Tag: Raju Gowda

  • ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?

    ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?

    ಬೆಂಗಳೂರು: ಖಾತೆ ವಿಚಾರಕ್ಕೆ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ರಾಜೀನಾಮೆಯ ಸಂದೇಶವೊಂದನ್ನು ಕಳುಹಿಸಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇಂದು ಅಥವಾ ನಾಳೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ರಾಜೀನಾಮೆಯ ಸಂದೇಶವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

    ರಾಜೀನಾಮೆ ಸಂದೇಶ ಕಳುಹಿಸುವ ಮೂಲಕ ಆನಂದ್ ಸಿಂಗ್ ಅವರು ಮತ್ತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಶಾಕ್ ಕೊಟ್ಟಿದ್ದಾರೆ. ಈ ಸಂದೇಶವನ್ನು ತಮ್ಮ ಆಪ್ತ ಶಾಸಕ ರಾಜೂಗೌಡ ಮೂಲಕ ರವಾನೆ ಮಾಡಿದ್ದಾರೆ. ಅಂತೆಯೇ ರಾಜೂ ಗೌಡ ಅವರು ಇಂದು ಬೆಳಗ್ಗೆ ಯಡಿಯೂರಪ್ಪ ಭೇಟಿ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿರುವ ಆನಂದ ಸಿಂಗ್, ಯಾವ ನಾಯಕರನ್ನೂ ಭೇಟಿ ಮಾಡದೇ ಅಜ್ಞಾತವಾಗಿದ್ದರು. ನಿನ್ನೆ ರಾತ್ರಿ  ಆಪ್ತನ ಜೊತೆ ಮಾತುಕತೆ ನಡೆಸಿರುವ ಆನಂದ್ ಸಿಂಗ್, ಇಂದು ಬೆಳಗ್ಗೆ ಆಪ್ತನ ಮೂಲಕ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

    ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆಯನ್ನು ನೀಡಲಾಗಿದೆ. ಆದರೆ ಈ ಖಾತೆಯಿಂದ ಆನಂದ್ ಅಸಮಾಧಾನಗೊಂಡಿದ್ದು, ಈ ಹಿಂದೆಯೂ ರಾಜೀನಾಮೆಯ ಎಚ್ಚರಿಕೆ ನೀಡಿದ್ದರು. ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ ಆದರೆ ನಿರಾಸೆ ಮಾಡಿರೋದಕ್ಕೆ ಸಾಕಷ್ಟು ಬೇಸರವಾಗಿದೆ. ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದು ಒಳಿತು ಎನ್ನುವದು ನನ್ನ ನಿಲುವು. ಮತ್ತೊಮ್ಮೆ ಸಿಎಂಗೆ ಮನವಿ ಮಾಡುತ್ತೇನೆ ಕೊಡದೆ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

  • ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

    ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

    ಬೆಂಗಳೂರು: ಪಿಕ್ಚರ್ ಅಭೀ ಬಾಕಿ ಹೈ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಆದರೆ ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ ಎಂದು ನಾವು ಕಾಲೆಳೆದಿದ್ದೇವೆ ಎಂದು ಶಾಸಕ ರಾಜೂ ಗೌಡ ಹೇಳಿದ್ದಾರೆ.

    ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಖಾತೆ ವಿಚಾರದಲ್ಲಿನ ಮುನಿಸು ಇನ್ನೂ ತಣ್ಣಗಾಗಿಲ್ಲ. ಈ ಕುರಿತು ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಣ್ಣ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿದ್ದೀಯಾ, ಥಿಯೇಟರ್ ಸಬ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ ಎಂದು ನಾವು ಆನಂದ್ ಸಿಂಗ್ ಅವರ ಕಾಲೆಳೆದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಇಡಿ ಬುಲಾವ್ -ದೆಹಲಿಗೆ ತೆರಳಿದ ಜಮೀರ್ ಅಹ್ಮದ್ ಖಾನ್!

