ಬಿಗ್ ಬಾಸ್ ಮನೆಯ (Bigg Boss House) ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ರಾಕೇಶ್ ಅಡಿಗ, ಓಟಿಟಿಯಲ್ಲಿ ಸೋನು ಗೌಡ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ನಟಿ ಅಮೂಲ್ಯ ಜೊತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇನ್ನೂ ಅಮ್ಮುಗೆ ಸದಾ ಕೀಟಲೆ ಮಾಡ್ತಾರೆ ಜೋಶ್ ಹುಡುಗ ರಾಕೇಶ್.
ದೊಡ್ಮನೆಯಲ್ಲಿ ಸಾನ್ಯ(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ನಂತರ ಇದೀಗ ರಾಕಿ ಮತ್ತು ಅಮ್ಮು ಜೋಡಿ ಸಖತ್ ಹೈಲೆಟ್ ಆಗುತ್ತಿದೆ. ಮನೆಯಲ್ಲಿ ಎಲ್ಲರಿಗೂ ರಾಕಿ ಅಂದ್ರೆ ತುಂಬಾ ಇಷ್ಟ. ರಾಕಿಗೂ ಹುಡುಗಿಯರು ಅಂದ್ರೆ ತುಂಬಾ ಪ್ರೀತಿ, ಸದಾ ಎಲ್ಲಾ ಹುಡುಗಿರ ಬಗ್ಗೆ ಕೇರ್ ಮಾಡ್ತಾ ಇರ್ತಾರೆ. ಇದೀಗ ಅಮೂಲ್ಯ(Amulya Gowda) ಜೊತೆ ಹೆಚ್ಚಾಗಿ ಹೈಲೈಟ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ `ಕಿರಿಕ್ ಪಾರ್ಟಿ’ ಟೀಮ್‌ಗೆ ರಶ್ಮಿಕಾ ಮಂದಣ್ಣ ಸಾಥ್: ಪ್ರಮೋದ್ ಶೆಟ್ಟಿ
ಸದಾ ಅಮ್ಮುಗೆ ಕೀಟಲೆ ಕೊಡುತ್ತಾ, ನಗಿಸುತ್ತಾ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ. ಇನ್ನೂ ರಾಕಿ ಅಡುಗೆ ಮನೆಗೆ ಕೂರಲು ಹೋದಾಗ ಚೇರ್ ಬೀಳುವುದರಲ್ಲಿ ಇರುತ್ತೆ. ಆಗ ದಿವ್ಯಾ ಹುಷಾರ್ ಬೀಳುತ್ತೀರಾ ಎನ್ನುತ್ತಾರೆ. ಅದಕ್ಕೆ ನೇಹಾ, ಅವನು ಯಾವಾಗಲೂ ಬಿದ್ದು ಹೋಗಿ ಆಗಿದೆ ಎಂದು ಅಮ್ಮು ವಿಚಾರವಾಗಿ ರಾಕಿ ಕಾಲೆಳೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆಯಲ್ಲಿ(Bigg Boss House) ಸಾಕಷ್ಟು ವಿಚಾರಗಳು ಹೈಲೈಟ್ ಆಗುತ್ತಿದೆ. ಕಳೆದ ಸೀಸನ್‌ನಲ್ಲಿ ಸೋನು ಮತ್ತು ರಾಕೇಶ್ ಅಡಿಗ ಪ್ರೇಮ ಪ್ರಸಂಗ ಸಖತ್ ಸದ್ದು ಮಾಡಿತ್ತು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ(Rakesh Adiga) ಮತ್ತು ಅಮೂಲ್ಯ (Amulya Gowda) ನಡುವೆ ಆಪ್ತತೆ ಬೆಳೆಯುತ್ತಿದೆ.
ದೊಡ್ಮನೆ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ಸ್ಪರ್ಧಿಗಳು ಕೂಡ ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ. ಈ ನಡುವೆ ಹಲವರ ಮಧ್ಯೆ ಅಟ್ಯಾಚ್‌ಮೆಂಟ್ ಬೆಳೆಯುತ್ತಿದೆ. ಓಟಿಟಿಯಿಂದ ಗಮನ ಸೆಳೆದ ರಾಕೇಶ್ ಅಡಿಗ ಟಿವಿ ಬಿಗ್ ಬಾಸ್‌ನಲ್ಲೂ ಕಮಾಲ್ ಮಾಡುತ್ತಿದ್ದಾರೆ. ಈ ಸೀಸನ್‌ನಲ್ಲಿ ನಟಿ ಅಮೂಲ್ಯ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಆಪ್ತತೆ ಬೆಳೆಯುತ್ತಿದೆ. ಇದನ್ನೂ ಓದಿ:ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ
ಇನ್ನೂ ಮನೆಯಲ್ಲಿ ಕಸ ಗುಡಿಸುವ ವೇಳೆಯಲ್ಲಿ ರಾಕೇಶ್ ಅಡಿಗ, ಅಮೂಲ್ಯಗೆ(Amulya Gowda) ಸಹಾಯ ಮಾಡಿದ್ದಾರೆ. ಅಟ್ಯಾಚ್‌ಮೆಂಟ್ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಬಿಗ್ ಬಾಸ್‌ಗೆ ಬರುವ ಮುಂಚೆನೇ ಡಿಸೈಡ್ ಆಗಿದ್ದೆ, ಯಾರಿಗೂ ಜಾಸ್ತಿ ಕ್ಲೋಸ್ ಆಗಬಾರದು ಎಂಬ ಮಾತನ್ನ ರಾಕೇಶ್ ಮಾತನಾಡಿದರು. ಈ ವೇಳೆ ಅಮೂಲ್ಯ ಕೂಡ ಈ ಮಾತಿನಿಂದಲೇ ಎಲ್ಲಾ ಶುರುವಾಗೋದು, ಆಮೇಲೆ ಫ್ರೆಂಡ್‌ಶಿಪ್‌ನಲ್ಲಿ(Friendship) ಹರ್ಟ್ ಆದರೆ ಅದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ವೇಳೆ ಅಮೂಲ್ಯಗೆ ಕಸ ಗುಡಿಸುವ ಸಂದರ್ಭದಲ್ಲಿ ರಾಕೇಶ್ ಸಹಾಯ ಮಾಡ್ತಿರೋದನ್ನ ನೋಡಿ, ಉಳಿದ ಹುಡುಗಿಯರಿಗೂ ಸಹಾಯ ಮಾಡಪ್ಪ ಎಂದು ದೀಪಿಕಾ ದಾಸ್ ಅವರು ರಾಕೇಶ್ ಅಡಿಗ ಕಾಲೆಳೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್(Bigg Boss) ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯ ಆಟ ಮತ್ತಷ್ಟು ಕ್ಲಿಷ್ಟಕರವಾಗುತ್ತಿದೆ. ಇನ್ನೂ ಮನೆಯ ಕ್ಯಾಪ್ಟನ್ ಆಗಲು ಸಹಾಯ ಮಾಡಿದ್ದ ರೂಪೇಶ್(Roopesh Shetty) ಮತ್ತು ರಾಕೇಶ್‌ಗೆ (Rakesh Adiga) ಸುದೀಪ್ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ದೊಡ್ಮನೆಯಲ್ಲಿ ತಮ್ಮ ನೇರ ಮಾತಿನ ಮೂಲಕ ಗುರುತಿಸಿಕೊಂಡಿರುವ ಆರ್ಯವರ್ಧನ್ ಗುರೂಜಿ ತಾವು ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಬೇಕು ಎಂದು ಮಹಾದಾಸೆಯಿತ್ತು. ಅದರಂತೆ ಮೂರನೇ ವಾರದ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. ಕ್ಯಾಪ್ಟನ್ ಆಗುವ ಮುಂಚೆ ಗುರೂಜಿ ಆಡಿದ ರೀತಿಗೆ ಮನೆಯವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕ್ಯಾಪ್ಟನ್ ಆಗಲು ನೀಡಿದ್ದ ಟಾಸ್ಕ್‌ನಲ್ಲಿ ಗುರೂಜಿಗೆ ರೂಪೇಶ್ ಮತ್ತು ರಾಕೇಶ್ ಸಹಾಯ ಮಾಡಿರುವುದು ಎಷ್ಟು ಸರಿ ಎಂಬುದನ್ನ ವಾರದ ಪಂಚಾಯಿತಿಯಲ್ಲಿ ಕಿಚ್ಚನ ಜೊತೆ ಚರ್ಚೆ ಕೂಡ ಆಗಿದೆ. ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಪ್ಪು ಕಪ್ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್
ವಾರಾಂತ್ಯದ ಏಪಿಸೋಡ್‌ನಲ್ಲಿ ಸುದೀಪ್ ಕೂಡ ಗುರೂಜಿಗೆ ಸಹಾಯ ಮಾಡಿರುವ ಬಗ್ಗೆ ರೂಪೇಶ್ ಮತ್ತು ರಾಕೇಶ್‌ಗೆ ಪ್ರಶ್ನೆ ಮಾಡಿದ್ದಾರೆ. ಅವರು ಯಾವಗಲೂ ಗೊಂದಲದ ಮನಸ್ಥಿತಿ ಇರುವ ಕಾರಣ. ಕೆಲವೊಂದು ಅರ್ಥವಾಗದ ಕಾರಣ ನಾವು ಸಹಾಯ ಮಾಡಿದ್ವಿ ಎಂದು ಇಬ್ಬರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುರೂಜಿ ಅವರನ್ನ ಕೇಳಿದಾಗ ನಾನು ನನ್ನ ಸ್ವಂತ ಆಲೋಚನೆಯಿಂದ ಆಟ ಆಡಿದೆ. ರೂಪೇಶ್, ರಾಕೇಶ್ ಹೇಳಿದ್ದನ್ನ ಕೇಳಿ ಆಟ ಆಡಲಿಲ್ಲ ಎಂದು ಹೇಳಿದ್ದಾರೆ. ಚಂದ್ರನನ್ನು ನೋಡಿ ಆಟ ಪೂರ್ಣಗೊಳಿಸಿದೆ ಎಂದು ಗುರೂಜಿ ಹೇಳಿದ್ದಾರೆ.
ಗುರೂಜಿ ಮಾತು ಕೇಳಿ, ಸುದೀಪ್ ಕೂಡ ರೂಪೇಶ್ ಮತ್ತು ರಾಕೇಶ್‌ಗೆ ಕೇಳಿದ್ದಾರೆ. ಇದು ನಿಮಗೆ ಬೇಕಿತ್ತಾ ಎಂದು ಮರು ಪ್ರಶ್ನೇ ಮಾಡಿದ್ದಾರೆ. ಬಳಿಕ ತಮ್ಮ ತಪ್ಪಿಗೆ ಇಬ್ಬರೂ ಕ್ಷಮೆ ಕೇಳಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ನಡೆ ಎಲ್ಲರ ಬೇಸರಕ್ಕೆ ಕಾರಣವಾಗಿದೆ.
Live Tv
[brid partner=56869869 player=32851 video=960834 autoplay=true]
ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್‌ನಲ್ಲಿ ಆರ್ಯವರ್ಧನ್ ಗುರೂಜಿ(Aryavardhan Guruji) ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆಗಿರುವ ಗುರೂಜಿ ರಾಕೇಶ್ ಅಡಿಗ (Rakesh Adiga) ಬಗ್ಗೆ ಹೇಳಿರುವ ಮಾತು ಸಖತ್ ವೈರಲ್ ಆಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ, ಬೆಳಿಗ್ಗೆ ಎದ್ದಾಗ ಯಾರು ಆಗೋಕೆ ಇಷ್ಟಪಡಲ್ಲ ಎಂದು ಕೇಳಿದ್ದಾರೆ. ಈ ವೇಳೆ ಗುರೂಜಿ ಹೇಳಿರುವ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಶೋ(Bigg Boss) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಮೂರನೇ ವಾರಕ್ಕೆ ದೊಡ್ಮನೆ ಕಾಲಿಟ್ಟಿದೆ. ವಾರದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ ಆಯ್ಕೆ ಆಗಿದ್ದಾರೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನ ಮುಂದೆ ಇಂಟರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. ಒಂದು ವಾರ ರಾಕೇಶ್ ಜೊತೆಯಲ್ಲಿದ್ದ ಸಮಯದಲ್ಲಿ ಏನಾಯ್ತು ಎಂಬುದುದನ್ನ ಹೇಳಿಕೊಂಡಿದ್ದಾರೆ.
