Tag: rajsthan

  • ನಗರಗಳಲ್ಲಿನ ಬೀದಿನಾಯಿ, ಅನಾಥ ಪ್ರಾಣಿಗಳ ತೆರವಿಗೆ ವಿಶೇಷ ಅಭಿಯಾನ – ರಾಜಸ್ಥಾನ ಹೈಕೋರ್ಟ್

    ನಗರಗಳಲ್ಲಿನ ಬೀದಿನಾಯಿ, ಅನಾಥ ಪ್ರಾಣಿಗಳ ತೆರವಿಗೆ ವಿಶೇಷ ಅಭಿಯಾನ – ರಾಜಸ್ಥಾನ ಹೈಕೋರ್ಟ್

    ಜೈಪುರ: ಜೋಧ್‌ಪುರ, ಉದಯಪುರ ಹಾಗೂ ಜೈಪುರ ನಗರಗಳ ಬೀದಿನಾಯಿ (Street Dogs) ಮತ್ತು ಅನಾಥ ಪ್ರಾಣಿಗಳನ್ನು ತೆರೆವುಗೊಳಿಸುವುದಕ್ಕಾಗಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ (Rajasthan Highcourt) ಆದೇಶಿಸಿದೆ.

    ಅಭಿಯಾನದ ವೇಳೆ ತೆರವಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅವಕಾಶವಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಕುಲದೀಪ್ ಮಾಥುರ್ ಮತ್ತು ರವಿ ಚಿರಾನಿಯಾ ಅವರಿದ್ದ ದ್ವಿ-ಸದಸ್ಯ ಪೀಠ ಹೇಳಿದೆ. ಆದರೆ ಅಭಿಯಾನದ ವೇಳೆ ಪ್ರಾಣಿಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕೂಡ ಸ್ಪಷ್ಟಪಡಿಸಿದೆ.ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಈ ಕುರಿತು ನಾಗರಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ ಒದಗಿಸಬೇಕು. ಅದಲ್ಲದೇ ಬೀದಿ ನಾಯಿಗಳು ಹಾಗೂ ಅನಾಥ ಪ್ರಾಣಿಗಳಿಗೆ ಪುರಸಭೆಗಳು, ಖಾಸಗಿ ವ್ಯಕ್ತಿಗಳು ಅಥವಾ ಇನ್ಯಾವುದೇ ಸಂಸ್ಥೆಗಳು ತಾವು ನಿರ್ವಹಿಸುವ ಆಶ್ರಯ ಕೇಂದ್ರಗಳಲ್ಲಿ ತಮಗಿಷ್ಟವಿದ್ದಲ್ಲಿ ಆಹಾರ ನೀಡಬಹುದು ಎಂದು ಹೇಳಿದೆ.

    ಸಾಮಾನ್ಯ ಜನರು ಭಾವನೆ, ಧಾರ್ಮಿಕ ನಂಬಿಕೆ ಅಥವಾ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಆಹಾರ ನೀಡಲು ಅಥವಾ ಅವುಗಳನ್ನು ನೋಡಿಕೊಳ್ಳಲು ಬಯಸಿದರೆ ಅಂತಹ ಚಟುವಟಿಕೆಗಳನ್ನು ಪ್ರಾಣಿ ಆಶ್ರಯ ಕೇಂದ್ರದಲ್ಲಿ ಮಾಡಬಹುದು ಎಂದು ತಿಳಿಸಿದೆ.

    ರಸ್ತೆಗಳಿಂದ ಬೀದಿ ಪ್ರಾಣಿಗಳನ್ನು ತೆರವುಗೊಳಿಸುವಂತೆ ಮತ್ತು ವಾಹನಗಳ ಮುಕ್ತ ಸಂಚಾರಕ್ಕಾಗಿ ನಿಯಮಿತವಾಗಿ ಗಸ್ತು ತಿರುಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಅಧಿಕಾರಿಗಳಿಗೆ ಪೀಠ ನಿರ್ದೇಶಿಸಿದೆ. ರಾಜ್ಯದಲ್ಲಿ ನಾಯಿ ಕಡಿತ, ಹೆದ್ದಾರಿಯಲ್ಲಿ ಅನಾಥ ದನಗಳ ಹಾವಳಿಯಿಂದ ಹೆಚ್ಚು ಸಾವು-ನೋವು ಸಂಭವಿಸುತ್ತಿದ್ದ ಹಿನ್ನೆಲೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಕುರಿತು ಪ್ರತಿಕ್ರಿಯಿಸಲು ರಾಜ್ಯ ಸರ್ಕಾರ ಮತ್ತು ಪುರಸಭೆ ಸಮಯಾವಕಾಶದ ಅಗತ್ಯವಿದೆ ಎಂದು ಸೋಮವಾರ (ಆ.11) ಕೋರಿದ್ದವು. ಸದ್ಯ ಹೈಕೋರ್ಟ್ ಸೆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ.ಇದನ್ನೂ ಓದಿ: ಯಾವ ಕಾರಣಕ್ಕೆ ರಾಜಣ್ಣ ಅವ್ರನ್ನ ವಜಾ ಮಾಡಿದ್ದಾರೆ ಗೊತ್ತಿಲ್ಲ: ಪರಮೇಶ್ವರ್

