Tag: Rakesh Adiga

  • ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಸ್ಯಾಂಡಲ್‌ವುಡ್‌ನ ‘ಜೋಶ್’ (Josh) ಹೀರೋ ರಾಕೇಶ್ ಅಡಿಗ (Rakesh Adiga) ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಅವರ ಲಕ್ಕೂ ಲುಕ್ಕೂ ಎರಡು ಬದಲಾಗಿದೆ. ದೊಡ್ಮನೆಯಿಂದ ಹೊರ ಬಂದ ಮೇಲೆ ರಾಕಿ ಏನ್ಮಾಡ್ತಿದ್ದಾರೆ. ಅಮೂಲ್ಯ ಗೌಡ (Amulya Gowda) ಜೊತೆಗಿನ ಮದುವೆ (Wedding) ರಾಕಿ ಹೇಳೋದೇನು.? ಸ್ವತಃ ರಾಕೇಶ್ ಅಡಿಗ ಅವರೇ ಉತ್ತರಿಸಿದ್ದಾರೆ.

    ದೊಡ್ಮನೆಯಿಂದ ಹೊರ ಬಂದ ಮೇಲೆ ರಾಕೇಶ್ ಅವರು ಸಿನಿಮಾ ಜೊತೆಗೆ ತಮ್ಮ ಯೂಟ್ಯೂಬ್‌ಗೆ ಮೆಡಿಟೇಶನ್ ಸೇರಿದಂತೆ ಹೊಸ ಬಗ್ಗೆ ವಿಚಾರಗಳನ್ನ ಹೇಳಲು ತೆರೆಮರೆಯಲ್ಲಿ ಕೆಲಸ ಮಾಡ್ತಿದ್ದಾರೆ. ತಮ್ಮ ನಿರ್ದೇಶನದ ಜೊತೆ ಹೊಸ ಪ್ರಾಜೆಕ್ಟ್ಗಳನ್ನ ರಾಕೇಶ್ ಒಪ್ಪಿಕೊಂಡಿದ್ದಾರೆ. ಜುಲೈನಲ್ಲಿ `ಜೋಶ್’ ನಟನ ಚಿತ್ರದ ಬಗ್ಗೆ ಗುಡ್ ನ್ಯೂಸ್ ಸಿಗಲಿದೆ.

    ಕಳೆದ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ರಾಕಿ- ಅಮ್ಮು ಜೋಡಿ ನೋಡುಗರಿಗೆ ಮೋಡಿ ಮಾಡಿತ್ತು. ಇವರಿಬ್ಬರ ನಡುವೆ ಏನೋ ಇದೆ ಅನ್ನೋರಿಗೆ ರಾಕಿ ಉತ್ತರ ನೀಡಿದ್ದಾರೆ. ಹೌದಾ..? ಮುಂದೆ ರಾಕೇಶ್, ಅಮೂಲ್ಯನ ಮದುವೆಯಾಗುತ್ತಾರಾ (Wedding) ಎಂಬ ಪ್ರಶ್ನೆಗೆ ರಾಕಿ ನೇರ ಉತ್ತರ ನೀಡಿದ್ದಾರೆ. ಇಲ್ಲಾ ನಮ್ಮ ನಡುವೆ ಅಂತಹದ್ದೂ ಏನಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಗುಂಟೂರು ಖಾರ ಸವಿಯಲು ಬರುತ್ತಿದ್ದಾರೆ ರಮ್ಯಾ ಕೃಷ್ಣ

