Tag: Rakesh Adiga

  • ಬಿಗ್ ಬಾಸ್ : ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದು ದೂರ ಉಳಿದ ರಾಕೇಶ್ ಅಡಿಗ

    ಬಿಗ್ ಬಾಸ್ : ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದು ದೂರ ಉಳಿದ ರಾಕೇಶ್ ಅಡಿಗ

    ಬಿಗ್ ಬಾಸ್  (Big Boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಅಮೂಲ್ಯ (Amulya) ಗೌಡ ಜೋಡಿಯೇ ವಿಚಿತ್ರ. ಇವರು ಯಾವಾಗ ಹೇಗೆ ಇರುತ್ತಾರೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಒಂದು ಹೊತ್ತಲ್ಲಿ ಅಪ್ಪಟ ಪ್ರೇಮಿಗಳಂತೆ ಕಾಣಿಸಿಕೊಂಡರೆ ಮತ್ತೊಂದು ಹೊತ್ತಲ್ಲಿ ಜನ್ಮಜನ್ಮಾಂತರದ ವೈರಿಗಳು ಎನ್ನುವಂತೆ ಮುನಿಸಿಕೊಳ್ಳುತ್ತಾರೆ. ನಿನ್ನೆಯೂ ಹಾಗೆಯೇ ಆಯಿತು. ಮಂಜು ಪಾವಗಡ ಮನೆಗೆ ಎಂಟ್ರಿ ಕೊಟ್ಟ ನಂತರ ಅಮೂಲ್ಯ ಬದಲಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದಿದ್ದಾರೆ ರಾಕೇಶ್. ಹಾಗಾಗಿ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

    ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ (Manju Pavagada) ಪ್ರವೇಶ ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ (Rakesh Adiga) ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದರು. ಇದನ್ನೂ ಓದಿ : ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

    ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ.

    ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ. ಆನಂತರ ಅಮೂಲ್ಯ ಮತ್ತು ರಾಕೇಶ್ ನಡುವೆ ಅಂತರದ ಗೇಮ್ ಅಂತೂ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ ಪ್ರವೇಶ ಮಾಡಿದ್ದಾರೆ. ಗೆಸ್ಟ್ ರೀತಿಯಲ್ಲಿ ಮಂಜು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದಾರೆ.

    ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ. ಇದನ್ನೂ ಓದಿ: ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್‌ ಗುರೂಜಿ

    ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ.

    ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ದೀಪಿಕಾ ದಾಸ್‌ಗೆ ಚಿನ್ನದ ಚೈನ್, ಮನಸ್ಸು ಆಫರ್ ಮಾಡಿದ ಗುರೂಜಿ

    ಬಿಗ್ ಬಾಸ್ ಮನೆಗೆ (Bigg Boss Kannada) ಇದೀಗ ಮಿಣಿ ಮಿಣಿ ಮೀನಾಕ್ಷಿಯ ಎಂಟ್ರಿಯಾಗಿದೆ. ಮೀನಾಕ್ಷಿ ಮದುವೆಗೆ ವರ ಅನ್ವೇಷಣೆ ಜೋರಾಗಿದೆ. ದೀಪಿಕಾ ದಾಸ್ (Deepika Das) ಮತ್ತು ಅರುಣ್ ಸಾಗರ್ (Arun Sagar) ಹೊಸ ಅವತಾರದಲ್ಲಿ ಮನೆ ಮಂದಿಗೆ, ಪ್ರೇಕ್ಷಕರಿಗೆ ಕಮಾಲ್ ಮಾಡಿದ್ದಾರೆ. ಇದರ ಮಧ್ಯೆ ನನ್ನ ಕತ್ತಿನಲ್ಲಿರುವ ಚೈನ್, ಬಾಡಿಯಲ್ಲಿರುವ ಮನಸ್ಸು ನಿಮಗೆ ಕೊಡ್ತೀನಿ ಎಂದು ಗುರೂಜಿ ಮೀನಾಕ್ಷಿಗೆ ಪ್ರಪೋಸ್ ಮಾಡಿದ್ದಾರೆ.

    ದೊಡ್ಮನೆಯಲ್ಲಿ ಹುಂಬಲ್ಲು, ವಿಚಿತ್ರ ಜಡೆ, ಇಳಕಲ್ ಸೀರೆ, ಹಣೆಗೆ ದೊಡ್ಡ ಕುಂಕುಮ, ಕೈತುಂಬ ಬಳೆ ಹಾಕಿಕೊಂಡು ದೀಪಿಕಾ ದಾಸ್ ಅವರು ಮದುವೆಗೆ ಹುಡುಗನನ್ನು ನೋಡಲು ರೆಡಿಯಾಗಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿರುವ ದೀಪಿಕಾ ಅವರು ಈ ರೀತಿ ರೆಡಿ ಆಗಿದ್ದಾರೆ. ಯಾರಿಗೂ ಗುರುತು ಸಿಗದಷ್ಟು ರೀತಿಯಲ್ಲಿ ದೀಪಿಕಾ ದಾಸ್ ಅವರು ಗೆಟಪ್ ಬದಲಾಯಿಸಿಕೊಂಡು, ಅಣ್ಣ ಅರುಣ್ ಸಾಗರ್ ಜೊತೆ ವರ ಅನ್ವೇಷಣೆ ಮಾಡಿದ್ದಾರೆ.