ವಾರಾಂತ್ಯದ ಪಂಚಾಯಿತಿಯಲ್ಲಿ ಯಾವ ವ್ಯಕ್ತಿ ಆಗೋಕೆ ಇಷ್ಟ ಇಲ್ಲ ಎಂದು ಸುದೀಪ್(Kicch Sudeep) ಸ್ಪರ್ಧಿಗಳಿಗೆ ಕೇಳಿದ್ದಾರೆ. ಈ ಸಮಯದಲ್ಲಿ ಗುರೂಜಿ ನನಗೆ ರಾಕೇಶ್ ಅಡಿಗ ಆಗೋಕೆ ಇಷ್ಟ ಇಲ್ಲ ಎಂದಿದ್ದಾರೆ. ಯಾಕೆ ಎಂದು ಕೇಳಿದಾಗ ರೂಮ್‌ನಲ್ಲಿ ನಡೆದಿರೋದನ್ನ ಹೇಳೋದ್ದಕ್ಕೆ ಆಗಲ್ಲ ಎಂದಿದ್ದಾರೆ. ಅರ್ಥ ಮಾಡಿಕೊಳ್ಳಿ ಎಂದು ಕುತೂಹಲ ಕೆರಳಿಸುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ
ರಾಕೇಶ್‌ನ ಕಂಡರೆ ಭಯವಾಗುತ್ತದೆ. ರೂಮ್‌ನಲ್ಲಿ ಒಂದು ವಾರಗಳ ಕಾಲ ಸಾಕಷ್ಟು ವಿಚಾರಗಳನ್ನ ನಾವು ಹಂಚಿಕೊಂಡಿದ್ದೇವೆ ಎಂದು ಮಾತನಾಡಿದ್ದಾರೆ. ಜನಕ್ಕೆ ನೆಗಟಿವ್ ಮೇಸೆಜ್ ಹೋಗುತ್ತದೆ ಅದು ಎನು ಅಂತಾ ಹೇಳಿ ಎಂದು ರಾಕೇಶ್ ಕೂಡ ಗುರೂಜಿಗೆ ಮನವಿ ಮಾಡಿದ್ದಾರೆ. ಕಡೆಗೂ ಗುರೂಜಿ ಉತ್ತರ ನೀಡದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ದೊಡ್ಮನೆಯಲ್ಲಿ ನಗು, ಅಳು, ಜಗಳ ಜೊತೆಗೆ ಪ್ರಾಂಕ್ ಕೂಡ ಅಷ್ಟೇ ಹೈಲೆಟ್ ಆಗುತ್ತಿದೆ. ಈ ಹಿಂದೆ ಟೂತ್ ಪೇಸ್ಟ್ ಮುಕ್ಕಳಿಸಿ ಫಿಟ್ಸ್ ಬಂದಿರುವ ರೀತಿ ಅಭಿನಯಿಸಿ ರಾಕೇಶ್ ಅಡಿಗ(Rakesh Adiga) ಪ್ರಾಂಕ್ ಮಾಡಿದ್ದರು. ಇದರಿಂದ ಎಲ್ಲರೂ ಆಘಾತಗೊಂಡಿದ್ದರು. ಈ ತರಹದ ಪ್ರಾಂಕ್‌ಗಳು ಬೇಡ ಎಂದು ಕಿಚ್ಚ ಸುದೀಪ್ ಕೂಡ ಕಿವಿ ಹಿಂಡಿದ್ದರು. ಇಷ್ಟಾದರೂ, ಪ್ರಾಂಕ್ ಮಾಡೋದನ್ನ ನಿಲ್ಲಿಸಿಲ್ಲ. ರಾಕೇಶ್ ಅಡಿಗ ಮತ್ತು ಅನುಪಮಾ ಮಾಡಿದ ಪ್ರಾಂಕ್‌ಗೆ ಬಿಗ್ ಬಾಸ್ (Bigg Boss) ಖಡಕ್ ಪಾಠ ಕಲಿಸಿದ್ದಾರೆ.
ಎರಡನೇ ವಾರದ ಟಾಸ್ಕ್ ನಲ್ಲಿ ದೀಪಿಕಾ ದಾಸ್(Deepika Das) ಟೀಮ್ ವಿರುದ್ಧ ಅನುಪಮಾ ಗೌಡ(Anupama Gowda) ತಂಡ ಜಯಗಳಿಸಿದರು. ಇದೇ ಜೋಶ್ ನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋದ ರಾಕೇಶ್ ಅಡಿಗ ಮತ್ತು ಅನುಪಮಾ ಗೌಡ ತಮ್ಮ ಪ್ರಾಂಕ್‌ನಲ್ಲಿ ಬಿಗ್ ಬಾಸ್ ಹೆಸರನ್ನೂ ಬಳಸಿಕೊಂಡರು. ರೂಲ್ ಬುಕ್, ನಿಯಮ ಅಂತಾ ಹೇಳಿ ಗುರೂಜಿರನ್ನ ಏಮಾರಿಸಿದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ 8 ಮಂದಿ ಪೈಕಿ 4 ಮಂದಿಯನ್ನ ಆಯ್ಕೆ ಮಾಡಬೇಕು ಅಂತ ಗುರೂಜಿಗೆ ಫೂಲ್ ಮಾಡಿದರು. ಈಗ ಇದೇ ಪ್ರಾಂಕ್ ಬ್ಯಾಕ್ ಫೈಯರ್ ಆಗಿದೆ. ಇದನ್ನೂ ಓದಿ: ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್
ಕ್ಯಾಪ್ಟನ್ ವಿಚಾರವಾಗಿ ಗುರೂಜಿಗೆ ಪ್ರಾಂಕ್ ಮಾಡಲು ರಾಕೇಶ್ ಮತ್ತು ಅನುಪಮಾ ಮುಂದಾದರು. ಪ್ರಾಂಕ್ ಐಡಿಯಾ ಕೊಟ್ಟಿದ್ದು ರಾಕೇಶ್ ಅಡಿಗ ಅವರದಾಗಿದ್ದು, ರೂಲ್ ಬುಕ್ ಕೂಡ ಈ ವೇಳೆ ಬಳಕೆ ಮಾಡಿಕೊಂಡಿದ್ದಾರೆ. ಟಾಸ್ಕ್‌ಗೆ 8 ಜನರಲ್ಲಿ 4 ಜನ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಮಾಡಬೇಕು ಅಂತ ಓದಿದ್ದಾರೆ. ಯಾರೂ ಗುರೂಜಿ ಅವರ ಹೆಸರನ್ನ ಹೇಳೋದು ಬೇಡ. ನಾವು ನಾವೇ ಕಿತ್ತಾಡೋಣ ಎಂದು ಅನುಪಮಾ ಗೌಡಗೆ ರಾಕೇಶ್ ಅಡಿಗ ಈ ಮೊದಲೇ ಮಾತನಾಡಿಕೊಂಡಿದ್ದಾರೆ.
