Tag: raju kannada medium

  • ಬಿಟೌನ್‍ಗೆ ಪಯಣ ಬೆಳೆಸಿದ ರಾಜು ಕನ್ನಡ ಮೀಡಿಯಂ

    ಬಿಟೌನ್‍ಗೆ ಪಯಣ ಬೆಳೆಸಿದ ರಾಜು ಕನ್ನಡ ಮೀಡಿಯಂ

    ಬೆಂಗಳೂರು: ಕನ್ನಡ ಕಂಪಿನ ಅಚ್ಚಕನ್ನಡದ ‘ರಾಜು ಕನ್ನಡ ಮೀಡಿಯಂ’ ಸಿನಿಮಾ ಈಗ ಬಾಲಿವುಡ್ ಬೆಳ್ಳಿಪರದೆಗೆ ರಿಮೇಕ್ ಆಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಹಿಂದಿ ವರ್ಷನ್‍ನಲ್ಲಿ ಬಿಟೌನ್ ದಂಗಲ್ ಸ್ಟಾರ್ ಅಮೀರ್ ಖಾನ್ ಬಣ್ಣಹಚ್ಚೋ ಸಾಧ್ಯತೆಗಳಿವೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.

    ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್‍ನಲ್ಲಿ ಸಿನಿಮಾ ಮಾಡಿದ್ರೆ ಹಾಕಿದ ಬಂಡವಾಳ ವಾಪಸ್ ಬರಲ್ಲ ಎಂಬ ಮಾತುಗಳಿಗೆ ಕನ್ನಡದ ರಾಜು ಉತ್ತರ ಕೊಟ್ಟಿದ್ದಾನೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡದ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಬರೆಯುತ್ತಿವೆ. ದಾಖಲೆ ಬರೆಯುವುದರ ಜೊತೆಗೆ ಪರಭಾಷೆಯ ಫಿಲ್ಮ್ ಮೇಕರ್ಸ್ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತಿವೆ.

    ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಕನ್ನಡಿಗರನ್ನು ಮಾತ್ರವಲ್ಲ ತೆಲುಗು, ತಮಿಳು ಮೂವಿ ಮೇಕರ್ಸ್ ಮೆಚ್ಚುವಂತೆ ಮೂಡಿಬಂದಿತ್ತು. ಶುಕ್ರವಾರ ಭರ್ಜರಿ ಓಪನಿಂಗ್ ಪಡೆದುಕೊಂಡ ನರೇಶ್ ಸಾರಥ್ಯದ ರಾಜು ಕನ್ನಡ ಮೀಡಿಯಂ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ರಾಜು ಕಥೆ ಸಕ್ಸಸ್ ಆಯ್ತು ಅನ್ನೋ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಬಿಟೌನ್‍ನ ಅಮೀರ್ ಖಾನ್ ನಿರ್ಮಾಣ ಸಂಸ್ಥೆಯ ಸದಸ್ಯರು ರಾಜು ಕನ್ನಡ ಮೀಡಿಯಂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

    ಈಗಾಗಲೇ ಅಮೀರ್ ಖಾನ್ ಚಿತ್ರ ಸಂಸ್ಥೆ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ ಎನ್ನಲಾಗಿದೆ. ಅಮೀರ್ ಆಪ್ತ ಸಲಹೆಗಾರ ವರುಣ್ ಓಕೆ ಮಾಡಿದ್ರೆ ರಾಜು ಬಾಲಿವುಡ್‍ಗೆ ಹಾರೋದು ಕನ್ಫರ್ಮ್ ಆಗಲಿದೆ. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಮಾಡಿರೋ ಪಾತ್ರವನ್ನ ಅಮೀರ್ ಖಾನ್ ಮಾಡ್ತಾರೆ ಅನ್ನೋ ಸುಳಿವು ಕೂಡ ಸಿಕ್ಕಿದೆ.

