Tag: Rajkot

  • ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

    ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

    ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ (Vijay Rupani) ಅವರ ಅಂತ್ಯಕ್ರಿಯೆ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ (Rajkot) ನಡೆಯಲಿದೆ.

    ವಿಜಯ್ ರೂಪಾನಿ ರಾಜ್‌ಕೋಟ್ ಪ್ರತಿನಿಧಿಸುತ್ತಿದ್ದರು. ಭಾನುವಾರ ವಿಜಯ್ ರೂಪಾನಿ ಡಿಎನ್‌ಎ ಮ್ಯಾಚ್ ಆಗಿತ್ತು. ಅವರ ಸಹೋದರಿ ಡಿಎನ್‌ಎ ಜೊತೆಗೆ ವಿಜಯ್ ರೂಪಾನಿ ಡಿಎನ್‌ಎ ಮ್ಯಾಚ್ ಆಗಿತ್ತು. ಇಂದು ಬೆಳಗ್ಗೆ 11:30ಕ್ಕೆ ಸಿವಿಲ್ ಆಸ್ಪತ್ರೆಯಿಂದ ಮೃಹದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಬಳಿಕ ಮೃತದೇಹವನ್ನು ವಿಮಾನದ ಮೂಲಕ ರಾಜ್‌ಕೋಟ್‌ಗೆ ಕೊಂಡೊಯ್ಯಲಾಗುವುದು. ಇದನ್ನೂ ಓದಿ: ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

    ಮಧ್ಯಾಹ್ನ 2 ಗಂಟೆಯ ವೇಳೆಗೆ ರಾಜ್‌ಕೋಟ್ ತಲುಪುವ ನಿರೀಕ್ಷೆಯಿದೆ. ಸಂಜೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದ್ದು, 6 ಗಂಟೆಯ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

  • ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ (Chinnaswamy Stampede) ದುರಂತದ ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ಬಿಸಿಸಿಐ (BCCI) ಬೇರೆಡೆ ಸ್ಥಳಾಂತರ ಮಾಡಿದೆ. ದುರಂತದ ಬಳಿಕ ಬಿಸಿಸಿಐ ಪಂದ್ಯಗಳ ಸ್ಥಳಾಂತರಕ್ಕೆ ಮುಂದಾಗಿದೆ.

    ನವೆಂಬರ್ 13 ರಿಂದ 19ರವರೆಗೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಭಾರತ ಎ ಮತ್ತು ಸೌಥ್ ಆಫ್ರಿಕಾ ಎ ನಡುವಣ ಪಂದ್ಯಗಳ ಆಯೋಜನೆ ಮಾಡಲಾಗಿತ್ತು. ಆದರೆ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ದುರಂತ ಬಳಿಕ ಬಿಸಿಸಿಐ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳನ್ನು ಸ್ಥಳಾಂತರ ಮಾಡಿದೆ. ಇದನ್ನೂ ಓದಿ:  Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್

    ನವೆಂಬರ್‌ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈಗ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳು ಸ್ಥಳಾಂತರ ಆಗಿದ್ದು, ಈ ಬಗ್ಗೆ ನಿರ್ದಿಷ್ಟ ಕಾರಣ ನೀಡದ ಬಿಸಿಸಿಐ, ಪಂದ್ಯ ಸ್ಥಳಾಂತರ ಬಗ್ಗೆಯಷ್ಟೇ ಮಾಹಿತಿ ನೀಡಿದೆ. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

  • ಗೇಮಿಂಗ್ ಝೋನ್‍ನಲ್ಲಿ ಅಗ್ನಿ ದುರಂತ – ಪುರಸಭೆ ಆಯುಕ್ತರು ನಿದ್ರಿಸುತ್ತಿದ್ದಾರೆ: ಹೈಕೋರ್ಟ್ ಚಾಟಿ

    ಗೇಮಿಂಗ್ ಝೋನ್‍ನಲ್ಲಿ ಅಗ್ನಿ ದುರಂತ – ಪುರಸಭೆ ಆಯುಕ್ತರು ನಿದ್ರಿಸುತ್ತಿದ್ದಾರೆ: ಹೈಕೋರ್ಟ್ ಚಾಟಿ

