ಯಾದಗಿರಿ: ಬಿಜೆಪಿ (BJP) ಶಾಸಕ ರಾಜುಗೌಡ (Raju Gowda) ಚುನಾವಣೆಯಲ್ಲಿ (Election) ಗೆಲ್ಲಬೇಕು ಎಂದು ಅಭಿಮಾನಿಗಳಿಬ್ಬರು ವಿಚಿತ್ರ ಹರಕೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.
ಸುಡುವ ಬಿಸಿಲನ್ನು ಲೆಕ್ಕಿಸದೆ ಅಭಿಮಾನಿಗಳಿಬ್ಬರು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಸುರಪುರ (Surapur) ಮತಕ್ಷೇತ್ರದ ಶಾಸಕ ರಾಜುಗೌಡ ಮತ್ತೊಮ್ಮೆ ಗೆದ್ದು ಬರಲಿ ಎಂದು ಕರ್ನಾಳ ಗ್ರಾಮದ ಮಲ್ಲನಗೌಡ ಹಾಗೂ ಭೀಮಣ್ಣ ಎಂಬ ಇಬ್ಬರು ಅಭಿಮಾನಿಗಳು ಗ್ರಾಮದಿಂದ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಎಸ್‌ವೈ ಕಿಡಿ
ನಂತರ ಅಭಿಮಾನಿಗಳು ದೇವಾಲಯದಲ್ಲಿ ತಮ್ಮ ನಾಯಕನ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಶಾಸಕ ರಾಜುಗೌಡ ಅವರ ಪೋಟೋ ಹಿಡಿದು ಅಭಿಮಾನ ಮೆರೆದಿದ್ದಾರೆ.
ಯಾದಗಿರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Election) ಕಾವು ರಂಗೇರುತ್ತಿದ್ದಂತೆ, ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಕೊಂಡು, ಮತದಾರರ ಓಲೈಕೆ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಯಾದಗಿರಿಯ (Yadagiri) ಸುರಪುರದ ಬಿಜೆಪಿ (BJP) ಶಾಸಕ ರಾಜೂಗೌಡ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆಯಲ್ಲಿ ಮುಸ್ಲಿಂ ಟೋಪಿ ಧರಿಸುವ ಮೂಲಕ, ಮತಗಳ ಓಲೈಕೆ ಮಾಡಲು ಶುರುಮಾಡಿದ್ದಾರೆ.
ಇಡೀ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಒಡನಾಟ ಇಟ್ಕೊಂಡಿರುವ ಶಾಸಕ ರಾಜೂಗೌಡ (Raju Gowda), ಭಾವೈಕ್ಯತೆ ಮೆರೆಯುವ ಮೂಲಕ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಮುಸ್ಲಿಂ ಟೋಪಿ ಧರಿಸಿ ಬಿಲಾಲ್ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಜೂಗೌಡ ಕೋಮು ಸೌಹಾರ್ದತೆಯ ಸಂದೇಶ ಸಾರಿದರು.
ತಾವು ಮುಸ್ಲಿಂ ಟೋಪಿ ಧರಿಸಿ, ಮುಸ್ಲಿಂ ಸಮುದಾಯದವರಿಗೆ ಕೇಸರಿ ಶಾಲು ಹೊದಿಸಿ ಭ್ರಾತೃತ್ವ ಭಾವನೆ ಮೆರೆದ ಶಾಸಕ ರಾಜೂಗೌಡ, ನಾನೊಬ್ಬ ಹಿಂದೂ ಆಗಿ ಮುಸ್ಲಿಂ ಟೋಪಿ ಹಾಕೊಳ್ಳುತ್ತೇನೆ. ನನ್ನ ಪಕ್ಕದಲ್ಲಿರುವ ಮುಸ್ಲಿಂ ಸ್ನೇಹಿತ ಒಬ್ಬ ಮುಸ್ಲಿಂ ಆಗಿ ಕೇಸರಿ ಶಾಲು ಹಾಕಿಕೊಳ್ಳುತ್ತಾನೆ. ನಮ್ಮಲ್ಲಿ ಯಾವುದೇ ಜಾತಿ-ಧರ್ಮ, ಬೇಧ-ಭಾವ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದ ಇನ್‌ಸ್ಪೆಕ್ಟರ್ ಅಮಾನತು
