Tag: RajyaSabha

  • ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ

    ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ

    – 1951ರಿಂದ 11ನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿ

    ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು (President Rule) ಇನ್ನೂ 6 ತಿಂಗಳ ಕಾಲ ವಿಸ್ತರಿಸಲು ರಾಜ್ಯಸಭೆ ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ರಾಜ್ಯಸಭೆಯಲ್ಲಿ ಮಂಡಿಸಿದ ಪ್ರಸ್ತಾವನೆಯನ್ನ ಸದನವು ಅಂಗೀಕರಿಸಿದೆ.

    ಆಗಸ್ಟ್ 13ರಿಂದ ಅನ್ವಯವಾಗುವಂತೆ 6 ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಯಾಗಲಿದೆ. ಇದನ್ನೂ ಓದಿ: Manipur | ಬಿರೇನ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

    ಮಣಿಪುರಕ್ಕೆ (Manipura) ಸಂಬಂಧಿಸಿದಂತೆ ಸಂವಿಧಾನದ 356ನೇ ವಿಧಿ ಅನ್ವಯ 2025ರ ಫೆಬ್ರವರಿ 13ರಂದು ರಾಷ್ಟ್ರಪತಿಗಳು ನೀಡಿದ ಸುಗ್ರೀವಾಜ್ಞೆಯನ್ನ 2025ರ ಆಗಸ್ಟ್ 13ರಿಂದ ಆರು ತಿಂಗಳ ಕಾಲ ಮುಂದುವರಿಸಲು ಸದನ ಒಪ್ಪಿಗೆ ನೀಡಬೇಕಿದೆ ಎಂದು ಸದನದಲ್ಲಿ ಮಂಡಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: 1988ರ ರೇಪ್ ಕೇಸ್‌ಗೆ ಶಿಕ್ಷೆ ಪ್ರಕಟಿಸಿದ ಸುಪ್ರೀಂ – 53 ವರ್ಷದ ವ್ಯಕ್ತಿ ಈಗ ಬಾಲಾಪರಾಧಿ

    2 ವರ್ಷಗಳ ಹಿಂದೆ ಶುರುವಾದ ಹಿಂಸಾಚಾರ
    2023ರ ಹೈಕೋರ್ಟ್‌ ಆದೇಶದ ವಿರುದ್ಧವಾಗಿ ಬುಡಕಟ್ಟು ಸಮುದಾಯದ ಮೆರವಣಿಗೆಯೊಂದನ್ನು ಆಯೋಜಿಸಲಾಗಿತ್ತು ಈ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಏರ್ಪಟ್ಟಿತು. ಇಲ್ಲಿಂದ ಸತತವಾಗಿ ಜನಾಂಗೀಯ ಹಿಂಸಾಚಾರ ಶುರುವಾಗಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದ್ರೆ ಈ ವರ್ಷ ಫೆಬ್ರವರಿ 13ರಂದು 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ರಾಜ್ಯದಲ್ಲಿ 1951ರಿಂದ ಇದು 11ನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಇದನ್ನೂ ಓದಿ: ಸತ್ತವರು, ಶಾಶ್ವತವಾಗಿ ವಲಸೆ ಹೋದವರನ್ನು ಪಟ್ಟಿಯಲ್ಲಿ ಸೇರಿಸಲು ಸಾಧ್ಯನಾ? – ಚುನಾವಣಾ ಆಯೋಗ ಸಮರ್ಥನೆ

  • ರಾಜ್ಯಸಭೆಯಲ್ಲಿ ಮಹಿಳೆಯರ ಪರ ದನಿಯೆತ್ತಿದ್ದ ಸುಧಾ ಮೂರ್ತಿಯನ್ನು ಹೊಗಳಿದ ಪ್ರಧಾನಿ

    ರಾಜ್ಯಸಭೆಯಲ್ಲಿ ಮಹಿಳೆಯರ ಪರ ದನಿಯೆತ್ತಿದ್ದ ಸುಧಾ ಮೂರ್ತಿಯನ್ನು ಹೊಗಳಿದ ಪ್ರಧಾನಿ

    – ಸುಧಾಮೂರ್ತಿ ಪ್ರಸ್ತಾಪಿಸಿದ್ದ ವಿಚಾರಗಳೇನು..?

    ನವದೆಹಲಿ: ನೂತನವಾಗಿ ನೇಮಕಗೊಂಡ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ಮಹಿಳೆಯರ ಪರ ದನಿಯತ್ತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

    ಬುಧವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಜುಲೈ 2 ರಂದು ಸದನದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಸಮಾಜ ಸೇವಕಿ, ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಅವರಿಗೆ ಧನ್ಯವಾದ ಅರ್ಪಿಸಿದರು.