    ಗಾಂಧಿನಗರ: ರಾಜ್‍ಕೋಟ್‍ನ (Rajkot) ಗೇಮಿಂಗ್‌ ಝೋನ್‌ನಲ್ಲಿ (TRP Game Zone) ಕಳೆದ ತಿಂಗಳು ಸಂಭವಿಸಿದ ಅಗ್ನಿ ದುರಂತ ಕುರಿತು ಇಂದು (ಜೂ.13) ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ (Gujarat High Court), ಮುನ್ಸಿಪಲ್ ಕಮಿಷನರ್ ನಿದ್ರಿಸುತ್ತಿದ್ದಾರೆ ಎಂದು ಚಾಟಿ ಬೀಸಿದೆ. ಅಗ್ನಿ ಅವಘಡಕ್ಕೆ ಗುತ್ತಿಗೆದಾರರನ್ನು ಮಾತ್ರ ಏಕೆ ದೂಷಿಸಲಾಗುತ್ತಿದೆ? ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

    ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೇಳಿದ ಅಧಿಕಾರಿಗಳ ವಿರುದ್ಧವೂ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿದೆ. ಈ ವೇಳೆ ರಾಜ್‍ಕೋಟ್ ಅಗ್ನಿ ಅವಘಡ ನಿಮಗೆ ಚಿಕ್ಕದೆನಿಸುತ್ತಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಸಮಯಕ್ಕೆ ಸರಿಯಾಗಿ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿತು.

    court order law

    ಮೊರ್ಬಿ, ಹರ್ನಿ ಸೇರಿದಂತೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಪಾಲಿಕೆ ಆಯುಕ್ತರು ನಿದ್ದೆ ಮಾಡುತ್ತಿದ್ದಾರೆ. ಹೀಗಾಗಿ ನಿರ್ಲಕ್ಷ್ಯದಿಂದ ಅವಘಡಗಳು ಸಂಭವಿಸುತ್ತಿವೆ. ಈಗ ಯಾವುದೇ ಪೌರಾಯುಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ಹೇಳಿದೆ.

    ಮೇ 25 ರಂದು ರಾಜ್‍ಕೋಟ್‍ನ ಟಿಆರ್‍ಪಿ ಗೇಮಿಂಗ್ ಝೋನ್‍ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮಕ್ಕಳು ಸೇರಿದಂತೆ 28 ಜನ ಸಾವನ್ನಪ್ಪಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ, ಅಗ್ನಿಶಾಮಕ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿತ್ತು. ಅಲ್ಲದೇ ರಾಜ್‍ಕೋಟ್‍ನಲ್ಲಿ ಎರಡು ಇತರ ಗೇಮಿಂಗ್ ಝೋನ್‍ಗಳು ಅಗ್ನಿ ಸುರಕ್ಷತೆ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಪರವಾನಗಿ ಇಲ್ಲದೆ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂಬ ವಿಚಾರವಾಗಿ ಹೈಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

    ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಗ್ನಿ ಸುರಕ್ಷತಾ ಕಾಯಿದೆಯನ್ನು ರಾಜ್ಯದಲ್ಲಿ ಅನುಸರಿಸುತ್ತಿಲ್ಲ ಎಂಬ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ತನಿಖೆಯಲ್ಲಿ ಲೋಪ ಎಸಗಲಾಗಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.

    ರಾಜ್‍ಕೋಟ್ ಅಗ್ನಿ ದುರಂತದ ನಂತರ, ಗುಜರಾತ್ ಸರ್ಕಾರವು ಮನರಂಜನಾ ಸೌಲಭ್ಯಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕರಡು ನಿಯಮಗಳನ್ನು ರೂಪಿಸಿದೆ.

