Tag: Rakesh Jhunjhunwala

  • ಆಕಾಶ್ ಏರ್ ಹಾರಾಟ ಆರಂಭಿಸಿದ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ ಜುಂಜುನ್‍ವಾಲ – ಈಡೇರಿತು ಮಹತ್ತರವಾದ ಕನಸು

    ಆಕಾಶ್ ಏರ್ ಹಾರಾಟ ಆರಂಭಿಸಿದ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ ಜುಂಜುನ್‍ವಾಲ – ಈಡೇರಿತು ಮಹತ್ತರವಾದ ಕನಸು

    ಮುಂಬೈ: ಷೇರು ಮಾರುಕಟ್ಟೆ ತಜ್ಞ, ಮುಂಬೈನ ದಲಾಲ್ ಸ್ಟ್ರೀಲ್ ಕಿಂಗ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್‍ವಾಲ ಇಂದು ಇಹಲೋಕ ತ್ಯಜಿಸಿದ್ದಾರೆ. ಇಂದು ಅವರು ಮೃತಪಟ್ಟರೂ ಅವರು ಸಾಧನೆಯ ಕಥೆಯಿಂದ ಮುಂದೆಯೂ ಜೀವಂತವಾಗಿರುತ್ತಾರೆ. ಜುಂಜುನ್‍ವಾಲ ಅವರ ಕನಸು ಕೆಲವೇ ದಿನಗಳ ಮೊದಲು ನನಸಾಗಿತ್ತು. ಕಡಿಮೆ ಬೆಲೆಗೆ ಜನ ಸಾಮಾನ್ಯರಿಗೂ ವಿಮಾನ ಸೇವೆ ನೀಡಲು ಆರಂಭಿಸಿದ್ದ ಅವರ ‘ಆಕಾಶ್’ ಕಂಪನಿಯ ವಿಮಾನ ಟೇಕಾಫ್ ಆಗಿತ್ತು.

    ಹೌದು. ರಾಕೇಶ್ ಜುಂಜುನ್‍ವಾಲ 5,000 ರೂಪಾಯಿಇಂದ ಹೂಡಿಕೆ ಆರಂಭಿಸಿ ಆ ಬಳಿಕ ಕೋಟ್ಯಧಿಪತಿಯಾಗಿ ಹೆಸರುವಾಸಿಯಾದರು. ಅವರ ಹೆಸರು ಹೇಳಿದ ತಕ್ಷಣ ಷೇರು ಮಾರುಕಟ್ಟೆಯಲ್ಲಿ ಹಲ್ ಚೆಲ್ ಶುರುವಾಗುವ ಹಂತಕ್ಕೆ ಬೆಳೆದರು. ಅಲ್ಲದೇ ಷೇರು ಹೂಡಿಕೆದಾರರು ಅವರನ್ನು ಅನುಸರಿಸಲು ಪ್ರಾರಂಭಿಸಿದ್ದರು. ಈ ನಡುವೆ ರಾಕೇಶ್ ಜುಂಜುನ್‍ವಾಲ ಏರ್‌ಲೈನ್ಸ್‌ ಒಂದರ ಆರಂಭಕ್ಕೆ ಮುಂದಾಗಿದ್ದರು. ಈ ಕಾರ್ಯದಲ್ಲಿ ಯಶಸ್ವಿ ಕೂಡ ಆಗಿದ್ದರು. ಜುಂಜುನ್‍ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್ ಸೇರಿಕೊಂಡು ಆಕಾಶ್ ಏರ್ ಕಂಪನಿಯಲ್ಲಿ ಹೂಡಿಕೆ ಮಾಡಿ 2021ರ ಆಗಸ್ಟ್ ತಿಂಗಳಲ್ಲಿ ವಿಮಾನ ಕಾರ್ಯಾಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣ ಪತ್ರ ದೊರೆಕಿತ್ತು. ಆದರೆ ಕೋವಿಡ್‍ನಿಂದಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆ ಬಳಿಕ ಆಕಾಶ್ ಏರ್‌ಲೈನ್ಸ್‌ ಭಾರತದಲ್ಲಿ ಹಾರಾಟ ಆರಂಭಿಕ ಕಾರ್ಯಕ್ರಮದಲ್ಲಿ ರಾಕೇಶ್ ಜುಂಜುನ್‍ವಾಲ ಕೈಗಾಡಿಯಲ್ಲಿ ಆಗಮಿಸಿ ಉಪಸ್ಥಿತರಿದ್ದರು. ಆ ಬಳಿಕ ಆಗಸ್ಟ್ 7 ರಿಂದ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಆಕಾಶ್ ವಿಮಾನ ಹಾರಾಟ ಆರಂಭಿಸಿತು ಆದಾದ ಒಂದೇ ವಾರದಲ್ಲಿ ಜುಂಜುನ್‍ವಾಲ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಸಾವಿರಾರು ಕೋಟಿ ಆಸ್ತಿ ಒಡೆಯ, ಬಿಗ್‌ಬುಲ್‌ ರಾಕೇಶ್‌ ಜುಂಜುನ್‌ವಾಲ ನಿಧನ

