Tag: Rakesh Adiga

  • ರಾಕೇಶ್ ಅಡಿಗ ನಟನೆಯ ‘ನಾನು ಮತ್ತು ಗುಂಡ 2’ ಟೀಸರ್ ಔಟ್

    ರಾಕೇಶ್ ಅಡಿಗ ನಟನೆಯ ‘ನಾನು ಮತ್ತು ಗುಂಡ 2’ ಟೀಸರ್ ಔಟ್

    ‘ಬಿಗ್ ಬಾಸ್’ ಖ್ಯಾತಿಯ ರಾಕೇಶ್ ಅಡಿಗ (Rakesh Adiag) ನಟನೆಯ ‘ನಾನು ಮತ್ತು ಗುಂಡ 2’ (Naanu Matthu Gunda 2) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ನಾನು ಮತ್ತು ಗುಂಡ ಸಿನಿಮಾದ ಸೀಕ್ವೆಲ್ ಇದಾಗಿದ್ದು, ಸದ್ಯ ಟೀಸರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ:13 ವರ್ಷಗಳ ಪ್ರೀತಿ- ಫಾರಿನ್ ಹುಡುಗನ ಜೊತೆ ಅರ್ಜುನ್ ಸರ್ಜಾ 2ನೇ ಪುತ್ರಿ ಎಂಗೇಜ್

    ಶ್ವಾನ ಜೊತೆಗಿನ ರಾಕೇಶ್ ಅಡಿಗ ಅವರ ಪಯಣ ಹಾಗೂ ಮೊದಲ ಭಾಗದ ತುಣುಕಿನೊಂದಿಗೆ ಟೀಸರ್‌ನಲ್ಲಿ ಝಲಕ್ ತೋರಿಸಲಾಗಿದೆ. ಟೀಸರ್ ನೋಡಿರುವ ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಇದನ್ನೂ ಓದಿ:ರೀಲ್ಸ್ ಕೇಸ್: ನಿನ್ನೆ ಜೈಲು ಪಾಲು – ಇಂದು ರಜತ್‌ಗೆ ಜಾಮೀನು

    ರಾಕೇಶ್ ಅಡಿಗಗೆ ನಾಯಕಿಯಾಗಿ ‌’ಲವ್ ಮಾಕ್ಟೈಲ್’ (Love Mocktail) ನಟಿ ರಚನಾ ಇಂದರ್ (Rachana Inder) ನಟಿಸಿದ್ದಾರೆ. ಈ ಚಿತ್ರವನ್ನು ರಘು ಹಾಸನ್ ನಿರ್ದೇಶನ ಮಾಡಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ಸದ್ಯದಲ್ಲೇ ರಿಲೀಸ್‌ ಬಗ್ಗೆ ತಂಡ ಮಾಹಿತಿ ನೀಡಲಿದೆ.

    2020ರಲ್ಲಿ ತೆರೆಕಂಡ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್, ಶಿವರಾಜ್ ಕೆ.ಆರ್ ಪೇಟೆ, ಪ್ರಕಾಶ್ ಬೆಳವಾಡಿ ನಟಿಸಿದ್ದರು.