  • ರಾಜ್‍ಕೋಟ್‍ನ ಗೇಮಿಂಗ್ ಝೋನ್ ಅಗ್ನಿ ಅವಘಡ ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್

    ರಾಜ್‍ಕೋಟ್‍ನ ಗೇಮಿಂಗ್ ಝೋನ್ ಅಗ್ನಿ ಅವಘಡ ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್

    ಗಾಂಧಿನಗರ: ಗುಜರಾತ್‍ನ (Gujarat) ರಾಜ್‍ಕೋಟ್‍ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ (Rajkot Game Zone Fire) 27 ಮಂದಿಯ ಸಾವಿಗೆ ಕಾರಣವಾದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಧವಲ್ ಠಕ್ಕರ್‌ (Dhawal Thakkar) ರಾಜಸ್ಥಾನದ ಅಬು ರಸ್ತೆಯಲ್ಲಿ ಬಂಧಿಸಲಾಗಿದೆ. ಈತ ರಾಜಸ್ಥಾನದ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    ಗೇಮಿಂಗ್ ಝೋನ್‍ನ ಆರು ಪಾಲುದಾರರ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ. ಈ ವಲಯವನ್ನು ನಿರ್ವಹಿಸುತ್ತಿದ್ದ ರೇಸ್‍ವೇ ಎಂಟರ್‌ಪ್ರೈಸಸ್ ಇಬ್ಬರು ಪಾಲುದಾರರಾದ ಯುವರಾಜ್‍ಸಿಂಹ ಸೋಲಂಕಿ ಮತ್ತು ರಾಹುಲ್ ರಾಥೋಡ್ ಮತ್ತು ವ್ಯವಸ್ಥಾಪಕ ನಿತಿನ್ ಜೈನ್‍ನನ್ನು ಇಂದು ಮುಂಜಾನೆ (ಮೇ 28) ಬಂಧಿಸಲಾಗಿದೆ. ಬಂಧಿತ ಮೂವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಗೋಕನಿ ಆರೋಪಿಗಳ ಬಳಿ ಗೇಮಿಂಗ್ ಝೋನ್‍ನ ದಾಖಲೆಗಳನ್ನು ಕೇಳಿದಾಗ ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದಿದ್ದಾರೆ.

    ಹೆಚ್ಚಿನ ತನಿಖೆಗಾಗಿ ಸರ್ಕಾರ ನೇಮಿಸಿದ ವಿಶೇಷ ತನಿಖಾ ತಂಡ (SIT) ಟಿಆರ್‌ಪಿ ಗೇಮಿಂಗ್ ಝೋನ್‍ಗೆ ಸಂಬಂಧಿಸಿದ ಎಲ್ಲಾ ಫೈಲ್‍ಗಳನ್ನು ವಶಪಡಿಸಿಕೊಂಡಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ  (Harsh Sanghavi) ಹೇಳಿದ್ದಾರೆ.

    ರಾಜ್‍ಕೋಟ್‍ನ ಟಿಆರ್‌ಪಿ ಗೇಮಿಂಗ್ ಝೋನ್‍ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೋರೇಷನ್ ಅನ್ನು ಗುಜುರಾತ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‍ಕೋಟ್ ಮುನ್ಸಿಪಲ್ ಕಾರ್ಪೋರೇಷನ್‌ನಿಂದ ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ 7 ಅಧಿಕಾರಿಗಳನ್ನ ಅಮಾನತುಗೊಳಿಲಾಗಿದೆ. ಇದನ್ನೂ ಓದಿ: ಮಡಿಕೇರಿಯಲ್ಲಿ 5 ವರ್ಷ ಕಳೆದರೂ ನೆರೆಸಂತ್ರಸ್ತರಿಗೆ ಸಿಗದ ಶಾಶ್ವತ ಸೂರು – ಸರ್ಕಾರದ ವಿರುದ್ಧ ಆಕ್ರೋಶ

  • 27 ಮಂದಿ ಬಲಿಯಾದ ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ಗೆ ಇರಲಿಲ್ಲ Fire NOC

    27 ಮಂದಿ ಬಲಿಯಾದ ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ಗೆ ಇರಲಿಲ್ಲ Fire NOC

    ಗಾಂಧಿನಗರ: 22 ಮಂದಿ ಸಾವನ್ನಪ್ಪಿದ ಗುಜರಾತ್‌ ರಾಜ್‌ಕೋಟ್‌ನಲ್ಲಿರುವ ಗೇಮಿಂಗ್‌ ಸೆಂಟರ್‌ (Rajkot TRP Game Zone Fire) ಬಳಿ ಅಗ್ನಿಶಾಮಕ ನಿರಾಕ್ಷೇಪಣಾ ಪ್ರಮಾಣಪತ್ರ (Fire NOC) ಇರಲಿಲ್ಲ ಎಂಬ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ.