    2 ಪ್ರಮುಖ ವಿಚಾರಗಳೇನು..?
    ಗರ್ಭಕಂಠದ ಕ್ಯಾನ್ಸರ್: ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ರಾಜ್ಯಸಭೆಯಲ್ಲಿ ಅಧ್ಯಕ್ಷರ ಭಾಷಣದ ಮೇಲೆ ಮಂಡಿಸಿದ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನಾ ಅವಧಿಯಲ್ಲಿ ಲಸಿಕೆ ಅಭಿಯಾನ ನಡೆಸಿದಂತೆಯೇ ಗರ್ಭಕಂಠದ ಕ್ಯಾನ್ಸರ್‌ನಿಂದ ಮಹಿಳೆಯರನ್ನು ರಕ್ಷಿಸಲು ಲಸಿಕೆಯ ಅಗತ್ಯತೆ ಇದೆ. ಈ ಕುರಿತು ಅಭಿಯಾನ ನಡೆಸಬೇಕು. ಮಹಿಳೆಯರಲ್ಲಿ ಈ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಹದಿಹರೆಯದಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

    ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ತನ್ನ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಅವಳು ಆಸ್ಪತ್ರೆಯನ್ನು ತಲುಪಿದಾಗ, ಆಕೆಯ ಗರ್ಭಕಂಠದ ಕ್ಯಾನ್ಸರ್ ಮೂರನೇ ಅಥವಾ ನಾಲ್ಕನೇ ಹಂತದಲ್ಲಿರುತ್ತದೆ. ಆ ಸಂದರ್ಭದಲ್ಲಿ ಅವರನ್ನು ಉಳಿಸುವುದು ಕಷ್ಟವಾಗುತ್ತದೆ. ಹೆಣ್ಣೇ ಸಂಸಾರದ ಕೇಂದ್ರಬಿಂದು ಎಂದು ತಂದೆ ಹೇಳುತ್ತಿದ್ದು, ಹೆಣ್ಣಿನ ಮರಣದ ನಂತರ ಗಂಡನಿಗೆ ಮತ್ತೊಬ್ಬ ಹೆಂಡತಿ ಸಿಗುತ್ತಾಳೆ. ಆದರೆ ಮಕ್ಕಳಿಗೆ ಬೇರೆ ತಾಯಿ ಸಿಗುವುದಿಲ್ಲ ಎಂದು ಹೇಳಿದರು.

    ಕೋವಿಡ್ ಅವಧಿಯಲ್ಲಿ ಕೊರೊನಾದಿಂದ ರಕ್ಷಿಸಲು ಸಮಗ್ರ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದಾಗ, ಗರ್ಭಕಂಠದ ಕ್ಯಾನ್ಸರ್‌ನಿಂದ ಮಹಿಳೆಯರನ್ನು ರಕ್ಷಿಸುವ ಅಭಿಯಾನವನ್ನು ಏಕೆ ಪ್ರಾರಂಭಿಸಬಾರದು ಎಂದು ಸುಧಾ ಮೂರ್ತಿ ಕೇಳಿದರು?. ಈ ಸಂಬಂಧ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ದುಂದು ವೆಚ್ಚವಾಗುವುದಿಲ್ಲ. ಇದರಿಂದ ದೇಶದ ಹೆಚ್ಚಿನ ಜನಸಂಖ್ಯೆಗೆ ಅನುಕೂಲವಾಗಲಿದೆ ಎಂದು ಮೂರ್ತಿ ವಿವರಿಸಿದರು.

    ಪ್ರವಾಸಿ ತಾಣಗಳ ಅಭಿವೃದ್ಧಿ: ಇದೇ ವೇಳೆ ದೇಶದ ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆ ಉಲ್ಲೇಖಿಸಿದ ಸುಧಾ ಮೂರ್ತಿ, ಅಜಂತಾ, ಎಲ್ಲೋರಾ ಮತ್ತು ತಾಜ್ ಮಹಲ್‌ಗೆ ಜನರು ಆಗಾಗ್ಗೆ ಭೇಟಿ ನೀಡುತ್ತಾರೆ. ಆದರೆ ಭಾರತದಲ್ಲಿ 42 ಪಾರಂಪರಿಕ ತಾಣಗಳಿವೆ. ಅವುಗಳು ಹೆಚ್ಚು ಪ್ರಚಾರವಾಗದ ಅಥವಾ ಅವುಗಳ ಬಗ್ಗೆ ಜನರಿಗೆ ತಿಳಿದಿಲ್ಲ. ನಮ್ಮ ದೇಶ ಮತ್ತು 12,500 ವರ್ಷಗಳಿಗಿಂತಲೂ ಹಳೆಯದಾದ ಈ ಸ್ಥಳವನ್ನು ಪಾರಂಪರಿಕ ತಾಣದಲ್ಲಿ ಸೇರಿಸಲಾಗಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದರ ಸಂಸ್ಕೃತಿಯ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದರು.