  • ‘ಮರ್ಯಾದೆ ಪ್ರಶ್ನೆ’ ತಂಡದಿಂದ ಗೌರಿ ಗಣೇಶ ಹಬ್ಬಕ್ಕೆ ಥ್ರಿಲ್ಲಿಂಗ್ ಅಪ್ ಡೇಟ್

    ‘ಮರ್ಯಾದೆ ಪ್ರಶ್ನೆ’ ತಂಡದಿಂದ ಗೌರಿ ಗಣೇಶ ಹಬ್ಬಕ್ಕೆ ಥ್ರಿಲ್ಲಿಂಗ್ ಅಪ್ ಡೇಟ್

    ಸ್ಯಾಂಡಲ್‌ವುಡ್‌ನಲ್ಲಿ ಅಂಗಳದಲ್ಲಿ ‘ಮರ್ಯಾದೆ ಪ್ರಶ್ನೆ’ (Maryade Prashne) ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಚಿತ್ರತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರವನ್ನೂ ಅಷ್ಟೇ ವಿಶೇಷವಾಗಿ ನೋಡುಗನ ಮುಂದೆ ತಂದಿಟ್ಟಿತ್ತು. ಸಾಕಷ್ಟು ಸಿನಿಮೋತ್ಸಾಹವಿರುವ  ಆರ್ ಜೆ ಪ್ರದೀಪ್ (Pradeep) ಅವರು ತಮ್ಮದೇ ಸಕ್ಕತ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಸಕ್ಕತ್ ಕಂಟೆಂಟ್‌ಗಳ ಮೂಲಕವೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಸಕ್ಕತ್ ಸ್ಟುಡಿಯೋ, ಈ ಹಿಂದೆ ವೆಬ್‌ಸಿರೀಸ್‌ ಗಮನ ಸೆಳೆದಿದ್ದ  ಈ ನಿರ್ಮಾಣ ಸಂಸ್ಥೆ ಈಗ ಸಿನಿರಂಗಕ್ಕೂ ಹೆಜ್ಜೆ ಇಟ್ಟಿದೆ.

    ಸಕ್ಕತ್ ಸ್ಟುಡಿಯೋ ಸಖತ್ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. RCB ಕಪ್ ಗೆಲ್ಲಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ,  ರ್ಯಾಪರ್‌ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಡಿಸಿತ್ತು. ಹೀಗೆ ಆರಂಭದಿಂದಲೂ ಬಗೆ ಬಗೆಯಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಗೌರಿ ಗಣೇಶ ಹಬ್ಬದ ದಿನವಾದ ಇಂದು ಥ್ರಿಲ್ಲಿಂಗ್ ಅಪ್ ಡೇಟ್ ಕೊಟ್ಟಿದೆ.

    ಮರ್ಯಾದೆ ಪ್ರಶ್ನೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ವಿಘ್ನ ವಿಪತ್ತುಗಳಿಲ್ಲದೆ ನಿಮ್ಮೆಲ್ಲರನ್ನು ತಲುಪುತ್ತೇವೆ ಅತಿ ಶೀಘ್ರದಲ್ಲೇ..ಹಬ್ಬ ಮಾಡೋಣ ರೆಡಿ  ಇರಿ..ಇದು ಮರ್ಯಾದೆ ಪ್ರಶ್ನೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದ್ದು, ಭಿನ್ನ ಪಾತ್ರಗಳಿಗೆ ಹಲವರು ಬಣ್ಣ ಹಚ್ಚಿದ್ದಾರೆ. ರಾಕೇಶ್‌ ಅಡಿಗ, ಸುನೀಲ್‌ ರಾವ್‌, ಶೈನ್‌‌ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್‌, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್‌ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಸಕ್ಕತ್‌ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಪ್ರದೀಪ್‌ ಅವರೇ ಕಥೆ ಬರೆದಿದ್ದಾರೆ.

     

    ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ ಪ್ರದೀಪ್. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ‌

  • ಮಿಡಲ್ ಕ್ಲಾಸ್ ಮನೆಯ ‘ಮರ್ಯಾದೆ ಪ್ರಶ್ನೆ’ ಎಂದ ರಾಕೇಶ್ ಅಡಿಗ, ಶೈನ್ ಶೆಟ್ಟಿ

    ಮಿಡಲ್ ಕ್ಲಾಸ್ ಮನೆಯ ‘ಮರ್ಯಾದೆ ಪ್ರಶ್ನೆ’ ಎಂದ ರಾಕೇಶ್ ಅಡಿಗ, ಶೈನ್ ಶೆಟ್ಟಿ

    ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ (Shine Shetty), ರಾಕೇಶ್ ಅಡಿಗ (Rakesh Adiga) ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಮಿಡ್ಲ್ ಕ್ಲಾಸ್ ಜನರ ಬದುಕಿನ ಕಥೆಗಳನ್ನು ಹೇಳೋಕೆ ರೆಡಿಯಾಗಿದ್ದಾರೆ. ‘ಮರ್ಯಾದೆ ಪ್ರಶ್ನೆ’ ಎನ್ನುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು.

