Tag: raju kage

  • DCC Bank Election| ಮೇಲೆ ಕುಳಿತವನು ಆಟ ಆಡಿಸ್ತಾನೆ, ನಾವೆಲ್ಲ ಗೊಂಬೆಗಳು: ಲಕ್ಷ್ಮಣ ಸವದಿ

    DCC Bank Election| ಮೇಲೆ ಕುಳಿತವನು ಆಟ ಆಡಿಸ್ತಾನೆ, ನಾವೆಲ್ಲ ಗೊಂಬೆಗಳು: ಲಕ್ಷ್ಮಣ ಸವದಿ

    – ರೋಚಕತೆ ಪಡೆದ ಡಿಸಿಸಿ ಬ್ಯಾಂಕ್‌ ಚುನಾವಣೆ
    – ನಾಮಪತ್ರ ಸಲ್ಲಿಕೆ ಮಾಡಿದ ಸವದಿ, ರಾಜು ಕಾಗೆ
    – ಮೊದಲ ಬಾರಿಗೆ ಡಿಸಿಸಿ ಚುನಾವಣೆಗೆ ಕಾಗೆ ಎಂಟ್ರಿ

    ಬೆಳಗಾವಿ: ನಮ್ಮ ಸಮಿತಿ ಸದಸ್ಯರ ಸಂಖ್ಯೆ ಒಂಬತ್ತಾಗುತ್ತೋ? ಹನ್ನೊಂದಾಗುತ್ತೋ? ಹದಿನೈದಾಗುತ್ತೋ ನೋಡೋಣ. ಮೇಲೆ ಕುಳಿತವನು ಆಟ ಆಡಿಸ್ತಾನೆ. ನಾವೆಲ್ಲ ಗೊಂಬೆಗಳು, ಹೇಳಿದಂತೆ ಆಟ ಆಡುತ್ತೇವೆ ಎಂದು ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದ್ದಾರೆ.

    ಡಿಸಿಸಿ ಬ್ಯಾಂಕ್ ಚುನಾವಣೆ (DCC Bank Election) ದಿನದಿಂದ ದಿನಕ್ಕೂ ರೋಚಕತೆ ಪಡೆಯುತ್ತಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡದಲ್ಲಿ ಈಗಾಗಲೇ ಕತ್ತಿ ಜಾರಕಿಹೊಳಿ, ಹಾಗೂ ಹುಕ್ಕೇರಿ, ಜೊಲ್ಲೆ ಮನೆತನಗಳಿದ್ದು ಈಗ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ (Raju Kage) ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ಅಥಣಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾಗವಾಡ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ‌ರಾಜು ಕಾಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಇಬ್ಬರೂ ಏಕಾಕಾಲಕ್ಕೆ ಆಗಮಿಸಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ:  ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ – ವಾಲಿಬಾಲ್‌ ಕೋಚ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ನಾವೂ ಯಾರ ಬಣದಲ್ಲೂ ಇಲ್ಲ ಎನ್ನುವ ಮೂಲಕ ಜಾರಕಿಹೊಳಿ ಸಹೋದರರಿಗೆ (Jarkiholi Brothers) ಶಾಸಕ ಕಾಗೆ ಶಾಕ್ ಕೊಟ್ಟಿದ್ದಾರೆ. ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಖಾಡಕ್ಕೆ ಶಾಸಕ ರಾಜು ಕಾಗೆ ಎಂಟ್ರಿಯಾಗುತ್ತಿದ್ದು ರಾಜು ಕಾಗೆಯವರನ್ನು ಗೆಲ್ಲಿಸುವ ಹೊಣೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹೊತ್ತಿದ್ದಾರೆ. ಕಾಗೆ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಕಣಕ್ಕಿಳಿದಿದ್ದು ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಟಳ್ಳಿ ಸ್ಪರ್ಧೆ ಮಾಡುತ್ತಿದ್ದಾರೆ.