    ಪಿಕ್ಚರ್ ಅಭೀ ಬಾಕಿ ಹೈ ಎಂದಿದ್ದೀಯಲ್ಲಣ್ಣ, ಕೊರೊನಾ ಇರುವುದರಿಂದ ಥೀಯೇಟರ್ ಬಂದ್ ಇದ್ದಾವೆ. ನೀನು ಎಲ್ಲಿ ಪಿಕ್ಚರ್ ಆರಂಭಿಸುತ್ತಿಯಣ್ಣ ಎಂದು ಹೀಗೆ ಮಾತನಾಡುತ್ತಿರುವಾಗ ಹಾಸ್ಯ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದರು.

    ಸಚಿವ ಆನಂದ್ ಸಿಂಗ್ ಅವರಿಗೆ ಖಾತೆ ವಿಚಾರದಲ್ಲಿ ಅಸಮಾಧಾನ ಇರುವುದು ನಿಜ. ಆದರೆ ನಾವೆಲ್ಲ ಸ್ನೇಹಿತರು ಅವರಿಗೆ ಮಾತಾಡಿದ್ದೇವೆ. ಈಗ ಸಮಾಧಾನ ಆಗಿದ್ದಾರೆ. ಅವರ ಕ್ಷೇತ್ರದಲ್ಲಿ ಧ್ವಜಾರೋಹಣ ಕೂಡ ಮಾಡಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸಿದಾಗ ಸಹ ಭೇಟಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಸಹ ಬರುತ್ತಾರೆ. ನಾವೂ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸಿದ್ದೇವೆ. ಖಾತೆ ಹಂಚಿಕೆಯಲ್ಲಿ ಅವರಿಗೆ ಅಸಮಧಾನ ಇರೋದು ಸತ್ಯ. ಆದರೆ ಹೈಕಮಾಂಡ್ ಬದಲಾಗಿ, ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.

  • ಸಮಸ್ಯೆ ಶೇ.100ರಷ್ಟು ಸುಖಾಂತ್ಯವಾಗಿದೆ, ಕೆಲ ತೀರ್ಮಾನಗಳನ್ನು ಹೇಳಲು ಸಾಧ್ಯವಿಲ್ಲ: ರಾಜೂ ಗೌಡ

    ಸಮಸ್ಯೆ ಶೇ.100ರಷ್ಟು ಸುಖಾಂತ್ಯವಾಗಿದೆ, ಕೆಲ ತೀರ್ಮಾನಗಳನ್ನು ಹೇಳಲು ಸಾಧ್ಯವಿಲ್ಲ: ರಾಜೂ ಗೌಡ

    ಬೆಂಗಳೂರು: ಅಂತೂ ಇಂತೂ ಸಚಿವ ಆನಂದ್ ಸಿಂಗ್ ಮನವೊಲಿಸುವ ಪ್ರಕ್ರಿಯೆ ಸಫಲವಾಗಿದ್ದು, ಸಮಸ್ಯೆ ಬಗೆ ಹರಿದೆ ಎಂದು ಶಾಸಕ ರಾಜೂ ಗೌಡ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾಧ್ಯಮದವರ ಬಳಿ ಮಾತನಾಡಿದ ಅವರು, ಆನಂದ್ ಸಿಂಗ್ ಅವರು ನನಗೆ ಆತ್ಮೀಯ ಸ್ನೇಹಿತರು, ಅವರ ಹಿತ ಬಯಸುವುದು ನನ್ನ ಕರ್ತವ್ಯ, ಪಕ್ಷದ ಒಬ್ಬ ಕಾರ್ಯಕರ್ತನಾಗಿ ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಆನಂದ್ ಸಿಂಗ್ ಅವರನ್ನು ಕರೆ ತಂದು ಬಿ.ಎಸ್.ಯಡಿಯೂರಪ್ಪನವರು ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿಯವರ ಬಳಿ ಮಾತನಾಡಿಸಿದ್ದೇನೆ. ಶೇ.100ರಷ್ಟು ಸಮಸ್ಯೆ ಸುಖಾಂತ್ಯ ಕಂಡಿದೆ. ಅವರು ಆಗಸ್ಟ್ 15ರಂದು ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಮುಂದೆ ಎಲ್ಲರೂ ಸೇರಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್ – ಸಿಎಂ ಸಂಧಾನ ಸಭೆ ಸಕ್ಸಸ್