  • ಕೆಲವರು ಸಂವಿಧಾನದ ಪುಸ್ತಕ ಹಿಡಿದು ತಿರುಗುತ್ತಾರೆ: ಮೋದಿ ಟಾಂಗ್

    ಕೆಲವರು ಸಂವಿಧಾನದ ಪುಸ್ತಕ ಹಿಡಿದು ತಿರುಗುತ್ತಾರೆ: ಮೋದಿ ಟಾಂಗ್

    – ಮುಂದೆ ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡ್ತೀವಿ

    ನವದೆಹಲಿ: ಮಂಗಳವಾರ ವಿಪಕ್ಷಗಳ ವಿರುದ್ಧ ಲೋಕಸಭೆಯಲ್ಲಿ ಗುಡುಗಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ರಾಜ್ಯಸಭೆಯಲ್ಲಿ (Rajyasabha) ವಾಗ್ದಾಳಿ ಮುಂದುವರಿಸಿದರು.

    ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡುತ್ತಿದ್ದಾರೆ.  ಕಳೆದ ಎರಡು ದಿನಗಳಲ್ಲಿ 70 ಸಂಸದರು ವಿಚಾರ ಮಂಡಿಸಿದ್ದಾರೆ. ಚರ್ಚೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಬಹು ದಶಕಗಳ ಬಳಿಕ ಒಂದೇ‌ ಸರ್ಕಾರಕ್ಕೆ ಮೂರನೇ ಬಾರಿಗೆ ಅವಕಾಶ ನೀಡಲಾಗಿದೆ. 10 ವರ್ಷಗಳ ಬಳಿಕ ಮತ್ತೆ ಅಧಿಕಾರದ ಬರುವುದು ಸಾಮಾನ್ಯವಲ್ಲ ಎಂದರು.

    ಅಂಬೇಡ್ಕರ್ ಸಂವಿಧಾನದ ಪರಿಣಾಮ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಮತ್ತೆ ಗೆದ್ದು ಬರಲು ಸಾಧ್ಯವಾಗಿದೆ. ಸಂವಿಧಾನ ಕೇವಲ ಪುಸ್ತಕವಲ್ಲ, ಸ್ಫೂರ್ತಿಯ ಸಂಕೇತವಾಗಿದೆ. ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತದೆ. ಕೆಲವರು ಸಂವಿಧಾನ ಪುಸ್ತಕ ಹಿಡಿದು ಮಾತ್ರ ತಿರುಗುತ್ತಾರೆ ಎಂದು ವಿಪಕ್ಷಕ್ಕೆ ಟಾಂಗ್‌ ಕೊಟ್ಟರು.

    ಸಂವಿಧಾನ ದಿವಸ ಆಚರಣೆಯನ್ನು ನಾವು ತಂದಿದ್ದೇವೆ. ಶಾಲಾ-ಕಾಲೇಜುಗಳಿಗೆ ಸಂವಿಧಾನದ ಮಹತ್ವ ತಿಳಿಸಲಾಗುತ್ತಿದೆ. ಸಂವಿಧಾನ ನಮಗೆ ನಂಬಿಕೆಯ ಭಾಗ ಮತ್ತು ಪ್ರೇರಣೆಯಾಗಿದೆ. 75 ನೇ ವರ್ಷಾಚರಣೆಯನ್ನು ನಾವು ಉತ್ಸವವಾಗಿ ಆಚರಣೆ ಮಾಡಿದ್ದೇವೆ. ಮೂರನೇ ಬಾರಿ ನಮಗೆ ಅವಕಾಶ ನೀಡಿ ದೇಶದ ಜನ ಆಶೀರ್ವಾದ ಮಾಡಿದ್ದಾರೆ ಎಂದರು.