    ಟಿಆರ್‌ಪಿ ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್‌ನ ಎರಡು ಅಂತಸ್ತಿನ ಗೇಮಿಂಗ್ ಝೋನ್‌ನಲ್ಲಿ ನಡೆದ ಬೆಂಕಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ತನಿಖೆಯ ವೇಳೆ ಮಾಲೀಕರು ಎನ್‌ಒಸಿಗಾಗಿ ಯಾವುದೇ ಅರ್ಜಿ ಸಲ್ಲಿಸದೇ ಇರುವ ವಿಚಾರ ತಿಳಿದು ಬಂದಿದೆ.

    ಅಗ್ನಿಶಾಮಕ ಎನ್‌ಒಸಿಗಾಗಿ ಟಿಆರ್‌ಪಿ ಅರ್ಜಿ ಸಲ್ಲಿಸಿಲ್ಲ ಎಂದು ರಾಜ್‌ಕೋಟ್‌ನ ಉಪ ಮುನ್ಸಿಪಲ್ ಕಮಿಷನರ್ ಸ್ವಪ್ನಿಲ್ ಖರೆ ಹೇಳಿದ್ದಾರೆ. ನಾವು ಗೇಮಿಂಗ್ ವಲಯದ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ನಿರ್ವಾಹಕರು ಅಗ್ನಿಶಾಮಕ ಎನ್‌ಒಸಿಗೆ ಅರ್ಜಿ ಸೇರಿದಂತೆ ಬೇರೆ ಯಾವುದೇ ಕ್ಲಿಯರೆನ್ಸ್‌ಗೆ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದರು.

    ಪೊಲೀಸರು ಘಟಕದ ವ್ಯವಸ್ಥಾಪಕ ಮತ್ತು ಸಹ-ಮಾಲೀಕನನ್ನು ಬಂಧಿಸಿದ್ದಾರೆ. ಫೈರ್‌ ಎನ್‌ಒಸಿ ಇಲ್ಲದೇ ಇಷ್ಟು ದೊಡ್ಡ ಗೇಮಿಂಗ್ ಝೋನ್ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ರಾಜ್‌ಕೋಟ್ ಮೇಯರ್ ನಯ್ನಾ ಪೆಧಾಡಿಯಾ ಶನಿವಾರ ಹೇಳಿದ್ದಾರೆ.


    ನಿತಿನ್ ಜೈನ್ ಮತ್ತು ಯುವರಾಜ್ ಸಿಂಗ್ ಸೋಲಂಕಿ ಅವರನ್ನು ಬಂಧನ ಮಾಡಲಾಗಿದೆ. ಮೂರನೇ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಗೇಮಿಂಗ್ ವಲಯವನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು.

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹದು ಎಂದು ಅಧಿಕಾರಿಗಳ ಶಂಕೆ ವ್ಯಕ್ತಪಡಿಸಿದ್ದಾರೆ. ಗೇಮಿಂಗ್‌ ಕೇಂದ್ರವನ್ನು ಶೆಡ್‌ನ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಸಾಕಷ್ಟು ಹವಾನಿಯಂತ್ರಣಗಳನ್ನು ಅಳವಡಿಸಲಾಗಿದೆ. ಬಿಸಿಯಿಂದಾಗಿ ವಿದ್ಯುತ್ ವೈರಿಂಗ್ ಲೋಡ್ ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಶಾರ್ಟ್-ಸರ್ಕ್ಯೂಟ್‌ಗೆ ಕಾರಣವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಅನುಮಾನನ್ನು ವ್ಯಕ್ತಪಡಿಸಿದ್ದಾರೆ.

