Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬಿಗ್ ಬಾಸ್ ಸೀಸನ್ 9ರ ಆಟಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ (Roopesh Shetty) ಈ ಸೀಸನ್‌ನ ವಿನ್ನರ್ ಆಗಿದ್ದು, ರಾಕೇಶ್ ಅಡಿಗ (Rakesh Adiga) ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಲವ್ ಬರ್ಡ್ಸ್ ಆಗಿ ರಾಕೇಶ್, ಅಮೂಲ್ಯ ಗುರುತಿಸಿಕೊಂಡಿದ್ದರು. ಈ ಶೋ ಬಳಿಕವೂ ಇವರಿಬ್ಬರ ಸ್ನೇಹ ಮುಂದುವರೆದಿದೆ. ರಾಕಿ ಮತ್ತು ಅಮ್ಮು ಮೀಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದೊಡ್ಮನೆಯಲ್ಲಿ ರೂಪೇಶ್ ಮತ್ತು ಸಾನ್ಯ, ರಾಕೇಶ್ ಮತ್ತು ಅಮೂಲ್ಯ ಪ್ರೇಮ ಪಕ್ಷಿಗಳಾಗಿ ಹೈಲೈಟ್ ಆಗಿದ್ದಾರೆ. ಒಟಿಟಿಯಲ್ಲಿ ಸೋನು ಗೌಡ (Sonu Srinivas Gowda) ಜೊತೆ ರಾಕೇಶ್ ಹೈಲೈಟ್ ಆಗಿದ್ದರು. ರಾಕೇಶ್ ಕೂಡ ಟಿವಿ ಬಿಗ್ ಬಾಸ್‌ನ (Bigg Boss) ಫೈನಲಿಸ್ಟ್ ಆದಾಗ ಸೋನು ಸಂಭ್ರಮಿಸಿದ್ದರು. ಹೊರಗಿನಿಂದಲೇ ಸೋನು ರಾಕಿಗೆ ಬೆಂಬಲ ನೀಡುತ್ತಲೇ ಬಂದಿದ್ದರು. ಈಗ ಸೋನುನ ಬಿಟ್ಟು ಅಮೂಲ್ಯ ಜೊತೆ ರಾಕೇಶ್ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

ಶೋನಲ್ಲಿ ನಮ್ಮಿಬ್ಬರ ನಡುವೆ ಇಂತಹದೇನಿಲ್ಲ ಎಂದು ಹೇಳುತ್ತಲೇ ಇದ್ದರು ಈ ಜೋಡಿ. ಶೋಗೆ ದಿ ಎಂಡ್ ಸಿಗೋಕು ಅಮೂಲ್ಯನ ರಾಕಿ ಭೇಟಿ ಮಾಡಿದ್ದಾರೆ. ಈ ಕುರಿತು ನಟಿ ಅಮೂಲ್ಯ ತಮ್ಮ ಫೋಟೋ ಶೇರ್ ಮಾಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
View this post on Instagram
ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ ಗೌಡ (Amulya Gowda) ಅವರ ಮಧ್ಯೆ ಇರೋದು ಸ್ನೇಹಾನಾ ಅಥವಾ ಪ್ರೀತಿನಾ. ಮದುವೆಯ ಬಗ್ಗೆ ಈ ಜೋಡಿ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬಿಗ್ ಬಾಸ್ ಮನೆಯ (Bigg Boss House) ಪ್ರೇಮ ಪಕ್ಷಿಗಳಾಗಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer) ಹೈಲೈಟ್ ಆಗಿದ್ದರು. ಬಿಗ್ ಬಾಸ್ ಮನೆಯ ಆಟ ಮುಗಿದ ಮೇಲೂ ಈ ಜೋಡಿ ಸಖತ್ ಸುದ್ದಿಯಲ್ಲಿದೆ. ಹೀಗಿರುವಾಗ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಅಡಿಗ (Rakesh Adiga) ಸ್ಪೋಟಕ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರೂಪೇಶ್, ಸಾನ್ಯ ಜೊತೆ ರಾಕೇಶ್ ಅಡಿಗ ಕೂಡ ಕಾಣಿಸಿಕೊಂಡಿದ್ದರು. ಇನ್ನೂ ರೂಪೇಶ್ ಮತ್ತು ಸಾನ್ಯ ಹಲವು ಬಾರಿ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ನಮ್ಮಿಬ್ಬರ ನಡುವೆ ಬೇರೇ ಎನಿಲ್ಲ ಎಂದು ಹೇಳಿದ್ದರು. ಆದರೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವರ ನಡುವೆ ಪ್ರೇಮವಿದೆ ಎಂದೇ ವೀಕ್ಷಕರು ಊಹಿಸಿದ್ದರು. ಈ ಬಗ್ಗೆ ರಾಕೇಶ್ ಅಡಿಗ ಕೂಡ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