    ಜುಂಜುನ್‍ವಾಲ ಈ ಏರ್‌ಲೈನ್ಸ್‌ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿದ್ದರು. ಅಲ್ಲದೇ ದೇಶದ ಜನರಿಗೆ ಕಡಿಮೆ ಟಿಕೆಟ್ ದರ ಒದಗಿಸಿ ಎಲ್ಲರಿಗೂ ವಿಮಾನಯಾನದ ಸೇವೆ ನೀಡಬೇಕೆಂಬ ಮಹತ್ತರವಾದ ಕನಸು ಹೊಂದಿದ್ದರು. ಅಲ್ಲದೇ ಆರಂಭಿಕ ಹಂತದಲ್ಲೇ ಆಕಾಶ್ ಏರ್ ಕಂಪನಿ ಕಡಿಮೆ ಟಿಕೆಟ್ ದರವನ್ನು ನಿಗದಿ ಪಡಿಸುವುದಾಗಿ ಹೇಳಿಕೊಂಡಿತ್ತು. ಹಾಗಾಗಿ ಆಕಾಶ ಏರ್ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಟಯರ್ 2, ಟಯರ್ 3 ನಗರಗಳಿಗೆ ವಿಮಾನ ಸೇವೆಯನ್ನು ನೀಡಲು ಕಂಪನಿ ಮುಂದಾಗಿದೆ. ಆಕಾಶ ಕಂಪನಿ 72 ಬೋಯಿಂಗ್ 737 ಮ್ಯಾಕ್ಸ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ.