  • ಕನ್ನಡಿಗರನ್ನು ನಗಿಸಲು ರಾಜು ಬರುವ ಡೇಟ್ ಫಿಕ್ಸ್

    ಕನ್ನಡಿಗರನ್ನು ನಗಿಸಲು ರಾಜು ಬರುವ ಡೇಟ್ ಫಿಕ್ಸ್

    ಬೆಂಗಳೂರು: ಫಸ್ಟ್ ಲುಕ್, ಟೀಸರ್, ಟ್ರೇಲರ್, ಸಾಂಗ ಹೀಗೆ ಚಿತ್ರ ಶುರುವಿನಿಂದಲೂ ಸುದ್ದಿ ಮಾಡ್ತಾನೆ ಬಂದಿತ್ತು ‘ರಾಜು ಕನ್ನಡ ಮಿಡಿಯಂ’. ಆದ್ರೆ ಅದ್ಯಾಕೋ ಗೊತ್ತಿಲ್ಲ ಚಿತ್ರ ತಂಡ ಸ್ಪಲ್ಪ ದಿನಗಳಿಂದ ಗಪ್-ಚುಪ್ ಆಗಿತ್ತು. ಆದರೆ ಈಗ ಕನ್ನಡಿಗರನ್ನು ನಗಿಸಲು ರಾಜು ಬರುವ ಡೇಟ್ ಫಿಕ್ಸ್ ಆಗಿದೆ.

    ಈ ತಿಂಗಳ 19ನೇ ದಿನಾಂಕದಂದು ‘ರಾಜು ಕನ್ನಡ ಮಿಡಿಯಂ’ ಕರುನಾಡ ಬೆಳ್ಳಿತೆರೆಯಲ್ಲಿ ಮನೋರಂಜನೆಯ ಮೋಜನ್ನು ಪ್ರದರ್ಶಿಸಲು ಸಿದ್ಧವಾಗಿದ್ದಾನೆ. ರಾಜು ಕನ್ನಡ ಮಿಡಿಯಂ ರೋಮ್ಯಾಂಟಿಕ್ ಕಾಮಿಡಿ ಮಿಶ್ರಣವುಳ್ಳ ಸಿನಿಮಾ. ಕಿರಣ್ ರವಿಂದ್ರನಾಥ್ ಸಂಗೀತ ಸಂಯೋಜನೆಯ ಹಾಡುಗಳು ಈಗಾಲೇ ಕೇಳುಗರನ್ನ ತಲುಪಿವೆ. ಗುರುನಂದನ್‍ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಹಾಗೂ ಅವಂತಿಕಾ ಶೆಟ್ಟಿ ಕಂಗೊಳಿಸಿದ್ದಾರೆ. ಅದ್ರಲ್ಲೂ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ರಿಲೀಸ್‍ಗೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾದ ನಂತರ ನರೇಶ್ ಕುಮಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ‘ಶಿವಲಿಂಗ’ದಂತಹ ಸೂಪರ್ ಡೂಪರ್ ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಎ.ಸುರೇಶ್ ಈ ಚಿತ್ರದ ವಾರಸ್ದಾರ. ಈ ಚಿತ್ರ 2017ರಲ್ಲಿಯೇ ತೆರೆಕಾಣಬೇಕಿತ್ತು. ಆದ್ರೆ ಕಾರಣಂತರಗಳಿಂದ ಈ ವರ್ಷದ ಜನವರಿ 19ಕ್ಕೆ ರಾಜ್ಯಾದ್ಯಂತ ಹವಾ ಎಬ್ಬಿಸಲಿದೆ.