    ದೈನಂದಿನ ಬದುಕಿನಲ್ಲಿ ನಡೆಯುವ ರಿಯಲ್ ಸ್ಟೋರಿಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಎರಡು ಶೇಡ್‌ನಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಮೂಡಿ ಬರಲಿದೆ. ಮಿಡಲ್ ಕ್ಲಾಸ್ ಕಥೆ, ಮತ್ತೊಂದು ಶ್ರೀಮಂತ ಹುಡುಗರ ಕಥೆ ತೋರಿಸಲಾಗುತ್ತದೆ.‌ ಇದನ್ನೂ ಓದಿ:ನಟ ದರ್ಶನ್ ಬಳಿ ಇದೆ 2 ಯುಎಸ್ ಮೇಡ್ ಪಿಸ್ತೂಲ್‍ಗಳು!

     

     

    ಈ ಚಿತ್ರವನ್ನು ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡುತ್ತಿದ್ದಾರೆ. ಆರ್ ಜೆ ಪ್ರದೀಪ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

    ಅಂದಹಾಗೆ, ಈ ಚಿತ್ರದಲ್ಲಿ ರಾಕೇಶ್ ಅಡಿಗ, ಶೈನ್ ಶೆಟ್ಟಿ, ಸುನೀಲ್ ರಾವ್, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕರ್, ನಾಗೇಂದ್ರ ಶಾ ಸೇರಿದಂತೆ ಅನೇಕರು ನಟಿಸಿದ್ದಾರೆ.

  • Exclusive: ದುನಿಯಾ ವಿಜಯ್ ನಟನೆಯ ಸಿನಿಮಾದಲ್ಲಿ ರಾಕೇಶ್ ಅಡಿಗ

    Exclusive: ದುನಿಯಾ ವಿಜಯ್ ನಟನೆಯ ಸಿನಿಮಾದಲ್ಲಿ ರಾಕೇಶ್ ಅಡಿಗ

    ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ (Duniya Vijay) ನಟನೆಯ 29ನೇ ಸಿನಿಮಾಗೆ ರಾಜ್ ಬಿ. ಶೆಟ್ಟಿ (Raj B Shetty) ಎಂಟ್ರಿ ಕೊಟ್ಟ ಬೆನ್ನಲ್ಲೇ ‘ಬಿಗ್ ಬಾಸ್’ ಖ್ಯಾತಿಯ (Bigg Boss) ರಾಕೇಶ್ ಅಡಿಗ (Rakesh Adiga) ಕೂಡ ಕೈಜೋಡಿಸಿದ್ದಾರೆ. ಮುಖ್ಯ ಪಾತ್ರವೊಂದಕ್ಕೆ ರಾಕೇಶ್ ಬಣ್ಣ ಹಚ್ಚಿದ್ದಾರೆ.

    ಈಗ ಚಿತ್ರರಂಗದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳದ್ದೇ ದರ್ಬಾರ್. ಪಾತ್ರ ಚೆನ್ನಾಗಿದ್ದರೆ ಯಾರದೇ ಸ್ಟಾರ್ ನಟರ ಸಿನಿಮಾ ಆಗಿದ್ರೂ ಮತ್ತೊಂದಿಷ್ಟು ಸ್ಟಾರ್‌ಗಳು ಎಂಟ್ರಿ ಕೊಡ್ತಾರೆ. ಇದೀಗ ದುನಿಯಾ ವಿಜಯ್‌ ಸಿನಿಮಾದಲ್ಲಿ ಪ್ರತಿಭಾನ್ವಿತ ಕಲಾವಿದರು ಸೇರಿಕೊಳ್ತಿದ್ದಾರೆ.

    ಮೂಲಗಳ ಪ್ರಕಾರ, ರಾಜ್ ಬಿ. ಶೆಟ್ಟಿ ಸಹೋದರನ ಪಾತ್ರದಲ್ಲಿ ರಾಕೇಶ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ಫೈಟ್ ಸೀಕ್ವೆನ್ಸ್ ಶೂಟಿಂಗ್ ಮಾಡಲಾಗಿದೆ. ವಿಭಿನ್ನ ಪಾತ್ರದಲ್ಲಿ ರಾಕೇಶ್‌ ನಟಿಸಿದ್ದಾರೆ.

