Tag: Rajya Sabha Election

  • ವಿಧಾನಸೌಧದಲ್ಲೇ ಪಾಕ್‌ ಜಿಂದಾಬಾದ್‌ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ

    ವಿಧಾನಸೌಧದಲ್ಲೇ ಪಾಕ್‌ ಜಿಂದಾಬಾದ್‌ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ

    ಬೆಂಗಳೂರು: ರಾಜ್ಯಸಭೆ ಚುನಾವಣಾ (Rajya Sabha Election) ವೇಳೆ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣ ನಡೆದು 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್‌ ಹಾಕಿಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದೆ.

    ಕಾಂಗ್ರೆಸ್‌ ಸದಸ್ಯ ನಾಸಿರ್ ಹುಸೇನ್ (Nasir Hussain) ಅವರು ಗೆದ್ದ ಖುಷಿಯಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ್ದರು.ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ಮೂವರು ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದರು.  ಇದನ್ನೂ ಓದಿ: ಮಣಿಪುರದ ನೂತನ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇಮಕ

    ಪೊಲೀಸರು ದೋಷಾರೋಪ ಪಟ್ಟಿಯನ್ನು (Chargesheet) ಸಲ್ಲಿಸಿಲ್ಲ ಅಷ್ಟೇ ಅಲ್ಲದೇ ಇಲ್ಲಿಯವರೆಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

    ನವ ಮಾಸಗಳೇ ಕಳೆದರೂ ಅವರು ಪೊಲೀಸರ ಮುಂದೆ ಹಾಜರಾಗುವ ಸಾಹಸ ಮಾಡಿಲ್ಲ. ಸದ್ಯ ಪೊಲೀಸರು (Police) ಏನು ಮಾಡಲು ಆಗದೇ ಒದ್ದಾಡುತ್ತಿದ್ದಾರೆ. ಪೊಲೀಸರ ಈ ನಡೆ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

     

  • ವಿಧಾನಸೌಧದ ಮೇಲೆ ಗುಂಬಜ್‌ ಬರುತ್ತೆ, ಲೌಡ್‌ಸ್ಪೀಕರ್‌ನಲ್ಲಿ ಆಜಾನ್‌ ಕೂಗುತ್ತೆ: ಪ್ರತಾಪ್‌ ಸಿಂಹ

    ವಿಧಾನಸೌಧದ ಮೇಲೆ ಗುಂಬಜ್‌ ಬರುತ್ತೆ, ಲೌಡ್‌ಸ್ಪೀಕರ್‌ನಲ್ಲಿ ಆಜಾನ್‌ ಕೂಗುತ್ತೆ: ಪ್ರತಾಪ್‌ ಸಿಂಹ

    – ತಾಲಿಬಾನ್‌ ಸರ್ಕಾರ ಆಗುತ್ತೆ ಅಂತ ಮೊದಲೇ ಹೇಳಿದ್ದೆ ಎಂದ ಸಂಸದ

    ಮಡಿಕೇರಿ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಟ್ರೈಲರ್‌ ಅಷ್ಟೇ. ಮುಂದಿನ ದಿನಗಳಲ್ಲಿ ವಿಧಾನಸೌಧದ (Vidhan Soudha) ಮೇಲೆ ಗುಂಬಜ್‌ ಬರುತ್ತೆ. ಅದರ ಮೇಲೊಂದು ಲೌಡ್ ಸ್ಪೀಕರ್ ಬಂದು ಆಜಾನ್‌ ಕೇಳುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಮುಂದುವರಿದರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಕಿಡಿ ಕಾರಿದ್ದಾರೆ.