    ಈ ವೇಳೆ ಮಾತನಾಡಿದ ಲಕ್ಷ್ಮಣ ಸವದಿ, ನಾನು ಹಾಗೂ ರಾಜು ಕಾಗೆ ಒಂದೇ ಸಮಿತಿಯಲ್ಲಿದ್ದು ನಮ್ಮ ಸಮಿತಿಗೆ ಬರುವ ಎಲ್ಲರಿಗೂ ಸ್ವಾಗತ ಮಾಡುತ್ತೇವೆ. ಹೋಗುವವರಿಗೂ ಧನ್ಯವಾದ ಹೇಳಿ ಕಳಿಸುತ್ತೇವೆ ಎಂದರು. ಇದನ್ನೂ ಓದಿ: ಕುಕ್ಕರ್ ಬ್ರ್ಯಾಂಡ್ ಪ್ರೆಸ್ಟೀಜ್ ಸಂಸ್ಥಾಪಕ ಟಿಟಿ ಜಗನ್ನಾಥನ್ ನಿಧನ

    ನಮ್ಮ ಜೊತೆ ಯಾರೂ ಇಲ್ಲ ಎನ್ನುತ್ತೀರಿ. ಆದರೆ ಬಣ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ, ಸಸಿ ನೆಡುವ ವೇಳೆ ಒಂದೇ ಇರುತ್ತೆ. ಬಳಿಕ ಎಲೆ, ಕಾಯಿ, ಹೂವು ಎಲ್ಲವೂ ಬರುತ್ತದೆ ಎನ್ನುವ ಮೂಲಕ ಮಾರ್ಮಿಕವಾಗಿ ತಮ್ಮ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂಬ ಸುಳಿವು ನೀಡಿದರು.

  • ಸರಿ ಮಾತಾಡ್ಸಲ್ಲ ಅಂತ ರಾಜು ಕಾಗೆ ಆರೋಪ – ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದ ಡಿಕೆಶಿ

    ಸರಿ ಮಾತಾಡ್ಸಲ್ಲ ಅಂತ ರಾಜು ಕಾಗೆ ಆರೋಪ – ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದ ಡಿಕೆಶಿ

    ಬೆಂಗಳೂರು: ಶಾಸಕರನ್ನ ಸರಿಯಾಗಿ ಮಾತನಾಡಿಸಲ್ಲ ಎಂಬ ಶಾಸಕ ರಾಜು ಕಾಗೆ (Raju Kage) ಆರೋಪ ಮಾಡಿದ್ದು‌ ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಅವರಿಗೆ ಮುಜುಗರ ತಂದಿತ್ತು. ತಮ್ಮದೇ ಪಕ್ಷದ ಶಾಸಕ ಆರೋಪ ಮಾಡಿದ 24 ಗಂಟೆಯಲ್ಲೇ ಡಿಕೆಶಿ ಮನೆ ಬಾಗಿಲಿಗೆ ಹಲವು ಶಾಸಕರು ದೌಡಾಯಿಸಿದ್ದರು.

    ರೋಣಾ ಶಾಸಕ ಜಿ.ಎಸ್.ಪಾಟೀಲ್, ಹೊನ್ನಾಳಿ ಶಾಸಕ ಶಾಂತನಗೌಡ, ಶೃಂಗೇರಿ ಶಾಸಕ ರಾಜೇಗೌಡ, ಮಂಡ್ಯ ಶಾಸಕ ಗಣಿಗ ರವಿ ಸೇರಿ ಹಲವರು ಭೇಟಿ ಮಾಡಿದರು. ಶಾಸಕರ ಜೊತೆ ಮಾತುಕತೆ ನಡೆಸಿದ‌ರು. ಶಾಸಕರನ್ನು ಕೂರಿಸಿಕೊಂಡು ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು. ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌: ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    ರಾಜು ಕಾಗೆ ಆರೋಪಕ್ಕೆ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನೀವು ದಿನ ಬನ್ನಿ, ಬರ್ತಾ ಇದೀರಿಲ್ವಾ? ನಿಮಗೆ ಮುಖ ತೋರಿಸ್ತಾನೆ ಇದೀನಿ. ಪಾಪ ನಮ್ಮ ಕೆಲ ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ ಎಂದು ನಗೆ ಬೀರಿದರು.

    ಅಸಮಾಧಾನ ಹೊರಹಾಕಿದ ಶಾಸಕರ ಜೊತೆ ಮಾತಾಡ್ತೀರಾ ಎಂಬ‌ ಪ್ರಶ್ನೆಗೆ, ಕರೆದು ಮಾತಾಡ್ತೀನಿ ಎಂದಷ್ಟೇ ಹೇಳಿ ಹೊರಟರು. ಇದನ್ನೂ ಓದಿ: ಅನುದಾನ ಕೊರತೆ ಹೇಳಿಕೆ ಕೊಟ್ಟವರಿಗೆ ತಲೆ ಕೆಟ್ಟಿರಬೇಕು: ಬೇಳೂರು ಗೋಪಾಲಕೃಷ್ಣ

