Tag: Rajugowda

  • ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ: ರಾಜುಗೌಡ ಹೊಸಬಾಂಬ್

    ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ: ರಾಜುಗೌಡ ಹೊಸಬಾಂಬ್

    – ನಾಗೇಂದ್ರ, ರಾಜಣ್ಣ ಆಯ್ತು, ನೆಕ್ಸ್ಟ್‌ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲ್ಯಾನ್- ಮಾಜಿ ಸಚಿವ

    ಯಾದಗಿರಿ: ಕೆ.ಎನ್.ರಾಜಣ್ಣ (K.N.Rajanna) ಅವರು ಪ್ರಭಾವಿ ನಾಯಕ. ಅವರ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ ಎಂದು ಮಾಜಿ ಸಚಿವ ರಾಜುಗೌಡ (Rajugowda) ಹೊಸ ಬಾಂಬ್ ಸಿಡಿಸಿದ್ದಾರೆ.

    ಸುರಪುರದಲ್ಲಿ ಮಾತನಾಡಿದ ಅವರು, ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲಾನ್ ಇದೆ. ನಾಗೇಂದ್ರ, ರಾಜಣ್ಣ ಆಯ್ತು ನೆಕ್ಸ್ಟ್ ಸತೀಶ್ ಜಾರಕಿಹೊಳಿ ಸರದಿ. ಓಪನ್ ಆಗಿಯೇ ಹೇಳ್ತೀನಿ. ನಮ್ಮ ಕಮ್ಯುನಿಟಿಯಲ್ಲಿ ನಾವು ಹುಟ್ಟತ್ತಲೇ ನಾಯಕರು. ನಮ್ಮಲ್ಲಿ ಒಬ್ಬರೇ ನಾಯಕರಾಗಬೇಕು ಅಂತೇನಿಲ್ಲ. ರಾಜಣ್ಣ ಮಂತ್ರಿ ಸ್ಥಾನದಿಂದ ಇಳಿದರು ಅಂದ್ರೆ ನಮ್ಮಲ್ಲೇ ಒಬ್ಬರಿಗೆ ಸಿಗುತ್ತೆ ಅಂತ ಪ್ಲ್ಯಾನ್ ಹಾಕ್ತೀವಿ. ಮಂತ್ರಿ ಸ್ಥಾನ ಕೊಡುವ ಆಸೆಯನ್ನ ಮೇಲಿನವರು ತೋರಿಸಿ ಬಿಡ್ತಾರೆ. ನಾನ್ ಮಂತ್ರಿ ಆಗ್ತೀನಿ, ಯಾಕ್ ಇದನ್ನ ಮಾಡೋಣ ಅಂತೀವಿ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರೋದಕ್ಕೆ ರಮೇಶ್ ಜಾರಕಿಹೊಳಿ ಮೇಲೂ ಆ ಕೆಲಸ ಆಯ್ತು. ನಾಗೇಂದ್ರನ ಮೇಲೂ ಆಯ್ತು.. ಇವತ್ತು ರಾಜಣ್ಣಂದು ಇದೆ. ನೆಕ್ಸ್ಟ್ ಸತೀಶ್ ಅಣ್ಣಂದೂ ಇದೆ. ಬೇಕಾದರೇ ನಾಳೆ ಸತೀಶ್ ಅಣ್ಣಂಗೂ ಈ ರೀತಿ ಆದಾಗ ಪ್ಲೇ ಮಾಡಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸ್ತಾರೆ ಎಚ್ಚರಿಕೆಯಿಂದ ಇರಬೇಕು: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್‌ನಲ್ಲಿರುವ 15 ಜನ ವಾಲ್ಮೀಕಿ ಶಾಸಕರು ರಾಜಣ್ಣನ ಪರ ಹೇಳಿಕೆ ಕೊಡ್ರಿ. ಅವಾಗ ಕಾಂಗ್ರೆಸ್ ಹೈಕಮಾಂಡ್ ಬಂದು ಯಥಾಸ್ಥಿತಿ ರಾಜಣ್ಣನಿಗೆ ಸಚಿವ ಸ್ಥಾನ ಕೊಡ್ತಾರೆ. ವಾಲ್ಮೀಕಿ ನಾಯಕರಿಗೆ ನೆಕ್ಸ್ಟ್ ನೀನೆ ಸಿಎಂ ಅಂತ ಕಿವಿಯಲ್ಲಿ ಹೋವಿಟ್ಟು ಹೇಳ್ತಾರೆ. ಆ ಆಸೆಗೆ ಬಿದ್ದು ಇವತ್ತು ಸಮಾಜವೇ ರಾಜಣ್ಣನ ಬಲಿ ಕೊಡುವ ಕೆಲಸ ಆಗ್ತಿದೆ. ರಾಜಣ್ಣನ ದೆಹಲಿಗೆ ಕರೆದುಕೊಂಡು ಹೋಗ್ತಾರೆ, ಸ್ವಲ್ಪ ದಿನ ಹೋಗಲಿ ಅಂತ ರಾಜಣ್ಣನ ಸಮಾಧಾನ ಮಾಡ್ತಾರೆ. ಅದಕ್ಕೇನಾದ್ರೂ ರಾಜಣ್ಣ ಸಮಾಧಾನವಾದರೆ, ಅವರ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ. ಸತೀಶಣ್ಣನ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ರಾಜಣ್ಣ ಪರ ಪ್ರತಿಭಟಿಸಬೇಕು. ಹಾಗೇನಾದರೂ ಮಾಡಿದರೆ ನಾವು ಮುಂದೆ ರಾಜ್ಯದಲ್ಲಿ ರಾಜಕೀಯ ಮಾಡಬಹುದು. ಇಲ್ಲದಿದ್ದರೆ ಈ ಸಮಾಜದವರಲ್ಲಿ ಒಗ್ಗಟ್ಟಿಲ್ಲ, ಇವರಲ್ಲಿ ಹೊಂದಾಣಿಕೆ ಇಲ್ಲ. ಇವರನ್ನ ಹೇಗೆ ಬೇಕಾದರೂ ಬಲಿ ಕಾ ಬಕ್ರಾ ಮಾಡಬಹುದು ಅಂತ ತೆಗೆದುಕೊಂಡು ಹೋಗ್ತಾರೆ ಎಂದು ಎಚ್ಚರಿಸಿದ್ದಾರೆ.

    ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ. ಹಿಂದೆ ಪ್ಲ್ಯಾನ್ ಮಾಡಿ ರಮೇಶ್ ಜಾರಕಿಹೊಳಿ ಅವರನ್ನ ಕೇಳಗೆ ಇಳಿಸಿದ್ರು. ಈಗ ರಾಜಣ್ಣ ಅವರಿಗೆ ಪ್ಲ್ಯಾನ್ ಮಾಡಿದ್ರು, ಆದ್ರೆ ಅವರು ಹನಿಟ್ರ್ಯಾಪ್ ನಿಂದ ಬಚಾವ್ ಆದ್ರು. ಅವರನ್ನ ಹೇಗೆ ಮುಗಿಸಬೇಕು ಅಂತ ಪ್ಲಾö್ಯನ್ ಮಾಡಿದ್ರು. ಯಾಕೆಂದರೆ ರಾಜಣ್ಣ ಅವರ ಕ್ಷೇತ್ರದಲ್ಲಿ ಪ್ರಭಾವಿ ನಾಯಕ. ಅವರ ಮಗನನ್ನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿಸಿದ್ರು.‌ ಮಹಾನಾಯಕನಿಗೆ ಯಾರು ಎದುರು ಆಗ್ತಾರೆ, ಎಲ್ಲರನ್ನೂ ಮುಗಿಸ್ತಾರೆ. ರಾಹುಲ್ ಗಾಂಧಿಗೆ ಕನ್ನಡ ಬರಲ್ಲ.. ಹೀಗಾಗಿ, ಅವರ ಸ್ಟೇಟ್ಮೆಂಟ್ ತಿರುಚಿ ಅವರಿಗೆ ಹೇಳಿದ್ದಾರೆ. ರಾಜಣ್ಣ ಅವರಿಗೆ ಯಾವ ಪಕ್ಷವೂ ಸಹ ಬೇಡ ಅಂತ ಹೇಳಲ್ಲ. ಮೂರ್ನಾಲ್ಕು ಕ್ಷೇತ್ರದಲ್ಲಿ ಅವರದ್ದು ಪ್ರಭಾವವಿದೆ. ರಾಜಣ್ಣ ಅವರು ಸಾಮಾನ್ಯ ನಾಯಕ ಅಲ್ಲ, ಪ್ರಭಾವಿ ನಾಯಕ. ಕೆಲವರು ಪಕ್ಷದಿಂದ ಮಹಾನಾಯಕ ಆಗಿದ್ದಾರೆ, ಆದ್ರೆ ರಾಜಣ್ಣ ಜನರಿಂದ ಮಹಾನಾಯಕರಾಗಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್‌