     

  • ರಾಜ್‌ಕೋಟ್‌ ಅಗ್ನಿ ದುರಂತಕ್ಕೆ 25 ಸಾವು – ತುಂಬಾ ನೊಂದಿದ್ದೇನೆ ಎಂದು ಮೋದಿ ಸಂತಾಪ!

    ರಾಜ್‌ಕೋಟ್‌ ಅಗ್ನಿ ದುರಂತಕ್ಕೆ 25 ಸಾವು – ತುಂಬಾ ನೊಂದಿದ್ದೇನೆ ಎಂದು ಮೋದಿ ಸಂತಾಪ!

    – ಸಂತ್ರಸ್ತರಿಗೆ ಅಗತ್ಯ ನೆರವು ಸಿಗಲಿದೆ ಎಂದ ಪ್ರಧಾನಿ
    – ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

    ಗಾಂಧಿನಗರ: ಗುಜರಾತ್‌ ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ (Rajkot Gaming Zone) ಶನಿವಾರ ಸಂಜೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಕಂಡು ತೀವ್ರ ನೊಂದಿದ್ದೇನೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇದೆ. ಮೃತರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸ್ಥಳೀಯ ಆಡಳಿತ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

    ಸಾವಿನ ಸಂಖ್ಯೆ 25ಕ್ಕೆ ಏರಿಕೆ:
    ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Rajkot Fire Incident) ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ನಾವು ಸಾಧ್ಯವಾದಷ್ಟು ಶವಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಸುಮಾರು 20 ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

    ಬೆಂಕಿ ಅವಘಡ ಸಂಬಂಧ ತನಿಖೆ ನಡೆಸಲಾಗುವುದು. ಗೇಮಿಂಗ್ ವಲಯವು ಯುವರಾಜ್ ಸಿಂಗ್ ಸೋಲಂಕಿ ಎಂಬ ವ್ಯಕ್ತಿಯ ಮಾಲೀಕತ್ವದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಾವು ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ಸದ್ಯಕ್ಕೆ ನಗರದ ಎಲ್ಲಾ ಗೇಮಿಂಗ್ ವಲಯಗಳನ್ನು ಮುಚ್ಚುವಂತೆ ಸಂದೇಶ ನೀಡಲಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.

  • ಗುಜರಾತ್‌ನ ರಾಜ್‌ಕೋಟ್‌ ಗೇಮಿಂಗ್‌ ವಲಯದಲ್ಲಿ ಅಗ್ನಿ ದುರಂತ – 20 ಮಂದಿ ಸಾವು

    ಗುಜರಾತ್‌ನ ರಾಜ್‌ಕೋಟ್‌ ಗೇಮಿಂಗ್‌ ವಲಯದಲ್ಲಿ ಅಗ್ನಿ ದುರಂತ – 20 ಮಂದಿ ಸಾವು

    ಗಾಂಧೀನಗರ: ಗುಜರಾತ್‌ (Gujarat) ರಾಜ್‌ಕೋಟ್‌ನ (Rajkot) ಗೇಮಿಂಗ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ನಾವು ಸಾಧ್ಯವಾದಷ್ಟು ಶವಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಸುಮಾರು 20 ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಜ್‌ಕೋಟ್‌ ಪೊಲೀಸ್‌ ಕಮಿಷನರ್‌ ಮಾಹಿತಿ ನೀಡಿದ್ದಾರೆ.

