Tag: Rakesh Adiga

  • ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

    ನಿನ್ನೆಯಷ್ಟೇ ಬಿಗ್ ಬಾಸ್ (Bigg Boss) ಸೀಸನ್ 9ರ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದೆ. ಸೋಲು ಗೆಲುವು ಏನೇ ಇರಲಿ, ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ ಅಷ್ಟೂ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಮೀರಿ ಮನರಂಜಿಸಲು ಪ್ರಯತ್ನಪಟ್ಟಿದ್ದಾರೆ. ತಮ್ಮದಲ್ಲದ ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಕೆಲವರು ಒಂದೇ ವಾರಕ್ಕೆ ಮನೆಯಿಂದ ಆಚೆ ಬಂದರೆ, ಇನ್ನೂ ಕೆಲವರು ಫಿನಾಲೆ ವೇದಿಕೆ ಹತ್ತಿದ್ದಾರೆ. ಹಾಗಾಗಿ ಫಿನಾಲೆ ವೇದಿಕೆ ಒಂದು ರೀತಿಯಲ್ಲಿ ಭಾವುಕ ಪ್ರಪಂಚವನ್ನೇ ಸೃಷ್ಟಿ ಮಾಡಿತ್ತು.

    ಅದರಲ್ಲೂ ವೀಕೆಂಡ್ ನಲ್ಲಿ ಬಂದು ಸ್ಪರ್ಧಿಗಳ ಜೊತೆ ಮುಖಾಮುಖಿ ಆಗುವ, ಪ್ರತಿ ಸ್ಪರ್ಧಿಯ ಗುಣ ಅವಗುಣಗಳನ್ನು ತಿಳಿಸುವ, ಕೆಲವೊಂದು ಬಾರಿ ಕೋಪಗೊಳ್ಳುವ ಸುದೀಪ್ (Sudeep), ಫಿನಾಲೆ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಸುದೀಪ್ ಅವರ ಬಿಗ್ ಬಾಸ್ ಜರ್ನಿಯ ತುಣುಕುಗಳನ್ನು ತೋರಿಸಲಾಯಿತು. ಅದನ್ನು ನೋಡುತ್ತಿದ್ದ ಸುದೀಪ್, ಅಕ್ಷರಶಃ ಕಣ್ಣೀರಿಟ್ಟರು. ಇದನ್ನೂ ಓದಿ: ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡ ಸುದೀಪ್, ‘ಇದು ನನ್ನ ನೈಜ ಜೀವನ. ಬಣ್ಣ ಹಚ್ಚದೇ ಮಾತನಾಡುವ ಜೀವನ. ನಾನು ನಾನಾಗಿಯೇ ಕಾಣಿಸಿಕೊಳ್ಳುವ ವೇದಿಕೆ. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ನಾನು ಯಾವತ್ತಿಗೂ ನಿಮ್ಮ ಪ್ರೀತಿ ಬಯಸಿಯೇ ಕಾಯುತ್ತೇನೆ’ ಎಂದು ಮಾತನಾಡಿದರು. ಕೆಲವೊತ್ತು ಮಾತುಗಳನ್ನೇ ನಿಲ್ಲಿಸಿ, ಕಣ್ಣೀರು ಒರೆಯಿಸಿಕೊಂಡರು.

    ಬಿಗ್ ಬಾಸ್ ಸೀಸನ್ 9ರ ತೊಂಬತ್ತೊಂಬತ್ತು ದಿನಗಳ ಆಟಕ್ಕೆ ನಿನ್ನೆ ಮುಕ್ತಾಯ ಹಾಡಲಾಗಿದೆ. ಈ ಬಾರಿ ರೂಪೇಶ್ ಶೆಟ್ಟಿ (Rupesh Shetty) ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರೆ, ರಾಕೇಶ್ ಅಡಿಗ (Rakesh Adiga)ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಟೈಟಲ್ ಗೆದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಮತ್ತು 60 ಲಕ್ಷ ರೂಪಾಯಿಗಳ ಬಹುಮಾನ ಪಡೆದಿದ್ದಾರೆ. ತಮ್ಮ ಜರ್ನಿ ಯಾವತ್ತಿಗೂ ಮರೆಯಲಾರದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BREAKING: ರಾಕೇಶ್ ಅಡಿಗಗೆ ಸೆಡ್ಡು ಹೊಡೆದು ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

    BREAKING: ರಾಕೇಶ್ ಅಡಿಗಗೆ ಸೆಡ್ಡು ಹೊಡೆದು ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

    ರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಸೀಸನ್ 9ರ (Bigg Boss Kannada Season 9) ವಿನ್ನರ್ ಆಗಿದ್ದಾರೆ. ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ.

    ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.

    ರಾಕೇಶ್ ಅಡಿಗಗೆ (Rakesh Adiga) ಟಫ್ ಫೈಟ್ ಕೊಟ್ಟು, ಬಿಗ್ ಬಾಸ್ ವಿನ್ನರ್ ಟೈಟಲ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

    ಈ ಬಾರಿ ‘ಬಿಗ್ ಬಾಸ್​​ ಕನ್ನಡ’ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ದಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ಕಟ್ ಆಗಲಿದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಗಲಿದೆ. ಹತ್ತು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. ಇದನ್ನೂ ಓದಿ: ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ಒಟ್ನಲ್ಲಿ ರೂಪೇಶ್ ಶೆಟ್ಟಿ ಗೆಲವು ಕನ್ನಡಿಗರಿಗೆ, ತುಳುನಾಡಿನ ಸಮಸ್ತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ಸ್ಪರ್ಧಿ ಜೇಬಿಗೆ ಭಾರೀ ಮೊತ್ತದ ಬಹುಮಾನ: ನಟ ಸುದೀಪ್ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ವಿನ್ನರ್ ಲಿಸ್ಟ್ ನಲ್ಲಿ ರಾಕೇಶ್ ಅಡಿಗ ಹೆಸರು

    ಬಿಗ್ ಬಾಸ್ ವಿನ್ನರ್ ಲಿಸ್ಟ್ ನಲ್ಲಿ ರಾಕೇಶ್ ಅಡಿಗ ಹೆಸರು

    ಬಿಗ್ ಬಾಸ್ ಸೀಸನ್ 9ರ ವಿಜೇತರು ಯಾರು ಎನ್ನುವುದು ಇನ್ನು ಕೆಲವೇ ಗಂಟೆಗಳಲ್ಲಿ ಘೋಷಣೆ ಆಗಲಿದೆ. ಅದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ. ಗ್ರ್ಯಾಂಡ್ ಫಿನಾಲೆ ವೇದಿಕೆ ಹತ್ತಿದ್ದ ಐದು ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ ಮತ್ತು ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ. ಉಳಿದಿರುವುದು ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಮಾತ್ರ. ಇಬ್ಬರಲ್ಲಿ ಅದೃಷ್ಟ ಯಾರ ಪಾಲಾಗುತ್ತೋ ಕಾದು ನೋಡಬೇಕು.

    ಮಧ್ಯಾಹ್ನದಿಂದ ಎರಡನೇ ದಿನದ ಕಾರ್ಯಕ್ರಮ ಶುರುವಾಗಿದ್ದು, ಆಗಲೇ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿಜೇತ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ರೂಪೇಶ್ ಗೆಳೆಯರು ಕೂಡ ಶುಭ ಹಾರೈಸುತ್ತಿದ್ದಾರೆ. ಈ ಕಡೆ ರಾಕೇಶ್ ಅಡಿಗ ಬೆಂಬಲಿಗರು ಕೂಡ ತಮ್ಮ ನೆಚ್ಚಿನ ನಟನೇ ಬಿಗ್ ಬಾಸ್ ಗೆದ್ದಿರುವುದು ಎಂದು ವಾದಿಸುತ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಸಾನ್ಯನ ತಬ್ಬಿಕೊಳ್ತೀನಿ: ರೂಪೇಶ್‌ ಶೆಟ್ಟಿ

    ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಇಬ್ಬರೂ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಿ ಬಂದವರು. ಅಲ್ಲಿಯೂ ಚೆನ್ನಾಗಿಯೇ ಆಟವಾಡಿದ್ದರು. ಈ ಸೀಸನ್ ನಲ್ಲೂ ಚೆನ್ನಾಗಿ ಆಡಿದ್ದಾರೆ. ಹಾಗಾಗಿ ಇಬ್ಬರ ಮಧ್ಯ ತೀವ್ರ ಪೈಪೋಟಿ ನಡೆದಿದೆ. ಅಧಿಕೃತವಾಗಿ ಟ್ರೋಫಿ ಗೆದ್ದವರು ಯಾರು ಎಂದು ಬಹಿರಂಗ ಪಡಿಸದೇ ಇದ್ದರೂ, ಇಬ್ಬರ ಹೆಸರು ಓಡಾಡುತ್ತಿದೆ. ಈ ಮೂಲಕ ಕನ್ಫ್ಯೂಸ್ ಮಾಡುವಂತ ಕೆಲಸವೂ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ಬಿಗ್ ಬಾಸ್ ಸೀಸನ್ 9 (Bigg Boss Kannada 9) ಮುಗಿಯಲು ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ವಿನ್ನರ್ ಕಿರೀಟ ಯಾರ ಕೈ ಸೇರಲಿದೆ ಎಂಬುದನ್ನ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಗಂಟೆಗಳು ಬಾಕಿಯಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ಬಾರಿಯೂ ಕೂಡ ದಿವ್ಯಾ ಉರುಡುಗಗೆ (Divya Uruduga) ಅದೃಷ್ಟ ಕೈಕೊಟ್ಟಿದೆ. ಇದನ್ನೂ ಓದಿ:BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಸದ್ಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರಾಜಣ್ಣ, ದೀಪಿಕಾ ದಾಸ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ನಡುವೆ ಸಖತ್ ಫೈಟ್ ಇದೆ.

    ಬಿಗ್ ಬಾಸ್ ಸೀಸನ್ ೯ರ ವಿನ್ನರ್ ಯಾರು ಎಂದು ಡಿ.31ರಂದು ಅನೌನ್ಸ್ ಆಗಲಿದೆ. ಯಾರಿಗೆ ಒಲಿಯಲಿದೆ ವಿಜಯಲಕ್ಷಿö್ಮ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಅಡಿಗ ಬಿಗ್‌ ಬಾಸ್ ವಿನ್ ಆಗಬೇಕು ಆದ್ರೆ ನನಗೆ ರೂಪೇಶ್ ಶೆಟ್ಟಿ ಇಷ್ಟ: ದಿವ್ಯಾ ಸುರೇಶ್

    ರಾಕೇಶ್ ಅಡಿಗ ಬಿಗ್‌ ಬಾಸ್ ವಿನ್ ಆಗಬೇಕು ಆದ್ರೆ ನನಗೆ ರೂಪೇಶ್ ಶೆಟ್ಟಿ ಇಷ್ಟ: ದಿವ್ಯಾ ಸುರೇಶ್

    ಬಿಗ್ ಬಾಸ್ ಮನೆಯ ಆಟ ಇದೀಗ ಅಂತಿಮ ಘಟ್ಟದಲ್ಲಿದೆ. ದೊಡ್ಮನೆಯಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದೀಗ ಬಿಗ್ ಬಾಸ್ ಈ ಸೀಸನ್ ವಿನ್ನರ್ ಆಗಿ ರಾಕೇಶ್ ಅಡಿಗ ಗೆಲ್ಲಬೇಕು ಎಂದು ದಿವ್ಯಾ ಸುರೇಶ್ ಮಾತನಾಡಿದ್ದಾರೆ.‌

    ನಟಿ ದಿವ್ಯಾ ಸುರೇಶ್ ಇದೀಗ `ತ್ರಿಪುರ ಸುಂದರಿ’ ಸೀರಿಯಲ್ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. ಈ ಹಿಂದೆ ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯಾ ರಂಜಿಸಿದ್ದರು. ಫಿನಾಲೆಯ ಬೆನ್ನಲ್ಲೇ ಬಿಗ್ ಬಾಸ್ ಸೀಸನ್ 9ರಲ್ಲಿ ರಾಕೇಶ್ ಅಡಿಗ ಗೆಲ್ಲಬೇಕು, ಆದರೆ ನನಗೆ ರೂಪೇಶ್ ಶೆಟ್ಟಿ ಇಷ್ಟ ಎಂದು ಮಾತನಾಡಿದ್ದಾರೆ.