    ನಾವಿಬ್ಬರು ಒಳ್ಳೆಯ ಫ್ರೆಂಡ್ಸ್, ಬಿಗ್ ಬಾಸ್ ಮನೆಯಲ್ಲಿದ್ದಾಗ ನಮ್ಮಿಬ್ಬರ ಪ್ಯಾನ್ ಪೇಜ್ ಕೂಡ ಆಗುತ್ತೆ. ಜೋಡಿ ಅಂತಾನೂ ಟ್ರೋಲ್ ಮಾಡ್ತಾರೆ ಅಂತಾ ಒಂದು % ಐಡಿಯಾ ಇರಲ್ಲಿಲ್ಲ. ನಮ್ಮನ್ನ ನೋಡಿಯಾ ಇವರು ಮದುವೆಯಾದ್ರೆ ಚೆನ್ನಾಗಿರುತ್ತೆ ಅಂತಾ ಸಹಜವಾಗಿ ಅಭಿಮಾನಿಗಳಿಗೆ ಅನಿಸುತ್ತೆ ಆದರೆ ನಮಗೆ ಆ ಭಾವನೆ ಇಲ್ಲಾ. ನಮ್ಮ ಟ್ರೋಲ್‌ಗಳನ್ನ ನೋಡಿ ನಕ್ಕಿದ್ದೇವೆ. ಆದರೆ ಅಂತಹದ್ದೇನು ಇಲ್ಲಾ ಎಂದು ಅಮ್ಮು ಜೊತೆಗಿನ ಮದುವೆ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ‘ಜೋಶ್ 2’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳ ಮಾತುಕತೆ ನಡೆಯುತ್ತಿದೆ. ಹಾಗಾಗಿ ನನ್ನ ಸಂಪೂರ್ಣ ಗಮನ ಕೆಲಸದ ಮೇಲಿದೆ ಎಂದು ರಾಕೇಶ್ ಅಡಿಗ ಮಾತನಾಡಿದ್ದಾರೆ.

  • Exclusive: ತನ್ನ ನಿರ್ದೇಶನದ ಸಿನಿಮಾ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗೆ ರಾಕೇಶ್ ಅಡಿಗ ಗ್ರೀನ್ ಸಿಗ್ನಲ್

    Exclusive: ತನ್ನ ನಿರ್ದೇಶನದ ಸಿನಿಮಾ ಬೆನ್ನಲ್ಲೇ ಹೊಸ ಪ್ರಾಜೆಕ್ಟ್‌ಗೆ ರಾಕೇಶ್ ಅಡಿಗ ಗ್ರೀನ್ ಸಿಗ್ನಲ್

    ಬಿಗ್ ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ (Rakesh Adiga) ಅವರು ತಮ್ಮ ಚಿತ್ರದ ಅಪ್‌ಡೇಟ್‌ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ತಮ್ಮ ನಿರ್ದೇಶನದ ‘ಲೈಫ್ ಆಫ್ ಕಾಕ್ರೋಚ್’ ಸಿನಿಮಾ ಬೆನ್ನಲ್ಲೇ ಹೊಸ ಸಿನಿಮಾಗೆ ರಾಕೇಶ್ ಜೋಶ್ ಆಗಿ ರೆಡಿಯಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಇದನ್ನೂ ಓದಿ:ಮಗುವಾಗಿ ಒಂದೇ ತಿಂಗಳಿಗೆ ಹಸುಗೂಸನ್ನು ಶೂಟಿಂಗ್‌ಗೆ ಕರೆದೊಯ್ದ ನಟಿ ದಿವ್ಯಾ ಶ್ರೀಧರ್

    ರಾಕೇಶ್ ಅಡಿಗ ಅವರು ಬಿಗ್ ಬಾಸ್ ಶೋ (Bigg Boss Kannada) ನಂತರ ಹೊಸ ಬಗೆಯ ಕಥೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಬಿಗ್ ಬಾಸ್ ಶೋನಿಂದ ಅವರ ಜನಪ್ರಿಯತೆ ಜಾಸ್ತಿಯಾಗಿದೆ. ಹಾಗಾಗಿ ಸಿನಿಮಾಗಾಗಿ ತೆರೆಮರೆಯಲ್ಲಿ ಸಖತ್ ತಯಾರಿ ಮಾಡ್ತಿದ್ದಾರೆ. ಕೆಲ ದಿನಗಳ ತಮ್ಮ ನಿರ್ದೇಶನದ (Direction) ಸಿನಿಮಾವನ್ನ ರಾಕೇಶ್ ಅನೌನ್ಸ್ ಮಾಡಿದ್ದರು. ಈಗ ಮತ್ತೊಂದು ಚಿತ್ರಕ್ಕೆ ರಾಕೇಶ್ ಅಡಿಗ ಸಹಿ ಹಾಕಿದ್ದಾರೆ.

