Tag: Rakesh Poojari

  • ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ‘ಕಾಡಿಮಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojari) ಅವರ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಸಂತಾಪ ಸೂಚಿಸಿದ್ದಾರೆ. ಅವನ ಅಕಾಲಿಕ ಮರಣ ತುಂಬಾ ನೋವು ತಂದಿದೆ ಎಂದು ಕಂಬಿನಿ ಮಿಡಿದಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ‘ಕಾಮಿಡಿ ಕಿಲಾಡಿಗಳು 3’ರ ತೀರ್ಪುಗಾರರಾಗಿದ್ದ ಯೋಗರಾಜ್ ಭಟ್ ಅವರು ರಾಕೇಶ್ ಜೊತೆಗಿನ ಒಡನಾಟದ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾತನಾಡಿ, ರಾಕೇಶ್ ನಟನೆಯನ್ನು ಹತ್ತಿರದಿಂದ ನೋಡಿದ್ದೇವೆ. ಅವರ ಸಾವಿನ ಸುದ್ದಿ ಕೇಳಿದಾಗ ಅದನ್ನು ಅರಗಿಸಿಕೊಳ್ಳೋಕೆ ಅರ್ಧ ಗಂಟೆ ಬೇಕಾಯಿತು. ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದಿರೋ ವ್ಯಕ್ತಿ. ಕರಾವಳಿಯಿಂದ ಬಂದಂತಹ ಅಪ್ರತಿಮ ಕಲಾವಿದ. ನಮ್ಮ ಸೆಟ್‌ನಲ್ಲಿ ಅವರನ್ನು ಮುದ್ದಿನ ನಟನಾಗಿ ಆರೈಕೆ ಮಾಡುತ್ತಿದ್ವಿ. ಅವರ ಮೇಲೆ ವಿಶೇಷ ಅಕ್ಕರೆ ಇತ್ತು. ‘ಕಾಮಿಡಿ ಕಿಲಾಡಿಗಳು’ ಗೆದ್ದಾಗ ಖುಷಿಪಟ್ಟಿದ್ದ ಎಂದಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ನನ್ನ ನಿರ್ದೇಶನದ ‘ಮನದ ಕಡಲು’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ‘ಕಾಂತಾರ ಚಾಪ್ಟರ್ 1’ರಲ್ಲಿ ನಟಿಸುತ್ತಿದ್ದ ಕಾರಣ ನನ್ನ ಚಿತ್ರದಲ್ಲಿ ನಟಿಸೋಕೆ ಆಗಲಿಲ್ಲ. ಈ ಚಿತ್ರದಲ್ಲಿ ಅವನಿಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದಕ್ಕಾಗಿ ಗಡ್ಡ ಬಿಟ್ಟಿದ್ದ ಹೀಗಾಗಿ ಈ ಸಿನಿಮಾ ಮುಗಿಸು ಮುಂದಿನ ಚಿತ್ರದಲ್ಲಿ ಕೆಲಸ ಮಾಡೋಣ ಅಂದಿದ್ದೇ. ಈ ಹಿಂದೆ ‘ಕರಟಕ ದಮನಕ’ ಚಿತ್ರದಲ್ಲಿ ಒಂದು ದಿನದ ಖೈದಿ ಪಾತ್ರ ಮಾಡಿದ್ದ ಎಂದು ನಟನನ್ನು ಸ್ಮರಿಸಿದರು.

