ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತದೆ ಎನ್ನುವುದು ಸ್ವತಃ ಬಿಗ್ ಬಾಸ್ ಗೆ ಅರ್ಥವಾಗುತ್ತಿಲ್ಲ. ಅದರಲ್ಲೂ ಸೋನು ಶ್ರೀನಿವಾಸ್ ಗೌಡ ವರ್ತನೆ ಮಿತಿ ಮೀರುತ್ತಿದೆಯಾ ಎನ್ನುವ ಅನುಮಾನ ನೋಡುಗರನ್ನು ಕಾಡುತ್ತಿದೆ. ಈಗಾಗಲೇ ಸಾಕಷ್ಟು ಟ್ರೋಲ್ ಆಗಿರುವ ಸೋನು, ನೆಟ್ಟಿಗರಿಗೆ ಮತ್ತೆ ಮತ್ತೆ ಆಹಾರವಾಗುವಂತಹ ಕೆಲಸಗಳನ್ನೇ ಸೋನು ಬಿಗ್ ಬಾಸ್ ಮನೆಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಸೋನು ಮೇಲೆ ಪ್ರೀತಿಗಿಂತ, ಆ ಹುಡುಗಿಗೆ ಏನೋ ಸಮಸ್ಯೆ ಇದೆ ಎನ್ನುವ ಅನುಕಂಪ ವ್ಯಕ್ತವಾಗುತ್ತಿದೆ.

ಸೋನು ವರ್ತನೆಗೆ ಸ್ವತಃ ಕಿಚ್ಚ ಸುದೀಪ್ ಕಿವಿ ಹಿಂಡಿದ್ದಾರೆ. ಮನೆಯ ಅಷ್ಟೂ ಸದಸ್ಯರು ಆ ಹುಡುಗಿಗೆ ಬುದ್ದಿ ಮಾತು ಹೇಳಿದ್ದಾರೆ. ಅದರಲ್ಲೂ ಆರ್ಯವರ್ಧನ್ ಗುರೂಜಿ, ನಿನ್ನೆಯಷ್ಟೇ ಹೆಚ್ಚಿಗೆ ಮಾತನಾಡಿದರೆ ಬಾಯಲ್ಲಿ ಪೊರಕೆ ಇಡುವುದಾಗಿಯೂ ಸೋನುಗೆ ಗದರಿಸಿದ್ದರು. ಆದರೂ, ಸೋನು ಹುಚ್ಚಾಟ ನಿಲ್ಲುತ್ತಿಲ್ಲ. ತನಗೆ ಏನು ಅನಿಸುತ್ತದೆಯೋ ಅದನ್ನು ಮಾಡಿಯೇ ಮುಂದಕ್ಕೆ ಸಾಗುತ್ತಿದ್ದಾರೆ. ಹಾಗಾಗಿ ಸೋನು ಅಷ್ಟೊಂದು ಸುಲಭಕ್ಕೆ ಯಾರಿಗೂ ಅರ್ಥವಾಗುತ್ತಿಲ್ಲ. ಇದನ್ನೂ ಓದಿ:ಸಿನಿಮಾಗೆ 2 ಕೋಟಿ, ಟಿವಿಗೆ ಹೋದರೆ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ ಜಗ್ಗೇಶ್: ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ

ಸೋನು ಮತ್ತು ರಾಕೇಶ್ ಅಡಿಗೆ ಇಬ್ಬರೂ ಕ್ಲೋಸ್ ಇರುವ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಒಟ್ಟೊಟ್ಟಿಗೆ ಇರುತ್ತಾರೆ. ಇಲಿ ಬೆಕ್ಕಿನಂತೆ ಆಟವಾಡುತ್ತಾರೆ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ತಮಾಷೆ ಮಾಡುತ್ತಾರೆ. ಅದೆಲ್ಲವೂ ಸರಿ. ಆದರೆ, ನಿನ್ನೆ ರಾಕೇಶ್ ಅಡಿಗ ಹತ್ತಿರ ವಿಚಿತ್ರ ಬೇಡಿಕೆ ಇಟ್ಟು ನೋಡುಗರನ್ನೇ ಬೆಚ್ಚಿ ಬೀಳಿಸಿದ್ದಾರೆ. ಪಕ್ಕದಲ್ಲೇ ಇದ್ದ ರಾಕೇಶ್ ಕರೆದು, ನನಗೊಂದು ಕಿಸ್ ಮಾಡು ಎಂದು ಕೇಳುತ್ತಾರೆ. ಆ ಹುಡುಗಿ ಏನೋ ಕೇಳಿತು, ಬಿಡು ಅತ್ಲಾಗೆ ಎಂದು ರಾಕೇಶ್ ಹೇಳಿದ್ದರೆ, ಒಳ್ಳೆಯ ಹುಡುಗ ಅನಿಸಿಕೊಳ್ಳುತ್ತಿದ್ದರೋ ಏನೋ? ಆದರೆ, ರಾಕೇಶ್ ಹಾಗೆ ಮಾಡಲಿಲ್ಲ.