    ಪುತ್ರಿ ರಿತಾನ್ಯಾರನ್ನು ಈ ಚಿತ್ರದ ಮೂಲಕ ವಿಜಯ್ ಲಾಂಚ್ ಮಾಡುತ್ತಿದ್ದಾರೆ. ‘ಕಾಟೇರ’ (Kaatera Film) ಚಿತ್ರದ ರೈಟರ್ ಜಡೇಶ್ ಕೆ. ಹಂಪಿ‌ ಅವರು ದುನಿಯಾ ವಿಜಯ್‌ ಮತ್ತು ರಚಿತಾ ರಾಮ್‌ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ.ಇದನ್ನೂ ಓದಿ:ಮಿಸ್ಟರ್ ರೈಟ್, ನೀನು ನನ್ನ ಬೆಳಕು- ಚಿರುಗೆ ಮೇಘನಾ ರಾಜ್ ವಿಶ್

    ಅಂದಹಾಗೆ, ನಾನು ಮತ್ತು ಗುಂಡ 2, ಆರ್ ಜೆ ಪ್ರದೀಪ್ ಜೊತೆ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಾಕೇಶ್‌ ಅಡಿಗ ಕೈಯಲ್ಲಿವೆ.

  • ಮತದಾನದ ಮಹತ್ವ ಸಾರುವ ‘Vote ನಮ್ಮ Power’ Rap Song

    ಮತದಾನದ ಮಹತ್ವ ಸಾರುವ ‘Vote ನಮ್ಮ Power’ Rap Song

    ಲೋಕಸಭೆ ಚುನಾವಣೆ ಹೊತ್ತಿನಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆ ‘Vote ನಮ್ಮ Power’ Rap ಸಾಂಗ್‌ ಪ್ರಸ್ತುತಪಡಿಸುತ್ತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ಮತದಾನದ ಹಕ್ಕುಗಳನ್ನು ಪ್ರತಿಪಾದಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನದೊಂದಿಗೆ ಭವ್ಯ ಭಾರತದ ಭವಿಷ್ಯ ನಿರ್ಧರಿಸುವುದು ನಮ್ಮೆಲ್ಲರ ಕೈಲಿದೆ. ಈ ಪ್ರಜಾಪ್ರಭುತ್ವದ ಹಬ್ಬವನ್ನು ಒಂದು ಸಂದೇಶಭರಿತ ಚೆಂದದ Rap song ಮೂಲಕ ಸೆಲೆಬ್ರೇಟ್‌ ಮಾಡುವ ಆಶಯ ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನಕ್ಕೆ ಅವರನ್ನು ಪ್ರೇರೇಪಿಸುವುದು ಉದ್ದೇಶ. ಈ ಮೂಲಕ ದೇಶದ ಉಜ್ವಲ ಭವಿಷ್ಯದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇರಲಿ ಎನ್ನುವ ಸದ್ದುದ್ದೇಶ “ಮಾಧ್ಯಮ ಅನೇಕ” ಸಂಸ್ಥೆಯದು. ಆ ನಿಟ್ಟಿನಲ್ಲಿ “vote ನಮ್ಮ power” ಹಾಡು ಮೂಡಿಬಂದಿದೆ. ನಿನ್ನೆ ಈ RAP song ಬಿಡುಗಡೆ ಮತ್ತು ಪತ್ರಿಕಾಗೋಷ್ಠಿ ನಡೆಯಿತು.

    ‘ಮೊದಲ ಬಾರಿಗೆ ಮತದಾನ ಮಾಡುವವರಿಗೆ ಈ RAP SONG ಬಹಳ ಇಷ್ಟವಾಗಬಹುದು. ಯುವಜನತೆ ಹೆಚ್ಚಾಗಿ ಮತದಾನ ಮಾಡಬೇಕು’ ಎಂದರು ಹಾಡಿಗೆ ದನಿಯಾಗಿರುವ ನಟ ರಾಕೇಶ್ ಅಡಿಗ. ‘ಮತದಾನದ ಬಗ್ಗೆ ಸಂವಿದಾನದಲ್ಲಿರುವ ಕೆಲವು ವಿಷಯಗಳನ್ನು ತೆಗೆದುಕೊಂಡು ಈ ಹಾಡನ್ನು ಮಾಡಿದ್ದೇವೆ‌. ಈಗಿನ ಯುವಜನತೆ ಹೆಚ್ಚಾಗಿ RAP S0NG ಗೆ ಅಭಿಮಾನಿಗಳು. ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ನಿರ್ದೇಶಕ ರಾಜ್ ಗೋಪಿ ತಿಳಿಸಿದರು.