    ರಾಜಣ್ಣಗೆ ಪಕ್ಷ ಅವಶ್ಯಕತೆ ಇಲ್ಲ, ಪಕ್ಷಕ್ಕೆ ಅವರ ಅವಶ್ಯಕತೆಯಿದೆ. ರಾಜಣ್ಣ ಈ ಅನ್ಯಾಯದ ವಿರುದ್ಧ ಪ್ರತಿಭಟಿಸಿಲ್ಲ ಅಂದ್ರೆ ಅವರದ್ದು ಅಷ್ಟೇ ಅಲ್ಲ ಅವರ ಮಗನ ರಾಜಕೀಯ ಕೂಡ ಮುಗಿದು ಹೋಗುತ್ತದೆ. ಗಟ್ಟಿಯಾಗಿ ಹುಲಿ ತರಹ ಹೊರಗೆ ಬಂದು ಪ್ರತಿಭಟಿಸಿದ್ರು ಹೀರೊ ಆಗ್ತೀರಾ ಎಂದು ಮಾತನಾಡಿದ್ದಾರೆ.

  • ರಾಜ್ಯ ಬಿಜೆಪಿ ಐಸಿಯುನಲ್ಲಿದೆ, ಹೀಗೆ ಬಿಟ್ರೆ ಕೋಮಾಗೆ ಹೋಗುತ್ತೆ: ರಾಜುಗೌಡ

    ರಾಜ್ಯ ಬಿಜೆಪಿ ಐಸಿಯುನಲ್ಲಿದೆ, ಹೀಗೆ ಬಿಟ್ರೆ ಕೋಮಾಗೆ ಹೋಗುತ್ತೆ: ರಾಜುಗೌಡ

    ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ (BJP) ಐಸಿಯುನಲ್ಲಿದೆ. ಹೀಗೆ ಬಿಟ್ಟರೆ ಕೋಮಾ ಸ್ಥಿತಿ ತಲುಪುತ್ತದೆ ಎಂದು ಬಿಜೆಪಿ ನಾಯಕ ರಾಜುಗೌಡ (Rajugowda) ಹೇಳಿದ್ದಾರೆ.

    ದಾವಣಗೆರೆಯ ವಾಲ್ಮೀಕಿ ಮಠದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಮ್ಮಲ್ಲಿ ಬಣ ಇರೋದು ಸ್ಪಷ್ಟ, ನಾವು ಬಣ ಇಲ್ಲ ಎಂದು ಹೇಳೋಕೆ ಆಗೊಲ್ಲ. ಎಷ್ಟೋ ಮಹನೀಯರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಇದೇ ರೀತಿ ಕಿತ್ತಾಟ ಮುಂದುವರೆದರೆ ಪಕ್ಷ ಹೀನಾಯ ಸ್ಥಿತಿಗೆ ಹೋಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಸ್ಕೂಟರ್‌ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ – ಪತಿ, ಪತ್ನಿ ಸ್ಥಳದಲ್ಲೇ ಸಾವು

    ಹೈಕಮಾಂಡ್ ಮಧ್ಯಪ್ರವೇಶಿಸಿ ಆದಷ್ಟು ಬೇಗ ತಿಳಿಗೊಳಿಸಬೇಕು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ಯಾರು ಹೈಕಮಾಂಡ್ ಮುಂದೆ ದೊಡ್ಡವರಲ್ಲ. ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು. ಜೆಪಿ ನಡ್ಡಾ, ಅಮಿತ್‌ ಶಾ ಆದಷ್ಟು ಬೇಗ ಎಂಟ್ರಿಯಾಗಿ ಪರಿಸ್ಥಿತಿ ತಿಳಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಡಿಕೇರಿಯಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ

  • ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ನ್ನಡದ ಖ್ಯಾತ ನಟ ಸುದೀಪ್ (Sudeep) ಅಭಿಮಾನಿಗಳು (Fans) ವಾಲ್ಮೀಕಿ (Valmiki) ಜಾತ್ರೆಯಲ್ಲಿ (Jatre) ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ಸುರಪುರ ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಗೂ ಸುದೀಪ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಪದೇ ಪದೇ ಆಯೋಜಕರು ಸುದೀಪ್ ಅವರ ಹೆಸರನ್ನು ಹೇಳುತ್ತಿದ್ದರು. ಹಾಗಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎಂದಿದ್ದಾರೆ. ಸುದೀಪ್ ಅವರಿಗೆ ಆಹ್ವಾನವಿದ್ದರೆ ಯಾವುದೇ ಕಾರಣಕ್ಕೂ ಅವರು ತಪ್ಪಿಸುತ್ತಿರಲಿಲ್ಲ ಎಂದು ನಟನ ಬೆನ್ನಿಗೆ ನಿಂತಿದ್ದಾರೆ.

    ತಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು. ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು.

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿಎಂ ಬದಲಾವಣೆ ಅನ್ನೋದು ಅಂಟು ರೋಗ: ರಾಜೂಗೌಡ

    ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿಎಂ ಬದಲಾವಣೆ ಅನ್ನೋದು ಅಂಟು ರೋಗ: ರಾಜೂಗೌಡ

    ಯಾದಗಿರಿ: ಬಿಜೆಪಿ ಅಧಿಕಾರಕ್ಕೆ ಬಂದಾಗ ಸಿಎಂ ಬದಲಾವಣೆ ಎನ್ನುವುದು ಒಂದು ಅಂಟು ರೋಗವಾಗಿದೆ. ನನಗೂ ಸಿಎಂ ಆಗುವ ಆಸೆಯಿದೆ ಎಂದು ಬಿಜೆಪಿ ಶಾಸಕ ರಾಜೂಗೌಡ ಹೇಳಿದ್ದಾರೆ.

    ಜಿಲ್ಲೆಯ ಕಕ್ಕೆರಿಯಲ್ಲಿ ಮಾತನಾಡಿದ ಅವರು, ನಾನು ಸಮರ್ಥ ಅಂತ ಜನರಿಗೆ ಗೊತ್ತಾದಾಗ ಜನರು ನನ್ನ ಸಿಎಂ ಮಾಡ್ತಾರೆ. ಅದಕ್ಕೆ ಅನುಭವ, ವಯಸ್ಸು ಎಲ್ಲ ಬೇಕು. ಆದರೆ ನನಗೆ ದುರಾಸೆ ಇಲ್ಲ. ನಮ್ಮ ಸಿಎಂ ಬಸವರಾಜ್ ಬೊಮ್ಮಾಯಿಯವರೇ ಎನ್ನುವ ಮೂಲಕ ಸ್ವಪಕ್ಷದವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಈ ಪರಿಸ್ಥಿತಿ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ: ಈಶ್ವರ್‌ ಖಂಡ್ರೆ

    ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಹತ್ತಿರದಿಂದ ಬಲ್ಲೆ. ತಮ್ಮ ಕ್ಷೇತ್ರಕ್ಕೆ ಹೋದಾಗಲೆಲ್ಲ ಬಹಳ ಪ್ರೀತಿ, ಭಾವನಾತ್ಮಕವಾಗಿ ಮಾತನಾಡುತ್ತಾರೆ. ಅವರು ಮಾತನಾಡಿರುವುದಕ್ಕೂ ಸಿಎಂ ಬದಲಾವಣೆ ವದಂತಿಗೂ ಸಂಬಂಧವಿಲ್ಲ. ಸಿಎಂ ಬದಲಾವಣೆ ಅಂತ ನಮ್ಮ ಪಕ್ಷದ ಕೆಲವರು ಮತ್ತು ವಿರೋಧ ಪಕ್ಷದವರು ಗುಸುಗುಸು ಮಾತನಾಡುತ್ತಿದ್ದಾರೆ. ಸಿಎಂ ಬದಲಾವಣೆ ಇಲ್ಲ ಅಂತ ಸ್ವತಃ ಅಮಿತ್ ಶಾ ಅವರೇ ಹೇಳಿದ್ದಾರೆ ಎಂದಿದ್ದಾರೆ.

    ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವರಾಗುತ್ತಾರೆ ಎಂಬ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಮಾತನಾಡುವ ಸಂದರ್ಭವೇ ಅಲ್ಲ. ವೇದಿಕೆ ಮೇಲೆ ಯಾರನ್ನೋ ಖುಷಿಪಡಿಸಲು ಹೋಗಿ ಏನೋ ಅರ್ಥ ಆಗುತ್ತದೆ. ನಿರಾಣಿಯವರು ಸಿಎಂ ಸ್ಥಾನದ ಪ್ರಮುಖ ಆಕಾಂಕ್ಷಿಗಳಿದ್ದರು ನಿಜ. ಆದರೆ ಅವರು ಇಂತಹ ಹೇಳಿಕೆಗಳನ್ನು ನೀಡಬಾರದು. ಈಗಾಗಲೇ ನಮ್ಮ ಪಕ್ಷದ ಹೈಕಮಾಂಡ್ ಅನಾವಶ್ಯಕ ಮಾತುಗಳನ್ನು ಆಡದಂತೆ ಖಡಕ್‌ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಶೋಭಾ ಕರಂದ್ಲಾಜೆ

  • ಭರ್ಜರಿ ಕಬಡ್ಡಿ ಆಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ

    ಭರ್ಜರಿ ಕಬಡ್ಡಿ ಆಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ

    ಯಾದಗಿರಿ: ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಮತ್ತು ತಮ್ಮ ತಾಯಿ ನಿಧನದಿಂದ ಇಷ್ಟು ದಿನ ಮಂಕಾಗಿದ್ದ ಸುರಪುರ ಬಿಜೆಪಿ ಶಾಸಕ ರಾಜುಗೌಡ, ತಮ್ಮ ನೋವನೆಲ್ಲಾ ಮರೆತು ಭರ್ಜರಿ ಕಬಡ್ಡಿಯಾಡಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೇಟೆ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ಮಂಡಳಿ ಹಮ್ಮಿಕೊಂಡಿದ್ದ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಗಳ ಉದ್ಘಾಟನೆಗೆ ಶಾಸಕ ರಾಜುಗೌಡ ತೆರಳಿದ್ದರು.

    ಈ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜುಗೌಡ ಕೆಲ ಹೊತ್ತು ಕಬಡ್ಡಿ ಆಡಿದ್ದಾರೆ. ಪ್ರೊಫೆಷನಲ್ ಕಬಡ್ಡಿ ಆಟಗಾರರಂತೆ ಡೈ ಹೊಡೆದು ಕಬಡ್ಡಿಯಾಡಿದ ಶಾಸಕ ರಾಜುಗೌಡ ತಮ್ಮ ಅಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡರು.

    ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನ ಗೆದ್ದಿದ್ದಾರೆ. ಈ ಹಿಂದೆಯೂ ರಾಜುಗೌಡ ಮಧ್ಯರಾತ್ರಿ ಯುವಕರೊಂದಿಗೆ ಕಬ್ಬಡಿ ಆಟವಾಡಿದ್ದರು.

  • ಶಾಸಕ ರಾಜು ಗೌಡಗೆ ಮಾತೃ ವಿಯೋಗ

    ಶಾಸಕ ರಾಜು ಗೌಡಗೆ ಮಾತೃ ವಿಯೋಗ

    ಯಾದಗಿರಿ: ಸುರಪುರ ಬಿಜೆಪಿ ಶಾಸಕ, ಮಾಜಿ ಸಚಿವ ರಾಜುಗೌಡ ಅವರ ತಾಯಿ ನಿಧನರಾಗಿದ್ದಾರೆ.

    ಬೆಂಗಳೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ತಿಮ್ಮಮ್ಮ ಶಂಬನಗೌಡ ನಾಯಕ್ ಕೊನೆಯುಸಿರೆಳೆದಿದ್ದಾರೆ. ಪಾಶ್ರ್ವವಾಯುಗೆ ತುತ್ತಾಗಿದ್ದ ತಿಮ್ಮಮ್ಮ ನಾಯಕ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಇತ್ತೀಚೆಗೆ ತಿಮ್ಮಮ್ಮ ಬಿದ್ದು ಗಾಯಗೊಂಡಿದ್ದರು. ಅಲ್ಲದೆ ತಿಮ್ಮಮ್ಮ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಒಟ್ಟಿನಲ್ಲಿ ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತಿಮ್ಮಮ್ಮ ಕೊನೆಯುಸಿರೆಳೆದಿದ್ದಾರೆ.

    ತಿಮ್ಮಮ್ಮ ಪಾರ್ಥಿವ ಶರೀರವನ್ನು ಸುರಪುರಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದ್ದು, ಸ್ವಗ್ರಾಮ ಕೊಡೆಕಲ್ ನಲ್ಲಿ ನಾಳೆ(ಮಂಗಳವಾರ) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯುವುದಾಗಿ ಕುಟುಂಬ ಮೂಲಗಳ ಮಾಹಿತಿ ನೀಡಿವೆ.

  • ಬಿಜೆಪಿ ಬಿಡುವ ಬಗ್ಗೆ ಶಾಸಕ ರಾಜುಗೌಡ ಸ್ಪಷ್ಟನೆ

    ಬಿಜೆಪಿ ಬಿಡುವ ಬಗ್ಗೆ ಶಾಸಕ ರಾಜುಗೌಡ ಸ್ಪಷ್ಟನೆ

    ಯಾದಗಿರಿ: ಸುರಪುರ ಶಾಸಕ ರಾಜುಗೌಡ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಇದೀಗ ಅವರೇ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ಬಿಜೆಪಿ ತೊರೆಯುವ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೆ ಇಲ್ಲ. ನಾನು ಎಂದಿಗೂ ಬಿಜೆಪಿ ಪಕ್ಷದಲ್ಲೇ ಇರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ನಾನು ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಇದ್ದೇನೆ. ತಾಯಿ ಜೊತೆ ಆಸ್ಪತ್ರೆಯಲ್ಲಿ ಇರುವ ಕಾರಣ ನನ್ನ ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದೇನೆ. ಇದಕ್ಕೆ ಆಪರೇಷನ್ ಹಸ್ತ ಎಂದು ಹೇಳುವುದು ಬೇಡ ಎಂದು ತಿಳಿಸಿದ್ದಾರೆ.

    ನಾನು ಯಾವತ್ತೂ ಬಿಜೆಪಿಯಲ್ಲಿ ಇರುತ್ತೇನೆ. ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇಲ್ಲ. ನಮ್ಮ ಕ್ಷೇತ್ರದ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ತಾಯಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಸದ್ಯ ಶಾಸಕರು ಬೆಂಗಳೂರಿನಲ್ಲಿದ್ದಾರೆ.

