Tag: Rakesh

  • ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ರೂಪೇಶ್(Roopesh) ಅವರ ಕ್ಯಾಪ್ಟೆನ್ಸಿ ಮುಗಿದಿದೆ. ಯಾರೇ ಕ್ಯಾಪ್ಟನ್ ಆದರೂ ಮುಗಿದ ಮೇಲೆ ಮನೆಯವರಿಂದ ಅಂಕ ನೀಡಲಾಗುತ್ತದೆ. ಅದರಂತೆ ರೂಪೇಶ್‌ಗೂ ಮನೆಯವರೆಲ್ಲ ಪಾಸಿಟಿವ್ ಅಂಡ್ ನೆಗೆಟಿವ್ ಎರಡನ್ನು ಹೇಳಿ ಒಂದಷ್ಟು ಅಂಕ ನೀಡಿದರು.

    ಅದರಲ್ಲಿ ಎಲ್ಲಾ ಮುಗಿದ ಮೇಲೂ ರೂಪೇಶ್ ಬೆಂಬಿಡದಂತೆ ರಾಕೇಶ್(Rakesh) ಹೋಗಿ ಬೆಡ್ ರೂಮಿನಲ್ಲಿ ಅದನ್ನೇ ಮಾತನಾಡುತ್ತಿದ್ದಾನೆ. ರೂಪೇಶ್, ನಂಗೆ ಸುತ್ತಿ ಬಳಸಿ ಮಾತನಾಡುವಂತದ್ದು ಏನು ಇಲ್ಲ. ಡೈರೆಕ್ಟ್ ಆಗಿ ಪಾಯಿಂಟ್‌ಗೆ ಬರ್ತೀನಿ. ಸಾನ್ಯಾ(Sanya) ವಿಚಾರದಲ್ಲಿ ಸಾಫ್ಟ್ ಆದೆ ಅನ್ನಿಸಿತು ಎಂದಿದ್ದಾನೆ. ಆಗ ರೂಪೇಶ್ ಅವಳಿಗೆ ಮಾತ್ರ ಕಳುಹಿಸಿಲ್ಲ. ಎಲ್ಲರಿಗೂ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ನಂದುಗೆ ಬಿಟ್ಟುಕೊಟ್ಟಿದ್ದೆ ಎಂದು ಅಂದಿನ ಗೇಮ್‌ನ ವಿವರಣೆ ನೀಡಿದ್ದಾನೆ.

    ಆ ಮೂರು ಜನರಲ್ಲಿ ಪ್ರಿಯಾರಿಟಿ ಜಾಸ್ತಿ ಇತ್ತು ನನಗನ್ನಿಸಿತು. ಇಲ್ಲಿ ಏನು ನಡೀತಾ ಇದೆ ಅಂತ ನನಗೆ ಗೊತ್ತಾಗುತ್ತಿಲ್ಲ. ಆದರೆ ನೀನು ಅದ್ಯಾಕೋ ಪರ್ಸನಾಲಿಟಿಯಲ್ಲಿ ಸ್ವಲ್ಪ ಡಲ್ ಆಗುತ್ತಿದ್ದೀಯಾ ಅನ್ನಿಸುತ್ತಿದೆ. ನಿಮ್ಮಿಬ್ಬರ ನಡುವೆ ಏನೋ ನಡೀತಾ ಇದೆ ಅನ್ನಿಸ್ತಾ ಇದೆ ಎಂದು ರಾಕೇಶ್ ಹೇಳಿದಾಗ ರೂಪೇಶ್ ಸ್ವಲ್ಪ ಗೊಂದಲಕ್ಕೀಡಾಗಿದ್ದಾನೆ. ಆಗ ನನಗೇನು ಆ ರೀತಿ ಅನ್ನಿಸ್ತಾ ಇಲ್ಲ. ಕ್ಯಾಪ್ಟನ್ ಆಗಿ ನಡೆದುಕೊಂಡಿದ್ದೀನಿ. ಬೇಕಾದರೆ ಆ ಬಗ್ಗೆ ನಾನು ಆಲೋಚನೆ ಮಾಡಿಕೊಳ್ಳುತ್ತೇನೆ. ಒಂದು ದಿನ ಆಗಿರುವುದು ಬಿಟ್ಟರೆ ಬೇರೆ ದಿನ ಆಗಿಲ್ಲ ಎಂದು ರೂಪೇಶ್ ಮತ್ತೆ ಸ್ಪಷ್ಟನೆ ನೀಡಿದ್ದಾನೆ.

    ಮತ್ತೆ ಮಾತು ಮುಂದುವರೆಸಿದ ರಾಕೇಶ್, ನಿನ್ನ ತಮಾಷೆ, ನಿನ್ನ ತರಲೆಗಳನ್ನು ನಾವೂ ಕೇಳಿಯೇ ಇಲ್ಲ. ನಿನ್ನ ತಮಾಷೆಯನ್ನು ನಾವೂ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ ಎಂದಿದ್ದಾನೆ. ಅದಕ್ಕೆ ತಕ್ಕಂತೆ ತಿರುಗೇಟು ನೀಡಿದ ರೂಪೇಶ್, ಹಾಗೇ ನೋಡಿದರೆ ನೀನು ಸೋನು ಜೊತೆ ಮಾತನಾಡುವ ಶೈಲಿ, ಬೇರೆಯವರ ಹತ್ರ ಮಾತನಾಡುವ ಶೈಲಿಯಲ್ಲಿ ಬದಲಾವಣೆ ಇದೆ. ನನ್ನ ಹತ್ತಿರ ಅಂತು ಓಪನ್ ಅಪ್ ಆಗಿಯೇ ಇಲ್ಲ ಎಂದಿದ್ದಾನೆ. ಈ ಮಾತುಕತೆಗಳು ಮುಂದುವರಿದು ಒಂದು ಹಗ್ ಮಾಡಿ, ಡಿಸ್ಪ್ಯಾಚ್ ಆಗಿದ್ದಾರೆ.