    ‘ಮತದಾನದ ದಿನ‌ ರಜೆ ಇದೆ ಎಂದು  ಮನೆಯಲ್ಲಿ ಕೂರುವುದು. ಪ್ರವಾಸಕ್ಕೆ ಹೋಗುವುದು ಮಾಡಬೇಡಿ. ಎಲ್ಲರೂ ಮತದಾನ ಮಾಡಿ.‌ ಏಕೆಂದರೆ ಅದು ನಮ್ಮ ಹಕ್ಕಲ್ಲ.‌ ಅಧಿಕಾರ’ ಎನ್ನುವುದು ‘ಬಿಗ್ ಬಾಸ್’ ಖ್ಯಾತಿಯ ನೀತು ವನಜಾಕ್ಷಿ ಅವರ ಮಾತು. ಪ್ರಸ್ತುತ ಅವರೀಗ ಮತದಾನ ಜಾಗೃತಿ ರಾಯಭಾರಿಯೂ ಹೌದು.

    ಹಾಡಿಗೆ ಹೆಜ್ಜೆ ಹಾಕಿರುವ ನಟಿ  ತೇಜಸ್ವಿನಿ ಶರ್ಮ, ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅಮರ್ ಮತದಾನದ ಮಹತ್ವವನ್ನು ತಿಳಿಸಿ, ಅವಕಾಶ ಮಾಡಿಕೊಟ್ಟ ‘ಮಾಧ್ಯಮ ಅನೇಕ’ ಸಂಸ್ಥೆಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ‘vote ನಮ್ಮ power’ ಪ್ರಸ್ತುತಿಗೆ ಮುನ್ನ ‘ಮಾಧ್ಯಮ ಅನೇಕ’ ಸಂಸ್ಥೆಯ ಡಾ ನಮನ B N ಅವರು ಈ song ನ ಆಶಯ –  ಉದ್ದೇಶದ ಬಗ್ಗೆ ಸವಿವಾರವಾಗಿ ಮಾಹಿತಿ ನೀಡಿದರು.

    ‘ಮಾಧ್ಯಮ ಅನೇಕ’ ಸಂಸ್ಥೆಯ ‘ಅನೇಕ ಆಡಿಯೋ’ ಮೂಲಕ ಈ RAP SONG ಬಿಡುಗಡೆಯಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ಅರವಿಂದ್ ಮೋತಿ ಈ ಯೋಜನೆಯ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಅನು ಮೋತಿ ಬರೆದು, ಕಾರ್ತಿಕ್ ಶರ್ಮ ಸಂಗೀತ ನೀಡಿರುವ ಈ ಹಾಡನ್ನು ರಾಕೇಶ್ ಅಡಿಗ (Rakesh Adiga) ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಛಾಯಾಗ್ರಾಹಣ ಗಿರೀಶ್ ಅವರದು. ಪ್ರತಿಭಾವಂತ ಯುವ ತಾರೆಯರಾದ ತೇಜಸ್ವಿನಿ ಶರ್ಮ, smile guru ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌ ಮತ್ತು ಅನನ್ಯ ಅಮರ್‌ ತಮ್ಮ energetic dance stepಗಳೊಂದಿಗೆ ಹಾಡನ್ನು powerful ಆಗಿ ಪ್ರಸ್ತುತಪಡಿಸಿದ್ದಾರೆ. ಇವರಷ್ಟೇ ಅಲ್ಲದೆ ಟೀವಿ – ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳು hook stepsಗೆ ಹೆಜ್ಜೆ ಹಾಕುತ್ತಾ ಹಾಡಿನ ಆಕರ್ಷಣೆ ಹೆಚ್ಚಿಸಿದ್ದಾರೆ. ನವೀನ್‌ ಶಂಕರ್‌, ನೀತೂ ವನಜಾಕ್ಷಿ (Neetu Vanajakshi), ಕಾರ್ತೀಕ್‌ ಮಹೇಶ್‌, ತನಿಶಾ ಕುಪ್ಪಂಡ, ಸಾನಿಯಾ ಅಯ್ಯರ್‌, ಸಾಗರ್‌ ಪುರಾಣಿಕ್‌, ನಿರಂಜನ್‌ ದೇಶಪಾಂಡೆ, ಚಂದನಾ ಅನಂತಕೃಷ್ಣ ಮುಂತಾದವರು songನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡು ಸದಾಶಯದ ಈ ಯೋಜನೆಗೆ ಕೈಜೋಡಿಸಿದ್ದಾರೆ.