  • ಮೇ 23ರ ನಂತ್ರ ಕಾಂಗ್ರೆಸ್, ಜೆಡಿಎಸ್ ವಿಚ್ಛೇದನ ತೆಗೆದುಕೊಳ್ಳುತ್ತೆ – ರಾಜುಗೌಡ

    ಮೇ 23ರ ನಂತ್ರ ಕಾಂಗ್ರೆಸ್, ಜೆಡಿಎಸ್ ವಿಚ್ಛೇದನ ತೆಗೆದುಕೊಳ್ಳುತ್ತೆ – ರಾಜುಗೌಡ

    ದಾವಣಗೆರೆ: ಕಾಂಗ್ರೆಸ್- ಜೆಡಿಎಸ್ ನವರ ಒಪ್ಪಂದ ಇರುವುದು ಮೇ 23 ರವರೆಗೆ ಮಾತ್ರ. ನಂತರ ಅವರೇ ವಿಚ್ಛೇದನ ತೆಗೆದುಕೊಳುತ್ತಾರೆ ಎಂದು ವೈತ್ರಿ ಸರ್ಕಾರದ ವಿರುದ್ಧ ಮಾಜಿ ಸಚಿವ, ಶಾಸಕ ರಾಜುಗೌಡ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪಾ ಎಂದರೆ, ಜನರ ಮಧ್ಯೆ ಇದ್ದೇನೆ ಎಂದು ಟ್ರೋಲ್ ಆಗಿತ್ತು. ಈಗ ನಿಖಿಲ್ ಎಲ್ಲಿದ್ದೀಯಪ್ಪಾ ಅಂದರೆ ಮಂಡ್ಯ ಜನ ಸೋಲಿಸುತ್ತಾರೆಂದು ಬೆಂಗಳೂರು ಮನೆಯಲ್ಲಿದ್ದೀನಪ್ಪಾ ಎಂದು ಟ್ರೋಲ್ ಆಗುತ್ತಿದೆ. ಮಂಡ್ಯದಲ್ಲಿ ನಿಖಿಲ್ ಸೋಲುವುದು ಪಕ್ಕಾ ಆಗಿದೆ. ನಿಖಿಲ್ ಜೊತೆ ದೇವೇಗೌಡ, ಪ್ರಜ್ವಲ್ ರೇವಣ್ಣ ಕೂಡ ಸೋಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಮುಖ್ಯಮಂತ್ರಿಗಳು ನಮಗೆ ಗೋಡೆಯ ಮೇಲಿನ ಸುಣ್ಣವನ್ನು ತೋರಿಸಿ ಹಾಲು ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ರಾಜ್ಯದ ಸಿಎಂ ಆಗಿ ಮಾತನಾಡುತ್ತಾ ಇದ್ದಾರೋ ಅಥವಾ ನಿಖಿಲ್ ತಂದೆಯಾಗಿ ಮಾತನಾಡುತ್ತಾ ಇದ್ದಾರಾ ಎಂದು ಪ್ರಶ್ನಿಸಿದರು.

    ಇದೇ ವೇಳೆ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಇರುವುದಿಲ್ಲ ಎಂಬ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜುಗೌಡ ಅದು ಸತ್ಯ. ಯಡಿಯೂರಪ್ಪ ಸಿಎಂ ಆದ ಮೇಲೆ ಎರಡು ಹುದ್ದೆಯಲ್ಲಿ ಇರುವುದು ಕಷ್ಟ. ಹಾಗಾಗಿ ಶಾಮನೂರು ಶಿವಶಂಕರಪ್ಪ ಈ ರೀತಿ ಹೇಳಿದ್ದಾರೆ ಎಂದರು.

    ಈ ಬಾರಿ ನಾವು 20, 22 ಸ್ಥಾನ ಗೆಲ್ಲುತ್ತೇವೆ. ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುವುದು ಸತ್ಯ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ. ರೋಗಿಗಳು ಜಾಸ್ತಿಯಾಗಿದ್ದಾರೆ, ಡಾಕ್ಟರ್ ಕಡಿಮೆಯಾಗಿದ್ದಾರೆ. ಹೀಗಾಗಿ ನಾವು ಆಸ್ಪತ್ರೆ ಬಂದ್ ಮಾಡಿದ್ದೇವೆ ಎಂದು ತಮಾಷೆಯಾಡಿದರು.

    ಸರ್ಕಾರದ ಒಪ್ಪಂದ ಮೇ 23ರ ವರೆಗೆ ಮಾತ್ರ. ಆಮೇಲೆ ಅವರು ವಿಚ್ಛೇದನ ತೆಗೆದುಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಬಂದ ಮೇಲೆ ಮಾತಾಡುತ್ತೇನೆ. ಬಳ್ಳಾರಿ ಶಾಸಕರು ಸೇರಿದಂತೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ ಎಂದು ತಿಳಿಸಿದ್ದಾರೆ.