    ಇನ್ನು ರೂಪೇಶ್ ಈ ಮಾತನ್ನು ಸಾನ್ಯಾಳಿಗೆ ಹೇಳುತ್ತಿದ್ದಾನೆ. ರಾಕಿಗೆ ನಿಂಗೆ ಅವಕಾಶ ಕೊಟ್ಟಂತೆ ಅನ್ನಿಸುತ್ತಿದೆಯಂತೆ. ನಾನು ಅದನ್ನು ಕ್ಲಾರಿಟಿ ಕೊಟ್ಟಿದ್ದೀನಿ ಎಂದಾಗ ಸಾನ್ಯಾ, ನೀನು ಯಾವಾಗಲೂ ಫ್ರೆಂಡ್ಸ್ ಅಂತ ನೋಡಿನೇ ಇಲ್ಲ ಅಂದಿದ್ದಾಳೆ. ಅವನತ್ರ ಏನು ಇಟ್ಟುಕೊಂಡು ಮಾತನಾಡುತ್ತಿದ್ದಾನೆ ಗೊತ್ತಾಗುತ್ತಿಲ್ಲ. ನನ್ನ ಒಳ್ಳೆಯದ್ದಕ್ಕೆ ಹೇಳುತ್ತಾ ಇರುವುದು ಅಂತ ಹೇಳುತ್ತಾನೆ. ಒಂದು ವೇದಿಕೆ ಅಂದ್ರೆ ಅಗ್ರೆಸ್ಸಿವ್ ಆಗುತ್ತೀನಿ ಅಂತಿದ್ದ. ಹಾಗಾದ್ರೆ ಇದು ಏನು. ಮನೆಯಲ್ಲಿದ್ದಾಗ ಹೇಗೆ ಇರುತ್ತೀವಿ ಆ ರೀತಿ ಇರಬೇಕು ಅಲ್ವಾ ಅಂತ ಸಾನ್ಯಾ ಜೊತೆಗೆ ಮಾತು ಮುಗಿಸಿದ. ಇದನ್ನೂ ಓದಿ: ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಮತ್ತೆ ರಾಕಿ ಬಳಿ ಬಂದ ರೂಪೇಶ್, ನಾನು ಆ ಬಗ್ಗೆ ಮಾತನಾಡುವುದಕ್ಕೆ ಯಾಕೆ ಸಮಯ ತೆಗೆದುಕೊಂಡೆ ಎಂದರೆ ಎಲ್ಲವನ್ನು ಅವಲೋಕನ ಮಾಡಿಕೊಳ್ಳಬೇಕಿತ್ತು ಅದಕ್ಕೆ ಎಂದು ವಿವರಣೆ ನೀಡುತ್ತಾ ಬಂದಿದ್ದು, ನೀನು ಹೇಳಿದ ಕೆಲವೊಂದು ಪಾಯಿಂಟ್ ಓಕೆ ಅನ್ನಿಸಿತು. ಅದನ್ನು ತಿದ್ದುಕೊಳ್ಳುತ್ತೇನೆ. ಆದರೆ ಓವರ್ ಆಲ್ ನನ್ನನ್ನು ನೋಡುವಾಗ ಸಾನ್ಯಾ ಬಂದ್ರೆ ಮಾತ್ರ ಫ್ರೆಂಡ್ಶಿಪ್ ಮಾತ್ರ ಕಾಣಿಸುತ್ತೆ ಎಂದು ಹೇಳುತ್ತಾನೆ. ಅದೇ ವೇಳೆ ಬಿಗ್‌ಬಾಸ್ ಎಲ್ಲರಿಗೂ ಲೀವಿಂಗ್ ಏರಿಯಾ ಸೋಫಾದಲ್ಲಿ ಕುಳಿತುಕೊಳ್ಳಲು ಹೇಳಿದ್ದರು. ಆಮೇಲೆ ಸಿಗು ಮತ್ತೆ ಈ ಬಗ್ಗೆ ಮಾತನಾಡೋಣ ಎಂದು ಒಂದಷ್ಟು ಚರ್ಚೆ ನಡೆಯಿತು.

    ಈ ಬಗ್ಗೆ ಸಂಜೆ ಮತ್ತೆ ಸಾನ್ಯಾ ಮತ್ತು ರೂಪೇಶ್ ಚರ್ಚೆ ನಡೆಸಿದ್ದಾರೆ. ಆಗ ಸಾನ್ಯಾ ಅವನು ನಾನು ಹೇಳಿದ್ದೆ ಯಾವಾಗಲೂ ರೈಟ್ ಎಂಬ ರೀತಿ ಕ್ರಿಯೇಟ್ ಆಗಿದೆ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಎಲ್ಲೆಲ್ಲಿ ಮಾತು ಅಗತ್ಯವಿಲ್ಲವೋ ಅಲ್ಲಿಯೂ ಮಾತನಾಡುವುದಕ್ಕೆ ಶುರು ಮಾಡಿದ್ದಾನೆ. ಸ್ಮಾರ್ಟ್ ಗೇಮ್ ಎಂದಿದ್ದಾಳೆ. ಇದನ್ನೂ ಓದಿ: ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

    ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

    ಕೆಲವೊಂದು ಸಲ ನಮ್ಮ ನಮ್ಮ ರಿಯಾಲಿಟಿ ಗುಣಗಳೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತದೆ. ಒರಟುತನ ಅಂದರೂ, ಬಾಯಿ ಸರಿ ಇಲ್ಲ ಅಂತ ಅಷ್ಟು ಸಲ ಹೇಳಿದರೂ, ಸೋನು ಯಾವತ್ತಿಗೂ ತನ್ನ ಗುಣದಲ್ಲಿ ಬದಲಾವಣೆ ಮಾಡಿಕೊಳ್ಳಲೇ ಇಲ್ಲ. ಆದರೆ ಈಗ ಆಕೆಯನ್ನೇ ಮನೆಯ ಪ್ರತಿಯೊಬ್ಬರು ತಮ್ಮದೇ ರೀತಿಯಲ್ಲಿ ಹೊಗಳುವುದಕ್ಕೆ ಶುರು ಮಾಡಿದ್ದಾರೆ. ಆದರೆ ರಾಕಿಗೆ ಕೊಂಚ ಸ್ಪೆಷಲ್ ಅಟ್ರಾಕ್ಷನ್ ಬಂದಿದೆ ಎನಿಸುತ್ತಿದೆ. ಅವಳು ತನ್ನ ಬಗ್ಗೆ ಯಾವ ಒಪಿನಿಯನ್ ಇಟ್ಟುಕೊಂಡಿದ್ದಾಳೆ ಎಂಬ ಕುತೂಹಲ ಹೆಚ್ಚಾಗಿದೆ. ಅದನ್ನು ತಿಳಿಯುವುದಕ್ಕೆ ತಾನು ಟ್ರೈ ಮಾಡಿದ್ದಲ್ಲದೆ, ಮನೆಯವರಿಂದಾನು ಆ ಕಾರ್ಯಕ್ಕೆ ಕೈ ಹಾಕಿದ್ದಾನೆ.

    ಸೋನು ಕೂಡ ಇತ್ತೀಚೆಗೆ ರಾಖಿ ವಿಚಾರದಲ್ಲಿ ತುಂಬಾನೆ ಕಾಳಜಿ ತೆಗೆದುಕೊಳ್ಳುತ್ತಿದ್ದಾಳೆ. ರಾಕಿಗೋಸ್ಕರ ಎಲ್ಲರ ಬಳಿ ಜಗಳವಾಡಿ ಮೂರು ಪೀಸ್ ಪಪ್ಪಾಯ ಎತ್ತಿಟ್ಟಿದ್ದಾಳೆ. ಅವನಿಗೋಸ್ಕರ ಅಂತ ಸಮಯ ಇಡುತ್ತಾಳೆ. ಸುಮ್ಮನೆ ಸುಮ್ಮನೆ ಇದ್ದವಳೂ ಡೈನಿಂಗ್ ಟೇಬಲ್ ನಲ್ಲಿ ಹೊಡಿಬೇಕು ಅನಿಸುತ್ತಿದ್ದರೆ ಹೊಡೆದು ಬಿಡಬೇಕು, ಮಾತನಾಡಿಸಬೇಕು ಎನಸಿದರೆ ಮಾತನಾಡಿಬಿಡಬೇಕು, ಬೈಬೇಕು ಅನಿಸಿದರೆ ಬೈದು ಬಿಡಬೇಕು, ಏನನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅನ್ನಿಸಿದ್ದೆಲ್ಲವನ್ನು ಹೇಳಿಬಿಡಬೇಕು ಎಂದಿದ್ದಾಳೆ.  ಇದನ್ನೂ ಓದಿ: ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ಹಾಗೇ ರಾಕಿ ವಿಚಾರ ಬಂದಾಗ ಮನಸ್ಸಲ್ಲೇ ನಗುತ್ತಾನೆ. ಆದರೆ ಅವನು ಫೀಲಿಂಗ್ಸ್‍ಗೆ ವ್ಯಾಲ್ಯೂ ಕೊಡಲ್ಲ ಎಂಬ ಬೇಸರ ಕೂಡ ಇದೆ. ಜಯಶ್ರೀ ಬಳಿ ಅದನ್ನೇ ಹೇಳಿದ್ದಾಳೆ. ಬಳಿಕ ಮಧ್ಯಾಹ್ನ ಸೋಯಾ ಫ್ರೈ ತಿನ್ನುವಾಗ ರಾಕಿಗೆ ತಿನ್ನಿಸಲು ಹೋಗಿದ್ದಾಳೆ ಬೇಡ ಎಂದಿದ್ದಾನೆ. ಇದೆಲ್ಲಾ ಮುಗಿದ ಮೇಲೆ ಸೋನು ಲೈಟ್ ಆಗಿ ಟಚ್ ಅಪ್ ಮಾಡಿಕೊಳ್ಳಲು ಪೌಡರ್ ರೂಮಿಗೆ ಹೋಗಿದ್ದಳು. ಆಗ ಹಿಂದೆಯೇ ಸದ್ದು ಮಾಡದಂತೆ ಬಂದ ರೂಪೇಶ್ ಅವಳು ಏನು ಮಾತನಾಡುತ್ತಿದ್ದಾಳೆ ಅಂತ ಕೇಳಿಸಿಕೊಂಡಿದ್ದಾನೆ.