    ಇದುವರೆಗೂ ಎಂದೂ ಮಾಡಿರದ ಪಾತ್ರದಲ್ಲಿ ರಾಕೇಶ್ ಅಡಿಗ ಕಾಣಿಸಿಕೊಳ್ತಿದ್ದಾರೆ. ಜುಲೈನಿಂದ ಹೊಸ ಪ್ರಾಜೆಕ್ಟ್ಗೆ ಚಾಲನೆ ಸಿಗಲಿದೆ. ಸ್ಯಾಂಡಲ್ವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರುವ ಖ್ಯಾತ ನಿರ್ಮಾಪಕರೊಬ್ಬರ ಹೊಸ ಚಿತ್ರಕ್ಕೆ ರಾಕೇಶ್ ಅಡಿಗ ಓಕೆ ಎಂದಿದ್ದಾರೆ. ಸಿನಿಮಾದ ಟೈಟರ್ ಏನು.? ಯಾರ ಜೊತೆ ಸಿನಿಮಾ ಮಾಡುತ್ತಾರೆ, ಯಾವ ರೀತಿಯ ಸಿನಿಮಾ ಎಂಬುದಕ್ಕೆ ಜುಲೈನಲ್ಲಿ ಉತ್ತರ ಸಿಗಲಿದೆಯಂತೆ. ಪೋಸ್ಟರ್ ಮೂಲಕ ಅಧಿಕೃತ ಮಾಹಿತಿ ಸಿಗಲಿದೆಯಂತೆ. ಚಿತ್ರತಂಡವೇ ಖುದ್ದಾಗಿ ಅನೌನ್ಸ್ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ.

    ಆಲ್ಬಂ ಸಾಂಗ್, ಜೋಶ್, ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದಗೋಕುಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದರು. ಆದರೆ ರಾಕೇಶ್ ಅಡಿಗ ಕೆರಿಯರ್‌ಗೆ ತಿರುವು ಕೊಟ್ಟಿದ್ದು ಬಿಗ್ ಬಾಸ್ ಶೋ. ಬಿಗ್ ಬಾಸ್ ಒಟಿಟಿ- ಟಿವಿ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದರು. ಸೀಸನ್ 9ರ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ ರನ್ನರ್ ಅಪ್ ಪಟ್ಟ ಅಲಂಕರಿಸಿದ್ದರು.

    ರಾಕೇಶ್ ಅಡಿಗ ಅವರು ಇದೀಗ ‘ಲೈಫ್ ಆಫ್ ಕಾಕ್ರೋಚ್’ ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ನಟನೆಯ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ಕೈಗೆತ್ತಿಕೊಂಡಿದ್ದಾರೆ. ‘ಲೈಪ್ ಆಫ್ ಕಾಕ್ರೋಚ್’ ಸಿನಿಮಾದ ಟೀಸರ್ ಈಗಾಗಲೇ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಸೋನು ಜೊತೆ ರಾಕಿ ಲವ್ವಿ ಡವ್ವಿ- ಟಿಕ್ ಟಾಕ್ ಚೆಲುವೆ ಜೊತೆ ರಾಕೇಶ್ ಮಸ್ತ್ ಪಾರ್ಟಿ

    ಸೋನು ಜೊತೆ ರಾಕಿ ಲವ್ವಿ ಡವ್ವಿ- ಟಿಕ್ ಟಾಕ್ ಚೆಲುವೆ ಜೊತೆ ರಾಕೇಶ್ ಮಸ್ತ್ ಪಾರ್ಟಿ

    ಬಿಗ್ ಬಾಸ್ (Bigg Boss) ಖ್ಯಾತಿಯ ರಾಕೇಶ್ ಅಡಿಗ- ಸೋನು ಗೌಡ (Sonu Gowda) ಅವರು ಸದ್ಯ ಪಾರ್ಟಿ ಮೂಡ್‌ನಲ್ಲಿದ್ದಾರೆ. ದೊಡ್ಮನೆಯಲ್ಲಿ ರಾಕೇಶ್- ಸೋನು ಪ್ರೇಮ ಪಕ್ಷಿಗಳು ಎಂದೂ ಬಿಂಬಿಸಲಾಗಿತ್ತು. ಆದರೆ ನಮ್ಮ ನಡುವೆ ಏನಿಲ್ಲ ಅಂತಾ ಹೇಳುತ್ತಲೇ ಗಾಸಿಪ್‌ಗೆ ಫುಲ್ ಸ್ಟಾಪ್ ಹಾಕಿದ್ರು. ಈಗ ರಾಕಿ -ಸೋನು ಮಸ್ತ್ ಆಗಿ ಪಾರ್ಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ‘ಜೋಶ್’ ಸಿನಿಮಾದ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟ ರಾಕೇಶ್ ಅಡಿಗ (Rakesh Adiga) ಅವರು ಬಿಗ್ ಬಾಸ್ ಒಟಿಟಿ, ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟರು. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿಗೆ ಸಖತ್ ಫೈಟ್ ಕೊಟ್ಟರು. ಆದರೆ ಕೊನೆ ಹಂತದಲ್ಲಿ ರನ್ನರ್ ಅಪ್ ಆಗಿ ರಾಕೇಶ್ ಗುರುತಿಸಿಕೊಂಡರು. ಒಟಿಟಿ ಬಿಗ್ ಬಾಸ್‌ನಲ್ಲಿ ಸೋನು ಶ್ರೀನಿವಾಸ್ ಗೌಡ- ರಾಕೇಶ್ ಅಡಿಗ ಜೋಡಿಯಾಗಿ ಹೈಲೆಟ್ ಆಗಿದ್ದರು. ಈ ಲವ್‌ ಬರ್ಡ್ಸ್ ಪ್ರೀತಿಯಲ್ಲಿದ್ದಾರಾ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

