Tag: Rakesh Adiga

  • ಬಿಗ್ ಬಾಸ್ ಮನೆಯಲ್ಲಿ ಸೋನು ಮರೆತು ಅಮೂಲ್ಯ ಹಿಂದೆ ಬಿದ್ದ ರಾಕೇಶ್ ಅಡಿಗ

    ಬಿಗ್ ಬಾಸ್ ಮನೆಯಲ್ಲಿ ಸೋನು ಮರೆತು ಅಮೂಲ್ಯ ಹಿಂದೆ ಬಿದ್ದ ರಾಕೇಶ್ ಅಡಿಗ

    ಬಿಗ್ ಬಾಸ್ ಓಟಿಟಿ ಮುಗಿಯುತ್ತಿದ್ದಂತೆ ಟಿವಿ‌ ಬಿಗ್ ಬಾಸ್ ನ (Bigg Boss Season 9) ಹವಾ ಜೋರಾಗಿದೆ. ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕೂತೂಹಲಕ್ಕೆ ತೆರೆಗೆ ಬಿದ್ದಿದೆ. ಇದೀಗ ಅಸಲಿ ಆಟ ಕೂಡ ಶುರುವಾಗಿದ್ದು, ನಿಧಾನಕ್ಕೆ ಒಬ್ಬರ ಪರಿಚಯದ ಜತೆ ಸ್ನೇಹ ಕೂಡ ಚಿಗುರುತ್ತಿದೆ‌. ರಾಕೇಶ್ ಮತ್ತು ಅಮೂಲ್ಯ ‌(Amulya Gowda) ನಡುವೆ ಸ್ನೇಹದ ಬೆಸುಗೆ ಶುರುವಾಗಿದ್ದು, ಅಮೂಲ್ಯ ಪಾತ್ರೆ ತೊಳೆಯುವುದನ್ನು ನೋಡಿ, ಗಾಡಿ ತೊಳಿತಿದ್ದೀರಾ ಎಂದು ರಾಕೇಶ್ ಕಾಲೆಳೆದಿದ್ದಾರೆ.

    ದೊಡ್ಮನೆಯಲ್ಲಿ ಆಟ ಜೋರಾಗಿದ್ದ, ಭಿನ್ನ ರೀತಿಯ 18 ಸ್ಪರ್ಧಿಗಳನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನೂ ಅಮೂಲ್ಯ ಮತ್ತು ರಾಕೇಶ್ (Rakesh Adiga) ನಡುವಿನ ಮಾತುಕತೆ ನೋಡುಗರಿಗೆ ಮನರಂಜನೆ ಕೊಟ್ಟಿದೆ. ರಾಕೇಶ್ ಪಾತ್ರೆ ತೊಳೆಯುತ್ತಾ ಇದ್ದರು. ನೀವು ಕೆಲಸ ಮಾಡುತ್ತೀರಾ ಎಂದು ಅಮೂಲ್ಯ ಗೆ ಕೇಳಿದ್ದಾರೆ. ಆಗ ಹೌದು.. ಫ್ರಿ ಇದ್ದಾಗ ಕೆಲಸ ಮಾಡುತ್ತೀನಿ ಎಂದಿದ್ದಾರೆ. ಹಬ್ಬದ ಸಮಯದಲ್ಲಿ ಕೆಲಸ ಮಾಡುತ್ತೀರಾ ಎಂದು ಮತ್ತೆ ರಾಕಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಬಳಿಕ ಅಮೂಲ್ಯ ಪಾತ್ರೆ ತೊಳೆಯುವ ವೈಖರಿ ನೋಡಿ ನೀವು ಗಾಡಿ ತೊಳಿಯುತ್ತಿದ್ದೀರಾ ಎಂದು ರಾಕೇಶ್ ತಮಾಷೆ ಮಾಡಿದ್ದಾರೆ. ಅದಕ್ಕೆ ಅಮೂಲ್ಯ, ರಾಕಿಗೆ ಸ್ಮೈಲ್ ಮಾಡಿದ್ದಾರೆ. ಈ ಹಿಂದಿನ ಓಟಿಟಿಯಲ್ಲಿ ಸೋನು (Sonu Srinivas Gowda) ಜತೆಗಿನ ರಾಕೇಶ್ ಸಂಭಾಷಣೆ ನೋಡುಗರಿಗೆ ಮನರಂಜನೆ ನೀಡಿತ್ತು. ಅದೇ ರೀತಿ ಟಿವಿ ಸೀಸನ್ ನಲ್ಲಿ ರಾಕಿ ಮತ್ತು ಅಮೂಲ್ಯ ಜೋಡಿ ಮೋಡಿ ಮಾಡಬಹುದಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಬಿಗ್ ಬಾಸ್ ಮನೆ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರದ್ದು. ಮೊದಲ ದಿನದಿಂದ ಕೊನೆಯ ದಿನದವರೆಗೂ ಜಗಳ, ಕೋಪ, ಪ್ರೀತಿ ಮಾಡಿಕೊಂಡೇ ಎಲ್ಲರ ಗಮನ ಸೆಳೆದವರು. ಅದರಲ್ಲೂ ಜಯಶ್ರೀ (Jayashree), ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ತ್ರಿಕೋನ ಗೆಳೆತನ ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿತು. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರು ರಾಕೇಶ್ ಅಡಿಗನನ್ನು (Rakesh Adiga) ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ:ಕೆಜಿಎಫ್ ತಾತಾ ನಟನೆಯ ‘ನ್ಯಾನೋ ನಾರಾಯಣಪ್ಪ’ ಟ್ರೇಲರ್ ರಿಲೀಸ್

    ಈ ಕುರಿತು ಮಾತನಾಡಿರುವ ಸೋನು, ‘ನಾನು ರಾಕೇಶ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವನು ಮುಂದಿನ ಹಂತ ತಲುಪಿದ್ದಾನೆ ಎಂದು ಕೇಳಿ ಸಂಭ್ರಮಿಸಿದೆ. ಮತ್ತೆ ಅವನು ಬಿಗ್ ಬಾಸ್ ಗೆದ್ದು ಬರಲಿ. ನನ್ನ ಕೊನೆ ಆಸೆ ಏನು ಅಂತ ಸದ್ಯ ಕೇಳಿದರೆ, ಅದು ರಾಕೇಶ್ ಬಿಗ್ ಬಾಸ್ (Bigg Boss OTT) ಮನೆಯಲ್ಲಿ ವಿನ್ ಆಗಬೇಕು’ ಎಂದಿದ್ದಾರೆ ಸೋನು. ತಮ್ಮಿಬ್ಬರ ಸ್ನೇಹ, ಪ್ರೀತಿ ಮತ್ತು ಪ್ರೇಮಕ್ಕಿಂತಲೂ ಮಿಗಿಲಾಗಿದ್ದು ಎನ್ನುವುದು ಸೋನು ಮಾತು.

    ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಹಲವು ರೀತಿಯಲ್ಲಿ ಬದಲಾಗಿದ್ದಾರಂತೆ. ಮೊದ ಮೊದಲು ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದರೂ ಟ್ರೋಲ್ ಆಗುತ್ತಿದ್ದರು. ನೆಗೆಟಿವ್ (Negative) ಕಾಮೆಂಟ್ ಮಾಡಲಾಗುತ್ತಿತ್ತು. ಆದರೆ, ಇದೀಗ ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಸಾಕಷ್ಟು ಇಳಿಮುಖ ಆಗಿದೆಯಂತೆ.

    ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ, ಪೋಸ್ಟ್ ಹಾಕಿದ್ದೆ. ನನ್ನನ್ನು ಜನರು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಯಿತು. ನೆಗೆಟಿವ್ ಕಾಮೆಂಟ್ ಒಂದೆರಡು ಬಂದಿರಬಹುದು. ಆದರೆ, ಪಾಸಿಟಿವ್ (Positive) ಆಗಿ ವಿಶ್ ಮಾಡಿದವರೇ ಹೆಚ್ಚು. ನೆಗೆಟಿವ್ ಕಾಮೆಂಟ್ ಗೆ ನಾನು ಮೊದಲಿನಿಂದಲೂ ಕೇರ್ ಮಾಡಿಲ್ಲ. ಈಗಲೂ ಮಾಡಿಲ್ಲ. ನಾನು ಹೇಗೆ ಎನ್ನುವುದು ನನ್ನನ್ನು ಪ್ರೀತಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.

    ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

    ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ಸ್ಮೋಕಿಂಗ್ ರೂಮ್ ನಿಂದಾನೇ ನನಗೂ ರಾಕೇಶ್ ಅಡಿಗಗೂ ಬಾಂಡಿಂಗ್ ಬೆಳೆದಿದ್ದು : ಸೋನು ಶ್ರೀನಿವಾಸ್ ಗೌಡ

    ಸ್ಮೋಕಿಂಗ್ ರೂಮ್ ನಿಂದಾನೇ ನನಗೂ ರಾಕೇಶ್ ಅಡಿಗಗೂ ಬಾಂಡಿಂಗ್ ಬೆಳೆದಿದ್ದು : ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸಿಗರೇಟು ಸೇದಿದರು ಎನ್ನುವುದೇ ದೊಡ್ಡ ಸುದ್ದಿ ಆಯಿತು. ಟ್ರೋಲ್ ಪೇಜುಗಳಲ್ಲಿ ಮತ್ತು ನೋಡುಗರು ಕೂಡ ಈ ಕುರಿತು ಕಾಮೆಂಟ್ ಮಾಡಿದ್ದರು. ಸೋನು ಇದನ್ನೆಲ್ಲ ಮಾಡ್ತಾರಾ ಅಂತ ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದರು. ಆದರೂ, ಆಗಾಗ್ಗೆ ಬಿಗ್ ಬಾಸ್ ಮನೆಯಲ್ಲಿ ಸ್ಮೋಕಿಂಗ್ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಕುರಿತು ಸ್ವತಃ ಸೋನು ಗೌಡ ಅವರ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದಾರೆ. ಇದನ್ನೂ  ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಬಿಗ್ ಬಾಸ್ (Bigg Boss OTT) ಮನೆಗೂ ಹೋಗುವ ಮುನ್ನ ತಮ್ಮ ಬ್ರ್ಯಾಂಡ್ ಬಗ್ಗೆಯೂ ಸೋನು ಹೇಳಿದ್ದರಂತೆ. ಅದನ್ನೇ ತರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರಂತೆ. ಹಾಗಾಗಿ ಬಿಗ್ ಬಾಸ್ ಟೀಮ್ ಕೂಡ ಸೋನು ನೆಚ್ಚಿನ ಬ್ರ್ಯಾಂಡ್ ಅನ್ನೇ ಒದಗಿಸಿತ್ತಂತೆ. ಬಿಗ್ ಬಾಸ್ ಮನೆಯಲ್ಲಿ ಸ್ಮೋಕ್ (Smoking) ಮಾಡಲು ಕಂಪೆನಿ ಕೊಡುತ್ತಿದ್ದದ್ದು ರಾಕೇಶ್ ಅಡಿಗ. ಹಾಗಾಗಿ ಪದೇ ಪದೇ ಆ ಸ್ಥಳಕ್ಕೆ ಇಬ್ಬರೂ ಹೋಗುತ್ತಿದ್ದರಂತೆ. ಮೊದಲ ಬಾರಿಗೆ ಸೋನು ಸಿಗರೇಟು ಕೇಳಿದಾಗ ಸ್ವತಃ ರಾಕೇಶ್ ಅಡಿಗ ಅಚ್ಚರಿ ವ್ಯಕ್ತ ಪಡಿಸಿದ್ದರಂತೆ.