  • ಜೈಲಿಗೆ ಭೇಟಿ ಮಾಡಿ ಸೋನುಗೆ ಧೈರ್ಯ ಹೇಳಿದ ರಾಕೇಶ್ ಅಡಿಗ

    ಜೈಲಿಗೆ ಭೇಟಿ ಮಾಡಿ ಸೋನುಗೆ ಧೈರ್ಯ ಹೇಳಿದ ರಾಕೇಶ್ ಅಡಿಗ

    ಗುವನ್ನು ಅಕ್ರಮವಾಗಿ ಸಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಸೋನು ಶ್ರೀನಿವಾಸ್ ಗೌಡ ಅವರನ್ನು ನಟ ರಾಕೇಶ್ ಅಡಿಗೆ (Rakesh Adiga) ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ಘಟನೆಯ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ದತ್ತು ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದೇನೆ. ಅದು ಟ್ರೋಲ್ ಅವರಿಗೆ ಕೌಂಟರ್ ಕೊಡುವ ಉದ್ದೇಶವಾಗಿತ್ತು. ಈಗ ನೋಡಿದರೆ ಇಂತಹ ಶಿಕ್ಷೆ ಎಂದು ಸೋನು ಅಳಲು ತೋಡಿಕೊಂಡಿರುವ ಕುರಿತು ರಾಕೇಶ್ ಮಾತನಾಡಿದ್ದಾರೆ.

    ಮೊನ್ನೆಯಷ್ಟೇ ಸೋನು ಗೌಡಗೆ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಹದಿನಾಲ್ಕು ದಿನಗಳ‌ ಕಾಲ ನ್ಯಾಯಾಂಗ ಬಂಧನ (Judicial custody) ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದಿದ್ದರು ಪೊಲೀಸರು.

    ಕಾನೂನು ಬಾಹಿರವಾಗಿ ಮಗುವನ್ನ ದತ್ತು ತೆಗೆದುಕೊಂಡು ಪೊಲೀಸ್ ವಶದಲ್ಲಿದ್ದ ಸೋನು ಶ್ರೀನಿವಾಸಗೌಡರನ್ನು (Sonu Srinivas Gowda) ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ನಿನ್ನೆ (ಮಾ.24) ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದುಕೊಂಡು ಬಂದ ಸ್ಥಳ ಮಹಜರು ಮಾಡಿದ್ದರು. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿ ಅವಸರದಲ್ಲಿ ಗ್ರಾಮದಿಂದ ಹೊರನಡೆದಿದ್ದರು. ಈ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೋನು ಗೌಡ ಇದ್ದ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು.

    ಸ್ಥಳ ಮಹಜರು ಮಾಡಲು ಪೋಲಿಸರು ಭೇಟಿ ನೀಡಿದ ಬಳಿಕ ಸೋನು ಗೌಡ ಜೊತೆ ಮಾತನಾಡಬೇಕು ಅಂತ ಗ್ರಾಮಸ್ಥರು ಗಲಾಟೆ ಮಾಡಿದರು. ಪೊಲೀಸ್ ಕಾರಿಗೆ ಮುತ್ತಿಗೆ ಹಾಕಿ ಸೋನು ಗೌಡರನ್ನು ನೋಡಲು ನೂಕುನುಗ್ಗಲು ಮಾಡಿದರು. ಗ್ರಾಮಸ್ಥರು ಹಾಗೂ ಬಾಲಕಿ ಸಂಬಂಧಿಕರಿಂದ ಮಾಹಿತಿ ಪಡೆದ ಪೊಲೀಸರು ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಸ್ಥಳ ಮಹಜರು ಮುಗಿಸಿ ವಾಪಸ್ ನಿನ್ನೆ ಬೆಂಗಳೂರಿಗೆ ತೆರಳಿದ್ದರು.

