ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ತಾಕತ್ತು. ಆಪರೇಷನ್ ಅವರಲ್ಲ (ಬಿಜೆಪಿ), ನಾವು ಸರ್ಜರಿ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಕರ್ನಾಟಕದ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಅಜಯ್ ಮಾಕೆನ್, ಎನ್.ಹುಸೇನ್, ಚಂದ್ರಶೇಖರ್ ಮತ್ತು ಬಿಜೆಪಿಯಿಂದ ನಾರಾಯಣ್ ಸಾ.ಭಾಂಡಗೆ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಇದನ್ನೂ ಓದಿ: ಭೇಟಿಯಾಗಿ ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್
ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ಈಗ ಕಾಂಗ್ರೆಸ್‌ನಲ್ಲಿ 134, ಬಿಜೆಪಿ-66, ಜೆಡಿಎಸ್‌ನಲ್ಲಿ 19 ಮತಗಳಿವೆ. ಪಕ್ಷೇತರ-2, ಕೆಆರ್‌ಪಿಪಿ-1, ರೈತ ಸಂಘದ 1 ಮತ ಇದೆ.
ಬೆಂಗಳೂರು: ನಾವು ಗೆದ್ದು ಬಿಡ್ತೀವಿ ಅಂತಾ ಹೇಳುತ್ತಿಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಒಗ್ಗಟ್ಟು ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.
ರಾಜ್ಯಸಭಾ ಚುನಾವಣೆಗೆ ಇಂದು (ಮಂಗಳವಾರ) ಮತದಾನ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋದಕ್ಕಿಂತ ಒಗ್ಗಟ್ಟು ತೋರಿಸಬೇಕು. ಈ ಮೂಲಕ ಅಭ್ಯರ್ಥಿ ಹಾಕಿದ್ದೀವಿ. ನೋಡೋಣ ಗೆಲ್ತೀವಾ ಅಂತ ಎಂದು ತಿಳಿಸಿದರು. ಈ ವೇಳೆ ಶರಣು ಕುಂದಕೂರು ಹೆಸರು ಕೇಳುತ್ತಾ ಇದ್ದಂತೆ ಕೆಂಡಾಮಂಡಲರಾದರು. ಇದನ್ನೂ ಓದಿ: ಇಂದು ರಾಜ್ಯಸಭೆ ಹೈವೋಲ್ಟೇಜ್ ಕದನ- ವಿಧಾನಸೌಧದಲ್ಲಿ ಸಿದ್ಧತೆ ಹೇಗಿದೆ?
ರಾಜ್ಯಸಭಾ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ನಾನು ಪ್ರತಿಯೊಬ್ಬರಿಗೂ ಮತ ಕೇಳಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಮತ ಕೇಳೋಕೆ ಅವಕಾಶ ಇದೆ. ಎಲ್ಲಾ ಪಕ್ಷದವರನ್ನ ಕೇಳಿದ್ದೇನೆ. ಮತ ತೋರಿಸಿ ಹಾಕಬೇಕು. ಏನ್ ಆಗುತ್ತೋ ನೋಡೋಣ ಎಂದು ತಿಳಿಸಿದರು.
ಶಾಸಕ ಹೆಚ್.ಡಿ.ರೇವಣ್ಣ ಮಾತನಾಡಿ, ಸಮಾನ ಮನಸ್ಕರು ಕುಪೇಂದ್ರ ರೆಡ್ಡಿಗೆ ಮತ ಹಾಕ್ತಾರೆಂಬ ನಂಬಿಕೆಯಿಂದ. ಕುಪೇಂದ್ರ ರೆಡ್ಡಿ ನಿಂತಿದ್ದಾರೆ. ಅವರಿಗೆ ಒಳ್ಳೇದಾಗುತ್ತೆ. ಎಷ್ಟು ಆತ್ಮಸಾಕ್ಷಿ ಮತಗಳು ಬರ್ತವೆ ಅಂತ ನಾನು ಹೇಳಲ್ಲ. ಒಂಬತ್ತು ತಿಂಗಳಿಂದ ಏನೂ ಕೆಲಸ ಆಗಿಲ್ಲ. ನಮಗೆ ಮತ ಹಾಕಿ ಅಂತ ಕಾಂಗ್ರೆಸ್‌ನವ್ರಿಗೆ ಕೇಳಿದ್ದೀವಿ ಎಂದರು. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ
ಬೆಂಗಳೂರು: ಸೋಮವಾರ ನಡೆಯಲಿರುವ ರಾಜ್ಯಸಭೆ ಚುನಾವಣೆ (Rajya Sabha Election) ಕುತೂಹಲ ಕೆರಳಿಸಿದೆ. ಮೂರು ಪಕ್ಷಗಳು ನಂಬರ್ ಗೇಮ್ ರಾಜಕೀಯದಲ್ಲಿ ಮುಳುಗಿವೆ.