    ನನ್ನ ಗೆಳತಿ ದಿವ್ಯಾ ಉರುಡುಗ ಕೂಡ ಇದ್ದಾರೆ. ಆದರೆ ಗೊತ್ತಿಲ್ಲ ಯಾರು ಗೆಲ್ಲುತ್ತಾರೆ ಅಂತಾ ಹೇಳೋಕೆ ಆಗಲ್ಲ. ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ. ಇನ್ನೂ ನಟಿ ದಿವ್ಯಾ ಸುರೇಶ್‌ ಮತ್ತು ರಾಕೇಶ್‌ ಅಡಿಗ ಈ ಹಿಂದೆ ಪ್ರೀತಿಸುತ್ತಿದ್ದರು. ಕೆಲವು ವೈಯಕ್ತಿಕ ಕಾರಣಗಳಿಂದ ಬ್ರೇಕ್‌ ಅಪ್‌ ಆಗಿದೆ.

    ಡಿಸೆಂಬರ್ 30 ಮತ್ತು 31ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ದಿವ್ಯಾ ಎಲಿಮಿನೇಷನ್ ನಂತರ ಈಗ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಯಾರಿಗೆ ಸಿಗಲಿದೆ ಬಿಗ್ ಬಾಸ್ ವಿನ್ನರ್ ಪಟ್ಟ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಈಡೇರಲಿಲ್ಲ ಅಮೂಲ್ಯ ಬಗ್ಗೆ ರಾಕೇಶ್ ಕಂಡ ಕನಸು

    ಕೊನೆಗೂ ಈಡೇರಲಿಲ್ಲ ಅಮೂಲ್ಯ ಬಗ್ಗೆ ರಾಕೇಶ್ ಕಂಡ ಕನಸು

    ಬಿಗ್ ಬಾಸ್ ಮನೆಯ (Bigg Boss House) ಲವ್ ಬರ್ಡ್ಸ್ (Love Birds) ಆಗಿ ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ ಗೌಡ (Amulya Gowda) ಹೈಲೈಟ್ ಆಗಿದ್ದರು. ಇಬ್ಬರ ಲವ್ವಿ ಡವ್ವಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅಮೂಲ್ಯ ಎಲಿಮಿನೇಷನ್‌ಗೂ ಮುಂಚೆ ರಾಕಿ, ಅಮ್ಮುಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಆದರೆ ಈಗ ಆ ಕನಸು ಕನಸಾಗಿಯೇ ಉಳಿದಿದೆ. 13ನೇ ವಾರಕ್ಕೆ ಅಮೂಲ್ಯ ಔಟ್ ಆಗಿದ್ದಾರೆ.

