Tag: Raju Gowda

  • ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ – ಜಾರಕಿಹೊಳಿ ಪರ ಬ್ಯಾಟ್ ಬೀಸಿದ ರಾಜು ಗೌಡ

    ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ – ಜಾರಕಿಹೊಳಿ ಪರ ಬ್ಯಾಟ್ ಬೀಸಿದ ರಾಜು ಗೌಡ

    ಬಾಗಲಕೋಟೆ: ಮುಂದಿನ ಸಿಎಂ ಸತೀಶಣ್ಣನೇ  (Satish Jarkiholi) ಆಗ್ಲಿ ಎಂದು ಬಿಜೆಪಿ (BJP) ಮಾಜಿ ಸಚಿವ ರಾಜು ಗೌಡ (Raju Gowda) ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.

    ಮುಧೋಳ ನಗರದಲ್ಲಿ ವೀರ ಜಡಗಣ್ಣ ಬಾಲಣ್ಣ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು. ಈ ವೇಳೆ, ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ಜಾರಕಿಹೊಳಿಯವರನ್ನು ಹೋಲಿಸಿ, ಹಾಡಿ ಹೊಗಳಿದ್ದಾರೆ. ನಮ್ಮ ಸಮಾಜಕ್ಕೆ ಸತೀಶಣ್ಣ (ಸತೀಶ್ ಜಾರಕಿಹೊಳಿ) ಜಡಗಣ್ಣ ಬಾಲಣ್ಣ ಇದ್ದಂತೆ. ಮಾತು ಕಡಿಮೆ ಆದ್ರೆ ಪ್ಲ್ಯಾನ್ ಹಾಕಿದ್ರೆ ಕರೆಕ್ಟ್ ಏಟು ಹಾಕ್ತಾನೆ ನಮ್ಮಣ್ಣ. ವೀರ ಯೋಧ ಜಡಗಣ್ಣ ಬಾಲಣ್ಣ ಅವ್ರು ಬ್ರಿಟೀಷರ ಎದುರು ಶಸ್ತ್ರತ್ಯಾಗ ಮಾಡಿರಲಿಲ್ಲ. ನೀನು ಶಸ್ತ್ರ ತ್ಯಾಗ ಮಾಡಬೇಡ ಎಂದಿದ್ದಾರೆ. ಇದನ್ನೂ ಓದಿ: ಪಕ್ಷ‌ ನಿಷ್ಠೆಗೆ ಫಲ ಸಿಗಲಿದೆ ತಾಳ್ಮೆಯಿಂದಿರಿ – ಡಿಕೆಶಿಗೆ ಖರ್ಗೆ ಅಭಯ, 1 ಗಂಟೆಗೂ ಹೆಚ್ಚುಕಾಲ ಮಾತುಕತೆ

    ಈ ಬಾರಿ ನನಗೆ ಮುಖ್ಯಮಂತ್ರಿ ಆಸೆ ಇಲ್ಲ, ಮುಂದಿನ ಸಾರಿ ಆಗ್ತೇನೆ ಎಂದು ಹೇಳುತ್ತಿದ್ದೀಯ. ಅದೆಲ್ಲ ಬೇಡ ಇದೇ ಡಿಸೆಂಬರ್‍ನಲ್ಲಿ ಮುಖ್ಯಮಂತ್ರಿ ಆಗು. ನಿಮ್ಮನ್ನು ಮುಖ್ಯಮಂತ್ರಿ ಆಗಿ ನೋಡಬೇಕೆಂಬ ಆಸೆ ನಮ್ಮದು. ನಾವು ನಿಮ್ಮ ರಕ್ತವನ್ನೇ ಹಂಚಕೊಂಡು ಹುಟ್ಟೀವಿ, ನಾವೇನು ಹಗುರಿಲ್ಲ ಸುರಪುರ ಬ್ಯಾಡ್ರು. ಹಿಂದೆ ಬ್ರಿಟೀಷರನ್ನೂ ಬಿಟ್ಟಿಲ್ಲ, ಔರಂಗಜೇಬನನ್ನೂ ಬಿಟ್ಟಿಲ್ಲ ಎಂದಿದ್ದಾರೆ.

    2028ಕ್ಕೆ (ಕಾಂಗ್ರೆಸ್) ನೀವು ಬರಲ್ಲ, ನಾವು (ಬಿಜೆಪಿ) ಬರುತ್ತೇವೆ, ನಿಮಗೆ ಬಿಟ್ಟುಕೊಡಲ್ಲ. ಈಗ ಆದ್ರೆ ನಮ್ಮ ಆಸೆ ಈಡೇರುತ್ತೆ. ನಿಮ್ಮ ಆಸೆನೂ ಈಡೇರುತ್ತೆ ಎಂದಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

  • ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ: ರಾಜೂ ಗೌಡ

    ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ: ರಾಜೂ ಗೌಡ

    ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡ ಬಿರುಸುಗೊಂಡಿದೆ. ಕೈ- ಕಮಲ ಅಭ್ಯರ್ಥಿಗಳಿಂದ ಭರ್ಜರಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಅಂತೆಯೇ ಬಿಜೆಪಿ ಅಭ್ಯರ್ಥಿ ರಾಜೂ ಗೌಡ ಅವರು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿ ಮತಯಾಚನೆ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಹಮ್ಮಿಕೊಂಡ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸೆರಗೊಡ್ಡಿ ಮತ ಕೇಳಲು ನನಗೆ ತಾಯಿ ಇಲ್ಲ, ತಂದೆಯೂ ಇಲ್ಲ. ನನ್ನ ಪಾಲಿಗೆ ಕಾರ್ಯಕರ್ತರೇ ತಂದೆ-ತಾಯಂದಿರು, ನೀವೇ ಆಶೀರ್ವಾದ ಮಾಡಬೇಕು. ಎಲ್ಲರೂ ಆಶೀರ್ವಾದ ಮಾಡಬೇಕೆಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

    ನನ್ನ ತಾಯಿಯನ್ನ ಕಳೆದುಕೊಂಡಾಗ ನಾನು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಾಯಿಯನ್ನ ಕಳೆದುಕೊಂಡಾಗಲೂ ಕೆಲಸ ನಿಲ್ಲಿಸಿಲ್ಲ. ಕೊರೋನಾ ಸಂದರ್ಭದಲ್ಲಿ ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು!

    ರಾಜಾ ವೆಂಕಟಪ್ಪ ನಿಧನದಿಂದ ತೆರವಾಗಿದ್ದ ಸುರುಪುರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಮೇ. 7 ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ರಾಜೂ ಗೌಡ ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕರಿಗೆ ಟಿಕೆಟ್‌ ಕೊಟ್ಟಿದೆ.

  • ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಯಾದಗಿರಿ: ಜಿಲ್ಲೆಯ ಸುರಪುರ (Surapura) ವಿಧಾನಸಭೆಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ (BJP) ಇಂದು ತನ್ನ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದೆ. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ ರಾಜುಗೌಡ (Raju Gowda) ಅವರಿಗೆ ಟಿಕೆಟ್ ನೀಡಿದೆ.

    ನಿರೀಕ್ಷೆಯಂತೆ ರಾಜುಗೌಡಗೆ ಬಿಜೆಪಿ ಪಕ್ಷ ಸುರಪುರ ಉಪಚುನಾವಣೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆ ಸುರಪುರಕ್ಕೆ ಉಪಚುನಾವಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೋದಿ.. ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ: ಕಾಂಗ್ರೆಸ್‌ ಸಚಿವರ ಹೇಳಿಕೆಗೆ ಬಿಜೆಪಿ ಕಿಡಿ

    ಫೆಬ್ರವರಿ 25ರಂದು ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದು, ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮೇ 7ರಂದು ಮತದಾನ ನಡೆಯಲಿದೆ. ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ – ಅಧಿಕೃತ ಘೋಷಣೆ ಮಾತ್ರ ಬಾಕಿ

  • ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಬದಲಾಯಿಸಲು ಆಗಲ್ಲ: ಸ್ವಪಕ್ಷದ ನಾಯಕನ ವಿರುದ್ಧ ರಾಜೂಗೌಡ ಆಕ್ರೋಶ

    ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಬದಲಾಯಿಸಲು ಆಗಲ್ಲ: ಸ್ವಪಕ್ಷದ ನಾಯಕನ ವಿರುದ್ಧ ರಾಜೂಗೌಡ ಆಕ್ರೋಶ

    ಯಾದಗಿರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ (Raju Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾದಗಿರಿ (Yagir) ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫಲಾನುಭವಿಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಅನಂತ್‌ ಕುಮಾರ್‌ (Anantkumar Hegde) ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾಯಿಗಳು ಎಷ್ಟೇ ಬೊಗಳಿದರೂ ಏನು ಮಾಡಲು ಆಗಲ್ಲ, ಆನೆ ನಡೆದಿದ್ದೇ ಹಾದಿ : ಹೆಗಡೆ ಕಿಡಿ

    ಈಗ ಒಬ್ಬ ಹೆಗಡೆ ಎನ್ನುವವನು ಎಲ್ಲೋ ಮಾತಾಡಿದ್ದಾನೆ. ಸಂವಿಧಾನ ಚೇಂಜ್‌ ಮಾಡ್ತೀವಿ ಅಂತಾ ಹೇಳಿದ್ದಾನೆ. ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನಕ್ಕೆ ಏನು ಮಾಡಕಾಗಲ್ಲ. ಸಂವಿಧಾನ ಮುಟ್ಟುವುದಕ್ಕೂ ಆಗಲ್ಲ. ಚೇಂಜ್‌ ಮಾಡೋಕೂ ಆಗಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಮೋದಿ ಅವ್ರು ರಕ್ಷಣೆ ಮಾಡ್ತಿದ್ದಾರೆ. ಸಂವಿಧಾನವನ್ನು ತಲೆ ಮೇಲೆ ಇಟ್ಕೊಂಡು ಹೋಗುವಂತಹ ಕೆಲಸ ಮೋದಿ, ಬಿಜೆಪಿ ಮಾಡಿದೆ ಎಂದು ಹೇಳಿದರು.