    ಈ ವೇಳೆ ಕಾಂಗ್ರೆಸ್‌ ಮಲ್ಲಿಕಾರ್ಜುನ ಖರ್ಗೆಯವರು, ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಪ್ರಧಾನಿ ಮೋದಿ ಭಾಷಣದ ಮಧ್ಯೆ ಖರ್ಗೆ ಘೋಷಣೆಗಳನ್ನು ಕೂಗಿದರು. ಆದರೂ ಮಾತು ಮುಂದುವರಿಸಿದ ಮೋದಿ, ಕೊರೊನಾ ಕಠಿಣ ಸಂದರ್ಭದಲ್ಲಿಯೂ ನಮ್ಮ ಅಭಿವೃದ್ಧಿ ತೊಡಕಾಗಿಲ್ಲ. ನಮ್ಮ ಆರ್ಥಿಕತೆಯನ್ನು 10 ರಿಂದ ಐದನೇ ಸ್ಥಾನಕ್ಕೆ ತಂದಿದ್ದೇವೆ. ಮೂರನೇ ಆರ್ಥಿಕ ಶಕ್ತಿಯಾಗಿ ರೂಪಿಸಲು ನಮಗೆ ಜನರು ಮತ್ತೆ ಗೆಲ್ಲಿಸಿದ್ದಾರೆ. ಮುಂದೆ ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

  • ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ಜಯಾ ಬಚ್ಚನ್

    ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ಜಯಾ ಬಚ್ಚನ್

    ನವದೆಹಲಿ: ರಾಜ್ಯಸಭೆಯಲ್ಲಿ (Rajya Sabha)ವಿದಾಯದ ಭಾಷಣದ ವೇಳೆ ಸದನದ ಎಲ್ಲಾ ಸದಸ್ಯರಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ಕ್ಷಮೆಯಾಚಿಸಿದ್ದಾರೆ.

    ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಸಂಸತ್ತಿನ ನಡೆಯತ್ತಿದ್ದ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್ (Jagdeep Dhankar) ಅವರನ್ನು ವ್ಯಂಗ್ಯ ಮಾಡಿ ಮಾತನಾಡಿದ್ದರು. ಇದಕ್ಕೆ ಬಾರಿ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಅವರು ಈಗ ರಾಜ್ಯಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಕ್ಷಮೆ ಕೇಳಿದ್ದಾರೆ. ಜಯಾ ಅವರು ತಮ್ಮ ವಿದಾಯದ ಭಾಷಣದ ವೇಳೆ ಸದನದ ಎಲ್ಲ ಸದಸ್ಯರಲ್ಲಿ, ತಾನು ಮುಂಗೋಪಿ ಆದರೆ ಯಾರನ್ನು ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಶಾಸಕ ಯತ್ನಾಳ್‌, ರಾಜ್ಯಾಧ್ಯಕ್ಷ ವಿಜಯೇಂದ್ರ ಸಮಾಗಮ!

    ಜಯಾ ಅವರ ವಿದಾಯ ಭಾಷಣದಲ್ಲಿ ನಾನು ಏಕೆ ಕೋಪಗೂಳ್ಳುತ್ತೇನೆ ಎಂದು ಜನರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಅದು ನನ್ನ ಸ್ವಭಾವ. ನಾನು ನನ್ನನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಏನನ್ನಾದರೂ ಇಷ್ಟಪಡದೇ ಇದ್ದಲ್ಲಿ ಅಥವಾ ಒಪ್ಪದೇ ಇದ್ದರೆ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ನಾನು ನಿಮ್ಮಲ್ಲಿ ಯಾರೊಂದಿಗಾದರೂ ಅನುಚಿತವಾಗಿ ವರ್ತಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್‌, ಸ್ವಾಮಿನಾಥನ್‌ಗೆ ಭಾರತ ರತ್ನ

    ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರ ಕೊಡುಗೆಯನ್ನು ಪ್ರೀತಿಯಿಂದ ಸ್ವೀಕರಿಸಿದ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಮಾತನಾಡಿ ನಮ್ಮ ಗೌರವಾನ್ವಿತ ಸಹೋದ್ಯೋಗಿಗಳ ನಿವೃತ್ತಿ ನಿಸ್ಸಂದೇಹವಾಗಿ ಶೂನ್ಯವನ್ನು ಉಂಟು ಮಾಡುತ್ತದೆ. ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯವಿದೆ. ಹಾಗೆಯೇ ಪ್ರತಿ ಅಂತ್ಯವು ಹೊಸ ಆರಂಭವನ್ನು ಹೊಂದಿದೆ ಎಂದು ಹೇಳಿ ಶುಭ ಹಾರೈಸಿದರು. ಇದನ್ನೂ ಓದಿ: NDA ಒಕ್ಕೂಟ ಸೇರಲಿರುವ ಆರ್‌ಎಲ್‌ಡಿ- INDIA ಒಕ್ಕೂಟಕ್ಕೆ ಮತ್ತೊಂದು ಶಾಕ್

  • ಬಿಜೆಪಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ- ಖರ್ಗೆ ಹೇಳಿಕೆಗೆ ಜೋರಾಗಿ ನಕ್ಕ ಪ್ರಧಾನಿ

    ಬಿಜೆಪಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ- ಖರ್ಗೆ ಹೇಳಿಕೆಗೆ ಜೋರಾಗಿ ನಕ್ಕ ಪ್ರಧಾನಿ

    ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ನೀಡಿದ ಹೇಳಿಕೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸಂಸತ್ತೇ ಒಂದು ಬಾರಿ ನಗೆಗಡಲಲ್ಲಿ ತೇಲಿದ ಪ್ರಸಂಗವೊಂದು ನಡೆದಿದೆ.

    ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ (Budget Session) ಮಾತನಾಡುತ್ತಾ ಪ್ರಧಾನಿ ಮೋದಿಯವರತ್ತ ನೋಡಿ, ನಿಮಗೆ ಬಹುಮತ ಇದೆ. ಈ ಹಿಂದೆ 330-340 ಅವರು ಸ್ಥಾನಗಳನ್ನು ಹೊಂದಿದ್ರಿ. ಈ ಬಾರಿ ಅದು 400 ದಾಟುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದನ್ನು ಕೇಳಿ ಬಿಜೆಪಿ (BJP) ನಾಯಕರು ಜೋರಾಗಿ ಚಪ್ಪಾಳೆ ತಟ್ಟಿದ್ದು, ಸಂಸತ್ ಭವನ ನಗೆಗಡಲಲ್ಲಿ ಮುಳುಗಿತು. ಸ್ವತಃ ಪ್ರಧಾನಿ ಮೋದಿಯವರು (Narendra Modi) ಕೂಡ ಜೋರಾಗಿ ನಗತೊಡಗಿದರು. ಇದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ‘400 ಪಾರ್’ ಕೇಳಿದ ನಂತರ ಪ್ರಧಾನಿ ಮೋದಿ ನಗಲು ಆರಂಭಿಸಿದ್ದಾರೆ. ಜೊತೆಗೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ, ಚಪ್ಪಾಳೆ ತಟ್ಟಿ ಘೋಷಣೆ ಕೂಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ

    2024ರ ಲೋಕಸಭೆ ಚುನಾವಣೆಯಲ್ಲಿ (Loksabha Election 2024) ಬಿಜೆಪಿ ಗೆದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದನ್ನು ರಾಜ್ಯಸಭೆಯಲ್ಲಿ ಸ್ವತಃ ಕಾಂಗ್ರೆಸ್‌ ಅಧ್ಯಕ್ಷರೇ ಭವಿಷ್ಯ ನುಡಿದಿದ್ದಾರೆ ಎಂದು ಖರ್ಗೆಯವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಇತ್ತ ಬಿಜೆಪಿಯವರು ಕೂಡ ಈ ವೀಡಿಯೋವನ್ನು ಶೇರ್‌ ಮಾಡಿಕೊಂಡಿದೆ.

    ಅಬ್ ಕಿ ಬಾರ್ ಚಾರ್‌ ಸೌ ಪಾರ್: ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್‌ ಸೌ ಪಾರ್ (ಮೂರನೇ ಬಾರಿ ಮೋದಿ ಸರ್ಕಾರ, ಈ ಬಾರಿ ಬಿಜೆಪಿ ದಾಟಲಿದೆ 400 ಸ್ಥಾನ) ಎಂಬ ಹೊಸ ಘೋಷ ವಾಕ್ಯವನ್ನು ಬಳಸಲು ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಇನ್ನೂ ಅಧಿಕೃತವಾಗಿ ಬಿಜೆಪಿ ಘೋಷಿಸಿಲ್ಲ.