ನಾನು ಒಟಿಟಿಯಲ್ಲಿರುವಾಗಲೇ ರೂಪೇಶ್ (Roopesh Shetty) ಮತ್ತು ಸಾನ್ಯಗೆ ಕೇಳಿದ್ದೆ, ನೀವಿಬ್ಬರು ಡೇಟಿಂಗ್ ಮಾಡ್ತೀರಾ ಅಂತಾ. ಇಲ್ಲಾ ಅಂತಾನೇ ಇಬ್ಬರು ಉತ್ತರ ಕೊಟ್ಟಿದ್ದರು. ಒಟಿಟಿ ಫಿನಾಲೆ ಬಳಿಕ ರೆಸಾರ್ಟ್‌ನಲ್ಲಿರುವಾಗ(Resort) 10 ದಿನ ಇರುವಾಗ ಅಲ್ಲಿ ಮೈಕ್ ಮತ್ತು ಕ್ಯಾಮೆರಾ ಇರಲಿಲ್ಲ ಅಲ್ಲೂ ಕೂಡ ನಾನು ಕೇಳಿದ್ದೀನಿ. ನೀವಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದೀರಾ ಅಂತಾ, ಆಗ ಇಲ್ಲಾ ಅಂತಾ ಇಬ್ಬರು ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದರು.
ಒಟಿಟಿಯಲ್ಲಿರುವಾಗಲೇ ಇಬ್ಬರು ರೂಪೇಶ್ ಮತ್ತು ಸಾನ್ಯ ಒಟ್ಟಿಗೆ ಇದ್ದರು. ರೆಸಾರ್ಟ್‌ನಲ್ಲಿ ಇಬ್ಬರ ಬಾಂಡಿಂಗ್ ಮತ್ತಷ್ಟು ಸ್ಟ್ರಾಂಗ್ ಆಯ್ತು. ಸೀಸನ್ 9ರಲ್ಲಿ ಒಬ್ಬರಿಗೊಬ್ಬರು ಸರ್ಪೋಟ್ ಸಿಸ್ಟಮ್ ಆಗಿದ್ದರು. ಸಾನ್ಯ ಮೇಲೆ ರೂಪೇಶ್‌ಗೆ ತುಂಬಾ ನಂಬಿಕೆಯಿದೆ. ಅವಳು ಏನೇ ತನ್ನ ಒಳ್ಳೆಯದಕ್ಕೆ ಎನ್ನುವ ವಿಶ್ವಾಸವಿದೆ. ಹಾಗಾಗಿ ಸಾನ್ಯ ಎಲಿಮಿನೇಷನ್‌ನ (Elimination) ರೂಪೇಶ್‌ಗೆ ಒಪ್ಪಿಕೊಳ್ಳೋಕೆ ಸಾಧ್ಯವಾಗಲಿಲ್ಲ ಇದಾದ ಒಂದು ವಾರದ ಬಳಿಕ ರೂಪೇಶ್ ಶೆಟ್ಟಿ ಬದಲಾದರು. ಟಫ್ ಫೈಟ್ ಕೊಟ್ರು ಎಂದು ರಾಕೇಶ್ ಅಡಿಗ ಮಾತನಾಡಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದರೆ, ರಾಕೇಶ್ ಅಡಿಗ(Rakesh Adiga) ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯಿಂದ ಹೊರಬರುತ್ತಲೇ ರಾಕೇಶ್ ಅಡಿಗ ಅವರಿಗೆ ಸೋನು ಗೌಡ 9Sonu Srinivas Gowda) ಜೊತೆಗಿನ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಸೋನು ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ರಾಕೇಶ್ ಅವರ ನಡೆಯೇನು ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