    ನೋಡಿದವರು ಏನು ಅನ್ನುತ್ತಾರೆ ಹೀಗೆ ಸಿಗರೇಟು (Cigarette) ಸೇದಿದರೆ ಎಂದು ರಾಕೇಶ್ ಅಡಿಗ ಕೇಳಿದಾಗ, ನಾನು ಯಾವುದನ್ನೂ ಮುಚ್ಚಿ ಇಡುವುದಿಲ್ಲ. ಹಾಗೆಯೇ ನಾನು ಅಡಿಕ್ಟ್ ಅಲ್ಲ. ಬೇಕು ಅಂತಾನೂ ಅನಿಸಲ್ಲ. ಎದುರಿಗೆ ಇದ್ದಾಗ ಅದನ್ನು ಮಾಡಬೇಕು ಅನಿಸತ್ತೆ. ಹಾಗಾಗಿ ಸಿಗರೇಟು ಸೇದಿದ್ದೇನೆ. ಬಹುಶಃ ನನಗೆ ರಾಕೇಶ್ ಅಡಿಗ (Rakesh Adiga) ಅಷ್ಟೊಂದು ಪರಿಚಯ ಆಗುವುದಕ್ಕೆ ಕಾರಣವೇ ಸ್ಮೋಕಿಂಗ್ ರೂಮ್. ತೀರಾ ಕ್ಲೋಸ್ ಆಗಿದ್ದು ಅದೇ ಏರಿಯಾದಲ್ಲಿ ಅನ್ನುತ್ತಾರೆ ಸೋನು.

    ಹಾಗಂತ ಧೂಮಪಾನ ಮಾಡುವುದರಿಂದ ಅಪಾಯವಿದೆ ಎಂದು ಸೋನುಗೂ ಗೊತ್ತಿದೆ. ಹಾಗಾಗಿಯೇ ಅವರು ನಿತ್ಯವೂ ಅದನ್ನು ಮಾಡುವುದಿಲ್ಲವಂತೆ. ಯಾವಾಗಲಾದರೂ ಸ್ಮೋಕ್ ಮಾಡುವೆ. ನಾನು ಚಟಕ್ಕೆ ಬಿದ್ದವರಂತೆ ಸೇದುವುದಿಲ್ಲವೆಂದು ಅವರು ಸ್ಪಷ್ಟ ಪಡಿಸುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ ಎಂದು ಹೇಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ (Bigg Boss OTT) ಮನೆಯಲ್ಲಿ ರಾಕೇಶ್  ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ (Sonu Srinivas Gowda)ಮುತ್ತಿನ ಕಾರಣದಿಂದಾಗಿಯೇ ಹೆಚ್ಚು ಸುದ್ದಿ ಮಾಡಿದರು. ಸೋನು ಕೇಳಿದಾಗೆಲ್ಲ ರಾಕೇಶ್ ಮುತ್ತಿಟ್ಟಿದ್ದಾನೆ. ಜಯಶ್ರೀ ಉರಿಸುವುದಕ್ಕಾಗಿಯೂ ಸೋನುಗೆ ರಾಕೇಶ್ ಕಿಸ್ ಮಾಡಿದ್ದಾರೆ. ಅಲ್ಲದೇ, ಸೋನುಗೆ ಕೋಪ ತರಿಸಲು ಜಯಶ್ರೀಗೂ (Jayashree) ರಾಕೇಶ್ ಮುತ್ತಿಟ್ಟಿದ್ದಾನೆ.  ಈ ಮುತ್ತಿನಾಟ (Kiss) ಭಾರೀ ಸದ್ದು ಮಾಡಿದೆ.

    ಈಗಾಗಲೇ ರಾಕೇಶ್ (Rakesh Adiga) ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾನೆ. ರಾಕೇಶ್ ನನ್ನು ತುಂಬಾ ಇಷ್ಟ ಪಡುವ ಸೋನು ಮನೆಯಿಂದ ಆಚೆ ಬಂದಿದ್ದಾರೆ. ರಾಕೇಶ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಅವರು ಹಂಚಿಕೊಂಡಿದ್ದಾರೆ. ರಾಕೇಶ್ ತುಂಬಾ ಒಳ್ಳೆಯ ಹುಡುಗ. ಒಂದು ರೀತಿಯಲ್ಲಿ ಅವನ ಪ್ರೀತಿ ಅಮ್ಮನ ರೀತಿಯದ್ದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ.

    ಅವನ ಮೇಲೆ ವಿಪರೀತಿ ಸೆಳೆತ ಇದ್ದದ್ದು ನಿಜ. ಅದು ಲವರ್ ಮಧ್ಯೆ ಇರುವಂತಹ ಆಕರ್ಷಣೆ ಅಲ್ಲ. ಅದೊಂದು ರೀತಿಯಲ್ಲಿ ಮಗ ಮತ್ತು ತಾಯಿ ಮಧ್ಯದಲ್ಲಿರುವ ಮಮಕಾರ. ನನಗೆ ರಾಕೇಶ್ ಹಾಗೆ. ಬೇರೆಯವರು ಏನು ಅಂದುಕೊಂಡರೂ ಡೋಂಟ್ ಕೇರ್. ನಾನು ನೇರವಾಗಿಯೇ ಮಾತನಾಡುವ ಹುಡುಗಿ. ಹಾಗಾಗಿಯೇ ಅವನು ನನಗೆ ಇಷ್ಟವಾದ. ನನಗೆ ಏನು ಅನಿಸುತ್ತಿತ್ತೋ ಅದನ್ನು ರಾಕೇಶ್ ಜೊತೆ ಮಾಡಿರುವೆ. ಆದರೆ, ಯಾವುದೂ ನಮ್ಮ ಮಧ್ಯೆ ಕೆಟ್ಟದ್ದು ಅನ್ನುವುದು ಇಲ್ಲ ಎನ್ನುತ್ತಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು

    Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು

    ಬಿಗ್ ಬಾಸ್ ಓಟಿಟಿ, ಅಭಿಮಾನಿಗಳ ವಲಯದಲ್ಲಿ ಸಖತ್ ಹೈಪ್ ಕ್ರಿಯೆಟ್ ಮಾಡಿತ್ತು. ಓಟಿಟಿಯ 42 ದಿನಗಳ ಆಟಕ್ಕೆ ಕೊನೆಗೂ ಇದೀಗ ತೆರೆಬಿದ್ದಿದೆ. ಓಟಿಟಿ ಟಾಪರ್ ಆಗಿ ರೂಪೇಶ್ ಶೆಟ್ಟಿ(Roopesh Shetty) ಹೊರಹೊಮ್ಮಿದ್ದಾರೆ. ಅದಷ್ಟೇ ಅಲ್ಲ, ಟಿವಿ ಬಿಗ್ ಬಾಸ್‌ಗೆ ಎಂಟ್ರಿ ಪಡೆದಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗೆ ಓಟಿಟಿಯ ಇನ್ನೂ ಮೂರು ಸ್ಪರ್ಧಿಗಳು ಟಿವಿ ಬಿಗ್ ಬಾಸ್‌ಗೆ(Bigg Boss9) ಆಯ್ಕೆ ಆಗಿದ್ದಾರೆ.