    ಸದ್ಯಕ್ಕೆ ಗೊಂದಲ ಏನೂ ಇಲ್ಲ, ಕೆಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ಆನಂದ್ ಸಿಂಗ್, ಆರ್.ಅಶೋಕ್, ನಾನು ಸೇರಿ ಎಲ್ಲರೂ ಬದ್ಧರಿರುತ್ತೇವೆ. ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ಒಳ್ಳೆಯದಾಗುತ್ತದೆ. ಆಗಸ್ಟ್ 15 ರಂದು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಇದೇ ವೇಳೆ ಆರ್.ಅಶೋಕ್ ತಿಳಿಸಿದರು.

  • ಪಕ್ಷ ತಾಯಿ ಇದ್ದಂತೆ, ತುತ್ತು ತಡವಾಗಿ ಕೊಟ್ಟಿರಬಹುದು, ಯಾರೂ ಪ್ರತಿಭಟಿಸಬೇಡಿ: ರಾಜೂಗೌಡ

    ಪಕ್ಷ ತಾಯಿ ಇದ್ದಂತೆ, ತುತ್ತು ತಡವಾಗಿ ಕೊಟ್ಟಿರಬಹುದು, ಯಾರೂ ಪ್ರತಿಭಟಿಸಬೇಡಿ: ರಾಜೂಗೌಡ

    – ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಸಮಾಧಾನ ಹೇಳಿದ ಶಾಸಕ

    ಬೆಂಗಳೂರು: ಪಕ್ಷ ನಮ್ಮ ತಾಯಿ ಇದ್ದಂತೆ, ತಾಯಿ ಮಕ್ಕಳಿಗೆ ತುತ್ತು ನೀಡುವಾಗ ಸ್ವಲ್ಪ ತಡವಾಗಿರಬಹುದು ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಶಾಸಕನಾಗಿರುವುದು ಜನರ ಸೇವೆ ಮಾಡಲು, ಸಚಿವರಾದರೆ ಮಾತ್ರ ಮಾಡುತ್ತಾರೆಯೇ? ನನ್ನ ಕೆಲಸವನ್ನು ನಾನು ಮಾಡುತ್ತೇನೆ. ನನ್ನ ಜನರ ಮನವೊಲಿಸುವುದು ನನ್ನ ಧರ್ಮ. ಅಲ್ಲದೆ ನಮ್ಮ ಮುಖ್ಯಮಂತ್ರಿಗಳ ವಿರುದ್ಧ, ನಮ್ಮ ಪಕ್ಷದ ವಿರುದ್ಧ ಪ್ರತಿಭಟಿಸಲು ಸಾಧ್ಯವೇ? ಯಾರೂ ಈ ರೀತಿ ವರ್ತಿಸಬೇಡಿ ಎಂದು ಶಾಸಕ ರಾಜೂಗೌಡ ಅವರು ತಮ್ಮ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಪ್ರತಿಭಟನೆ ನಡೆಸುತ್ತಿದ್ದ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರ ಆಶೀರ್ವಾದದಿಂದ 3 ಬಾರಿ ಶಾಸಕನಾಗಿದ್ದೇನೆ. ಅವರು ಪ್ರತಿಭಟನೆ ನಡೆಸಿ ಕರ್ತವ್ಯವನ್ನು ಮಾಡಿದ್ದಾರೆ. ಇವರ ಸೇವೆ ಮಾಡುವುದು ನನ್ನ ಕರ್ತವ್ಯ, ಜನತೆಯ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ, ಧರಣಿ ಮಾಡುವುದು, ಪಕ್ಷದ ವಿರುದ್ಧ ಕೂಗುವುದು ಬೇಡ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೈ ತಪ್ಪಿದ ಸಚಿವ ಸ್ಥಾನ – ರೇಣುಕಾಚಾರ್ಯ ಕಣ್ಣೀರು

    ಪಕ್ಷ ನಮ್ಮ ತಾಯಿ ಇದ್ದಂತೆ, ತಾಯಿ ಮಕ್ಕಳಿಗೆ ತುತ್ತು ನೀಡುವಾಗ ಸ್ವಲ್ಪ ತಡವಾಗಿರಬಹುದು ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಶಾಸಕನಾಗಿರುವುದು ಜನರ ಸೇವೆ ಮಾಡಲು, ಸಚಿವರಾದರೆ ಮಾತ್ರ ಮಾಡುತ್ತಾರೆಯೇ? ನನ್ನ ಕೆಲಸವನ್ನು ನಾನು ಮಾಡುತ್ತೇನೆ ಅವರ ಮನವೊಲಿಸುವುದು ನನ್ನ ಧರ್ಮ ಎಂದು ತಿಳಿಸಿದರು.