`ಜೋಶ್’ (Josh Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ರಾಕೇಶ್ ಅಡಿಗ ಈಗ ಬಿಗ್ ಬಾಸ್ ಸೀಸನ್ 9ರ ರನ್ನರ್ ಅಪ್ ಆಗಿ ಸೌಂಡ್ ಮಾಡ್ತಿದ್ದಾರೆ. ಇನ್ನೂ ಬಿಗ್ ಬಾಸ್ ಒಟಿಟಿಯಲ್ಲಿ ಸೋನು ಮತ್ತು ರಾಕೇಶ್ ಅಡಿಗ ಅವರ ಸ್ನೇಹ ಹೈಲೈಟ್ ಆಗಿತ್ತು. ಇಬ್ಬರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ತಮ್ಮ ಮತ್ತು ಸೋನು ನಡುವಿನ ಗೆಳೆತನದ ಬಗ್ಗೆ ರಾಕೇಶ್ ಮಾತನಾಡಿದ್ದಾರೆ. ಸೋನು (Sonu Gowda) ಜೊತೆ ರಾಕೇಶ್ ಮದುವೆಯಾಗುತ್ತಾರಾ ಎಂಬುದಕ್ಕೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಸೋನು ಕುಟುಂಬದ (Family) ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ಸೋನುನೇ ಉತ್ತರ ಕೊಡುತ್ತಾರೆ. ಸೋನುಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು. ಮದುವೆ ಬಗ್ಗೆ ಮಾತು ಬಂದರೆ ನೋ ಅಂತಾನೇ ಹೇಳ್ತೀನಿ. ಇನ್ನೂ ಸೋನು ಗೌಡ ಅವರ ಮನೆ ಕಡೆಯಿಂದ ಮದುವೆ ಮಾತು ಬರೋದೇ ಇಲ್ಲಾ ಎಂದು ರಾಕೇಶ್ ಹೇಳಿದ್ದಾರೆ. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ
ಈ ಮೂಲಕ ಸೋನು ಜೊತೆಗಿನ ಎಲ್ಲಾ ವದಂತಿಗೂ ನಟ ರಾಕೇಶ್ ಅಡಿಗ ಬ್ರೇಕ್ ಹಾಕಿದ್ದಾರೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಕನ್ನಡದ ಬಿಗ್ ಬಾಸ್ ಸೀಸನ್ 9ರ ಟ್ರೋಫಿ ರೂಪೇಶ್ ಶೆಟ್ಟಿ ಪಾಲಾಗಿದೆ. ಆ ಟ್ರೋಫಿಯ ಜೊತೆಗೆ ಅವರು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಟ್ರೋಫಿ ರಾಕೇಶ್ ಅಡಿಗ ಕೈಯಲ್ಲಿ ಇರಬೇಕಿತ್ತು ಎನ್ನುವ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಟ್ರೋಫಿಗೆ ರಾಕೇಶ್ ಅರ್ಹವಾದ ಸ್ಪರ್ಧಿ. ಅವರು 99 ದಿನಗಳ ಕಾಲವೂ ಮನರಂಜಿಸುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ ಕೋಪ ಮಾಡಿಕೊಳ್ಳದೇ ಆಡಿದ್ದಾರೆ. ಹಾಗಾಗಿ ಟ್ರೋಫಿಗೆ ಅವರು ಅರ್ಹರು ಎಂದು ಸಾಕಷ್ಟು ಜನ ಪೋಸ್ಟ್ ಮಾಡುತ್ತಿದ್ದಾರೆ.