    ಒಳ ಮೀಸಲಾತಿ ವಿಚಾರದಲ್ಲೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ರಾಜೂಗೌಡ, ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿದೆ. ಎಲ್ಲೋ ನಿಂತು ಒಳ ಮೀಸಲಾತಿ ಮಾಡಿದ್ರು. ನಾನು ನಿಮ್ಮ ಪರ ನಿಂತೆ. ಆದ್ರೆ ಅದರ ಏಟು ನನಗೆ ಬಿತ್ತು ಎಂದು ಸಭೆಯಲ್ಲಿ ನೋವು ತೋಡಿಕೊಂಡರು. ಸಂವಿಧಾನ ವಿರೋಧಿ ಇದ್ರೆ ಮೀಸಲಾತಿ ಹೆಚ್ಚಳ ಯಾಕೆ ಮಾಡ್ತಿತ್ತು. ಎಸ್ಸಿ ಸಮುದಾಯಕ್ಕಿದ್ದ 15% ಮೀಸಲಾತಿಯನ್ನು 17% ಕ್ಕೆ ಹೆಚ್ಚಳ ಮಾಡಿತು. ಎಸ್ಟಿಗೆ 3% ಇದ್ದದ್ದನ್ನು 7% ಗೆ ಮೀಸಲಾತಿ ಹೆಚ್ಚಳ ಮಾಡಿತು ಎಂದರು. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ – ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಬಿಜೆಪಿಯಿಂದಲೇ ವಿರೋಧ

    ನಮ್ಮ ಬಿಜೆಪಿಯ ಕೆಲವು ನಾಯಕರು ಕೆಲವೊಂದು ಗಾಳಿಯೊಳಗೆ ಗೆದ್ದು ಬಿಡ್ತಾರೆ. ಕೆಲವೊಂದು ಹುಚ್ಚುಚ್ಚು ಭಾಷಣ ಮಾಡಿ ಗೆದ್ದು ಬಿಡ್ತವೆ. ಗೆದ್ದು 4 ವರ್ಷದಿಂದ ಮಾಯ ಆಗ್ತಾರೆ. ಕೊನೆಯ 15 ದಿನದಲ್ಲಿ ಬಂದು ಬಾಯಿಗೆ ಬಂದಂಗೆ ಮಾತಾಡ್ತಾರೆ. ಹುಚ್ಚುಚ್ಚು ಮಾತಾಡುವಂತವರಿಗೆ ಬಿಜೆಪಿ ಏನು ಶಿಕ್ಷೆ ಕೊಡಬೇಕು ಕೊಡುತ್ತದೆ. ಬಾಯಿ ಮಾತಿನಿಂದ ಕೊಡಲ್ಲ, ಕಾದು ನೋಡಿ ಗೊತ್ತಾಗ್ತದೆ ಎಂದು ತಿರುಗೇಟು ಕೊಟ್ಟರು.

  • ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ಯಾದಗಿರಿ: ರಾಜ್ಯ ರ್ಕಾರದ ರೈತ ವಿರೋಧಿ ನೀತಿ ಹಾಗೂ ಬಿಜೆಪಿ ಮುಖಂಡರ ಮೇಲೆ ಹಾಕಿರುವ ಸುಳ್ಳು ಕೇಸ್ ರದ್ದು ಪಡಿಸಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಣಸಗಿ ಪಟ್ಟಣದಲ್ಲಿ ಮಾಜಿ ಸಚಿವ ರಾಜೂಗೌಡ (Raju Gowda) ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರಗೆ ಮಾಜಿ ಸಚಿವ ರಾಜೂ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

    ಹುಣಸಗಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾಜಿ ಸಚಿವರು ಮಾತನಾಡಿ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರು ಇದ್ದರೂ ಸರ್ಕಾರ ಅವೈಜ್ಞಾನಿಕ ವಾರಬಂದಿ ಜಾರಿಗೆ ತಂದಿದ್ದಾರೆ. ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕೆಂದರು. ಸುರಪುರ ಭಾಗದ ಶಾಸಕ ಹಾಗೂ ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ನೀರು ಹರಿಸುವ ಕೆಲಸ ಮಾಡುತ್ತಿಲ್ಲ. ಶಾಸಕರು ಟೇಬಲ್ ಗುದ್ದಿ ನೀರು ಬಿಡಿಸಬೇಕೆಂದರು.

