Tag: Rajyavardhan Singh Rathore

  • ಇದು ನೆಹರೂ ಭಾರತವಲ್ಲ.. ಮೋದಿ ಭಾರತ – ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

    ಇದು ನೆಹರೂ ಭಾರತವಲ್ಲ.. ಮೋದಿ ಭಾರತ – ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

    ನವದೆಹಲಿ: ಗಡಿಯಲ್ಲಿ ಚೀನಾ (China) ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ನಿದ್ರಿಸುತ್ತಿದೆ ಎಂದು ಟೀಕಿಸಿದ್ದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಗೆ (Rahul Gandhi) ಇದು ನೆಹರೂ (Jawaharlal Nehru) ಭಾರತವಲ್ಲ ಮೋದಿ ಭಾರತ ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.

    ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಮಾಧ್ಯಮಗೋಷ್ಠಿ ನಡೆಸಿ ರಾಹುಲ್ ಗಾಂಧಿ, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‍ನಲ್ಲಿ ಉಭಯ ದೇಶಗಳ ಸೈನಿಕರು ಕಾದಾಡಿದ ಬಳಿಕ ಈ ಬಗ್ಗೆ ಆತಂಕ ಮೂಡುತ್ತಿದೆ. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಅತಿಕ್ರಮಣಕ್ಕೆ ಅಲ್ಲ, ಯುದ್ಧಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅವರ ಬಳಿ ಇರುವ ಅಸ್ತ್ರಗಳ ಮಾದರಿ ನೋಡಿ. ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಆದರೆ ಇದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಸರ್ಕಾರ ಯುದ್ಧ ಸನ್ನಿವೇಶವನ್ನು ಅಲ್ಲಗಳೆಯುತ್ತಿದೆ. ಇದನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ ಎಂದು ಟೀಕಿಸಿದ್ದರು. ಇದನ್ನೂ ಓದಿ: ಚೀನಾ ಯುದ್ಧ ತಯಾರಿ ನಡೆಸುತ್ತಿದೆ – ನಮ್ಮ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ: ರಾಹುಲ್ ಗಾಂಧಿ

    ಇದೀಗ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ (Rajyavardhan Singh Rathore) ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಅವರ ಅಜ್ಜ ಮಲಗಿದ್ದರು. ಅವರು ನಿದ್ದೆ ಮಾಡುವಾಗ ಭಾರತದ 37 ಸಾವಿರ ಚದರ ಕಿ.ಮೀ. ಪ್ರದೇಶ ಚೀನಾ ಪಾಲಾಗಿತ್ತು. ಆ ನಂತರ ರಾಹುಲ್ ಗಾಂಧಿ ಚೀನಾದೊಂದಿಗೆ ಸ್ನೇಹ ಬೆಳೆಸಬೇಕು ಎಂದು ಭಾವಿಸಿದ್ದರು. ಈಗ ಸ್ನೇಹವು ಅದೆಷ್ಟು ಆಳವಾಗಿದೆ ಎಂದರೆ, ಚೀನಾ ಏನು ಮಾಡುತ್ತಿದೆ ಎಂಬುದು ಅವರಿಗೆ ಮೊದಲೇ ಗೊತ್ತಿದೆ. ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ 1.35 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಆದರೆ ಈಗ ಮೊದಲಿನಂತಿಲ್ಲ, ಭಾರತ ಬದಲಾಗಿದೆ. ಇದು ನೆಹರೂ ಭಾರತ ಅಲ್ಲ.. ಮೋದಿ ಭಾರತ. ದೇಶವನ್ನು ರಕ್ಷಿಸಲು ಸೇನೆಗೆ ಮುಕ್ತ ಅವಕಾಶವಿದೆ. ನಮ್ಮ ಸೈನ್ಯವು ಆಕ್ರಮಣ ನಡೆಸಿದರೆ ಸುಮ್ಮನಿರಲ್ಲ. 2014ರ ಬಳಿಕ ನಮ್ಮ ಸೈನ್ಯ ಗಡಿಯ ಭದ್ರತೆಯನ್ನು ಬಹಳ ಕಟ್ಟುನಿಟ್ಟಿನಿಂದ ಮಾಡುತ್ತಿದೆ. ಸರ್ಕಾರ ಸೈನ್ಯಕ್ಕೆ ಸಂಪೂರ್ಣ ಅವಕಾಶ ನೀಡುತ್ತಿದೆ ಎಂದರು. ಇದನ್ನೂ ಓದಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ

    ರಾಹುಲ್ ಗಾಂಧಿ ಗಡಿ ಘರ್ಷಣೆ ಕುರಿತು ಮಾತನಾಡುತ್ತಾ, ಚೀನಾ ನಮ್ಮ ದೇಶದ ಮೇಲೆ ದಾಳಿ ನಡೆಸಲು ಸಿದ್ಧವಾಗುತ್ತಿದೆ. ಚೀನಿ ಯೋಧರು ನಮ್ಮ ಯೋಧರಿಗೆ ಹೊಡೆಯುತ್ತಿದ್ದಾರೆ. ಇದರಿಂದ ಚೀನಾದ ಬೆದರಿಕೆ ನಮಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಸರ್ಕಾರ ಅದನ್ನು ನಿರ್ಲಕ್ಷಿಸುತ್ತಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ದಾಳಿಗೆ ತಯಾರಿ ನಡೆಸುತ್ತಿದೆ. ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಚೀನಿ ಸೈನಿಕರು 17,000 ಅಡಿ ಎತ್ತರದ ಶಿಖರದ ತುದಿಗೆ ಪ್ರವೇಶಿಸಲು ಪ್ರಯತ್ನಿಸಿ, ಭಾರತೀಯ ಪೋಸ್ಟ್ ಅನ್ನು ಕಿತ್ತುಹಾಕಲು ಯತ್ನಿಸಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಏರ್ ಸ್ಟ್ರೈಕ್ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗ್ತೀರಾ: ಸಿಬಲ್‍ಗೆ ರಾಜ್ಯವರ್ಧನ್ ಸವಾಲ್

    ಏರ್ ಸ್ಟ್ರೈಕ್ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗ್ತೀರಾ: ಸಿಬಲ್‍ಗೆ ರಾಜ್ಯವರ್ಧನ್ ಸವಾಲ್

    ನವದೆಹಲಿ: ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗುತ್ತಿರಾ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಗೆ ಸವಾಲ್ ಎಸೆದಿದ್ದಾರೆ.

    ಫಬ್ರವರಿ 26ರಂದು ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್‍ಗೆ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸಹ ವಾಯುದಾಳಿಗೆ ಸರ್ಕಾರ ಸಾಕ್ಷಿ ನೀಡಬೇಕು. ಮೋದಿ ಸರ್ಕಾರ ವಾಯುಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಕಪಿಲ್ ಸಿಬಲ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

    ಕಪಿಲ್ ಸಿಬಲ್ ಜಿ, ನೀವು ನಮ್ಮ ಗುಪ್ತಚರದಳ ಮತ್ತು ವಾಯುಸೇನೆಯ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿಲ್ಲ. ಬದಲಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳ ಮೇಲೆ ನೀವು ಹೆಚ್ಚು ನಂಬಿಕೆಯನ್ನು ಹೊಂದಿದ್ದೀರಿ. ವಾಯುದಾಳಿಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ ಅಂದ್ರೆ ನಿಮ್ಮ ಮುಖದ ಮೇಲೆ ನಗು ಕಾಣುತ್ತದೆ. ಇವಿಎಂ ವಿರುದ್ಧ ಸಾಕ್ಷ್ಯಾಧಾರಕ್ಕಾಗಿ ಲಂಡನ್ ವರೆಗೂ ಹೋಗಿ ಬಂದಿದ್ದೀರಿ. ಇದೀಗ ಏರ್ ಸ್ಟ್ರೈಕ್ ಸಾಕ್ಷಿಗಾಗಿ ಬಾಲಕೋಟ್‍ಗೆ ಹೋಗಲು ಸಿದ್ಧರಿದ್ದೀರಾ ಎಂದು ರಾಜ್ಯವರ್ಧನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

    ಸಿಬಲ್ ಟ್ವೀಟ್: ಮೋದಿ ಜೀ, ಅಂತರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ನಲ್ಲಿ ಯಾವುದೇ ಉಗ್ರರು ಹತರಾಗಿರುವ ವರದಿ ಆಗಿಲ್ಲ ಎಂದು ಹೇಳುತ್ತಿವೆ. ಹಾಗಾದ್ರೆ ಅವರೆಲ್ಲರೂ ಪಾಕಿಸ್ತಾನದ ಬೆಂಬಲಿಗರಾ? ನೀವು ಭಯೋತ್ಪದನೆ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದೀರಾ ಎಂದು ಕಪಿಲ್ ಸಿಬಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಂದ್ರ ಸಚಿವರ ಸವಾಲು ಸ್ವೀಕರಿಸಿದ ಸಂಸದ ಪ್ರತಾಪ್ ಸಿಂಹ – ಟ್ವಿಟ್ಟರ್ ಫೋಟೋಗೆ ಅಭಿಮಾನಿಗಳು ಫಿದಾ