     

    ಈ ಮಧ್ಯೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಮಗುವಿನ ಚಿಕ್ಕಪ್ಪ ಸೋನುಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನ ನಾವು ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣದ ಸಹಾಯ ಮಾಡಿಲ್ಲ. ನಮ್ಮ ಮಗಳನ್ನು ಓದಿಸುತ್ತೇನೆ. ಚೆನ್ನಾಗಿ ಸಾಕುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಈಗ ದತ್ತು ತೆಗೆದುಕೊಂಡಿದ್ದೇನೆ ಅಂತ ಹೇಳಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.

  • ನಾನು ಮತ್ತು ಗುಂಡ -2: ಪಂಚಭಾಷಾ ಚಿತ್ರಕ್ಕೆ ರಾಕೇಶ್ ಅಡಿಗ ಹೀರೋ

    ನಾನು ಮತ್ತು ಗುಂಡ -2: ಪಂಚಭಾಷಾ ಚಿತ್ರಕ್ಕೆ ರಾಕೇಶ್ ಅಡಿಗ ಹೀರೋ

    ‘ನಾನು ಮತ್ತು ಗುಂಡ’ ಚಿತ್ರದ ಸೀಕ್ವೇಲ್ ನಲ್ಲಿ ನಾಯಕ ಯಾರಾಗಿರಬಹುದು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ನಟ ರಾಕೇಶ್ ಅಡಿಗ (Rakesh Adiga) ಅವರು ಈ ಭಾಗದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ  ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ನಾನು ಮತ್ತು ಗುಂಡ ಚಿತ್ರದ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ -2” (Naanu Mattu Gunda 2) ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ.

    ಮೊದಲ ಭಾಗದಲ್ಲಿ ಮರಣ ಹೊಂದಿದ್ದ  ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಹ  ರಘು ಹಾಸನ್  ಅವರೇ  ಹೊತ್ತಿದ್ದಾರೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಚಿತ್ರಕಥೆ ಮುಂದುವರೆಯಲಿದೆ. ಸೋಷಿಯಲ್  ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ.

    ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು  ರೋಹಿತ್ ರಮನ್ ರಚಿಸಿದ್ದಾರೆ. ಈ ಚಿತ್ರಕ್ಕಿದೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ  ನಾನು ಮತ್ತು ಗುಂಡ-೨  ಚಿತ್ರಕ್ಕೆ ಆರ್.ಪಿ.ಪಟ್ನಾಯಕ್  ಅವರ ಸಂಗೀತ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ,  ತನ್ವಿಕ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನವಿದೆ.

  • ಮತ್ತೆ ಒಂದಾದ ‘ಬಿಗ್ ಬಾಸ್’ ಮನೆಮಂದಿ – ರಾಕಿ ಬಗ್ಗೆ ದೂರಿದ ದಿವ್ಯಾ ಉರುಡುಗ

    ಮತ್ತೆ ಒಂದಾದ ‘ಬಿಗ್ ಬಾಸ್’ ಮನೆಮಂದಿ – ರಾಕಿ ಬಗ್ಗೆ ದೂರಿದ ದಿವ್ಯಾ ಉರುಡುಗ

    ಕಿರುತೆರೆಯ ಬಿಗ್ ರಿಯಾಲಿಟಿ ಶೋ ‘ಬಿಗ್ ಬಾಸ್ʼ (Bigg Boss Kannada) ಕಾರ್ಯಕ್ರಮ ಮುಗಿದ ಮೇಲೂ ಆ ಸ್ಪರ್ಧಿಗಳು ಜೊತೆಯಾಗೋದು ತುಂಬಾ ಕಮ್ಮಿ. ಆದರೆ ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು ಹಲವು ತಿಂಗಳುಗಳ ನಂತರ ಮತ್ತೆ ಜೊತೆಯಾಗಿದ್ದಾರೆ. ಈ ಕುರಿತ ಫೋಟೋಗಳನ್ನ ದಿವ್ಯಾ ಉರುಡುಗ ಶೇರ್ ಮಾಡಿ, ರಾಕೇಶ್ ಅಡಿಗ ಅವರ ಎಡವಟ್ಟಿನ ಬಗ್ಗೆ ಹೇಳಿ ದೂರಿದ್ದಾರೆ.