  • 70 ವರ್ಷ ಲಿವ್ ಇನ್ ರಿಲೇಶನ್ – 95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ರಾಜಸ್ಥಾನ ಜೋಡಿ

    70 ವರ್ಷ ಲಿವ್ ಇನ್ ರಿಲೇಶನ್ – 95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ರಾಜಸ್ಥಾನ ಜೋಡಿ

    ಜೈಪುರ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನವೇ ಲಿವ್ ಇನ್ ರಿಲೇಶನ್‌ನಲ್ಲಿರುವುದು (Live In Relation) ಕಾಮನ್. ಆದರೆ ರಾಜಸ್ಥಾನದ (Rajasthan) ಜೋಡಿಯೊಂದು 70 ವರ್ಷಗಳಿಂದ ಲಿವ್ ಇನ್‌ನಲ್ಲಿದ್ದು, ವೃದ್ಧಾಪ್ಯದಲ್ಲಿ ಹಸಮಣೆ ಏರಿರುವ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಹೌದು, ರಾಜಸ್ಥಾನದ ಡುಂಗರಪುರ (Dungarpur) ಜಿಲ್ಲೆಯ ಗಾಲಂದರ್ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಡುಂಗರಪುರದ ರಾಮ ಅಂಗರಿ (95) ಹಾಗೂ ಜೀವಲಿ ದೇವಿ (90) 70 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ನಲ್ಲಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಂದ್ರೆ Real Culprits of Bangalore – ವಿಪಕ್ಷ ನಾಯಕ ಆರ್‌. ಅಶೋಕ್‌ ಲೇವಡಿ

    ಈ ಜೋಡಿ ಒಂದೇ ಮನೆಯಲ್ಲಿ ಇದ್ದುಕೊಂಡು ಮದುವೆಯಾಗದೇ ಜೀವನ ನಡೆಸುತ್ತಿದ್ದರು. ಈ ಜೋಡಿಗೆ 4 ಗಂಡು ಹಾಗೂ 4 ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಬಹಳ ಹಿಂದೆಯೇ ಮದುವೆಯಾಗಬೇಕಿದ್ದ ಈ ಜೋಡಿಯ ಕನಸನ್ನು ಮಕ್ಕಳು ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ನೆರವೇರಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

    ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಎಲ್ಲರೂ ಈ ವಿಶಿಷ್ಟ ಮದುವೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಯುವ ಜೋಡಿಗಳ ವಿವಾಹದಂತೆ ಹಳದಿ, ಮೆಹಂದಿ ಮತ್ತು ಬಿಂದೋರಿಯಂತಹ ಎಲ್ಲಾ ಆಚರಣೆಗಳನ್ನು ನಡೆಸಲಾಯಿತು. ಮದುವೆಯಲ್ಲಿ ಡಿಜೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು ಮತ್ತು ಗ್ರಾಮಸ್ಥರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಪರೂಪದ ಮದುವೆಯಲ್ಲಿ ಇಡೀ ಊರಿಗೆ ಊರೇ ಭಾಗಿಯಾಗಿ ಸಂಭ್ರಮಿಸಿದೆ. ಇದನ್ನೂ ಓದಿ: ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