    ರಾಜ್ಯಸಭಾ ಚುನಾವಣೆ (Rajya Sabha Election) ಫಲಿತಾಂಶದ ವೇಳೆ ಗೆಲುವು ಸಾಧಿಸಿದ ನಂತರ ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸತತವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶೇಖ್ ಷಹಜಹಾನ್ 6 ವರ್ಷ ಪಕ್ಷದಿಂದ ಅಮಾನತು – ಬ್ರಿಜ್ ಭೂಷಣ್ ವಿರುದ್ಧ ಕ್ರಮ ಯಾವಾಗ ಬಿಜೆಪಿಗೆ ಟಿಎಂಸಿ ಪ್ರಶ್ನೆ

    ಕೊಡಗಿನ ವಿರಾಜಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಬಳಿಕ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ, ಪಾಕಿಸ್ತಾನ ಪರ ಘೋಷಣೆ ಕೂಗಿರೋದು ಟ್ರೈಲರ್‌ ಅಷ್ಟೆ, ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 1993ರ ಸರಣಿ ಬಾಂಬ್‌ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ `ಡಾ. ಬಾಂಬ್’ ಖುಲಾಸೆ

    ಕಾಂಗ್ರೆಸ್‌ಗೆ ವೋಟು ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತೆ ಅಂತ ನಾನು ವಿಧಾನಸಭಾ ಚುನಾವಣಾ ಸಂದರ್ಭದಲ್ಲೇ ಹೇಳಿದ್ದೆ. ಅದು ಕನ್ನಡಿಗರ ಸರ್ಕಾರ ಆಗಿರೊಲ್ಲ, ಬದಲಾಗಿ ತಾಲಿಬಾನ್ ಸರ್ಕಾರ ಆಗಿರುತ್ತೆ ಅಂತ ಹೇಳಿದ್ದೆ. ಈಗ ನನ್ನ ಮಾತು ನಿಜವಾಗಿದೆ. ಮೊನ್ನೆ ವಿಧಾನಸೌಧದಲ್ಲಿ ಘೊಷಣೆ ಕೂಗಿರುವುದು ಕೇವಲ ಟ್ರೈಲರ್‌ ಅಷ್ಟೆ. ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತದೆ. ಅದರ ಮೇಲೆ ಒಂದು ಲೌಡ್ ಸ್ಪೀಕರ್ ಬಂದು ಆಜಾನ್ ಕೇಳುತ್ತದೆ. ಕಾಂಗ್ರೆಸ್ ಸರ್ಕಾರ ಮುಂದುವರಿಯಲು ಬಿಟ್ಟರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ಲೇವಡಿ ಮಾಡಿದ್ದಾರೆ.

    ಇನ್ನೂ ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಸೋತಿರುವುದಕ್ಕೆ ಬಿಜೆಪಿ ಹೀಗೊಂದು ವಿವಾದ ಸೃಷ್ಟಿಸಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಶುದ್ಧ ಸುಳ್ಳು. ದೇಶದಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿ ಮೆಜಾರಿಟಿ ಪಡೆದಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಮಾಧ್ಯಮಗಳು ಪ್ರಪಂಚಕ್ಕೆ ತೋರಿಸಿವೆ. ಕೂಗಿರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

  • ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ – ಬಿಜೆಪಿ ನಾಯಕರ ವಿರುದ್ಧ ನಲಪಾಡ್ ದೂರು

    ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ – ಬಿಜೆಪಿ ನಾಯಕರ ವಿರುದ್ಧ ನಲಪಾಡ್ ದೂರು

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಆರೋಪ ಹೊರಿಸಿದ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ (Congress) ಯುವ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ದೂರು ನೀಡಿದ್ದಾರೆ.

    ಪ್ರಚೋದನಾಕಾರಿ ಹೇಳಿಕೆ ಕೊಟ್ಟು ಸಮಾಜ ಒಡೆಯಲು ಯತ್ನಿಸುತ್ತಿರುವ ಬಿಜೆಪಿ (BJP) ನಾಯಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನಲಪಾಡ್ ಕಮೀಷನರ್ ಕಚೇರಿಯಲ್ಲಿ ದೂರು ನೀಡಿದ್ದಾರೆ. ವಕೀಲ ಶತಬೀಷ್ ಶಿವಣ್ಣ ಜೊತೆ ಆಗಮಿಸಿ ಸತ್ಯಾಂಶ ಹೊರಬರುವ ಮುನ್ನವೇ ಸುಳ್ಳು ಹಬ್ಬಿಸಿದ್ದಾರೆ ಎಂದು ನಲಪಾಡ್ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ:  ರೈತನಿಗೆ ಅವಮಾನ – ಕ್ಷಮೆಯಾಚಿಸಿ ಉಲ್ಟಾ ಹೊಡೆದ ಬಿಎಂಆರ್‌ಸಿಎಲ್