8 ಜನರ ಪೈಕಿ ವೋಟಿಂಗ್ ತೆಗೆದುಕೊಂಡಾಗ, ಯಾರೂ ಗುರೂಜಿ ಹೆಸರು ಹೇಳಲಿಲ್ಲ. ಇದರಿಂದ ಬೇಸರಗೊಂಡ ಗುರೂಜಿ, ನನಗೆ ಒಂದೂ ವೋಟ್ ಬಿದ್ದಿಲ್ಲ. ನಾನು ಯಾರಿಗೂ ವೋಟ್ ಕೊಡಲ್ಲ. ನಿಮ್ಮ ವೋಟ್‌ಗಳನ್ನ ನೀವೇ ಹಂಚಿಕೊಳ್ಳಿ ಎಂದು ರಾಂಗ್ ಆಗಿದ್ದಾರೆ. ಈ ವೇಳೆ ಎಲ್ಲರೂ ನಗಲು ಆರಂಭಿಸಿದರು. ಬಳಿಕ ಇದು ಪ್ರಾಂಕ್ ಎಂದು ಆರ್ಯವರ್ಧನ್ ಗುರೂಜಿ ಅರಿತರು.
ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ವಿಚಾರವಾಗಿ ನಡೆದ ಪ್ರಾಂಕ್ ಇದೀಗ ಬ್ಯಾಕ್ ಫೈಯರ್ ಆದಂತಿದೆ. ಪ್ರಾಂಕ್ ಮಾಡಿದವರಿಗೆ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದ್ದಾರೆ. ಪ್ರಾಂಕ್‌ನಲ್ಲಿ ಆಯ್ಕೆ ಆದ ನಾಲ್ಕು ಮಂದಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ದರ್ಶ್ ,ಮಯೂರಿ, ಅನುಪಮಾ, ರಾಕೇಶ್ ಅಡಿಗ ಇಷ್ಟು ಜನ ಕ್ಯಾಪ್ಟನ್ ಟಾಸ್ಕ್ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿ, ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಹೆಸರು ಬಳಕೆ ಮಾಡಿ ಪ್ರಾಂಕ್ ಮಾಡಿದ್ದಕ್ಕೆ ಬಿಗ್ ಬಾಸ್ ಈ ಮೂಲಕ ಮನೆ ಮಂದಿಗೆ ಪಾಠ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆ(Bigg Boss House) ಇದೀಗ ರಣರಂಗವಾಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆ ಆಟ ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇನ್ನೂ ಗೊಬ್ಬರಗಾಲ(Vinod Gobbaragala) ಮಧ್ಯರಾತ್ರಿ 12 ಗಂಟೆಗೆ ವಿಚಿತ್ರ ಧ್ವನಿಯಲ್ಲಿ ಮಾತನಾಡಿದ್ದಾರೆ. ಗೊಬ್ಬರಗಾಲ ನಡೆ ನುಡಿ ನೋಡಿ ನವಾಜ್ (Nawaz) ಫುಲ್ ಕಂಗಲಾಗಿದ್ದಾರೆ. ಅಷ್ಟಕ್ಕೂ ಗೊಬ್ಬರಗಾಲಗೆ ಎನಾಯ್ತು ಎಂದು ಮನೆ ಮಂದಿ ಕೂಡ ಅಚ್ಚರಿಪಟ್ಟಿದ್ದಾರೆ.
ದೊಡ್ಮನೆಯಲ್ಲಿ ರಾಕೇಶ್(Rakesh Adiga) ಫ್ರ‍್ಯಾಂಕ್ ಮಾಡಿದ್ದ ಬೆನ್ನಲ್ಲೇ ಮತ್ತೆ ಹೊಸ ಪ್ಲ್ಯಾನ್ ಯೋಚಿಸಿದ್ದಾರೆ. ವಿಚಿತ್ರ ಧ್ವನಿಯಲ್ಲಿ ಮಾತನಾಡು ಎಂದು ರಾಕೇಶ್ ಅಡಿಗ ಅವರು ಗೊಬ್ಬರಗಾಲಗೆ ಸಲಹೆ ನೀಡಿದ್ದಾರೆ. ರೂಪೇಶ್ ರಾಜಣ್ಣ ಮುಂದೆ ರಾಕೇಶ್ ಅವರು, ಬಿಗ್ ಬಾಸ್ ವಿನೋದ್ ಅವರು ವಿಚಿತ್ರವಾಗಿ ಆಡ್ತಿದ್ದಾನೆ. ದಯವಿಟ್ಟು ಏನಾದರೂ ಮಾಡಿ, ಸೀರಿಯಸ್ ಸಮಸ್ಯೆ ತರ ಅನಿಸ್ತಿದೆ. ಏನಾಯ್ತು ಗೊಬ್ಬರ ಎಂದಿದ್ದಾರೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ
ರೂಪೇಶ್ ರಾಜಣ್ಣ(Rooopesh Rajanna) ಅವರ ಹಿಂದೆಯೇ ವಿನೋದ್ ಓಡಾಡಿದ್ದಾರೆ. ರೂಪೇಶ್ ಅವರು ಹೆದರಿ ಓಡಿದ್ದಾರೆ. ಆಮೇಲೆ ಮತ್ತೆ ವಿನೋದ್ ಬಳಿ ಬಂದ ರೂಪೇಶ್, ಏನಾಯ್ತು? ಸ್ಕಿಟ್ ಮಾಡ್ತಿದ್ದೀರಾ ಅಂತ ಭಯದಿಂದ ಪ್ರಶ್ನೆ ಮಾಡಿದ್ದಾರೆ. ಆಗ ಪ್ರಶಾಂತ್ (Prashanth Sambargi) ಕೂಡ ಎದ್ದು ಬಂದು, ಮಾತನಾಡದೆ ಬಾತ್‌ರೂಮ್‌ಗೆ ಹೋಗಿದ್ದಾರೆ. ಆಗ ರೂಪೇಶ್‌ಗೆ ಇದು ಫ್ರಾಂಕ್ ಅಂತ ಗೊತ್ತಾಗಿದೆ. ನಿಮಗೆ ಏನು ಬಂದೈತೋ ಕೇಡುಕಾಲ ಎಂದು ರೂಪೇಶ್ ಅವರು ಬಕ್ರಾ ಆದೆ ಎಂದು ಹೇಳಿಕೊಂಡು ನಕ್ಕಿದ್ದಾರೆ. ಆಗ ಗೊಬ್ಬರಗಾಲ, ಇದು ಸೆಂಟ್ ಫ್ರಾಂಕ್, ಬೇರೆಯವರನ್ನು ಹೆದರಿಸಲು ಸಹಾಯ ಮಾಡಿ ಎಂದಿದ್ದಾರೆ.