    ಈ ಎಲ್ಲವನ್ನು ನೋಡಬೇಕೆಂದಿದ್ದ ಜುಂಜುನ್‍ವಾಲ ಎರಡು ಕಿಡ್ನಿ ವೈಫಲ್ಯದಿಂದ ನಿರಂತರ ಡಯಾಲಿಸಿಸ್‍ಗೆ ಒಳಪಟ್ಟಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದು ಇಂದು ಬೆಳಗ್ಗೆ ಅವರನ್ನು ಮುಂಬೈನಾ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆ ತಲುಪು ವೇಳೆಗೆ ನಿಧನ ಹೊಂದಿದ್ದರು. ಸದ್ಯ ಅವರು 11,000 ಕೋಟಿಯ ಒಡೆಯನಾಗಿ ವಿಶ್ವಕ್ಕೆ ಪರಿಚಿತರಾಗಿ ಎಲ್ಲರಿಂದ ದೂರ ಹೋಗಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ಜುಂಜುನ್‍ವಾಲ ನಿಧನಕ್ಕೆ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆಕಾಶ ಏರ್ ಕೂಡ ಸಂತಾಪ ಸೂಚಿಸಿದೆ ಮತ್ತು ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಯೋಗಕ್ಷೇಮಕ್ಕಾಗಿ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಕಾಶ್ ಏರ್ ಒಂದು ಶ್ರೇಷ್ಠ ವಿಮಾನಯಾನವನ್ನು ಆರಂಭಿಸಲು ಶ್ರಮಿಸಿದ ಅವರ ನಿಷ್ಠೆಗೆ ಆಕಾಶ್ ಏರ್ ಕಂಬನಿ ಮಿಡಿಯುತ್ತದೆ ಎಂದು ಸಂತಾಪ ಸೂಚಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ನವದೆಹಲಿ: ಅವರು ಷೇರು ಮಾರುಕಟ್ಟೆ ತಜ್ಞ, ಮುಂಬೈನ ದಲಾಲ್ ಸ್ಟ್ರೀಲ್ ಕಿಂಗ್ 5000 ರೂಪಾಯಿಯೊಂದಿಗೆ ಮಾರ್ಕೇಟ್ ಗೆ ಎಂಟ್ರಿಯಾದ ಅವರು ಸದ್ಯ ಹೊಂದಿದ್ದು 11,000 ಕೋಟಿಯ ಪೊರ್ಟ್ ಪೊಲಿಯೊಗಳನ್ನ. ಆಕಾಶ್ ಏರ್ಲೈನ್ಸ್ ಮೂಲಕ ಮತ್ತಷ್ಟು ಎತ್ತರಕ್ಕೆ ಹಾರಲು ಸಿದ್ಧರಾಗಿದ್ದ ಆ ವ್ಯಕ್ತಿಯ ಬಾಳಲಿ ದುರ್ವಿಧಿ ಆಟವಾಡಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ. ಜುಂಜುನ್‌ವಾಲ ಅಷ್ಟಕ್ಕೂ ಯಾರು ಅವರು? ಏನಾಯ್ತು? ಅನ್ನೋ ಮಾಹಿತಿ ಇಲ್ಲಿದೆ.

    ಮುಂಬೈ ದಲಾಲ್ ಸ್ಟ್ರೀಟ್ ಕಿಂಗ್ ಅಂತ್ಲೆ ಕರೆಸಿಕೊಳ್ತಿದ್ದ ರಾಕೇಶ್ ಜುಂಜುನ್‌ವಾಲ ಭಾರತದ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಇವರು ಕೈ ಇಟ್ಟ ಷೇರುಗಳೇಲ್ಲ ಜಾಕ್‌ಪಾಟ್ ಹೊಡೆಯುತ್ತಿದ್ದವು. ಹೀಗಾಗೇ ಇವರನ್ನು ಅನುಸರಿಸುತ್ತಿದ್ದ ಜನರ ಸಂಖ್ಯೆ ಅಪಾರ. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಎರಡು ಕಿಡ್ನಿ ವೈಫಲ್ಯದಿಂದ ನಿರಂತರ ಡಯಾಲಿಸಸ್‌ಗೆ ಒಳಪಡುತ್ತಿದ್ದ ರಾಕೇಶ್ ಜುಂಜುನ್‌ವಾಲ ಆರೋಗ್ಯದಲ್ಲಿ ಇಂದು ಬೆಳಗ್ಗೆ ಏರುಪೇರು ಕಂಡು ಬಂದಿತ್ತು. ತಕ್ಷಣ ಅವರನ್ನು ಮುಂಬೈ‌ನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆ ತಲುಪುವ ವೇಳೆಗೆ ನಿಧನ ಹೊಂದಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.