    ರಾಕೇಶ್ ಅಕಾಲಿಕ ಮರಣ ತುಂಬಾ ನೋವು ತಂದಿದೆ. ಅವನಿಗೆ ತುಂಬಾ ಕನಸುಗಳಿತ್ತು. ಯಾವುದೇ ಬೆಂಬಲವಿಲ್ಲದೇ, ಚಿತ್ರರಂಗಕ್ಕೆ ಸ್ವಂತ ಪ್ರತಿಭೆಯಿಂದ ಬಂದವನು. ಸಿನಿಮಾಗಳು ಮಾಡಬೇಕು ಎಂದು ಅವನಿಗೆ ಕನಸಿತ್ತು. ವಯಸ್ಸಾದ ಪಾತ್ರ ಮಾಡಬೇಕು ಎಂದು ಆಸೆ ಹೇಳಿಕೊಂಡಿದ್ದ ಈಗ ಅವನ ಬಗ್ಗೆ ಯೋಚನೆ ಮಾಡಿದ್ರೆ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ. ಈ ವೇಳೆ, ಉಡುಪಿಯ ಹೂಡೆ ಸ್ಥಳದಲ್ಲಿ ರಾಕೇಶ್ ಅಂತ್ಯಕ್ರಿಯೆ ನಡೆಯಲಿದೆ. ತಾವು ಕೂಡ ಭಾಗಿಯಾಗಿರೋದಾಗಿ ಯೋಗರಾಜ್ ಭಟ್ ತಿಳಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ರಾಕೇಶ್ ಪೂಜಾರಿ (Lokesh Poojari) ಸಾವಿನ ಸುದ್ದಿ ಈಗಲೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ‘ಬಿಗ್ ಬಾಸ್’ ಖ್ಯಾತಿಯ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟಿಗೆ ಬಿಗ್ ಚಾನ್ಸ್- ಉಪೇಂದ್ರಗೆ ಅಂಕಿತಾ ಅಮರ್ ನಾಯಕಿ

    ಗೆಳೆಯನ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿ, ನನಗೆ ಅವರ ಸಾವಿನ ಬಗ್ಗೆ ಬೆಳಗ್ಗೆ 4 ಗಂಟೆಗೆ ನಟಿ ದಿವ್ಯಾಶ್ರೀ ಕಡೆಯಿಂದ ತಿಳಿಯಿತು. ದಿವ್ಯಾ ಮತ್ತು ರಾಕೇಶ್ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರು ಫೋನ್ ಮಾಡಿ ಹೇಳಿದಾಗ ನನಗೆ ನಂಬೋಕೆ ಆಗಲಿಲ್ಲ. ‘ಕಾಮಿಡಿ ಕಿಲಾಡಿಗಳು’ ಚಾಂಪಿಯನ್‌ಶಿಪ್‌ನಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಅವರು ಅದ್ಭುತವಾಗಿ ನಟಿಸುತ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿ ಆಶ್ವರ್ಯ ಆಯ್ತು, ನನಗೆ ನಂಬಲು ಆಗ್ತಿಲ್ಲ. ಈಗಲೂ ಇದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ಅವರಿಗಿನ್ನು ಚಿಕ್ಕ ವಯಸ್ಸು, ಚಿತ್ರರಂಗದಲ್ಲಿ ಬೆಳೆಯೋದಿತ್ತು, ಹೀಗೆ ಆಗಿದ್ದು ನ್ಯಾಯನಾ ಅನಿಸುತ್ತದೆ. ‘ಕಾಮಿಡಿ ಕಿಲಾಡಿಗಳು’ ಟೀಮ್ ಅವರ ಊರಿನ ಕಡೆ ಹೊರಟಿದೆ. ಇತ್ತೀಚೆಗೆ ನಾವು ಭೇಟಿಯಾಗಿರಲಿಲ್ಲ. ಆದರೆ ಸಮಯ ಸಿಕ್ಕಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೇವು. ನಾನು ರಾಕಿ ಅಂತ ಕರೆದ್ರೆ ಅಣ್ಣ ಎಂದು ಬಂದು ತಬ್ಬಿಕೊಳ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿದ್ರೆ ಹೊಟ್ಟೆ ಉರಿಯುತ್ತದೆ ಅಂತ ಕಣ್ಣೀರಿಟ್ಟರು.