    ಆರ್ ಅಶೋಕ್, ಅಶ್ವಥ್ ನಾರಾಯಣ್, ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ದೂರು ಕೊಡಲು ಬಂದಿದ್ದೇವೆ. ನಾಸೀರ್ ಹುಸೇನ್ ಜಿಂದಾಬಾದ್ ಎಂಬುದನ್ನು ತಿರುಚಿ ಹೇಳಲಾಗುತ್ತಿದೆ. ಅದನ್ನು ಪಾಕಿಸ್ತಾನ ಜಿಂದಾಬಾದ್ ಎಂದು ತಿರುಚಿ ಹೇಳಿ ಸಮಾಜ ಒಡೆದುಹಾಕುವ ಹೇಳಿಕೆ ನೀಡಿದ್ದಾರೆ. ಕಮ್ಯೂನಲ್ ವಿಚಾರದ ಬಗ್ಗೆ ದಂಗೆ ಹಚ್ಚಲು ಈ ರೀತಿ ಮಾಡಲಾಗುತ್ತಿದೆ. ರಾಜಕೀಯ ಮಾಡಿ ಈ ರೀತಿ ಹಬ್ಬಿಸಲಾಗುತ್ತಿದೆ. ಒಂದೇ ಒಂದು ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

    ನಾವೆಲ್ಲಾ ಭಾರತೀಯರು, ಕನ್ನಡಿಗರು. ಒಂದು ಸಮಾಜವನ್ನು ಟಾರ್ಗೆಟ್ ಮಾಡಿ ಅವನನ್ನು ಜೀವನ ಮಾಡಲು ಬಿಡುತ್ತಿಲ್ಲ. ಒಬ್ಬ ಸಂಸದ ಗೆದ್ದಾಗ ಜಿಂದಾಬಾದ್ ಹಾಕೋಕು ಬಿಟ್ಟಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ ಮಾಡಿದ್ದೇವೆ. ಮೂರು ಸೀಟ್ ಗೆದ್ದಿರುವುದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಉರ್ಕೊಂಡು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ, ಡಿಕೆಶಿ ಇರೋವರೆಗೂ ನಮ್ಮ ಶಾಸಕರನ್ನು ಖರೀದಿ ಮಾಡಲು ಆಗಲ್ಲ. ಎಷ್ಟೇ ಕೋಟಿ ಕೊಡುತ್ತೇನೆ ಅಂದರೂ ನಮ್ಮ ಶಾಸಕರು ಸೋತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನೀರಿನ ಕೊರತೆ – ಲೋಡ್ ಶೆ‌ಡ್ಡಿಂಗ್ ಭೀತಿ

  • ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

    ಪಾಕಿಸ್ತಾನ ಜಿಂದಾಬಾದ್‌ ಘೋಷಣೆ – ಎಡಿಟ್‌ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್‌ ಟಿವಿ

    ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ (Pakistan Zindabad) ಘೋಷಣೆ ಆರೋಪದ ತನಿಖೆ ಚುರುಕುಗೊಂಡಿದೆ. ಪೊಲೀಸರು (Police) ಮಾಧ್ಯಮಗಳಿಂದ ಘಟನೆಯ ಮೂಲ ದೃಶ್ಯಾವಳಿಗಳನ್ನು ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು (PUBLiC TV) ಸಂಪರ್ಕಿಸಿದ ವಿಧಾನಸೌಧ ಠಾಣೆ ಪೊಲೀಸರು ಮೂಲ ದೃಶ್ಯಾವಳಿ ಒದಗಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ, ಎಡಿಟ್ ಮಾಡದ ಮೂಲ ವಿಡಿಯೋ ತುಣಕನ್ನು ಪೊಲೀಸರಿಗೆ ನೀಡಿದೆ. ಇದನ್ನೂ ಓದಿ: BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್‌ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?

