Tag: Rakesh Poojary

  • ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ

    ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ

    `ಕಾಂತಾರ ಚಾಪ್ಟರ್ 1′ (Kantara: Chapter 1) ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಕುಲಶೇಖರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುಲ್ಶನ್ ದೇವಯ್ಯ (Gulshan Devaiah) ತಮ್ಮ ಸಹ ನಟ ರಾಕೇಶ್ ಪೂಜಾರಿಯನ್ನು (Rakesh Poojary) ನೆನೆದು ಭಾವುಕರಾಗಿದ್ದಾರೆ.

    ಈ ಕುರಿತು ನಟ ಗುಲ್ಶನ್ ದೇವಯ್ಯ ಅವರು ತಮ್ಮ ಎಕ್ಸ್‌ (X) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನನಗೆ ರಾಕೇಶ್ ಪೂಜಾರಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜನರು ಆತನ ಮೇಲಿಟ್ಟಿರುವ ಪ್ರೀತಿಯನ್ನು ಹಾಗೂ ಆತನನ್ನು ನೆನಪಿಸಿಕೊಳ್ಳುವ ಪರಿಯನ್ನು ನಾನು ಗಮನಿಸುತ್ತಿದ್ದೇನೆ. ಇದರಿಂದಲೇ ಆತ ಎಂತಹ ಕಲಾವಿದ ಎಂದು ಗೊತ್ತಾಗುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಅದ್ಭುತ ಭಾರತೀಯ ಚಿತ್ರ, ಅಭಿನಯವು ಪೀಳಿಗೆಗೆ ಸ್ಫೂರ್ತಿ: ರಿಷಬ್‌ ನಟನೆಗೆ ರಿತೇಶ್ ದೇಶಮುಖ್ ಚಪ್ಪಾಳೆ

    ಇದೇ ವೇಳೆ ಪೋಸ್ಟ್‌ವೊಂದನ್ನು ರೀಪೋಸ್ಟ್ ಮಾಡಿದ್ದು, ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಪ್ರೇಕ್ಷಕರನ್ನು ಅತೀ ಹೆಚ್ಚು ನಗಿಸಿದ ಪಾತ್ರವೆಂದರೆ ಅದು ರಾಕೇಶ್ ಪೂಜಾರಿಯವರದ್ದು. ಆದರೆ ಇಂದು ಸಿನಿಮಾದ ಮೂಲಕ ಅವರಿಗೆ ಸಿಗುತ್ತಿರುವ ಪ್ರೀತಿಯನ್ನು ನೋಡಲು ಅವರು ನಮ್ಮೊಂದಿಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್‌ ಅಡಿಯಲ್ಲಿ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕಾಂತಾರ ಚಾಪ್ಟರ್ 1′ ಅ.2ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.ಇದನ್ನೂ ಓದಿ: ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

     

  • ‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

    ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ನಿಧನ ಚಿತ್ರರಂಗಕ್ಕೆ ಶಾಕ್ ನೀಡಿದೆ. ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ರಾಕೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ‘ಕಾಂತಾರ’ (Kantara Chapter 1) ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ ಎಂದು ರಾಕೇಶ್‌ ಬಗ್ಗೆ ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ನಟ ರಾಕೇಶ್ ಪೂಜಾರಿ (Rakesh Poojari) ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಕಾಂತಾರ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್‌ ರಾಕೇಶ್ ಅಗಲಿಕೆಗೆ ಸಂತಾಪ ಸೂಚಿಸಿದೆ.

    ಮೇ 12ರಂದು ರಾಕೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ವೇಳೆ, ಅನುಶ್ರೀ, ರಕ್ಷಿತಾ ಪ್ರೇಮ್, ಯೋಗರಾಜ್ ಭಟ್, ಕಾಮಿಡಿ ಕಿಲಾಡಿಗಳು ತಂಡದ ಕಲಾವಿದರು ಭಾಗಿಯಾಗಿ ಅಂತಿಮ ದರ್ಶನ ಪಡೆದರು. ನಿನ್ನೆ ಸಂಜೆ ಉಡುಪಿ ಹೂಡೆಯ ರುದ್ರಭೂಮಿಯಲ್ಲಿ ಬಿಲ್ಲವ ಸಂಪ್ರದಾಯದಂತೆ ನಟನ ಅಂತ್ಯಕ್ರಿಯೆ ನಡೆಯಿತು.

  • ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ಉಡುಪಿ: ರಾಕೇಶ್ (Rakesh Poojary) ನಮ್ಮೂರಿನ ಹುಡುಗ. ಬಾಯಿ ತುಂಬಾ ಅಕ್ಕಾ ಅಕ್ಕಾ ಅಂತ ಕರೀತಿದ್ದ. ನನ್ನ ತಮ್ಮನ ಹಾಗೆ ನಮ್ಮ ಕಣ್ಣಮುಂದೆ ಚೆನ್ನಾಗಿ ಬೆಳೆದ ಹುಡುಗ ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ ಎಂದು ನಿರೂಪಕಿ, ನಟಿ ಅನುಶ್ರೀ (Anchor Anushree) ಬೇಸರ ವ್ಯಕ್ತಪಡಿಸಿದರು.

    ಉಡುಪಿಯ ಕೆಮ್ಮಣ್ಣು ಗುಡೆಯಲ್ಲಿ ರಾಕೇಶ್ ಪೂಜಾರಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ನಂತರ ಅವರು ಮಾತನಾಡಿದರು. ತಮಾಷೆಗೂ ಯಾರ ಮನಸ್ಸನ್ನು ನೋಯಿಸದ ಹುಡುಗ ರಾಕೇಶ್. ಒಳ್ಳೆಯವರಿಗೆ ಕಾಲ ಇಲ್ಲ. ತಾಯಿ ಮತ್ತು ತಂಗಿಗೆ ನಾವೆಲ್ಲಾ ಶಕ್ತಿಯಾಗಿ ನಿಲ್ಲಬೇಕು. ಅವರ ನಗು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಡಿಂಪಲ್ ಡಿಂಪಲ್ ಎಂದು ಡ್ಯಾನ್ಸ್ ಮಾಡುತ್ತಿದ್ದದ್ದು ಕಣ್ಮುಂದೆ ಬರುತ್ತಿದೆ. ಅರ್ಜುನ್ ಜನ್ಯ ಅವರ ಮಿಮಿಕ್ರಿ ಅಷ್ಟು ಚೆನ್ನಾಗಿ ಮಾಡುತ್ತಿದ್ದ. ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ ವ್ಯಕ್ತಿ ಎಂದು ಸ್ಮರಿಸಿದರು. ಇದನ್ನೂ ಓದಿ: ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    ಅರ್ಧ ದಿನದಲ್ಲಿ ಸ್ಕಿಟ್‌ನ ಎಲ್ಲ ಡೈಲಾಗ್‌ಗಳನ್ನು ಕಲಿತು ನಟಿಸುತ್ತಿದ್ದ ಕಲಾವಿದ ಆತ. ಕಾಂತಾರದಲ್ಲಿ ಅವಕಾಶ ಸಿಕ್ಕಿರುವುದು ಒಂದೊಳ್ಳೆ ಅವಕಾಶವಾಗಿತ್ತು. ಯಾವತ್ತೂ ನಮ್ಮದೇ ಕ್ಯಾರಾವ್ಯಾನ್‌ನಲ್ಲಿದ್ದು, ನಮ್ಮ ಜೊತೆ ಊಟ ಮಾಡುತ್ತಿದ್ದ. ಅಣ್ಣತಮ್ಮಂದಿರ ಹಾಗೆ ಜೊತೆಗೆ ಇದ್ದ ನನ್ನ ತಮ್ಮ ಇಲ್ಲ ಅನ್ನೋದು ನೋವು ತಂದಿದೆ ಎಂದರು.  ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

  • ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    `ಕಾಮಿಡಿ ಕಿಲಾಡಿಗಳು ಸೀಸನ್ 3’ರ ಖ್ಯಾತಿಯ ರಾಕೇಶ್ ಪೂಜಾರಿ ಅಂತ್ಯಕ್ರಿಯೆ ಉಡುಪಿಯ(Udupi) ಹೂಡೆಯ ಸ್ಮಶಾನದಲ್ಲಿ ನಡೆಯಿತು.