ರಾಜ್ಯದಲ್ಲಿ ಧರ್ಮ ದಂಗಲ್ ನಡುವೆ, ರಾಜೂಗೌಡರ ಈ ನಡೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಇದು ಕೇವಲ ಚುನಾವಣೆ ತಂತ್ರಗಾರಿಕೆಯ ಗಿಮಿಕ್ ಆಗದಿರಲಿ ಅಂತಾನೂ ಕೆಲವರು ಕಾಲೆಳೆದಿದ್ದಾರೆ. ಇದನ್ನೂ ಓದಿ: ರಾಯಲಸೀಮ, ರಕ್ತ ಸಿಕ್ತ ರಾಜಕಾರಣಕ್ಕೆ ಫೇಮಸ್ ಶ್ರೀನಿವಾಸಪುರ
ಯಾದಗಿರಿ: ಸಿದ್ದರಾಮಯ್ಯಗೆ ಕೋಲಾರದಲ್ಲಿ (Kolar) ಸ್ಪರ್ಧಿಸುವುದು ಬೇಡ ಎಂದು ರಾಹುಲ್ ಗಾಂಧಿ ಹೇಳುವುದು ತಪ್ಪು ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪರ ಬಿಜೆಪಿ ಶಾಸಕ ರಾಜುಗೌಡ (Raju Gowda) ಬ್ಯಾಟ್ ಬೀಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ (Congress) ಪಕ್ಷದ ಪ್ರಮುಖ ನಾಯಕರು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್‌ನವರೇ ಹುನ್ನಾರ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಯೇ ಕೋಲಾರಕ್ಕೆ ಹೋಗಿದ್ದರು. ಕೋಲಾರದಲ್ಲಿ ನಿಲ್ಲುವ ಬಗ್ಗೆ ಘೋಷಣೆ ಮಾಡಿ, ಹಲವು ಸಭೆಗಳನ್ನು ಮಾಡಿದ್ದಾರೆ. ಘೋಷಣೆಗೂ ಮುನ್ನ ಬೇಡ ಎಂದರೆ ಸರಿಯಿತ್ತು. ಆದರೆ ಈಗ ರಾಹುಲ್ ಗಾಂಧಿ (Rahul Gandhi) ಅವರು ಸಿದ್ದರಾಮಯ್ಯಗೆ ಕೋಲಾರದಲ್ಲಿ ಸ್ಪರ್ಧಿಸುವುದು ಬೇಡ ಎನ್ನುವುದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: 5 ವರ್ಷದಲ್ಲಿ ಎನ್‍ಜಿಓಗಳಿಗೆ 89,000 ಕೋಟಿ ರೂ. ವಿದೇಶಿ ನಿಧಿ- ಕರ್ನಾಟಕಕ್ಕೆ 2ನೇ ಸ್ಥಾನ
ರಾಜಕೀಯವಾಗಿ ಎತ್ತರಕ್ಕೆ ಬೆಳೆದಾಗ ಸ್ವಪಕ್ಷದಲ್ಲಿ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅವರ ಪಕ್ಷದವರೇ ಸೋಲಿಸಲು ಪ್ಲ್ಯಾನ್ ಮಾಡುತ್ತಿರಬಹುದು. ಇದು ರಾಹುಲ್ ಗಾಂಧಿಗೆ ಮೆಸೇಜ್ ತಲುಪಿ ಈ ರೀತಿ ಹೇಳಿರಬಹುದು. ಆದರೆ ಕೋಲಾರದಲ್ಲಿ ಸ್ಪರ್ಧೆ ಬೇಡ ಅನ್ನೋದು ತಪ್ಪು, ಅವರೊಬ್ಬ ದೊಡ್ಡ ನಾಯಕರು. ದೇವೆಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇಂತವರಿಗೆ ಕ್ಷೇತ್ರದ ಬಗ್ಗೆ ಬೇಡ ಎನ್ನುವುದು ತಪ್ಪು ಎಂದರು. ಇದನ್ನೂ ಓದಿ:ಕೋಲಾರದಿಂದ ಸಿದ್ದು ಸ್ಪರ್ಧೆಗೆ ರೆಡ್ ಸಿಗ್ನಲ್ – ವರುಣಾದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದ್ದು ಯಾಕೆ?
ಯಾದಗಿರಿ: ನಾನು ರಾಜಕಾರಣದಲ್ಲಿ ಮುಂದೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ, ನಮ್ಮ ಸಮುದಾಯವನ್ನು ಮುನ್ನಡೆಸುವ ಶಕ್ತಿ ರಾಜೂ ಗೌಡರಿಗೆ (Raju Gowda) ಇದೆ. ಹೀಗಾಗಿ ರಾಜೂ ಗೌಡರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಸಚಿವ ಶ್ರೀರಾಮುಲು (Sriramulu) ಭಾವುಕರಾಗಿ ಹೇಳಿದರು.