    ಹಿಂದೆ ಏನಿತ್ತು?
    2014- ಅಚ್ಛೇದಿನ್‌ ಆನೇ ವಾಲೆ ಹೈ (ಒಳ್ಳೆಯ ದಿನಗಳು ಬರಲಿವೆ)
    2019 – ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ (ಮತ್ತೊಂದು ಬಾರಿ ಮೋದಿ ಸರ್ಕಾರ್‌)

  • ಸಂಸತ್ತಿನಲ್ಲಿ ಸದ್ದು ಮಾಡಿದ ಡಿಕೆ ಸುರೇಶ್ ‌ʼಪ್ರತ್ಯೇಕ ರಾಷ್ಟ್ರʼ ಹೇಳಿಕೆ- ಕಾಂಗ್ರೆಸ್‌ ಕ್ಷಮೆ ಕೇಳುವಂತೆ ಆಗ್ರಹ

    ಸಂಸತ್ತಿನಲ್ಲಿ ಸದ್ದು ಮಾಡಿದ ಡಿಕೆ ಸುರೇಶ್ ‌ʼಪ್ರತ್ಯೇಕ ರಾಷ್ಟ್ರʼ ಹೇಳಿಕೆ- ಕಾಂಗ್ರೆಸ್‌ ಕ್ಷಮೆ ಕೇಳುವಂತೆ ಆಗ್ರಹ

    ನವದೆಹಲಿ: ಕಾಂಗ್ರೆಸ್‌ ಸಂಸದ ಡಿಕೆ ಸುರೇಶ್‌ ಅವರ ʼಪ್ರತ್ಯೇಕ ರಾಷ್ಟ್ರ (Separate Country) ಹೇಳಿಕೆʼಯು ಇಂದು ರಾಜ್ಯಸಭೆ (Rajyasabha) ತೀವ್ರ ಗದ್ದಲವೆಬ್ಬಿಸಿತು. ಈ ಸಂಬಂಧ ಕಾಂಗ್ರೆಸ್‌ ದೇಶದ ಜನರ ಕ್ಷಮೆ ಕೇಳುವಂತೆ ಆಗ್ರಹವೂ ಕೇಳಿಬಂದಿದೆ.

    ಹೌದು. ಸುರೇಶ್ (DK Suresh) ಹೇಳಿಕೆ ಬಗ್ಗೆ ಸಭಾನಾಯಕ ಪಿಯೂಶ್ ಗೋಯಲ್ (Piyush Goyal) ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದರು. ಜೊತೆಗೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಕ್ಷಮೆ ಕೇಳಬೇಕು. ವಿರೋಧ ಪಕ್ಷದ ನಾಯಕರು, ಅದೇ ಪಕ್ಷದ ನಾಯಕರು ಸುರೇಶ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿಲ್ಲ. ಕರ್ನಾಟಕದ ಡಿಸಿಎಂ ಸಹೋದರ ಹಾಗೂ ಸಂಸದರಾಗಿರುವ ಸುರೇಶ್ ಅವರು ದೇಶ ಕ್ಷಮೆ ಕೇಳುವಂತೆ ಒತ್ತಾಯಿಸಿದರು.

    ವಿತ್ತ ಸಚಿವೆ ಖಂಡನೆ: ಒಬ್ಬರು ಲೋಕಸಭೆ ಸಂಸದರಾಗಿ ಈ ದೇಶವನ್ನು ಒಡೆಯುವ ಮಾತನಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದ ಏಕತೆ ಮತ್ತು ಸಾರ್ವಭೌಮತ್ವದ ಮುಂದೆ ಯಾವುದೂ ಇಲ್ಲ ಎಂದು ಹೇಳಬೇಕು ಎಂದು ಹೇಳುವ ಮೂಲಕ ಡಿ.ಕೆ ಸುರೇಶ್ ಹೇಳಿಕೆಗೆ ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ (Niramala Sitharaman) ಆಕ್ಷೇಪ ವ್ಯಕ್ತಪಡಿಸಿದರು.

    ಭಾರತ ಅಖಂಡವಾಗಿರಲಿದೆ: ಡಿ.ಕೆ ಸುರೇಶ್ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, ಯಾರಾದರೂ ದೇಶ ಒಡೆಯುವ ಬಗ್ಗೆ ಮಾತನಾಡಿದರೆ ನಾವು ಅದನ್ನು ಎಂದಿಗೂ ಸಹಿಸುವುದಿಲ್ಲ. ಅವರು ಯಾವುದೇ ಪಕ್ಷದವರಾಗಿರಲಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಂದೇ ಮತ್ತು ಒಂದೇ ಆಗಿದ್ದೇವೆ. ಭಾರತ ಅಖಂಡವಾಗಿರಲಿದೆ ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನಿಸುವ ಹಕ್ಕು ನನಗಿದೆ: ಡಿಕೆ ಸುರೇಶ್

    ಡಿಕೆ ಸುರೇಶ್ ಹೇಳಿದ್ದೇನು?: ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿzವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಕೇಂದ್ರ ಬಜೆಟ್ (Union Budget 2024) ಬಗ್ಗೆ ಪ್ರತಿಕ್ರಿಯಿಸಿದ್ದರು. ಈ ವೇಳೆ ಇಂದಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಸುರೇಶ್, ಇಂದಿನ ಬಜೆಟ್‍ನಲ್ಲಿ ಹೊಸತೇನು ಇಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ಆದ್ರೆ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದು ಹೇಳಿದ್ದರು.