    ಹುಟ್ಟೂರು ಉಡುಪಿಯಲ್ಲಿ ರಾಕೇಶ್ ಪೂಜಾರಿ(Rakesh Poojary) ಅವರ ಅಂತ್ಯಕ್ರಿಯೆ ನಡೆದಿದೆ. ಯೋಗರಾಜ್ ಭಟ್, ಅನುಶ್ರೀ, ರಕ್ಷಿತಾ ಪ್ರೇಮ್, ಮಲೈಕಾ, ನಯನ, ಸೂರಜ್ ಸೇರಿ ಅನೇಕ ಕಲಾವಿದರು ರಾಕೇಶ್‌ ಅವರ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ಹೂಡೆ ಬೀಚ್(Hoode Beach) ಪಕ್ಕದಲ್ಲಿ ರಾಕೇಶ್ ಅವರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಮನೆಯಿಂದ ಸ್ಮಶಾನದವರೆಗೆ ಅಂತಿಮ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನಟನಟಿಯರು, ಕುಟುಂಬಸ್ಥರು ಹಾಗೂ ಆಪ್ತರು ಸೇರಿ ನೂರಾರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ರಾಕೇಶ್ ಅವರ ಮಾವಂದಿರಾದ ಸತೀಶ್ ಪೂಜಾರಿ ಹಾಗೂ ಶ್ರೀಧರ ಪೂಜಾರಿ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅವರ ಅಂತ್ಯಕ್ರಿಯೆಯು ಬಿಲ್ಲವ ಸಂಪ್ರದಾಯದಂತೆ ಪಡುತೋನ್ಸೆಯ ಬಿಲ್ಲವ ಸಮಾಜ ರುದ್ರಭೂಮಿಯಲ್ಲಿ ನೆರವೇರಿತು.

    ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು(Comedy Khiladigalu Season-3) ಸೀಸನ್ -3 ರ ಗ್ರ‍್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್, ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನ ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದರು. ಅಷ್ಟೇ ಅಲ್ಲ ಪೈಲ್ವಾನ್, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ: ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟನ ನಿಧನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.

  • ‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ

    ‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ

    ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojary) ಕಿರುತೆರೆಯಲ್ಲಿ ಅಲ್ಲದೇ ಹಿರಿತೆರೆಯಲ್ಲಿಯೂ ಆಕ್ಟೀವ್ ಆಗಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ರಾಕೇಶ್ ನಟಿಸಿದ್ದು, ತಮ್ಮ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು ಎಂದು ಚಿತ್ರತಂಡ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ

    ರಿಷಬ್ (Rishab Shetty) ನಿರ್ದೇಶನದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ರಲ್ಲಿ ಪಾತ್ರವೊಂದರದಲ್ಲಿ ರಾಕೇಶ್ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು. ಈ ಚಿತ್ರದ ಮೇಲೆ ನಟ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ನಿನ್ನೆ (ಮೇ 11) ಬೆಳಗ್ಗೆ ‘ಕಾಂತಾರ’ ಶೂಟಿಂಗ್ ಮುಗಿಸಿ ಸಂಜೆ ಗೆಳೆಯರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಸ್ನೇಹಿತರ ಜೊತೆ ಇದ್ದಾಗ ಹೃದಯಘಾತದಿಂದ ರಾಕೇಶ್ ನಿಧನರಾಗಿದ್ದಾರೆ. ಇದನ್ನೂ ಓದಿ:ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

    33ನೇ ವಯಸ್ಸಿಗೆ ರಾಕೇಶ್ ನಿಧನರಾಗಿರೋ ಸುದ್ದಿ ರಕ್ಷಿತಾ ಪ್ರೇಮ್, ಸೀರುಡೆ ರಾಘು, ಗೋವಿಂದೇ ಗೌಡ ಸೇರಿದಂತೆ ಅನೇಕರಿಗೆ ಶಾಕ್ ಕೊಟ್ಟಿದೆ.

    ‘ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗಿದ್ದರು. ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

    ಉಡುಪಿಯ ಹೂಡೆಯಲ್ಲಿ ಇಂದು ಸಂಜೆ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ

    ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು – ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಸಂತಾಪ

    ‘ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ರಾಕೇಶ್ ಪೂಜಾರಿ (Rakesh Poojary) ಹೃದಯಾಘಾತದಿಂದ ಇಂದು (ಮೇ 12) ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ರಾಕೇಶ್ ನಿಧನಕ್ಕೆ ಕಾಮಿಡಿ ಕಿಲಾಡಿ ಶೋನ ತೀರ್ಪುಗಾರರಾಗಿದ್ದ ರಕ್ಷಿತಾ ಪ್ರೇಮ್ (Rakshita Prem) ಕೂಡ ಸಂತಾಪ ಸೂಚಿಸಿದ್ದಾರೆ. ನಗುಮುಖದ ರಾಕೇಶ್, ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