  • ಅನುದಾನ ಕೊರತೆ ಹೇಳಿಕೆ ಕೊಟ್ಟವರಿಗೆ ತಲೆ ಕೆಟ್ಟಿರಬೇಕು: ಬೇಳೂರು ಗೋಪಾಲಕೃಷ್ಣ

    ಅನುದಾನ ಕೊರತೆ ಹೇಳಿಕೆ ಕೊಟ್ಟವರಿಗೆ ತಲೆ ಕೆಟ್ಟಿರಬೇಕು: ಬೇಳೂರು ಗೋಪಾಲಕೃಷ್ಣ

    – ನಮಗೆ ಯಾವುದೇ ಅನುದಾನ ಕೊರತೆ ಆಗಿಲ್ಲ

    ಬೆಂಗಳೂರು: ನಮಗೆ ಯಾವುದೇ ಅನುದಾನದ ಕೊರೆತೆ ಆಗಿಲ್ಲ. ಅವರು ಯಾರೋ ತಲೆ ಕೆಟ್ಟಿರಬೇಕು ಹೇಳಿಕೆ ಕೊಟ್ಟವರಿಗೆ. ರಾಜು ಕಾಗೆ (Raju Kage) ಇರಬಹುದು ಯಾರೇ ಇರಬಹುದು ಅವರ ಹೇಳಿಕೆ ನಾನು ಒಪ್ಪಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಅವರು ʻಪಬ್ಲಿಕ್‌ ಟಿವಿʼ ಜೊತೆ ಮಾತನಾಡಿದರು. ಈ ವೇಳೆ, ಬೇರೆ ಶಾಸಕರು ಯಾಕೆ ಹಾಗೇ ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಅನುದಾನದ ಕೊರತೆ ಆಗಿಲ್ಲ. ಮೊದಲ ವರ್ಷ ಸ್ವಲ್ಪ ಸಮಸ್ಯೆ ಇತ್ತು. ಈಗ ಶಾಸಕರಿಗೆ ಏನು ಸಮಸ್ಯೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌: ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    ಯಾವ ಸಚಿವರು ಇದುವರೆಗೂ ನಮ್ಮ ಹತ್ತಿರ ಹಣ ಕೇಳಿಲ್ಲ. ಬೇರೆ ಶಾಸಕರಿಗೆ ಏನೋ ಗೊತ್ತಿಲ್ಲ. ಕೆಲವರಿಗೆ ಇರಬಹುದು, ಸಚಿವರುಗಳು ಯಾರು ಕೇಳಲ್ಲ ಅವರ ಕೆಳಗೆ ಇರೋರು ಕಿಡಿಗೇಡಿಗಳು ಯಾರಾದ್ರೂ ಮಾಡಿರಬಹುದು. ಸ್ವಪಕ್ಷಿಯ ಶಾಸಕರು ಆರೋಪ ಮಾಡಿದ್ದರಿಂದ ಜಮೀರ್ ಅವರು ರಾಜೀನಾಮೆ ಕೊಡಿ ಅಂದಿದ್ದೆ. ಒಳ್ಳೆಯ ಉದ್ದೇಶದಿಂದಲೇ ನಾನು ಹೇಳಿದ್ದೆ ಎಂದಿದ್ದಾರೆ.

    ನಾನು ಹೇಳಿದೆ ಅಂತ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ಕೊಡಿಸಬೇಕಲ್ಲ. ಅದು ತನಿಖೆ ಆಗಬೇಕು ಅವರೇನು ಅಪರಾಧಿ ಅಲ್ಲ. ಈ ಬಿ.ಆರ್.ಪಾಟೀಲ್‍ರನ್ನು ನಂಬೋಕೆ ಆಗ್ತಿಲ್ಲ. ಬುಟ್ಟಿಯಲ್ಲಿ ಹಾವಿದೆಯೋ ಖಾಲಿ ಇದೆಯೋ ಗೊತ್ತಿಲ್ಲ. ಆ ತರ ಮನುಷ್ಯ ಅವರು. ಅವರೆಲ್ಲ ಈ ಹಿಂದೆ ಗಲಾಟೆ ಮಾಡಿ ಪಕ್ಷದ ವಿರುದ್ಧ ಮಾತನಾಡಿಯೇ ಅಧಿಕಾರ ಪಡೆದವರು. ಇನ್ನೂ, ನಾನು ತಪ್ಪು ಮಾಡಿದ್ದರೆ ರಾಜೀನಾಮೆ ಕೊಡ್ತೀನಿ ಅಂತ ಜಮೀರ್ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಅವ್ಯವಹಾರ ನಡೆದಂತೆ ಕಾಣ್ತೀಲ್ಲ. ಬಿ.ಆರ್.ಪಾಟೀಲ್‍ದು ಏನು ಹಕೀಕತ್ ಇದೆಯೋ ಗೊತ್ತಿಲ್ಲ. ನಾನು ಬಿಡ್ತೀನಿ ಬಿಡ್ತೀನಿ ಅಂತಿದಾರೆ. ಶಾಸಕಾಂಗ ಪಕ್ಷದ ಸಭೆ ಕರೆದು ಒಂದು ಸಲ ಶಾಸಕರಿಗೆ ಎಚ್ಚರಿಕೆ ಕೊಡೋದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ಸಿದ್ರಾಮಣ್ಣ ಸರ್ಕಾರದಲ್ಲಿ ದುಡ್ಡಿಲ್ಲ: ಪರಮೇಶ್ವರ್‌