    ಇದೀಗ ಕೆಲ ಸಮಯದ ನಂತರ‌ ರಾಕೇಶ್ ಅವರನ್ನ ಟಿಕ್ ಟಾಕ್ ಚೆಲುವೆ ಸೋನು ಮೀಟ್ ಆಗಿದ್ದಾರೆ. ಒಟ್ಟಿಗೆ ಪಾರ್ಟಿ ಮಾಡಿ ಮಸ್ತ್ ಮಜಾ ಮಾಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಸೋನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಮ್ಮದು ಒಂದು ಇರಲಿ ಅಂತಾ ಅಡಿಬರಹ ನೀಡಿ, ರಾಕಿ-ಸೋನು ಜೊತೆಯಾಗಿ ರೀಲ್ಸ್ ಮಾಡಿದ್ದಾರೆ.

    ಸದ್ಯ ಸೋನು-ರಾಕಿ ಮಸ್ತ್ ಡ್ಯಾನ್ಸ್ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡ್ತಿದ್ದಂತೆ ಲಡ್ಡು ಬಂದು ಬಾಯಿಗೆ ಬಿತ್ತಾ.? ಸೂಪರ್ ಜೋಡಿ, ಮದುವೆ ಯಾವಾಗಾ ಅಂತಾ ಬಗೆ ಬಗೆಯ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  • ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

    ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

    ‘ಜೋಶ್’ (Josh) ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ ರಾಕೇಶ್ ಅಡಿಗ (Bigg Boss Kannada) ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದ್ದರು. ಬಿಗ್ ಬಾಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ದೊಡ್ಮನೆಯ ಆಟದ ಬಳಿಕ ಇದೀಗ ಏನ್ಮಾಡ್ತಿದ್ದಾರೆ? ತಮ್ಮ ಮುಂದಿನ ಸಿನಿಮಾ ಯಾವುದು? ಎಂಬುದನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರಾಕೇಶ್ ಅಡಿಗ ಹಂಚಿಕೊಂಡಿದ್ದಾರೆ.

    ಆಲ್ಬಂ ಸಾಂಗ್, ಜೋಶ್, ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದಗೋಕುಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದರು. ಆದರೆ ರಾಕೇಶ್ ಅಡಿಗ ಕೆರಿಯರ್‌ಗೆ ತಿರುವು ಕೊಟ್ಟಿದ್ದು ಬಿಗ್ ಬಾಸ್ ಶೋ. ಬಿಗ್ ಬಾಸ್ ಒಟಿಟಿ- ಟಿವಿ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದರು. ಸೀಸನ್ 9ರ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ ರನ್ನರ್ ಅಪ್ ಪಟ್ಟ ಅಲಂಕರಿಸಿದ್ದರು. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

     

    View this post on Instagram

     

    A post shared by Rakesh Adiga (@rakesh_freespirit)

    ರಾಕೇಶ್ ಅಡಿಗ ಅವರು ಇದೀಗ ‘ಲೈಪ್ ಆಫ್ ಕಾಕ್ರೋಚ್’ (Life Of  Cockroach) ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದೆ. ಹೀರೋ ಆಗಿ ಮಾತ್ರವಲ್ಲ, ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ‘ಲೈಪ್ ಆಫ್ ಕಾಕ್ರೋಚ್’ ಸಿನಿಮಾದ ಟೀಸರ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

    ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಸದ್ಯದಲ್ಲಿ ಈ ಬಗ್ಗೆ ನಟ ರಾಕೇಶ್ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.

  • ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ : ನಟ ಚೇತನ್

    ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ : ನಟ ಚೇತನ್

    ಲವು ವರ್ಷಗಳಿಂದ ಗಾಂಜಾ (Ganja) ಕುರಿತಾಗಿ ಹತ್ತಾರು ಹೇಳಿಕೆಗಳು ಬರುತ್ತಿವೆ. ಈ ಹಿಂದೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ರಾಕೇಶ್ ಅಡಿಗ (Rakesh Adiga) ಕೂಡ ಗಾಂಜಾವನ್ನು ಕಾನೂನುಬದ್ಧಗೊಳಿಸಿ ಎಂದು ಹೇಳಿಕೆ ನೀಡಿದ್ದರು. ಅದು ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ಡ್ರಗ್ಸ್ ವಿಚಾರವಾಗಿ ಸ್ಯಾಂಡಲ್ ವುಡ್ ಸುದ್ದಿಯಲ್ಲಿದ್ದಾಗ ಗಾಂಜಾ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಚೇತನ್ (Chetan Ahimsa) ಆ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    ಹಿಮಾಚಲ (Himachal) ಮುಖ್ಯಮಂತ್ರಿ ಸುಖವಿಂದರ್  ಸುಖು ಗಾಂಜಾ ವಿಚಾರವಾಗಿ ಮಾತನಾಡಿದ್ದನ್ನು ಅನುಮೋದಿಸಿರುವ ಚೇತನ್, ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು ಎಂದಿದ್ದಾರೆ. ಸುಖವಿಂದರ್ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿರುವುದನ್ನು ಚೇತನ್ ಬೆಂಬಲಿಸಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ‘ಗಾಂಜಾ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5 ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ. ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು’ ಎಂದಿದ್ದಾರೆ.

    ಹಿಮಾಚಲದ ಮುಖ್ಯಮಂತ್ರಿಯ ನಡೆಯು ಒಳ್ಳೆಯದು ಎಂದು ಚೇತನ್ ಪ್ರಶಂಸೆ ಮಾಡಿದ್ದಾರೆ. ಕರ್ನಾಟಕವೂ ಇದರತ್ತ ಗಮನ ಹರಿಸಬೇಕು ಎಂದಿದ್ದಾರೆ. ಇದು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಎನ್ನುವ ಕುರಿತು ಅಧ್ಯಯನವಾಗಲಿ ಎಂದು ಅವರು ಬರೆದುಕೊಂಡಿದ್ದಾರೆ.

  • ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ದಿವ್ಯಾ ಸುರೇಶ್

    ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ದಿವ್ಯಾ ಸುರೇಶ್

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ದಿವ್ಯಾ ಸುರೇಶ್ (Divya Suresh) ಸದ್ಯ ತ್ರಿಪುರ ಸುಂದರಿ (Tripura Sundari) ಸೀರಿಯಲ್‌ನಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚಿಗೆ ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ.

    ಟಿವಿ ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಗಮನ ಸೆಳೆದ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಈ ಹಿಂದೆ ರಾಕೇಶ್ ಅಡಿಗ (Rakesh Adiga) ಜೊತೆ ಎಂಗೇಜ್ ಆಗಿದ್ದರು. ಕಾರಣಾಂತರಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇಬ್ಬರು ತಮ್ಮ ತಮ್ಮ ಲೈಫ್‌ನಲ್ಲಿ ಮೂವ್ ಆನ್ ಆಗಿದ್ದಾರೆ. ಸದ್ಯ ದಿವ್ಯಾ ಅವರ ಬಾಯ್‌ಫ್ರೆಂಡ್ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಹುಡುಗನ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನ ನಟಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ದತ್ತಣ್ಣ ಮದುವೆ ಆಗಲಿಲ್ಲ ಏಕೆ? ಗೆಳೆಯರು ಬಿಚ್ಚಿಟ್ಟ ರಹಸ್ಯ

    ಇತ್ತೀಚಿಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಹ್ಯಾಪಿ ಬರ್ತ್‌ಡೇ ಲವ್’ ಎಂದು ಗೆಳೆಯನಿಗೆ ದಿವ್ಯಾ ಶುಭಕೋರಿದ್ದಾರೆ. ಸದ್ಯ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿರುವ ನಟಿ ದಿವ್ಯಾ, ಸದ್ಯದಲ್ಲೇ ಮದುವೆ ಬಗ್ಗೆ ಕೂಡ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    ಬಿಗ್ ಬಾಸ್ ಶೋನಲ್ಲಿ ದಿವ್ಯಾ ಉರುಡುಗ, ಅರವಿಂದ್ ಕೆಪಿ, ಮಂಜು ಪಾವಗಡ ಜೊತೆ ದಿವ್ಯಾ ಸುರೇಶ್ ಕೂಡ ಸ್ಪರ್ಧಿಯಾಗಿ ಮಿಂಚಿದ್ದರು. ಕಳೆದ ವರ್ಷ ರೌಡಿ ಬೇಬಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.

