Tag: Rajnandgaon

  • ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರು ಜನನ

    ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರು ಜನನ

    ರಾಯ್ಪುರ: ಹಸುವೊಂದು ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ ಮೂರು ಕಣ್ಣಿನ್ನು ಹೊಂದಿರುವ ಕರುವನ್ನು ನೋಡಲು ದೂರದ ಊರುಗಳಿಂದ ಜನ ಜಮಾಯಿಸುತ್ತಿದ್ದು, ಎಲ್ಲರೂ ಕರುವಿಗೆ ಹೂವಿನ ಮಾಲೆ ಹಾಕಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ ಪಶು ವೈದ್ಯರು ಕರು ಸರಿಯಾಗಿ ಬೆಳವಣಿಗೆಯಾಗದ ಕಾರಣ ಹೀಗೆ ಜನಿಸಿದೆ ಎನ್ನುತ್ತಿದ್ದಾರೆ.  ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

    ಜನವರಿ 14 ರಂದು ಸಂಜೆ 7 ಗಂಟೆ ಸುಮಾರಿಗೆ ಹಸು ಕರುವಿಗೆ ಜನ್ಮ ನೀಡಿದ್ದು, ಅಂದು ಮಕರ ಸಂಕ್ರಾಂತಿ ಹಬ್ಬದವಾಗಿದ್ದರಿಂದ ಕರುವಿನ ಜನನದ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚಾಗಿದೆ. 3 ಕಣ್ಣಿನ ಕರುವನ್ನು ನೋಡಲು ಜನ ಮುಗಿಬೀಳುತ್ತಿದ್ದು, ಗ್ರಾಮಸ್ಥರು ದೀಪ ಹಚ್ಚಿ, ತೆಂಗಿನಕಾಯಿ ಒಡೆದು ಕರು ಮಹಾದೇವನ ರೂಪ ತಾಳಿದೆ ಎಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ರೈತ ಹೆಮಂತ್ ಚಂದೇಲ್ ಅವರು ಕೃಷಿ ಕೆಲಸದ ಜೊತೆಗೆ ಹಸು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು, ಜರ್ಸಿ ಹಸುವನ್ನು ಸಾಕಿದ್ದಾರೆ. ಸಂಕ್ರಾತಿ ಹಬ್ಬದಂದು ಹಸು ಕರುವಿಗೆ ಜನ್ಮ ನೀಡಿದ್ದು, ಎರಡು ಕಣ್ಣುಗಳ ಮಧ್ಯೆ ಹಸುವಿನ ಹಣೆಯ ಮೇಲೆ ಮತ್ತೊಂದು ಕಣ್ಣಿದೆ. ವಿಶೇಷವೆಂದರೆ ಈ ಹಸು ಎರಡು ಮೂಗಿನ ರಂಧ್ರಗಳ ಬದಲಿಗೆ 4 ರಂಧ್ರಗಳನ್ನು ಹೊಂದಿದೆ ಹಾಗೂ ಅದರ ಬಾಲ ಜಡೆಯ ಮಾದರಿ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

  • ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ಪೇದೆ

    ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ಪೇದೆ

    – ತಂದೆಯ ಕೃತ್ಯಕ್ಕೆ ಅನಾಥವಾದ ಕಂದಮ್ಮ

    ರಾಯ್‍ಪುರ: ಪೊಲೀಸ್ ಪೇದೆಯೋರ್ವ ಪತ್ನಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಛತ್ತೀಸ್‍ಗಢದ ರಾಜನಂದಗಾಂವ್‍ನ ಮನ್‍ಪುರನಲ್ಲಿ ನಡೆದಿದೆ.

    ಜಂಜಗೀರ್-ಚಂಪಾ ಜಿಲ್ಲೆಯ ಅಮ್ಲಿಡಿಹ್ ನಿವಾಸಿ ಮುಖೇಶ್ ಮನ್ಹಾರ್ (38), ಪತ್ನಿ ಬಬಿತಾ ಮನ್ಹಾರ್ (32) ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾರೆ. ಮುಖೇಶ್ ಅವರನ್ನು ನಕ್ಸಲ್ ಪೀಡಿತ ಪ್ರದೇಶದ ಮನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳ ಕಾಲ ನಿಯೋಜಿಸಲಾಗಿತ್ತು. ಹೀಗಾಗಿ ಅವರು ಪತ್ನಿ ಬಬಿತಾ ಮನ್ಹಾರ್ ಮತ್ತು 4 ವರ್ಷದ ಮಗಳ ಜೊತೆಗೆ ಪೊಲೀಸ್ ಠಾಣೆ ಆವರಣದ ಸರ್ಕಾರಿ ಕಟ್ಟಡದಲ್ಲಿ ವಾಸಿಸುತ್ತಿದ್ದರು.

    ಮುಖೇಶ್ ಅವರ ಮನೆಯಿಂದ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಡಿನ ಶಬ್ದ ಕೇಳಿ ಬಂದಿತ್ತು. ತಕ್ಷಣವೇ ಸ್ಥಳೀಯರು ಹೋಗಿ ನೋಡಿದಾಗ, ಪೇದೆ ಮುಖೇಶ್ ಮೊದಲು ಗುಂಡಿಕ್ಕಿ ಪತ್ನಿಯನ್ನ ಕೊಂದಿದ್ದಾರೆ. ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಜಗಳದಿಂದ ಮುಖೇಶ್ ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ. ಆದರೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮುಖೇಶ್ ಹಾಗೂ ಬಬಿತಾ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ತಂದೆಯ ಕೃತ್ಯದಿಂದಾಗಿ 4 ವರ್ಷದ ಹೆಣ್ಣು ಮಗು ಅನಾಥವಾಗಿದೆ.