ಹುಣಸಗಿಯಲ್ಲಿ ನಡೆದ ಬಿಜೆಪಿ (BJP) ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು ತಮ್ಮ ಭಾಷಣದುದ್ದಕ್ಕೂ ರಾಜೂ ಗೌಡರನ್ನು ಬೆಂಬಲಿಸುವಂತೆ ಜನತೆಯಲ್ಲಿ ಪ್ರಾರ್ಥಿಸಿದರು. ಹುಣಸಗಿ ತಾಲೂಕು ಘೋಷಣೆ ಬಳಿಕ ನಿಮ್ಮ ಆಶೀರ್ವಾದ ಪಡೆಯಲು ಸಿಎಂ ಹಾಗೂ ನಾವು ಎಲ್ಲಾ ಬಂದಿದ್ದೇವೆ. ರಾಜೂ ಗೌಡ 3 ಬಾರಿ ಶಾಸಕರಾಗಿದ್ದಾರೆ. ನುಡಿದಂತೆ ನಡೆಯುವ ವ್ಯಕ್ತಿ ರಾಜೂ ಗೌಡರನ್ನು 4ನೇ ಬಾರಿ ಗೆಲ್ಲಿಸಬೇಕು. ಸಿಎಂ ಅವರು ಕಲ್ಯಾಣ ರಾಜ್ಯದ ಸಂಕಲ್ಪ ಮಾಡಿ ಇಲ್ಲಿಗೆ ಬಂದಿದ್ದಾರೆ. ಕಲ್ಯಾಣ ರಾಜ್ಯ ಆಗಬೇಕು, ಕಲ್ಯಾಣ ಕರ್ನಾಟಕ ಆಗಬೇಕು. ರಾಜೂ ಗೌಡ ಸೇರಿ 150 ಸ್ಥಾನ ಗೆಲ್ಲಬೇಕು. ರಾಜೂ ಗೌಡ ನಮ್ಮ ಸಮುದಾಯದ ಭವಿಷ್ಯದ ನಾಯಕರು ಎಂದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಬೇರು ಸಹಿತ ಕಿತ್ತು ಹಾಕಬೇಕು. ಬೊಮ್ಮಾಯಿಯವರನ್ನು (Basavaraj Bommai) ಮತ್ತೆ ಸಿಎಂ ಮಾಡಬೇಕು. ಬಹಳ ಸಿಎಂಗಳು ಮೈಸೂರು ಭಾಗ ಅಭಿವೃದ್ಧಿ ಮಾಡ್ತಾರೆ, ಬಹಳ ಮಂದಿ ಸಿಎಂ ಆಗಬೇಕು ಅಂತ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮೈಸೂರು ಭಾಗದಿಂದ ಆಗುವ ಸಿಎಂಗಳು ಕೇವಲ ಆ ಭಾಗದ ಅಭಿವೃದ್ಧಿ ನೋಡುತ್ತಾರೆ. ಬೊಮ್ಮಾಯಿ ತಂದೆಯವರು ಸಿಎಂ ಆಗಿದ್ದರು. ಅವರು ಹಿಂದುಳಿದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದರು. ಈಗ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ. ಬಸವಣ್ಣನ ರೀತಿ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಬೊಮ್ಮಾಯಿ ಮಾಡುತ್ತಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಹೈಕಮಾಂಡ್ ಕೈ ಕಾಲು ಕಟ್ಟಿ ಹಾಕಿ, ಖರ್ಗೆ ಕೈಯಲ್ಲಿ ಕೆಲಸ ಮಾಡಿಸ್ತಾರೆ: ಸುಧಾಕರ್
371 ಅಡಿ ಬಂದಿರುವ ಪ್ರತಿ ಪೈಸೆಯ ಲೆಕ್ಕ ಸಿಗಬೇಕು ಅಂತ ಸಮಿತಿ ಅಧ್ಯಕ್ಷರನ್ನಾಗಿ ನನ್ನನ್ನು ಮಾಡಿದ್ದಾರೆ. ಅಧ್ಯಕ್ಷನಾದ ಮೇಲೆ 87 ಸಾವಿರ ಹುದ್ದೆ ಗುರುತಿಸುವ ಕೆಲಸ ಮಾಡಿದ್ದೇನೆ. 36 ಇಲಾಖೆಯಲ್ಲಿ ನೇರ ನೇಮಕಾತಿ ಮಾಡುತ್ತಿದ್ದೇವೆ. 68 ಸಾವಿರ ಹುದ್ದೆ ಭರ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮುಂಬಡ್ತಿಯಲ್ಲಿ ಆಗಿದ್ದ ಅನ್ಯಾಯ ಸರಿಪಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಈ ಹಿಂದೆ ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ನಾಯಕರು, ಅವರ ಹಿಂಬಾಲಕರು ಅಭಿವೃದ್ಧಿ ಆಗಿದ್ದರು. ಆದರೆ ಈ ಭಾಗದ ಜನ ಅಭಿವೃದ್ಧಿ ಆಗಿರಲಿಲ್ಲ. ಈ ಭಾಗಕ್ಕೆ 3 ಸಾವಿರ ಕೋಟಿ ರೂ. ಅನುದಾನ ಕೊಡುವ ಕೆಲಸ ಸಿಎಂ ಮಾಡಿದ್ದಾರೆ. ಸಾಲದಿದ್ದರೆ ಮುಂದಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಕೊಡಲು ಸಿದ್ಧರಿದ್ದಾರೆ ಎಂದರು.
ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಮಾಡಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಡಿದ್ದು ಬಿಜೆಪಿ ಸರ್ಕಾರ. ನಮ್ಮ ಹಾಸ್ಟೆಲ್‌ನಲ್ಲಿನ ಮಕ್ಕಳು ಉತ್ತಮ ಅಂಕ ಪಡೆದು ಉನ್ನತ ಹುದ್ದೆಗೇರುತ್ತಿದ್ದಾರೆ. ಸಿಎಂ ಮೀಸಲಾತಿ ಕೊಡಲ್ಲ ಅಂತ ನಮ್ಮನ್ನು ಹಲವರು ಗೇಲಿ ಮಾಡುತ್ತಿದ್ದರು. ಹೃದಯವಂತರಾದ ಬೊಮ್ಮಾಯಿಯವರು ಮೀಸಲಾತಿ ಹೆಚ್ಚಿಸಿದ್ದಾರೆ. ಇನ್ನೂ ಹೊಸ ತಾಲೂಕು ಕೇಂದ್ರ ಹುಣಸಿಗಿಗೆ ಬಸ್ ಡಿಪೋ ಬೇಡಿಕೆಯಿದೆ ಅದನ್ನೂ ಕೊಡುವ ಕೆಲಸ ಮಾಡುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಭರವಸೆ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿಯಲ್ಲ, ಮುಂದೆಯೂ ಆಗಲ್ಲ – ಬೊಮ್ಮಾಯಿ ಭವಿಷ್ಯ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ 371ಜೆ ಪ್ರಕಾರ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದ ವಿಚಾರವಾಗಿ ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು ಎಂದು ವಿಧಾನಸಭೆಯಲ್ಲಿ ಶಾಸಕ ರಾಜುಗೌಡ ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ 371ಜೆ ಪ್ರಕಾರ ಮೀಸಲಾತಿ ನೀಡದ ವಿಚಾರವಾಗಿ ಶೂನ್ಯವೇಳೆಯಲ್ಲಿ ಶಿವರಾಜ್ ಪಾಟೀಲ್ ಪ್ರಸ್ತಾಪ ಮಾಡಿದರು. ರಾಯಚೂರು ನವೋದಯ ವೈದ್ಯಕೀಯ ಕಾಲೇಜು ಮಂಡಳಿ 371-ಜೆ ಕುತ್ತು ತರುವಂತೆ ನಡೆದುಕೊಂಡಿದೆ. ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಕೊಡುವುದಕ್ಕೆ ಆಗಲ್ಲ ಎಂದು ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಧ್ವನಿಗೂಡಿಸಿದ ಶಾಸಕ ರಾಜುಗೌಡ, ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು 371ಜೆ ನಮಗೆ ಹೋರಾಟದಿಂದ ಬಂದಿರುವುದು, ಇದನ್ನು ಪಡೆದುಕೊಳ್ಳಲು ಬಲಿದಾನ ಆಗಿದೆ ನಮ್ಮ ಸೌಲಭ್ಯ ತೆಗೆದುಕೊಂಡು ನಮ್ಮ ಮಕ್ಕಳಿಗೆ ಮೀಸಲಾತಿ ಕೊಡಲ್ಲ ಅಂದ್ರೆ ಹೇಗೆ? ಪ್ರಶ್ನಿಸಿದರು. ಇದನ್ನೂ ಓದಿ: ಜನ ಆಡಳಿತ ಪಕ್ಷದಲ್ಲಿ ಏನಾಗ್ತಿದೆ ಅಂತ ನೋಡ್ತಿದ್ದಾರೆ: ಯುಟಿ ಖಾದರ್