    ವಿದ್ಯುತ್ ಕೊರತೆಯಿಂದ ರೈತರ ಜಮೀನಿಗೆ ನೀರು ಹರಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಐಪಿಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ರೈತರ ಬೆಳೆ ಬೆಳೆಯಲು ಅನುಕೂಲ ಮಾಡಬೇಕೆಂದರು. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದ್ದು .ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಸುಳ್ಳು ಕೇಸ್ ಹಾಕಲಾಗಿದೆ.ತಪ್ಪಿತಸ್ಥ ಪಿಎಸ್ ಐ ಅವರನ್ನು ಅಮಾನತು ಮಾಡಬೇಕೆಂದು ರಾಜುಗೌಡ ಒತ್ತಾಯ ಮಾಡಿದ್ದಾರೆ. ನ್ಯಾಯಕ್ಕಾಗಿ ನಾವು ರಾಜ್ಯಪಾಲರ ಹತ್ತಿರ ಹೋಗುತ್ತೆವೆ. ಇಂದಿನ ಪ್ರತಿಭಟನೆ ಟ್ರೈಲರ್ ಇದ್ದು ಇನ್ನೂ ಮುಂದೆ ಪಿಕ್ಚರ್ ಬಾಕಿ ಇದೆ.ವಾರ ಬಂದಿ ರದ್ದು ಮಾಡದಿದ್ದರೆ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಧಾನಸಭೆಯೊಳಗೆ ಮಾತ್ರ ಗಲಾಟೆ, ಹೊರಗಡೆ ಎಲ್ಲರೂ ಸ್ನೇಹಿತರೇ ಆಗಿರ್ತಾರೆ: ಯು.ಟಿ. ಖಾದರ್

    ಈ ವೇಳೆ ಬಿಜೆಪಿ ಮುಖಂಡ ಬಬ್ಲುಗೌಡ ಅವರು ಮಾತನಾಡಿ, ಸರಕಾರ ರೈತರಿಗೆ ಮೋಸ ಮಾಡುವ ಕೆಲಸ ಮಾಡಿದೆ.ರಾಜಕೀಯ ಲಾಭಕ್ಕಾಗಿ ರೈತರ ಜತೆ ಚಲ್ಲಾಟವಾಡಬೇಡಿ ವಾರಬಂದಿ ರದ್ದು ಮಾಡಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಅಧಿಕಾರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ಕೇಸ್ ಹಾಕಿದ್ದ ರದ್ದು ಮಾಡಬೇಕೆಂದು ಆಗ್ರಹಿಸಿದ್ರು.

    ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸುರೇಶ್ ಸಜ್ಜನ್, ಎಚ್.ಸಿ.ಪಾಟೀಲ್ ಸ್ಥಾವರಮಠ, ಕೃಷ್ಣಾ ಮುದನೂರು, ರಂಗಣ್ಣಗೌಡ ದೇವಿಕೇರಿ, ವೆಂಕಟೇಶ ಸಾಹುಕಾರ, ರಾಜಾ ಹಣಮಪ್ಪ ನಾಯಕ ತಾತಾ, ವಿರೇಶ್ ಚಿಂಚೋಳಿ, ಗದ್ದೆಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ: ರಾಜೂ ಗೌಡ

    ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ: ರಾಜೂ ಗೌಡ

    ಯಾದಗಿರಿ: ನಾನು ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ (Congress) ಸೇರುವ ಪ್ರಮೇಯವೇ ಬರೋದಿಲ್ಲ ಎಂದು ಮಾಜಿ ಸಚಿವ ರಾಜೂ ಗೌಡ (Raju Gowda) ಸ್ಪಷ್ಟ ಪಡಿಸಿದ್ದಾರೆ.

    ಈ ಹಿಂದೆ ತಾವು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಹುಣಸಗಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನನ್ನನ್ನು ರಾಜ್ಯಾಧ್ಯಕ್ಷ ಮಾಡುವ ಬಗ್ಗೆ ವರಿಷ್ಠರನ್ನು ಕೇಳುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಡಿ ಸುಧಾಕರ್ ರಾಜೀನಾಮೆ ಪಡೆದು ಬಂಧನ ಮಾಡಿ: ಹೆಚ್‌ಡಿಕೆ

    ಚುನಾವಣೆಯಲ್ಲಿ ವಾಜಪೇಯಿ, ಇಂದಿರಾ ಗಾಂಧಿ (Indira Gandhi), ಸಿದ್ದರಾಮಯ್ಯ (Siddaramaiah) ಅವರು ಸೋತಿಲ್ವಾ?. ಸೋತಾಗ ಪಕ್ಷ ನಿಷ್ಠೆಗೆ ಬದ್ಧವಾಗಿ ಕೆಲಸ ಮಾಡಿದ್ರೆ ಉನ್ನತ ಹುದ್ದೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಜೂಗೌಡ, ನಾನು ಪಾರ್ಟ್ ಟೈಮ್ ಪಾಲಿಟಿಷನ್. ದಿನದ 24 ಗಂಟೆ ನಾನು ರಾಜಕೀಯ ಮಾಡಲ್ಲ. ನಾನು ಒಕ್ಕಲುತನ ಮಾಡುತ್ತೇನೆ. ಚುನಾವಣೆಯಲ್ಲಿ ಸೋತು ನಾನು ಕಷ್ಟದಲ್ಲಿದ್ದೀನಿ. ಅದೇ ರೀತಿ ಪಕ್ಷ ಕಷ್ಟದಲ್ಲಿದೆ. ಇಂತಹ ಸಂದರ್ಭಗಳಲ್ಲಿ ಪಕ್ಷದ ಜೊತೆ ಇದ್ದರೆ ಮುಂದೆ ಉಜ್ವಲ ಭವಿಷ್ಯ ಇರುತ್ತದೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಎಸ್‍ವೈ ಕಡೆಗಣನೆಯಿಂದ ಬಿಜೆಪಿ ಅವನತಿ, ಆಪರೇಷನ್ ಆಗಲು ನನಗೆ ಕ್ಯಾನ್ಸರ್ ಗಡ್ಡೆ ಬೆಳೆದಿಲ್ಲ: ರಾಜೂಗೌಡ