  • `ರಾಜು ಕನ್ನಡ ಮೀಡಿಯಂ’ ಸಿನಿಮಾ ರಿಲೀಸ್ ಗೆ ಮತ್ತೆ ಎದುರಾಯ್ತು ವಿಘ್ನ

    `ರಾಜು ಕನ್ನಡ ಮೀಡಿಯಂ’ ಸಿನಿಮಾ ರಿಲೀಸ್ ಗೆ ಮತ್ತೆ ಎದುರಾಯ್ತು ವಿಘ್ನ

    ಬೆಂಗಳೂರು: ಚಂದನವನದಲ್ಲಿ ಟ್ರೇಲರ್ ನಿಂದ ಸಖತ್ ಸದ್ದು ಮಾಡುತ್ತಿರುವ `ರಾಜು ಕನ್ನಡ ಮೀಡಿಯಂ’ ಸಿನಿಮಾ ತೆರೆಗೆ ಬರಲು ಮತ್ತೊಂದು ಕಂಟಕ ಎದುರಾಗಿದೆ. ಸಿನಿಮಾ ರಿಲೀಸ್ ಬಿಡುಗಡೆಗೆ ತಡೆಯಾಜ್ಞೆ ಕೋರಿ ನಿರ್ಮಾಪಕ ಡಾ.ಎನ್.ಲಕ್ಷ್ಮೀಪತಿ ಬಾಬು ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಸಿನಿಮಾದ ನಿರ್ಮಾಣದ ಸಮಯದಲ್ಲಿ ನಿರ್ಮಾಪಕರಾದ ಸುರೇಶ್ ಮತ್ತು ಲಕ್ಷ್ಮೀಪತಿ ಬಾಬು ಇಬ್ಬರು ಒಪ್ಪಂದದ ಮೇರೆಗೆ ಸುರೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತರಲು ಯೋಚಿಸಿದ್ದರು. ಸುರೇಶ್ ಬ್ಯಾನರ್ ಅಡಿಯಲ್ಲಿ ಇಬ್ಬರು ನಿರ್ಮಾಪಕರು 60:40 ಅನುಪಾತದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ.

    ಸದ್ಯ ಸುರೇಶ್ ಅವರು ನನ್ನಿಂದ ಶೇ.60ರಷ್ಟು ಬಂಡವಾಳವನ್ನು ಪಡೆದುಕೊಂಡು, ಸಿನಿಮಾವನ್ನು `ಸುರೇಶ್ ಆರ್ಟ್ಸ್’ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ ಎಂದು ಲಕ್ಷ್ಮೀಪತಿ ಬಾಬು ಆರೋಪಿಸುತ್ತಿದ್ದಾರೆ. ಇತ್ತ ಸುರೇಶ್ ಇಂದು ಕೋರ್ಟ್ ರಜೆಯಿದ್ದು, ನಾಳೆ ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕ ನಟನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್, ಚಿಕ್ಕಣ್ಣ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ.

     

  • ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

    ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

    ಬೆಂಗಳೂರು: ಫಸ್ಟ್ ರ‍್ಯಾಂಕ್ ಖ್ಯಾತಿಯ ಗುರುನಂದನ್ ಅಭಿನಯದ `ರಾಜು ಕನ್ನಡ ಮೀಡಿಯಂ’ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

    ಕನ್ನಡ ಮೀಡಿಯಂ ನಲ್ಲಿ ಕಲಿತಿರುವ ಹುಡುಗ ರಾಜಧಾನಿಗೆ ಬಂದು ಹೇಗೆ ಜೀವನ ನಡೆಸುವುದರ ಜೊತೆಗೆ ಕನ್ನಡದ ಕಂಪನ್ನು ಹೇಗೆ ಪಸರಿಸುತ್ತಾನೆ ಎಂಬುದೇ ಕಥೆಯ ಜೀವಾಳವಾಗಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದಾಗಿನಿಂದಲೂ ಸ್ಯಾಂಡಲ್‍ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

    ಈ ಹಿಂದೆ ಗುರುನಂದನ್ ನಟನೆಯ `ಫಸ್ಟ್ ರ‍್ಯಾಂಕ್ ರಾಜು’ ಭರ್ಜರಿ ಯಶಸ್ಸನ್ನು ಕಂಡಿತ್ತು. ಕನ್ನಡ ಮೀಡಿಯಂ ರಾಜು ಮೊದಲ ಸಿನಿಮಾದ ಮುಂದುವೆರಿದ ಭಾಗವೇ ಎಂದು ಹೇಳಲಾಗಿತ್ತು, ಆದರೆ ಇದು ಸಂಪೂರ್ಣ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಗುರು ಅವರ ಕನ್ನಡದ ಬಗೆಗಿನ ಒಲವು, ಸಿನಿಮಾದಲ್ಲಿ ಬರುವ ಕಾಮಿಡಿ ದೃಶ್ಯಗಳು ಎಲ್ಲರನ್ನು ನಗಿಸುವುದು ಪಕ್ಕಾ ಆಗಿದೆ.

    ಚಿಕ್ಕಣ್ಣ, ಕುರಿ ಪ್ರತಾಪ್ ನಗಿಸಲು ರಾಜುವಿಗೆ ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ.

  • ಕಿಚ್ಚ ಬರ್ತ್ ಡೇಗೆ ಸ್ಪೆಷಲ್ ಟೀಸರ್ ರಿಲೀಸ್!