    ಓಟಿಟಿಯ ಬಿಗ್ ಬಾಸ್ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಸೀಸನ್ ಟಾಪರ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಆ ಎಲ್ಲಾ ಕೂತೂಹಲಕ್ಕೆ ಈಗ ತೆರೆ ಬಿದ್ದಿದೆ. ತುಳುನಾಡಿನ ಬಹುಮುಖ ಪ್ರತಿಭೆ ರೂಪೇಶ್ ದೊಡ್ಮನೆಯ ಓಟಿಟಿ ಸೀಸನ್ 1ರ ಟಾಪರ್ ಆಗಿದ್ದಾರೆ. ಜತೆಗೆ ಟಿವಿ ಬಿಗ್ ಬಾಸ್‌ಗೆ ಸ್ಪರ್ಧಿಸಲು ರೂಪೇಶ್ ಶೆಟ್ಟಿ ಭರ್ಜರಿ ಅವಕಾಶ ಸಿಕ್ಕಿದೆ. ಅವರ ಜೊತೆ ಆರ್ಯವರ್ಧನ್ ಗುರೂಜಿ,(Aryavardhan) ಸಾನ್ಯ ಅಯ್ಯರ್ (Sanya), ರಾಕೇಶ್ ಅಡಿಗ(Rakesh Adiga) ಬಿಗ್ ಬಾಸ್ ಸೀಸನ್ 9ರಲ್ಲಿ ರಂಜಿಸಲಿದ್ದಾರೆ. ಇದನ್ನೂ ಓದಿ:Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ

    ಈ ಹಿಂದಿನ 8 ಸೀಸನ್‌ಗಳ ಕೆಲವು ಪ್ರವೀಣರ ಜೊತೆ ಹೊಸಬರು ಕೂಡ ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸೀಸನ್‌ ಬಿಗ್‌ ಬಾಸ್ ಈ ಹಿಂದಿನ ಸೀಸನ್‌ಗಿಂತ ವಿಭಿನ್ನವಾಗಿರಲಿದೆ. ಸೆ.25ರಿಂದ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಸೋನು ಸದ್ಯಕ್ಕೆ ರಾಕಿ (Rakesh Adiga)  ಬಗ್ಗೆ ಇರುವ ಪೊಸೆಸಿವ್‍ನೆಸ್ ಅನ್ನು ಕಳೆಯುವುದಕ್ಕೆ ಯತ್ನಿಸುತ್ತಿದ್ದಾಳೆ. ಇಂದು ಬೆಳ್ಳಂ ಬೆಳ್ಳಗ್ಗೆಯೇ ಕುಳಿತು ರಾಕಿ ಬಗ್ಗೆ ಸೋಮಣ್ಣ (Somanna Machimada) ಹತ್ತಿರ ಮಾತನಾಡುತ್ತಿದ್ದಳು. ಬೇಬಿ ಥರ ಚೇಂಜ್ ಇರೋನು ಅಂದ್ರೆ ಅದು ನನ್ನ ಮೂರ್ಖತನ. ಅವನು ನನಗೆ ಆ ಸಲಿಗೆ ಕೊಟ್ಟು, ನನಗೆ ಕೇರ್ ಮಾಡಿದ್ದಾನೆ ಅಂದ್ರೆ ಅದು ನನಗೆ ಒಳ್ಳೆಯದ್ದೆ. ನಂಗೆ ಯಾವ ಥರದ್ದು ಫೀಲಿಂಗ್ಸ್ ಇಲ್ಲ ಸೋಮಣ್ಣ. ನಂಗೆ ಅವನ ಮೇಲೆ ಅಯ್ಯೋ ಎನಿಸಿದೆ. ಅಯ್ಯೋ ಎನಿಸಿದಾಗಲೇ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೇರ್ ಮಾಡುವುದಕ್ಕೆ ಸಾಧ್ಯ. ಸದ್ಯಕ್ಕೆ ನನಗೆ ಏನು ಕೊರತೆಯಾಗಿದೆ ಅಂದ್ರೆ. ಅವನ ಕ್ಯಾರೆಕ್ಟರ್ ಇರುವುದೇ ಹಾಗೆ ಅಲ್ವಾ. ಅವನು ನನ್ನ ಜೊತೆ ಇರುವ ತರ ಬೇರೆ ಹುಡುಗಿಯರ ಬಳಿ ಇದ್ದರೆ ನನಗ್ಯಾಕೆ ಪೊಸೆಸಿವ್‍ನೆಸ್ ಆಗ್ತಿದೆ. ಲವ್ ಅಲ್ಲ ಮಣ್ಣು ಅಲ್ಲ ಮಸಿ ಅಲ್ಲ ಎಂದಿದ್ದಾರೆ.