ನಮ್ಮ ಕ್ಷೇತ್ರದಲ್ಲಿ ನಾವು ಜನರ ಮುಂದೆ ಹೇಗೆ ಮುಖ ತೋರಿಸುವುದು? ಸರ್ಕಾರದ ವಕೀಲರು ಕೋರ್ಟ್‍ನಲ್ಲಿ ಸಮರ್ಥವಾಗಿ ವಾದ ಮಂಡನೆ ಮಾಡಬೇಕು. ಈ ಬಗ್ಗೆ ಸದನ ಸಮಿತಿ ರಚನೆ ಮಾಡಿ ಎಂದು ರಾಜುಗೌಡ ಆಗ್ರಹಿಸಿದರು. ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಹೈಕಮಾಂಡ್‍ನಿಂದ ಡಿಕೆಶಿಗೆ ಟಾಸ್ಕ್
ಇದಕ್ಕೆ ಉತ್ತರಿಸಿದ ಸಚಿವ ಡಾ.ಸುಧಾಕರ್, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈಗಾಗಲೇ ವಿಧ್ಯಾರ್ಥಿಗಳು ಪ್ರತಿಭಟನೆ ಮಾಡಿದ ಬಳಿಕ ಪ್ರವೇಶಾತಿ ಮಾಡಿಸಿಕೊಂಡಿದ್ದಾರೆ. ಇಂದು ಕೋರ್ಟ್‍ಲ್ಲಿ ಕೇಸ್ ಸಹ ಇದೆ. ಅಡ್ವೋಕೇಟ್ ಜನರಲ್ ಖುದ್ದು ಇಂದು ಕೋರ್ಟ್‍ಲ್ಲಿ ಇದ್ದಾರೆ. ಯಾವುದೇ ಕಾರಣಕ್ಕೂ ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.
ಯಾದಗಿರಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕ ರಾಜೂಗೌಡ ತಂದೆ ಶಂಭನ ಗೌಡ(75) ನಿಧನರಾಗಿದ್ದಾರೆ.
ಕಳೆದ 7-8 ತಿಂಗಳುಗಳಿಂದ ಶಂಭನಗೌಡರು ಪಾರ್ಶ್ವವಾಯುನಿಂದ ಬಳಲಲುತ್ತಿದ್ದರು. ಇಂದು ಸುರಪುರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತ ಶಂಭನಗೌಡರು ಪುತ್ರ ರಾಜೂಗೌಡ, ಹಣಮಂತ್ರಾಯಗೌಡ ಮತ್ತು ಮಗಳು ಮೈತ್ರಾದೇವಿಯನ್ನು ಅಗಲಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು
ಅಬಕಾರಿ ಇಲಾಖೆಯಲ್ಲಿ 35 ವರ್ಷ ಸೇವೆಸಲ್ಲಿಸಿ, ಶಂಭನ ಗೌಡ ಸ್ವಯಂ ನಿವೃತ್ತಿ ಹೊಂದಿದ್ದರು. ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಕೊಡೇಕಲ್‍ನಲ್ಲಿ ನಡೆಯಲಿದೆ ಎಂದು ಶಾಸಕ ರಾಜೂಗೌಡ ಕುಟುಂಬಸ್ಥರು ತಿಳಿಸಿದ್ದಾರೆ.
ಯಾದಗಿರಿ: ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ ಎಂದು ಹುಣಸಗಿ ತಾಲೂಕಿನ ಕೊಡೇಕಲ್ ನಲ್ಲಿ ಶಾಸಕ ರಾಜೂಗೌಡ ವಾಗ್ದಾಳಿ ಮಾಡಿದರು.
ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ. ಅವರು ಯಾವ ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎನ್ನುವುದು ಮರೆತಿದ್ದಾರೆ. ಒಂದು ಬೆರಳು ನೀವು ನೇರ ಮಾಡಿದರೆ, ನಾಲ್ಕು ಬೆರಳು ನಿಮಗೆ ಉಲ್ಟಾ ತೋರಿಸುತ್ತವೆ. ದಯವಿಟ್ಟು ಬೀಟ್ ಕಾಯಿನ್ ಬಗ್ಗೆ ಇಲ್ಲಸಲ್ಲದ ಹೇಳಿಕೆ ಕೊಡಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಾವು ಜೆಡಿಎಸ್‍ನಿಂದ ಪರಿಷತ್‍ಗೆ ಸ್ಪರ್ಧೆ ಮಾಡಲ್ಲ: ಜಿಟಿ ದೇವೇಗೌಡ
ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿರುವ ಕುರಿತು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೇ ಅವರೇ ನಿಮ್ಮ ತಂದೆಯವರು ಹೋಮ್ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಹೋಗಿ ಅವರನ್ನು ಕೇಳಿ ಪೊಲೀಸ್ ಇಲಾಖೆ ಏನು ಎಂದು ನಿಮ್ಮಪ್ಪನಿಗೆ ಹೋಗಿ ಕೇಳಿ, ಆಮೇಲೆ ಹೇಳಿಕೆ ಕೊಡಿ. ಅದು ಬಿಟ್ಟು ಬಿಟ್ ಕಾಯಿನ್ ಬಗ್ಗೆ ಸುಮ್ಮನೆ ಹೇಳಿಕೆ ಕೊಡಬೇಡಿ ಎಂದರು.
ವಿರೋಧ ಪಕ್ಷದಲ್ಲಿದ್ದೀವಿ ಅಂತ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ನೀವು ಮಾಡುವ ಆರೋಪಕ್ಕೆ ಘನತೆ ಇರಬೇಕು. ನಮ್ಮ ಮೇಲೆ ಆರೋಪ ಮಾಡಲು ಯಾವುದೇ ವಿಷಯ ಇಲ್ಲ. ಹೀಗಾಗಿ ಕಾಂಗ್ರೇಸ್ ಅವರು ಬಿಟ್ ಕಾಯಿನ್, ಬಿಟ್ ಕಾಯಿನ್ ಅಂತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಕಾಂಗ್ರೇಸ್ ಅವರಿಗೆ ಮಾಹಿತಿ ಇಲ್ಲ. ಬಿಟ್ ಕಾಯಿನ್ ಬಗ್ಗೆ ಬೇರೆಯವರನ್ನು ಕೇಳಿ ಹೇಳ್ತಾರೆ. ಜನರಿಗೆ ಬಿಟ್ ಕಾಯಿನ್ ಬಗ್ಗೆ ಗೊಂದಲ ಇದೆ. ಕಾಂಗ್ರೆಸ್ ಅವರು ಜನರ ತಲೆಯಲ್ಲಿ ಹುಳ ಬೀಡುವ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗರಂ ಅದರು. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹುಚ್ಚಾಸ್ಪತ್ರೆಗೆ ಸೇರಿದರೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.
ಹಾನಗಲ್ ನ ಗಡಿಯಂಕನಹಳ್ಳಿ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಹುಚ್ಚಾಸ್ಪತ್ರೆಗೆ ಭೇಟಿ ನೀಡ್ತೀವಿ ಅಂತ ಹೇಳಿದ್ದಾರೆ. ಅವರು ಭೇಟಿ ನೀಡಿದರೆ ಖಂಡಿತ ನಾವು ಹಣ್ಣು-ಹಂಪಲು ತಗೊಂಡು ನಾವು ಆರೋಗ್ಯ ವಿಚಾರಿಸಿ ಬರುತ್ತೇವೆ ಎಂದು ವ್ಯಂಗ್ಯವಾಡಿದರು.