ಮರುದಿನ ರೂಪೇಶ್ ಅವರು ಎಲ್ಲರ ಮುಂದೆ ಹೇಳಿಕೊಂಡು ನಕ್ಕಿದ್ದಾರೆ. ವಿನೋದ್ ಮೇಲೆ ದೆವ್ವ ಬಂದಿದೆ ಅಂತ ಹೇಳಿಲ್ಲ, ಆದರೆ ವಿಚಿತ್ರವಾಗಿ ಆಡ್ತಿದ್ದಾನೆ ಅಂತ ಹೇಳಿದ್ವಿ ಎಂದು ರಾಕೇಶ್ ಅವರು ವಿವರಿಸಿದ್ದಾರೆ. ನಾನು ಹೆದರಿಸಿದಾಗ ನವಾಜ್ ಅವರು ಓಡಿಹೋದರು, ಆಮೇಲೆ ರೂಪೇಶ್ ಹೆದರಿದರು ಎಂದು ಹೇಳಿಕೊಂಡು ವಿನೋದ್(Vinod) ನಕ್ಕಿದ್ದಾರೆ.
Live Tv
[brid partner=56869869 player=32851 video=960834 autoplay=true]
ಟಿವಿ ಲೋಕದಲ್ಲಿ ಇದೀಗ ಬಿಗ್ ಬಾಸ್ (Bigg Boss) ಹವಾ ಜೋರಾಗಿದೆ. ಹೊಸ ಸೀಸನ್‌ನಲ್ಲಿ ಪ್ರವೀಣ ಜೊತೆ ನವೀನರ ಜುಗಲ್‌ಬಂದಿ ನೋಡುಗರನ್ನ ಮೋಡಿ ಮಾಡುತ್ತಿದೆ. ಇದೀಗ ಮನೆಗೆ ಎರಡನೇ ಬಾರಿ ಪ್ರಶಾಂತ್ ಸಂಬರ್ಗಿ ಎಂಟ್ರಿಯಾಗಿದೆ. ಖಡಕ್ ಮಾತಿನ ಮೂಲಕ ಹೈಲೆಟ್ ಆಗಿರುವ ಸಂಬರ್ಗಿ ಇದೀಗ ರಾಕೇಶ್ ಅಡಿಗ (Rakesh Adiga) ಮೇಲೆ ಸಿಡಿದೆದ್ದಿದ್ದಾರೆ. ದೊಡ್ಮನೆಯಲ್ಲಿ ರಾಕೇಶ್ ಮಾಡಿರುವ ಎಡವಟ್ಟಿನಿಂದ ಸಂಬರ್ಗಿ ಫುಲ್ ಗರಂ ಆಗಿದ್ದಾರೆ.
ಬಿಗ್ ಬಾಸ್ ಇದೀಗ ಒಂದು ವಾರ ಪೂರ್ತಿಗೊಂಡು ಎರಡನೇ ವಾರಕ್ಕೆ ಕಾಲಿಟ್ಟಿದೆ. ರಾಕೇಶ್ ಪ್ರ್ಯಾಂಕ್ ಮಾಡಲು ಹೋಗಿ ಪ್ರಶಾಂತ್ ಸಂಬರ್ಗಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಲ್ಲರನ್ನೂ ಪ್ರ‍್ಯಾಂಕ್ ಮಾಡುವ ನಿರ್ಧಾರಕ್ಕೆ ಅನುಪಮಾ ಹಾಗೂ ರಾಕೇಶ್ ಬಂದರು. ಈ ಐಡಿಯಾ ಬಂದಿದ್ದೇ ಬಾಯಲ್ಲಿ ಪೇಸ್ಟ್ ಹಾಕಿಕೊಂಡ ರಾಕೇಶ್ ಅವರು ಗಾರ್ಡನ್ ಏರಿಯಾಗೆ ಬಂದು ಬಿದ್ದರು. ಪಿಡ್ಸ್ ಬಂದ ರೀತಿಯಲ್ಲಿ ಒದ್ದಾಡಿದರು. ಅಮೂಲ್ಯ ಗೌಡ ಅವರು ನಗುತ್ತಲೇ ಜೋರಾಗಿ ಕೂಗಿ ಮನೆ ಮಂದಿಯನ್ನು ಕರೆದರು.