    ಕಿಚ್ಚ ಬರ್ತ್ ಡೇಗೆ ಸ್ಪೆಷಲ್ ಟೀಸರ್ ರಿಲೀಸ್!

    ಬೆಂಗಳೂರು: ನಾಳೆ 43ನೇ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ರಾಜು ಕನ್ನಡ ಮೀಡಿಯಂ ತಂಡ ಭರ್ಜರಿಯಾಗಿ ವಿಷ್ ಮಾಡಿದೆ.

    ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಾಜು ಕನ್ನಡ ಮೀಡಿಯಂ ತಂಡ ಕಿಚ್ಚ ಸುದೀಪ್ ಗೆ ವಿಷ್ ಮಾಡಿದ್ದು ಸುದೀಪ್ ಟೀಸರ್ ವಿಡಿಯೋ ಅಭಿಮಾನಿಗಳಲ್ಲಿ ಕಿಚ್ಚು ಮೂಡಿಸಿದೆ. ರಾಜು ಕನ್ನಡ ಮೀಡಿಯಂ ಟೀಸರ್ ನಲ್ಲಿ ಸುದೀಪ್ ನೋಡಿದ ಅಭಿಮಾನಿಗಳು ಕಿಚ್ಚನ ವಿಶೇಷ ಗೆಟಪ್ ನೋಡಿ ಸಂಭ್ರಮಿಸುತ್ತಿದ್ದಾರೆ.

    ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಿಚ್ಚನ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.

  • ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕರಿಂದ ಲೈಂಗಿಕ ಕಿರುಕುಳ ಆರೋಪ – ನಟಿ ಅವಂತಿಕಾ ಶೆಟ್ಟಿ ಕಣ್ಣೀರು

    ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕರಿಂದ ಲೈಂಗಿಕ ಕಿರುಕುಳ ಆರೋಪ – ನಟಿ ಅವಂತಿಕಾ ಶೆಟ್ಟಿ ಕಣ್ಣೀರು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ರಂಗಿತರಂಗ ಫೇಮ್ ಚಿತ್ರನಟಿ ಅವಂತಿಕಾ ಶೆಟ್ಟಿ ಸ್ಯಾಂಡಲ್‍ವುಡ್ ನಿರ್ಮಾಪಕ ಸುರೇಶ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಮೂಲಕ ಕಣ್ಣೀರಿಟ್ಟು ತನಗಾದ ದೌರ್ಜನ್ಯವನ್ನ ಅವಂತಿಕಾ ಶೆಟ್ಟಿ ಹೊರಹಾಕಿದ್ದಾರೆ.