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಕಾಂಗ್ರೆಸ್ (Congress) ಸಂಖ್ಯಾಬಲ 134ಕ್ಕೆ ಕುಸಿದಿದೆ. ಜೊತೆಗೆ ಅಡ್ಡಮತದಾನದ (Cross Voting) ಭೀತಿಯೂ ಎದುರಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನೆಲ್ಲಾ ಶಾಸಕರನ್ನು ಹೋಟೆಲ್ ಒಂದಕ್ಕೆ ಶಿಫ್ಟ್ ಮಾಡಿದ್ದು, ಸಭೆಗಳನ್ನು ನಡೆಸುತ್ತಿದೆ
ಇತ್ತ ಬಿಜೆಪಿ-ಜೆಡಿಎಸ್ (BJP-JDS) ಜಂಟಿಯಾಗಿ ಸಭೆ ನಡೆಸಿ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸಿದೆ. ಈ ಮಧ್ಯೆ ಜನಾರ್ದನ ರೆಡ್ಡಿ ಸಿಎಂ-ಡಿಸಿಎಂ ಅವರನ್ನು ಭೇಟಿ ಮಾಡಿದ್ದು, ಅವರು ಕಾಂಗ್ರೆಸ್ ಪರ ಮತ ಚಲಾಯಿಸಬಹುದು ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಡಿಕೆಶಿಯ ಆಪ್ತ ಯೋಗೇಂದ್ರ ಕೆಆರ್‌ಪಿಸಿ ಏಜೆಂಟ್ ಆಗಿ ನಿಯುಕ್ತಿಗೊಂಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ: ಸ್ವಪಕ್ಷದ ವಿರುದ್ಧ ಶಾಸಕ ಅಲ್ಲಮಪ್ರಭು ಪಾಟೀಲ್ ಅಸಮಾಧಾನ
ವಿಧಾನಸಭೆ ಸಭಾಂಗಣದಲ್ಲಿ ಜಿಟಿ ದೇವೇಗೌಡರು ಸೇರಿ ಹಲವರ ಜೊತೆ ಡಿಕೆ ಶಿವಕುಮಾರ್ (DK Shivakumar) ಚರ್ಚೆ ನಡೆಸಿದ್ದಾರೆ. ಅಡ್ಡಮತದಾನದ ಭೀತಿ ನಡುವೆಯೂ ಕಾಂಗ್ರೆಸ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಕುಪೇಂದ್ರ ರೆಡ್ಡಿ ವಿಶ್ವಾಸದ ಮತಗಳ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದು ಕಡೆ ಧಮ್ಕಿ ಆರೋಪಕ್ಕೆ ಸಂಬಂಧಿಸಿ ಮಾನಹಾನಿ ಕೇಸ್ ಹಾಕುತ್ತೇವೆ ಎಂಬ ಜೆಡಿಎಸ್‌ನ ಪುಟ್ಟರಾಜು ಮಾತಿಗೆ ಕಾಂಗ್ರೆಸ್‌ನ ಗಣಿಗ ರವಿ ಗರಂ ಆಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಮತದಾನ ಆರಂಭ ಆಗಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ. ನಂತರ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಪಾವಗಡ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವು
ಕಾಂಗ್ರೆಸ್‌ನಿಂದ ಅಜಯ್ ಮಾಕೆನ್, ಜಿ.ಸಿ. ಚಂದ್ರಶೇಖರ್, ಡಾ| ನಾಸೀರ್ ಹುಸೇನ್, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ.