    ಜುಂಜುನ್‌ವಾಲ ಜೀವನ ರೋಚಕ: ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡ ರಾಕೇಶ್ ಜುಂಜುನ್‌ವಾಲ ಜೀವನ ಆರಂಭವಾಗಿದ್ದು 5,000 ರೂಪಾಯಿಗಳಿಂದ. 1985 ರಲ್ಲಿ 5,000 ರೂಪಾಯಿಗಳೊಂದಿಗೆ ಅವರು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದರು. ಅಲ್ಲಿಂದ ಅವರು ಬದುಕೇ ಬದಲಾಯ್ತು. ಹೂಡಿಕೆ ಮಾಡಿದ ಷೇರುಗಳೇಲ್ಲ ಸಾವಿರ, ಲಕ್ಷ, ಕೋಟಿಗಳಲ್ಲಿ ಲಾಭ ಕೊಡ್ತಾ ಹೋದವು. ಅಲ್ಲಿಂದ ಅವರು ದೇಶದ ಅತಿದೊಡ್ಡ ಟ್ರೇಡರ್ ಆಗಿ ಬದಲಾದರು.

    ಇತ್ತಿಚೆಗೆ ಟೈಟಾನ್ ಕಂಪನಿಯಲ್ಲಿ ಇವರು ಹೂಡಿಕೆ ಮಾಡುತ್ತಿದ್ದಂತೆ ಬಹಳ ದೊಡ್ಡ ಪ್ರಮಾಣದ ಹೂಡಿಕೆ ಹರಿದು ಬಂದಿತ್ತು. ರಾಕೇಶ್ ಜುಂಜುನ್‌ವಾಲ ಕಂಪನಿಯೊಂದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದ್ರೆ ಅಲ್ಲೊಂದು ಮ್ಯಾಜಿಕ್ ಆಗಲಿದೆ ಎನ್ನುವುದು ಅವರ ಅನುಯಾಯಿಗಳಾಗಿ ಅದಾಗಲೇ ಗೊತ್ತಾಗುತ್ತಿತ್ತು. ಇದನ್ನೂ ಓದಿ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ವಿವಾದ – ಪಾಲಿಕೆ ಕಾರ್ಯಕ್ಕೆ SDPI ವಿರೋಧ

    ಆಕಾಶ್ ಏರ್ಲೈನ್ಸ್ ಆರಂಭಿಸಿದ್ದ ಜುಂಜುನ್‌ವಾಲ: ಷೇರು ಮಾರುಕಟ್ಟೆ ಹೂಡಿಕೆದಾರನಾಗಿದ್ದ ರಾಕೇಶ್ ಜುಂಜುನ್‌ವಾಲ ಅವರು ಇತ್ತಿಚೆಗೆ ಆಕಾಶ್ ಹೆಸರಿನಲ್ಲಿ ಹೊಸ ಏರ್ಲೈನ್ಸ್ ಆರಂಭ ಮಾಡಿದ್ದರು. ಅತ್ಯುತ್ತಮ ಸೇವೆ ಕೊಡುವ ಇರಾದೆ ಹೊಂದಿದ್ದ ಅವರು ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದರು.

    ಜುಂಜುನ್‌ವಾಲ ನಿಧನಕ್ಕೆ ಮೋದಿ ಸಂತಾಪ: ಇನ್ನು ರಾಕೇಶ್ ಜುಂಜುನ್‌ವಾಲ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧಿಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಜುಂಜುನ್‌ವಾಲ ಅವರು ಅದಮ್ಯ ಚೇತನ ವ್ಯಕ್ತಿ. ಅವರ ಪೂರ್ಣ ಬದುಕು ವಿನೋದ ಹಾಗೂ ಗಾಂಭೀರ್ಯದಿಂದ ಕೂಡಿದೆ. ಹಣಕಾಸು ಕ್ಷೇತ್ರದಲ್ಲಿ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಹಾಗೂ ಹಿತೈಷಿಗಳಿಗೆ ನನ್ನ ಸಂತಾಪಗಳು ʻಓಂ ಶಾಂತಿʼ ಎಂದು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವಿರಾರು ಕೋಟಿ ಆಸ್ತಿ ಒಡೆಯ, ಬಿಗ್‌ಬುಲ್‌ ರಾಕೇಶ್‌ ಜುಂಜುನ್‌ವಾಲ ನಿಧನ