    ಬಿಎಸ್‍ವೈ ಕಡೆಗಣನೆಯಿಂದ ಬಿಜೆಪಿ ಅವನತಿ, ಆಪರೇಷನ್ ಆಗಲು ನನಗೆ ಕ್ಯಾನ್ಸರ್ ಗಡ್ಡೆ ಬೆಳೆದಿಲ್ಲ: ರಾಜೂಗೌಡ

    ಬೆಂಗಳೂರು: ಯಡಿಯೂರಪ್ಪ (B.S Yediyurappa) ಅವರನ್ನು ಸಿಎಂ ಸ್ಥಾನದಿಂದ ಇಳಿಸಿದಾಗಿನಿಂದ ಪಕ್ಷದ (BJP) ಅವನತಿ ಶುರುವಾಗಿದೆ. ಆಗ ಆರಂಭಗೊಂಡ ಡೌನ್ ಫಾಲ್ ಈಗಲೂ ಮೇಲೇಳಲೇ ಇಲ್ಲ ಎಂದು ಮಾಜಿ ಶಾಸಕ ರಾಜೂಗೌಡ (Raju Gowda) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಹಾಗೂ ವಿಜಯೇಂದ್ರ ಅವರು ಪಕ್ಷ ಕಟ್ಟುತ್ತಿದ್ದಾರೆ. ಸೋತವರ ಜೊತೆ ಈಗಲೂ ಬಿಎಸ್‍ವೈ ಮಾತನಾಡುತ್ತಿದ್ದಾರೆ. ಅವರ ಕಡೆಗಣನೆಯೇ ಪಕ್ಷದ ಕುಸಿತಕ್ಕೆ ಕಾರಣ ಎಂದಿದ್ದಾರೆ. ಇದನ್ನೂ ಓದಿ: INDIA ಹಿಂದೂ ಧರ್ಮವನ್ನ ದ್ವೇಷಿಸುತ್ತಿದೆ, ಪರಂಪರೆಯ ಮೇಲೆ ದಾಳಿ ಮಾಡ್ತಿದೆ: ಶಾ ಗುಡುಗು

    ಬಿ.ಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ವಿಚಾರವಾಗಿ, ನಮ್ಮ ರೇಣುಕಣ್ಣ ಅವರು ಯಾವ ಬಾಲ್‍ಗೆ ಫೋರ್, ಸಿಕ್ಸ್ ಹೊಡೀತಾರೆ ಎಂದು ಗೊತ್ತಾಗುವುದಿಲ್ಲ. ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ರೇಣುಕಣ್ಣನನ್ನು ಯಾರೂ ಖರೀದಿ ಮಾಡಲು ಆಗುವುದಿಲ್ಲ. ಅವರೇ ಬೇಕಾದರೆ ಎಲ್ಲರನ್ನೂ ಖರೀದಿ ಮಾಡುತ್ತಾರೆ. ಅವರು ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದಿದ್ದಾರೆ.

    ಆಪರೇಷನ್ ಹಸ್ತ ವದಂತಿ ವಿಚಾರವಾಗಿ, ಆಪರೇಷನ್ ಆಗಲೂ ನನಗೆ ಕ್ಯಾನ್ಸರ್ ಗಡ್ಡೆ ಬೆಳೆದಿಲ್ಲ ಅಥವಾ ಯಾವ ರೋಗವೂ ಬಂದಿಲ್ಲ. ಸಹಜವಾಗಿ ಸುದೀಪ್ ಹುಟುಹಬ್ಬದ ಪಾರ್ಟಿಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ. . ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನನಗೆ ಕಾಂಗ್ರೆಸ್‍ನಿಂದ ಆಹ್ವಾನ ಬಂದಿಲ್ಲ. ಯಾರೂ ಕೂಡ ಈ ವಿಚಾರವಾಗಿ ಸಂಪರ್ಕಿಸಿಲ್ಲ. ನಾನು ಆಪರೇಷನ್ ಆಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    ಈ ವೇಳೆ ಶಿವಕುಮಾರ್ ಅವರು, ಚೆನ್ನಾಗಿ ಕೆಲಸ ಮಾಡಿಯೂ ಯಾಕೆ ಸೋತಿದ್ದೀರಿ ಎಂದು ವಿಚಾರಿಸಿದರು. ಇದಕ್ಕೆ ನಿಮ್ಮ ಪ್ರಭಾವ ಹಾಗೂ ಸಿದ್ದರಾಮಯ್ಯ ಅವರ ಪ್ರಭಾವ ಎಂದಿದ್ದೇನೆ. ನಾವು ಮೊದಲಿನಿಂದಲೂ ಆತ್ಮೀಯರು. ಪಾರ್ಟಿಯಿಂದ ಅವರು ಬೇಗನೆ ಹೋದರು. ಇದು ಬೆಳಗ್ಗೆ ಹೆಚ್ಚು ಸುದ್ದಿಯಾಗಿದೆ. ನಮ್ಮದು ತಪ್ಪಲ್ಲ, ಆಪರೇಷನ್ ಹಸ್ತ ಅನ್ನೋ ವಿಚಾರವೇ ಹೆಚ್ಚಿದೆ. ಗೆದ್ದವರು ಗೆಲುವಿನ ಮಜಾ ಪಡೀತಿದ್ದಾರೆ. ನಾವು ಸೋತ ಮಜಾ ಪಡೀತಿದ್ದೇವೆ ಅಷ್ಟೇ. ಗೆಲುವಿನ ಮಜವೇ ಯಾವಾಗಲೂ ಇರಬಾರದು ಎಂದಿದ್ದಾರೆ.