ಕಾಂಗ್ರೆಸ್‌ನ ಎಲ್ಲ 134 ಶಾಸಕರ ಮತಗಳು ಚಲಾವಣೆಯಾದರೆ ಮೂವರು ಆತಂಕ ಇಲ್ಲದೇ ಜಯಗಳಿಸುತ್ತಾರೆ. ಒಂದು ವೇಳೆ ಅಡ್ಡ ಮತದಾನವಾದರೆ (Cross Vote) ಲೆಕ್ಕಾಚಾರ ಬುಡಮೇಲಾಗುತ್ತದೆ.
ಗೆಲುವಿಗೆ ಎಷ್ಟು ಮತಗಳು ಬೇಕು?
ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನಲ್ಲಿ 134 ಶಾಸಕರಿದ್ದಾರೆ. ಈ ಶಾಸಕರ ಜೊತೆ ಪಕ್ಷೇತರ ಶಾಸಕರಾದ ಪುಟ್ಟಸ್ವಾಮಿಗೌಡ,ಪುಟ್ಟಣ್ಣಯ್ಯ,ಲತಾ, ಜನಾರ್ದನ ರೆಡ್ಡಿ ಮತ ಹಾಕಿದರೆ ಮೂವರು ರಾಜ್ಯಸಭೆಗೆ ಸುಲಭವಾಗಿ ಆಯ್ಕೆ ಆಗುತ್ತಾರೆ.
ಬಿಜೆಪಿಯಲ್ಲಿ 66 ಮತಗಳು ಇದ್ದರೆ ಜೆಡಿಎಸ್‌ನಲ್ಲಿ 19 ಮತಗಳು ಇದೆ. ಬಿಜೆಪಿ ಅಭ್ಯರ್ಥಿ ಬಾಂಡಗೆಗೆ ಬಿಜೆಪಿ 46 ಮತ ಹಾಕಲಿದೆ. ಕುಪೇಂದ್ರ ರೆಡ್ಡಿಗೆ ಬಿಜೆಪಿಯ ಹೆಚ್ಚುವರಿ 21 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾದರೂ ಗೆಲುವಿಗೆ ಇನ್ನೂ 8 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಸದ್ಯದ ಕುತೂಹಲ. ಈ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸುತ್ತಿದೆ.
ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ನಡೆಯಲಿರುವ ಚುನಾವಣೆ (Rajya Sabha Election) ರಂಗೇರುತ್ತಿದ್ದು, ಕೆಆರ್‌ಪಿಪಿ (KRPP) ಶಾಸಕ ಜನಾರ್ದನ ರೆಡ್ಡಿಯವರು ದಿಢೀರ್ ಆಗಿ ಸಿಎಂ ಸಿದ್ದರಾಮಯ್ಯ (Siddaramaiah) ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಜನಾರ್ದನ ರೆಡ್ಡಿಯವರ (G.Janardhana Reddy) ನಡೆ ಕುತೂಹಲ ಮೂಡಿಸಿದೆ.