  • Rajya Sabha Elections: 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27 ರಂದು ಚುನಾವಣೆ

    Rajya Sabha Elections: 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27 ರಂದು ಚುನಾವಣೆ

    – ಏ. 2ಕ್ಕೆ ಕರ್ನಾಟಕದ ನಾಲ್ಕು ಸದಸ್ಯರ ಅವಧಿ ಮುಕ್ತಾಯ

    ನವದೆಹಲಿ: ಕೇಂದ್ರ ಚುನಾವಣಾ ಆಯೋಗವು (Election Commission Of India) 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಇಂದು ದಿನಾಂಕವನ್ನು ಪ್ರಕಟಿಸಿದೆ.

    ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. 56 ಸದಸ್ಯರ ಅಧಿಕಾರಾವಧಿಯು ಏಪ್ರಿಲ್ 2024 ರಲ್ಲಿ ಅವರ ನಿವೃತ್ತಿಯ ಮೇಲೆ ಮುಕ್ತಾಯಗೊಳ್ಳಲಿದೆ. ಕರ್ನಾಟಕ ಸೇರಿ ಒಟ್ಟು 13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ 2ರಂದು ಮುಗಿಯಲಿದ್ದರೆ, ಎರಡು ರಾಜ್ಯಗಳ ಉಳಿದ ಆರು ಸದಸ್ಯರು ಏಪ್ರಿಲ್‌ 3ರಂದು ನಿವೃತ್ತರಾಗಲಿದ್ದಾರೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಜಿ.ಸಿ ಚಂದ್ರಶೇಖರ್, ಎಲ್ ಹನುಮಂತಯ್ಯ, ನಾಸೀರ್ ಹುಸೇನ್, ರಾಜೀವ್ ಚಂದ್ರಶೇಖರ್ ಅವರ ಅವಧಿ ಅಂತ್ಯವಾಗಲಿದೆ.

    ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭಾ ಚುನಾವಣೆಗೆ ಫೆ.8ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆ.15 ಕೊನೆಯ ದಿನವಾಗಿದೆ. ಫೆ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.20 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 27 ರಂದು ಬೆಳಗ್ಗೆ 9 ರಿಂದ ಸಂಜೆ 4 ರ ನಡುವೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: Gyanvapi Mosque Case: ವಜುಖಾನಾ ಡಿ-ಸೀಲಿಂಗ್‌ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ

    ಚುನಾವಣೆ ನಡೆಯುವ ಸ್ಥಾನಗಳ ಸಂಖ್ಯೆ: ಆಂಧ್ರಪ್ರದೇಶ: 3, ಬಿಹಾರ್:‌ 6, ಛತ್ತೀಸ್‌ಗಢ: 1, ಗುಜರಾತ್‌: 4, ಹರಿಯಾಣ: 1, ಹಿಮಾಚಲಪ್ರದೇಶ: 1, ಕರ್ನಾಟಕ: 4, ಮಧ್ಯಪ್ರದೇಶ: 5, ಮಹಾರಾಷ್ಟ್ರ: 6, ತೆಲಂಗಾಣ: 3, ಉತ್ತರಪ್ರದೇಶ: 10, ಉತ್ತರಾಖಂಡ್:‌ 1, ಪಶ್ಚಿಮಬಂಗಾಳ: 5, ಒಡಿಶಾ: 3, ರಾಜಸ್ಥಾನ: 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

  • ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ

    ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ

    ರಾಯಚೂರು: ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ (87) ನಿಧನ ಹೊಂದಿದ್ದಾರೆ.

    ಇವರು ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಖಿ (Abdul Samad Siddiqui) 1988-1994ರವರೆಗೆ ರಾಜ್ಯ ಸಭಾ (Rajya Sabha) ಸದಸ್ಯರಾಗಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಜನತಾದಳ ಪಕ್ಷ ಕಟ್ಟಲು ಮುಂದಾಳತ್ವ ವಹಿಸಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ (Hyderabad) ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದರು.