     

    2024ರ ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆಯ (Rajya Sabha Election) ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ (Nasser Hussain) ಅವರು ಬೆಂಬಲಿಗರೊಂದಿಗೆ ವಿಧಾನಸೌಧದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಇದನ್ನು ನಮ್ಮ ವರದಿಗಾರರು ಚಿತ್ರೀಕರಿಸುತ್ತಿದ್ದರು. ಇದನ್ನೂ ಓದಿ: ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ

     

    ಈ ಸಂದರ್ಭದಲ್ಲಿ ನಾಸೀರ್ ಹುಸೇನ್ ಅವರ ಕಿರು ಸಂದರ್ಶನ ಮಾಡಲು ಮುಂದಾದಾಗ ಅವರ ಬೆಂಬಲಿಗರಿದ್ದ ಗುಂಪುನಿಂದ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿದೆ. ಆ ಮೂಲ ದೃಶ್ಯಾವಳಿಯನ್ನು ತಮಗೆ ನೀಡುತ್ತಿದ್ದೇವೆ ಮತ್ತು ಈ ಮೂಲಕ ತನಿಖೆಗೆ ಸಹಕರಿಸುತ್ತಿದ್ದೇವೆ ಎಂದು ಲಿಖಿತ ರೂಪದಲ್ಲಿ ಪೊಲೀಸರಿಗೆ ವಿವರಣೆ ಕೊಟ್ಟಿದ್ದೇವೆ. ಪೊಲೀಸರು ಆ ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಸಿದ್ದಾರೆ.

     

  • ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ

    ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ

    ಶಿಮ್ಲಾ: ರಾಜ್ಯಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ಬುಧವಾರ ಬೆಳಗ್ಗೆ ಸಚಿವ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಸುಖವಿಂದರ್ ಸಿಂಗ್ ಸುಖು ಸರ್ಕಾರವು ತನ್ನ ಸ್ವಂತ ಶಾಸಕರನ್ನು ಹಲವಾರು ಬಾರಿ ಅವಮಾನಿಸಿದೆ ಎಂದು ವಿಕ್ರಮಾದಿತ್ಯ ಸಿಂಗ್ ಆರೋಪಿಸಿದ್ದಾರೆ. ಅವಮಾನವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ ವಿಕ್ರಮಾದಿತ್ಯ, ಈಗ ಹಿಮಾಚಲದಲ್ಲಿ ಕಾಂಗ್ರೆಸ್ ಮುಂದಿನ ನಡೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

    ವಿಕ್ರಮಾದಿತ್ಯ ಅವರು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಕಾಂಗ್ರೆಸ್ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.

    ಮಂಗಳವಾರ ನಡೆದ ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಬಿಜೆಪಿಯ ಹರ್ಷ್ ಮಹಾಜನ್ ಅವರು ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

    ಬಿಜೆಪಿಯು ವಿಶ್ವಾಸಮತಕ್ಕೆ ಒತ್ತಾಯಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಹಿಮಾಚಲ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಅವರು ಇಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲು ವಿಫಲವಾದ ನಂತರ ಕಾಂಗ್ರೆಸ್ ಜನಾದೇಶವನ್ನು ಕಳೆದುಕೊಂಡಿದೆ ಎಂದು ಠಾಕೂರ್ ಹೇಳಿದ್ದಾರೆ. ಬಿಜೆಪಿಯ ಹೇಳಿಕೆಗಳನ್ನು ಕಾಂಗ್ರೆಸ್‌ ನಿರಾಕರಿಸಿದೆ.

  • ಗೆದ್ದ ಬೆನ್ನಲ್ಲೇ  ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ

    ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ

    – ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ

    ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಗೆದ್ದ ಬಳಿಕ ಕಾಂಗ್ರೆಸ್‌ನ (Congress) ನಾಸೀರ್ ಹುಸೇನ್ (Naseer Hussain) ಬೆಂಬಲಿಗರು ಪಾಕ್ (Pakistan) ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

    ನಾಸೀರ್ ಹುಸೇನ್ 47 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ವೇಳೆ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

    ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಅವರನ್ನು ಪಬ್ಲಿಕ್ ಟಿವಿ ವರದಿಗಾರರು ಮಾತನಾಡಿಸಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ.

    ಈ ಬಗ್ಗೆ ಪಬ್ಲಿಕ್‌ ಟಿವಿ ಪ್ರಶ್ನೆ ಕೇಳಿದ್ದಕ್ಕೆ, ಪಾಕಿಸ್ತಾನ ಜಿಂದಾಬಾದ್ ಅಂದಿದ್ದು ನನಗೆ ಗೊತ್ತಿಲ್ಲ ಎಂದು ನಾಸೀರ್ ಹುಸೇನ್ ಉತ್ತರಿಸಿದ್ದಾರೆ.