    ರಂಗಿತರಂಗ, ಕಲ್ಪನಾ-2 ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರೋ ಅವಂತಿಕಾ ಶೆಟ್ಟಿ ಚಿತ್ರೀಕರಣಕ್ಕೆ ಸರಿಯಾಗಿ ಬರ್ತಿಲ್ಲ ಎಂಬ ಕಾರಣಕ್ಕೆ ರಾಜು ಕನ್ನಡ ಮೀಡಿಯಂ ಚಿತ್ರದಿಂದ ಹೊರಬಿದ್ದಿದ್ದರು. ಸಿನಿಮಾದಿಂದ ಹೊರಬಿದ್ದ ಬೆನ್ನಲ್ಲೇ ಚಿತ್ರ ನಿರ್ಮಾಪಕ ಸುರೇಶ್ ಹಾಗೂ ಲೈಟ್‍ಬಾಯ್ಸ್ ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲೈಟ್ ಬಾಯ್ ಮೈ ಕೈ ಮುಟ್ಟಿ ಮಾತನಾಡಿಸಿದ್ರು. ಇದಕ್ಕೆ ಚಿತ್ರತಂಡ ಸಾರಿ ಕೇಳಿಸಿ ಸುಮ್ಮನಾಯ್ತು ಎಂದು ಆವಂತಿಕಾ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಆವಂತಿಕಾ, ಇಲ್ಲಿಯವರೆಗೂ ನಾನು ಎಲ್ಲೂ ಈ ಬಗ್ಗೆ ಹೇಳಿರಲಿಲ್ಲ. ಆದ್ರೆ ಚೆಕ್‍ಬೌನ್ಸ್ ಬಗ್ಗೆ ಕೋರ್ಟ್ ಮೆಟ್ಟಿಲೇರಿದಾಗ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಸುಳ್ಳು ಸ್ಟೋರಿ ಸೃಷ್ಟಿಸಿದ್ದಾರೆ. ನನಗೆ ಸೆಟ್‍ನಲ್ಲಿ ತುಂಬಾ ತೊಂದರೆ ಆಗ್ತಿತ್ತು. ಎಲ್ಲವನ್ನೂ ಸಹಿಸಿಕೊಂಡೆ. ಬ್ಯಾಂಕಾಕ್ ಚಿತ್ರೀಕರಣ ಬಾಕಿ ಉಳಿದಿತ್ತು. ಅದನ್ನು ಮುಗಿಸಿ ಹೊರಟುಬಿಡೋಣ ಅಂತ ಸುಮ್ಮನಿದ್ದೆ. ಒಂದು ದಿನ ನನ್ನ ಜೊತೆ ಮಾತಾಡ್ಬೇಕು ಅಂದ್ರು. ಡೇಟ್ ಸಮಸ್ಯೆ ಬಗ್ಗೆ ಕೇಳೋದಿರಬಹುದು ಅಂದುಕೊಂಡೆ. ಆದ್ರೆ ಅವರು ನಿಮಗೆ ನನ್ನ ಜೊತೆ ಏನಾದ್ರೂ ಪ್ರಬ್ಲಮ್ ಇದ್ಯಾ ಅಂದ್ರು. ಇಲ್ಲ, ಇನ್ನೆರಡು ಮೂರು ದಿನ ಚಿತ್ರೀಕರಣ ಅಲ್ವಾ, ಮುಗಿಸೋಣ ಅಂದೆ. ಆದ್ರೆ ಅವರು ನೀನು ನಮ್ಮ ಜೊತೆ ಫ್ರೆಂಡ್ಲಿ ಇಲ್ಲ ಅಂದ್ರು. ನಾನು ಫ್ರೆಂಡ್ಲಿ ಇಲ್ಲ ಅನ್ನೋದು ಅವರ ಪ್ರಾಬ್ಲಮ್ ಆಗಿತ್ತು. ಫ್ರೆಂಡ್ಲಿ ಅಂದ್ರೆ ಏನು ಅಂತ ಕೇಳಿದ್ದಕ್ಕೆ ಜೋರಾಗಿ ಕಿರುಚಾಡಲು ಶುರು ಮಾಡಿದ್ರು. ನಾನು ಅಳುತ್ತಾ ಅಲ್ಲಿಂದ ಹೊರಟುಬಿಟ್ಟೆ.

    ಚಿತ್ರದ ಮೊದಲನೇ ಶೆಡ್ಯೂಲ್ ನಂತರ ಎರಡನೇ ಶೆಡ್ಯೂಲ್‍ಗೆ ದೀರ್ಘವಾದ ಗ್ಯಾಪ್ ಇತ್ತು. ಈ ವೇಳೆ ಡೇಟ್ಸ್ ತೊಂದರೆಯಾಗಬಾರದು ಅಂತ ತುಂಬಾ ಸಲ ಮೆಸೇಜ್ ಮಾಡಿದ್ದೇನೆ. ಆದ್ರೆ ಯಾವುದಕ್ಕೂ ರಿಪ್ಲೈ ಬಂದಿಲ್ಲ. ನಂತರ ಫಿಲಂ ಚೇಂಬರ್‍ಗೆ ಹೋಗೋಣ ಅಲ್ಲಿ ಏನು ಹೇಳ್ತಾರೋ ಹಾಗೆ ಮಾಡ್ತೀನಿ ಅಂದ್ರು. ಎರಡು ದಿನಗಳ ನಂತರ ಅವರ ಮ್ಯಾನೇಜರ್ ಬಂದು ನಿಮ್ಮ ಟಿಕೆಟ್ ರೆಡಿ ಇದೆ. ನೀವು ಹೋಗ್ಬೆಕು ಅಂದ್ರು. ಅವರೇ ಕಳಿಸಿದ್ದು, ನಾನು ಚಿತ್ರದಿಂದ ಹೊರಹೋಗಿಲ್ಲ. ಈ ಬಗ್ಗೆ ವಿವರಿಸಿ ಫಿಲಂ ಚೇಂಬರ್‍ಗೂ ಪತ್ರ ಬರೆದಿದ್ದೇನೆ. ಆದ್ರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದಕ್ಕಾಗಿ ಕೋರ್ಟ್‍ನಲ್ಲಿ ಕೇಸ್ ಹಾಕಬೇಕಾಯ್ತು ಅಂದ್ರು. ಕೇಸ್‍ನಲ್ಲಿ ಕೂಡ ನನಗಾದ ತೊಂದರೆ ಬಗ್ಗೆ ಹೇಳಿಲ್ಲ. ಚಿತ್ರ ರಿಲೀಸ್ ಆದ್ರೆ ನಾನೇ ಡಬ್ ಮಾಡ್ಬೇಕು ಎಂದಷ್ಟೇ ಹೇಳಿದ್ದೇನೆ ಅಂದ್ರು.