  • ಮೊದಲ ಬಾರಿಗೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತವಾಗಿರುವ ಪರಿಸ್ಥಿತಿ ಕಾಣುತ್ತಿದ್ದೇವೆ: ಶೋಭಾ ಕರಂದ್ಲಾಜೆ ಆರೋಪ

    ಮೊದಲ ಬಾರಿಗೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತವಾಗಿರುವ ಪರಿಸ್ಥಿತಿ ಕಾಣುತ್ತಿದ್ದೇವೆ: ಶೋಭಾ ಕರಂದ್ಲಾಜೆ ಆರೋಪ

    ನವದೆಹಲಿ: ರಾಜ್ಯದಲ್ಲಿ ಪ್ರತಿ ಸರ್ಕಾರದ ಸಂದರ್ಭದಲ್ಲಿ ಅಭಿವೃದ್ಧಿ ನೋಡುತ್ತಿದ್ದೆವು. ಆದರೆ ರಾಜ್ಯದಲ್ಲೀಗ ಅಭಿವೃದ್ಧಿ ಕುಂಠಿತವಾಗುತ್ತಿದೆ, ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಕೆಲಸ ಸ್ಥಗಿತವಾಗಿರುವ ಪರಿಸ್ಥಿತಿ ಕಾಣುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆರೋಪಿಸಿದ್ದಾರೆ.

    ಶಾಸಕರ ಬಿ.ಆರ್ ಪಾಟೀಲ್, ರಾಜು ಕಾಗೆ ಆರೋಪಗಳಿಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿಗೆ (Guarantee Scheme) ಹಣ ಕೊಡುತ್ತೇವೆ ಎಂದು ಅದಕ್ಕೂ ಹಣ ನೀಡಿಲ್ಲ. ಎರಡು ವರ್ಷದ ಹಿಂದೆ ಅನುದಾನ ಕೊಟ್ಟರೂ ಅದರ ಆದೇಶ ಪ್ರತಿ ಇನ್ನು ಬಂದಿಲ್ಲ. ಸೋಮವಾರ ಗೃಹ ಸಚಿವ ಪರಮೇಶ್ವರ್ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳಿ ಇಂದು ಉಲ್ಟಾ ಹೊಡೆದಿದ್ದಾರೆ. ಕರ್ನಾಟಕ ಸರ್ಕಾರ ದಿವಾಳಿಯತ್ತ ಹೋಗುತ್ತಿದೆ ಎಂದು ಕುಟುಕಿದರು. ಇದನ್ನೂ ಓದಿ: ಅಡ್ಡೂರು ಆಂಗ್ಲ ಸರ್ಕಾರಿ ತರಗತಿ ಉದ್ಘಾಟನೆ – ಶಾಲೆಯ ನೆಲಮಹಡಿ ನಿರ್ಮಾಣದ ಕೊಡುಗೆ ನೀಡಿದ ಝಕಾರಿಯಾ ಜೋಕಟ್ಟೆ