    ಸಾವಿರಾರು ಕೋಟಿ ಆಸ್ತಿ ಒಡೆಯ, ಬಿಗ್‌ಬುಲ್‌ ರಾಕೇಶ್‌ ಜುಂಜುನ್‌ವಾಲ ನಿಧನ

    ಮುಂಬೈ: ಬಿಗ್‌ ಬುಲ್‌ ಎಂದೇ ಪ್ರಸಿದ್ದಿ ಪಡೆದಿರುವ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲ (62) ಇಂದು ಬೆಳಿಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ.

    ಸ್ಟಾಕ್‌ ಮಾರುಕಟ್ಟೆಯ ಹಿರಿಯ ಹೂಡಿಕೆದಾರರೂ ಆಗಿರುವ ಜುಂಜುನ್‌ವಾಲಾ ಬರ್ಕ್‌ಷೈರ್ ಹಾತ್‌ವೇ ಅಧ್ಯಕ್ಷರು ಹಾಗೂ ಸಿಇಓ ಸಹ ಆಗಿದ್ದರು. ಈಚೆಗಷ್ಟೇ ಜೆಟ್ ಏರ್‌ವೇಸ್ ಸಿಇಒ ದುಬೆ ಹಾಗೂ ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರೊಂದಿಗೆ ಸೇರಿ ‘ಆಕಾಶ ಏರ್‌ʼ ಸ್ಥಾಪಿಸಿದ್ದರು.

    ಜುಂಜುನ್‌ವಾಲಾ ಸುಮಾರು 580 ಕೋಟಿ ಅಮೆರಿಕನ್ ಡಾಲರ್ ಆಸ್ತಿಯ ಒಡೆಯನಾಗಿದ್ದು, ಭಾರತದ 36 ನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.

    1960ರ ಜುಲೈ 5ರಂದು ರಾಜಾಸ್ಥಾನಿ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಆದಾಯ ತೆರಿಗೆ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಮೊದಲು ಜುಂಜುನ್‌ವಾಲ ಅವರು ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದು ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸೇರಿಕೊಂಡರು.

    ಸಕ್ರೀಯ ಹೂಡಿಕೆದಾರರಾಗಿದ್ದ ಅವರು, ಜುಂಜುನ್‌ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ನ ಅಧ್ಯಕ್ಷರಾಗಿದ್ದರು. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ನಾಗಾರ್ಜುನ ಕನ್ಸ್ಟ್ರಕ್ಷನ್ ಲಿಮಿಟೆಡ್, ವಿಸರ್ಜನಾ ಲಿಮಿಟೆಡ್, ವಿಸರ್ಜನಾ ಕನ್ಸ್ಟ್ರಕ್ಷನ್ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಹೂಡಿಕೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆ.7ರಿಂದ ಹಾರಲಿದೆ ಆಕಾಶ್‌ ಏರ್‌ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು

    ಆ.7ರಿಂದ ಹಾರಲಿದೆ ಆಕಾಶ್‌ ಏರ್‌ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು

    ನವದೆಹಲಿ: ಬಿಗ್‌ ಬುಲ್‌ ಎಂದೇ ಪ್ರಸಿದ್ದಿ ಪಡೆದಿರುವ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲ ಬೆಂಬಲಿತ ‘ಆಕಾಶ ಏರ್‌ʼ ವಿಮಾನ ಸೇವೆ ಆಗಸ್ಟ್‌ 7 ರಿಂದ ಆರಂಭವಾಗಲಿದೆ.

    ಪ್ರಯಾಣಿಕರು ಆಕಾಶ ಏರ್‌ ವೆಬ್‌ಸೈಟ್‌ www.akasaair.com ಅಥವಾ ಆಕಾಶ ಏರ್‌ ಆಪ್‌ ಡೌನ್‌ಲೋಡ್‌ ಮಾಡಿ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.