ರಾಕೇಶ್ ಬಿದ್ದಿದ್ದಾರೆ. ಕಬ್ಬಿಣ ಹಿಡಿದುಕೊಂಡು ಬನ್ನಿ ಪ್ಲೀಸ್ ಎಂದು ಕರೆದರು. ಮನೆ ಮಂದಿಯೆಲ್ಲ ಆತಂಕದಿಂದ ಓಡಿ ಬಂದರು. ಪ್ರಶಾಂತ್ ಸಂಬರ್ಗಿ ಅವರಂತೂ ಸಾಕಷ್ಟು ಆತಂಕಗೊಂಡರು. ಮನೆಯಲ್ಲಿ ಆತಂಕದ ವಾತಾವರಣ ಹೆಚ್ಚುತ್ತಿದ್ದಂತೆ ಇದು ಪ್ರ‍್ಯಾಂಕ್ (Prank) ಎಂದು ನಕ್ಕಿದ್ದಾರೆ ರಾಕೇಶ್. ಇದನ್ನು ನೋಡಿ ಪ್ರಶಾಂತ್ ಸಂಬರ್ಗಿಗೆ ಸಖತ್ ಸಿಟ್ಟು ಬಂದಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್
ರಾಕೇಶ್ (Rakesh) ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ (Prashanth Sambargi) ರಾಕೇಶ್ ಇದು ಸರಿ ಅಲ್ಲ. ಈ ರೀತಿ ಮಾಡೋದ್ರಿಂದ ನೀವು ಆ ರೋಗಕ್ಕೆ, ಆ ರೋಗ ಬಂದವರಿಗೆ ಅವಮಾನ ಮಾಡಿದ್ದೀರಿ. ನನ್ನ ಮಗನಿಗೂ ಇದೇ ರೀತಿಯ ಕಾಯಿಲೆ ಇತ್ತು. ಆತ ನಿಂತಲ್ಲೇ ನಿಂತು ಬಿಡುತ್ತಿದ್ದ. ಚಿಕಿತ್ಸೆ ಕೊಡಿಸಿ ಕೊಡಿಸಿ ಆತನಿಗೆ ಕಾಯಿಲೆ ಈಗ ಗುಣಮುಖ ಆಗಿದೆ. ನನ್ನ ಮಗನೇ ನನಗೆ ನೆನಪಿಗೆ ಬಂದ ಎಂದು ಸಂಬರ್ಗಿ ಗಳಗಳನೇ ಅತ್ತಿದ್ದಾರೆ. ಈ ಪ್ರ‍್ಯಾಂಕ್‌ನಲ್ಲಿ ಭಾಗಿ ಆದ ಅನೇಕರು ಪ್ರಶಾಂತ್ ಬಳಿ ಕ್ಷಮೆ ಕೇಳಿದರು. ಪ್ರಶಾಂತ್ ಸಂಬರ್ಗಿ ಅವರು ರಾಕೇಶ ಕಾಲರ್ ಹಿಡಿದಾಗ ಒಂದಷ್ಟು ಮಂದಿಗೆ ಆತಂಕ ಕೂಡ ಆಯಿತು. ಬಳಿಕ ರಾಕೇಶ್ ಕೂಡ ಪ್ರಶಾಂತ್ ಅವರ ಬಳಿ ಕ್ಷಮೆ ಕೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ರಿಯಲ್ ಸ್ಟಾರ್ ಉಪೇಂದ್ರ (Upendra) ‘ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದ್ನೆಕಾಯಿ’ ಎಂದಿದ್ದಾರೆ. ಆದರೆ, ರಾಕೇಶ್ ವಿಷಯದಲ್ಲಿ ಪ್ರೀತಿ ಪ್ರೇಮವೇ ನಿತ್ಯದಾಟ ಎನ್ನುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಯಾರ ಎದುರಿಗೆ ಸಿಕ್ಕರೂ, ಬರೀ ಪ್ರೇಮ ಸಲ್ಲಾಪವೇ ನಡೆಯುತ್ತಿದೆ. ಬಿಗ್ ಬಾಸ್ ಓಟಿಟಿಯಲ್ಲಿ (Rakesh) ರಾಕೇಶ್, ಜಯಶ್ರೀ ಮತ್ತು ಸೋನು ನಡುವೆ ತ್ರಿಕೋನ ಪ್ರೇಮ ನಡೆದಿತ್ತು. ಅವಕಾಶ ಸಿಕ್ಕಾಗೆಲ್ಲ ಇಬ್ಬರಿಗೂ ಒಂದೊಂದು ಕಿಸ್ ಕೊಟ್ಟು ಮೆಂಟೇನ್ ಮಾಡ್ತಿದ್ರು. ಬಿಗ್ ಬಾಸ್ ಸೀಸನ್ 9ರಲ್ಲಿ ಅವರಿಬ್ಬರೂ ಇಲ್ಲ. ಹಾಗಾಗಿ ಹೊಸ ಪ್ರೇಮಿಯ ಹುಡುಕಾಟದಲ್ಲಿದ್ದಾರೆ ರಾಕೇಶ್.
ಎರಡ್ಮೂರು ದಿನದಿಂದ ಹೊಸ ಹಕ್ಕಿಗಾಗಿ ಕಾಳು ಹಾಕುತ್ತಿದ್ದ ರಾಕೇಶ್, ಇದೀಗ ದಿಢೀರ್ ಅಂತ ಸಾನ್ಯ ಅಯ್ಯರ್ (Sanya Iyer) ನನ್ನ ಲವರ್ ಎಂದು ಘೋಷಿಸಿ ಬಿಟ್ಟಿದ್ದಾರೆ. ಇದೇ ವಿಚಾರವಾಗಿಯೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಕೂಡ ನಡೀತಿದೆ. ಸಾನ್ಯ ಅಯ್ಯರ್ ಕುಡಿದ ಲೋಟದಲ್ಲೇ ರಾಕೇಶ್ ಟಿ ಕುಡಿದಿದ್ದಾರೆ. ಅದನ್ನು ಕಂಡ ಗುರೂಜಿ, ‘ಇದೇನಿದು ಆ ಹುಡುಗಿ ಕುಡಿದಿಟ್ಟ ಕಪ್ ನಲ್ಲಿ ಟಿ ಕುಡೀತಿದ್ದೀಯಾ’ ಎಂದು ಕೇಳುತ್ತಾರೆ. ಒಂದು ಕ್ಷಣವೂ ಯೋಚಿಸದ ರಾಕೇಶ್, ‘ಸಾನ್ಯ ನನ್ನ ಲವರ್’ ಎಂದು ಹೇಳುವ ಮೂಲಕ ಮನೆಯ ಸದಸ್ಯರ ಎದೆಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್
ಪ್ರೀತಿ ಪ್ರೇಮದ ವಿಚಾರವಾಗಿ ರಾಕೇಶ್, ಸಖತ್ ಗೇಮ್ ಆಡ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸೋನು ಗೌಡ (Sonu Gowda), ಜಯಶ್ರೀ (Jayashree) ಹಿಂದೆ ಬಿದ್ದಿದ್ದವರು, ಆನಂತರ ಅಮೂಲ್ಯ ಜೊತೆ ಸುತ್ತಿದರು. ಸಡನ್ನಾಗಿ ಈಗ ಸಾನ್ಯ ಅಯ್ಯರ್ ನನ್ನ ಲವರ್ ಎನ್ನುತ್ತಾರೆ. ಈ ನಡೆ ದೀಪಿಕಾ ದಾಸ್ಗೆ (Deepika Das) ಅಚ್ಚರಿ ಮೂಡಿಸಿದೆ. ಹಾಗಾಗಿ ರಾಕೇಶ್ ಅವರ ಪ್ರೇಮ ಪುರಾಣ ಕೇಳಲು ಮುಂದಾಗ್ತಾರೆ. ತಾನು ಅದೆಷ್ಟೋ ಜನರನ್ನು ಲವ್ ಮಾಡಿದ್ದು ನಿಜ. ಆದರೆ, ಬ್ರೇಕ್ ಅಪ್ ಆಗಿಲ್ಲ ಎಂದು ಹೊಸ ಬಾಂಬ್ ಸಿಡಿಸ್ತಾರೆ ರಾಕೇಶ್. ಲವ್ ಅಂದರೆ ಬ್ರೇಕ್ ಆಗದೇ ಇರುವ ಅನುಭವ ಎಂದು ಹೊಸ ಪಾಠ ಕೂಡ ಮಾಡ್ತಾರೆ ರಾಕೇಶ್.