    ದೀಪಿಕಾ ಅವರು ವಿಚಿತ್ರವಾಗಿ ರೆಡಿಯಾಗಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ನಾನು ಮದುವೆಯಾಗಲು ಹುಡುಗ ಬೇಕು ಎಂದು ಹೇಳಿದ ದೀಪಿಕಾ ಅವರು ರೂಪೇಶ್ ಶೆಟ್ಟಿ, ರಾಜಣ್ಣ, ಗುರೂಜಿ, ರಾಕೇಶ್ ಅಡಿಗ ಅವರಲ್ಲಿ ಯಾರು ಬೆಸ್ಟ್ ಎಂದು ತಿಳಿದುಕೊಳ್ಳಲು ಒಂದಷ್ಟು ಮಾತುಕತೆ ಮಾಡಿದ್ದಾರೆ. ಒಟ್ಟಿನಲ್ಲಿ ಮದುವೆ ನೆಪ ಇಟ್ಟುಕೊಂಡು ಅರುಣ್ ಸಾಗರ್, ದೀಪಿಕಾ ಜೋಡಿ ತಮಾಷೆಗೆ ಒಂದು ನಾಟಕ ಮಾಡಿದ್ದಾರೆ.

    ಧಾರವಾಡದ ಹುಡುಗಿಯಾಗಿ ಎಂಟ್ರಿ ಕೊಟ್ಟಿರುವ ದೀಪಿಕಾಗೆ ಮದುವೆಯಾಗಲು ಗಂಡು ಬೇಕಂತೆ. ದೀಪಿಕಾ ಮನೆಗೆ ಬರುವವರಿಗೆ ಅರುಣ್ ಸಾಗರ್ ಅವರು ಹುಂಬಲ್ಲು ಇರುವಂತೆ ನೋಡಿಕೊಳ್ಳುತ್ತಾರಂತೆ. ಅರುಣ್ ಅವರು ದೀಪಿಕಾಗೆ ಮಿಣಿ ಮಿಣಿ ಮೀನಾಕ್ಷಿ ಎಂದು ಹೆಸರಿಟ್ಟಿದ್ದಾರೆ. ಇನ್ನು ದೀಪಿಕಾ ಹೊಸ ಗೆಟಪ್ ನೋಡಿದವರಿಗೆ ಅವರು ದೀಪಿಕಾ ಅಂತ ನೋಡಿದಾಗ ಗೊತ್ತಾಗಿಲ್ಲ. ಇದನ್ನೂ ಓದಿ:ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ: ಪೊಲೀಸ್ ನೋಟಿಸ್ ಗೆ ದುನಿಯಾ ವಿಜಯ್ ಉತ್ತರ

    ಈ ನಾಟಕಕ್ಕೆ ರೂಪೇಶ್ ಶೆಟ್ಟಿ (Roopesh Shetty)  ಕೂಡ ಎಂಟ್ರಿ ಕೊಟ್ಟು, ಅವರು ದೊಡ್ಡ ಹೊಟ್ಟೆ ಮಾಡಿಕೊಂಡು, ಮಂಗಳೂರು ಭಾಷೆಯಲ್ಲಿ ಸಖತ್ ಡೈಲಾಗ್ ಹೊಡೆದಿದ್ದಾರೆ. ಒಟ್ಟಿನಲ್ಲಿ ದೀಪಿಕಾ, ಅರುಣ್, ರೂಪೇಶ್ ಶೆಟ್ಟಿ, ರಾಜಣ್ಣ, ರಾಕೇಶ್ ಅವರು ಈ ಡ್ರಾಮಾದಲ್ಲಿ ಭಾಗಿಯಾಗಿ ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕತ್ತಿನಲ್ಲಿರುವ ಚೈನ್ ಕೊಟ್ಟರೆ ಗುರೂಜಿಯನ್ನು ಮದುವೆಯಾಗ್ತೀನಿ ಎಂದು ಮಿಣಿ ಮಿಣಿ ಮೀನಾಕ್ಷಿ ಹೇಳಿದಾಗ, ಗುರೂಜಿ ಅವರು, ಕತ್ತಲ್ಲಿರುವ ಚೈನ್ ಕೊಡ್ತೀನಿ, ಬಾಡಿಲಿರೋ ಮನಸು ಕೊಡ್ತೀನಿ ಎಂದಿದ್ದಾರೆ. ದೀಪಿಕಾ, ಗುರೂಜಿ ರಾಜ ರಾಜ.. ಎನ್ನುವ ಹಾಡಿಗೆ ಡ್ಯುಯೆಟ್ ಹಾಡಿದ್ದಾರೆ. ಅಂತೂ ಇಂತೂ ಈ ಸಂದರ್ಭ ಮನೆಯವರಿಗೆ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಕುಟುಂಬದವರ ಎಂಟ್ರಿಗೆ ಭಾವುಕರಾದ ಬಿಗ್ ಬಾಸ್ ಸ್ಪರ್ಧಿಗಳು