ಹಾಗಂತ ರೂಪೇಶ್ ಶೆಟ್ಟಿ ಆಟ ಕಳಪೆಯೇನೂ ಇರಲಿಲ್ಲ. ಅವರೂ ಈ ಟ್ರೋಫಿಗೆ ಅರ್ಹರೇ ಆಗಿದ್ದಾರೆ. ಮನೆಯಲ್ಲಿ ಇದ್ದಷ್ಟು ದಿನವೂ ಒಳ್ಳೆಯ ರೀತಿಯಲ್ಲೇ ಆಟವಾಡಿದ್ದಾರೆ. ಪ್ರತಿ ಟಾಸ್ಕ್ ನಲ್ಲೂ ಉತ್ತಮ ಪ್ರದರ್ಶನ ಮಾಡಿದ್ದಾರೆ. ಆದರೆ, ರಾಕೇಶ್ ಗೆ ಇದ್ದ ತಾಳ್ಮೆ ಮತ್ತು ಜಾಣನಡೆ ರೂಪೇಶ್ ಅವರಲಿಲ್ಲ ಇರಲಿಲ್ಲ ಎನ್ನುವುದು ಕೆಲವರ ವಾದ. ಒಂದು ಕಡೆ ರಾಕೇಶ್ ಬೆಂಬಲಿಗರು ಈ ಟ್ರೋಫಿ ರಾಕೇಶ್ ಗೆ ಬರಬೇಕಿತ್ತು ಎಂದರೆ, ಇನ್ನೂ ಹಲವರು ರೂಪೇಶ್ ಗೆಲುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ಸೂಕ್ತ ಸ್ಪರ್ಧಿ ಆಗಿದ್ದರು. ಅವರಿಗೆ ಜನರ ಬೆಂಬಲವೂ ಇತ್ತು. ಸಾಕಷ್ಟು ವೋಟುಗಳನ್ನು ಕೂಡ ಪಡೆದಿದ್ದಾರೆ. ಜನಪ್ರಿಯ ವ್ಯಕ್ತಿ ಕೂಡ ಅವರಿಗಿದ್ದಾರೆ. ಈ ಆಯ್ಕೆಯಲ್ಲಿ ಯಾವುದೇ ಮೋಸ ಅಥವಾ ಅನುಮಾನವಿಲ್ಲ ಎಂದು ರೂಪೇಶ್ ಬೆಂಬಲಿಗರು ಉತ್ತರಿಸುತ್ತಿದ್ದಾರೆ. ಈ ಪರ ಮತ್ತು ವಿರೋಧದ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಿ ಹೋಗಿವೆ. ಪರಸ್ಪರರು ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಗಳನ್ನು ಹಾಕುತ್ತಾ ವೈರಲ್ ಮಾಡುತ್ತಿದ್ದಾರೆ.

ರೂಪೇಶ್ ಮತ್ತು ರಾಕೇಶ್ ಇಬ್ಬರೂ ಈ ಟ್ರೋಫಿಗೆ ಅರ್ಹರೇ ಆಗಿದ್ದಾರೆ. ಆದರೆ, ಟ್ರೋಫಿ ಒಬ್ಬರಿಗೆ ಸಿಗಬೇಕು. ಯಾರಿಗೆ ಟ್ರೋಫಿ ಹೋಗಬೇಕು ಎನ್ನುವುದಕ್ಕೆ ಬಿಗ್ ಬಾಸ್ ಗೆ ಅದರದ್ದೇ ಆದ ನಿಯಮಾವಳಿಗಳು ಇರುತ್ತವೆ. ಹೀಗಾಗಿ ರೂಪೇಶ್ ಕೈಯಲ್ಲಿ ಬಿಗ್ ಬಾಸ್ ಗೆಲುವಿನ ಟ್ರೋಫಿ ಇದೆ. ಚರ್ಚೆ ಕೂಡ ಮುಂದುವರೆದಿದೆ.

ಬಿಗ್ ಬಾಸ್ ಆಟಕ್ಕೆ (Bigg Boss) ತೆರೆ ಬಿದ್ದಿದೆ. 100 ದಿನಗಳ ದೊಡ್ಮನೆ ಆಟ ಪೂರ್ಣಗೊಳಿಸಿ, ಕರಾವಳಿ ಕುವರ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಇದೀಗ ತಮ್ಮ ಗೆಲುವನ್ನ ಅಭಿಮಾನಿಗಳಿಗೆ ರೂಪೇಶ್ ಶೆಟ್ಟಿ (Roopesh Shetty) ಅರ್ಪಿಸಿದ್ದಾರೆ. ಗೆದ್ದ ನಂತರ ರೂಪೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ ಎಂದು ರೂಪೇಶ್ ಮಾತನಾಡಿದ್ದಾರೆ.