    ಮುಂದಿನ ಬಾರಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಆಗ ನಾನು ಸಚಿವನಾಗುತ್ತೇನೆ. ನನ್ನ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ, ಪಕ್ಷ ವಿರುದ್ಧ ಯಾವುದೇ ಚಟುವಟಿಕೆ ಮಾಡಿಲ್ಲ, ಜನರೊಂದಿಗೆ ಬೆರೆತು ಸೇವೆ ಮಾಡುತ್ತಿದ್ದೇನೆ. ಹೀಗಾಗಿ ನನಗೆ ಬೇಸರವಿಲ್ಲ, ಪ್ರತಿಭಟಿಸಬೇಡಿ ಎಂದು ಬೆಂಬಲಿಗರಿಗೆ ನಾನು ಹೇಳಿದ್ದೇನೆ. ಆದರೂ ಅವರಿಗೆ ನನ್ನ ಮೇಲೆ ಹುಚ್ಚು ಪ್ರೀತಿ, ಇದಕ್ಕಾಗಿ ಬರುತ್ತಿದ್ದಾರೆ. ಯಾರೂ ಯಾರ ವಿರುದ್ಧವೂ ಪ್ರತಿಭಟಿಸುವುದು ಬೇಡ, ಇದೇ ಮೊದಲಲ್ಲ ನನಗೆ ಈ ರೀತಿ 6ನೇ ಬಾರಿ ಆಗುತ್ತಿದೆ. ಹೀಗಾಗಿ ನಾನಿದನ್ನು ನಿಭಾಯಿಸುತ್ತೇನೆ. ಒಳ್ಳೆಯ ಕೆಲಸ ಮಾಡಿ ಮುಂದೆ ಬರುತ್ತೇನೆ. ಇದರಿಂದ ನನಗೆ ಬೇಸರ ಇಲ್ಲ, ಆಗಲೇ ರೂಢಿ ಆಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಹೆದರಿಸಿದ್ರೆ ಸಚಿವ ಸ್ಥಾನ ನೀಡುವ ಹೈಕಮಾಂಡ್ ಇದಲ್ಲ: ರಾಜೂಗೌಡ

    ಹೆದರಿಸಿದ್ರೆ ಸಚಿವ ಸ್ಥಾನ ನೀಡುವ ಹೈಕಮಾಂಡ್ ಇದಲ್ಲ: ರಾಜೂಗೌಡ

    – ಸಚಿವ ಸ್ಥಾನ ಸಿಗಲಿ ಅಂತ ಪ್ರತಿಭಟನೆ ಮಾಡಬೇಡಿ

    ಯಾದಗಿರಿ: ದಯವಿಟ್ಟು ಯಾರೂ ನನಗೆ ಸಚಿವ ಸ್ಥಾನ ಸಿಗಲಿ ಅಂತ ಪ್ರತಿಭಟನೆ ಮಾಡಬೇಡಿ. ಹೆದರಿಸಿದ್ರೆ ಸಚಿವ ಸ್ಥಾನ ನೀಡುವ ಹೈಕಮಾಂಡ್ ಇದಲ್ಲ. ನಮಗೆ ಸಚಿವ ಸ್ಥಾನ ಸಿಗುವ ಆಸೆ ಇದೆ, ಆದರೆ ದುರಾಸೆ ಇಲ್ಲ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.