    ಕುಟುಂಬದವರ ಎಂಟ್ರಿಗೆ ಭಾವುಕರಾದ ಬಿಗ್ ಬಾಸ್ ಸ್ಪರ್ಧಿಗಳು

    ದೊಡ್ಮನೆಯಲ್ಲಿ ಮನೆಮಂದಿಗೆ ಬಿಗ್ ಬಾಸ್ (Bigg Boss) ಅಚ್ಚರಿ ನೀಡಿದ್ದಾರೆ. ಸ್ಪರ್ಧಿಗಳಿಗೆ ಮತ್ತಷ್ಟು ಸಾಥ್ ನೀಡಲು ಅವರ ಕುಟುಂಬದವರ ಎಂಟ್ರಿಯಾಗಿದೆ. ಮನೆಯವರ ಆಗಮನಕ್ಕೆ ಸ್ಪರ್ಧಿಗಳು ಕೂಡ ಭಾವುಕರಾಗಿದ್ದಾರೆ.

    ಬಿಗ್ ಬಾಸ್ ಮನೆಗೆ (Bigg Boss House) ಎಂಟ್ರಿ ಕೊಟ್ಟ ಮೇಲೆ ಸ್ಪರ್ಧಿಗಳಿಗೆ ತನ್ನ ಮನೆಯವರ ಜೊತೆ ಯಾವುದೇ ಕನೆಕ್ಷನ್ ಇರೋದಿಲ್ಲ. 9 ವಾರಗಳು ಪೂರೈಸಿ ಮುನ್ನುಗ್ಗುತ್ತಿರುವ ಈ ಮನೆಯಲ್ಲಿ ಸ್ಪರ್ಧಿಗಳಿಗೆ ಮತ್ತಷ್ಟು ಚೈತನ್ಯ ನೀಡಲು ಬಿಗ್ ಬಾಸ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಸ್ಪರ್ಧಿಗಳನ್ನ ತನ್ನ ಕುಟುಂಬದ ಜೊತೆ ಮಾತನಾಡಲು ಅವಕಾಶ ನೀಡಿದ್ದಾರೆ. ಈ ಕ್ಷಣ ಬಿಗ್ ಬಾಸ್ ಸ್ಪರ್ಧಿಗಳಿಗೆ ತುಂಬಾ ವಿಶೇಷ ಎನಿಸಿದೆ. ಇದನ್ನೂ ಓದಿ: ಜಪಾನ್ ನಲ್ಲಿ ಕುತ್ಕೊಂಡು ತನಗೀಗ 40 ವರ್ಷ ಎಂದು ಘೋಷಿಸಿಕೊಂಡ ರಮ್ಯಾ

    ದೊಡ್ಮನೆಯ ಆಟ ಈಗ ಅರ್ಧ ಕ್ರಮಿಸಿ ಮುನ್ನುಗ್ಗಿದೆ. ಎರಡು ತಿಂಗಳಿಗೂ ಅಧಿಕ ದಿನ ಕಳೆದಿದೆ. ಇನ್ನೂ ಒಂದು ತಿಂಗಳಲ್ಲಿ ಶೋ ಕೊನೆಯಾಗಲಿದೆ. 11 ಸ್ಪರ್ಧಿಗಳಿರುವ ಮನೆಯಲ್ಲಿ ಬಿಗ್ ಬಾಸ್‌ನ ಅಚ್ಚರಿಯ ಉಡುಗೊರೆಗೆ ಕಂಬನಿ ಮಿಡಿದಿದ್ದಾರೆ. ಮನೆಗೆ ದಿವ್ಯಾ ಉರುಡುಗ (Divya Uruduga) ತಾಯಿ ಮತ್ತು ರಾಕೇಶ್ (Rakesh Adiga) ತಾಯಿಯ ಆಗಮನ ವಾಗಿದೆ.

    ದಿವ್ಯಾ ಅವರ ತಾಯಿ ಮನೆಗೆ ಬಂದಾಗ ತಬ್ಬಿ ಕಣ್ಣೀರಿಟ್ಟಿದ್ದಾರೆ. ದಿವ್ಯಾ ಅವರ ಆಸೆಯಂತೆ ಅವರ ತಾಯಿ ಹಾಡಿದ್ದಾರೆ. ಇನ್ನೂ ಮೊದಲ ಬಾರಿಗೆ ಕ್ಯಾಪ್ಟನ್ ಆಗಿರುವ ರಾಕೇಶ್ ಅಡಿಗ ಬಗ್ಗೆ ರಾಕಿ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೊಡ್ಮನೆಗೆ ರಾಕೇಶ್ ತಾಯಿ ಬಂದಿರೋದ್ದಕ್ಕೆ ರಾಕೇಶ್ ಕೂಡ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ಬಿಗ್ ಬಾಸ್ ಮನೆಯಲ್ಲಿ (Bigg boss) ಹೈಲೈಟ್ ಆಗಿರುವ ಮತ್ತೊಂದು ಜೋಡಿ ಅಂದ್ರೆ ರಾಕೇಶ್ ಅಡಿಗ (Rakesh Agiga) ಮತ್ತು ಅಮೂಲ್ಯ ಗೌಡ (Amulya Gowda) ಇದೀಗ ಬೇರೆ ಬೇರೇ ಆಗಿದ್ದಾರೆ. ಟೀ ವಿಚಾರಕ್ಕೆ ಮನಸ್ತಾಪ ಆಗಿ, ದೂರ ದೂರ ಆಗಿದ್ದಾರೆ.