    ನನ್ನ ಫ್ಯೂಚರೇ ಬೇರೆ, ಅವನ ಕನಸೇ ಬೇರೆ. ಆದರೆ ಅವನು ಎಲ್ಲಾ ಹುಡುಗಿಯರ ಜೊತೆ ಇದ್ದಾಗ ನಂಗ್ಯಾಕೆ ಪೊಸೆಸಿವ್‍ನೆಸ್ ಬರುತ್ತಿದೆ ಗೊತ್ತಾಗುತ್ತಿಲ್ಲ. ಅವನು ಮೊದಲಿನಿಂದಲೂ ಎಲ್ಲಾ ಹುಡುಗಿಯರ ಜೊತೆಗೂ ಒಂದೇ ರೀತಿಯಲ್ಲಿ ಇದ್ದಿದ್ದರೆ ನಂಗೆ ಈ ರೀತಿಯೆಲ್ಲಾ ಅನ್ನಿಸುತ್ತಾ ಇರಲಿಲ್ಲ. ಆದರೆ ಅವನು ಮಾತಲ್ಲಿ ಹೇಳುತ್ತಿದ್ದಾನೆ. ಎರಡು ದಿನದಿಂದ ನಡವಳಿಕೆ ಚೇಂಜ್ ಆಗುತ್ತಿದೆ. ನೀನು ಪೊಸೆಸಿವ್‍ ಆಗಬೇಡ. ನಾನು ಎಲ್ಲರ ಜೊತೆಗೂ ಹೀಗೆ ಇರೋದು ಅಂತಿದ್ದಾನಲ್ಲ. ಹಂಗೆಲ್ಲಾ ಎಲ್ಲಿದ್ದ. ಮೊದಲಿನಿಂದ ನನ್ನ ಜೊತೆಗೆ ಮಾತ್ರ ಅಲ್ವಾ ಇದ್ದದ್ದು ಎಂದಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇದನ್ನೆಲ್ಲಾ ಕೇಳಿಸಿಕೊಂಡ ಗುರೂಜಿ, ಹಂಗೆಲ್ಲಾ ಏನಿಲ್ಲಾ ಕಣವ್ವ ನೀನೇ ಲೇಟ್ ಆಗಿ ಹೋಗಿ ನಂದೆ ಬಸ್ಸು ಅಂತ ಇದ್ದೀಯಾ. ಬಸ್ ಮುಂಚೆನೆ ಓಡಿದೆ, ಪಿಕಪ್ ಮಾಡಿದೆ, ಡ್ರಾಪ್ ಮಾಡಿದೆ ಎಲ್ಲಾ ಕಥೆ ಗೊತ್ತಿದ್ದರು, ನಂದೇ ಬಸ್ ನಂದೆ ಬಸ್ ಅಂದ್ರೆ. ಊರಿಗೆ ಗೊತ್ತು ಆ ಬಸ್ ಬೇರೆ ಹತ್ತಿದೆ ಅಂತ. ಟಿಕೆಟ್ ತಗೊಂಡ್ವಾ ಮನೆಗೋದ್ವಾ, ಇಳಿದ್ವಾ ಅಂತ ಅನ್ನೋದು ಬಿಡೋದು ಬಿಟ್ಟು ನಂದೆ ಬಸ್ ಅಂತಾ ಇದ್ರೆ ಅಂತ ಗುರೂಜಿ ಅಷ್ಟೆಲ್ಲಾ ಹೇಳಿದರೂ ಅದನ್ನು ಕೇಳುವುದಕ್ಕೆ ಸೋನು ರೆಡಿ ಇಲ್ಲ. ನಿನ್ನೆಯಿಂದ ನಾನು ಹ್ಯಾಪಿಯಾಗಿದ್ದೀನಿ. ಬಿಕಾಸ್ ನಿಮ್ಮತ್ರ ಎಲ್ಲಾ ಟೈಪಾಸ್ ಮಾಡುತ್ತಾ ಇದ್ದೀನಿ ಎಂದಿದ್ದಾಳೆ. ಜೊತೆಗೆ ನನಗೆ ಉರಿಸಬೇಕು ಅಂತ ಯಾರಾದರೂ ಮಾಡಿದರೆ ನಾನು ಉರಿದುಕೊಳ್ಳಲ್ಲ. ನಾಣು ಹೊರಗಡೆ ಬಂದು ಬಿಟ್ಟಿದ್ದೀನಿ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಅದಾದ ಮೇಲೆ ರಾಕಿಗೆ ಉರಿಸುವುದಕ್ಕೆ ಸೋನು (Sonu Srinivas Gowda) ಶುರು ಮಾಡಿದಳು. ಸೋನುಗೆ ಉರಿಸಲು ರಾಕಿ ಮತ್ತು ಜಯಶ್ರೀ ಶುರು ಮಾಡಿದರು. ಇದರ ಪರಿಣಾಮ ರೂಪೇಶ್ ಬಳಿ ಒಂದು ಮೊಟ್ಟೆ ತೆಗೆದುಕೊಂಡು, ತನ್ನ ಬಳಿಯಿದ್ದ ಒಂದು ಮೊಟ್ಟೆ ಹಾಕಿದ ಸೋನು (Jayashree Aradhya) ಸೂಪರ್ ಆಗಿ ಎಗ್ ರೈಸ್ (Egg Rice) ಮಾಡಿದಳು. ಜಯಶ್ರೀ ಒಂದೇ ಒಂದು ತುತ್ತು ಕೊಡು ಎಂದರೂ ಕೊಡಲಿಲ್ಲ. ಆದರೆ ರೂಪೇಶ್ (Roopesh Shetty)  ಮೂರು ಸ್ಪೂನ್ ಕೊಟ್ಟಿದ್ದಾನೆ. ಎಗ್ ರೈಸ್  ತಿನ್ನುವಾಗ ಡೈನಿಂಗ್ ಟೇಬಲ್ ಮೇಲೆ ನಾನಾ ಫನ್‍ಗಳು ನಡೆದಿವೆ. ಸೋನು, ರೂಪೇಶ್‍ಗೆ ಎಗ್ ರೈಸ್ ತುತ್ತು ಕೊಟ್ಟಿದ್ದಾಳೆ. ಆಗ ಎದುರಿಗಿದ್ದ ರಾಕಿ, ಕಿಸ್ ಕೊಡೇ ಜಯಶ್ರೀ, ನೀನೆ ಕೊಡ್ತಿಯಾ ಅಥವಾ ನಾನು ಕೊಡ್ಲಾ ಅಂತ ಹೇಳಿ ರಾಕಿನೆ ಕಿಸ್ ಕೊಟ್ಟಿದ್ದಾನೆ. ಈ ಕಡೆ ರೂಪಿಗೆ ಭಯ. ಸೋನು ಎಲ್ಲಿ ನನಗೆ ಕಿಸ್ ಕೊಟ್ಟು ಬಿಡುತ್ತಾಳೋ ಅಂತ. ಮುಖ ಮುಖ ನೋಡಿ ಗಾಬರಿಯಲ್ಲಿಯೇ ಎಗ್ ರೈಸ್ ತಿಂದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಸೋನು-ರಾಕೇಶ್ ನಡುವೆ ಜಯಶ್ರೀ ಆಟ!