    ನೂತನ ಸಿಎಂರವರ ಸಚಿವ ಸಂಪುಟ ರಚನೆ ವಿಚಾರವಾಗಿ ಹುಣಸಗಿಯಲ್ಲಿ ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಅವರು, ನನಗೆ ಅದೃಷ್ಟ ಇಲ್ಲ. ಹೀಗಾಗಿ ಎಲ್ಲಾ ಅರ್ಹತೆ ಇದ್ದರೂ ನನಗೆ ಸಚಿವ ಸ್ಥಾನ ದೊರೆಯುತ್ತಿಲ್ಲ. ಸಚಿವ ಸ್ಥಾನದ ಆಯ್ಕೆಗೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ, ಯಾರನ್ನು ಸಚಿವರನ್ನಾಗಿ ಮಾಡಬೇಕು ಯಾರನ್ನು ಮಾಡಬಾರದೆಂದು ನಾಯಕರು ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    ಕಲ್ಯಾಣ ಕರ್ನಾಟಕ, ಕರಾವಳಿ, ಮೈಸೂರು ಭಾಗಕ್ಕೆ ಕಳೆದ ಬಾರಿ ಸಚಿವ ಸ್ಥಾನ ನೀಡುವಲ್ಲಿ ಸಮಸ್ಯೆ ಆಗಿತ್ತು. ಈ ಬಾರಿ ಮಾಜಿ ಸಿಎಂ ಬಿಎಸ್‍ವೈ, ಬಿಜೆಪಿ ರಾಜ್ಯಾಧ್ಯಕ್ಷರು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಡ್ಡಾ ಸಮಸ್ಯೆ ಆಗದಂತೆ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.

  • ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    – ರಾಜುಗೌಡ ಅಭಿಮಾನಿಗಳಿಂದ ಎಚ್ಚರಿಕೆಯ ಸಂದೇಶ

    ಯಾದಗಿರಿ/ಶಿವಮೊಗ್ಗ: ಶಾಸಕರಾದ ರಾಜೂಗೌಡ ಮತ್ತು ಕುಮಾರ್ ಬಂಗಾರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಕುಮಾರ್ ಬಂಗಾರಪ್ಪ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನ ಸಿಗುವಂತೆ ಪ್ರಾರ್ಥಿಸಿದರು.

    ಸೊರಬ ತಾಲೂಕಿನ ಮತ್ತು ರಾಜ್ಯದ ಅಭಿವೃದ್ಧಿ, ಪಕ್ಷದ ಸಂಘಟನೆಗಾಗಿ, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಹೆಸರಿನಲ್ಲಿ ಅವರ ಕುಲ ದೇವರಾದ ತಾಲೂಕಿನ ಮಂಚಿ ಆಂಜನೇಯ ಸ್ವಾಮಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಉದ್ರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಸುರೇಶ್, ಸುರೇಂದ್ರ, ಶಿವಮೂರ್ತಿ ಹಲವರು ಹಾಜರಿದ್ದರು. ಇದನ್ನೂ ಓದಿ: ಶೆಟ್ಟರ್ ರೀತಿ ಮಂತ್ರಿ ಸ್ಥಾನ ಬೇಡ ಎನ್ನಲ್ಲ: ಈಶ್ವರಪ್ಪ

     

    ರಾಜುಗೌಡ ಅಭಿಮಾನಿಗಳಿಂದ ಪ್ರತಿಭಟನೆ: ಸುರಪುರ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಯಾದಗಿರಿಯಲ್ಲಿ ಶಾಸಕ ರಾಜುಗೌಡ ಅಭಿಮಾನಿ ಬಳಗವು ಪ್ರತಿಭಟನೆ ನಡೆಸಲಾಯಿತು. ನಗರದ ವಾಲ್ಮೀಕಿ ವೃತ್ತದಲ್ಲಿ ಬಳಗದ ಸದಸ್ಯರು ಸೇರಿ ಹಿಂದುಳಿದ ಜಿಲ್ಲೆ ಯಾದಗಿರಿ ಸಮಗ್ರ ಅಭಿವೃದ್ಧಿ ಗಾಗಿ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡಿ ಯಾದಗಿರಿ ಜಿಲ್ಲೆಗೆ ಪ್ರಾಮುಖ್ಯತೆ ನೀಡಬೇಕೆಂದು ಬಿಜೆಪಿ ಹೈಕಮಾಂಡಗೆ ಒತ್ತಾಯ ಮಾಡಿದರು.

    ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರಾಜುಗೌಡ ಅವರಿಗೆ ಸೂಕ್ತ ಸಚಿವ ಸ್ಥಾನ ಒದಗಿಸಿ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಗೆ ಸಚಿವ ಸ್ಥಾನ ಒದಗಿಸಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನೆ ನಿರತರು ಎಚ್ಚರಿಕೆ ನೀಡಿದರು.  ಇದನ್ನೂ ಓದಿ: ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು

  • ಕತ್ತಿಯವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ: ರಾಜೂಗೌಡ

    ಕತ್ತಿಯವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ: ರಾಜೂಗೌಡ

    ಯಾದಗಿರಿ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ ಅವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಎಂದು ಸುರಪುರ ಶಾಸಕ ರಾಜೂಗೌಡ ಸ್ವಪಕ್ಷದ ಸಚಿವರಿಗೆ ಟಾಂಗ್ ನೀಡಿದ್ದಾರೆ.

    ಈ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನಮ್ಮದೇ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ ಆಗಿದೆ ಎಂದು ಸ್ವಪಕ್ಷದ ಸಚಿವರಾದ ಉಮೇಶ್ ಕತ್ತಿಯವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೂಗೌಡ, ಬೆಳಗಾವಿಗೆ ಇನ್ನೂ ಏನು ಕೊಡಬೇಕು, ಅನ್ಯಾಯ ಎನ್ನುವ ಪದ ಬೆಂಗಳೂರು ಮತ್ತು ಬೆಳಗಾವಿ ಭಾಗದವರ ಬಾಯಿಯಲ್ಲಿ ಬರಬಾರದು. ಬಸವಣ್ಣನವರ ಆಶೀರ್ವಾದದಿಂದ ನಮ್ಮ ಭಾಗದಲ್ಲಿ ನಮ್ಮ ಪಕ್ಷದಿಂದ ಎಷ್ಟು ಜನ ಗೆದ್ದರು ನಮಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ -ಬಲೆಗೆ ಬಿದ್ದವರೆಲ್ಲ ಕೋಟಿ ಕೋಟಿ ಕುಳಗಳು

    ಕಲ್ಯಾಣ ಕರ್ನಾಟಕದಂತೆ, ಕರಾವಳಿ ಮತ್ತು ಮೈಸೂರು ಭಾಗಕ್ಕೆ ಸಹ ಅನ್ಯಾಯವಾಗಿದೆ. ಆದರೆ ಬೆಳಗಾವಿಗೆ ಸಾಕಷ್ಟು ಕೊಟ್ಟಿದ್ದಾರೆ. ಇವರಿಗೆ ಮತ್ತೇನು ಬೇಕು, ಮೋದಿಯವರೇ ದಯವಿಟ್ಟು ಉಮೇಶ್ ಕತ್ತಿಯವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಎಂದು ಉಮೇಶ್ ಕತ್ತಿಗೆ ರಾಜೂಗೌಡ ಚಮಕ್ ನೀಡಿದ್ದಾರೆ.

  • ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ಯಾದಗಿರಿ: ಸೋತು ಯಡಿಯೂರಪ್ಪನವರ ಆಶೀರ್ವಾದದಿಂದ ಸಚಿವರಾದವರು ನಡೆಸಿದ ಹುನ್ನಾರದಿಂದ ಸಿಎಂ ಮನನೊಂದು ರಾಜೀನಾಮೆ ಮಾತುಗಳನ್ನಾಡಿದ್ದಾರೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮುಂದಿನ ಎರಡು ವರ್ಷ ಸಿಎಂ ಯಡಿಯೂರಪ್ಪ ಅಂತ ಈಗಾಗಲೇ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮತ್ತು ಅನಂತಕುಮಾರ್ ಪರಿಶ್ರಮ ಸಾಕಷ್ಟಿದೆ. ಜನರಿಂದ ಆಯ್ಕೆದ ಪಕ್ಷದ ಎಲ್ಲಾ ಶಾಸಕರ ಬೆಂಬಲ ನಿಮಗಿದೆ ಎಂದು ಪರೋಕ್ಷವಾಗಿ ಸಚಿವರ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಯಡಿಯೂರಪ್ಪ ಸರ್ ನಿಮ್ಮ ಹೋರಾಟದ ಹಾದಿ ಬಗ್ಗೆ ನಿಮ್ಮ ರಾಜಕೀಯ ಜೀವನದ ಬಗ್ಗೆ ರಾಜ್ಯದ ಜನತೆ ಗೊತ್ತು. ನಿಮ್ಮ ಹೇಳಿಕೆಯಿಂದ ಲಕ್ಷಾಂತರ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ನಿಮ್ಮ ಜೊತೆಗೆ ಸಂಘ ಪರಿವಾರ, ಪಕ್ಷ ಜನರು ಇದ್ದಾರೆ ಅಂತ ತಮ್ಮ ಬೆಂಬಲ ನೀಡಿದ್ದಾರೆ ಎಂದರು. ಇದನ್ನೂ ಓದಿ:ಎಲ್ಲಿಯವರೆಗೆ ಹೈಕಮಾಂಡ್‍ಗೆ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ – ಬಿಎಸ್‍ವೈ 