    ಪಕ್ಷದಲ್ಲಿ ಅಸಮಾಧಾನ ವಿಚಾರವಾಗಿ, ಬೇಸರ ಇರೋದು ನಿಜ. ಚರ್ಚೆ ವೇಳೆ ವಿಪಕ್ಷ ನಾಯಕ ಬೇಗ ಆಗಬೇಕು ಎಂದು ಹೇಳಿದ್ದೇವೆ. ಬೇಗ ಮಾಡಿದಾಗ ನಮಗೂ ಅನುಕೂಲ ಆಗಲಿದೆ. ವಿಪಕ್ಷ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಶೀಘ್ರವೇ ತುಂಬಬೇಕಿದೆ. ವಿಪಕ್ಷ ನಾಯಕನ ಜೊತೆಯಲ್ಲಿ ವಿಪ್ ಕೂಡ ಬರಲಿದ್ದಾರೆ. ನಾಲ್ಕೈದು ಹುದ್ದೆ ಕೂಡ ಜೊತೆಯಲ್ಲೇ ಬರಲಿದೆ. ಬೇಗನೇ ನೇಮಕ ಮಾಡುತ್ತಾರೆ. ಈ ವಿಚಾರದಲ್ಲಿ ಬಾಂಬೆ ಟೀಮ್ ಎನ್ನುವುದು ತಪ್ಪು. ಅವರು ಬಾರದಿದ್ದರೆ ನಾವು ಅಧಿಕಾರ ಹಿಡಿಯಲು ಆಗುತ್ತಿರಲಿಲ್ಲ. ಕಾಂಗ್ರೆಸ್ ಸಂಪರ್ಕದಲ್ಲಿ ಇರದೇ ಸಂತೋಷ್‍ಜೀ ಸುಮ್ಮನೆ ಹೇಳಿಲ್ಲ. ರಾಯರೆಡ್ಡಿ ಅವರ ಲೆಟರ್ ಬಂದ ಮೇಲೆ ಚರ್ಚೆ ಶುರುವಾಯ್ತು ಎಂದರು.

    ಪಕ್ಷ ನನಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ. ಪಕ್ಷ ಅಧಿಕಾರದಲ್ಲಿ ಇರುವಾಗ ಅಷ್ಟೇ ಅಲ್ಲ. ಅಧಿಕಾರದಲ್ಲಿ ಇಲ್ಲದಿದ್ದಾಗ ಸಹ ನಾವು ಪಕ್ಷದ ಜೊತೆ ಇರಬೇಕು ಎಂದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸುವ ವದಂತಿ ಬಗ್ಗೆ, ಕ್ಷೇತ್ರದಲ್ಲಿ ನಮ್ಮ ಎಂಪಿ ರಾಜಾ ಅಮರೇಶ್ವರ ನಾಯ್ಕ ಅವರು ಒಳ್ಳೇಯ ಕೆಲಸ ಮಾಡಿದ್ದಾರೆ. ಈ ಬಾರಿಯೂ ಅವರೇ ಅಭ್ಯರ್ಥಿ ಆಗಲಿ ಎಂದು ಕೇಳಿದ್ದೇವೆ. ನಾವೆಲ್ಲ ಅವರ ಪರ ಕೆಲಸ ಮಾಡುತ್ತೇವೆ. ಕ್ಷೇತ್ರದಿಂದ ನನ್ನ ಹೆಸರೂ ಚರ್ಚೆಯಲ್ಲಿದೆ. ಆದರೆ ನಮ್ಮ ಹಾಲಿ ಸಂಸದರಿಗೇ ಟಿಕೆಟ್ ಕೊಡಲಿ. ಇನ್ನೂ ಸಮಯ ಇದೆ, ಮುಂದೆ ನೋಡೋಣ ಈಗಲೇ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದಿದ್ದಾರೆ.‌ ಇದನ್ನೂ ಓದಿ: ಆಪರೇಷನ್ ಹಸ್ತ ವದಂತಿ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆ ಡಿಕೆಶಿ ಆಪ್ತ ಮಾತುಕತೆ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪರೇಷನ್ ಹಸ್ತ ವದಂತಿ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆ ಡಿಕೆಶಿ ಆಪ್ತ ಮಾತುಕತೆ!