    ಅಮೂಲ್ಯ ಗೌಡ (Amulya Gowda) ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದವರು. ರಾಕೇಶ್ ಜೊತೆಗಿನ ಒಡನಾಟದ ವಿಷ್ಯವಾಗಿ ಹೈಲೈಟ್ ಆಗಿದ್ದರು. ರಾಕೇಶ್ ಅಡಿಗ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋದಾಗ ಅಮೂಲ್ಯಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಬೆಳದಿಂಗಳ ಕಗ್ಗತ್ತಲು, ರಾತ್ರಿಯೆಲ್ಲಾ ಹೊರಗೆ ಮಾತನಾಡುವ ಖುಷಿಯೇ ಬೇರೇ, ಇಷ್ಟು ದಿನ ಹೇಗೋ ಆಯ್ತು. ಆದರೆ ಬಿಗ್ ಬಾಸ್‌ನ ಕೊನೆಯ ಕ್ಷಣಗಳನ್ನ ಫೀಲ್ ಮಾಡಬೇಕೆಂದು ರಾಕಿ ಆಸೆಪಟ್ಟಿದ್ದರು. ಈ ಬಗ್ಗೆ ಅಮ್ಮು ಬಳಿ ಮಾತನಾಡಿದ್ದರು. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ಹೊರಗೆ ಮಲಗುವುದು ಎಷ್ಟು ಚೆಂದ ಇರುತ್ತೆ ಗೊತ್ತಾ. ಶನಿವಾರ ರಾತ್ರಿ ಮಲಗೋಣಾ ಎಂದಾಗ ಅಮೂಲ್ಯ, “ಓಕೆ ಡನ್ ಬಟ್ ಎರಡು ಬೆಡ್ ಇಲ್ಲ ಬಾಬಾ” ಎಂದಿದ್ದಾರೆ. ಆಗ ರಾಕಿ, ಬೆಡ್ ಸೆಟಪ್ ಮಾಡಿಕೊಳ್ಳೋಣಾ. ಅದೇನು ಅಷ್ಟೊಂದು ಕಷ್ಟವೇ ಅಲ್ಲ. ಎಷ್ಟೊಂದು ಪ್ರಾಪರ್ಟಿಸ್ ಇದೆ. ಅದೇನು ದೊಡ್ಡ ವಿಷ್ಯಾನಾ ಎಂದಿದ್ದರು. ಅಷ್ಟರಲ್ಲಿ ಅಮೂಲ್ಯ ಗೌಡ ಎಲಿಮಿನೇಟ್ (Elimination) ಆಗಿ ಹೊರಬಂದರು.

    ಅಮೂಲ್ಯ ಎಲಿಮಿನೇಷನ್ ರಾಕೇಶ್‌ಗೆ ಶಾಕ್ ಕೊಟ್ಟಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅಮ್ಮು ಅನುಪಸ್ಥಿತಿಯನ್ನು ರಾಕೇಶ್ ನೆನಪು ಮಾಡಿಕೊಳ್ತಿದ್ದಾರೆ. ಸದ್ಯ ಫಿನಾಲೆಗೆ ಲಗ್ಗೆ ಇಟ್ಟಿರುವ ಕಾರಣ, ಆಟದ ಕಡೆಗೂ ಗಮನ ಕೊಡ್ತಿದ್ದಾರೆ. ಅಂತಿಮ ಹಣಾಹಣಿಗೆ ಕೇವಲ ಐದು ದಿನ ಬಾಕಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ದೊಡ್ಮನೆಯ ಆಟ 93 ದಿನಗಳನ್ನ ಪೂರೈಸಿ ಫಿನಾಲೆಯತ್ತ ಲಗ್ಗೆ ಇಡುತ್ತಿದೆ. ಈ ವಾರ ಡಬಲ್ ಎಲಿಮಿನೇಷನ್ ಸ್ಪರ್ಧಿಗಳ ಜೊತೆ ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ಹಾಗೆಯೇ ಫಿನಾಲೆ ಅಖಾಡಕ್ಕೆ ಆರು ಮಂದಿ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಶೀಘ್ರವೇ ಮತ್ತೊಂದು ಎಲಿಮಿನೇಷನ್ ನಡೆಯಲಿದೆ.

    ಬಿಗ್ ಬಾಸ್ ಮನೆಯ (Bigg Boss House) ಆಟ ಸಾಕಷ್ಟು ಟ್ವಿಸ್ಟ್ಗಳನ್ನ ಪಡೆದು ಅಂತಿಮ ಹಂತದತ್ತ ಮುನ್ನುಗ್ಗುತ್ತಿದೆ. ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಅಮೂಲ್ಯ ಗೌಡ (Amulya Gowda) ಮತ್ತು ಅರುಣ್ ಸಾಗರ್ (Arun Sagar) ಎಲಿಮಿನೇಷನ್ ನಂತರ ಆರು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಹೆಜ್ಜೆ ಇಟ್ಟಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ ನಡುವೆ ಸ್ಪರ್ಧೆ ಮುಂದುವರೆದಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ

    ಸುದೀಪ್ ಅವರು ಬಹಳ ಲವಲವಿಕೆಯಿಂದ `ಬಿಗ್ ಬಾಸ್ ಸೀಸನ್ 9′ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಫಿನಾಲೆಯಲ್ಲಿ 5 ಜನರ ನಡುವೆ ಹಣಾಹಣಿ ನಡೆಯಲಿದೆ. ಅಂತಿಮವಾಗಿ ಒಬ್ಬರು ಟ್ರೋಫಿ ಎತ್ತಲಿದ್ದಾರೆ. ಸದ್ಯ ಮನೆಯಲ್ಲಿ ಇರುವ 6 ಜನರ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಔಟ್ ಆಗಲೇಬೇಕಿದೆ. ಆ ಎಲಿಮಿನೇಷನ್ ತುಂಬ ಅಚ್ಚರಿಯಾಗಿ ಇರಲಿದೆ. ಅದಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.