    ದೊಡ್ಮನೆಯಲ್ಲಿ ಸೋನು ನಂತರ ರಾಕೇಶ್‌ಗೆ ಸಖತ್ ಕ್ಲೋಸ್ ಆಗಿರೋದೆ ಅಮೂಲ್ಯ ಗೌಡ, ಮೊದಲಿನಿಂದಲೂ ಅಮ್ಮು ಮತ್ತೆ ರಾಕಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಪ್ರಶಂಸೆ ವ್ಯಕ್ತಪಡಿಸುತ್ತಿದ್ದ ಈ ಜೋಡಿಯ ನಡುವೆ ಬಿರುಕು ಉಂಟಾಗಿದೆ. ಟೀ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಗಲಾಟೆನೇ ಆಗಿದೆ. ಅಮ್ಮು ಮುನಿಸಿಗೆ ರಾಕಿ ಮನವೊಲಿಸಲು ಸೋತಿದ್ದಾರೆ. ಇದನ್ನೂ ಓದಿ:ನೆನಪಿರಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ: ಹೀರೋ ಯಾರು?

    ಟೀ ಅವರವರೇ ಮಾಡಿಕೋತ್ತಾರಾ, ಎಲ್ಲರಿಗೂ ಮಾಡೋದಾ ಎಂದು ರಾಕಿ ಮನೆ ಮಂದಿಗೆ ಕೇಳಿದ್ದಾರೆ. ಈ ವೇಳೆ ನನಗೆ ಹಾಲಿಗೆ ಜಾಸ್ತಿ ನೀರು ಹಾಕಬೇಡಿ. ನನಗೆ ಒಂದು ಪ್ಯಾಕೇಟ್ ಹಾಲು ಕೊಟ್ಟು ಬಿಡಿ ಎಂದು ಈ ವೇಳೆ ಅಮೂಲ್ಯ ಹೇಳಿದ್ದಾರೆ. ನನಗೆ ಪ್ರತಿಕ್ರಿಯೆ ನೀಡಿಲ್ಲ ನೀವು ಎಂದು ಅಮ್ಮು, ರಾಕಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾರಿ ಈ ವೇಳೆ ನನ್ನ ಗಮನಕ್ಕೆ ಬಂದಿಲ್ಲ ಎಂದ ರಾಕಿ ಮಾತಿಗೆ, ನಾನು ನಿಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದು ಹಿಂಸೆ ಆಯ್ತು. ನೀವು ಎರಡು ಹೆಜ್ಜೆ ಮುಂದೆ ಬಂದಿದ್ದರೆ ನಿಮ್ಮ ಇಗೋ ಕಮ್ಮಿಯಾಗುತ್ತಿರಲಿಲ್ಲ ಎಂದಿದ್ದಾರೆ.

    ನನಗೆ ಕಾಮನ್ ಸೆನ್ಸ್ ಇಲ್ಲಾ, ನಿಮ್ಮ ಅಷ್ಟು ಥಿಂಕಿಂಗ್ ಲೆವಲ್‌ಗೆ ನಾನಿಲ್ಲ ಎಂದು ರಾಕಿ ಮುಂದೆ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ರಾಕಿ ಕ್ಯಾಪ್ಟೆನ್ಸಿ ಸಮಯದಲ್ಲಿ ಟೀ ವಿಚಾರಕ್ಕೆ ದೊಡ್ಡ ಕಲಹ ಉಂಟಾಗಿದೆ. ಈ ಜೋಡಿ ಇದೀಗ ದೂರ ದೂರ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ನಲ್ಲಿ ಮತ್ತೆ ಮುಂದುವರೆದ ರಾಕೇಶ್-ಅಮೂಲ್ಯ ಲವ್ವಿ ಡವ್ವಿ

    ಬಿಗ್ ಬಾಸ್‌ನಲ್ಲಿ ಮತ್ತೆ ಮುಂದುವರೆದ ರಾಕೇಶ್-ಅಮೂಲ್ಯ ಲವ್ವಿ ಡವ್ವಿ

    ಟಿಟಿ ಸೀಸನ್‌ನಿಂದ ಟಿವಿ ಬಿಗ್ ಬಾಸ್‌ವರೆಗೆ(Bigg Boss) ರಾಕೇಶ್ ಅಡಿಗ ಸದ್ದು ಮಾಡ್ತಿದ್ದಾರೆ. ಸೋನು ಗೌಡ ನಂತರ ಅಮೂಲ್ಯ ಜೊತೆ ರಾಕೇಶ್ ಅಡಿಗ ಕ್ಲೋಸ್ ಆಗಿದ್ದಾರೆ. ನಿನಗೆ ಏನೇ ಕಷ್ಟ ಇದ್ದರೂ ನನಗೆ ಹೇಳಿಕೋ ಎಂದು ಭರವಸೆ ಕೊಡುವ ಮೂಲಕ ಅಮೂಲ್ಯಗೆ ರಾಕಿ ಸಾಥ್‌ ನೀಡಿದ್ದಾರೆ.