  • ಹೆಚ್‍ಡಿಡಿಯಂತೆ ತಂದೆ, ಸೋನಿಯಾ ರೀತಿ ತಾಯಿ, ಮೋದಿಯಂತಹ ನಾಯಕ ಇರಬೇಕು: ರಾಜುಗೌಡ

    ಹೆಚ್‍ಡಿಡಿಯಂತೆ ತಂದೆ, ಸೋನಿಯಾ ರೀತಿ ತಾಯಿ, ಮೋದಿಯಂತಹ ನಾಯಕ ಇರಬೇಕು: ರಾಜುಗೌಡ

    ಯಾದಗಿರಿ: ತಂದೆ ಇದ್ದರೆ ಮಾಜಿ ಪ್ರಧಾನಿ ದೇವೇಗೌಡ ರೀತಿ ಇರಬೇಕು, ತಾಯಿ ಇದ್ದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರೀತಿ ಇರಬೇಕು ಹಾಗೆಯೇ ನಾಯಕ ಇದ್ದರೆ ಪ್ರಧಾನಿ ನರೇಂದ್ರ ಮೋದಿ ರೀತಿ ಇರಬೇಕು ಅಂತ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.

    ಜಿಲ್ಲೆಯ ಶಹಪುರದ ಸಗರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ದೇವೇಗೌಡರ ರೀತಿ ತಂದೆ ಇರಬೇಕು, ಯಾಕೆಂದರೆ ಅವರು ತಮ್ಮ ಪುತ್ರರರು, ಸೊಸೆ, ಮೊಮ್ಮಕ್ಕಳು ಹಾಗೂ ಸಂಬಂಧಿಕರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದಾರೆ. ಆದ್ರೆ ತಮ್ಮ ಪತ್ನಿ ಚನ್ನಮ್ಮ ಅವರಿಗೆ ಯಾವ ಸ್ಥಾನಮಾನ ನೀಡಿಲ್ಲ, ತಮ್ಮ ಧರ್ಮಪತ್ನಿಯ ಮೇಲೆ ದೇವೇಗೌಡರಿಗೆ ಯಾಕೆ ಅಷ್ಟು ಸಿಟ್ಟು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಬಳಿಕ ತಾಯಿ ಇದ್ದರೆ ಸೋನಿಯಾ ಗಾಂಧಿ ರೀತಿ ಇರಬೇಕು. ಯಾಕೆಂದರೆ ತಮ್ಮ ಮಗ ದಡ್ಡ ಎಂದು ಗೊತ್ತಿದ್ದರೂ ಅವರು ಅವನನ್ನ ಪ್ರಧಾನಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

    ಸೋನಿಯಾ ಗಾಂಧಿ ಮತ್ತು ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಲೇವಡಿ ಮಾಡಿದ ರಾಜುಗೌಡ ಅವರು, ಸೋನಿಯಾ ಗಾಂಧಿ ಹಾಗೂ ದೇವೇಗೌಡ ಅವರಿಗೆ ತಮ್ಮ ಕುಟುಂಬದ ಅಭಿವೃದ್ಧಿಯೇ ಮುಖ್ಯವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ದಡ್ಡ. 5ನೇ ತರಗತಿ ಮೂರು ಬಾರಿ ಪರೀಕ್ಷೆ ಬರೆದರೂ ಫೇಲಾಗುತ್ತಾನೆ. ಇಂತಹ ದಡ್ಡನನ್ನು ಪ್ರಧಾನಮಂತ್ರಿ ಮಾಡಲು ಸೋನಿಯಾ ಗಾಂಧಿ ಮುಂದಾಗಿದ್ದಾರೆ ಎಂದು ಮಾತಿನ ಚಾಟಿ ಬಿಸಿದರು.

    ಬರೀ ಕುಟುಂಬ ರಾಜಕಾರಣ ಮಾಡುವ ನಾಯಕರ ಮಧ್ಯೆ ಜನರಿಗಾಗಿ, ಸೈನಿಕರಿಗಾಗಿ ಕೆಲಸ ಮಾಡಲು ನರೇಂದ್ರ ಮೋದಿಯಂತಹ ನಾಯಕ ಬೇಕು. ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ಹಾಕಿ ಮೋದಿಯನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿಕೊಂಡರು.

    https://www.youtube.com/watch?v=6uai3LL2pBk