    ಒಂದು ಸಿನಿಮಾ, ಸೀರಿಯಲ್ ಅಥವಾ ರಿಯಾಲಿಟಿ ಶೋ ಮುಗಿದ ಮೇಲೆ ಜೊತೆಗೆ ಕೆಲಸ ಮಾಡಿದ ಕಲಾವಿದರು ಮತ್ತೆ ಜೊತೆಯಾಗುವುದು ತೀರಾ ಕಡಿಮೆ. ಆದರೆ ಬಿಗ್ ಬಾಸ್ ಸೀಸನ್ 9 ಸ್ಪರ್ಧಿಗಳು ಶೋನಲ್ಲಿ ಫ್ರೆಂಡ್ಸ್ ಆಗಿದ್ದು, ದೊಡ್ಮನೆ ಆಟ ಮುಗಿದ ಮೇಲೂ ಸ್ನೇಹವನ್ನ ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಶಾರುಖ್ ಖಾನ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಇದೀಗ ಮತ್ತೆ ರಾಕೇಶ್ ಅಡಿಗ ಜೊತೆ ಅಮೂಲ್ಯ, ನೇಹಾ, ಅನುಪಮಾ, ದಿವ್ಯಾ ಉರುಡುಗ (Divya Uruduga) ಕಾಣಿಸಿಕೊಂಡಿದ್ದಾರೆ. ಪೆಂಡಿಂಗ್ ಇದ್ದ ಅನುಪಮಾ ಬರ್ತ್‌ಡೇಯನ್ನ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದಾರೆ. ರಾಕೇಶ್ ಗ್ಯಾಂಗ್ ಒಂದೆಡೆ ಸೇರಿ ಮೋಜು- ಮಸ್ತಿ ಮಾಡಿದ್ದಾರೆ. ಎಲ್ಲರೂ ನಗುಮುಖದಿಂದ ಇರುವ ಖುಷಿಯ ಫೋಟೋವನ್ನ ದಿವ್ಯಾ ಉರುಡುಗ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಕೇಶ್ ಅಡಿಗ (Rakesh Adiga) ಅವರನ್ನ ನಟಿ ದೂರಿದ್ದಾರೆ.

    ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ನಟಿ ಧರಿಸಿದ್ದ ಪ್ಯಾಂಟ್‌ಗೆ ಏನೋ ಕಲೆ ಆಗಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ಪ್ಯಾಂಟ್ ಮೇಲೆ ಬಿದ್ದಿರುವ ಕಲೆ ಏನು ಎಂಬ ಪ್ರಶ್ನೆಗೆ ಅನೇಕರಲ್ಲಿ ಮೂಡಬಹುದು ಎನ್ನುವ ಕಾರಣಕ್ಕೆ ಶೇರ್ ಮಾಡಿದ ಪೋಸ್ಟ್‌ನಲ್ಲಿ ಕ್ಯಾಪ್ಶನ್‌ನಲ್ಲಿ ಈ ವಿಚಾರವನ್ನು ದಿವ್ಯಾ ಮೊದಲೇ ತಿಳಿಸಿದ್ದಾರೆ. ರಾಕೇಶ್ ಅಡಿಗ ಒಂದು ಬೌಲ್ ಸೂಪ್‌ನ ಕಾಲಿನ ಮೇಲೆ ಹಾಗೂ ಶೂ ಮೇಲೆ ಚೆಲ್ಲಿದ್ದಾನೆ ಎಂದು ದಿವ್ಯಾ ಬರೆದುಕೊಂಡಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆ ಮಂದಿ ಶೋ ಮುಗಿದ ಮೇಲೂ ಹೀಗೆ ಜೊತೆಯಾಗಿರೋದನ್ನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]