    ಚರಂಡಿ ರಸ್ತೆ ಮಾಡಿಲ್ಲ, ಜನರ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಹೇಳುತ್ತಾರೆ. ಬಿಆರ್ ಪಾಟೀಲ್ ಮನೆ ಬಂದಿಲ್ಲ ಎನ್ನುತ್ತಾರೆ. ಸರ್ಫರಾಜ್ ಖಾನ್ ಮಾತಾಡುವ ಅಡಿಯೊ ವೈರಲ್ ಆಗಿದೆ. ಆ ಮನೆಗಳು ಎಲ್ಲಿ ಹೋಗಿದೆ? ಕೇಂದ್ರ ಸರ್ಕಾರ ಮನೆಗಳು ಕೊಡುತ್ತಿದೆ. ಆದರೆ ರಾಜ್ಯದಿಂದ ಮನೆ ನೀಡಿಲ್ಲ. ಕೇಂದ್ರದಿಂದ ಮನೆಗಳು ಬಂದರೆ ಆ ಹಣದಲ್ಲಿ ಕಮಿಷನ್ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭಾರತ್-NCAP ನಲ್ಲಿ ಟಾಟಾ ಹ್ಯಾರಿಯರ್ EVಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಕಾಂಗ್ರೆಸ್ ನಾಯಕರು ದೆಹಲಿಯ ಎಟಿಎಮ್ ಆಗಿ ಕೆಲಸ ಮಾಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳುವ ಕೆಲಸ ಆಗುತ್ತಿದೆ. ತಿಂಗಳಿಗೆ ಎರಡು ಬಾರಿ ಬಂದು ಹಣ ಕೊಟ್ಟು ಖುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೈಕಮಾಂಡ್ ಹಣ ಕೊಟ್ಟರೆ ಸುಮ್ಮನೆ ಇvರುತ್ತಾರೆ. ಜಮೀರ್ ಅವರನ್ನು ಕೂಡಲೇ ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿದರು. ಇದನ್ನೂ ಓದಿ: ಚಾ.ನಗರ ಜಿಲ್ಲೆಯಲ್ಲಿ ಇದೆಂಥಾ ಘಟನೆ?- ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕಕ್ಕೆ ಅಸಮಾಧಾನ

    ಸಿಎಂ ಸಿದ್ದರಾಮಯ್ಯ ಈಗ ಮೊದಲಿನಂತೆ ಇಲ್ಲ. ಭ್ರಷ್ಟಾಚಾರ ಸರ್ಕಾರ ಮಾಡುತ್ತಿದ್ದಾರೆ. ಕಡೆಯ ಅವಕಾಶ ಎಂದು ಲೂಟಿ ಹೊಡೆಯುತ್ತಿದ್ದಾರೆ. ಕೆಟ್ಟ ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇದು ದಪ್ಪ ಚರ್ಮದ ಸರ್ಕಾರ, ಎಷ್ಟೇ ಹೋರಾಟಗಳು ಮಾಡಿದರೂ ಏನು ಆಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್ ಓಪನ್ – ವಿಜಯೇಂದ್ರ

  • ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

    ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

    – ಕೇಂದ್ರದಿಂದ ನಮಗೆ 11,495 ಕೋಟಿ ರೂ. ನಷ್ಟವಾಗಿದೆ; ಸಿಎಂ

    ರಾಯಚೂರು: ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ನಾವು ಗ್ರ‍್ಯಾಂಟ್ ಕೊಡುವುದೆಲ್ಲಾ ವಿಶೇಷ ಅನುದಾನ ಅಂತಿರುತ್ತದೆ. ಅವರು ಹೇಳುತ್ತಾರೆ, ಶಾಸಕ ರಾಜು ಕಾಗೆಯನ್ನ (Raju Kage) ಕರೆದು ಮಾತನಾಡ್ತಿನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಜಿಲ್ಲೆಯ ಯರಗೇರಾದಲ್ಲಿ ಸರ್ಕಾರದ ವಿರುದ್ಧ ಮತ್ತೊಬ್ಬ ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅನುದಾನದ ವರ್ಕ್ ಆರ್ಡರ್ ಸಿಗುತ್ತಿಲ್ಲ ಎಂದು ಎರಡು ದಿನದಲ್ಲಿ ರಾಜೀನಾಮೆ ನೀಡಿದ್ದರೂ ಅಚ್ಚರಿಯಿಲ್ಲ ಎಂದಿದ್ದಾರೆ. ಅವರು ಹೇಳುತ್ತಾರೆ, ಅವರಿಗೇನು? ಸಿಎಂ ಅನುದಾನ ಅಂತಾ ಇದೀಯಾ? ರಾಜು ಕಾಗೆಯನ್ನು ಕರೆದು ಮಾತಾಡುತ್ತೇನೆ ಎಂದರು.ಇದನ್ನೂ ಓದಿ: ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