    ಸೋನು-ರಾಕೇಶ್ ನಡುವೆ ಜಯಶ್ರೀ ಆಟ!

    ಪ್ರೀತಿ (Love) ಯಲ್ಲಿಯೇ ಜಲಸ್ ಇರಬೇಕು ಎಂಬುದಿಲ್ಲ. ಸ್ನೇಹದಲ್ಲೂ ಜಲಸ್ ಇರುತ್ತೆ ಎಂಬುದು ಸೋನು ಮಾತು. ಆಕ್ಚುಲಿ ಹಾಗೇ ನೋಡುವುದಕ್ಕೆ ಹೋದರೆ ಫ್ರೆಂಡ್‍ಶಿಪ್‍(Jealous) ನಲ್ಲೂ ಜಲಸ್ ಇದ್ದೇ ಇರುತ್ತದೆ. ಸೋನು ಮೊದಲೇ ಹೇಳಿದ್ದಾಳೆ. ನನಗೆ ಲವ್ ಅಂದ್ರೆ ಅಸಹ್ಯ ಅಂತ. ಈಗಲೂ ಜಯಶ್ರೀಗೆ ಮತ್ತೆ ಮತ್ತೆ ಒತ್ತಿ ಒತ್ತಿ ಹೇಳುತ್ತಿದ್ದಾಳೆ. ಆದರೆ ಜಯಶ್ರೀ (Jayashree) ಅದನ್ನು ಅರ್ಥವೇ ಮಾಡಿಕೊಳ್ಳುತ್ತಿಲ್ಲ.

    ಜಯಶ್ರೀ ಫ್ರೆಂಡ್ ಆಗಿ ಸೋನು (Sonu Srinivas Gowda) ಮನಸ್ಸಲ್ಲಿರುವ ಭಾವನೆಗಳು ಬದಲಾಯಿಸುವ ಆಟವಾಡಿದಳಾ..? ಅಥವಾ ಸೋನು ಮನಸ್ಸಲ್ಲಿ ನಿನ್ನ ಬಗ್ಗೆ ಭಾವನೆ ಇದೆ ಅಂತ ತೋರಿಸುವ ಆಟವಾಡಿದಳಾ ಎಂಬ ಗೊಂದಲ ಸದ್ಯ ನೋಡುಗರಿಗೂ ಕಾಡಿದೆ.

    ಆಗಿದ್ದು ಇಷ್ಟೆ, ರಾಕಿ (Rakesh Adiga) ಆ ಕಡೆ, ಸೋನು ಈ ಕಡೆ ಕೂತಿದ್ದಾಗ ಜಯಶ್ರೀ ಮಧ್ಯೆ ಮಲಗಿದ್ದಳು. ರಾಕಿ ನಿನ್ನ ಕೈ ಹಿಡಿದುಕೊಳ್ಳುತ್ತೀನಿ ಅಂತ ಹಿಡಿದು, ಸೋನು ನಿಂಗೆ ಜಲಸಿ ಫೀಲ್ ಆಗುತ್ತಿದೆ ಅಲ್ವಾ ಎಂದು ಕೇಳಿದ್ದಾಳೆ. ಅದಕ್ಕೆ ಸ್ವಲ್ಪ ಸಮಯ ಹಾಗೇನು ಇಲ್ಲ ಎಂದು ಸೋನು ಕುಳಿತಲ್ಲಿಂದ ರಾಕಿಯ ಮುಖವನ್ನು ನೋಡದೆ ಅಲ್ಲಿಂದ ಎದ್ದು ಹೋಗಿದ್ದಾಳೆ. ಜಯಶ್ರೀ, ರಾಕಿಗೆ ಹೇಳಿದ್ದಾಳೆ. ನೋಡು ಅವಳು ನಿನ್ನ ಮೇಲೆ ಜಲಸಿ ಫೀಲ್ ಮಾಡಿಕೊಳ್ಳುತ್ತಿದ್ದಾಳೆ. ಅದಕ್ಕೆ ಎದ್ದು ಹೋಗಿದ್ದು. ಎಲ್ಲೋ ಒಂದು ಮೂಲೆಯಲ್ಲಿ ಪೊಸೆಸಿವ್‍ನೆಸ್ (Possessiveness) ಇದೆ ಎಂದಿದ್ದಾಳೆ. ಆಗ ರಾಕಿ, ಅದೇ.. ಅದು ಇದ್ದರೆ ಹೋಗಿಸಬೇಕು. ಅದು ಓಳ್ಳೆಯದಲ್ಲ. ನನಗೂ ಫೀಲಿಂಗ್ಸ್ ಇದೆ. ಆದರೆ ಅವಳು ಇಟ್ಟುಕೊಂಡಿರುವಂತ ಫೀಲಿಂಗ್ಸ್ ಒಳ್ಳೆಯದ್ದಲ್ಲ ಎಂದಿದ್ದಾನೆ.