    ಕೇಂದ್ರ ಸಚಿವರ ಸವಾಲು ಸ್ವೀಕರಿಸಿದ ಸಂಸದ ಪ್ರತಾಪ್ ಸಿಂಹ – ಟ್ವಿಟ್ಟರ್ ಫೋಟೋಗೆ ಅಭಿಮಾನಿಗಳು ಫಿದಾ

    ಮೈಸೂರು: ಸದ್ಯಕ್ಕೆ ಈಗ ಎಲ್ಲೆಲ್ಲೂ ಫಿಟ್ ನೆಸ್ ಚಾಲೆಂಜ್ ಗಳೇ ಆಗಿದ್ದು, ಈಗ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹಾಕಿದ್ದ ಸವಾಲನ್ನು ಸಂಸದ ಪ್ರತಾಪ್ ಸಿಂಹ ಸ್ವೀಕರಿಸಿದ್ದಾರೆ.

    ವಿರಾಟ್ ಕೊಹ್ಲಿ ನಂತರ ಸಂಸದ ಪ್ರತಾಪ್ ಸಿಂಹ ಕೂಡ ರಾಥೋಡ್ ಅವರ ಸವಾಲನ್ನು ಸ್ವೀಕರಿಸಿದ್ದಾರೆ. ಈಗ ಹಮ್ ಫಿಟ್ ಥೋ ಇಂಡಿಯಾ ಫಿಟ್ ಗಾಗಿ ಸೂಪರ್ ವರ್ಕ್ ಔಟ್ ಶುರುವಾಗಿದೆ. ಪ್ರತಾಪ ಸಿಂಹ ಅವರು ತನ್ನ ಸದೃಢ ದೇಹದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಫಿಟ್ ನೆಸ್ ವಿಡಿಯೋವನ್ನು ಶೀಘ್ರವೇ ಅಪ್ಲೋಡ್ ಮಾಡುವುದಾಗಿ ಬರೆದುಕೊಂಡಿದ್ದಾರೆ.

    ಪ್ರತಾಪ್ ಸಿಂಹ ಬರಿಮೈಯಲ್ಲಿನ ಫೋಟೋವನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರಿಂದ ಅವರ ಅಭಿಮಾನಿಗಳು ಫಿದಾ ಆಗಿದ್ದು, ನೀವು ರಾಜಕೀಯ ಬಿಟ್ಟು ಸಿನಿಮಾ ಹೀರೋ ಆಗಿ ಅಂತ ಟ್ವಿಟ್ಟರ್ ನಲ್ಲೇ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಕೊಹ್ಲಿ ಅವರ ಚಾಲೆಂಜ್ ಸ್ವೀಕರಿಸಿದ್ದ ಮೋದಿ ಅವರ ಟ್ವೀಟ್ ಮತ್ತು ವಿರಾಟ್ ಕೊಹ್ಲಿ ಚಾಲೆಂಜ್ ಸ್ವೀಕರಿದ್ದ ಟ್ವೀಟ್ ನ್ನು ತಾವು ಪೋಸ್ಟ್ ಮಾಡಿದ್ದಾರೆ.

    ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22 ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗೆ ವಿರಾಟ್ ಕೊಹ್ಲಿ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸಿದ್ದರು. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ, ಪತ್ನಿ ಅನುಷ್ಕಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರಿಗೆ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು. ನಂತರ ಕೋಹ್ಲಿ ಅವರ ಈ ಟ್ವೀಟ್ ಗೆ ಮೋದಿ ಪ್ರತಿಕ್ರಿಯಿಸಿದ್ದು, ಸವಾಲನ್ನು ಸ್ವೀಕರಿಸಿದ್ದೇನೆ. ನನ್ನ ಫಿಟ್ ನೆಸ್ ಕುರಿತ ವಿಡಿಯೋವನ್ನು ಅಪ್ಲೋಡ್ ಮಾಡುವುದಾಗಿ ಬರೆದುಕೊಂಡಿದ್ದರು.