಸೂಲಿ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿ, ರಾಜಕೀಯದಲ್ಲಿ ಅವನು ಬಚ್ಚಾ, ಆತನ ಬಂಡವಾಳ ನನಗೆ ಗೊತ್ತು. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದವನನ್ನು ಸಾಯಿಸಿದ್ದು ನನಗೆ ಗೊತ್ತಿದೆ ಎಂದು ಆರೋಪಿಸಿದ್ದರು.

  • ಸಿದ್ದರಾಮಯ್ಯ ಪುತ್ರ ಸಾವನ್ನಪ್ಪಲು ಭೈರತಿ ಸುರೇಶ್ ಕಾರಣ- ಎಂಟಿಬಿ

    ಸಿದ್ದರಾಮಯ್ಯ ಪುತ್ರ ಸಾವನ್ನಪ್ಪಲು ಭೈರತಿ ಸುರೇಶ್ ಕಾರಣ- ಎಂಟಿಬಿ

    -ಜೆಡಿಎಸ್‍ನಲ್ಲಿ ಮದ್ವೆಯಾದವರದ್ದು ಕಾಂಗ್ರೆಸ್‍ನಲ್ಲಿ ಸಂಸಾರ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಾವನ್ನಪ್ಪಲು ಭೈರತಿ ಸುರೇಶ್ ನೇರ ಕಾರಣ. ರಾಕೇಶ್ ಅವರನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿಕೆ ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೈರತಿ ಸುರೇಶ್ ಬಡ್ಡಿ ವಸೂಲಿ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿದ್ದಾರೆ. ರಾಜಕೀಯದಲ್ಲಿ ಅವನು ಬಚ್ಚಾ, ಆತನ ಬಂಡವಾಳ ನನಗೆ ಗೊತ್ತು. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದವನನ್ನು ಸಾಯಿಸಿದ್ದು ನನಗೆ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

    ಕಾಂಗ್ರೆಸ್‍ನಲ್ಲಿ ಸಂಸಾರ:
    ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಹೊರಿಸಿರುವ ಆರೋಪ ಶುದ್ಧ ಸುಳ್ಳು. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬರುವ ಮುನ್ನವೇ ನಾನು ಶಾಸಕನಾಗಿದ್ದೆ. ಎಸ್.ಎಂ.ಕೃಷ್ಣ ನನಗೆ ಟಿಕೆಟ್ ನೀಡಿದ್ದು, ಸಿದ್ದರಾಮಯ್ಯ ಅಲ್ಲ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕನಿಗೂ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಎಲ್ಲರ ಬಂಡವಾಳ ನನಗೆ ಗೊತ್ತಿದೆ.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುರುಬರನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ಯಾವ ಪಕ್ಷದಿಂದ ಬಂದಿದ್ದಾರೆ, ಇವರೆಲ್ಲ ಜೆಡಿಎಸ್‍ನಲ್ಲಿ ಮದುವೆಯಾಗಿ ಕಾಂಗ್ರೆಸ್‍ಗೆ ಬಂದು ಸಂಸಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದಿನೇಶ್ ಗುಂಡೂರಾವ್ ದುರ್ಬಲ ಅಧ್ಯಕ್ಷ. ಅವರು ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸೀಟು ಗೆಲ್ಲಿಸಿದ್ದಾರೆ. ರಾಷ್ಟ್ರದಲ್ಲಿ 40 ಸೀಟ್ ಗೆದ್ದಿರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಒಂದು ಸೀಟ್ ಗೆದ್ದ ಇತಿಹಾಸ ಕಾಂಗ್ರೆಸ್‍ಗೆ ಇರಲಿಲ್ಲ. ಮುಂಚೂಣಿ ನಾಯಕರಿಂದಲೇ ಕಾಂಗ್ರೆಸ್ ಹಾಳಾಗಿ ಸೋತು ಸುಣ್ಣವಾಗಿದೆ. ದೇಶದಲ್ಲೂ ಕಾಂಗ್ರೆಸ್ ಇಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಇಲ್ಲ. ದಿನೇಶ್ ಗೂಂಡೂರಾವ್‍ರಿಂದ ಕಾಂಗ್ರೆಸ್‍ಗೆ ಈ ದುರ್ಗತಿ ಬಂದಿದೆ ಎಂದು ಹರಿಹಾಯ್ದರು.