  • Udaipur Stabbing Case| ಶಾಲೆಗೆ ಹರಿತವಾದ ಸಾಧನ ಒಯ್ಯುವುದುಕ್ಕೆ ನಿಷೇಧ ಹೇರಿದ ಸರ್ಕಾರ

    Udaipur Stabbing Case| ಶಾಲೆಗೆ ಹರಿತವಾದ ಸಾಧನ ಒಯ್ಯುವುದುಕ್ಕೆ ನಿಷೇಧ ಹೇರಿದ ಸರ್ಕಾರ

    ಜೈಪುರ: ಉದಯ್‌ಪುರದ (Udaipur) ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಸಹಪಾಠಿಗೆ ಚಾಕು ಇರಿದ ಘಟನೆಯ ಬಳಿಕ ರಾಜಸ್ಥಾನ (Rajsthan) ಶಿಕ್ಷಣ ಇಲಾಖೆ ಫುಲ್ ಅಲರ್ಟ್ ಆಗಿದೆ. ಇದೀಗ ಶಾಲೆಗಳಿಗೆ ಚಾಕು ಅಥವಾ ಕತ್ತರಿಗಳಂತಹ ಹರಿತವಾದ ಉಪಕರಣಗಳನ್ನು (Sharp Edged Weapons) ಒಯ್ಯುವುದನ್ನು ನಿಷೇಧಿಸಿ ರಾಜಸ್ಥಾನ ಶಿಕ್ಷಣ ಇಲಾಖೆ ಶನಿವಾರ ಮಾರ್ಗಸೂಚಿಯನ್ನು (Guidelines) ಹೊರಡಿಸಿದೆ.

    ಇದರ ಪ್ರಕಾರ, ಚಾಕು, ಕತ್ತರಿಗಳಂತಹ ಯಾವುದೇ ಹರಿತವಾದ ಉಪಕರಣಗಳನ್ನು ವಿದ್ಯಾರ್ಥಿಗಳು ಶಾಲೆಗೆ ಒಯ್ಯುವಂತಿಲ್ಲ. ವಿದ್ಯಾರ್ಥಿಗಳು ತರಗತಿಗೆ ತೆರಳುವ ವೇಳೆ ಶಿಕ್ಷಕರು ಅವರ ಬ್ಯಾಗ್ ಪರಿಶೀಲಿಸಿ ಹರಿತವಾದ ಉಪಕರಣಗಳು ಇದೆಯಾ ಎಂದು ಖಚಿತಪಡಿಸಿಕೊಂಡು ಬಳಿಕ ತರಗತಿ ಒಳಗೆ ಬಿಡಬೇಕು. ಈ ಮಾರ್ಗಸೂಚಿಯನ್ನು ಉಲ್ಲಂಘಿಸುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಉದಯ್‌ಪುರದಲ್ಲಿ ಸಹಪಾಠಿಗೆ ಚಾಕು ಇರಿತ – ಅಕ್ರಮವಾಗಿ ನಿರ್ಮಿಸಿದ್ದ ಆರೋಪಿ ಮನೆ ಧ್ವಂಸ

     

    ಈ ಬಗ್ಗೆ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಆಶಿಶ್ ಮೋದಿ ಮಾತನಾಡಿ, ಪೋಷಕರು ಮಕ್ಕಳನ್ನು ಓದಲೆಂದು ಶಾಲೆಗೆ ಕಳುಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಆವರಣಗಳು ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳವಾಗಬೇಕು. ಯಾವುದೇ ರೀತಿಯ ಹಿಂಸಾಚಾರ ಇಲ್ಲಿ ನಡೆಯಬಾರದು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಈ ಮಾರ್ಗಸೂಚಿಯನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಯನ್ನು ಶಾಲಾ ಸೂಚನಾ ಫಲಕಗಳಲ್ಲಿ ಅಂಟಿಸಲಾಗುತ್ತದೆ ಮತ್ತು ಪ್ರಾರ್ಥನಾ ಸಭೆಗಳಲ್ಲಿ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ತಿಳಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ನಾನು ಶುದ್ಧಹಸ್ತ ಎಂದು ಪದೇಪದೆ ಹೇಳುವ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ನಿಖಿಲ್ ಆಗ್ರಹ

    ಪ್ರಕರಣ ಏನು?
    ಸರ್ಕಾರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶುಕ್ರವಾರ ಕ್ಷುಲ್ಲಕ ಕಾರಣಕ್ಕೆ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದು, ಮಧುಬನ್ ಪ್ರದೇಶದಲ್ಲಿ ಕೋಮುಗಲಭೆ ಸೃಷ್ಠಿಸಿದೆ. ಘಟನೆಯ ಬಳಿಕ ಹಲವಾರು ಹಿಂದೂ ಸಂಘಟನೆಯ ಸದಸ್ಯರು ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಕನಿಷ್ಟ ಮೂರು ಕಾರುಗಳಿಗೆ ಬೆಂಕಿ ಹಚ್ಚಿದ್ದಲ್ಲದೇ ಕಲ್ಲು ತೂರಾಟ ನಡೆಸಿ ಕೋಮುಗಲಭೆ ಸೃಷ್ಠಿಸಿದ್ದರು. ಇದನ್ನೂ ಓದಿ: TB Dam | ಮೂರನೇ ಸ್ಟಾಪ್‌ ಗೇಟ್‌ ಅಳವಡಿಕೆ ಯಶಸ್ವಿ – ಎಲ್ಲಾ ಗೇಟ್‌ ಬಂದ್‌