    ಆಪರೇಷನ್ ಹಸ್ತ ವದಂತಿ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆ ಡಿಕೆಶಿ ಆಪ್ತ ಮಾತುಕತೆ!

    ಬೆಂಗಳೂರು: ಆಪರೇಷನ್ ಹಸ್ತದ (Operation Hasta) ವದಂತಿ ನಡುವೆ ಬಿಜೆಪಿ (BJP) ನಾಯಕರ ಜೊತೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಆಪ್ತ ಮಾತುಕತೆ ನಡೆಸಿದ ಫೋಟೋ ಈಗ ವೈರಲ್‌ ಆಗಿದ್ದಾರೆ.

    ಖಾಸಗಿ ಹೋಟೆಲಿನಲ್ಲಿ ನಡೆದ ನಟ ಸುದೀಪ್ (Sudeep) ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಬಿ.ಸಿ.ಪಾಟೀಲ್ (BC Patil) ಹಾಗೂ ರಾಜೂ ಗೌಡ (Raju Gowda) ಜೊತೆ ಆಪ್ತ ಮಾತುಕತೆ ನಡೆಸಿದ್ದಾರೆ.  ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಬಿ.ಸಿ.ಪಾಟೀಲ್ ಗರಂ

     

    ಡಿಕೆಶಿ ಮಾತುಕತೆ ಫೋಟೋ ವೈರಲ್ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ನಾನಾ ಚರ್ಚೆ ಹುಟ್ಟುಹಾಕಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಿಸಿ ಪಾಟೀಲ್‌, ಕಾಮಾಲೆ ಕಣ್ಣಿಗೆ ಕಾಣವುದೆಲ್ಲ ಹಳದಿ ಅಂತೆ. ಇದೊಂದು ಆಕಸ್ಮಿಕ ಭೇಟಿ ಅಷ್ಟೇ. ಔಪಚಾರಿಕ ಚರ್ಚೆ, ಬೇರೆ ಯಾವುದೇ ಚರ್ಚೆ ಇಲ್ಲ. ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆವು. ಆಗ ಡಿಕೆ ಶಿವಕುಮಾರ್ ಅವರು ಬಂದಿದ್ದರು. ಅವರು ರಾಜ್ಯದ ಉಪಮುಖ್ಯಮಂತ್ರಿ. ಸಹಜವಾಗಿ ಗೌರವ ಕೊಟ್ಟು ಮಾತನಾಡಿಸಬೇಕಾಗುತ್ತದೆ. ಅದೇ ರೀತಿ ಮಾತನಾಡಿಸಿದ್ದೇವೆ ಹೊರತು ಬೇರೆ ಇಲ್ಲ. ಇದು ಆಕಸ್ಮಿಕ ಭೇಟಿ ಅಷ್ಟೇ, ಬೇರೆ ಅರ್ಥ ಬೇಡ ಎಂದು ಸ್ಪಷ್ಟನೆ ನೀಡಿದರು.

    ರಾಜೂ ಗೌಡ ಪ್ರತಿಕ್ರಿಯಿಸಿ, ನಮ್ಮ ಭೇಟಿ ಆಕಸ್ಮಿಕ. ತಮಾಶೆ ಮಾಡಿಕೊಂಡು ಮಾತಾಡಿದ್ದೇವೆ. ನಮ್ಮ ಚರ್ಚೆ ರಾಜಕೀಯ ಹೊರತಾಗಿ ಇತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ

    ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ

    ಯಾದಗಿರಿ: ಬಿಜೆಪಿ (BJP) ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ರಾಜೂಗೌಡ (Raju Gowda) ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ನಾಯಕರ ಮೇಲೆ ನಂಬಿಕೆಯಿದೆ. ಲೇಟ್ ಆಗಿ ಆದ್ರೂ ಲೇಟೆಸ್ಟ್ ಆಗಿ ಒಳ್ಳೆಯ ನಾಯಕನ ಆಯ್ಕೆಗಾಗಿ ಆಲೋಚನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