ಇಂದು (ಸೋಮವಾರ) ಬೆಳಗ್ಗೆ ಕಾವೇರಿ ನಿವಾಸಕ್ಕೆ ಜನಾರ್ದನ ರೆಡ್ಡಿಯರು ತೆರಳಿದ್ದು, ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‍ಗೆ ಬೆಂಬಲ ಕೊಡುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿ ವೇಳೆ ಡಿಸಿಎಂ ಡಿಕೆಶಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಬಟ್ಟೆ ಕ್ಲೀನ್ ಇಲ್ಲವೆಂದು ಮೆಟ್ರೋದೊಳಗೆ ಬಿಡದ ಸಿಬ್ಬಂದಿ ವಜಾ: MD
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದೇನೆ. ಆನೆಗುಂದಿ ಉತ್ಸವಕ್ಕೆ ಆಹ್ವಾನ ನೀಡಲು ಹೋಗಿದ್ದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಎಲ್ಲರೂ ಮನವಿ ಮಾಡಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ ಎಂದು ಹೇಳಿ ಕುತೂಹಲ ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ಮತ್ತೆ ಜಯ- ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ (Rajya Sabha Election) ಇನ್ನೊಂದೆ ದಿನ ಬಾಕಿ ಇದ್ದು ರಾಜಕೀಯ ಜೋರಾಗಿದೆ. ಅಡ್ಡ ಮತದಾನದ ಆಸೆಯಲ್ಲಿ ದೋಸ್ತಿ ಪಾರ್ಟಿ ಇದ್ದರೆ ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ (Congress) ಪ್ಲಾನ್ ಮಾಡಿದೆ. ಕಾಂಗ್ರೆಸ್‌ಗೆ ಶಾಸಕರನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದ್ದರೆ ಜೆಡಿಎಸ್ (JDS) ಪಾಲಿಗೆ ಶಾಸಕರನ್ನು ಸೆಳೆಯಬೇಕಾದ ಅನಿವಾರ್ಯತೆಯಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ. 27ರಂದು ಚುನಾವಣೆ ನಡೆಯಲಿದ್ದು ಐವರು ಕಣದಲ್ಲಿ ಇರುವುದರಿಂದ ಈಗ ಈ ಚುನಾವಣೆ ಕುತೂಹಲಕಾರಿ ಘಟ್ಟ ತಲುಪಿದೆ. ಕಾಂಗ್ರೆಸ್‌ನಿಂದ ಅಜಯ್ ಮಾಕೆನ್, ಜಿ.ಸಿ. ಚಂದ್ರಶೇಖರ್, ಡಾ| ನಾಸೀರ್ ಹುಸೇನ್, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ.
ಕುಪೇಂದ್ರ ರೆಡ್ಡಿಗೆ (Kupendra Reddy) ಬಿಜೆಪಿಯ ಹೆಚ್ಚುವರಿ 21 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾದರೂ ಗೆಲುವಿಗೆ ಇನ್ನೂ 8 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಸದ್ಯದ ಕುತೂಹಲ. ಈ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸುತ್ತಿದೆ ಇದನ್ನೂ ಓದಿ: 2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್ ಸೇತುವೆ ಉದ್ಘಾಟನೆ
ಕಾಂಗ್ರೆಸ್‌ನ ಎಲ್ಲ 135 ಶಾಸಕರ ಮತಗಳು ಚಲಾವಣೆಯಾದರೆ ಮೂವರು ಆತಂಕ ಇಲ್ಲದೇ ಜಯಗಳಿಸುತ್ತಾರೆ. ಒಂದು ವೇಳೆ ಅಡ್ಡ ಮತದಾನವಾದರೆ (Cross Vote) ಲೆಕ್ಕಾಚಾರ ಬುಡಮೇಲಾಗುತ್ತದೆ.
ಗೆಲುವಿಗೆ ಎಷ್ಟು ಮತಗಳು ಬೇಕು?
ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ದಾರೆ. ಈ ಶಾಸಕರು ಸರಿಯಾಗಿ ಮತ ಹಾಕಿದರೆ ತಲಾ 45 ಮತಗಳು ಬೀಳುವುದರಿಂದ ಮೂವರು ರಾಜ್ಯಸಭೆಗೆ ಆಯ್ಕೆ ಆಗುತ್ತಾರೆ. ಬಿಜೆಪಿಯಲ್ಲಿ 66 ಮತಗಳು ಇದ್ದರೆ ಜೆಡಿಎಸ್‌ನಲ್ಲಿ 19 ಮತಗಳು ಇದೆ. ಇದನ್ನೂ ಓದಿ: ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?
ಕಾಂಗ್ರೆಸ್ ಲೆಕ್ಕಾಚಾರ ಏನು?