ಲವ್ ವಿಚಾರವಾಗಿ ರಾಕೇಶ್ ಮತ್ತು ಗುರೂಜಿ ನಡುವೆಯೂ ಮತ್ತೆ ಚರ್ಚೆ ನಡೆದಿದೆ. ಸಾನ್ಯ ಟಿ ಕುಡಿದ ಕಪ್ ನಲ್ಲಿ ರಾಕೇಶ್ ಕುಡಿದ ಅನ್ನೋ ವಿಚಾರವನ್ನೇ ಮುಂದಿಟ್ಟುಕೊಂಡು ಸಾರಸ್ಯಕರವಾದ ಮಾತುಗಳನ್ನೂ ಆಡಿದ್ದಾರೆ ರ‍್ಯರ‍್ಧನ್ ಮತ್ತು ರಾಕೇಶ್. ‘ನನ್ನ ಬಸ್ ಈಗ ಸಾನ್ಯ ಕಡೆ ತಿರುಗಿದೆ ಎಂದು ಗುರೂಜಿ ಬಳಿ ರಾಕೇಶ್ ಹೇಳ್ತಾರೆ. ಅದಕ್ಕೆ ಗುರೂಜಿ ‘ನೋಡಿಕೊಂಡು ಹಾರ್ನ್ ಹೊಡಿ’ ಎಂದು ಕಿಚ್ಚಾಯಿಸ್ತಾರೆ. ಬಸ್ ನಿಲ್ಲಿಸಿ ಹಾರ್ನ್ ಹೊಡೆಯೋದೇ ಹತ್ತೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ರಾಕೇಶ್ ತಮಾಷೆ ಮಾಡ್ತಾರೆ. ಒಂದ್ ಕಡೆ ಅಮೂಲ್ಯ, ಮತ್ತೊಂದು ಕಡೆ ಸಾನ್ಯ ಅಯ್ಯರ್ , ಯಾರು ಒಲವು ರಾಕೇಶ್ ಕಡೆಗೆ ಎಂದು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ನಾನು ಸರಿಯಿಲ್ಲ, ಸರಿಯಿಲ್ಲ ಅಂತಾನೇ ನನ್ನ ರಾತ್ರಿ ಆಚೆ ಬಿಡುವುದಿಲ್ಲ ಎಂದು ಹೇಳುವ ಮೂಲಕ ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆತಂಕ ಮೂಡಿಸಿದ್ದಾರೆ ಸೈಕ್ ನವಾಜ್. ನನ್ನ ತಂದೆ ತಾಯಿ ಒಂದು ರಾತ್ರಿಯೂ ನನ್ನನ್ನು ಬಿಟ್ಟು ಮಲಗುವುದಿಲ್ಲ. ರಾತ್ರಿ ಎಲ್ಲಿಯೂ ನನ್ನನ್ನು ಕಳುಹಿಸುವುದಿಲ್ಲ. ಅದಕ್ಕೆ ಕಾರಣ, ನನ್ನ ಮೇಲೆ ಅವರ ಪ್ರೀತಿ ಇದೆ ಅಂತಲ್ಲ, ರಾತ್ರಿ ವೇಳೆ ನಾನೇನಾದರೂ ಮಾಡಿಬಿಡ್ತೀನಿ ಅನ್ನೋ ಭಯ ಅವರಿಗೆ ಎನ್ನುತ್ತಾರೆ ನವಾಜ್. ನಾನು ಯಾರನ್ನಾದರೂ ಹೊಡೆದು, ಕಿರಿಕ್ ಮಾಡ್ತೀನಿ ಅನ್ನೋ ಕಾರಣಕ್ಕಾಗಿಯೇ ನನ್ನನ್ನು ಆಚೆಯೇ ಬಿಡುವುದಿಲ್ಲ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ ಟಾಸ್ಕ್ ಪ್ರಕಾರ ಅರುಣ್ ಸಾಗರ್ ಮತ್ತು ನವಾಜ್ ಒಟ್ಟೊಟ್ಟಿಗೆ ಓಡಾಡಬೇಕಿದೆ. ಹಾಗಾಗಿ ಈ ಎಲ್ಲ ವಿಷಯವನ್ನು ಅರುಣ್ ಸಾಗರ್ ಮುಂದೆ ನವಾಜ್ ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೆಲವರನ್ನು ಕಂಡರೆ ಹೊಡೆಯಬೇಕು ಅನಿಸ್ತಿದೆ. ಜಗಳ ಆಗತ್ತೆ ಅಂತಾನೂ ಫೀಲ್ ಆಗುತ್ತಿದೆ. ಆರ್ಯವರ್ಧನ್, ದರ್ಶ್ ನೋಡಿ ಅವರನ್ನು ಹೊಡೆಯಬೇಕು ಅನಿಸ್ತು ಎನ್ನುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಆತಂಕ ಸೃಷ್ಟಿ ಮಾಡಿದ್ದಾರೆ. ಇದನ್ನೂಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ
ನಾನು ಮರ್ಯಾದೆಗೆ ಅಂಜುವುದಿಲ್ಲ, ನನಗೆ ಬೇಗ ಕೋಪ ಬರುತ್ತದೆ ಎಂದೂ ಹೇಳಿರುವ ನವಾಜ್ (Nawaz), ಈತನ ಮಾತಿಗೆ ಸ್ವತಃ ಪ್ರಶಾಂತ್ ಸಂಬರ್ಗಿ (Prashant Sambargi) ಕೂಡ ಬೆಚ್ಚಿಬಿದ್ದಿದ್ದಾರೆ. ನವಾಜ್ ಹೇಳಿದ ಮಾತು ಭಯ ಹುಟ್ಟಿಸುತ್ತಿದೆ ಎಂದೂ ಮಾತನಾಡಿದ್ದಾರೆ. ಅಲ್ಲದೇ ಹೊಡಿತಿನಿ ಅನ್ನೋದು ಸರಿಯಿಲ್ಲ. ಪ್ರೌಢಿಮೆ ಇಲ್ಲದೇ ಅವನು ವರ್ತಿಸುತ್ತಿದ್ದಾನೆ. ಇದು ಸರಿಯಾದದ್ದು ಅಲ್ಲ ಎಂದಿದ್ದಾರೆ ರಾಕೇಶ್ ಅಡಿಗ (Rakesh Adiga). ವಿನೋದ್ ಕೂಡ ಈ ಮಾತಿಗೆ ಧ್ವನಿಗೂಡಿಸಿ, ನವಾಜ್ ಜಗಳ ಆಡಬೇಕು, ಹೊಡೆಯಬೇಕು ಎಂದು ಕಾಯುತ್ತಿದ್ದಾನೆ ಎಂದು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಾರಣಕ್ಕೂ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ಮಾಡುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲ, ಅವರನ್ನು ಮನೆಯಿಂದ ಆಚೆ ಹಾಕಲಾಗುತ್ತದೆ. ಈ ಹಿಂದೆ ಹುಚ್ಚ ವೆಂಕಟ್ (Huchcha Venkat) ಇದೇ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ನವಾಜ್ ಕೂಡ ಮಾತೆತ್ತಿದರೆ ಹೊಡೀತೀನಿ, ಜಗಳ ಮಾಡ್ತೀನಿ ಎನ್ನುತ್ತಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ, ಅವರನ್ನು ಮನೆಯಿಂದಲೇ ಹೊರ ದಬ್ಬಲಾಗುತ್ತದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ (Bigg Boss Season 9) ಮನೆ ಒಳಗೆ ಪ್ರವೇಶ ಮಾಡುವಾಗ ಪ್ರತಿ ಸ್ಪರ್ಧಿಗೂ ಸುದೀಪ್ (Sudeep) ಒಂದೊಂದು ಬ್ಯಾಂಡ್ ಕೊಟ್ಟು ಮನೆ ಒಳಗೆ ಕಳುಹಿಸಿದ್ದರು. ಬಿಗ್ ಬಾಸ್ ಆದೇಶ ಮಾಡೋ ತನಕ ಈ ಪಟ್ಟಿ ನಿಮ್ಮ ಬಳಿ ಇರಲಿ ಎಂದು ಎಚ್ಚರಿಕೆಯನ್ನೂ ಕೊಟ್ಟು ಕಳುಹಿಸಿದ್ದರು. ಬಿಗ್ ಬಾಸ್ ಆದೇಶದ ನಂತರ ನಿಮಗೆ ಇಷ್ಟವಾದ ಸದಸ್ಯರಿಗೆ ಈ ಪಟ್ಟಿಯನ್ನು ಕೈಗೆ ಕಟ್ಬೇಕು, ಅದಕ್ಕೆ ಕಾರಣವನ್ನೂ ತಿಳಿಸಬೇಕು ಎಂದು ಹೇಳಲಾಗಿತ್ತು. ಇದೀಗ ಆ ಬ್ಯಾಂಡ್ (Band) ಕಟ್ಟುವ ಸಮಯ ಬಂದಿದೆ.
ಮನೆಯ ಸದಸ್ಯರು ತಮಗೆ ಸಿಕ್ಕಿರುವ ಬ್ಯಾಂಡ್ ಅನ್ನು ತಮಗಿಷ್ಟದ ವ್ಯಕ್ತಿಗಳಿಗೆ ಕಟ್ಟಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಆದರೆ, ಆರ್ಯವರ್ಧನ್ (Aryavardhan) ಗುರೂಜಿ ಆಯ್ಕೆ ಮಾಡಿಕೊಂಡ ವ್ಯಕ್ತಿ ಮತ್ತು ಅವರು ಕೊಟ್ಟ ಕಾರಣದಿಂದಾಗಿ ಬಿಗ್ ಬಾಸ್ ಮನೆಯ ಸದಸ್ಯರು ಕೆಲ ನಿಮಿಷಗಳ ಕಾಲ ಭಾವುಕತೆಗೆ ಸಾಕ್ಷಿಯಾದರು. ಸ್ವತಃ ಗುರೂಜಿ (Guruji) ಕಣ್ಣೀರಿಟ್ಟು ಆ ಬ್ಯಾಂಡ್ ಅನ್ನು ವ್ಯಕ್ತಿಗೆ ನೀಡಿದರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ
ನಾನು ಸೋತ ವೇಳೆಯಲ್ಲಿ, ಹತಾಶನಾದ ಟೈಮ್ನಲ್ಲಿ ನನ್ನ ಜೊತೆ ನಿಂತವನು ರೂಪೇಶ್ ಶೆಟ್ಟಿ (Rupesh Shetty), ನಾನು ನನ್ನ ಮಗನನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ರೂಪೇಶ್ ಗೆ ಕೊಡುವೆ. ಅವನು ನನ್ನ ಮಗನಿದ್ದಂತೆ ಎಂದು ಘೋಷಿಸಿದರು. ಈ ವೇಳೆಯಲ್ಲಿ ಭಾವುಕರೂ ಆದರು. ಭಾವುಕತೆಯ ತೀವ್ರ ಎಷ್ಟಿತ್ತು ಅಂದರೆ, ರೂಪೇಶ್ ಹೆಸರಿನ ಬದಲಾಗಿ ರಾಕೇಶ್ (Rakesh Adiga) ಎಂದು ಹೇಳಿದರು. ಈ ಮಾತು ಕೇಳಿ ರಾಕೇಶ್ ಅಚ್ಚರಿ ವ್ಯಕ್ತ ಪಡಿಸಿದರು. ಕೊನೆಗೆ ರಾಕೇಶ್ ಅಲ್ಲ ರೂಪೇಶ್ ಎಂದು ತಿದ್ದಿಕೊಂಡು ರೂಪೇಶ್ ಗೆ ಬ್ಯಾಂಡ್ ಕಟ್ಟಿದರು ಗುರೂಜಿ.
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಕ್ಷಣಾತ್ಮಕವಾಗಿ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿಯ ಅನುಭವವನ್ನೂ ಈ ಮನೆಯಲ್ಲೂ ಉಪಯೋಗಿಸ್ತಿದ್ದಾರೆ. ಹಾಗಾಗಿ ರೂಪೇಶ್ ಎಲ್ಲರ ನೆಚ್ಚಿನ ಡಾರ್ಲಿಂಗ್ ಆಗಿದ್ದಾರೆ. ಅದರಲ್ಲೂ ಸದಾ ಗುರೂಜಿಯ ಬೆನ್ನಿಗೆ ನಿಂತ ಕಾರಣದಿಂದಾಗಿ ಪ್ರೀತಿಯ ಬ್ಯಾಂಡ್ ಅನ್ನು ಪಡೆದಿದ್ದಾರೆ.
Live Tv
[brid partner=56869869 player=32851 video=960834 autoplay=true]