    ಬಿಗ್ ಬಾಸ್(Bigg Boss) ಓಟಿಟಿಯಲ್ಲಿ ಸೋನು(Sonu Gowda) ಜೊತೆ ರಾಕೇಶ್ ಹೈಲೈಟ್ ಆಗಿದ್ದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಅಮೂಲ್ಯ ಜೊತೆ ರಾಕೇಶ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಟಾಸ್ಕ್ ಜೊತೆ ಪ್ರತಿಯೊಂದು ಹಂತದಲ್ಲೂ ಇಬ್ಬರು ಜೊತೆಯಾಗಿದ್ದಾರೆ. ಮನೆಯವರ ನೆನಪಾಗುತ್ತಿದೆ ಎಂದು ಅಮೂಲ್ಯಗೆ ರಾಕೇಶ್ (Rakesh adiga) ಮುದ್ದಾಗಿ ಸಮಾಧಾನ ಮಾಡಿದ್ದಾರೆ.

    ಮನೆಗೆ ಹೋಗಲೇಬೇಕು ಎಂದೇನಿಸುತ್ತಿದೆ. ಆದರೆ ಏನು ಮಾಡೋಕೆ ಆಗುತ್ತೆ ಎಂದು ಅಮೂಲ್ಯ ಎಂದಿದ್ದಾರೆ. ನಾವೆಲ್ಲ ಲೈಕ್ ಮೈಂಡೆಡ್ ಇರೋದರಿಂದ ಓಕೆ, ನಿನಗೆ ಏನೇ ಬೇಸರ ಇದ್ದರೂ, ಹೇಳೋದ್ದಕ್ಕೆ ಹಿಂಜರಿಯಬೇಡ. ನೀನು ನಮ್ಮ ಮನೆಯಲ್ಲಿ ಒಬ್ಬಳು ಎಂದು ಫೀಲ್ ಆಗುತ್ತೀಯಾ ಎಂದು ಅಮೂಲ್ಯಗೆ ರಾಕೇಶ್ ಹೇಳಿದ್ದಾರೆ. ಇದನ್ನೂ ಓದಿ:ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸದಾ ಹೆಣ್ಣು ಮಕ್ಕಳ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವ ರಾಕೇಶ್ ಅಡಿಗ, ಅಮೂಲ್ಯ ಜೊತೆಗಿನ ಸ್ನೇಹ ಸಖತ್ ಹೈಲೈಟ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ರಾಕೇಶ್ ಅಡಿಗ ಸ್ಮಾರ್ಟ್ ಗೇಮ್‌ಗೆ, ಸ್ಪರ್ಧಿಗಳಿಗೆ ಶುರುವಾಯ್ತು ಟೆನ್ಷನ್

    ಬಿಗ್ ಬಾಸ್ ಮನೆಯ(Bigg Boss Kannada) ಸ್ಪರ್ಧಿಗಳಲ್ಲಿ ಅಜಾತಶತ್ರು ಅಂದ್ರೆ ರಾಕೇಶ್ ಅಡಿಗ. ಯಾರ ಕೆಂಗಣ್ಣಿಗೂ ಗುರಿಯಾಗದೇ ಕೂಲ್ ಆಗಿ ತಮ್ಮದೇ ಶೈಲಿಯಲ್ಲಿ ಆಡುತ್ತಿದ್ದಾರೆ. ದೊಡ್ಮನೆ ಆಟ 50 ದಿನ ಪೂರೈಸಿರುವ ಬೆನ್ನಲ್ಲೇ ರಾಕೇಶ್ ಅಡಿಗ ಅವರ ಆಟ ಈಗ ಮನೆಯವರ ಕಣ್ಣಿಗೆ ಹೈಲೈಟ್ ಆಗುತ್ತಿದೆ. ಇವರೂ ಹೀಗೆ ಆಡಿದರೆ ರಾಕೇಶ್(Rakesh Adiga) ಅವರೇ ಬಿಗ್ ಬಾಸ್ ವಿನ್ನರ್ ಪಟ್ಟ ತೆಗೆದುಕೊಳ್ಳುತ್ತಾರೆ ಎಂಬ ಟೆನ್ಷನ್ ಮನೆಮಂದಿಗೆ ಶುರುವಾಗಿದೆ.