    ಆಗಸ್ಟ್‌ 7 ರಿಂದ ಮುಂಬೈ ಮತ್ತು ಅಹಮದಾಬಾದ್‌ ಮಧ್ಯೆ ವಾರಕ್ಕೆ 28 ಸೇವೆ ನೀಡಲಿದೆ. ಆಗಸ್ಟ್‌ 13 ರಿಂದ ಬೆಂಗಳೂರು – ಕೊಚ್ಚಿ ಮಧ್ಯೆ ವಾರಕ್ಕೆ 28 ವಿಮಾನ ಸೇವೆ ನೀಡಲಿದೆ.

    ಆರಂಭದಲ್ಲಿ ಮಹಾನಗರಗಳಿಗೆ ಸೇವೆ ನೀಡಿದ ಬಳಿಕ ದೇಶದ ಟಯರ್‌ 2, ಟಯರ್‌ 3 ನಗರಗಳಿಗೂ ಸಂಪರ್ಕ ಒದಗಿಸಲಾಗುತ್ತದೆ ಎಂದು ಆಕಾಶ ಏರ್‌ ತಿಳಿಸಿದೆ.

    ಪ್ರತಿ ತಿಂಗಳು 2 ಹೊಸ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳು ಕಂಪನಿಯನ್ನು ಸೇರಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳಿಗೆ ಸೇವೆ ನೀಡಲಾಗುವುದು ಎಂದು ಕಂಪನಿಯ ಸಿಇಒ ವಿನಯ್‌ ದುಬೆ ತಿಳಿಸಿದ್ದಾರೆ.

    ಕಡಿಮೆ ಟಿಕೆಟ್‌ ದರವನ್ನು ನಿಗದಿ ಪಡಿಸುವುದಾಗಿ ಈಗಾಗಲೇ ಹೇಳಿರುವುದರಿಂದ ಆಕಾಶ ಏರ್‌ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಆಕಾಶ ಕಂಪನಿ 72 ಬೋಯಿಂಗ್‌ 737 ಮ್ಯಾಕ್ಸ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್‌ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ.

    ಈ ಹಿಂದೆ ಜೂನ್‌ನಲ್ಲಿಯೇ ಆಕಾಶ್‌ ಏರ್‌ ಕಾರ್ಯಾರಂಭ ಮಾಡುವುದಾಗಿ ಹೇಳಿತ್ತು. ಆದರೆ ತಾಂತ್ರಿಕ ಅಡಚಣೆಯಿಂದಾಗಿ ವಿಳಂಬವಾಗಿದ್ದು, ಎರಡು ತಿಂಗಳು ಮುಂದೂಡಲ್ಪಟ್ಟಿತ್ತು.

    ಉದ್ಯಮಿ ರಾಕೇಶ್‌ ಜುಂಜುನ್‌ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್‌ ಈ ಆಕಾಶ್‌ ಏರ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, 2021ರ ಆಗಸ್ಟ್‌ ತಿಂಗಳಲ್ಲಿ ವಿಮಾನ ಕಾರ್ಯಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ದೊರಕಿತ್ತು. ಆದರೆ ಕೋವಿಡ್‌ನಿಂದಾಗಿ ಕಾರ್ಯಾಚರಣೆ ತಾತ್ಕಾಲಿವಾಗಿ ಮುಂದೂಡಲಾಗಿತ್ತು.

    ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ದೊರೆತ ಬೆನ್ನಲ್ಲೇ, ಆಕಾಶ್‌ ಏರ್‌, ಏರ್‌ ಕ್ರಾಫ್ಟ್‌ ಖರೀದಿಗೆ ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2021 ಮಾರ್ಚ್ 26 ರಂದು ಬೋಯಿಂಗ್‌ 737 ಮಾದರಿಯ 72 ವಿಮಾನಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

    Live Tv
    [brid partner=56869869 player=32851 video=960834 autoplay=true]

  • ಆಕಾಶ ವಾಣಿಜ್ಯ ವಿಮಾನಯಾನ ಆರಂಭಕ್ಕೆ ಗ್ರೀನ್ ಸಿಗ್ನಲ್

    ಆಕಾಶ ವಾಣಿಜ್ಯ ವಿಮಾನಯಾನ ಆರಂಭಕ್ಕೆ ಗ್ರೀನ್ ಸಿಗ್ನಲ್

    ನವದೆಹಲಿ: ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲು ವಾಯುಯಾನ ನಿಯಂತ್ರಕದ ಅನುಮತಿ ಪಡೆದುಕೊಂಡಿದೆ ಎಂದು ಬಿಲಿಯನೇರ್ ಹಾಗೂ ಆಕಾಸ ಏರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರು ಟ್ವೀಟ್ ಮಾಡಿದ್ದಾರೆ.

    ನಮ್ಮ ಏರ್ ಆಪರೇಟರ್ ಸರ್ಟಿಫಿಕೇಟ್ (AOC) ರಶೀದಿಯನ್ನು ಘೋಷಿಸಲು ನಾವು ಸಂತೋಷ ಪಡುತ್ತೇವೆ. ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಆಕಾಸ ವಿಮಾನ ಮಾರಾಟಕ್ಕೆ ಹಾಗೂ ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಕಾಶ ಏರ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಸಲ್ಮಾನ್ ಖಾನ್ ನಂತರ, ಸಲ್ಮಾನ್ ಲಾಯರ್ ಗೆ ಜೀವ ಬೆದರಿಕೆ

    ಎಒಸಿ ಹೊಸ ಏರ್‌ಲೈನ್‌ಗೆ ವಾಣಿಜ್ಯ ವಾಯುಸಾರಿಗೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯ ಚಿಂತಾಜನಕ- ಪಾಟ್ನಾದಿಂದ ದೆಹಲಿಗೆ ಏರ್‌ಲಿಫ್ಟ್

    ವಿಮಾನಯಾನ ಆರಂಭಿಸುವ ಮುನ್ನ ಸಂಸ್ಥೆಯು ತನ ಉದ್ಯೋಗಿಗಳ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಹೊಂದಿರಬೇಕು. AOC ವಿಮಾನಯಾನ ಜ್ಞಾನ ವೇದಿಕೆ ಸ್ಕೈಬ್ರರಿಯು ಯಾವ ಉದ್ದೇಶಕ್ಕಾಗಿ ಮತ್ತು ಯಾವ ಭೌಗೋಳಿಕ ಪ್ರದೇಶದಲ್ಲಿ ಯಾವ ಪ್ರಕಾರದ ವಿಮಾನಗಳನ್ನು ಬಳಸಬೇಕು ಎಂಬುದನ್ನು ವಿವರಿಸುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್‌ ಜುಂಜುನ್‌ವಾಲ ಬೆಂಬಲಿತ ಆಕಾಶ ಏರ್‌ ವಿಮಾನ ಲ್ಯಾಂಡ್‌ – ಶೀಘ್ರವೇ ಸೇವೆ ಆರಂಭ

    ರಾಕೇಶ್‌ ಜುಂಜುನ್‌ವಾಲ ಬೆಂಬಲಿತ ಆಕಾಶ ಏರ್‌ ವಿಮಾನ ಲ್ಯಾಂಡ್‌ – ಶೀಘ್ರವೇ ಸೇವೆ ಆರಂಭ

    ನವದೆಹಲಿ: ಬಿಗ್‌ ಬುಲ್‌ ಎಂದೇ ಪ್ರಸಿದ್ದಿ ಪಡೆದಿರುವ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲ ಬೆಂಬಲಿತ ‘ಆಕಾಶ ಏರ್‌ʼ ವಿಮಾನ ಭಾರತದಲ್ಲಿ ಲ್ಯಾಂಡ್‌ ಆಗಿದ್ದು, ಮುಂದಿನ ತಿಂಗಳಿನಿಂದ ಸೇವೆ ಆರಂಭವಾಗಲಿದೆ.

    ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಕಾಶ ಏರ್‌ ಕಂಪನಿಯ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನ ಲ್ಯಾಂಡ್‌ ಆಗಿದೆ.

    ಮುಂದಿನ ವಾರ ಮತ್ತೊಂದು ವಿಮಾನ ಬರಲಿದೆ. ಶೀಘ್ರವೇ ಎರಡು ವಿಮಾನಗಳ ಮೂಲಕ ನಾವು ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಆಕಾಶ ಏರ್‌ನ ಸಿಇಒ ವಿನಯ್‌ ದುಬೆ ಮಾಹಿತಿ ನೀಡಿದ್ದಾರೆ.

    ಕಡಿಮೆ ಟಿಕೆಟ್‌ ದರವನ್ನು ನಿಗದಿ ಪಡಿಸುವುದಾಗಿ ಈಗಾಗಲೇ ಹೇಳಿರುವುದರಿಂದ ಆಕಾಶ ಏರ್‌ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಟಯರ್‌ 2 , ಟಯರ್‌ 3 ನಗರಗಳಿಗೆ ವಿಮಾನ ಸೇವೆಯನ್ನು ನೀಡಲು ಕಂಪನಿ ಮುಂದಾಗಿದೆ.

    ಆಕಾಶ ಕಂಪನಿ 72 ಬೋಯಿಂಗ್‌ 737 ಮ್ಯಾಕ್ಸ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್‌ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ. ಇದನ್ನೂ ಓದಿ: ನಿನ್ನ ಅಹಂಕಾರ ನಾಲ್ಕೇ ದಿನ – ಸಂಜಯ್ ರಾವತ್ ಮನೆ ಎದುರು ಬ್ಯಾನರ್

    ಈ ಹಿಂದೆ ಜೂನ್‌ನಲ್ಲಿಯೇ ಆಕಾಶ್‌ ಏರ್‌ ಕಾರ್ಯಾರಂಭ ಮಾಡುವುದಾಗಿ ಹೇಳಿತ್ತು. ಆದರೆ ತಾಂತ್ರಿಕ ಅಡಚಣೆಯಿಂದಾಗಿ ವಿಳಂಬವಾಗಿದ್ದು, ಒಂದು ತಿಂಗಳು ಮುಂದೂಡಲ್ಪಟ್ಟಿತ್ತು.

    ಉದ್ಯಮಿ ರಾಕೇಶ್‌ ಜುಂಜುನ್‌ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್‌ ಈ ಆಕಾಶ್‌ ಏರ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, 2021ರ ಆಗಸ್ಟ್‌ ತಿಂಗಳಲ್ಲಿ ವಿಮಾನ ಕಾರ್ಯಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣ ಪತ್ರ ದೊರೆಕಿತ್ತು. ಆದರೆ ಕೋವಿಡ್‌ನಿಂದಾಗಿ ಕಾರ್ಯಾಚರಣೆ ತಾತ್ಕಾಲಿವಾಗಿ ಮುಂದೂಡಲಾಗಿತ್ತು.

    ವಿಮಾನಯಾನ ಸಚಿವಾಲಯದಿಂದ ನಿರಾಪೇಕ್ಷಣ ಪತ್ರ ದೊರೆತ ಬೆನ್ನಲ್ಲೇ, ಆಕಾಶ್‌ ಏರ್‌, ಏರ್‌ ಕ್ರಾಫ್ಟ್‌ ಖರೀದಿಗೆ ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2021 ಮಾರ್ಚ್ 26 ರಂದು ಬೋಯಿಂಗ್‌ 737 ಮಾದರಿಯ 72 ವಿಮಾನಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

    Live Tv