    ಆಗ ಜಯಶ್ರೀ ಓಕೆ ನಿಂಗೆ ಗೊತ್ತಾದ ಮೇಲೆ ಯಾಕೆ ಕ್ರಿಯೇಟ್ ಮಾಡುತ್ತೀಯಾ ಎಂದಿದ್ದಾಳೆ. ನಾನೆಲ್ಲಿ ಕ್ರಿಯೇಟ್ ಮಾಡ್ತೀನಿ. ನಾನೆಲ್ಲಿ ಮಾಡುತ್ತೀನಿ. ಬರೀ ತರ್ಲೆ, ತಮಾಷೆ ಮಾತ್ರ ಮಾಡ್ತೀನಿ. ನಾನು ನೇರವಾಗಿಯೇ ಹೇಳ್ತಿನಿ. ಯಾಕೇ ಒಳ್ಳೆ ಲವ್ವರ್ ಥರ ಆಡ್ತೀಯಾ ಅಂತ ಹೇಳ್ತೀನಿ ಅಂದಿದ್ದಾನೆ. ಆಗ ಮತ್ತೆ ಮಾತನಾಡಿದ ಜಯಶ್ರೀ, ನಿನ್ನ ಜೊತೆ ತುಂಬಾ ಕನೆಕ್ಟ್ ಆಗಿಬಿಟ್ಟಿದ್ದಾಳೆ. ನೀನು ಇರ್ತೀಯಾ ಅಂದ್ರೆ ಬಿಗ್ ಬಾಸ್ (Bigg Boss) ಮನೆಯಲ್ಲಿ ಎಷ್ಟು ದಿನ ಬೇಕಾದರೂ ಸರ್ವೈವ್ ಆಗುತ್ತಾಳೆ. ಅವಳಿಗೆ ಯಾರೂ ಜನ್ಯೂನ್ ಕನೆಕ್ಷನ್ ಸಿಗಲಿಲ್ಲ ಅಂದ್ರೆ ಅವಳಿಗೆ ಇರುವುದಕ್ಕೆ ಆಗುವುದಿಲ್ಲ ಎಂದಿದ್ದಾಳೆ. ಇದನ್ನೂ ಓದಿ: ಸೆ.25ರಿಂದ ಬರಲಿದೆ ಬಿಗ್ ಬಾಸ್ 9ನೇ ಸೀಸನ್

    ಅತ್ತ ಸೋನು ಬಳಿ ಬಂದು ಇದೇ ವಿಚಾರವಾಗಿ ಮಾತನಾಡಿದ್ದಾಳೆ. ಸೋನು ಮತ್ತೆ ಸ್ಪಷ್ಟನೆ ನೀಡಿದ್ದಾಳೆ. ನನಗೆ ಲವ್ ಅಂದ್ರೆ ಅಸಹ್ಯ. ಲವ್ ಆಗುವುದಕ್ಕೆ ಸಾಧ್ಯವಿಲ್ಲ ಅಂತ. ಹಾಗಾದ್ರೆ ಅವನು ಯಾರ ಜೊತೆಗಾದರೂ ಮಾತನಾಡಿದರೆ ಯಾಕೆ ನೀನು ಕೋಪ ಮಾಡಿಕೊಳ್ಳುವುದು ಎಂದಾಗ ಫ್ರೆಂಡ್ಸ್ ಅಂತ ಬಂದರು ಅದೇ ರೀತಿ ಆಗೋದು ಎಂದಿದ್ದಾಳೆ. ಅದೇ ನಾನು ಅವನ ಬಳಿಯೂ ಹೇಳಿದ್ದು. ಅವನು ಇಲ್ಲಿ ಎಲ್ಲಾ ಹುಡುಗಿಯರ ಜೊತೆಗೂ ಅದೇ ರೀತಿ ಇದ್ದಿದ್ದರೆ, ನಿಂಗೆ ಆ ರೀತಿ ಫೀಲಿಂಗ್ಸ್ ಬರುತ್ತಾ ಇರಲಿಲ್ಲ ಅನ್ಸುತ್ತೆ. ಇದನ್ನೂ ಓದಿ: ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ಅವನು ನಿನ್ನೊಬ್ಬಳ ಜೊತೆ ಕನೆಕ್ಟ್ ಆಗಿರುವುದಕ್ಕೆ ನಿಂಗೆ ಆ ರೀತಿ ಅನ್ನಿಸ್ತಾ ಇರಬೇಕು. ಆದರೆ ನಿನ್ನ ಮನಸ್ಸನ್ನು ಕಂಟ್ರೋಲ್‍ನಲ್ಲಿ ಇಟ್ಟುಕೋ. ಅವನು ಯಾರ ಜೊತೆಗೆ ಮಾತನಾಡಿದರೂ ನೀನು ಕೋಪ ಮಾಡಿಕೊಳ್ಳಬೇಡ ಎಂದಿದ್ದಾಳೆ. ನಾನು ಈಗ ಅದನ್ನೇ ಮಾಡುತ್ತಾ ಇರುವುದು. ತುಂಬಾ ಕಂಟ್ರೋಲ್ ಮಾಡಿಕೊಂಡಿದ್ದೀನಿ ಇವತ್ತು ಸಂಜೆಯಿಂದ ಎಂದು ಹೇಳಿ ಸೋನು ಹೊರಟಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ನನಗೆ ಲವ್ ಅಂದರೆ ಅಸಹ್ಯ ಆದರೆ ಪಾರ್ಟ್ನರ್ ಬೇಕು: ಸೋನು ಶ್ರೀನಿವಾಸ್ ಗೌಡ

    ನನಗೆ ಲವ್ ಅಂದರೆ ಅಸಹ್ಯ ಆದರೆ ಪಾರ್ಟ್ನರ್ ಬೇಕು: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸಾಕಷ್ಟು ವಿಚಾರವಾಗಿ ಹೈಲೈಟ್ ಆಗಿದ್ದಾರೆ. ಸೋನು ಸೂಪರ್ ಆದರೆ ಆಕೆಯ ಬಾಯಿ ಡೇಂಜರ್ ಎಂಬುದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ರಾಕೇಶ್ ಅಡಿಗ (Rakesh Adiga) ಜೊತೆಗಿನ ಸೋನು ಫ್ರೆಂಡ್‌ಶಿಪ್ ಅಷ್ಟೇ ಹೈಲೈಟ್ ಆಗಿದೆ. ಇನ್ನೂ ರಾಕೇಶ್ ಜೊತೆ ಮಾತಾಡುವಾಗ ಸೋನು, ಬಿಗ್ ಬಾಸ್‌ಗೆ ವಿಶೇಷ ಮನವಿವೊಂದನ್ನ ಮಾಡಿಕೊಂಡಿದ್ದಾರೆ. ಸಖತ್ ಆಗಿರುವ 24 ವರ್ಷದ ಹುಡುಗನನ್ನು ಕಳುಹಿಸಿ ಬಿಗ್ ಬಾಸ್‌ಗೆ ಸೋನು ಬೇಡಿಕೆ ಇಟ್ಟಿದ್ದಾರೆ.