    ಒಂದೆರಡು ತಿಂಗಳಲ್ಲಿ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷನ ಆಯ್ಕೆ ಮಾಡ್ತಾರೆ ಎಂದ ರಾಜೂಗೌಡ, ಬಾಂಬೆ ಬಾಯ್ಸ್ ಘರ್ ವಾಪ್ಸಿ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಚರ್ಚೆ ಮಾಡಿದಾಗ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ಈಗ ಯಾರು ಹೋಗ್ತಿನಿ ಅಂತ ಹೇಳಂಗಿಲ್ಲ, ಅವರ ಮನಸ್ಸಿನಲ್ಲಿ ಇದ್ದದ್ದನ್ನ ಮಾಡ್ತಾರೆ. ನಾವು ಸ್ನೇಹಿತರಾಗಿ ಕೆಲವು ಸಲಹೆ ಕೊಡ್ತಿವಿ ಅಷ್ಟೇ. ಪಕ್ಷದಲ್ಲಿ ಅಸಮಾಧಾನ ಆಗಿದ್ರಿಂದ ಸ್ವಲ್ಪ ಕೋಪಗೊಂಡಿದ್ದು ನಿಜ ಎಂದಿದ್ದಾರೆ. ನೆಗಡಿ ಆಗೇತಿ ಅಂತ ಮೂಗು ಕೋಯ್ಕಂಡ್ರೆ ತಪ್ಪು. ಕಾದು ನೋಡೋಣ ಯಾರು ಯಾವಾಗ ಹೋಗ್ತಾರೆ. ನಮಗೂ ಅಧಿಕಾರ ಸಿಗುತ್ತೆ ಅಂತ ಬಾಂಬೆ ಟಿಂ ಸೇರಿಸ್ಕೊಂಡಿದ್ದೇವೆ. ಈಗ ಅವರು ಹೋಗ್ತಿದ್ದಾರೆ ಅಂದ್ರೆ ಯಾಕೆ ಹೋಗ್ತಾರೆ ಕೇಳೋಣ ಎಂದರು. ಇದನ್ನೂ ಓದಿ: ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಇನ್ನೂ ರೇಣುಚಾರ್ಯ (Renukacharya) ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರಕ್ಕೆ ವ್ಯಂಗ್ಯವಾಡಿದ ರಾಜೂಗೌಡ, ನಮ್ಮ ರೇಣುಕಾ ಮುತ್ಯಾ ಏನ್ ಕಾಂಗ್ರೆಸ್ (Congress) ಸೇರೋದಿಲ್ಲ. ನಮ್ಮ ಮುತ್ಯಾಗ ಸ್ವಲ್ಪ ಭೇಟಿಯಾಗುವ ಚಾಳಿ ಇದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರನ್ನ ಭೇಟಿ ಆಗಿದ್ದಾರೆ ಅಷ್ಟೇ. ಇದಕ್ಕಾಗಿ ನಾನು ಇವತ್ತೇ ಹೇಳ್ತಿದ್ದೀನಿ ರೈತರ ಹೊಲಗಳಿಗೆ ನೀರು ಹರಿಸೋ ವಿಚಾರವಾಗಿ ನಾನು ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ರೈತರಿಗೆ ನೀರು ಹರಿಸುವ ಬಗ್ಗೆ ಚರ್ಚಿಸ್ತೀನಿ. ಕಾಂಗ್ರೆಸ್ ನಾಯಕರನ್ನ ಭೇಟಿಯಾದ ರಾಜುಗೌಡ ಅಂತಾ ಬ್ರೇಕಿಂಗ್ ಮಾಡ್ಬೇಡಿ ಎಂದು ನಗೆಯಾಡಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಅಭ್ಯರ್ಥಿ ರಾಜೂಗೌಡಗೆ ಸೋಲು- ಅಭಿಮಾನಿಗೆ ಆಘಾತ, ಆಸ್ಪತ್ರೆಗೆ ದಾಖಲು

    ಬಿಜೆಪಿ ಅಭ್ಯರ್ಥಿ ರಾಜೂಗೌಡಗೆ ಸೋಲು- ಅಭಿಮಾನಿಗೆ ಆಘಾತ, ಆಸ್ಪತ್ರೆಗೆ ದಾಖಲು

    ಯಾದಗಿರಿ: ಬಿಜೆಪಿ (BJP) ಅಭ್ಯರ್ಥಿ ರಾಜೂಗೌಡ (Raju Gowda) ಚುನಾವಣೆಯಲ್ಲಿ (Election) ಸೋತ ವಿಚಾರ ಕೇಳಿ ಅಭಿಮಾನಿಯೊಬ್ಬ ಅಘಾತಕ್ಕೊಳಗಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಗೆದ್ದಪ್ಪ ಪೂಜಾರಿ ತೀವ್ರ ಅಸ್ವಸ್ಥರಾಗಿರುವ ಅಭಿಮಾನಿ, ಅವರನ್ನು ಬಾಗಲಕೋಟೆಯ (Bagalkote) ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಶಾಸಕ ರಾಜೂಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಆರೋಗ್ಯ ವಿಚಾರಿಸಿದ್ದಾರೆ. ಗೆದ್ದಪ್ಪ ಅವರಿಗೆ ಧೈರ್ಯ ಹೇಳಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಹಕಾರ ಕೊಡುವ ವಿಶ್ವಾಸವಿದೆ: ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ

    ಸುರಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೂಗೌಡ 88,336 ಮತಗಳನ್ನು ಪಡೆದಿದ್ದರು. ಇವರ ವಿರುದ್ಧ ಕಾಂಗ್ರೆಸ್ (Congress) ಅಭ್ಯರ್ಥಿ ರಾಜ ವೆಂಕಟಪ್ಪ ನಾಯಕ 1,13,559 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಿಂದ ಹನುಮಾನ್ ದೇವರಿಗೆ ವಿಶೇಷ ಪೂಜೆ