    https://www.youtube.com/watch?v=mrPva5qVTHE

     ನನಗಾದ ಅನ್ಯಾಯ ಇನ್ನೊಬ್ಬ ಹುಡುಗಿಗೆ ಆಗದಿರಲಿ ಎಂದು ಅವಂತಿಕಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

    ಆದ್ರೆ ನಟಿ ಅವಂತಿಕಾ ಶೆಟ್ಟಿಯ ಆರೋಪವನ್ನ ನಿರ್ಮಾಪಕ ಸುರೇಶ್ ತಳ್ಳಿಹಾಕಿದ್ದಾರೆ. ನಾನು ಆ ರೀತಿ ಅಲ್ಲ. ಬೇಕಿದ್ರೆ ಸೆಟ್‍ನಲ್ಲಿದ್ದವರನ್ನು ಕೇಳಿ. ಅವಂತಿಕಾ ಸೆಟ್‍ಗೆ ಲೇಟ್ ಆಗಿ ಬರ್ತಿದ್ರು. ಚಿತ್ರೀಕರಣ ತಡವಾಗ್ತಿತ್ತು. ರಾತ್ರಿ ನಿದ್ದೆ ಮಾಡದೇ ಸೆಟ್‍ಗೆ ಬರ್ತಿದ್ರು. ಕೇಳಿದ್ರೆ ಪ್ರಾಕ್ಟೀಸ್ ಮಾಡ್ತಿದ್ದೆ ಅಂತಿದ್ರು. ರಾತ್ರಿಯೆಲ್ಲಾ ಪ್ರಾಕ್ಟೀಸ್ ಮಾಡಲು ಇದೇನು ಪೌರಾಣಿಕ ಚಿತ್ರನಾ. ನಿದ್ರೆ ಮಾಡದಿದ್ರೆ ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣಲ್ಲ ಎಂದಿದ್ದೇವೆ ಅಷ್ಟೆ ಅಂತ ಸುರೇಶ್ ಹೇಳಿದ್ರು.

    https://www.youtube.com/watch?v=d6e1Abm0zIU&spfreload=10

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಪದೇ ಪದೇ ನಟಿಯರ ಮೇಲೆ ನಡೆಯುತ್ತಿರೋ ದೌರ್ಜನ್ಯವನ್ನ ಸಹಿಸಲು ಸಾಧ್ಯವಿಲ್ಲ. ಯಾರೇ ತಪ್ಪು ಮಾಡಿದ್ರೂ ತಪ್ಪೇ. ಅದ್ರಲ್ಲೂ ಒಂದು ಹೆಣ್ಣಿಗೆ ನೋವಾದ್ರೆ ಸುಮ್ಮನಿರಲ್ಲ ಅಂದ್ರು

    ನಟಿ ಅವಂತಿಕಾ ಶೆಟ್ಟಿಗೆ ನಿರ್ಮಾಪಕರು ಲೈಂಗಿಕ ಕಿರುಕುಳ ಕೊಟ್ಟಿದ್ರೆ ಕ್ರಮ ನಿಶ್ಚಿತ. ಅವಂತಿಕಾ, ನಿರ್ಮಾಪಕ ಸುರೇಶ್, ನಿರ್ದೇಶಕ ನರೇಶ್‍ರನ್ನ ಕರೆಸಿ ಮಾತನಾಡುತ್ತೇನೆ. ನಟಿ ಅವಂತಿಕಾ ಕೊಟ್ಟ ದೂರನ್ನ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿದ್ರು.