ಬಿಜೆಪಿಯ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಜೆಡಿಎಸ್ ಶರಣಗೌಡ ಕಂದಕೂರು ಅವರು ಚುನಾವಣೆಗೆ ಗೈರಾದರೆ ಅಥವಾ ಅಡ್ಡ ಮತದಾನ ಮಾಡಿದರೆ ಅನುಕೂಲ ಎಂಬ ಲೆಕ್ಕಾಚಾರವನ್ನು ಹಾಕಿದೆ. ಇದೇ ಲೆಕ್ಕಾಚಾರದಲ್ಲಿ ಮನವೊಲಿಕೆ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಬಿಜೆಪಿ ಮೈತ್ರಿ ಲೆಕ್ಕಾಚಾರ ಏನು?
ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ದರ್ಶನ್ ಪುಟ್ಟಣ್ಣಯ್ಯ ಅಡ್ಡ ಮತದಾನ ಮಾಡಿದರೆ ಅಥವಾ ಚುನಾವಣೆಗೆ ಗೈರಾದರೆ ಅನುಕೂಲ ಎಂಬ ಲೆಕ್ಕಾಚಾರ ಹಾಕಿಕೊಂಡಿದೆ. ಜಾರಿ ನಿರ್ದೇಶನಾಲಯ (ED) ಇಕ್ಕಳದಲ್ಲಿ ಸಿಲುಕಿರುವ ಮಾಲೂರು ಶಾಸಕ ನಂಜೇಗೌಡ ಹಾಗೂ ಬಳ್ಳಾರಿಯ ನಾರಾ ಭರತ್ ರೆಡ್ಡಿ ಕೊನೆಕ್ಷಣದಲ್ಲಿ ದೋಸ್ತಿಗೆ ಏನಾದರೂ ಬೆಂಬಲ ನೀಡಿದರೆ ಮೈತ್ರಿ ಅಭ್ಯರ್ಥಿಗೆ ನೆರವಾಗಲಿದೆ.
ರೆಡ್ಡಿ ಮತ ಯಾರಿಗೆ?
ಜನಾರ್ದನ ರೆಡ್ಡಿ ಮತ ಯಾರಿಗೆ ಎನ್ನುವುದೇ ಸದ್ಯದ ಕುತೂಹಲ. ಕಾಂಗ್ರೆಸ್ ನಾಯಕರ ಜೊತೆಗೆ ರೆಡ್ಡಿಗೆ ಉತ್ತಮ ಸಂಪರ್ಕವಿದೆ. ಅದೇ ರೀತಿ ಬಿಜೆಪಿ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ.
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ (Kupendra Reddy) ಅಡ್ಡಮತ ಚಲಾಯಿಸಲು ಕಾಂಗ್ರೆಸ್ (Congress) ಬೆಂಬಲಿತ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ.
ಕಾಂಗ್ರೆಸ್ ಬೆಂಬಲಿತ ಶಾಸಕರಾಗಿರುವ ಲತಾ ಮಲ್ಲಿಕಾರ್ಜುನ್, ಗೌರಿಬಿದನೂರು ಪುಟ್ಟಸ್ವಾಮಿ ಗೌಡ ಹಾಗು ದರ್ಶನ್ ಪುಟ್ಟಣ್ಣಯ್ಯಗೆ ಮತ ಹಾಕುವಂತೆ ಆಮಿಷವೊಡ್ಡಿ ಬೆದರಿಕೆ ಹಾಕಲಾಗಿದೆ. ಹೋಟೆಲ್ ಮಾಲೀಕರೊಬ್ಬರು ಲತಾರವರನ್ನು ಸಂಪರ್ಕಿಸಿ ಕುಪೇಂದ್ರ ರೆಡ್ಡಿಯವರ ಪುತ್ರ ಭೇಟಿ ಮಾಡಿ ನಿಮಗೆ ಹಣವನ್ನು ಕೊಡುತ್ತಾರೆ. ಕುಪೇಂದ್ರ ರೆಡ್ಡಿಯವರಿಗೆ ಮತ ಚಲಾಯಿಸದಿದ್ದರೆ ನಿಮಗೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರಂತೆ. ಇದನ್ನೂ ಓದಿ: ವಕೀಲರು Vs ಪೊಲೀಸರು – ಫೇಸ್‌ಬುಕ್ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?