ಕೊರೊನಾಗೆ ಹೇಗೆ ಫ್ರೀ ಟ್ರೀಟ್ಮೆಂಟ್ ಕೊಟ್ಟಿದ್ರೋ ಅದೇ ರೀತಿ ಹುಚ್ಚಾಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವಂತೆ ಸಿಎಂಗೆ ಮನವರಿಕೆ, ಮನವಿ ಮಾಡುತ್ತೇವೆ. ಅಧ್ಯಕ್ಷರಾದ ಮೇಲೆ ಎಲ್ಲಾ ಚುನಾವಣೆ ಸೋತಿದ್ದಾರೆ. ಸೋತ ಮೇಲೆ ಪಾಪ ಎಲ್ಲಿಗೆ ಹೋಗಬೇಕು ಅವರು?, ಅವರು ಹುಚ್ಚಾಸ್ಪತ್ರೆಗೇ ಹೋಗಬೇಕು ಎಂದು ರಾಜುಗೌಡ ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ
ಇದೇ ವೇಳೆ ಡಿಕೆಶಿ ಗೋಣಿ ಚೀಲದ ಹೇಳಿಕೆಗೆ ತಿರುಗೇಟು ನಿಡಿದ ಶಾಸಕರು, ಡಿಕೆ ಶಿವಕುಮಾರ್ ಅವರು ಏನು ಕೆಲಸ ಮಾಡಿದ್ದಾರೋ ಅದನ್ನ ನೆನಸಿಕೊಂಡು ಮಾತನಾಡುತ್ತಾರೆ. ಅವರು ಸಚಿವರಿದ್ದ ಸಮಯದಲ್ಲಿ ಗೋಣಿ ಚೀಲದಲ್ಲಿ ದುಡ್ಡು ತಗೊಂಡು ಹೋಗಿ ಎಲೆಕ್ಷನ್ ಮಾಡಿದ್ದಾರೆ ಪಾಪ. ಅವರು ಏನ್ ಮಾಡಿದ್ದಾರೋ ಅದನ್ನೇ ಹೇಳಬೇಕಾಗುತ್ತೆ, ಅದನ್ನ ಬಿಟ್ಟು ಬೇರೆ ಹೇಳೋಕೆ ಬರಲ್ಲ. ಅವರು ಯಾವತ್ತಾದ್ರೂ ಬೂತ್ ಕಮಿಟಿ ಸಭೆ ಮಾಡಿದ್ದಾರಾ..? ಎಲ್ಲ ಸಮುದಾಯದವರನ್ನ ಕರೆದು ಮಾತನಾಡಿದ್ದಾರಾ..? ಪಾಪ ಅವರು ಏನು ಕೆಲಸ ಮಾಡಿದ್ದಾರೆ ಅದನ್ನು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ದ್ರೋಹ ಮಾಡಿರುವ ಸುಧಾಕರ್ ಅಧಿಕಾರದ ಮದದಿಂದ ವರ್ತಿಸ್ತಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ ಎಂದು ಶಾಸಕ ರಾಜೂ ಗೌಡ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನ ಬಿಎಸ್‍ವೈ ಅವರು ಕಾರ್ಯಕಾರಿಣಿ ಸಭೆಯಲ್ಲಿ ವಿರೋಧ ಪಕ್ಷದವರನ್ನು ಯಾರು ನಿರ್ಲಕ್ಷಿಸ ಬಾರದು. ಒಳ್ಳೆಯ ರೀತಿ ಕೆಲಸವನ್ನು ಮಾಡಬೇಕು. ಮೋದಿ, ಮೋದಿ ಎನ್ನಲು ಹೋಗಬೇಡಿ ನಿಮ್ಮ ಕೆಲಸವನ್ನು ಮಾಡಿ ಎಂದರು ಹೇಳಿದ್ದಾರೆ ಎಂದಿದ್ದಾರೆ.
ನಾವೇಲ್ಲರು ಬಿಜೆಪಿಯಲ್ಲಿಯೇ ಇರುತ್ತೇವೆ. ಮತ್ತೆ ಬಿಜೆಪಿಯಿಂದಲೇ ಗೆದ್ದು ಮಂತ್ರಿಯಾಗುತ್ತೇವೆ. ಕಾಂಗ್ರೆಸ್‍ನಿಂದ ಕೆಲವು ಶಾಸಕರಿಗೆ ಕರೆ ಬಂದಿದೆ. ಯಾವ ಶಾಸಕರು ಎಂದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತಲು ನಾನು ಶತ ಪ್ರಯತ್ನ ಮಾಡುತ್ತಿದ್ದೇನೆ. ನಾನು ಸಕ್ಸಸ್ ಆಗುತ್ತೇನೆ ಎನ್ನುವ ನಂಬಿಕೆ ನನಗೆ ಇದೆ ಎಂದು ನಕ್ಕಿದ್ದಾರೆ.