    ಸೋನು, ರಾಕಿ ಬಗ್ಗೆ ಗಮನವೇ ಇಲ್ಲದಂತೆ ಅವನ ಬಗ್ಗೆಯೇ ಮಾತನಾಡುತ್ತಿದ್ದಾಳೆ. ನೀನ್ಯಾಕೆ ಅವನ ಸಹವಾಸಕ್ಕೆ ಹೋಗ್ತೀಯಾ. ಏನೋ ಮಿಸ್ಸಾಗಿ ಬಿದ್ದಿದ್ದಕ್ಕೇನೆ ಅಯ್ಯಯ್ಯಾ ಅಂದುಬಿಟ್ಟಾ. ಈಗ ನೀನು ಹೋಗಿ ಅವನನ್ನು ಕೇರ್ ಮಾಡೋದು, ತಿನ್ನಿಸೋದನ್ನ ನೋಡಿದರೆ ಮಖ್ ಮಖ್‍ಕ್ಕೆ ಹೊಡೆದಾಕಿ ಬಿಡುತ್ತೇನೆ. ಬೇಕು ಅಂತ ಏನು ಮಾಡಿದ್ದಲ್ಲ. ಅವನು ಯಾವ ಸೀಮೆ ಫ್ರೆಂಡು ಅಂತ ಒಬ್ಬೊಬ್ಬಳೆ ಮಾತನಾಡಿಕೊಂಡು ಹೊರಗೆ ಬಂದಿದ್ದಾರೆ. ಅಲ್ಲೆ ಕದ್ದು ಕುಳಿತಿದ್ದ ರಾಕೇಶ್ ಅವಳನ್ನು ಹೆದರಿಸಿದ್ದಾರೆ.

    ಮಧ್ಯಾಹ್ನ 2.30 ಗಂಟೆ ಆಗಿತ್ತು. ಜಯಶ್ರೀ ಹಾಗೂ ಸೋನು ಒಂದು ಬೆಡ್ ಮೇಲೆ ಮಲಗಿದ್ದರು. ರಾಕೇಶ್ ಅದರ ಎದುರುಗಡೆ ಮಲಗಿದ್ದ. ಆಗ ಅವನು ಹೋದ ಬಿಡು ಅಂತ ಹೇಳಿದ ಜಯಶ್ರೀ, ರಾಕಿ ಬಗ್ಗೆ ಕೇಳಿದ್ದಾಳೆ. ಸೋನು ಮಾತನಾಡುವಾಗ. ಓಓ ನಿಂಗೆ ಏನ್ ಅನ್ನಿಸುತ್ತದೆ ನಿಜ ಹೇಳು. ಅವನತ್ತಿರ ಯಾವ ಫೀಲಿಂಗ್ಸ್‍ಗೂ ವ್ಯಾಲ್ಯೂ ಇಲ್ಲ ಎಂದಾಗ ಜಯಶ್ರೀ ನಿನಗಿದ್ಯಲ್ಲ ಅಂದಾಗ ಸೋನು ನನಗೂ ಇಲ್ಲ ಎಂದಿದ್ದಾಳೆ. ಆಗ ಜಯಶ್ರೀ, ಹಾಗಾದರೆ ಸುಮ್ನೆ ನೋಡೋದು ಮಾತನಾಡೋದೆಲ್ಲ ಏನು ಎಂದಿದ್ದಾಳೆ. ಇದನ್ನೂ ಓದಿ: ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

    ಅದಕ್ಕೆ ಸೋನು ಸುಮ್ನೆ ಅದೆಲ್ಲ. ಅಂದರೆ ಕೇರ್ ಮಾಡುತ್ತಾನೆ. ಆದರೆ ಫೀಲಿಂಗ್ಸ್‍ಗೆಲ್ಲಾ ಬೆಲೆ ಇಲ್ಲ. ಅವನ ಸ್ಟೋರಿಯಲ್ಲಿ ಪಾಪ ಅವನು ಬೇಜಾರಾಗಿದ್ದಾನೆ. ಕಷ್ಟ ಸುಖ ಮೋಸ ಎಲ್ಲದನ್ನು ನೋಡಿದ್ದಾನೆ. ಆರು ಜನರನ್ನು ಲವ್ ಮಾಡಿದ್ದಾನೆ. ಯಾರು ಆ ರೀತಿಯೆಲ್ಲಾ ಯಾರು ನಿಜ ಒಪ್ಪಿಕೊಳ್ಳಲ್ಲ. ತುಂಬಾ ಜೆನ್ಯೂನು ಇದ್ದಾನೆ ಅಂದಾಗ ಜಯಶ್ರೀ ಓ ಅವತ್ತಿನಿಂದಾನೇ ನಿಂಗೆ ಲವ್ ಆಗಿದ್ದ ಎಂದಾಗ ಸಡನ್ ಅರ್ಥ ಮಾಡಿಕೊಂಡ ಸೋನು, ಲವ್ ಅಂದರೆ ಕಪಾಳಕ್ಕೆ ಹೊಡಿತೀನಿ ಅಂತ ಹೇಳಿ ಮಾತು ಮುಂದುವರೆಸಿದ್ದಾಳೆ. ಅವತ್ತು ನಾನು ಅಂದುಕೊಂಡಿದ್ದೆ ಬೇಡ ಈ ಹುಡುಗನ ಸಹವಾಸ ಅಂತ. ಬಳಿಕ ಅದನ್ನು ನೆಗೆಟಿವ್ ಆಗಿ ಯಾಕೆ ಥಿಂಕ್ ಮಾಡಬೇಕು. ಬೇರೆ ಯಾವ ಹುಡುಗರು ಈ ರೀತಿ ಮಾತನಾಡಲ್ಲ. ನೀನೇ ನನ್ನ ಗರ್ಲ್ ಫ್ರೆಂಡ್ ಅಂತ ಹೇಳಿ ಮೋಸ ಮಾಡುತ್ತಾರೆ. ಆದರೆ ಇವನು ತುಂಬಾ ಜೆನ್ಯೂನ್ ಇದ್ದಾನೆ ಅನ್ನಿಸಿ, ಇವನೊಬ್ಬನೆ ಸಾಕು ಎಂದುಕೊಂಡೆ ಎಂದಿದ್ದಾಳೆ. ಮಧ್ಯೆ ಮಧ್ಯೆ ಜಯಶ್ರೀ ಕೂಡ ರೇಗಿಸಿದ್ದಾರೆ. ಆಮೇಲೆ ಹಿಂದೆನೆ ಕೂತಿದ್ದ ರಾಕಿ ಬಗ್ಗೆಯೂ ಹೇಳಿದ್ದಾರೆ. ರಾಖಿ ಒಂದು ಸುಂದರ ನಗು ಬೀರಿ ಸೋನು ಕಡೆ ದಿಂಬೆಸೆದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ರಾಕಿ ಯಾರ ಜೊತೆಗಾದ್ರೂ ಮಾತಾಡ್ಲಿ ಚೈತ್ರಾ ಜೊತೆ ಬಿಟ್ಟು – ಯಾಕೆಂದ್ರೆ ಅದು ವಯಸ್ಸಿನ ಮ್ಯಾಟರ್ ಅಂತೆ ಸೋನುಗೆ..!