ಮಾಜಿ ಸಚಿವರೊಬ್ಬರು ಲತಾ ಅವರ ಪತಿ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಹಣದ ಆಮಿಷವೊಡ್ಡಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಚಲಾಯಿಸುವಂತೆ ಒತ್ತಡ ಹಾಕಿರುತ್ತಾರೆ. ಇನ್ನೋರ್ವ ಸದಸ್ಯರಾದಂತಹ ಪುಟ್ಟಸ್ವಾಮಿ ಗೌಡರವರಿಗೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅವರ ಹಿಂಬಾಲಕರ ಮೂಲಕ ಹಣದ ಆಮಿಷ ಹಾಗೂ ಬೆದರಿಕೆಯನ್ನು ಹಾಕಿರುತ್ತಾರೆ. ಹಾಗೆಯೇ ಮತ್ತೋರ್ವ ಸದಸ್ಯರಾದಂತಹ ದರ್ಶನ್ ಪುಟ್ಟಣ್ಣಯ್ಯರಿಗೆ ಕೂಡ ಬೆದರಿಕೆ ಹಾಕಿರುತ್ತಾರೆ. ಬೆದರಿಕೆ ಹಾಕಿರುವ ಸಂಪೂರ್ಣ ಮಾಹಿತಿ, ಸಾಕ್ಷಿ ಇದ್ದು, ಎಫ್‌ಐಆರ್ ದಾಖಲಿಸಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಹಾಗೂ ತಮ್ಮ ಪಕ್ಷದ ಸಹ ಸದಸ್ಯ, ಶಾಸಕರಿಗೆ ಸ್ವತಂತ್ರ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವಂತೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ
– ಸಂಘ & ಪಕ್ಷಕ್ಕಾಗಿ ಹೋರಾಡಿ 15 ಬಾರಿ ಜೈಲಿಗೆ ಹೋಗಿದ್ದ ಭಾಂಡಗೆಗೆ ರಾಜ್ಯಸಭಾ ಟಿಕೆಟ್
ಬೆಂಗಳೂರು: ಸಂಘಪರಿವಾರದ ಹೋರಾಟಗಾರ, ಬಿಜೆಪಿ ಕಟ್ಟಾಳು ನಾರಾಯಣಸಾ ಭಾಂಡಗೆ (Narayana Krishanasa Bhandage) ಅವರನ್ನ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ. ಬಿಜೆಪಿ ಘೋಷಣೆ ಬೆನ್ನಲ್ಲೇ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ರಾಜ್ಯಸಭಾ ಸ್ಥಾನಕ್ಕೆ ನನ್ನ ಹೆಸರು ಘೋಷಣೆಯಾಗುತ್ತೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಹೋರಾಟ ಹಾಗೂ ಹಿರಿತನ ಮನಗಂಡು ಪಕ್ಷದ ಹಿರಿಯರು ನನಗೆ ರಾಜ್ಯಸಭಾ ಸ್ಥಾನ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿ, ಗುರುತಿಸುವುದು ಬಿಜೆಪಿಯಲ್ಲಿ ಮಾತ್ರ ಎಂದು ನಾರಾಯಣಸಾ ಹೇಳಿದ್ದಾರೆ.
ನಾರಾಯಣಸಾ ಭಾಂಡಗೆ ಸಂಘದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ತಮ್ಮ 17 ನೇ ವಯಸ್ಸಿಗೆ ಆರ್‌ಎಸ್‌ಎಸ್ ಸೇರ್ಪಡೆಯಾಗಿದ್ದರು. ಬಾಗಲಕೋಟೆಯಲ್ಲಿ ಎಬಿವಿಪಿ ಸಂಸ್ಥಾಪಕ ಸದಸ್ಯರೂ ಆಗಿದ್ದರು. ವಿಶ್ವ ಹಿಂದೂ ಪರಿಷತ್‌ನಲ್ಲೂ ಸೇವೆ ಸಲ್ಲಿಸಿದ್ದಾರೆ.
1973 ರಲ್ಲಿ ಅಂದಿನ ಜನಸಂಘ ಸೇರ್ಪಡೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಇಂದಿರಾ ಗಾಂಧಿ ಅವರು ಆಲಮಟ್ಟಿ ಜಲಾಶಯಕ್ಕೆ ಭೇಟಿ ಕೊಟ್ಟಾಗ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿ ಬಂಧನಕ್ಕೆ ಒಳಗಾಗಿದ್ದರು.
ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದವರಲ್ಲಿ ಇವರೂ ಸಹ ಒಬ್ಬರು. ಇವರು ರಾಮಮಂದಿರ ಕರಸೇವಕರೂ ಹೌದು. ರಾಮಮಂದಿರ ನಿರ್ಮಾಣಕ್ಕೆ ರಾಮ ಶಿಲೆ ಸಂಗ್ರಹಿಸಿ ಕಳಿಸಿದ್ದಾರೆ. ಕಾಶ್ಮೀರದ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸುವ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಹುಬ್ಬಳ್ಳಿ ಈದ್ಗಾ ಮೈದಾನದ ರಾಷ್ಟ್ರಧ್ವಜ ಹಾರಿಸಿ ಲಾಠಿ ಏಟು ತಿಂದಿದ್ದರು. ಸಂಘ ಮತ್ತು ಪಕ್ಷಕ್ಕಾಗಿ 35-40 ಕೇಸ್‌ಗಳನ್ನು ಹಾಕಿಸಿಕೊಂಡು 15 ಸಲ ಜೈಲುವಾಸ ಅನುಭವಿಸಿದ್ದಾರೆ.
– ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸೋಮಣ್ಣಗೆ ನಿರಾಸೆ – ರಾಜ್ಯದ ಒಂದು ಸ್ಥಾನಕ್ಕೆ ಮಾತ್ರ ಹೈಕಮಾಂಡ್ ಟಿಕೆಟ್
ನವದೆಹಲಿ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆ ಮಾಡಿದೆ. ರಾಜ್ಯದ ಒಬ್ಬರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.
ರಾಜ್ಯದ ಒಂದು ಸ್ಥಾನಕ್ಕೆ ನಾರಾಯಣ ಕೃಷ್ಣನಾಸ ಭಾಂಡಗೆ ಟಿಕೆಟ್ ನೀಡಿದೆ. ಮಾಜಿ ಎಂಎಲ್‌ಸಿ ಹಾಗೂ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಭಾಂಡಗೆ ಅವರು ಆರ್‌ಎಸ್‌ಎಸ್ ಹಿನ್ನಲೆಯ ನಾಯಕ. ಬಾಗಲಕೋಟೆ ಯ ನಾಯಕರು, ಆರೆಸೆಸ್ ಹಿನ್ನೆಲೆಯ ನಾಯಕ
ಒಟ್ಟು 14 ಮಂದಿಯ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ. ಬಿಹಾರಕ್ಕೆ 2, ಛತ್ತೀಸಗಢ, ಹರಿಯಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರಾಖಂಡಕ್ಕೆ ತಲಾ 1 ಟಿಕೆಟ್ ನೀಡಿದೆ. ಉತ್ತರ ಪ್ರದೇಶದ 7 ಮಂದಿಯ ಹೆಸರು ಘೋಷಣೆಯಾಗಿದೆ. ಆ ಮೂಲಕ ಹೈಕಮಾಂಡ್ ರಾಜ್ಯ ಬಿಜೆಪಿಗೆ ರಾಜ್ಯಸಭೆ ಚುನಾವಣೆ ಶಾಕ್ ಕೊಟ್ಟಿದೆ. ಬಿಜೆಪಿ ಗೆಲ್ಲಲು ಅವಕಾಶ ಇರುವ ಒಂದು ಸ್ಥಾನಕ್ಕೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸೋಮಣ್ಣಗೆ ನಿರಾಸೆ
ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಲಾಭಿ ಮಾಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ನಿರಾಸೆಯಾಗಿದೆ. ಹಾಲಿ ರಾಜ್ಯಸಭೆ ಸದಸ್ಯ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಂದುವರಿಸದಿರಲು ಹೈಕಮಾಂಡ್ ನಿರ್ಧರಿಸಿದೆ. ರಾಜ್ಯದಿಂದ ಕಳಿಸಿದ್ದ ಸಂಭಾವ್ಯರ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಮನ್ನಣೆ ಕೊಟ್ಟಿಲ್ಲ. ಪಕ್ಷ ನಿಷ್ಠರ ಬದಲು ಸಂಘನಿಷ್ಠ ವ್ಯಕ್ತಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ಫೆ.27 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಫೆ.15 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬಿಜೆಪಿಯಿಂದ ಸದ್ಯಕ್ಕೆ ಒಂದೇ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ.