    ದೊಡ್ಮನೆಯ ಆಟ 50 ದಿನ ಸಾಗಿದೆ. ಅರ್ಧ ದಾರಿ ಸಾಗಿರುವ ಬಿಗ್ ಬಾಸ್‌ನಲ್ಲಿ(Bigg Boss) ಒಂದು ಸರ್‌ಪ್ರೈಸ್ ಇತ್ತು. ಆರ್ಯವರ್ಧನ್(Aryavardhan) ಅವರನ್ನು ಮೊದಲು ಎಲಿಮಿನೇಟ್ ಮಾಡಲಾಗಿತ್ತು. ಆದರೆ, ಈ ವಾರ ಎಲಿಮಿನೇಷನ್ ಮಾಡಲ್ಲ ಎಂದು ಬಿಗ್ ಬಾಸ್ ನಂತರ ಘೋಷಿಸಿದರು. ಈ ವೇಳೆ ಎಲ್ಲಾ ಸ್ಪರ್ಧಿಗಳು ಖುಷಿಪಟ್ಟರು. ಮತ್ತೊಂದೆಡೆ ಈ ಫೇಕ್ ಎಲಿಮಿನೇಷನ್‌ನಿಂದ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ಕೂಡ ಆಗಿತ್ತು.

    ಪ್ರತಿ ವೀಕೆಂಡ್‌ನಲ್ಲಿ ಕಿಚ್ಚ ಒಂದು ಸ್ಪರ್ಧಿಗೆ ಚಪ್ಪಾಳೆ ನೀಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳೋಕೆ ಸ್ಪರ್ಧಿಗಳು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಕಳೆದ ವಾರವೂ ಸುದೀಪ್ ಚಪ್ಪಾಳೆ ನೀಡಿದ್ದಾರೆ. ಒಂದು ವಾರದ ಪರ್ಫಾರ್ಮೆನ್ಸ್ ನೋಡಿ ಅಲ್ಲ. ಬದಲಿಗೆ ಕಳೆದ 50 ದಿನಗಳನ್ನು ಗಮನಿಸಿ ಸುದೀಪ್ (Kiccha Sudeep) ಚಪ್ಪಾಳೆ ನೀಡಿದ್ದಾರೆ. ಈ ಚಪ್ಪಾಳೆ ಸಿಕ್ಕಿದ್ದು ರಾಕೇಶ್ ಪಾಲಿಗೆ. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

    ಬಿಗ್ ಬಾಸ್ ಒಟಿಟಿಯಿಂದ ರಾಕೇಶ್ ಅಡಿಗ ಗಮನ ಸೆಳೆದರು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ರಾಕಿ ಹೈಲೈಟ್ ಆಗುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅವರು ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುತ್ತಾ ಬಂದಿದ್ದಾರೆ. ಅವರು ಜಗಳ ಮಾಡಿಕೊಳ್ಳೋದೇ, ಮನೆ ಮಂದಿಯ ನಂಬಿಕೆಗೆ ರಾಕೇಶ್ ಪಾತ್ರರಾಗಿದ್ದಾರೆ. ಟಾಸ್ಕ್‌ಗಳ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಸದ್ಯ ರಾಕೇಶ್ ಆಟ ನೋಡಿ ಮನೆಯವರಿಗೆ ಹೆಚ್ಚು ಟೆನ್ಷನ್ ಆಗಿದೆ. ರೂಪೇಶ್ ಶೆಟ್ಟಿ ಸೇರಿದಂತೆ ಮೊದಲಾದವರು ಈ ಬಗ್ಗೆ ಟೆನ್ಷನ್ ಮಾಡಿಕೊಂಡಿದ್ದಾರೆ. ರಾಕೇಶ್ ಅವರನ್ನು ಸೆಡ್ಡು ಹೊಡೆಯದೇ ಇದ್ದರೆ ಸಂಕಷ್ಟ ಪಕ್ಕಾ ಎಂಬುದು ಅವರಿಗೆ ಗೊತ್ತಾಗಿದೆ. ಹೀಗೆಯೇ ಮುಂದುವರಿದರೆ ಅವರು ಬಿಗ್ ಬಾಸ್ ವಿನ್ನರ್ ಆಗಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲೈನ್ ಹೊಡಿಬೇಕು ಅಂದ್ರೆ ಒಂದು ಕಂಡೀಷನ್: ರಾಕಿಗೆ ದೀಪಿಕಾ ತಾಕೀತು

    ಲೈನ್ ಹೊಡಿಬೇಕು ಅಂದ್ರೆ ಒಂದು ಕಂಡೀಷನ್: ರಾಕಿಗೆ ದೀಪಿಕಾ ತಾಕೀತು

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಪ್ರೇಮ ಕಥೆಗಳಿಗೇನು ಕೊರತೆಯಿಲ್ಲ. ಇಲ್ಲಿ ಲವ್, ಫ್ಲರ್ಟ್‌ ಎಲ್ಲವೂ ಕಾಮನ್ ಆಗಿದೆ. ಹೀಗಿರುವಾಗ ರಾಕೇಶ್‌ಗೆ ದೀಪಿಕಾ ದಾಸ್ ಕಂಡೀಷನ್ ಹಾಕಿದ್ದಾರೆ. ನನಗೆ ಲೈನ್ ಹೊಡಿಬೇಕು ಅಂದ್ರೆ ನೀವು ಈ ಕೆಲಸ ಮಾಡಲೇಬೇಕು ಅಂತಾ ವಾರ್ನ್‌ ಮಾಡಿದ್ದಾರೆ.