ಒಟಿಟಿ ಮತ್ತು ಟಿವಿ ಬಿಗ್ ಬಾಸ್ (Bigg Boss) 142 ದಿನಗಳ ಆಟದಲ್ಲಿ ರೂಪೇಶ್ ಶೆಟ್ಟಿ (Roopesh Shetty) ವಿಜೇತರಾಗಿದ್ದಾರೆ. ಒಟಿಟಿಯಲ್ಲೂ ಟಾಪರ್ ಆಗಿದ್ದ ರೂಪೇಶ್ ಈಗ ಬಿಗ್ ಬಾಸ್‌ನಲ್ಲೂ ವಿನ್ನರ್ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗಗೆ ಸೆಡ್ಡು ಹೊಡೆದು ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ.

ನಾನು ಕೊನೆಗೂ ವಿನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ. ಬಿಗ್ ಬಾಸ್ ಒಟಿಟಿ ಸೀಸನ್‌ನಿಂದ ಇಲ್ಲಿಯ ತನಕ 142 ದಿನಗಳ ಜರ್ನಿ ಎಂದರೆ ಸುಲಭ ಅಲ್ಲ. ನನಗೆ ಸಪೋರ್ಟ್ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್. ಈ ಪಯಣದಲ್ಲಿ ಏಳು-ಬೀಳುಗಳು ಇದ್ದವು. ಪ್ರತಿ ಕ್ಷಣದಲ್ಲೂ ನೀವೆಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ರಿ ಎಂದು ವೋಟ್ ಮಾಡಿದ ಎಲ್ಲರಿಗೂ ರೂಪೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ನಾನು ಗೆದ್ದಿಲ್ಲ, ನೀವು ನನ್ನನ್ನು ಗೆಲ್ಲಿಸಿದ್ದೀರಿ ಎಂದು ಹೇಳಿದ್ದಾರೆ.
ಜನರ ವೋಟ್‌ನಿಂದ (Vote) ನನಗೆ ಆತ್ಮವಿಶ್ವಾಸ ಸಿಕ್ತು. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರಿಗೂ ಇನ್ನೂ ಹೆಮ್ಮೆ ಆಗುವಂತೆ ಮಾಡುತ್ತೇನೆ. ನಾನು ಗೆದ್ದಿರುವುದಲ್ಲ, ನೀವು ಗೆಲ್ಲಿಸಿರುವುದು. ಈ ಗೆಲುವು ನಿಮ್ಮಿಂದ. ನಿಮ್ಮ ಪ್ರೀತಿಗೆ ಬರೀ ಮಾತುಗಳಲ್ಲಿ ಥ್ಯಾಂಕ್ಸ್ ಹೇಳಿದರೆ ಕಡಿಮೆ. ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿ ಯಾವಾಗಲೂ ಇರುತ್ತದೆ ಎಂದಿದ್ದಾರೆ ರೂಪೇಶ್ ಶೆಟ್ಟಿ. ಇದನ್ನೂ ಓದಿ: ‘ಬಿಗ್ ಬಾಸ್’ ಫಿನಾಲೆ ವೇದಿಕೆಯ ಮೇಲೆ ಕಣ್ಣೀರಿಟ್ಟಿ ಸುದೀಪ್

ಬಿಗ್ ಬಾಸ್ ವೇದಿಕೆಗೆ ಧನ್ಯವಾದಗಳು. ಸುದೀಪ್ (Sudeep) ಮತ್ತು ಪರಮೇಶ್ವರ್ ಗುಂಡ್ಕಲ್ ಅವರಿಗೆ ಥ್ಯಾಂಕ್ಸ್ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಆಕರ್ಷಕ ಟ್ರೋಫಿ ಜೊತೆಗೆ 60 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
Live Tv
[brid partner=56869869 player=32851 video=960834 autoplay=true]