    ಇನ್ನೂ ವಸತಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನಗೆ ಗೊತ್ತಿಲ್ಲ. ಯಾವ ಸನ್ನಿವೇಶದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ರಾಯಚೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಬಿ.ಆರ್ ಪಾಟೀಲ್ (BR Patil)  ಅವರನ್ನ ಸಿಎಂ ಕರೆದರೂ ಬಂದಿಲ್ಲ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ನಾನು ಅವರನ್ನು ಇಲ್ಲಿಗೆ ಕರೆದಿದ್ದೆ, ಆದರೆ ಅವರು ಆಯೋಜಕರು ನನ್ನನ್ನು ಕರೆದಿಲ್ಲ ಬರಲ್ಲ ಎಂದರು. ಜೂ.25ಕ್ಕೆ ಭೇಟಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

    ಸಚಿವ ಹೆಚ್‌ಕೆ ಪಾಟೀಲ್ (HK Patil) ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಅದು ನಮ್ಮ ಕಾಲದಲ್ಲಿ ನಡೆದಿಲ್ಲ. ವಿಶೇಷ ಕೋರ್ಟ್ ಮಾಡಿ ತ್ವರಿತಗತಿಯಲ್ಲಿ ಇತ್ಯರ್ಥ ಮಾಡಿ ಎಂದಿದ್ದಾರೆ. ಅಕ್ರಮ ಗಣಿಗಾರಿಗೆ ನಡೆಯುತ್ತಿರುವುದಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಲೋಕಾಯುಕ್ತ ಸಂತೋಷ ಹೆಗಡೆ ವರದಿ ಆಧರಿಸಿ ನಾನು ಅಸೆಂಬ್ಲಿ ಅಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಅಂದಿನ ಸರ್ಕಾರದಿಂದ ಸರಿಯಾದ ಉತ್ತರ ಬರಲಿಲ್ಲ. ಹೀಗಾಗಿ ನಡೆದುಕೊಂಡೇ ಬರುತ್ತೇನೆ ಅಂತ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು ಎಂದರು.

    ದೆಹಲಿಗೆ ತೆರಳಿ ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನ ಭೇಟಿ ಮಾಡಬೇಕು ಅಂದುಕೊಂಡಿದ್ದೀನಿ. 16ನೇ ಹಣಕಾಸಿನ ಸಂಬಂಧ ಬಿಲ್‌ಗಳು ಬಾಕಿಯಿವೆ. ಅವುಗಳ ಬಗ್ಗೆ ಮಾತನಾಡಲು ನಾಳೆ ರಾಷ್ಟ್ರಪತಿ ಸಮಯ ಕೊಟ್ಟಿದ್ದಾರೆ ಎಂದು ತಿಳಿಸಿದರು.

    ರಾಜ್ಯಕ್ಕೆ ಪ್ರಹ್ಲಾದ್ ಜೋಶಿ (Prahlad Joshi) ಏನೆಲ್ಲಾ ಮಾಡಿದ್ದಾರಂತೆ? ಅವರನ್ನು ಪವರ್ ಫುಲ್ ಅಂತಾರೆ, ಪ್ರಧಾನಿಗೆ ಬಹಳ ಹತ್ತಿರವಿದ್ದಾರೆ. 15ನೇ ಹಣಕಾಸಿನಲ್ಲಿ 5,435 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಿದ್ದರು. ಶಿಫಾರಸು ಮಾಡಿ ಆಮೇಲೆ ಏನು ಮಾಡಿದರು? ಕರ್ನಾಟಕದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ? ಬಿಜೆಪಿಯ ಒಬ್ಬ ಸಂಸದನಾದರೂ ಮಾತನಾಡಿದ್ದಾರಾ? 11,495 ಕೋಟಿ ರೂ. ನಮಗೆ ನಷ್ಟವಾಗಿದೆ. 14 ರಿಂದ 15ನೇ ಹಣಕಾಸು ಯೋಜನೆಗೆ ಲೆಕ್ಕ ಹಾಕಿದರೆ, ರಾಜ್ಯಕ್ಕೆ 89 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಜೋಶಿ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

  • ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌:  ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌: ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    – ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲ

    ಚಿಕ್ಕೋಡಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದ್ದು ದುಡ್ಡು ಕೊಟ್ಟರೇ ಮಾತ್ರ ವರ್ಕ ಆರ್ಡರ್ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ (MLA Raju Kage) ಆಕ್ರೋಶ ಹೊರಹಾಕಿದ್ದಾರೆ.

    ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ಮಾತನಾಡಿದ ಅವರು, ಕಾಮಗಾರಿ ವರ್ಕ್ ಆರ್ಡರ್‌ ಪಡೆಯಲು ಸರ್ಕಾರದಿಂದ ವಿಳಂಬ ಆಗುತ್ತಿದೆ. 13 ಕೋಟಿ ರೂ. ವೆಚ್ಚದಲ್ಲಿ 75 ಸಮುದಾಯದ ಭವನಗಳಿಗೆ ಅನುಮೋದನೆ ಸಿಕ್ಕಿದೆ. ಆದರೆ ಎರಡು ವರ್ಷದಿಂದ ವರ್ಕ್ ಆರ್ಡರ್ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

     

    ನಾನು ಎರಡು ದಿನಗಳಲ್ಲಿ ಮುಖ್ಯಮಂತ್ರಿ ಭೇಟಿ ರಾಜೀನಾಮೆ ಸಲ್ಲಿಸಿದರೆ ಅಚ್ಚರಿಯಿಲ್ಲ ಬಿ ಆರ್ ಪಾಟೀಲ್ ಅವರಂತ ಪರಿಸ್ಥಿತಿ ನನ್ನದಾಗಿದೆ. ಬಿ ಆರ್ ಪಾಟೀಲ್ ಅವರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ಸರಕಾರದ ವಿರುದ್ದವೇ ಬಹಿರಂಗವಾಗಿ ಕಿಡಿಕಾರಿದರು.

  • ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸಾವು

    ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸಾವು

    ಬೆಳಗಾವಿ: ಶಾಸಕ ರಾಜು ಕಾಗೆ (Raju Kage) ಸಹೋದರನ ಪುತ್ರನಿಂದ ಕಾರು ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belgavi) ಜಿಲ್ಲೆಯ ಕಿತ್ತೂರು (Kitturu) ಪಟ್ಟಣದ ಹೊರವಲಯದ ಬೆಂಗಳೂರು-ಪುಣೆ (Bengaluru-Pune) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಗೋಕಾಕ್ ಮೂಲದ ಬಸವರಾಜ ಪುಡಕಲಕಟ್ಟಿ (22) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ತಾಯಿ

    ಮೃತ ಬಸವರಾಜ ಹಾಗೂ ಆತನ ಇಬ್ಬರು ಸ್ನೇಹಿತರು ಬೆಳಗಾವಿಯಿಂದ ಕಿತ್ತೂರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು. ಈ ವೇಳೆ ಶಾಸಕ ರಾಜು ಕಾಗೆ ಸಹೋದರನ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ ಪ್ರಯಾಣಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸವರಾಜ ಪುಡಕಲಕಟ್ಟಿ ಸಾವನ್ನಪ್ಪಿದ್ದು, ಸಣ್ಣವಿಠ್ಠಲ್ ದುರದುಂಡಿ, ನಿಂಗಪ್ಪ ಹೆಬ್ಬಾಳ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮೃತ ದೇಹವನ್ನು ಬಿಮ್ಸ್ (BIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು (Kitturu Police Station) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ:ಚಿಕ್ಕಬಳ್ಳಾಪುರ| ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

  • ಯತ್ನಾಳ್‍ರನ್ನು ನಾನೇ ಕಾಂಗ್ರೆಸ್‍ಗೆ ಕರೆದ್ಕೊಂಡು ಬರುತ್ತೇನೆ: ರಾಜು ಕಾಗೆ

    ಯತ್ನಾಳ್‍ರನ್ನು ನಾನೇ ಕಾಂಗ್ರೆಸ್‍ಗೆ ಕರೆದ್ಕೊಂಡು ಬರುತ್ತೇನೆ: ರಾಜು ಕಾಗೆ

    – ಹನಿಟ್ರ್ಯಾಪ್ ಸರ್ಕಾರದ ಯೋಜನೆಯಲ್ಲ ಎಂದ ಶಾಸಕ!