    ಇನ್ನೂ ಇಬ್ಬರು ಫೆನಲಿಸ್ಟ್ ಆಗಿ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಎಂಟ್ರಿ ಕೊಟ್ಟಿದ್ದರು. ಇಬ್ಬರ ಮಧ್ಯೆಯೂ ಸಖತ್ ಪೈಪೋಟಿಯಿದೆ. ಟಾಪ್ 5 ಸ್ಪರ್ಧಿಗಳು ಯಾರಾಗ್ತಾರೆ? ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡಿ ವಿಚಾರಕ್ಕೆ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್

    ಕನ್ನಡಿ ವಿಚಾರಕ್ಕೆ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್

    ಬಿಗ್ ಬಾಸ್ ಮನೆಯ (Bigg Boss House) ಆಟ ಕಡೆಯ ಘಟ್ಟದಲ್ಲಿದೆ. ಹೀಗಿರುವಾಗ ವಾರಾಂತ್ಯದ ಚರ್ಚೆಯಲ್ಲಿ ಕನ್ನಡಿಯ ಬಗ್ಗೆ ಸುದೀಪ್ (Sudeep) ಮಾತನಾಡಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty) ಯಾರ ಜೊತೆ ಮಾತನಾಡುತ್ತಾ ಇದ್ರೂ, ಕನ್ನಡಿಯನ್ನೇ ನೋಡ್ತಾರಂತೆ. ಈ ಕುರಿತು ಕಿಚ್ಚನ ಮುಂದೆ ಮನೆಯಲ್ಲಿ ಚರ್ಚೆ ನಡೆದಿದೆ.

    ದೊಡ್ಮನೆಯ ವಾರಾಂತ್ಯದ ಚರ್ಚೆಯಲ್ಲಿ ಯೆಸ್ ಆರ್ ನೋ ರೌಂಡ್‌ನಲ್ಲಿ ರೂಪೇಶ್ ಶೆಟ್ಟಿ ಯಾರ ಜೊತೆ ಮಾತನಾಡುತ್ತಾ ಇದ್ರೂ, ಕನ್ನಡಿಯನ್ನೇ ನೋಡ್ತಾರೆ ಎಂದು ಸುದೀಪ್ ಕೇಳಿದ್ದಾರೆ. ಸ್ಪರ್ಧಿಗಳು ಈ ಕುರಿತು ಕೊಟ್ಟಿರುವ ಬಗೆ ಬಗೆಯ ಉತ್ತರಗಳು ಪ್ರೇಕ್ಷಕರಿಗೆ ಮತ್ತಷ್ಟು ನಗುವಿನ ಕಿಕ್ ಕೊಟ್ಟಿದೆ.

    ರೂಪೇಶ್‌ಗೆ ಕನ್ನಡಿ ನೋಡೋದು ಇಷ್ಟ, ಯಾವಾಗಲೂ ಪಾತ್ರೆ ತೊಳೆಯುವಾಗ ಕನ್ನಡಿ ನೋಡ್ತಾರೆ ಎಂದು ರಾಕೇಶ್ ಅಡಿಗ (Rakesh Adiga) ಹೇಳಿದ್ದಾರೆ. ಪಾತ್ರೆ ತೊಳೆಯುವಾಗ ಕನ್ನಡಿಯಲ್ಲಿ ಯಾರ್ಯಾರೋ ಕಾಣ್ತಾರೆ ಹಾಗಾಗಿ ರೂಪೇಶ್‌ ಕನ್ನಡಿ ನೋಡುತ್ತಾರೆ ಎಂದು ಶೆಟ್ರ ಕಾಲೆಳೆದಿದ್ದಾರೆ ಸುದೀಪ್. ಇದನ್ನೂ ಓದಿ: ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಇಷ್ಟು ಸೀರಿಯಸ್ ಟಾಪಿಕ್ ಮಧ್ಯೆ ನಾನ್ಯಾಕೆ ಕನ್ನಡಿ ನೋಡ್ತೀನಿ ಅಂತಾ ನನಗೂ ಅನಿಸಿದೆ ಎಂದು ರೂಪೇಶ್ ಹೇಳಿದ್ರೆ, ನಿಮ್ಮೊಬ್ಬರಿಗೆ ಅಲ್ಲಾ ಎಲ್ಲರಿಗೂ ಅನಿಸಿದೆ ಎಂದು ಶೆಟ್ರ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್, ಆಗ ನನಗೆ ಈ ರೀತಿಯ ಅನುಭವ ಆಗಿಲ್ಲ ಎಂದು ರಾಜಣ್ಣ ಮಾತನಾಡಿದ್ದಾರೆ. ಅದಕ್ಕೆ ಕಿಚ್ಚ, ನೀವು ಕನ್ನಡಿ ನೋಡುವ ಅವಕಾಶ ಕೊಡಲ್ಲ ಎಂದು ಕಿಚ್ಚ ಹೇಳಿದ್ದಾರೆ.

    ನಾನು ಮೇಕಪ್ ಹಾಕೋವಾಗಲೂ ಕನ್ನಡಿ ನೋಡಲ್ಲ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಅದಕ್ಕೆ ಸುದೀಪ್, ನಾನು ಕೇಳಿದ್ದು ಕನ್ನಡಿ ಬಗ್ಗೆ ಮೇಕಪ್ ಬಗ್ಗೆ ಅಲ್ಲ ಎಂದು ರೂಪೇಶ್ ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್

    ಇಬ್ಬರು ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್

    ಬಿಗ್ ಬಾಸ್ ಮನೆಯ (Bigg Boss House) ಆಟ, ಅಂತಿಮ ಹಂತಕ್ಕೆ ಬಂದು ತಲುಪಿದೆ. ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಫಿನಾಲೆಗೆ ಕೆಲವೇ ದಿನಗಳಿರುವ ಈ ಸಮಯದಲ್ಲಿ ಫಿನಾಲೆಗೆ ಹೋಗುವ ಸ್ಪರ್ಧಿಗಳ ಹೆಸರನ್ನ ಕಿಚ್ಚ ಸುದೀಪ್ ಘೋಷಿಸಿದ್ದಾರೆ.

    ದಿನದಿಂದ ದಿನಕ್ಕೆ ಹಲವು ಟ್ವಿಸ್ಟ್‌ಗಳನ್ನ ಪಡೆದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಇದೀಗ 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ ಫಿನಾಲೆಗೆ ಹೋಗುವ ಇಬ್ಬರು ಸ್ಪರ್ಧಿಗಳ ಹೆಸರನ್ನ ಕಿಚ್ಚ ಸುದೀಪ್ (Kiccha Sudeep) ಅನೌನ್ಸ್ ಮಾಡಿದ್ದಾರೆ. ಅಮೂಲ್ಯ ಗೌಡ ಎಲಿಮಿನೇಷನ್ ನಡುವೆ ಫಿನಾಲೆ ಹೋಗುವ ಫೈನಲಿಸ್ಟ್‌ಗಳ ಹೆಸರನ್ನ ಕಿಚ್ಚ ಹೇಳಿದ್ದಾರೆ.

    ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಡುವ ಮೊದಲ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ (Roopesh Shetty) ಹೊರಹೊಮ್ಮಿದ್ದಾರೆ. ರಾಕೇಶ್ ಅಡಿಗ (Rakesh Adiga) ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ (Bigg Boss) ಮೋಡಿ ಮಾಡಿದ್ದ ರೂಪೇಶ್ ಮತ್ತು ರಾಕೇಶ್ ಫಿನಾಲೆಯ ಕದ ತಟ್ಟಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಚಲಪತಿ ರಾವ್ ಹೃದಯಾಘಾತದಿಂದ ನಿಧನ

    ಇನ್ನೂ ಈ ವಾರ ಬಿಗ್ ಬಾಸ್, ಬಿಗ್ ಶಾಕ್ ಕೊಟ್ಟಿದ್ದಾರೆ. ಡಬಲ್ ಎಲಿಮಿನೇಷನ್ ಮಾಡುವ ಮೂಲಕ ದೊಡ್ಮನೆಯಿಂದ ಅಮೂಲ್ಯ ಗೌಡ (Amulya Gowda) ಮತ್ತು ಅರುಣ್ ಸಾಗರ್(Arun Sagar) ಅವರ ಆಟ ಫಿನಾಲೆಗೂ ಮುನ್ನ ಅಂತ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    ಬಿಗ್ ಬಾಸ್ (Bigg Boss) ಮನೆಯ ಆಟ ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಈ ಸೀಸನ್ 95 ದಿನಗಳನ್ನು ಪೂರೈಸಿ, ಗ್ರ್ಯಾಂಡ್ ಫಿನಾಲೆಯತ್ತ ಲಗ್ಗೆ ಇಡುತ್ತಿದೆ. ಇದೀಗ ರಾಕೇಶ್ ಅಡಿಗ (Rakesh Adiga) ಎರಡನೇ ಬಾರಿ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋಗಿದ್ದಾರೆ. ಮನೆಯ ಸದಸ್ಯರು ಈ ವಾರ ಅವರಿಗೆ ಕಳಪೆ ಹಣೆಪಟ್ಟಿ ಕಟ್ಟಿದ್ದಾರೆ.

    ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 13ನೇ ವಾರ ಸರಣಿ ಟಾಸ್ಕ್‌ಗಳನ್ನು ‘ಬಿಗ್ ಬಾಸ್’ ನೀಡಿದ್ದರು. ಟಾಸ್ಕ್‌ಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿತ್ತು. ಟಾಸ್ಕ್‌ಗಳನ್ನು ಎಷ್ಟು ಬೇಗ ಮುಗಿಸುತ್ತಾರೆ ಎಂಬ ಆಧಾರದ ಮೇಲೆ ಸ್ಪರ್ಧಿಗಳಿಗೆ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಯವರ್ಧನ್ ಗುರೂಜಿ (Aryardhan Guruji) ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಇನ್ನೂ, ಒಂದು ಆಟವನ್ನ ಸಂಪೂರ್ಣವಾಗಿ ಮುಗಿಸದೆ ಗಿವಪ್ ಮಾಡಿದ ರಾಕೇಶ್ ಅಡಿಗ ‘ಕಳಪೆ’ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಟಾಸ್ಕ್ ವೊಂದರಲ್ಲಿ ರಾಕಿ ಗಿವಪ್ ಮಾಡಿದ್ದರು. ಇದನ್ನ ಆಧರಿಸಿ‌ ಮನೆಮಂದಿ ಕಳಪೆ ಹಣೆಪಟ್ಟಿ ನೀಡಿದ್ದರು. ಈ ವಾರ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ ಗುರೂಜಿ ಪರವಾಗಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರುಣ್ ಸಾಗರ್ ವೋಟ್ ಮಾಡಿದರು. ಹೀಗಾಗಿ ಈ ವಾರದ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಆರ್ಯವರ್ಧನ್ ಗುರೂಜಿ ಪಾಲಾಯಿತು.

    ಇನ್ನೂ ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳಿಗೆ ಈ ವಾರ ಮನೆ ಆಟ ಕೊನೆಯಾಗಲಿದೆ. ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಸದ್ಯ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ.

    ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಈಗ ಮನೆಯಲ್ಲಿ ಇರುವುದು ಎಂಟು ಜನರು ಮಾತ್ರ. ಉಳಿದಿರುವುದು ಎರಡೇ ವಾರ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಿನಾಲೆಯ ವೇದಿಕೆಯ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದ ಕುತೂಹಲ.

    ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಇವರಲ್ಲಿ ಯಾರು ಈ ವಾರ ಆಚೆ ಬರುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]