    ರಕ್ಷಿತಾ ಪ್ರೇಮ್ ಅವರು ರಾಕೇಶ್ ನಿಧನದ ಕುರಿತು ಹಂಚಿಕೊಂಡಿರುವ ಸ್ಟೋರಿಯಲ್ಲಿ, ನಗುಮುಖದ ರಾಕೇಶ್, ನನ್ನ ನೆಚ್ಚಿನ ವ್ಯಕ್ತಿ. ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ. ನಾನು ಇನ್ನೂ ಎಂದಿಂಗೂ ರಾಕೇಶ್ ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಿರುವ ಕಾರ್ಯಕ್ರಮ. ಅದರಲ್ಲಿ ರಾಕೇಶ್ ಕೂಡ ಒಬ್ಬರು. ಒಳ್ಳೆಯ ವ್ಯಕ್ತಿ, ಟ್ಯಾಲೆಂಟೆಡ್ ಕಲಾವಿದನಾಗಿದ್ರು. ನೀವೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀರಾ. ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿನ್ನ ನಗು ಮತ್ತು ನಿನ್ನ ಸುತ್ತ ಇರುವವರನ್ನು ನಗುಸುತ್ತಿದ್ದ ರೀತಿ. ಥ್ಯಾಂಕ್ಯೂ ರಾಕೇಶ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ

    ‘ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗಿದ್ದರು. ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

    ಉಡುಪಿಯ ಹೂಡೆಯಲ್ಲಿ ಇಂದು ಸಂಜೆ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಉಡುಪಿಯ ರಾಕೇಶ್ ಪೂಜಾರಿ

    ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಉಡುಪಿಯ ರಾಕೇಶ್ ಪೂಜಾರಿ

    ಬೆಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ರಿಯಾಲಿಟಿ ಶೋಗೆ ಶನಿವಾರ ಅದ್ಧೂರಿ ತೆರೆಬಿದ್ದಿದ್ದು, ಉಡುಪಿಯ ರಾಜೇಕ್ ಪೂಜಾರಿ ವಿಜೇತರಾಗಿ, ಕಾಮಿಡಿ ಕಿಲಾಡಿಗಳು 3ರ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಮೊದಲ ಸ್ಥಾನವನ್ನು ರಾಕೇಶ್ ಪಡೆದಿದ್ದು, ಹಾಸನದ ಸಂತೋಷ್ ಅವರು ರನ್ನರ್ ಅಪ್ ಆಗಿದ್ದಾರೆ. ಶನಿವಾರ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ಶೋ ತೀರ್ಪುಗಾರರಾಗಿದ್ದ ನಟ ಜಗ್ಗೇಶ್ ಅವರು ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಮತ್ತು ರನ್ನರ್ ಅಪ್‍ಗಳನ್ನು ಘೋಷಿಸಿದರು.

    ವಿನ್ನರ್ ಆದ ರಾಕೇಶ್ ಅವರಿಗೆ 8 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್ ಸಂತೋಷ್ ಅವರಿಗೆ 4 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ. ಇತ್ತ ಕೋಳಿ ಕಳ್ಳ ಖ್ಯಾತಿಯ ಮನೋಹರ್ ಹಾಗೂ ಬಾ ಮಲಿಕೋ ಖ್ಯಾತಿಯ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿನ್ನರ್ ರಾಕೇಶ್ ಅವರಿಗೆ ಕಾರ್ಯಕ್ರಮದ ಮೂವರು ತಿರ್ಪುಗಾರರಾದ ನಟ ಜಗ್ಗೇಶ್, ನಟಿ ರಕ್ಷಿತಾ, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಖಾಸಗಿ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರು ನಗದು ಬಹುಮಾನದ ಚೆಕ್ ಮತ್ತು ಟ್ರೋಫಿ ನೀಡಿ ಖುಷಿಪಟ್ಟರು.

    15 ಸ್ಪರ್ಧಿಗಳು ತೀವ್ರ ಪೈಪೋಟಿ ನೀಡುತ್ತಾ, 26 ವಾರಗಳ ಕಾಲ ನಡೆದ ‘ಕಾಮಿಡಿ ಕಿಲಾಡಿಗಳು ಸೀಸನ್ 3’ಗೆ ಅದ್ಧೂರಿ ತೆರೆಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ನೆರೆದಿದ್ದರು.