    ಹುಬ್ಬಳ್ಳಿ: ಯತ್ನಾಳ್ (Basangouda Patil Yatnal) ಅವರು ಕಾಂಗ್ರೆಸ್‌ಗೆ (Congress) ಬಂದ್ರೆ ಕರೆದುಕೊಳ್ಳುತ್ತೇವೆ ಎಂದು ಶಾಸಕ ರಾಜು ಕಾಗೆ (Raju Kage) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ (BJP) ಉಚ್ಚಾಟಿಸಿದ ಬಗ್ಗೆ ಪ್ರತಿಕ್ರಿಸಿದರು. ನಾನೇ ಯತ್ನಾಳ್‍ರನ್ನ ಕಾಂಗ್ರೆಸ್‍ಗೆ ಕರೆದುಕೊಂಡು ಬರುತ್ತೇನೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

    ಬೆಲೆ ಏರಿಕೆ ವಿಚಾರವಾಗಿ, ಬೆಲೆ ಏರಿಕೆ ಅಷ್ಟು ಹೊರೆ ಆಗುವುದಿಲ್ಲ. ನಮಗೂ ಇತಿ ಮಿತಿ ಇದೆ. ಹೊಸ ಬಸ್ ನಿಲ್ದಾಣದ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೆವೆ. ವ್ಯವಸ್ಥೆಯನ್ನು ಸರಿ ಮಾಡಬೇಕು. ಲಾಭ ನಷ್ಟವಿಲ್ಲದೇ ಸಂಸ್ಥೆ ನಡೆಯಬೇಕು ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಕಾಂಗ್ರೆಸ್‍ನ ಐದು ಗ್ಯಾರಂಟಿ ಜನರಿಗೆ ಉಪಯೋಗ ಆಗುತ್ತಿದೆ. ಯಾರು ವಿರೋಧ ಮಾಡುತ್ತಿದ್ದರೋ ಅವರೇ ಈಗ ನಮ್ಮನ್ನು ನಕಲು ಮಾಡುತ್ತಿದ್ದಾರೆ. ಇನ್ನೂ ಸರ್ಕಾರದಲ್ಲಿ ಅಡೆತಡೆಗಳು ಸಹಜ. ಇದೆಲ್ಲ ಮೀರಿ ಸಿಎಂ ಸಿದ್ದರಾಮಯ್ಯ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದರು.

    ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ, ಅದು ವೈಯಕ್ತಿಕ ವಿಚಾರ, ಅದು ಸರ್ಕಾರದ ಯೋಜನೆ ಅಲ್ಲ. ರಾಜಣ್ಣರ ಹೆಸರು ತೆಗೆದುಕೊಂಡಿದ್ದು ಯತ್ನಾಳ್, ಅದಕ್ಕೆ ರಾಜಣ್ಣ ಉತ್ತರ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯನ್ನು ರಾಷ್ಟ್ರೀಯ ನಾಯಕರು ಮರುಪರಿಶೀಲಿಸಿದ್ರೆ ಪಕ್ಷಕ್ಕೆ ಲಾಭ – ಶ್ರೀರಾಮುಲು

  • ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಅನಾರೋಗ್ಯದಿಂದ ಸಾವು

    ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಅನಾರೋಗ್ಯದಿಂದ ಸಾವು

    ಚಿಕ್ಕೋಡಿ: ಕಾಗವಾಡ ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಕೃತಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ನೇರಲಿ ಗ್ರಾಮದ ನಿವಾಸಿ ಡಾ.ಅನಿಲ ಪಾಟೀಲ್‌ ಅವರ ಪತ್ನಿ ಕೃತಿಕಾ ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    ನಾಳೆ ಬೆಳಗ್ಗೆ 10 ಗಂಟೆಗೆ ಕಾಗವಾಡ ಶಾಸಕ ರಾಜು ಕಾಗೆ ಸ್ವಗ್ರಾಮದಲ್ಲಿ‌ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಬೆಳಗಾವಿ: ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ (Raju Kage) ತಿಳಿಸಿದ್ದಾರೆ.

    ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಂತರ ಬಸ್ ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ರಾಜು ಕಾಗೆ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಸ್ಪೇರ್ ಪಾರ್ಟ್ಸ್‌ಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ನಿಗಮದ ಆಸ್ತಿಗಳನ್ನು ಪರಭಾರೆ ಮಾಡ್ತೀವಿ. ಸಂಸ್ಥೆಗೆ ಸೇರಿದ ಹಳೆ ಬಿಲ್ಡಿಂಗ್ ನವೀಕರಿಸಿ ಬಾಡಿಗೆ ಕೊಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕೆಲ ವಾರಗಳ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1% ರಷ್ಟು ಏರಿಕೆ). ಇದನ್ನೂ ಓದಿ: ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 9 ಮಂದಿ ಅಸ್ವಸ್ಥ – ಕಾಕಲವಾರ ಗ್ರಾಪಂ ಪಿಡಿಒ ಅಮಾನತು