    ಇತ್ತೀಚೆಗೆ ರಾಕೇಶ್, ಸೋನುಗೆ ಗೌರವ ಕೊಟ್ಟು ಮಾತನಾಡುತ್ತಿದ್ದಾರೆ. ಈ ಸಡನ್ ಬದಲಾವಣೆಯನ್ನು ಅಷ್ಟೇ ಕೂಲ್ ಆಗಿ ಸೋನು ಸ್ವೀಕರಿಸಿದ್ದಾರೆ. ಫ್ಲರ್ಟ್ ಯಾಕೆ ಮಾಡಬೇಕು ಹಾಗೆ ಬೇಕೆಂದರೆ ಟೈಂ ಪಾಸ್ ಮಾಡುವ ಹುಡುಗಿಯರೇ ಸಿಕ್ತಾರೆ ಎಂದು ಸೋನು ಹೇಳಿದ್ದಾರೆ. ಅಲ್ಲದೇ ಪ್ರೀತಿ, ಕಾಳಜಿ ವಿಚಾರದಲ್ಲಿ ತಮ್ಮ ನಡೆ ಏನು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಅಪ್ಪ ದೇವರೇ ನೀನು ಇರುವುದೇ ನಿಜವಾದರೆ ನನಗೆ ಈಗ 22 ವರ್ಷ, ಸಖತ್ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ ಎಂದು ಸೋನು ಗೌಡ ಅವರು ಬೇಡಿಕೊಂಡರು. ಎದುರಲ್ಲೇ ಇದ್ದಾನಲ್ಲ ಎಂದು ಜಶ್ವಂತ್ ಕಡೆಗೆ ರಾಕೇಶ್ ಕೈ ತೋರಿಸಿದರು. ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ ಅಂತ ಸೋನು ಹೇಳಿದರು. ನಾನು ಯಂಗೇಜ್ಡ್ ಅಲ್ಲ, ಕಮಿಟೆಡ್ ಎಂದರು ಜಶ್ವಂತ್ ಉತ್ತರಿಸಿದ್ದಾರೆ.

    ನನಗೆ ಲವ್ ಅಂದರೆ ಅಸಹ್ಯ. ಆದರೆ ಪಾರ್ಟ್ನರ್ ಬೇಕು. ಇಬ್ಬರೂ ಪರಸ್ಪರ ಕೇರ್ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ ಎಂದು ಸೋನು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ಬಿಗ್ ಬಾಸ್ ಮನೆಯ ಆಟ ಇದೀಗ ನಾಲ್ಕು ವಾರಗಳು ಪೂರ್ಣಗೊಂಡು ಐದನೇ ವಾರದತ್ತ ಲಗ್ಗೆ ಇಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಹೆಚ್ಚುತ್ತಿದೆ. ಇದೀಗ ಸೋನು (Sonu srinivas gowda) ಸೂಪರ್ ಆದರೆ ಆಕೆಯ ಬಾಯಿ ಡೇಂಜರ್ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ರಾಕೇಶ್‌ಗಾಗಿ ಸೋನು, ಮನೆಯವರ ವಿರುದ್ಧ ಮಾತನಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಿಗ್ ಬಾಸ್ (Bigg boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಸೋನು ಗೌಡ, ಈ ಜೋಡಿ ಹೈಲೈಟ್ ಆಗಿದೆ. ಮನೆಯಲ್ಲಿ ಪ್ರತಿ ಕೆಲಸದಲ್ಲೂ ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಾರೆ. ಸೋನು ನಡೆ ಮತ್ತು ನುಡಿಯಲ್ಲಿ ನೇರವಾಗಿರೋದು ಕೂಡ ಅವರನ್ನ ಸಂಕಷ್ಟಕ್ಕೆ ನೂಕಿದೆ. ಈಗ ರಾಕೇಶ್‌ಗಾಗಿ ಸೋನು, ಮನೆಯಲ್ಲಿ ಧ್ವನಿಯೆತ್ತಿದ್ದಾರೆ. ಇದರಿಂದ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಗುರೂಜಿ ಮನೆಯವರಿಗಾಗಿ ಪಪಾಯ ಕಟ್ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಸೋನು, ರಾಕಿಗೆ ಪಪಾಯ ಮೂರು ಪೀಸ್ ಎಂದಿದ್ದಾರೆ. ಆಗ ಸೋಮಣ್ಣ ಅವರು, ನಿನಗೆ ಮಾತ್ರ ಕಾಣುತ್ತಾರಾ ಎಂದಿದ್ದಾರೆ. ಬಳಿಕ ರಾಕೇಶ್‌ಗಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಮನೆ ಮಾಡಬೇಕಾ ಎಂದು ಗುರೂಜಿ ಕೂಡ ಸೋನು ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

    ಇದಕ್ಕೆ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದು, ಮಾತನಾಡಬೇಕಾದ್ರೆ ಸರಿಯಾಗಿ ಮಾತನಾಡು ಅಂತಾ ನನಗೆ ಹೇಳುತ್ತೀರಾ. ನೀವು ಕೂಡ ಮಾತನಾಡಬೇಕಾದ್ರೆ ನಿಗಾ ಇಟ್ಕೋಂಡು ಮಾತನಾಡಿ ಎಂದು ಸೋನು ಕೂಡ ಗುರೂಜಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಸುಮ್ಮನೆ ಕೂತ್ಕೋ ನೀನು, ಗಂಟಲು ಹರ್ಕೋ ಬೇಡ ಎಂದು ಗುರೂಜಿ ಸೋನುಗೆ ಟಾಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ರಾಕೇಶ್‌ಗೆ ಪಪಾಯ ಕೊಡಲು ಮನೆಯವರ ವಿರುದ್ಧ ಸೋನು ಸಿಡಿದೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]