ಬೆಂಗಳೂರು: ರಾಜ್ಯಸಭೆ ಚುನಾವಣೆ (Rajya Sabha Election) ಘೋಷಣೆಯಾಗಿದ್ದು, ಆ ಸ್ಥಾನಕ್ಕೆ ಮಲೆನಾಡು ಮತ್ತು ಕರಾವಳಿ ಭಾಗದ ಸಮಸ್ಯೆಗಳಿಗೆ ಧ್ವನಿಯಾಗುವ ಕಾಂಗ್ರೆಸ್‌ನ (Congress) ಹಿರಿಯ ನಾಯಕ ಬಿ.ಎಲ್.ಶಂಕರ್ (BL Shankar) ಅವರನ್ನು ಆಯ್ಕೆ ಮಾಡಬೇಕು ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟ ಸಂಘಟನೆ ಒತ್ತಾಯಿಸಿದೆ.
ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸದಸ್ಯರು ಮಲೆನಾಡು ಹಾಗೂ ಕರಾವಳಿಯಲ್ಲಿ ಅರಣ್ಯ ಇಲಾಖೆ, ಕಸ್ತೂರಿ ರಂಗನ್ ವರದಿ, ಹಳದಿ ಎಲೆ ರೋಗ ಸೇರಿ ಹಲವು ಸಮಸ್ಯೆಗಳು ಬಾಧಿಸುತ್ತಿವೆ.ಹಾಲಿ ಸಂಸದರುಗಳು ಜನರಿಗೆ, ರೈತರಿಗೆ ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ಸಮಸ್ಯೆಯನ್ನು ಬಿಂಬಿಸಿ ನ್ಯಾಯ ದೊರಕಿಸಲು ಬಿ.ಎಲ್.ಶಂಕರ್ ಅವರನ್ನು ಕಾಂಗ್ರೆಸ್‌ನಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಕಾಂಗ್ರೆಸ್ ಪಕ್ಷಕ್ಕೆ ಬಿ.ಎಲ್.ಶಂಕರ್ ಅವರ ಶ್ರಮವನ್ನು ಮರೆಯುವಂತಿಲ್ಲ. ಆದ್ದರಿಂದ ಕಾಂಗ್ರೆಸ್‌ನಿಂದ ಶಂಕರ್ ಅವರನ್ನು ಅಯ್ಕೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ JDS ಇಬ್ಬರು ಶಾಸಕರಿಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ನೋಟಿಸ್ ಜಾರಿ ಮಾಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನ ಅನರ್ಹ ಮಾಡುವಂತೆ ವಿಧಾನಸಭೆ ಕಾರ್ಯದರ್ಶಿಗಳಿಗೆ ಜೆಡಿಎಸ್ ಪಕ್ಷದಿಂದ ದೂರು ನೀಡಲಾಗಿತ್ತು. ಜೆಡಿಎಸ್ ದೂರು ಹಿನ್ನೆಲೆಯಲ್ಲಿ ವಿವರಣೆ ಕೇಳಿ ಮಾಡಿದ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.
ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಲೇಹರ್‌ಸಿಂಗ್ ಪರ ಮತದಾನ ಮಾಡಿದ್ದಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ಧ ಆರೋಪಿಸಲಾಗಿತ್ತು. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿ ಕೋಲಾರ ಶ್ರೀನಿವಾಸಗೌಡ ಹೇಳಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್ ದೂರು ನೀಡಿತ್ತು. ಜೆಡಿಎಸ್ ದೂರು ವಿಚಾರ ನಡೆಸಿದ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ ವಿವರಣೆ ನೀಡುವಂತೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ
Live Tv
[brid partner=56869869 player=32851 video=960834 autoplay=true]