    ‘ಕಾಂತಾರ ಚಾಪ್ಟರ್ 1’ರಲ್ಲಿ ಕೆಲಸ ಮಾಡುತ್ತಿದ್ದ ವಿಷಯ ಗೊತ್ತಿತ್ತು. ಬೆಳೆಯುವ ಟೈಮ್‌ನಲ್ಲಿ ಒಂದೊಳ್ಳೆಯ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗೆ ಆಯ್ತಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಕೇಶ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ ಎಂದು ಮಾತನಾಡಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

    ಟ ರಾಕೇಶ್ ಪೂಜಾರಿ ನಿಧನರಾಗಿರುವ ಬಗ್ಗೆ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ದಿವ್ಯಾಶ್ರೀ (Divyashree) ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಒಳ್ಳೆಯ ಕಲಾವಿದರು ಸಿಕ್ತಾರೆ, ಆದರೆ ಒಳ್ಳೆಯ ವ್ಯಕ್ತಿಯನ್ನ ನೋಡೋದು ಕಡಿಮೆ ಎನ್ನುತ್ತಾ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಕುಟುಂಬ ಸಮೇತ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಉಪೇಂದ್ರ

    ರಾಕೇಶ್ ಪೂಜಾರಿ ಮತ್ತು ನಟಿ ದಿವ್ಯಾ ಹಲವು ವರ್ಷಗಳಿಂದ ಪರಿಚಿತರು. ಹೀಗಾಗಿ ಅವರೊಂದಿನ ಒಡನಾಟದ ಬಗ್ಗೆ ಮತ್ತು ಅವರ ನಿಧನ ಸುದ್ದಿ ತಮಗೆ ತಿಳಿದಿದ್ದು ಹೇಗೆ ಎಂದು ನಟಿ ‘ಪಬ್ಲಿಕ್ ಟಿವಿ’ಗೆ ವಿವರಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ನಟ ಸದಾನಂದ ಕಡೆಯಿಂದ ಬೆಳಗ್ಗೆ 5.30ಕ್ಕೆ ರಾಕೇಶ್ ಸಾವಿನ ಸುದ್ದಿ ತಿಳಿಯಿತು. ಈ ವಿಷ್ಯ ಕೇಳಿದಾಗ ಮೊದಲಿಗೆ ಸುಳ್ಳು ಸುದ್ದಿ ಅಂದುಕೊಂಡಿದ್ವಿ, ಆ ನಂತರ ಖಾತ್ರಿಯಾಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ

    ಇತ್ತೀಚೆಗೆ ‘ದಸ್ಕತ್’ ಅಂತ ತುಳು ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ನಮ್ಮೊಂದಿಗೆ ಕುಳಿತು ಸಿನಿಮಾ ನೋಡಿದ್ದರು. ಸದಾ ಎಲ್ಲರನ್ನು ನಗಿಸುತ್ತಿದ್ದರು. ಅವರಿಗೆ 33 ವರ್ಷ ವಯಸ್ಸು ಆಗಿದ್ರು. ಅವರಲ್ಲಿ ಮಗುವಿನಂತ ಗುಣವಿತ್ತು ಎಂದಿದ್ದಾರೆ. `ದಸ್ಕತ್’ ಸಿನಿಮಾ ಪ್ರದರ್ಶನದಲ್ಲಿ ಕಡೆಯ ಬಾರಿ ಭೇಟಿಯಾಗಿದ್ದು ಅಂತ ಹೇಳಿಕೊಂಡಿದ್ದಾರೆ.