ಕನ್ನಡ ಬಿಗ್ ಬಾಸ್ (Bigg Boss) ಸೀಸನ್ 9 ನಿನ್ನೆಯಷ್ಟೇ ಫಿನಾಲೆ ಮುಗಿದಿದೆ. ಈ ಬಾರಿ ಫಿನಾಲೆ ವೇದಿಕೆಯನ್ನು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ ಮತ್ತು ದೀಪಿಕಾ ದಾಸ್ ಇದ್ದರು. ಈ ಐವರಲ್ಲಿ ಯಾರ ಕೈಯಲ್ಲಿ ಬಿಗ್ ಬಾಸ್ ಟ್ರೋಫಿ ಇರಲಿದೆ ಎನ್ನುವ ಕುತೂಹಲವಂತೂ ಇತ್ತು. ಕೊನೆಗೂ ರೂಪೇಶ್ ಶೆಟ್ಟಿ ಕೈಗೆ ಬಿಗ್ ಬಾಸ್ ಸೀಸನ್ 9ರ ಟ್ರೋಫಿ ಬಂದಿದೆ. ರನ್ನರ್ ಅಪ್ ಸ್ಥಾನವು ರಾಕೇಶ್ ಅಡಿಗ ಪಾಲಾಗಿದೆ. ಉಳಿದ ಸ್ಥಾನಗಳನ್ನು ದೀಪಿಕಾ ದಾಸ್ ಮತ್ತು ರೂಪೇಶ್ ರಾಜಣ್ಣ ಪಡೆದಿದ್ದಾರೆ. ಹಾಗಾದರೆ, ಯಾರಿಗೆ ಎಷ್ಟು ಮೊತ್ತದ ಬಹುಮಾನ ಬಂದಿದೆ ಎನ್ನುವ ಕುತೂಹಲ ಎಲ್ಲರದ್ದು.

ಸೀಸನ್ 9ರ ಟ್ರೋಫಿ ಎತ್ತಿರುವ ರೂಪೇಶ್ ಶೆಟ್ಟಿ (Rupesh Shetty) ಅವರಿಗೆ ಬರೋಬ್ಬರಿ 60 ಲಕ್ಷ ರೂಪಾಯಿಗಳ ಬಹುಮಾನ (Prize) ವನ್ನು ನೀಡಲಾಗಿದೆ. ರನ್ನರ್ ಅಪ್ ಆಗಿರುವ ರಾಕೇಶ್ ಅಡಿಗಗೆ (Rakesh Adiga) ವಾಹಿನಿಯಿಂದ ಏಳು ಲಕ್ಷ ರೂಪಾಯಿ ಹಾಗೂ ಪ್ರಾಯೋಜಕರ ಅತ್ಯುತ್ತಮ ನಾಯಕ ಬಹುಮಾನವಾಗಿ ಐದು ಲಕ್ಷ ರೂಪಾಯಿ ಒಟ್ಟು 12 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ರಾಕೇಶ್ ಅಡಿಗ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

ಈ ಸೀಸನ್ ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವರು ದೀಪಿಕಾ ದಾಸ್ (Deepika Das). ಅವರಿಗೂ ಕೂಡ ಐದು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗಿದೆ. ನಾಲ್ಕನೇ ಸ್ಥಾನದಲ್ಲಿದ್ದ ರೂಪೇಶ್ ರಾಜಣ್ಣ ಅವರಿಗೆ ಮೂರು ಲಕ್ಷ ರೂಪಾಯಿಗಳು ಬಹುಮಾನ ಬಂದಿದೆ. ಹೀಗೆ ಫಿನಾಲೆ ವೇದಿಕೆಯ ಮೇಲಿದ್ದ ದಿವ್ಯಾ ಉರುಡುಗ ಹೊರತುಪಡಿಸಿ ಬಹುತೇಕರಿಗೆ ಲಕ್ಷ ಲಕ್ಷ ರೂಪಾಯಿ ಬಹುಮಾನ ಬಂದಿದೆ.