    ಪ್ರಕರಣದಲ್ಲಿ ವಿದ್ಯಾರ್ಥಿಗಳು ವಿವಿಧ ಸಮುದಾಯದವರಾಗಿದ್ದರಿಂದ ನಗರದಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಕಾರುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟದ ಬಳಿಕ ಗುಂಪನ್ನು ಚದುರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಇನ್ನು ಮಧುಬನ್ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಹೇರಲಾಗಿದೆ. ಇದನ್ನೂ ಓದಿ: ಬೆಳಗ್ಗೆ ಎದ್ದರೆ ನೈತಿಕತೆ ಬಗ್ಗೆ ಮಾತನಾಡೋ ಸಿಎಂ ರಾಜೀನಾಮೆ ನೀಡಲಿ: ಜನಾರ್ದನ ರೆಡ್ಡಿ

  • ಶಾಲಾ ಕೊಠಡಿಯಲ್ಲಿ ದಲಿತ ವಿದ್ಯಾರ್ಥಿ ನೇಣಿಗೆ ಶರಣು – ಇಬ್ಬರು ಶಿಕ್ಷಕರ ಅಮಾನತು

    ಶಾಲಾ ಕೊಠಡಿಯಲ್ಲಿ ದಲಿತ ವಿದ್ಯಾರ್ಥಿ ನೇಣಿಗೆ ಶರಣು – ಇಬ್ಬರು ಶಿಕ್ಷಕರ ಅಮಾನತು

    ಜೈಪುರ: ರಾಜಸ್ಥಾನದ (Rajasthan) ಕೊಟ್‌ಪುಟ್ಲಿಯ ಸರ್ಕಾರಿ ಶಾಲೆಯಲ್ಲಿ 15 ವರ್ಷದ ದಲಿತ ವಿದ್ಯಾರ್ಥಿಯೊಬ್ಬ(Dalit Student) ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರನ್ನು (Teachers) ಅಮಾನತುಗೊಳಿಸಲಾಗಿದೆ.

    ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಶಾಲಾ ಹಾಸ್ಟೆಲ್‌ನಲ್ಲಿ ವಾಸವಿದ್ದು, ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಗೆ ಶಿಕ್ಷಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಠಾಣೆಗೆ ಮುತ್ತಿಗೆ ಹಾಕಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ

    ಈ ಹಿನ್ನೆಲೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಶಿಕ್ಷಕರು ತನಗೆ ಕಿರುಕುಳ ನೀಡುತ್ತಿರುವುದಾಗಿ ವಿದ್ಯಾರ್ಥಿ ತನ್ನ ತಂದೆಗೆ ತಿಳಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಇದನ್ನೂ ಓದಿ: ಸೊಸೆಯನ್ನು ರಕ್ಷಿಸಲು ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತ್ನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ

    ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ

    ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ ಅಪಘಾತಕ್ಕೊಳಗಾದ ಘಟನೆ ರಾಜಸ್ತಾನದಲ್ಲಿ ನಡೆದಿದೆ.

    ಈ ಘಟನೆ ಕೋಟಾ- ಚಿತ್ತೂರ್ ಹೆದ್ದಾರಿಯಿಂದ ಸುಮಾರು 55 ಕಿ.ಮೀ ದೂರದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅಪಾಯದಿಂದ ಪಾರಾಗಿದ್ದಾರೆ.

    ಘಟನೆ ನಡೆದ ಕೂಡಲೇ ಜಶೋದಾ ಬೆನ್ ಅವರನ್ನು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದ್ದಾರೆ ಅಂತ ಚಿತ್ತೋರ್ ಗಢ್ ನ ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ ಸುರೇಶ್ ಕಾರ್ತಿಕ್ ತಿಳಿಸಿದ್ದಾರೆ.

    ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸಂಬಂಧಿಕರೆಂದು ತಿಳಿದುಬಂದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಜಯೇಂದ್ರ ಸಣ್ಣಪುಟ್ಟ ಗಾಯಗಳಾಗಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರೂ ಗುಜರಾತ್ ನ ಬರನ್ ಎಂಬಲ್ಲಿನ ಅತ್ರು ಗೆ ಪ್ರವಾಸ ಬೆಳೆಸಿದ್ದರು ಎಂಬುದಾಗಿ ವರದಿಯಾಗಿದೆ.

    ಘಟನೆ ಕುರಿತು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಜಶೋದಾ ಬೆನ್ ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.