    ರಾಕಿ ಯಾರ ಜೊತೆಗಾದ್ರೂ ಮಾತಾಡ್ಲಿ ಚೈತ್ರಾ ಜೊತೆ ಬಿಟ್ಟು – ಯಾಕೆಂದ್ರೆ ಅದು ವಯಸ್ಸಿನ ಮ್ಯಾಟರ್ ಅಂತೆ ಸೋನುಗೆ..!

    ಬಿಗ್‍ಬಾಸ್ ಮನೆಯಲ್ಲಿ ಹಿಂಗೆ ಕಿತ್ತಾಡಿ ಹಂಗೆ ಒಂದಾಗುವವರು ಯಾರು ಎಂದರೆ ಅದು ಸೋನು ಮತ್ತು ರಾಕೇಶ್ ಅಂತಾನೇ ಹೇಳಬಹುದು. ಸೋನು ಬಾಯಿ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಸಲ ಬೀಪ್ ಸೌಂಡ್ ಶಬ್ಧಗಳೇ ಹೆಚ್ಚು ಬರುತ್ತವೆ. ಇನ್ನು ಕೆಲವೊಂದು ಸಲ ಮನಸ್ಸಿಗೆ ನಾಟುವಂತ ಶಬ್ಧಗಳು ಬರುತ್ತವೆ. ಇತ್ತೀಚೆಗೆ ಇದು ರಾಕಿಯನ್ನು ಬಿಟ್ಟಿಲ್ಲ. ಕಳೆದ ವಾರ ರಾಕಿ ನಾನೇನು ನಿಮ್ಮ ಮನೆ ಆಳ. ಇದೆಲ್ಲ ನನ್ನತ್ರ ಇಟ್ಟುಕೊಳ್ಳಬೇಡ ಅಂತ ಸೋನು ಮೇಲೆ ಎರಡು ಸಲ ರೇಗಿದ್ದರು. ಆಗ ನೋಡಿದವರು ಓ ಸೋನು ಅಂಡ್ ರಾಕಿ ಫ್ರೆಂಡ್ಶಿಪ್ ಇಲ್ಲಿಗೆ ಕಟ್ ಅಂತ ಎಂದುಕೊಂಡಿದ್ದರು. ಆಗಲೂ ಏನು ಆಗಲಿಲ್ಲ. ಇಬ್ಬರು ಮಾಮೂಲಿ ದೋಸ್ತರಾಗಿಯೇ ಮುಂದುವರೆದಿದ್ದರು.

    ಇತ್ತೀಚೆಗೆ ಅಕ್ಷತಾ ಮತ್ತು ರಾಕಿ ಇಬ್ಬರು ಇದ್ದಾಗಲು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಸೋನು ಹೇಳಿದ್ದರು. ಆಗ ದೊಡ್ಡ ಮನಸ್ತಾಪವೇ ಬಂದಿತ್ತು. ರಾಕಿ, ಅಕ್ಷತಾಗೆ ಸಮಾಧಾನ ಮಾಡಿದ್ದರು. ಆಗಲೂ ಇನ್ನು ಮುಂದೆ ಇವರಿಬ್ಬರು ಅಷ್ಟೇ ಅಂದುಕೊಂಡಿದ್ದರು. ಆದರೆ ಅದೇನೋ ಗೊತ್ತಿಲ್ಲ. ಅದೆಷ್ಟೇ ಮಾತು ಕತೆಗಳು ನಡೆದರೂ ಸೋನು ಹಾಗೂ ರಾಕಿಯನ್ನು ದೂರ ಮಾಡಲು ಆಗುತ್ತಿಲ್ಲ. ಇಬ್ಬರು ಮತ್ತೆ ಮತ್ತೆ ಬರೀ ಒಂದಾಗುವುದಲ್ಲ, ಕ್ಲೋಸ್ ಕೂಡ ಆಗುತ್ತಿದ್ದಾರೆ. ಈ ಮಧ್ಯೆ ರಾಕಿಗೆ ಸೋನು ಯಾಕೆ ಚೈತ್ರಾ ಬಳಿ ಮಾತನಾಡಿದರೆ ಸಹಿಸುವುದಿಲ್ಲ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಈ ಪ್ರಶ್ನೆ ಈ ಥಿಂಕ್ ರಾಕಿಗೆ ಇಂದು ನಿನ್ನೆ ಬಂದಿರುವ ಪ್ರಶ್ನೆಯಲ್ಲ. ಸುಮಾರು ದಿನದ ಪ್ರಶ್ನೆ ಈಗ ಉತ್ತರ ಕಂಡುಕೊಳ್ಳಲು ಯೋಚಿಸಿದ್ದಾರೆ ಎನಿಸುತ್ತದೆ. ಬೆಡ್ ಮೇಲೆ ರಾಕಿ ಮಲಗಿದ್ದರು. ರಾಕಿ ಮೇಲೆ ಕುಳಿತು ಸೋನು ಮಸಾಜ್ ಮಾಡುತ್ತಾ ಇದ್ದರು. ಆಗ ನಿಧಾನವಾಗಿ ರಾಕಿ, ಇಲ್ಲಿ ಯಾರು ಇಲ್ಲ ಅಲ್ವಾ ಅಂತ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಇಲ್ಲ ಎಂದಾಗ. ನಂಗೆ ಒಂದು ಸತ್ಯ ಹೇಳು ನಾನು ಯಾರಿಗೂ ಹೇಳಲ್ಲ. ನಾನು ಯಾರ ಜೊತೆ ಮಾತನಾಡಿದರು ನೀನು ಏನು ಅನ್ನಲ್ಲ. ಆದರೆ ಚೈತ್ರಾ ಅಕ್ಕ ಜೊತೆ ಮಾತನಾಡಿದರೆ ನಿನಗೆ ಇಷ್ಟವಾಗಲ್ಲ ಯಾಕೆ ಎಂದು ಕೇಳಿದ್ದಾರೆ. ಅದಕ್ಕೆ ಸೋನು, ಅದೇ ನನಗೂ ಗೊತ್ತಾಗುತ್ತಿಲ್ಲ. ಅವತ್ತೆ ಕೂತು ನಾನು ಕೂಡ ಥಿಂಕ್ ಮಾಡಿದ್ದೇನೆ. ಯಾರೇ ಆಗಲಿ ಅವರು ವಯಸ್ಸಿನ ತಕ್ಕಂತೆ ನಡೆದುಕೊಳ್ಳಬೇಕು. ನೀನು ಇನ್ನು ಯಂಗ್ ಹುಡುಗ. ಬೇರೆ ಹುಡುಗಿಯರ ಜೊತೆ ಇರುವುದು ಕಾಮನ್. ಹಾಗಂತ ಅವರು ಹಂಗೆ ಇರಬೇಕು ಅಂದರೆ ಎಂದು ಈ ಪ್ರಶ್ನೆ ಬೇಡ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಆದರೆ ರಾಕಿಗೆ ಅದನ್ನು ತಿಳಿಯುವ ಕುತೂಹಲ. ಪ್ಲೀಸ್ ಪ್ಲೀಸ್ ಹೇಳು. ನನ್ನ ಬಗ್ಗೆ ಅವರು ಹೊರಗಡೆ ಏನೋ ಅಂದಿರುತ್ತಾರೆ. ಅದಕ್ಕೆ ನೀನು ಈ ಥರ ನಡೆದುಕೊಳ್ಳುತ್ತಾ ಇದ್ದೀಯಾ ಎಂದಾಗ, ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ, ಎಲ್ಲರ ಜೊತೆಗೂ ಚೆನ್ನಾಗಿಯೇ ಇರುತ್ತಾರೆ. ಅವತ್ತೇ ನೋಡು ಸ್ಲಿಪ್ಪರ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ಅಚ್ಚಚ್ಚೋ ನನ್ನ ಮುದ್ದು, ನನ್ನ ಗುಂಡು, ನೀನ್ ನನ್ನ ಮಕ್ಕಳ ಥರ ಅಂತೆಲ್ಲಾ ಅಂದ್ರು ಉರಿದು ಹೋಗಿಬಿಟ್ಟಿತು. ಈಗ ಅದೇ ಸೈಜಿನ ಹವಾಯ್ ಚಪ್ಪಲಿ ತೆಗೆದುಕೊಂಡು ಬಂದು ವಾಶ್ ರೂಮಿಗೆ ಯೂಸ್ ಮಾಡುತ್ತೇನೆ ನೋಡು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ  ರಾಕೇಶ್ ಫುಲ್ ಶಾಕ್..!

    ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಬಿಗ್‍ಬಾಸ್ ಮತ್ತೊಂದು ಫನ್ ಆಟವನ್ನೇ ಮನೆ ಸದಸ್ಯರಿಗೆ ನೀಡಿತ್ತು. ಅದು ಎರಡು ತಂಡದಿಂದ ಮೊದಲು ನಿಂತವರು ಚಿತ್ರವನ್ನು ನೋಡಿ ಬಿಡಿಸಬೇಕು. ಅವರನ್ನು ನೋಡಿ ಇನ್ನು ಮೂವರು ಅದೇ ಚಿತ್ರವನ್ನು ಬಿಡಿಸಬೇಕು. ಕಡೆಯಲ್ಲಿ ನಿಂತವರು ಆ ಚಿತ್ರವನ್ನು ಊಹಿಸಬೇಕು. ಈ ಆಟ ಐದು ರೌಂಡ್ ಇತ್ತು. ಪವರ್ ಸ್ಟಾರ್ ಟೀಂನಿಂದ ಚೈತ್ರಾ ಚಿತ್ರ ನೋಡಿ ಬಿಡಿಸುವ ಜವಾಬ್ದಾರಿ ತೆಗೆದುಕೊಂಡರು. ಜಿಂಗಲಕ ಟೀಂನಲ್ಲಿ ಸಾನ್ಯಾ ಚಿತ್ರವನ್ನು ನೋಡಿ ಬಿಡಿಸುವ ಜವಾಬ್ದಾರಿ ತೆಗೆದುಕೊಂಡರು.

    ಈ ಆಟವನ್ನು ನೋಡಿ ನಕ್ಕು ನಕ್ಕು ಸುಸ್ತಾಗುವಂತೆ ಆಗಿತ್ತು. ಚೈತ್ರಾ ಒಳ್ಳೆ ಪೇಂಟರ್ ರೀತಿ ಚಿತ್ರ ಬಿಡಿಸುತ್ತಿದ್ದರೆ, ಅದನ್ನು ಕಂಡು ಜಯಶ್ರೀ ಕೊಡುತ್ತಿದ್ದ ರೂಪವೇ ಇನ್ನೊಂದು ರೀತಿ ಇರುತ್ತಿತ್ತು. ಅದನ್ನು ನೋಡಿದ ರೂಪೇಶ್ ಮತ್ತೊಂದು ರೀತಿ ಅರ್ಥ ಮಾಡಿಕೊಳ್ಳುತ್ತಿದ್ದರು. ಸೋನು ಇನ್ಯಾವುದೋ ರೀತಿಯಲ್ಲಿ ಅರ್ಥ ಮಾಡಿಕೊಂಡು ಬಿಡಿಸಿದ ಚಿತ್ರವನ್ನು ಫೈನಲಿ ರಾಕೇಶ್ ನೋಡಿ ಆ ಚಿತ್ರ ಯಾವುದು ಎಂದು ಹೇಳುವಷ್ಟರಲ್ಲಿ ತಲೆ ಕೆಡಿಸಿಕೊಂಡು ಕೂರುವ ಸ್ಥಿತಿ ತಲುಪಿತ್ತು. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಜಿಂಗಲಕ ಟೀಂನವರು ಪವರ್ ಸ್ಟಾರ್ ಟೀಂಗಿಂತ ಉತ್ತಮವಾಗಿದ್ದರು. ಬಿಡಿಸಿದ ಚಿತ್ರಗಳಲ್ಲಿ ಮೂರು ಚಿತ್ರಗಳಿಗೆ ಸರಿಯಾದ ಉತ್ತರ ಹೇಳಿದ್ದರು. ಸಾನ್ಯಾ ತೋರಿಸಿದ ಚಿತ್ರವನ್ನು ಜಶ್ವಂತ್ ಒಂದು ಹಂತಕ್ಕೆ, ಗುರೂಜಿ ಇನ್ನೊಂದು ಹಂತಕ್ಕೆ, ನಂದಿನಿ ಮತ್ತೊಂದು ಹಂತಕ್ಕೆ ತಲುಪಿಸಿ, ಫೈನಲಿ ಅಕ್ಷತಾ ಸರಿಯಾದ ಉತ್ತರ ಹೇಳಿದ್ದರು. ಹೀಗಾಗಿ ಜಿಂಗಲಕ ಟೀಂ ಇದರಲ್ಲಿ ವಿನ್ ಆಗಿತ್ತು. ಇದನ್ನೂ ಓದಿ: ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಪವರ್ ಸ್ಟಾರ್ ಟೀಂನಲ್ಲಿ ಸೋನು ಅಂದಾಜು ಮಾಡುತ್ತಿದ್ದದ್ದೇ ಕಾಮಿಡಿ ಎನಿಸಿದ್ದು. ಸೋನು ಹೇಳಿದ ಉತ್ತರಗಳು ಇಂತಿವೆ. ಚೈತ್ರಾ ತೋರಿಸಿದ್ದು ಕ್ಯಾಮೆರಾ ಚಿತ್ರ, ಆದರೆ ಸೋನು ಬರೆದಿದ್ದು ಡಂಬಲ್ಸ್ ಚಿತ್ರ. ಕೋತಿ ಚಿತ್ರವನ್ನು ಬೆಕ್ಕಿನ ರೀತಿ ಬಿಡಿಸಿದ್ದರು. ರಾಕೇಶ್ ಅದನ್ನೇ ಹೇಳಿದ್ದಾರೆ. ನೂಡಲ್ಸ್ ಅನ್ನು ಮೂಲಂಗಿಯಂತೆ ಸೋನು ಬರೆದಿದ್ದರು. ಇದೆಲ್ಲಾ ಇರಲಿ ಬಟರ್ ಫ್ಲೈ ಅನ್ನು ಕ್ಯಾರೆಟ್ ರೀತಿ ಬರೆದಿದ್ದಳು. ಸೋನು ಬರೆದಿದ್ದನ್ನು ಅರ್ಥೈಸಿಕೊಳ್ಳುವಲ್ಲಿ ರಾಕೇಶ್ ಸುಸ್ತೋ ಸುಸ್ತೋ ಎನ್ನುವಂತೆ ಆಗುತ್ತಿದ್ದರು. ಸೋನು ಬರೆದಿದ್ದು ಯಾವ ಚಿತ್ರ ಅಂತ ಗೆಸ್ ಮಾಡುವುದಕ್ಕೂ ಅವರಿಂದ ಆಗುತ್ತಿರಲಿಲ್ಲ. ಆದರೆ ಅಲ್ಲಿ ಟೈಮ್ ಔಟ್ ಆಗುತ್ತಿದ್ದ ಕಾರಣ ಯಾವುದೋ ಒಂದು ಹೆಸರನ್ನು ಸೂಚಿಸುತ್ತಿದ್ದರು.