    ದೊಡ್ಮನೆಯಲ್ಲಿ ರಾಕೇಶ್ ಅಡಿಗ(Rakesh Adiga) ಸಾಕಷ್ಟು ವಿಚಾರವಾಗಿ ಹೈಲೈಟ್ ಆಗುತ್ತಿದ್ದಾರೆ. ಅದರಲ್ಲೂ ಹುಡುಗಿರ ವಿಚಾರವಾಗಿ ಪ್ರಿ ಯೂನಿವರ್ಸಿಟಿ ಎಂದೇ ಗುರುತಿಸಿಕೊಂಡಿದ್ದಾರೆ. ಸದಾ ಹುಡುಗಿರ ಜೊತೆಗೆ ಇರುತ್ತಾರೆ ಎಂಬ ವಿಚಾರ ಕೂಡ ಹೈಲೈಟ್ ಆಗಿದೆ. ಹೀಗಿರುವಾಗ ರಾಕೇಶ್‌ಗೆ ದೀಪಿಕಾ(Deepika Das) ಒಂದು ಕಂಡೀಷನ್ ಹಾಕಿದ್ದಾರೆ.

    ಮನೆಯಲ್ಲಿ ಇದೀಗ ಬಝರ್ ಟಾಸ್ಕ್ ನಡೆಯುತ್ತಿರುವ ಕಾರಣ ಸ್ಪರ್ಧಿಗಳ ಮಧ್ಯೆ ಸಖತ್ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ರಾಕೇಶ್ ಮತ್ತು ದೀಪಿಕಾ ಮಾತು ನೆಟ್ಟಿಗರನ್ನ ಮೋಡಿ ಮಾಡಿದೆ. ನೀನು ನನಗೆ ಲೈನ್ ಹೊಡಿಬೇಕು ಅಂದ್ರೆ ಒಂದು ಕಂಡೀಷನ್ ಇದೆ. ಟಾಸ್ಕ್‌ನಲ್ಲಿ ಕೊಟ್ಟಿರೋ ಬಝರ್ ಹೊಡಿಯಲೇಬೇಕು ಎಂದು ಷರತ್ತು ಹಾಕಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಬ್ರೇಕ್, ಪತ್ನಿ ಪೋಸ್ಟರ್‌ಗೆ ಪ್ಲೇನ್ ಕಿಸ್ ಕೊಟ್ಟ ರಣ್‌ವೀರ್

    ಅದಕ್ಕೆ ರಾಕೇಶ್ ಕೂಡ, ಬಝರ್ ಹೊಡೆಯೋದಷ್ಟೇ ಏಕೆ? ಬಝರ್‌ನ ನಿಮ್ಮ ಪಕ್ಕದಲ್ಲೇ ತಂದು ಇಡುತ್ತೀನಿ ಎಂದು ರಾಕೇಶ್ ಹೇಳಿದ್ದಾರೆ. ಈ ಮಾತನ್ನು ಕೇಳಿ ಪರೋಕ್ಷವಾಗಿ ಫ್ಲರ್ಟ್‌ ಮಾಡುತ್ತೀದ್ದಿರಾ ಎಂದು ನಕ್ಕಿದ್ದಾರೆ. ಇಲ್ಲಾ ನಾನು ಡೈರೆಕ್ಟ್ ಆಗಿಯೇ ಫ್ಲರ್ಟ್‌ ಮಾಡ್ತಿದ್ದೀನಿ ಎಂದು ರಾಕೇಶ್ ಪ್ರತಿಯುತ್ತರ ಕೊಟ್ಟಿದ್ದಾರೆ. ಇವರಿಬ್ಬರ ಮಾತು ಮನೆ ಮಂದಿಯ ಮುಖದಲ್ಲೂ ನಗು ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    ದೊಡ್ಮನೆಯ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಿಂದ 5ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿ ನೇಹಾ ಗೌಡ ಹೊರಬಂದಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ತಮ್ಮ ದೊಡ್ಮನೆಯ ಜರ್ನಿ ಬಗ್ಗೆ ನೇಹಾ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಸಹ ಸ್ಪರ್ಧಿ ರಾಕೇಶ್ ಅಡಿಗ ಆಟದ ಬಗ್ಗೆ ನೇಹಾ ಬಾಯ್ಬಿಟ್ಟಿದ್ದಾರೆ.

    ಕಿರುತೆರೆಯ ಗೊಂಬೆಯಾಗಿ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದ ನಟಿ ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು. 35ನೇ ದಿನಕ್ಕೆ ದೊಡ್ಮನೆಯಿಂದ ಔಟ್ ಆಗಿ, ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯ ಆಟದ ಬಗ್ಗೆ, ಸ್ಮಾರ್ಟ್ ಗೇಮ್ ಆಡುವವರ ಬಗ್ಗೆ ನೇಹಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿ ಕಾರ್ಯಕ್ರಮ ಅವ್ಯವಸ್ಥೆ ಬಗ್ಗೆ ಡಿ.ಕೆ.ಶಿವಕುಮಾರ್ ಆಕ್ರೋಶ

    ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ. ಯಾರಿಗೂ ಹರ್ಟ್ ಮಾಡದೇ ಮಾತನಾಡೋದು ಒಂದು ಕಲೆ ಅದು ರಾಕೇಶ್‌ಗೆ ಚೆನ್ನಾಗಿ ಗೊತ್ತಿದೆ.