    ಸಿಎಂ ಹೇಳಿದ್ದೇನು?: ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಕ್ರಾಂತಿಯ ಮುನ್ಸೂಚನೆ ನೀಡಿದೆಯಾ ಬಿಜೆಪಿ ಹೈಕಮಾಂಡ್?

    ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕಾರಣಿಗಳಲ್ಲಿ ಬಹಳ ತಂತ್ರ ಇರುತ್ತದೆ. ರಾಜಕಾರಣದಲ್ಲಿ ಒಂದು ನೀತಿ ಇದೆ. ಹೇಳೋದೊಂದು ಮಾಡೊದೊಂದು ಇರುತ್ತದೆ. ರಾಜಕಾರಣದಲ್ಲಿ ಯಡಿಯೂರಪ್ಪನವರ ತಂತ್ರ ಬೇರೆ. ಯಡಿಯೂರಪ್ಪ ಇರೋದರಲ್ಲಿ ಗಟ್ಟಿ ಮನುಷ್ಯ. ಅವರ ನಾಯಕತ್ವದಲ್ಲಿ 104 ಸೀಟ್ ಬಂದಿದೆ. ಅವರ ನಾಯಕತ್ವದಡಿಯಲ್ಲಿ ನಮ್ಮ ಸ್ನೇಹಿತರು ಅಲ್ಲಿಗೆ ಹೋದರು. ಈಗ ಸುಮ್ಮನೆ ಅವರನ್ನು ತಗೆದು ಹಾಕುವ ಮಾತು ಅವರ ಪಾರ್ಟಿಗೆ ಬಿಟ್ಟಿದ್ದು ಎಂದಿದ್ದರು. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

  • ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‍ಡೌನ್ ಮುಂದುವರಿಸಿ- ರಾಜುಗೌಡ

    ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‍ಡೌನ್ ಮುಂದುವರಿಸಿ- ರಾಜುಗೌಡ

    ಯಾದಗಿರಿ: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹೊತ್ತಲ್ಲಿ ಅನ್‍ಲಾಕ್ ಮಾಡಬಾರದು. ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಸುರಪುರ ಶಾಸಕ ರಾಜುಗೌಡ ಸಿಎಂ ಬಿಎಸ್‍ವೈಗೆ ಒತ್ತಾಯ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಲಾಕ್‍ಡೌನ್‍ನಿಂದ ಬಡ ಜನರು ಕಷ್ಟದಲ್ಲಿದ್ದಾರೆ. ಬಡವರಿಗೆ ಆರ್ಥಿಕ ಸಹಾಯದ ಪ್ಯಾಕೇಜ್ ಘೋಷಣೆ ಮಾಡಿ ಸಿಎಂ ಅವರು ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ:ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ

    ತಜ್ಞರ ವರದಿ ಆಧರಿಸಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುವುದು ಒಳಿತು. ಲಾಕ್‍ಡೌನ್ ವಿಸ್ತರಣೆ ಮಾಡಿದರೆ ದಿನಸಿ ಸಾಮಾಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು, ಲಾಕ್‍ಡೌನ್ ವಿಸ್ತರಿಸದೆ ಇದ್ದರೆ ಬಹಳ ಕಷ್ಟವಾಗುತ್ತದೆ. ಯಡಿಯೂರಪ್ಪ ಅವರು ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದು, ಬಿಎಸ್‍ವೈ ಬಿಟ್ಟು ಬೇರೆ ಯಾರೇ ಸಿಎಂ ಇಗಿದ್ದರು ಕೂಡ ಸರ್ಕಾರ ನಡೆಸಲು ಬಹಳ ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

  • ಸಿಎಂ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ: ರಾಜು ಗೌಡ

    ಸಿಎಂ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ: ರಾಜು ಗೌಡ

    – ಸಿ.ಪಿ ಯೋಗೇಶ್ವರ್ ವಿರುದ್ಧ ಶಾಸಕ ತಿರುಗೇಟು

    ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂದು ಮತ್ತೆ ಸಿ.ಪಿ ಯೋಗೇಶ್ವರ್ ವಿರುದ್ಧ ಸುರಪುರ ಶಾಸಕ ರಾಜು ಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜು ಗೌಡ, ಸಿಎಂ ಮೇಲೆ ಹಾಗೂ ರಾಜ್ಯದ ಜನರ ಮೇಲೆ ಯಾರು ವಿಶ್ವಾಸ ಇಟ್ಟು ಕೆಲಸ ಮಾಡುತ್ತಾರೆ ಅಂತವರನ್ನು ಸಂಪುಟದಲ್ಲಿ ಮುಂದುವರೆಸಬೇಕು. ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ ಎಂದು ಮತ್ತೆ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ. ಕಳ್ಳ, 420 ಯೋಗೇಶ್ವರ್‌ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ

    ರಾಜು ಗೌಡರ ಹಿಂದೆ ಒಂದು ಶಕ್ತಿ ಇದೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆ ತಿರುಗೇಟು ನೀಡಿದ ಶಾಸಕರು, ನನ್ನ ಹಿಂದೆ ಸುರಪುರ ಜನತೆ ಶಕ್ತಿ ಇದೆ, ಮತಬಾಂಧವರ ಶಕ್ತಿ ಇದೆ. ಈ ಧೈರ್ಯದ ಮೇಲೆ ಮಾತನಾಡುತ್ತೇನೆ. ಅಲ್ಲದೇ ನಾನು ಒಳ್ಳೆ ಕೆಲಸ ಮಾಡುತ್ತೇನೆ. ನನಗೆ ಬಕೆಟ್ ಹಿಡಿಯೋಕೆ ಬರುವುದಿಲ್ಲ. ಬಕೆಟ್ ಹಿಡಿಯುವ ಮನುಷ್ಯ ಆದ್ರೆ ಮಾತನಾಡುವುದಕ್ಕೆ ಧೈರ್ಯ ಬರೋದಿಲ್ಲ ಎಂದರು.

    ಯೋಗೇಶ್ವರ್ ವಿರುದ್ಧ ಮೊದಲು ಮಾತಾಡಿದ್ದೇನೆ. ಈಗಲೂ ಮಾತಾಡುತ್ತೇನೆ. ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದರೆ ಶಹಬ್ಬಾಶ್ ಗಿರಿ ಕೊಡುತ್ತೇವೆ. ಈ ರೀತಿ ಕೆಟ್ಟ ಕೆಲಸ ಮಾಡಿದರೆ ತಕ್ಕ ಉತ್ತರ ಕೊಡುವ ಶಕ್ತಿ ಸುರಪುರ ಮತ ಕ್ಷೇತ್ರದ ಜನತೆ ಕೊಟ್ಟಿದೆ, ಹಾಗಾಗಿ ಮಾತನಾಡುತ್ತಿದ್ದೇನೆ. ಸುರಪುರ ಜನರು ಕೈ ಹಿಡಿದರೆ ರಾಜು ಗೌಡ ಶಾಸಕರಾಗ್ತಾರೆ. ಬೇರೆ ಯಾರೋ ಯೋಗೇಶ್ವರ್ ಮಾತು ಕೇಳಿ ಶಾಸಕ ಆಗಲ್ಲ ಎಂದರು.