ನನಗೊಂದು ಕಿಸ್ ಮಾಡು ಅಂತ ಸೋನು ಬೇಡಿಕೆ ಇಟ್ಟ ತಕ್ಷಣ, ಕ್ಷಣವೂ ಯೋಚಿಸಿದ ರಾಕೇಶ್ ಕೆನ್ನೆಗೆ ಮುತ್ತಿಟ್ಟೇ ಬಿಡ್ತಾರೆ. ಅದನ್ನು ನೋಡಿದ ಜಯಶ್ರೀ ಜೀವ ಸುಮ್ಮನಿರದೇ ನನಗೂ ಒಂದು ಕಿಸ್ ಮಾಡು ಎಂದು ಕೇಳಿಕೊಳ್ಳುತ್ತಾರೆ. ಅವಳ ಕೆನ್ನೆಗೂ ಸಿಹಿಮುತ್ತೊಂದನ್ನು ನೀಡಿ ಕೃತಾರ್ಥರಾಗುತ್ತಾರೆ ರಾಕೇಶ್. ಅಯ್ಯ, ಈ ಮನೆಯಲ್ಲಿ ಏನಾಗುತ್ತದೆ? ಆ ಹುಡುಗಿಯರು ಯಾಕೆ ಹಾಗೆ ಆಡುತ್ತಿದ್ದಾರೆ ಎಂದು ಪ್ರೇಕ್ಷಕರು ಇತ್ತ ತಲೆ ತಲೆ ಚೆಚ್ಚಿಕೊಂಡು ಮತ್ತೆ ಬಿಗ್ ಬಾಸ್ ನೋಡುತ್ತಿದ್ದಾರೆ.






















ಮನೆಯ ಅಟ್ರಾಕ್ಷನ್ ಆಗಿರುವ ರಾಕೇಶ್‌ಗಾಗಿ ಸ್ಪೂರ್ತಿ ಗೌಡ ಮತ್ತು ಸೋನು ಗೌಡ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಸ್ಪೂರ್ತಿ ಗೌಡ ಮತ್ತು ರಾಕೇಶ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಹಲವರಿಗೆ ಅನುಮಾನ ಬಂದಿತ್ತು. ಸ್ಪೂರ್ತಿ ಕೂಡ ತಮಗೆ ಇಷ್ಟವೆಂದು ರಾಕೇಶ್ ಹೇಳಿಕೊಂಡಿದ್ದರು. ನಮ್ಮಿಬ್ಬರ ಜಾತಕ ಹೇಗಿದೆ ಹೊಂದಾಣಿಕೆ ಎಂದು ಗುರೂಜಿಗೆ ಕೇಳಿದ್ದರು. ಈಗ ರಾಕೇಶ್ ಮೇಲೆ ಸೋನು ಗೌಡ ಕಣ್ಣು ಬಿದ್ದಿದೆ. ಇದನ್ನೂ ಓದಿ:


ಬಿಗ್ ಬಾಸ್ ಮನೆಯಲ್ಲಿ ಈವೆರೆಗೆ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಈ ಸೀಸನ್‌ನಲ್ಲಿ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಹೈಲೈಟ್ ಆಗ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ರಾಕೇಶ್ ಅವರ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ ಎಂದು ಮಾತು ಆರಂಭಿಸಿದರು. ನಂತರ ಅದೂ ಇದು ಎಂದು ಕಥೆ ಹೇಳೋಕೆ ಶುರು ಮಾಡಿದರು. ಇದನ್ನು ರಾಕೇಶ್ ಹಾಗೂ ರೂಪೇಶ್ ಆಡಿಕೊಂಡು ನಕ್ಕರು.