  • ‘ಕಾಕ್ರೋಚ್’ ಸಿನಿಮಾಗೆ ನಾನೇ ಹೀರೋ, ನಾನೇ ಡೈರೆಕ್ಟರ್ : ರಾಕೇಶ್ ಅಡಿಗ

    ‘ಕಾಕ್ರೋಚ್’ ಸಿನಿಮಾಗೆ ನಾನೇ ಹೀರೋ, ನಾನೇ ಡೈರೆಕ್ಟರ್ : ರಾಕೇಶ್ ಅಡಿಗ

    ಮೂರು ವರ್ಷಗಳ ನಂತರ ನಟ ರಾಕೇಶ್ ಅಡಿಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನೈಟ್ ಔಟ್ ಸಿನಿಮಾದ ನಂತರ ಅವರು ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಮುಂದಿನ ಸಿನಿಮಾ ಯಾವುದು ಎಂದು ಕೇಳಿದಾಗೆಲ್ಲ, ಸ್ಕ್ರಿಪ್ಟ್ ಬರೆಯುತ್ತಿದ್ದೇನೆ ಎಂದು ಹೇಳುತ್ತಿದ್ದರು. ಹಾಗಾದರೆ, ಈ ಬಾರಿ ನಟನೆಯನ್ನು ಬಿಟ್ಟು ನಿರ್ದೇಶನಕ್ಕೆ ಇಳಿಯಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿತ್ತು. ಎಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ.

    ಮೂರ್ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ ರಾಕೇಶ್ ಅಡಿಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ಬರುತ್ತಿದ್ದು, ಕಾಕ್ರೋಚ್ ಹೆಸರಿನ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಾವೇ ಹೀರೋ ಆಗಿ ನಟಿಸಿ, ನಿರ್ದೇಶನವನ್ನೂ ಮಾಡಲಿದ್ದಾರೆ. ಈಗಾಗಲೇ ಸಿನಿಮಾ ಕ್ಯಾರೆಕ್ಟರ್ ರಿವೀಲ್ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಲುಕ್ ನಲ್ಲಿ ಅಡಿಗ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ಬಿಗ್ ಬಾಸ್ ನಂತರ ರಾಕೇಶ್ ಅಡಿಗರಿಗೆ ಡಿಮ್ಯಾಂಡ್ ಜಾಸ್ತಿ ಆಗಿತ್ತು. ಅನೇಕರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ನೀಡಿದರು. ಆದರೆ, ರಾಕೇಶ್ ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಹಾಗಾಗಿ ಅಂದುಕೊಂಡಂತೆ ತಮ್ಮ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಅವರು ಪ್ರೇಮಕಥೆಯೊಂದನ್ನು ಹೇಳಲು ಹೊರಟಿದ್ದಾರಂತೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದಾರಂತೆ.

    ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಕೊಡದೇ ಇದ್ದರೂ, ಈ ಸಿನಿಮಾದ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿ ಹೊತ್ತಿದ್ದಾರೆ. ಪೂಜಾಶ್ರೀ ಎನ್ನುವವರು ಚಿತ್ರದ ನಿರ್ಮಾಪಕರು. ಉಳಿದಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಅವರು ತಿಳಿಸಿದ್ದಾರೆ.