ಸಾಕಷ್ಟು ಜನ ಕಾಂಗ್ರೆಸ್‍ನವರೇ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ನಾವು ಇದ್ದವರಿಗೆ ಅಧಿಕಾರ ಕೊಡಲು ಸಾಧ್ಯವಾಗುತ್ತಿಲ್ಲ ಮತ್ತೇ ಯಾಕೆ ಕರೆ ತರುತ್ತೀರ ಎಂದು ಬೊಮ್ಮಾಯಿ ಅವರು ಮತ್ತು ಬಿಎಸ್‍ವೈ ಅವರಿಗೆ ಹೇಳಿದ್ದೇವೆ. ನಮ್ಮವರು ಯಾರು ಪಕ್ಷ ಬಿಟ್ಟು ಹೋಗಲು ತಯಾರಿಲ್ಲ ಎಂದು ನುಡಿದಿದ್ದಾರೆ.
ಯಾದಗಿರಿ: ಅತ್ಯಾಚಾರಿಗಳಿಗೆ ಹೈದರಾಬಾದ್ ನಲ್ಲಿ ಸಜ್ಜನ ಸರ್ ನೀಡಿದಂತಹ ಮದ್ದು ನೀಡಬೇಕು ಎಂದು ಪರೋಕ್ಷವಾಗಿ ಅತ್ಯಾಚಾರಿಗಳನ್ನ ಎನ್ ಕೌಂಟರ್ ಮಾಡಬೇಕು ಎಂದು ಶಹಾಪೂರ ಗ್ಯಾಂಗ್ ರೇಪ್ ಪ್ರಕರಣಕ್ಕೆ ಶಾಸಕ ರಾಜೂಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಡಿಯೋ ನೋಡಿ ನಾವು ಮನುಷ್ಯತ್ವದಲ್ಲಿ ಇದ್ದಿವೋ, ರಾಕ್ಷಸರು ಅಂತ ಇದ್ದಿವೋ ಅಂತ ಗೊತ್ತಾಗುತ್ತಿಲ್ಲ. ಮೃಗಗಳು ಸಹ ಈ ರೀತಿ ನಡೆದುಕೊಳ್ಳಲ್ಲ, ಎಲ್ಲಾ ಅಧಿಕಾರಿಗಳು ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಎಂದರು.
ಹೈದರಾಬಾದ್ ನಲ್ಲಿ ಸಜ್ಜನ್ ಸರ್ ನೀಡಿದ ಔಷಧಿಯೊಂದೇ ಮದ್ದು. ನಾನೊಬ್ಬ ಶಾಸಕನಾಗಿ, ಮಾಜಿ ಸಚಿವನಾಗಿ ಈ ಮಾತನ್ನ ಹೇಳಬಾರದು. ಆದರೆ ಅನಿವಾರ್ಯವಾಗಿ ಹೇಳಬೇಕಾಗುತ್ತೆ. ಯಾಕಂದ್ರೆ ದುಷ್ಟರಿಗೆ ಭಯ ಇಲ್ಲದಂತಾಗತ್ತೆ. ಹೆಣ್ಣು ಮಕ್ಕಳಂದ್ರೆ ತಾವು ಮಾಡಿದ್ದೆ ಆಟ ಅಂತ ತಿಳಿದಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು
ಆರೋಪಿಗಳು ನಿರ್ಭಯವಾಗಿ ನಾವೇ ಮಾಡಿದ್ದು ಅಂತ ಹೇಳ್ತಿದ್ದಾರೆ.ಇದನ್ನೆಲ್ಲ ನೋಡಿದ್ರೆ ನಮ್ಮ ವೈಫಲ್ಯ ಕಾಣಿಸತ್ತೆ. ರಾಜಕಾರಣಿಗಳು, ಮಾಧ್ಯಮಗಳು ಇನ್ನಿತರ ಯಾವುದೇ ಪ್ರಭಾವ ಬೀರುವ ಮುಂಚೆ ಪೊಲೀಸರ ಪ್ರಭಾವ ಬೀರಬೇಕು. ಯಾರ ಯಾವ ರೀತಿ ಇರಬೇಕೊ ಹಾಗೆ ಇದ್ರೆನೆ ಭಯ ಇರುತ್ತೆ. ಇನ್ಸ್ ಪೆಕ್ಟರ್ ಇನ್ಸ್ ಪೆಕ್ಟರ್ ಆಗಿನೇ ಇರಬೇಕಾಗುತ್ತೆ. ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲಂದ್ರೆ ಕಷ್ಟ ಆಗತ್ತೆ. ಇದು ನಮ್ಮೆಲ್ಲರ ತಲೆ ತಗ್ಗಿಸುವ ವಿಚಾರ ಅಂತ ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಮಗ ಗೂಂಡಾ ಅಲ್ಲ, ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಿ: ಮಾನಪ್ಪ ವಜ್ಜಲ್