    ಫೈನಲಿ ಜಿಂಗಲಕಾ ಟೀಂ ವಿನ್ ಆಯಿತು. ಇದು ಪವರ್ ಸ್ಟಾರ್ ಟೀಂಗೆ ತುಂಬಾನೆ ಬೇಸರವಾಗಿದೆ. ಚೈತ್ರಾ ಬೇಸರದಲ್ಲಿ ಕುಳಿತಿದ್ದು, ಜಯಶ್ರೀ ಕ್ಷಮೆಯನ್ನು ಕೇಳಿದ್ದಾರೆ. ಆದರೆ ಅಲ್ಲಿಗೆ ಬಂದ ಸೋನು, ತನ್ನದೇನು ತಪ್ಪೇ ಇಲ್ಲವೇನೋ ಎಂಬಂತೆ ಎಲ್ಲರ ಮೇಲೆ ಎಗರಾಡಿದ್ದಾರೆ. ನಾನೇ ಮುಂದೆ ನಿಂತುಕೊಳ್ಳಬೇಕಿತ್ತು. ಸುಮ್ಮನೆ ನಿನ್ನ ನಿಂತುಕೊಳ್ಳುವುದಕ್ಕೆ ಬಿಟ್ಟೆ ಎಂದು ಹೆಗರಾಡಿದ್ದಾರೆ. ಎಲ್ಲರೂ ತಪ್ಪಾಗಿದ್ದು ಎಲ್ಲಿ ಅಂತ ಮಾತನಾಡಿಕೊಂಡು ಸಮಾಧಾನ ಮಾಡಿಕೊಂಡಿದ್ದಾರೆ. ಇನ್ನು ಅಲ್ಲಿಗೆ ಬಂದ ಸೋಮಣ್ಣ ಸೋತ ಟೀಂಗೆ ಸ್ಪೂರ್ತಿ ತುಂಬಿದ್ದಾರೆ. ಹಾಗೇ ಚೈತ್ರಾಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ನೀವೂ ಮಕ್ಕಳಿಗೆ ಹೇಳಿ ಕೊಟ್ಟು ಹೇಳಿ ಕೊಟ್ಟು ಒಳ್ಳೆ ಪೇಂಟರ್ ಆಗಿ ಹೋಗಿದ್ದೀರಾ. ಚಿತ್ರ ನೋಡಿದ ಕೂಡಲೇ ಕ್ಯಾಚ್ ಮಾಡಿ, ಅದ್ಭುತ ಪೇಂಟಿಂಗ್ ಮಾಡಿದ್ದೀರಿ. ಗುಡ್ ಎಫರ್ಟ್ ಎಂದು ಟೀಂಗೆ ಮತ್ತಷ್ಟು ಬಲ ತುಂಬಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಈ ‘ಪ್ರಣಯ ಪಕ್ಷಿ’ಗಳದ್ದೇ ಮಾತು

    ಬಿಗ್ ಬಾಸ್ ಮನೆಯಲ್ಲಿ ಈ ‘ಪ್ರಣಯ ಪಕ್ಷಿ’ಗಳದ್ದೇ ಮಾತು

    ಕಿಚ್ಚನ ವಾರದ ಕ್ಲಾಸ್ ನಂತರ ಬಿಗ್ ಬಾಸ್ ಮನೆ ತಣ್ಣಗೆ ಆದಂತೆ ಕಾಣುತ್ತಿದೆ. ಇಂದು ದೊಡ್ಮನೆಯಲ್ಲೂ 75ನೇ ಸ್ವಾಂತಂತ್ರ್ಯ ಅಮೃತ ದಿನಾಚರಣೆಯನ್ನು ಬಲು ಸಡಗರದಿಂದ ಮನೆ ಸದಸ್ಯರು ಆಚರಿಸಿದ್ದಾರೆ. ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಬಂದಿದ್ದ ಸ್ಪರ್ಧಿಗಳು ಭಾರತದ ಧ್ವಜ ಮತ್ತು ಭಾರತಾಂಬೆಗೆ ನಮಿಸಿದರು. ಸಹಿ ಹಂಚಿಕೊಂಡು ಸಂಭ್ರಮಿಸಿದರು. ಆನಂತರ ತಮ್ಮ ಪಾಡಿಗೆ ತಾವು ಇಷ್ಟ ಬಂದಂತೆ ಚರ್ಚೆಗೆ ಕೂತರು.

    ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಫ್ಲರ್ಟ್ ಕಾರಣಕ್ಕಾಗಿ ರಾಕೇಶ್ ಅಡಿಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಒಂದು ಕಡೆ ಸೋನು ಶ್ರೀನಿವಾಸ ಗೌಡ ಮತ್ತೊಂದು ಕಡೆ ಸ್ಪೂರ್ತಿ ಗೌಡ. ಈ ತ್ರಿಕೋನ ಲವ್ ಕಹಾನಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪೂರ್ತಿ ಗೌಡ ಮತ್ತು ರಾಕೇಶ್ ಯಾವಾಗಲೂ ಅಂಟಿಕೊಂಡೇ ಓಡಾಡುವುದರಿಂದ, ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳು ಎಂದೇ ಬಿಂಬಿಸಲಾಗುತ್ತಿದೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ರಾಕೇಶ್ ಎಲ್ಲಿರುತ್ತಾನೋ, ಅಲ್ಲಿ ಸ್ಪೂರ್ತಿ ಗೌಡ ಕಾಣಿಸಿಕೊಳ್ಳುತ್ತಾರೆ. ಇಬ್ಬರ ಮಧ್ಯದ ಸಂಭಾಷಣೆಗಳು ಕೂಡ ಪ್ರೇಮಿಗಳ ಕಲರವದಂತೆಯೇ ಇರುತ್ತವೆ. ರಾಕೇಶ್ ಗಲ್ಲ ಮುಟ್ಟಿ ಮುದ್ದಿಸುವಂತೆ ಸ್ಪೂರ್ತಿ ಕೂಡ ಮಾತುಗಳನ್ನು ಆಡುತ್ತಾರೆ. ಈ ಜೋಡಿಯ ಬಗ್ಗೆ ಮನೆಯವರು ಈಗೊಂದು ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಹಾಗಾಗಿಯೇ ಇಡೀ ಮನೆಯ ಸದಸ್ಯರ ಕಣ್ಣು ಇಬ್ಬರ ಮೇಲೆ ನೆಟ್ಟಿದೆ. ಈ ಜೋಡಿಯೂ ಕೂಡ ಅನುಮಾನ ಬರುವಂತೆಯೇ ಮನೆಯಲ್ಲಿ ವರ್ತಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಮೇಲೆ ನನಗೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡ ಸೋನು ಗೌಡ

    ರಾಕೇಶ್ ಮೇಲೆ ನನಗೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡ ಸೋನು ಗೌಡ

    ಗಾಗಲೇ ನನಗೊಬ್ಬ ಬಾಯ್ ಫ್ರೆಂಡ್ ಇದ್ದ, ಅವನು ಮೋಸ ಮಾಡಿದ ಎಂದು ಬಿಗ್ ಬಾಸ್ ಮನೆಯೊಳಗೆ ಬಂದ ಮೊದಲ ದಿನವೇ ಕಣ್ಣೀರು ಹಾಕಿದ್ದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ, ದೊಡ್ಮನೆ ಒಳಗೆ ಹೋಗಿ ಒಂದು ವಾರ ಕೂಡ ಆಗಿಲ್ಲ, ಆಗಲೇ ತನ್ನ ಸಹಸ್ಪರ್ಧಿ ರಾಕೇಶ್ ಮೇಲೆ ಫೀಲಿಂಗ್ಸ್ ಇದೆ ಎಂದು ಹೇಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ.

    ಫೀಲಿಂಗ್ಸ್ ಎನ್ನುವುದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡ ನಂತರ ಹುಟ್ಟುವಂಥದ್ದು. ಆದರೆ, ತತಕ್ಷಣವೇ ಸೋನು ಗೌಡ ಈ ರೀತಿ ಹೇಳುತ್ತಿದ್ದಾರೆ ಅಂದರೆ, ಆ ಹುಡುಗಿಯಲ್ಲಿ ಏನೋ ದೋಷವಿದೆ ಎಂದು ಕಾಮೆಂಟ್ ಮಾಡಲಾಗುತ್ತಿದೆ. ರಾಕೇಶ್ ವಿಚಾರವಾಗಿ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಗೌಡ ಮತ್ತು ಸೋನು ಶ್ರೀನಿವಾಸ್ ಗೌಡ ಇಬ್ಬರೂ ಕಿತ್ತಾಡುತ್ತಿದ್ದಾರೆ. ಇಬ್ಬರೂ ರಾಕೇಶ್ ನತ್ತ ಒಲವು ಬೆಳೆಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ. ಈ ಮಧ್ಯೆ ರಾಕೇಶ್ ಮೇಲೆ ತಮಗೆ ಫೀಲ್ ಆಗಿರುವ ಕುರಿತು ಸೋನು ನೇರವಾಗಿಯೇ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

    ರೂಪೇಶ್ ಶೆಟ್ಟಿ ಬಳಿ ಬರುವ ಸೋನು, ತನಗೆ ಸೀರಿಯಸ್ ಆಗಿ ರಾಕೇಶ್ ಇಷ್ಟವಾಗುತ್ತಿದ್ದಾನೆ ಎಂದು ಹೇಳಿದರೆ, ನೇರವಾಗಿ ರಾಕೇಶ್ ಬಳಿಯೇ ಬಂದು, ನೀನು ಒಪ್ಪುತ್ತಿಯೋ, ಇಲ್ಲವೋ ಗೊತ್ತಿಲ್ಲ. ನಿನ್ನ ಮೇಲೆ ಫೀಲಿಂಗ್ಸ್ ಆಗ್ತಿದೆ ಎಂದು ನೇರವಾಗಿಯೇ ಹೇಳಿದ್ದಾರೆ ಸೋನು. ಅದಕ್ಕೆ ಅಚ್ಚರಿ ವ್ಯಕ್ತ ಪಡಿಸಿರುವ ರಾಕೇಶ್, ನಿಜ ಹೇಳ್ತಿದ್ದೀಯಾ ಎಂದು ಕೇಳಿದ್ದಾರೆ. ಈ ಮಧ್ಯೆ ರಾಕೇಶ್ ನನ್ನು ತುಂಬಾ ಹಚ್ಚಿಕೊಂಡಿರುವ ಸ್ಪೂರ್ತಿ ಗೌಡ ಯಾವ ರೀತಿಯಲ್ಲಿ ಈ ವಿಷಯವನ್ನು ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ : ರಾಕೇಶ್ ಬಳಸಿ ಬಿಸಾಕಿರೋ ಟಿಶ್ಯೂ ಎಂದ ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ : ರಾಕೇಶ್ ಬಳಸಿ ಬಿಸಾಕಿರೋ ಟಿಶ್ಯೂ ಎಂದ ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಲವ್ ಸ್ಟೋರಿ ಹುಟ್ಟಿಕೊಳ್ಳುತ್ತಿವೆ. ಆ ಸ್ಟೋರಿಗಳು ಕ್ಷಣ ಹೊತ್ತು ಹುಟ್ಟಿ, ಅರೆ ಕ್ಷಣದಲ್ಲೇ ಸಾಯುವಂಥವು ಆಗಿದ್ದರೂ, ಆಡುವ ಮಾತುಗಳಿಂದಾಗಿ ಮನೆಯ ವಾತಾವರಣವನ್ನು ಬಿಸಿ ಮಾಡುತ್ತಿವೆ. ಅದರಲ್ಲೂ ಸ್ಫೂರ್ತಿ ಗೌಡ, ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ತ್ರಿಕೋನ ಆಟವಂತೂ ನೋಡುಗರಿಗೆ ಸಖತ್ ಮಜಾ ಕೊಡುತ್ತಿದೆ. ಇದನ್ನೂ ಓದಿ:ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ

    ಸ್ಫೂರ್ತಿ ಮತ್ತು ರಾಕೇಶ್ ನಡುವೆ ಏನೋ ನಡೆದಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಹಾಗಾಗಿಯೇ ಎಟ್ ಲಿಸ್ಟ್ ನಾನು ನಿನ್ನನ್ನು ಇಷ್ಟ ಪಡುತ್ತೇನೆ ಅಂತಾದರೂ ಹೇಳು ಎಂದು ರಾಕೇಶ್ ಈಗಾಗಲೇ ಸ್ಫೂರ್ತಿ ಗೌಡನನ್ನು ಕೇಳಿದ್ದಾರೆ. ಅದಕ್ಕೂ ಮುನ್ನ ಸೋನು ಗೌಡ ಕೂಡ ರಾಕೇಶ್ ಮೇಲೆ ಒಂದು ಕಣ್ಣು ಇಟ್ಟವರೆ. ಹೀಗಾಗಿ ಮನೆಯಲ್ಲಿ ಕಾವೇರಿದ ವಾತಾವರಣವಿದೆ. ಈ ಇಬ್ಬರು ಹುಡುಗಿಯರ ನಡುವೆ ಇದೀಗ ರಾಕೇಶ್ ಬಳಸಿಬಿಟ್ಟು ಟಿಶ್ಯೂ ಪೇಪರ್ ಆಗಿದ್ದಾರೆ.