  • ರಾಕೇಶ್ ಅಡಿಗ ಜೊತೆ ‘ಬಿಗ್ ಬಾಸ್’ ಸುಂದರಿಯರ ಸಮ್ಮಿಲನ

    ರಾಕೇಶ್ ಅಡಿಗ ಜೊತೆ ‘ಬಿಗ್ ಬಾಸ್’ ಸುಂದರಿಯರ ಸಮ್ಮಿಲನ

    ಬಿಗ್ ಬಾಸ್ (Big Boss) ಮುಗಿಯುತ್ತಿದ್ದಂತೆಯೇ ಮತ್ತೆ ಮತ್ತೆ ಭೇಟಿಯಾಗುವುದು, ಪಾರ್ಟಿ ಮಾಡುವುದು ಸಾಮಾನ್ಯ. ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿ. ಈ ಬಾರಿಯೂ ಅಂಥದ್ದೊಂದು ಭೇಟಿ ಸಾಧ್ಯವಾಗಿದೆ. ರಾಕೇಶ್ ಅಡಿಗ (Rakesh Adiga) ಹಾಗೂ ಅಮೂಲ್ಯ (Amulya), ದಿವ್ಯಾ ಉರುಡುಗ (Divya Uruduga), ನೇಹಾ ಗೌಡ (Neha Gowda) ಮತ್ತು ಅನುಪಮಾ ಗೌಡ (Anupama Gowda) ಭೇಟಿ ಮಾಡಿ, ಒಂದಷ್ಟು ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ಆ ಸಂಭ್ರಮವನ್ನು ಫೋಟೋ ಮೂಲಕ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಎಲ್ಲರ ಡಾರ್ಲಿಂಗ್ ಆಗಿದ್ದರು. ಎಲ್ಲರೊಂದಿಗೂ ಅವರು ಸಲೀಸಾಗಿ ಹೊಂದಿಕೊಳ್ಳುತ್ತಿದ್ದರು. ಹಾಗಾಗಿಯೇ ಗಾಸಿಪ್ ಕೂಡ ಹುಟ್ಟಿಕೊಂಡಿದ್ದವು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಎಲ್ಲ ಗಾಸಿಪ್ ಗಳನ್ನು ಅವರು ನಿರಾಕರಿಸಿದ್ದರು. ನಮ್ಮದು ಕೇವಲ ಫ್ರೆಂಡ್ ಶಿಪ್ ಅದರಾಚೆ ಏನೂ ಇಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಅದೇ ಪ್ರೀತಿಯನ್ನೇ ಇಟ್ಟುಕೊಂಡು ಮತ್ತೆ ಸ್ನೇಹಿತಿಯರ ಜೊತೆ ರಾಕೇಶ್ ಒಂದಾಗಿದ್ದಾರೆ. ಇದನ್ನೂ ಓದಿ: ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ಈ ಭೇಟಿಯ ಹಿಂದಿನ ಉದ್ದೇಶ ಏನು? ಯಾರ ಮನೆಯಲ್ಲಿ ಇವರು ಭೇಟಿಯಾಗಿದ್ದರು ಎಂಬಿತ್ಯಾದಿ ವಿವರಗಳು ಲಭ್ಯವಿಲ್ಲವಾದರೂ, ಎಲ್ಲರೂ ಸಂಭ್ರಮಿಸಿದ್ದಕ್ಕೆ ಅವರೇ ಹಾಕಿಕೊಂಡು ಫೋಟೋಗಳು ಸಾಕ್ಷಿಯಾಗಿವೆ. ಮೊನ್ನೆಯಷ್ಟೇ ದಿವ್ಯಾ ಉರುಡುಗ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಮಯದಲ್ಲಿ ತಗೆದಿರುವ ಫೋಟೋ ಇರಬಹುದಾ ಎಂದು ಹೇಳಲಾಗುತ್ತಿದೆ. ಅಥವಾ ದಿವ್ಯಾ ಉರುಡುಗ ಹುಟ್ಟುಹಬ್ಬವನ್ನು ಇವರಲ್ಲಿ ಯಾರಾದರೂ ಅರೇಂಜ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

    ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲೂ ಈ ಜೋಡಿ ಒಂದಾಗಿಯೇ ಆಟವಾಡಿತ್ತು. ಆಚೆ ಬಂದ ನಂತರವೂ ಆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ಭೇಟಿಯೇ ಸಾಕ್ಷಿ. ಯಾರು ಏನೇ ಹೇಳಲಿ ಇಂತಹ ಸಂಭ್ರಮಗಳು ಅವರ ಬದುಕಲ್ಲಿ ಪ್ರತಿ ದಿನವೂ ಬರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೂಪೇಶ್‌ ರಾಜಣ್ಣಂದು ನೇರ ವ್ಯಕ್ತಿತ್ವ

    ರೂಪೇಶ್‌ ರಾಜಣ್ಣಂದು ನೇರ ವ್ಯಕ್ತಿತ್ವ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k