  • ಸೋಮಶೇಖರ್ ಭಾವಚಿತ್ರಕ್ಕೆ ಮಸಿ ಬಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ

    ಸೋಮಶೇಖರ್ ಭಾವಚಿತ್ರಕ್ಕೆ ಮಸಿ ಬಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ

    – ನಡುರಸ್ತೆಯಲ್ಲೇ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

    ಬೆಂಗಳೂರು: ಶಾಸಕ ಎಸ್‌ಟಿ ಸೋಮಶೇಖರ್ (ST Somashekar) ಕಾಂಗ್ರೆಸ್‌ಗೆ (Congress)  ಅಡ್ಡಮತದಾನ (Cross Vote) ಮಾಡಿದ ಹಿನ್ನೆಲೆ ಆಕ್ರೋಶಗೊಂಡ ಬಿಜೆಪಿ (BJP) ಕಾರ್ಯಕರ್ತರು ಯಶವಂತಪುರದಲ್ಲಿರುವ (Yeswanthpur) ಸೋಮಶೇಖರ್ ಕಚೇರಿ ಮುಂದೆ ಪ್ರತಿಭಟನೆ (Protest) ನಡೆಸಿದ್ದಾರೆ.

    ಭಾವಚಿತ್ರಕ್ಕೆ ಮಸಿ ಬಳಿದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಡುರಸ್ತೆಯಲ್ಲೇ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಜೆಡಿಎಸ್ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕೆಂಗೇರಿ ಹೊಯ್ಸಳ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಇದನ್ನೂ ಓದಿ: ಲೋಕಸಮರ ಹೊತ್ತಲ್ಲಿ ದೋಸ್ತಿಗಳಿಗೆ ಮತ್ತೆ ಶಾಕ್- ಕಾಂಗ್ರೆಸ್ಸಿನ ಮೂವರು, ಬಿಜೆಪಿಯ ಒಬ್ಬರಿಗೆ ಗೆಲುವು

    ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಮತ್ತು ಯಶವಂತಪುರ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಜವರಾಯೀಗೌಡ ಭಾಗಿಯಾಗಿದ್ದರು. ಇದನ್ನೂ ಓದಿ: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ: ಹೆಚ್‌ಡಿಕೆ

    ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಬಿಜೆಪಿ ನಾಯಕರು ಬುಧವಾರ ಸ್ಪೀಕರ್‌ಗೆ ದೂರು ನೀಡಲಿದ್ದಾರೆ. ಇಬ್ಬರ ಶಾಸಕತ್ವ ಅನರ್ಹತೆ ಮಾಡುವಂತೆ ಬಿಜೆಪಿ ಸ್ಪೀಕರ್‌ಗೆ ದೂರು ಕೊಡಲಿದೆ. ಇದನ್ನೂ ಓದಿ: ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

  • ಲೋಕಸಮರ ಹೊತ್ತಲ್ಲಿ ದೋಸ್ತಿಗಳಿಗೆ ಮತ್ತೆ ಶಾಕ್- ಕಾಂಗ್ರೆಸ್ಸಿನ ಮೂವರು, ಬಿಜೆಪಿಯ ಒಬ್ಬರಿಗೆ ಗೆಲುವು

    ಲೋಕಸಮರ ಹೊತ್ತಲ್ಲಿ ದೋಸ್ತಿಗಳಿಗೆ ಮತ್ತೆ ಶಾಕ್- ಕಾಂಗ್ರೆಸ್ಸಿನ ಮೂವರು, ಬಿಜೆಪಿಯ ಒಬ್ಬರಿಗೆ ಗೆಲುವು

    – ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟ
    – ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲು

    ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಸನಿಹದಲ್ಲಿ ಕರ್ನಾಟಕದಲ್ಲಿ (Karnataka) ದೋಸ್ತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕಳೆದ ವಾರವಷ್ಟೇ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ದೋಸ್ತಿಗಳು ಸೋತಿದ್ದರು. ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ (Rajya Sabha Election) ಬಿಜೆಪಿ-ಜೆಡಿಎಸ್ (BJP-JDS) ಎಡವಿ ಮುಖಭಂಗ ಅನುಭವಿಸಿದೆ.