    ಸ್ಫೂರ್ತಿಗೌಡ ಮತ್ತು ಸೋನು ಗೌಡ ನಡುವೆ ಮಾತು ಶುರುವಾಗುತ್ತದೆ, ಅದು ರಾಕೇಶ್ ವಿಚಾರವಾಗಿ. ಆಗ ಸೋನು ಟಿಶ್ಯೂ ಪೇಪರ್ ಬಗ್ಗೆ ಮಾತನಾಡ್ತಾ, ಟಿಶ್ಯೂ ಪೇಪರ್ ಬಳಸಿದ ಮೇಲೆ ಏನ್ ಮಾಡ್ತಾರೆ ಎಂದು ಕೇಳುತ್ತಾರೆ. ಟಿಶ್ಯೂ ಪೇಪರ್ ಬಳಸಿದ ಮೇಲೆ ಬೀಸಾಕ್ತೀವಿ ಅಂತಾರೆ ಸ್ಫೂರ್ತಿ. ಅದೇ, ನಾನು ರಾಕೇಶ್ ಅನ್ನು ಟಿಶ್ಯೂ ಪೇಪರ್ ಅನ್ನು ಬಳಸಿ ಬಿಸಾಕಿದ್ದೀನಿ ಎನ್ನುವ ಶಾಕಿಂಗ್ ಸ್ಟೇಟ್ ಮೆಂಟ್ ಕೊಡುತ್ತಾರೆ. ಆದರೆ, ಯಾವ ಅರ್ಥದಲ್ಲಿ ಅದನ್ನು ಹೇಳಿದರು ಎಂದು ಹೇಳದೇ, ರಾಕೇಶ್ ನನ್ನು ಟಿಶ್ಯೂ ಪೇಪರ್ ಗೆ ಹೋಲಿಸಿ, ಮಜಾ ನೋಡಿದ್ದಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • ಭೀಕರ ರಸ್ತೆ ಅಪಘಾತ – ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ಸಾವು

    ಭೀಕರ ರಸ್ತೆ ಅಪಘಾತ – ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ಸಾವು

    ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜ್ಯಸಭಾ ಸಂಸದ ಎನ್‍ಆರ್ ಇಳಂಗೋವನ್ ಅವರ ಪುತ್ರ ರಾಕೇಶ್(22) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಮತ್ತೊರ್ವ ಪ್ರಯಾಣಿಕನೊಂದಿಗೆ ಪುದುಚೇರಿಯಿಂದ ಚೆನ್ನೈಗೆ ರಾಕೇಶ್ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ವಾಹನವು ರಸ್ತೆ ವಿಭಜಕಕ್ಕೆ (ಡಿವೈಡರ್​)  ಡಿಕ್ಕಿ ಹೊಡೆದ ಪರಿಣಾಮ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ ಮತ್ತು ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು

    ಸದ್ಯ ಈ ಘಟನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಗಾಯಾಳು ಪ್ರಯಾಣಿಕನನ್ನು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಮಾಜಿ ಹಿರಿಯ ವಕೀಲರಾದ ಎನ್‍ಆರ್ ಇಳಂಗೋವನ್ ಅವರು 2020ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾದರು. ಇದೇ ಮೊದಲ ಅವರ ಮೊದಲ ಅವಧಿಯಾಗಿದೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು

  • ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ ಪತಿ ರಾಕೇಶ್ ಜೊತೆಗೆ ಹನಿಮೂನ್‍ಗೆ ಹಾರಿದ್ದಾರೆ.

    ಕಳೆದ ವಾರವಷ್ಟೇ ಕುಟುಂಬದವರ ಸಮ್ಮುಖದಲ್ಲಿ ರಾಕೇಶ್ ಜೊತೆಗೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ ಇದೀಗ ಪತಿ ಜೊತೆಗೆ ಮಾಲ್ಡೀವ್ಸ್‌ಗೆ ಹನಿಮೂನ್‍ಗೆ ಹಾರಿದ್ದಾರೆ. ಪತಿ ಜೊತೆಗೆ ಏಕಾಂತವಾಗಿ ಕಾಲ ಕಳೆಯುತ್ತಿರುವ ಅವರು, ಮಾಲ್ಡೀವ್ಸ್‌ನ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ವೀಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮಾಲ್ಡೀವ್ಸ್‌ನ  ಕಡಲ ತೀರದ ದೃಶ್ಯ,  ಏರ್‌ಪೋರ್ಟ್‌, ಮೂನ್ ಲೈಟ್ ಕೆಳಗೆ ಡಿನ್ನರ್ ಮಾಡುತ್ತಿರುವ ದೃಶ್ಯ ಸೇರಿದಂತೆ ಹಲವಾರು ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ನಂತರ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದ ರಾಕೇಶ್ ಜೊತೆಗೆ ಡಿಸೆಂಬರ್ 10-11ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಿಕವಾಗಿ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.  ಇದನ್ನೂ ಓದಿ:  ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.

  • ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕಿರುತೆರೆ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ, ಉದ್ಯಮಿ ರಾಕೇಶ್ ಅವರೊಂದಿಗೆ ಇಂದು ಕುಟುಂಬದವರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಇದೀಗ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದಿರುವ ರಾಕೇಶ್ ಅವರು ಪ್ರಿಯಾಂಕ ಜೊತೆ ಇಂದು ಸಂಪ್ರದಾಯಿಕವಾಗಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

    ರಾಕೇಶ್ ಅವರು ಅಮೆರಿಕಾದ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, 4 ತಿಂಗಳ ಬಳಿಕ ಮತ್ತೆ ವಿದೇಶಕ್ಕೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚಿಂಚೋಳಿ ಅವರ ಮನೆಯಲ್ಲಿ ನಡೆದ ಮೆಹಂದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಈ ಮುನ್ನ ಪ್ರಿಯಾಂಕ ಚಿಂಚೋಳಿ ಅವರು, ರಾಕೇಶ್ ಅವರು ಅಮೆರಿಕದ ಬ್ಯಾಂಕ್ ಒಂದರಲ್ಲಿ ಉಪಾಧ್ಯರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಆತಂಕವಿರುವ ಕಾರಣದಿಂದಾಗಿ ವೀಸಾಗೆ ಸಂಬಂಧಿಸಿದಂತೆ ರಿಜಿಸ್ಟರ್ ಮದುವೆಯ ಪ್ರಮಾಣಪತ್ರದ ಅಗತ್ಯವಿದೆಯಂತೆ. ಹೀಗಾಗಿ ರಿಜಿಸ್ಟರ್ ಮದುವೆಯಾಗಿದ್ದು, ಡಿಸೆಂಬರ್ 10-11ರಂದು ಸಾಂಪ್ರದಾಯಿಕವಾಗಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದೇವೆ ಎಂದು ತಿಳಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.