    EDUCATION
    ಸಾಂದರ್ಭಿಕ ಚಿತ್ರ

    ಅಬ್ದುಲ್ ಸಮದ್ ಸಿದ್ದೀಖಿ ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ನ್ಯೂ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರಣೀಭೂತರಾಗಿದ್ದರು. ಅಲ್ಲದೇ ರಾಯಚೂರಿನಲ್ಲಿ ಸಫೀಯಾ ಸಂಸ್ಥೆ ಮೂಲಕ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದ್ದರು.

    ಜನತಾದಳದಿಂದ 1988 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994 ರ ವರೆಗೆ ಕಾರ್ಯನಿರ್ವಹಿಸಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇಂದು ರಾಯಚೂರು ನಗರದ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಸಿದ್ದೀಖಿ ಅಂತ್ಯಕ್ರಿಯೆ ನಡೆಯಲಿದೆ.‌ ಇದನ್ನೂ ಓದಿ: ವರಕವಿ ದ.ರಾ.ಬೇಂದ್ರೆ ಸೊಸೆ ನಿಧನ

    Live Tv
    [brid partner=56869869 player=32851 video=960834 autoplay=true]

  • ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ- ಗಮನಹರಿಸುವಂತೆ ಜಗ್ಗೇಶ್ ಮನವಿ

    ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ- ಗಮನಹರಿಸುವಂತೆ ಜಗ್ಗೇಶ್ ಮನವಿ

    ಟ ಕಮ್ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನವರಸನಾಯಕ ಜಗ್ಗೇಶ್ ಅವರ ಮಾಯಸಂದ್ರದ ಮನೆ ಜಲಾವೃತವಾಗಿದೆ. ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಜಗ್ಗೇಶ್ ಈಗ ನಟನೆಯ ಜತೆ ರಾಜ್ಯಸಭಾ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ತಮ್ಮ ಮನೆ ಜಲಾವೃತವಾಗಿರೋದರ ಬಗ್ಗೆ ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ. ನೀರಾವರಿನಿಗಮದವರಿಗೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.

    ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ. ಮಾಯಸಂದ್ರ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ ಎಂದು ನಟ ಜಗ್ಗೇಶ್ ವಿನಂತಿಸಿಕೊಂಡಿದ್ದಾರೆ. ಜೊತೆಗೆ ಸಿಎಂ ಬೊಮ್ಮಾಯಿ ಅವರಿಗೂ ಜಗ್ಗೇಶ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಸಮಂತಾ ನೋ ಅಂದಿದ್ಯಾಕೆ?

    JAGGESH

    ಈಗಾಗಲೇ ಜಲಾವೃತವಾಗಿರುವ ಮನೆಗಳ ಬಗ್ಗೆ ಮತ್ತು ನಟ ಜಗ್ಗೇಶ್ ಮನವಿಗೆ ನೀರಾವರಿನಿಗಮ ಯಾವ ರೀತಿಯಲ್ಲಿ ಸಾಥ್ ನೀಡಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ನವದೆಹಲಿ: ಕೇಂದ್ರ ಸರ್ಕಾರವು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇರಳದ ಮಾಜಿ ಅಥ್ಲಿಟ್ ಪಿಟಿ ಉಷಾ, ಆಂಧ್ರಪ್ರದೇಶದ ಕೆ.ವಿ.ವಿಜಯೇಂದ್ರ ಪ್ರಸಾದ್ ಹಾಗೂ ತಮಿಳುನಾಡಿನ ಇಳಯರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

    ವೀರೇಂದ್ರ ಹೆಗ್ಗಡೆ ಅವರನ್ನು ಸಮಾಜ ಸೇವೆ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಪಿ.ಟಿ.ಉಷಾ ಅವರನ್ನು ಕ್ರೀಡಾ ಕ್ಷೇತ್ರದಿಂದ, ವಿಜಯೇಂದ್ರ ಪ್ರಸಾದ್ ಅವರನ್ನು ಸಿನಿಮಾ ಕ್ಷೇತ್ರದಿಂದ ಹಾಗೂ ಇಳಯರಾಜಾ ಅವರನ್ನು ಸಂಗೀತ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.

    ಅಲ್ಲದೆ, ವೀರೇಂದ್ರ ಹೆಗ್ಗಡೆಯವರು ಅತ್ಯುತ್ತಮ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶವಿದೆ. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಪುಷ್ಟೀಕರಿಸುತ್ತಾರೆ ಎಂಬ ಭರವಸೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]