    ಯಾರೇ ಬೇಜಾರಿನಲ್ಲಿದ್ದರು ಅವರನ್ನ ಚಿಯರ್ ಮಾಡೋದು. ನಾನು ನೋಡಿರುವ ವ್ಯಕ್ತಿಗಳಲ್ಲಿ ರಾಕೇಶ್ ತುಂಬಾ ನಿಯತ್ತಾಗಿ ಆಡುತ್ತಿದ್ದಾರೆ. ಬಿಗ್ ಬಾಸ್‌ನ ಅವರ ಆಟಕ್ಕೆ ಒಳ್ಳೆಯದಾಗಲಿ ಎಂದು ನೇಹಾ ವಿಶ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

    ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

    ದೊಡ್ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡು 5ನೇ ವಾರದತ್ತ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ (Bigg Boss House) ಆತ್ಮೀಯರಾಗಿ ಗುರುತಿಸಿಕೊಂಡಿದ್ದ ಕಾವ್ಯಶ್ರೀ (Kavyashree) ಮತ್ತು ರಾಕೇಶ್ ಅಡಿಗ (Rakesh Adiga) ಮಧ್ಯೆ ಅಸಮಾಧಾನದ ಹೊಗೆಯಾಡುತ್ತಿದೆ. ಕಾವ್ಯ ವಿರುದ್ಧ ರಾಕೇಶ್ ಫುಲ್ ಗರಂ ಆಗಿದ್ದಾರೆ.

    ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರಾಕೇಶ್ ಸ್ಮಾರ್ಟ್ ಗೇಮ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದಾ ಮಹಿಳಾ ಸ್ಪರ್ಧಿಗಳ ಜೊತೆಯಿರುವ ರಾಕೇಶ್, ಮನೆಯ ಮಹಿಳಾ ಮಣಿಯರ ಫೇವರೇಟ್ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಅಮೂಲ್ಯ(Amulya Gowda) ಜೊತೆ ರಾಕಿ ಇರೋದನ್ನ ನೋಡಿ, ನನ್ನ ಅಣ್ಣ ಕೈತಪ್ಪಿ ಹೋದ ಎಂದು ಹಾಸ್ಯಮಯವಾಗಿ ಎಲ್ಲರನ್ನೂ ಕಾವ್ಯ ರಂಜಿಸಿದ್ದರು. ಇಷ್ಟೇಲ್ಲಾ ಆತ್ಮೀಯತೆ ಕಾವ್ಯ ಮತ್ತು ರಾಕಿ ನಡುವೆ ಇತ್ತು. ಈಗ ಕಾವ್ಯ ವಿರುದ್ಧ ರಾಕೇಶ್ ಸಿಡಿದೆದಿದ್ದಾರೆ.

    ಈ ವಾರದ ಅನುಪಮಾ ಗೌಡ (Anupama Gowda) ಮನೆಯ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ನೀಡಿರುವ ಟಾಸ್ಕ್ ಓದುವ ಸಮಯದಲ್ಲಿ ಕಾವ್ಯಶ್ರೀ ನಕ್ಕಿದ್ದಾರೆ. ಈ ವೇಳೆ ರಾಕೇಶ್, ಕಾವ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಟಾಸ್ಕ್ ವಿಷ್ಯ ಹೇಳುವಾಗ ನಗಬಾರದು ಎಂದು ತಿಳಿಯುವುದಿಲ್ಲಲ್ವಾ. ಸ್ಪಲ್ವ ಸಮಯದ ಮುಂಚೆ ಪಾತ್ರೆ ತೊಳೆಯಲು ಮೂರು ಬಾರಿ ಕರೆದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈಗ ಇಲ್ಲಿ ಕೂತು ನಗುತ್ತೀರಾ ಎಂದು ರಾಕೇಶ್ ಕಾವ್ಯಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ

    ರಾಕಿ ಮಾತಿಗೆ ಕಾವ್ಯಶ್ರೀ ಕೂಡ ಖಾರವಾಗಿಯೇ ಉತ್ತರ ನೀಡಿದ್ದಾರೆ. ನಾನು ನಗೋದಕ್ಕೂ ನಿಮ್ಮ ಪರ್ಮಿಷನ್ ಕೇಳಬೇಕಾ ಎಂದು ಕಾವ್ಯಶ್ರೀ ಮಾತನಾಡಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ನಾಲ್ಕನೇ ಎಲಿಮಿನೇಷನ್ ಭಿನ್ನವಾಗಿ ನಡೆದಿತ್ತು. ಮಯೂರಿ ಮನೆಯಿಂದ ಹೊರಬಂದಿದ್ದರು. ಈ ವಾರ ಯಾವ ಸ್ಪರ್ಧಿಗೆ ಆಟ ಕೊನೆಯಾಗುತ್ತೇ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]