  • ಸಿಎಂ ಪುತ್ರ ರಾಕೇಶ್ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ

    ಸಿಎಂ ಪುತ್ರ ರಾಕೇಶ್ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ

    ಕಲಬುರಗಿ: ಸಿಎಂ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಹೆಸರಲ್ಲಿ ಅಭಿಮಾನಿ ಸಂಘಟನೆಯೊಂದು ಹುಟ್ಟಿಕೊಂಡಿದೆ. ಬರೀ ಸಂಘ ಆಗಿದ್ರೆ ಸುದ್ದಿ ಆಗ್ತಿರಲಿಲ್ಲವೇನೋ. ಆದ್ರೆ ರಾಕೇಶ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ದೋಖಾ ಬೆಳಕಿಗೆ ಬಂದಿದೆ.

    ಯಾದಗಿರಿಯ ಶಹಾಪುರ ತಾಲೂಕಿನ ತಡಬಡಿ ಗ್ರಾಮದ ನಿವಾಸಿ ಮಾಳಪ್ಪ ಪೂಜಾರಿ ಅನ್ನೋ ಖತರ್ನಾಕ್ ಆಸಾಮಿ, 2012-13ರಲ್ಲಿ “ರಾಕೇಶ ಸಿದ್ದರಾಮಯ್ಯ ಅಭಿಮಾನಿಗಳ ಒಕ್ಕೂಟ” ಕಟ್ಟಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತ್ತು ಸೇಡಂ ತಾಲೂಕಿನ ಹಲವು ಗ್ರಾಮೀಣ ಪ್ರದೇಶದ ಜನರಿಗೆ ವಂಚಿಸಿದ್ದಾನೆ. ಸಂಘದ ಹೆಸರಲ್ಲಿ ಬ್ಯಾಂಕ್ ಸಾಲ, ಸರ್ಕಾರಿ ಕೆಲಸ, ನಿವೇಶನದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಪರಾರಿಯಾಗಿದ್ದಾನೆ.

    ದುರಂತ ಅಂದ್ರೆ ಸಂಗೀತಾ ಎಂಬವರ ಕುಟುಂಬದ 20 ಎಕರೆ ಜಮೀನನ್ನ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. 2016ರ ಜುಲೈನಲ್ಲಿ ವಿದೇಶದಲ್ಲಿ ರಾಕೇಶ್ ನಿಧನರಾದ ಸುದ್ದಿ ಬಳಿಕ ಆತಂಕಕ್ಕೀಡಾದ ಜನ ಹಣ ನೀಡುವಂತೆ ಮಾಳಪ್ಪನ ಬೆನ್ನು ಬಿದ್ದು, ಸ್ಟೇಷನ್ ಮೆಟ್ಟಿಲೇರಿ ಕೆಲವರು ಅಲ್ಪ-ಸ್ವಲ್ಪ ಹಣ ವಾಪಸ್ ಪಡೆದಿದ್ದಾರೆ. ಆದ್ರೆ ಉಳಿದ ಹಣ ಇನ್ನೂ ಕೊಟ್ಟಿಲ್ಲ.

    ಈ ಬಗ್ಗೆ ಪಬ್ಲಿಕ್‍ಟಿವಿ ಪ್ರಶ್ನಿಸಿದಾಗ ಅಧಿಕಾರಿಯ ಮಾತು ನಂಬಿ ಹಣ ಪಡೆದಿದ್ದು ನಿಜ. ಆದ್ರೆ ಎಲ್ಲರ ಹಣ ವಾಪ್ ನೀಡಿದ್ದೇನೆ ಅಂತ ಮಾಳಪ್ಪ ಸಬೂಬು ಕೊಡ್ತಿದ್ದಾನೆ.