    ರಾಕೇಶ್‌ಗೆ ಆರೋಗ್ಯ ಸಮಸ್ಯೆ ಇತ್ತಾ ಗೊತ್ತಿಲ್ಲ. ಕಲಾವಿದರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಶೂಟ್ ಇರುತ್ತದೆ. ಊಟ ನಿದ್ರೆ ಸಮಸ್ಯೆ ಇರುತ್ತದೆ. ಹೀಗಾಗಿ ಲೋ ಬಿಪಿ ಆಗಿರಬಹುದು. ಕಷ್ಟ ಆದರೂ ಇಷ್ಟಪಟ್ಟು ಕೆಲಸ ಮಾಡುತ್ತೇವೆ. ಅವರಿಗೆ ಮದುವೆ ವಿಚಾರದಲ್ಲಿ ನಾವು ರೇಗಿಸುತ್ತಿದ್ದೇವು. ರಾಕೇಶ್‌ಗೆ ಅಪ್ಪ ಇಲ್ಲ ಆದರೆ ತಂಗಿ, ಅಮ್ಮ ಇದ್ದಾರೆ. ಅವರು ಅದಷ್ಟೇ ತಮಾಷೆ ಮಾಡಿಕೊಂಡು ಇದ್ದರು. ಜೀವನದಲ್ಲಿ ಅವರಿಗೆ ಸೀರಿಯಸ್‌ನೆಸ್ ಇತ್ತು. ತಂಗಿ ಮದುವೆ ಮಾಡಬೇಕು ಎಂದಿತ್ತು. ತಂಗಿಗೆ ಮದುವೆ ಮಾಡಿದ್ಮೇಲೆ ನಾನು ಮದುವೆ ಆಗುತ್ತೇನೆ ಎಂದಿದ್ದರು. ನನಗೆ ಅವರ ಅಮ್ಮನದ್ದೇ ಯೋಚನೆ ಆಗ್ತಿದೆ. ಅವರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅವರನ್ನು ಇಷ್ಟಪಡದೇ ಇರುವವರು ಯಾರಿಲ್ಲ. ಒಳ್ಳೆಯ ಕಲಾವಿದರನ್ನು ನೋಡಿದ್ದೇವೆ. ಆದರೆ ಒಳ್ಳೆಯ ವ್ಯಕ್ತಿ ಸಿಗೋದು ಕಡಿಮೆ ಅಲ್ವಾ ಎಂದಿದ್ದಾರೆ. ರಕ್ಷಿತಾ ಪ್ರೇಮ್ ಮೇಡಂಗೆ ರಾಕೇಶ್ ಫೇವರೇಟ್. ಈಗ ಅವರು ಇಲ್ಲ ಅಂತ ಬೇಜಾರು ಎನ್ನುತ್ತಾ ನಟಿ ಭಾವುಕರಾಗಿದ್ದಾರೆ.

    ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

    ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

    ʻಕಾಮಿಡಿ ಕಿಲಾಡಿʼ ಸೀಸನ್‌ 3 ವಿನ್ನರ್‌, ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜನಪ್ರಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ (Rakesh Poojary) ನಿಧನರಾಗಿದ್ದಾರೆ.

    ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲಭ್ಯ ಲೋಕದಲ್ಲಿ ಅಪಾರ ಖ್ಯಾತಿ ಗಳಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಸೋಮವಾರ ಬೆಳಗ್ಗಿನ ಜಾವ 3:30ರ ವೇಳೆಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಕಳೆದ ರಾತ್ರಿ ಅವರು ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು. ನಿನ್ನೆಯಷ್ಟೇ ಕಾಂತಾರ ಪ್ರಿಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ರಾಕೇಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಸ್ನೇಹಿತರ ಜೊತೆ ಇದ್ದಾಗ ಹೃದಯಘಾತ ಸಂಭವಿಸಿದೆ. ಲೋ ಬಿಪಿಯಿಂದ ಸಹ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ತಿಳಿದುಬಂದಿದೆ.

    ಸುಸ್ತು ಅಂತ ಸ್ನೇಹಿತರ ಬಳಿ ಹೇಳಿದಾಗ ತಕ್ಷಣ ರಾಕೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು. ಇದನ್ನೂ ಓದಿ: ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ

    ರಾಕೇಶ್, ಕೊನೆಯದಾಗಿ ದಸ್ತಕ್ ಸಿನಿಮಾದ ಪ್ರೀಮಿಯರ್ ಶೋ ನಲ್ಲಿ ಭಾಗಿಯಾಗಿದ್ರು. ಅಲ್ಲದೇ ಇತ್ತಿಚೆಗಷ್ಟೇ ಆಕ್ಸಿಡೆಂಟ್ ಆಗಿತ್ತು, ಹೆಲ್ತ್ ಇಶ್ಯೂ ಇರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ರಾಕೇಶ್‌ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ ರಕ್ಷಿತಾ ಪ್ರೇಮ್ ಇನ್‌ಸ್ಟಾದಲ್ಲಿ ವಿಶೇಷ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕ ವಾಸುಕಿ ವೈಭವ್ ದಂಪತಿ

    ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು ಸೀಸನ್ -3’ ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್,ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನ ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದರು.ಅಷ್ಟೇ ಅಲ್ಲ ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡ ಸಿನಿಮಾ, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.