    ಸಂಖ್ಯಾಬಲ ಕೊರತೆ ನಡುವೆಯೂ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎನ್‌ಡಿಎ (NDA) ಮ್ಯಾಜಿಕ್ ಮಾಡುವಲ್ಲಿ ಸೋತಿದೆ. ಪಕ್ಷೇತರರು ನಿರೀಕ್ಷೆಯಂತೆಯೇ ಕೈ ಹಿಡಿದ್ದಾರೆ. ಬಿಜೆಪಿಯ ಎಸ್‌ಟಿ ಸೋಮಶೇಖರ್ (ST Somashekhar) ಎಲ್ಲರ ನಿರೀಕ್ಷೆ ಮೀರಿ ಕಾಂಗ್ರೆಸ್‌ಗೆ ವೋಟ್ ಹಾಕಿದ್ದಾರೆ. ಅವರ ಸಾಥಿ ಶಿವರಾಮ್ ಹೆಬ್ಬಾರ್ (Shivaram Hebbar) ಮತದಾನದಿಂದಲೇ ದೂರ ಉಳಿದು ಬಿಜೆಪಿಗೆ ಡ್ಯಾಮೇಜ್ ಮಾಡಿದ್ದಾರೆ. ಪರಿಣಾಮ ಎನ್‌ಡಿಎಯ ಎರಡನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಸೋಲನುಭವಿಸಿದ್ದಾರೆ.

    ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇನ್, ಜಿಸಿ ಚಂದ್ರಶೇಖರ್, ನಾಸೀರ್ ಹುಸೇನ್ ಮತ್ತು ಬಿಜೆಪಿಯ ನಾರಾಯಣ ಸಾ ಬಾಂಡಗೆ ಅವರು ಗೆದ್ದು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ-ಜೆಡಿಎಸ್ ಪಡಸಾಲೆಯಲ್ಲಿ ನಿರಾಸೆ ಆವರಿಸಿದೆ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ


    ರಾಜ್ಯಸಭೆ ಫಲಿತಾಂಶ
    * ಅಜಯ್ ಮಕೇನ್ – ಕಾಂಗ್ರೆಸ್ ಅಭ್ಯರ್ಥಿ – 47 ಮತ – ಗೆಲುವು
    * ನಾಸೀರ ಹುಸೇನ್ – ಕಾಂಗ್ರೆಸ್ ಅಭ್ಯರ್ಥಿ – 47 ಮತ – ಗೆಲುವು
    * ಜಿಸಿ ಚಂದ್ರಶೇಖರ್ – ಕಾಂಗ್ರೆಸ್ ಅಭ್ಯರ್ಥಿ – 45 ಮತ – ಗೆಲುವು
    * ನಾರಾಯಣ ಸಾ ಬಾಂಡಗೆ –  ಬಿಜೆಪಿ ಅಭ್ಯರ್ಥಿ – 48 ಮತ – ಗೆಲುವು
    * ಕುಪೇಂದ್ರ ರೆಡ್ಡಿ – ಎನ್‌ಡಿಎ ಅಭ್ಯರ್ಥಿ – 35 ಮತ –  ಸೋಲು ಇದನ್ನೂ ಓದಿ: ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

    ರಾಜ್ಯಸಭೆ ಎಲೆಕ್ಷನ್ ಮತ ಲೆಕ್ಕ
    * ಒಟ್ಟು ಮತ – 223
    * ಚಲಾವಣೆ – 222
    * ಗೈರು – 01
    * ಕಾಂಗ್ರೆಸ್ – 139 (ಹೆಚ್ಚುವರಿ 5 ಮತ.. ನಾಲ್ವರು ಪಕ್ಷೇತರರು, ಎಸ್‌ಟಿ ಸೋಮಶೇಖರ್)
    * ಬಿಜೆಪಿ – 64 (-2 ಮತ)
    * ಜೆಡಿಎಸ್ – 19 (19 ಮತ)

  • ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ: ಹೆಚ್‌ಡಿಕೆ

    ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ: ಹೆಚ್‌ಡಿಕೆ

    – ಎಸ್‌ಟಿ ಸೋಮಶೇಖರ್ ನಡೆ ನಿರೀಕ್ಷಿತವೇ ಆಗಿತ್ತು

    ಬೆಂಗಳೂರು: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದಲ್ಲ. ಹಿಂದೆ ತುಂಬಾ ಜನ ಸೋತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಎಸ್‌ಟಿ ಸೋಮಶೇಖರ್ (ST Somashekar) ಕ್ರಾಸ್ ವೋಟ್, ಮೈತ್ರಿ ಕೂಟಕ್ಕೆ ಎರಡನೇ ಸೋಲು ವಿಚಾರವಾಗಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರೂ ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಸೋಮಶೇಖರ್ ನಡೆ ನಿರೀಕ್ಷಿತವೇ ಆಗಿತ್ತು. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ನಿನ್ನೆ ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಸಭೆಗೆ ಕರೆದುಕೊಂಡು ಹೋದವರು ಯಾರು ಎಂದು ನಮಗೂ ಗೊತ್ತಿದೆ ಎಂದರು. ಇದನ್ನೂ ಓದಿ: ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ: ಸಿ.ಟಿ ರವಿ ಗರಂ

    ಇದು ನಮಗೆ ಸೋಲಲ್ಲ. ಇದು ಮೈತ್ರಿ ಮೇಲೂ, ಲೋಕಸಭೆ ಮೇಲೂ ಪರಿಣಾಮ ಬೀರಲ್ಲ. ಹಿಂದೆ ತುಂಬ ಜನ ಸೋತಿಲ್ವಾ? ದೇವೇಗೌಡ್ರು, ವಾಜಪೇಯಿ ಸೋತಿದ್ದಾರೆ. ಇದೇ ಸಿದ್ದರಾಮಯ್ಯ ಸೋತಿಲ್ವಾ? ನನ್ನ ಮಗನೂ ಎರಡು ಸಲ ಸೋತಿದ್ದಾನೆ. ರಾಜಕೀಯದಲ್ಲಿ ಸೋಲು-ಗೆಲುವು ಸಹಜ ಎಂದು ತಿಳಿಸಿದರು. ಇದನ್ನೂ ಓದಿ: ಸೋಮಶೇಖರ್ ವಿರುದ್ಧ ಸ್ಪೀಕರ್‌ಗೆ ದೂರು: ದೊಡ್ಡನಗೌಡ ಪಾಟೀಲ್

    ಬೆಂಗಳೂರು ಶಿಕ್ಷಕರ ಚುನಾವಣೆಯಲ್ಲೂ ಆಡಳಿತ ಯಂತ್ರದ ದುರುಪಯೋಗ ಆಗಿತ್ತು. ಈಗಲೂ ರಾಜ್ಯಸಭೆಯಲ್ಲೂ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದ್ದಾರೆ. ಒಂದೊಂದು ಬಾರಿ ಏರಿಕೆ, ಇಳಿಕೆ ಆಗುತ್ತದೆ. ನಮ್ಮ ಕುಟುಂಬ ಸೋತಾಗ ಕುಗ್ಗಲ್ಲ, ಗೆದ್ದಾಗ ಹಿಗ್ಗಲ್ಲ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್‍ನವರಿಗೆ ಆತ್ಮನೇ ಇಲ್ಲ, ಆತ್ಮಸಾಕ್ಷಿ ಮತ ಎಲ್ಲಿ ಬರುತ್ತೆ?: ಸಿಎಂ

    ಸೋಮಶೇಖರ್ ವೀರಾವೇಶದ ಮಾತುಗಳನ್ನು ಹೇಳುತ್ತಿದ್ದರು. ನಮ್ಮ ಉದ್ದೇಶ ಸಕ್ಸಸ್ ಆಗಿದೆ. ಇದು ಬಿಜೆಪಿಗೆ ಶಾಕ್ ಕೊಡುವಂತದ್ದಲ್ಲ. ಬಿಜೆಪಿ ಶಾಸಕರು ವಿಪ್ ಉಲ್ಲಂಘನೆ ಮಾಡಿ ಏನು ಹೇಳಿದ್ರು? ಕುಮಾರಸ್ವಾಮಿ ಅವಕಾಶವಾದಿ ಅಲ್ವಾ ಎಂದು ಪ್ರಶ್ನೆ ಇಟ್ಟಿದ್ದಾರೆ. ಈಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋದರಲ್ವಾ? ಅವತ್ತು ಇದೇ ಕಾಂಗ್ರೆಸ್ ನಾಯಕರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್‌ – ಕಾಂಗ್ರೆಸ್‌ ಪರ ಎಸ್‌.ಟಿ.ಸೋಮಶೇಖರ್‌ ಮತ

  • ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

    ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮತ ಹಾಕಬಹುದಿತ್ತು: ಸೋಮಶೇಖರ್ ವಿರುದ್ಧ ಅಶೋಕ್ ಕಿಡಿ

    ಬೆಂಗಳೂರು: ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿಗೆ ವಾಪಸ್ಸಾದ್ರು. ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅಸಮಾಧಾನ ಹೊರಹಾಕಿದರು.

    ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರ ವಿರುದ್ಧ ಕಿಡಿಕಾರಿದ ಆರ್.ಅಶೋಕ್, ನಮ್ಮ ಮತದಾನ 47 ಬಿಜೆಪಿ ಅಭ್ಯರ್ಥಿಗೆ ವೋಟ್ ಹಾಕಲು ವಿಪ್ ಕೊಟ್ಟಿದ್ದೆವು. ಎಸ್.ಟಿ.ಸೋಮಶೇಖರ್ (S.T.Somashekar), ಶಿವರಾಮ್ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತಾಡಿದ್ರು. ಹೆಬ್ಬಾರ್ ಕೊನೆ ಕ್ಷಣದವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್‌ – ಕಾಂಗ್ರೆಸ್‌ ಪರ ಎಸ್‌.ಟಿ.ಸೋಮಶೇಖರ್‌ ಮತ

    ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಅಂತಾ ಗೊತ್ತಾಗಿದೆ. ಈ ರೀತಿ ಪದೇ ಪದೆ ಮೋಸ ಮಾಡೋದನ್ನ ಜನ ಸಹಿಸಲ್ಲ. ಸೋಮಶೇಖರ್ ಮಂತ್ರಿ ಮಾಡಿ, ಮೈಸೂರು ಇನ್ ಚಾರ್ಜ್ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

    ಸೋಮಶೇಖರ್ ನಡೆ ರಾಜಕೀಯ ಆತ್ಮಹತ್ಯೆ. ನಮ್ಮ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ಅವರು ಏನೆಲ್ಲಾ ಮಾಡಬಹುದು ಅನ್ನೋದು ತಿಳಿಸಿದ್ದಾರೆ. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದ್ರು. ದ್ರೋಹ ಬಗೆಯಲ್ಲ ಅಂತ ಹೇಳಿದ್ರು. ಸೋಮಶೇಖರ್, ಡಿಕೆಶಿ ಹಾಗೂ ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನ ಕ್ಷಮಿಸಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೆಡಿಎಸ್‍ನವರಿಗೆ ಆತ್ಮನೇ ಇಲ್ಲ, ಆತ್ಮಸಾಕ್ಷಿ ಮತ ಎಲ್ಲಿ ಬರುತ್ತೆ?: ಸಿಎಂ

    ಪಕ್ಷದಿಂದ ಕೈಬಿಡುವ ವಿಚಾರವಾಗಿ ಮಾತನಾಡಿ, ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದ್ರು. ಇವರು ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು. ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡ್ತೀವಿ. ಬಿಜೆಪಿ ಗೆಲ್ಲಲಿದೆ ಎಂದರು.

    ಸ್ಪರ್ಧೆ ಆಗಬೇಕು ಅನ್ನೋ ದೃಷ್ಟಿಯಿಂದ ಸ್ಪರ್ಧೆ ಆಗಿದೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇದೆ. ಇದು ಬಿಜೆಪಿ, ಜೆಡಿಎಸ್ ಸೋಲು ಅಂತ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋಮಶೇಖರ್ ವಿರುದ್ಧ ಸ್ಪೀಕರ್‌ಗೆ ದೂರು: ದೊಡ್ಡನಗೌಡ ಪಾಟೀಲ್