Tag: rajya sabhe

  • ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಅಮಾನತು: ಜೈಶಂಕರ್

    ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಅಮಾನತು: ಜೈಶಂಕರ್

    ನವದೆಹಲಿ: ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ, ಪಾಕಿಸ್ತಾನ (Pakistan) ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಶಾಶ್ವತವಾಗಿ ತ್ಯಜಿಸುವವರೆಗೆ ಸಿಂಧೂ ನದಿ (Sindhu River) ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವ ಜೈಶಂಕರ್ (S Jaishankar) ತಿಳಿಸಿದ್ದಾರೆ.

    `ಆಪರೇಷನ್ ಸಿಂಧೂರ’ದ (Operation Sindoor) ಚರ್ಚೆಯ ಭಾಗವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಸಿಂಧೂ ಜಲ ಒಪ್ಪಂದವು ಬಹಳ ವಿಶಿಷ್ಟವಾದ ಒಪ್ಪಂದವಾಗಿದೆ. ನಾನು ಈವರೆಗೂ ಯಾವುದೇ ಒಂದು ದೇಶವು ತನ್ನ ಪ್ರಮುಖ ನದಿಗಳನ್ನು ಯಾವುದೇ ಹಕ್ಕುಗಳಿಲ್ಲದೆ ಬೇರೊಂದು ದೇಶಕ್ಕೆ ಅನುಮತಿಸಿದ್ದನ್ನು ನಾನು ನೋಡಿಲ್ಲ. ಆದ್ದರಿಂದ ಇದು ಅಸಾಧಾರಣ ಒಪ್ಪಂದವಾಗಿತ್ತು. ನಾವು ಈ ಒಪ್ಪಂದವನ್ನು ಸ್ಥಗಿತಗೊಳಿಸಿದರೆ ಈ ಘಟನೆ ನಮ್ಮ ನೆನಪಿಗೆ ಬರುತ್ತದೆ ಅದು ತುಂಬಾ ಮುಖ್ಯವಾದದ್ದು ಎಂದರು.ಇದನ್ನೂ ಓದಿ: ತೆಂಗು ಮತ್ತು ಮೆಕ್ಕೆಜೋಳಕ್ಕೆ ರೋಗ – ವಿಶೇಷ ಪ್ಯಾಕೇಜ್ ನೀಡಲು ಕೇಂದ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಒತ್ತಾಯ

    ಮಂಗಳವಾರ ಕೆಲವರು ಹೇಳುವುದನ್ನು ನಾನು ಕೇಳಿಸಿಕೊಂಡೆ, ಜನರು ಇತಿಹಾಸವನ್ನು ಅಹಿತಕರ ಎಂದುಕೊಳ್ಳುತ್ತಾರೆ. ಜೊತೆಗೆ ಇತಿಹಾಸದ ವಿಷಯಗಳನ್ನು ಮರೆತುಬಿಡಬೇಕೆಂದುಕೊಳ್ಳುತ್ತಾರೆ. ಹೌದು, ಅವರು ಕೇವಲ ಕೆಲವು ವಿಷಯಗಳನ್ನು ಮಾತ್ರ ನೆನಪಿಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಜೈಶಂಕರ್, ಭಯೋತ್ಪಾದನೆ ಮಿತಿಮೀರಿ ಹೋಗಿದೆ. ಹೀಗಾಗಿ ಇದು ಸ್ವೀಕಾರಾರ್ಹವಲ್ಲ, ಕಳೆದ ದಶಕದಲ್ಲಿ ಭಾರತವು ಭಯೋತ್ಪಾದನೆಯನ್ನು ಎಸ್‌ಸಿಓ, ಬ್ರಿಕ್ಸ್ ಹಾಗೂ ಕ್ವಾಡ್‌ನಂತಹ ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸಿತು.ಇದನ್ನೂ ಓದಿ: ಭಾರತದ ಜೊತೆ ಟ್ರೇಡ್ ಡೀಲ್ ಫೈನಲ್ ಆಗಿಲ್ಲ; 20-25% ಟ್ಯಾರಿಫ್ ಹಾಕ್ತೀನಿ ಎಂದ ಟ್ರಂಪ್

  • ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಖರ್ಗೆ

    ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಖರ್ಗೆ

    ನವದೆಹಲಿ: ಇಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪಾಲ್ಗೊಳ್ಳಲಿದ್ದಾರೆ.

    ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಖರ್ಗೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ. ಶನಿವಾರ ಹಲವಾರು ಇಂಡಿಯಾ ಒಕ್ಕೂಟದ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಮೋದಿ ಕ್ಯಾಬಿನೆಟ್‌ನಲ್ಲಿ ಹೆಚ್‌ಡಿಕೆಗೆ ಸ್ಥಾನ: ಮಂಜುನಾಥ್‌ ಸುಳಿವು

     

    ಇಂಡಿಯಾ ಒಕ್ಕೂಟದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

    ಇಂದು ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಎನ್‌ಡಿಎ ಮಿತ್ರ ಪಕ್ಷಗಳ ಜೊತೆ ಸೇರಿ ಮೋದಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲಿದ್ದಾರೆ.

  • ರಾಜ್ಯಸಭೆ ಸದಸ್ಯರಾಗಿ ಜಗ್ಗೇಶ್, ಲೆಹರ್ ಸಿಂಗ್, ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್ ಪ್ರಮಾಣ ವಚನ ಸ್ವೀಕಾರ

    ರಾಜ್ಯಸಭೆ ಸದಸ್ಯರಾಗಿ ಜಗ್ಗೇಶ್, ಲೆಹರ್ ಸಿಂಗ್, ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್ ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಚುನಾಯಿತರಾದ 24 ಮಂದಿ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದಿಂದ ಆಯ್ಕೆಯಾದ ಜಗ್ಗೇಶ್, ಲೆಹರ್ ಸಿಂಗ್, ಜೈರಾಮ್ ರಮೇಶ್, ನಿರ್ಮಲಾ ಸೀತರಾಮನ್ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು‌.

    ನಟ ಜಗ್ಗೇಶ್ ಕನ್ನಡದಲ್ಲಿ‌ ಹಾಗೂ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಬಿಜೆಪಿ ಹಿರಿಯ ನಾಯಕ ಲೆಹರ್ ಸಿಂಗ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಜೆಪಿ ನಡ್ಡಾ ಭೇಟಿ- ಬಿಜೆಪಿ ಸೇರ್ಪಡೆ?

    ಪಿಯೂಷ್ ಗೋಯೆಲ್, ಮುಕುಲ್ ವಾಸ್ನಿಕ್, ಸುರೇಂದ್ರ ಕುಮಾರ್, ಲಕ್ಷ್ಮಿಕಾಂತ್ ಬಾಜಪೇಯ್, ನಾಬುರಾವ್ ನಿಶಾದ್, ಧನಜಯ್ ಮಧು, ಘನಶಾಮ್ ತಿವಾರಿ ಸೇರಿ 24 ಮಂದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಭಾಧ್ಯಕ್ಷ ವೆಂಕಯ್ಯನಾಯ್ಡು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]