Tag: Raju James Bond

  • ಫೆ.14ರಂದು ಬಿಡುಗಡೆಗೊಳ್ಳಲಿದೆ `ರಾಜು ಜೇಮ್ಸ್ ಬಾಂಡ್’ ಚಿತ್ರ!

    ಫೆ.14ರಂದು ಬಿಡುಗಡೆಗೊಳ್ಳಲಿದೆ `ರಾಜು ಜೇಮ್ಸ್ ಬಾಂಡ್’ ಚಿತ್ರ!

    ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ್ದವರು ನಟ ಗುರುನಂದನ್. ಅದರಲ್ಲಿ ಅವರು ನಿರ್ವಹಿಸಿದ್ದ ಪಾತ್ರ ಈ ಕ್ಷಣಕ್ಕೂ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಇದೀಗ ಅದೇ ಗುರುನಂದನ್ `ರಾಜು ಜೇಮ್ಸ್ ಬಾಂಡ್’ ಚಿತ್ರದ ಮೂಲಕ ಮತ್ತೊಂದು ಭಿನ್ನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಶುಕ್ರವಾರ ಅಂದರೆ, ಫೆಬ್ರವರಿ 14ರಂದು ಅದ್ದೂರಿಯಾಗಿ ತೆರೆಗಾಣಲಿದೆ.

    ಯುವ ನಿರ್ದೇಶಕ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರ ಮೂಡಿಬಂದಿದೆ. ಬೇರೆ ದೇಶದಲ್ಲಿ ನೆಲೆ ಕಂಡುಕೊಂಡಿದ್ದರೂ ಕನ್ನಡದ ಬಗ್ಗೆ ಕನ್ನಡ ಸಿನಿಮಾಗಳ ಬಗ್ಗೆ ಅತೀವ ಪ್ರೀತಿ ಹೊಂದಿರುವ ಕಿರಣ್ ಭರ್ತೂರ್ ಮತ್ತು ಮಂಜುನಾಥ್ ವಿಶ್ವಕರ್ಮ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆಯ ಹಂತದಿಂದ ಹಿಡಿದು, ಚಿತ್ರೀಕರಣದವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಿದ ಖುಷಿ ನಿರ್ಮಾಪಕರಲ್ಲಿದೆ.ಇದನ್ನೂ ಓದಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆ – ಪ್ರತಿಷ್ಠೆಯ ಕಣದಲ್ಲಿ ಸಂಸದ ಸುಧಾಕರ್ ಬೆಂಬಲಿಗರ ಜಯಭೇರಿ

    ಇನ್ನುಳಿದಂತೆ ದೀಪಕ್ ಮಧುವನಹಳ್ಳಿ ಈ ಮೂಲಕ ಭಿನ್ನ ಬಗೆಯ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಸಿನಿಮಾ ಸಾರಥ್ಯ ವಹಿಸಿಕೊಂಡ ತೃಪ್ತ ಭಾವದಲ್ಲಿದ್ದಾರೆ. ನಾಯಕ ಗುರುನಂದನ್ ಪಾಲಿಗೂ ಚೆಂದದ ಪಾತ್ರ ಸಿಕ್ಕ ಖುಷಿ ಇದೆ. ಬ್ಯಾಂಕ್ ಮ್ಯಾನೇಜರ್ ಆಗೋ ಕನಸಿನ ಚುಂಗು ಹಿಡಿದು ಹೊರಡೋ ಸಾಮಾನ್ಯ ಹುಡುಗನೊಬ್ಬ ಆ ದಾರಿಯಲ್ಲಿ ಎದುರಿಸೋ ವಿಶಿಷ್ಟ ಸವಾಲುಗಳು, ಅದನ್ನೆಲ್ಲ ಮೀರಿಕೊಂಡು ಊರ ಮಂದಿಯ ಪಾಲಿಗೆ ಆತ ಹೇಗೆ ಜೇಮ್ಸ್ ಬಾಂಡ್ ಆಗುತ್ತಾನೆಂಬುದರ ಸುತ್ತಾ ಪಕ್ಕಾ ಮನೋರಂಜನೆಯ ಧಾಟಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆಯಂತೆ.

    Raju James Bond

    ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು ಚಿತ್ರ ನೋಡಿ ಪರವಶಗೊಂಡವರೆಲ್ಲ ರಾಜು ಜೇಮ್ಸ್ ಬಾಂಡ್ ಚಿತ್ರಕ್ಕಾಗಿ ಸಹಜವಾಗಿಯೇ ಕಾತುರರಾಗಿದ್ದಾರೆ. ಬಹುತೇಕ ಎಲ್ಲ ವರ್ಗದ ಪ್ರೇಕ್ಷಕರೊಳಗೂ ಅಂಥಾದ್ದೊಂದು ಕೌತುಕ ಬೆರೆತ ಕಾತುರ ಇದ್ದೇ ಇದೆ.

    ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರದ್ದೊಂದು ದಂಡೇ ಇದೆ. ಹುಬ್ಬಳ್ಳಿ ಹುಡುಗಿ ಮೃದುಲಾ ಪಟ್ಟಣಶೆಟ್ಟಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಸಾಧು ಕೋಕಿಲಾ, ಅಚ್ಯುತ್ ಕುಮಾರ್, ರವಿಶಂಕರ್, ಜೈಜಗದೀಶ್ ಮುಂತಾದವರಿಲ್ಲಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಅಮಿತ್ ಚವಳ್ಕರ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಎಲ್ಲ ದಿಕ್ಕುಗಳಲ್ಲಿಯೂ ಕುತೂಹಲ ಮೂಡಿಸಿರುವ ರಾಜು ಜೇಮ್ಸ್ ಬಾಂಡ್ ಪ್ರೇಕ್ಷಕರ ಮುಂದೆ ಬರಲು ಕ್ಷಣಗಣನೆ ಶುರುವಾಗಿದೆ.ಇದನ್ನೂ ಓದಿ: ಸಿಮೆಂಟ್ ಲಾರಿ, ಬುಲೆರೋ ಮುಖಾಮುಖಿ ಡಿಕ್ಕಿ – ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನ

  • 2ನೇ ಮದುವೆ ನನಗೆ ಬೇಕಿತ್ತಾ ಅಂತಾರೆ ಮಠದ ಗುರುಪ್ರಸಾದ್

    2ನೇ ಮದುವೆ ನನಗೆ ಬೇಕಿತ್ತಾ ಅಂತಾರೆ ಮಠದ ಗುರುಪ್ರಸಾದ್

    ರಾಜು ಜೇಮ್ಸ್ ಬಾಂಡ್ (Raju James Bond)  ಚಿತ್ರದ ‘ಬೇಕಿತ್ತಾ… ಬೇಕಿತ್ತಾ..’ (Bekitta) ಹಾಡಿನ ಬಗ್ಗೆ ಹೇಳ್ತಾ, ನಿರ್ದೇಶಕ ಮಠ ಗುರುಪ್ರಸಾದ್ (Guruprasad) ತಮ್ಮ ಮೊದಲ ಮದುವೆ, ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಬಾಯಿ ಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗ್ತಿದೆ.

    ರಾಜು ಜೇಮ್ಸ್ ಬಾಂಡ್ ಚಿತ್ರದ ಮೊದಲ ಹಾಡು (Song) ಬೇಕಿತ್ತಾ ಬೇಕಿತ್ತಾ. ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಆಗ್ಲೇ ಅರ್ಧ ಮಿಲಿಯನ್ ವೀವ್ಸ್ ಪಡೆದುಕೊಂಡಿದೆ‌. ಅನೂಪ್ ಸೀಳಿನ್ ಸಂಗೀತ, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ. ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದಾರೆ..ಲವ್ವು ನೋವಿನ ಎಣ್ಣೆ‌ ಹಾಡು ಇದಾಗಿದ್ದು ಕೇಳೋದಕ್ಕೆ ಕ್ಯಾಚಿಯಾಗಿದೆ.

    ಅನೂಪ್ ಸೀಳಿನ್ ಕಂಪೋಸಿಷನ್ ‌ದೀಪಕ್ ಲಿರಿಕ್ಸ್ ಹಾಗೂ ಅಥೋನಿದಾಸನ್ ವಾಯ್ಸು ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚಿಂಗ್ ಆಗಿದೆ. ಫಸ್ಟ್ ಟೈಂ ನಟ ಗುರುನಂದನ್ ವಿರಾಗಿ ವೇಷದಲ್ಲಿ ಕಾಣಿಸಿಕೊಂಡಿದ್ದು ಈ ಹಾಡು ಅವರಿಗೆ ಪಕ್ಕಾ ಹೇಳಿ ಮಾಡಿಸಿದಂತಿದೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಈ ಹಾಡು ನೋಡಿ ನಿರ್ದೇಶಕ ಮಠ ಗುರುಪ್ರಸಾದ್ ಖುದ್ದು ಈ ಹಾಡಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಹಾಡು ನನ್ನ ಬದುಕಿಗೆ ಹತ್ತಿರವಾಗಿದೆ ಎನ್ನುತ್ತಾ ತಮ್ಮ ಬದುಕಿನ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಎಲ್ಲವನ್ನೂ ಹೇಳಿದ್ದಾರೆ. ಮಂಜುನಾಥ್ ವಿಶ್ಚಕರ್ಮ ನಿರ್ಮಾಣದ ಈ ಚಿತ್ರದಲ್ಲಿ ಗುರುನಂದನ್, ಮೃದುಲಾ, ರವಿಶಂಕರ್, ಅಚ್ಚುತ್, ಚಿಕ್ಕಣ್ಣ, ಸಾಧುಕೋಕಿಲಾ ಮುಂತಾದವರು ನಟಿಸಿದ್ದಾರೆ.

     

    ಸದ್ಯ ಬೇಕಿತ್ತಾ ಬೇಕಿತ್ತಾ ಹಾಡಿನಿಂದ ಸದ್ದು ಮಾಡ್ತಿರೋ ರಾಜು ಜೇಮ್ಸ್ ಬಾಂಡ್ ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆಯಂತೆ. ರಾಜು ಸೀರಿಸ್ ಮೂಲಕ ಸಖತ್ ಫೇಮಸ್ ಆಗಿರುವ ಗುರುನಂದನ್ ಈ ಸಿನಿಮಾದ ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಿದ್ದಾರೆ.