    ಬೆಂಕಿ ಅವಘಡ ಸಂಬಂಧ ತನಿಖೆ ನಡೆಸಲಾಗುವುದು. ಗೇಮಿಂಗ್ ವಲಯವು ಯುವರಾಜ್ ಸಿಂಗ್ ಸೋಲಂಕಿ ಎಂಬ ವ್ಯಕ್ತಿಯ ಮಾಲೀಕತ್ವದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಾವು ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲು ತೂರಾಟ

    ವಲಯದೊಳಗೆ ಬೆಂಕಿಯನ್ನು ನಿಯಂತ್ರಿಸಿದ ನಂತರ ನಿಖರವಾದ ಸಾವು-ನೋವುಗಳ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ನಾವು ಬೆಂಕಿ ಅವಘಡದ ಕಾರಣವನ್ನು ಸಹ ತನಿಖೆ ಮಾಡುತ್ತೇವೆ. ನಗರದ ಎಲ್ಲಾ ಗೇಮಿಂಗ್ ವಲಯಗಳನ್ನು ಮುಚ್ಚುವಂತೆ ಸಂದೇಶ ನೀಡಲಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.

  • ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

    ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

    ಗಾಂಧಿನಗರ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತವೆಯೋ, ಅಲ್ಲಿಂದ ಮೋದಿ ಗ್ಯಾರಂಟಿ (Modi Guarantee) ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಯ ನೀಡಿದರು.

    ಗುಜರಾತ್‌ (Gujarat) ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರಿಂದು ರಾಜ್‌ಕೋಟ್‌, ಪಂಜಾಬ್‌ನ ಬಟಿಂಡಾ, ಉತ್ತರ ಪ್ರದೇಶದ ರಾಯ್‌ಬರೇಲಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11,500 ಕೋಟಿ ರೂ. ವೆಚ್ಚದ 200ಕ್ಕೂ ಹೆಚ್ಚು ಆರೋಗ್ಯ ರಕ್ಷಣೆ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೇ 48,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ದೇಶಕ್ಕೆ ಸಮರ್ಪಿಸಿದರು. ಬಳಿಕ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

    ಕಳೆದ 6-7 ದಶಕಗಳಲ್ಲಿ ನಡೆದಿದ್ದಕ್ಕಿಂತ ಹಲವು ಪಟ್ಟು ವೇಗವಾಗಿ ನಮ್ಮ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಲ್ಲಿ ಇತರರ ಗ್ಯಾರಂಟಿಗಳು ಕೊನೆಗೊಳ್ಳುತ್ತವೆಯೋ ಅಲ್ಲಿಂದ ಮೋದಿ ಗ್ಯಾರಂಟಿ ಪ್ರಾರಂಭವಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

    ಸ್ವಾತಂತ್ರ್ಯಾ ನಂತರ 50 ವರ್ಷಗಳ ವರೆಗೆ ದೇಶದಲ್ಲಿ ಒಂದೇ ಒಂದು AIIMS ಆಸ್ಪತ್ರೆ ಇತ್ತು. ಸ್ವಾತಂತ್ರ್ಯಾ ನಂತರ 7 ದಶಕಗಳಲ್ಲಿ 7 ಏಮ್ಸ್‌ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದ್ದರೂ ಹಿಂದಿನ ಸರ್ಕಾರಗಳು ಅವುಗಳನ್ನು ಪೂರ್ಣಗೊಳಿಸಿಲ್ಲ. ಕೆಲವರಂತೂ ತಮ್ಮ ರಾಜ್ಯಗಳಿಗೆ ಏಮ್ಸ್‌ ಆಸ್ಪತ್ರೆ ಪಡೆಯುವಷ್ಟರಲ್ಲಿ ಸುಸ್ತಾಗುತ್ತಿದ್ದರು. ಆದ್ರೆ ‌ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ 10 ಏಮ್ಸ್‌ ಆಸ್ಪತ್ರೆಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ಏಮ್ಸ್‌ ಹೊರತುಪಡಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳೂ ಒಂದರ ಹಿಂದೆ ಒಂದರಂತೆ ತಲೆ ಎತ್ತುತ್ತಿವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.

    ಇನ್ನೂ ಕಾಂಗ್ರೆಸ್‌ ರಾಜಮನೆತನವು ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಅಧಿಕಾರ ಹಿಡಿದಿದೆ. ಆದ್ರೆ ಆ ಕ್ಷೇತ್ರದ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ರಾಯ್‌ಬರೇಲಿಯಲ್ಲೂ ಏಮ್ಸ್‌ ಸ್ಥಾಪಿಸುವ ಭರವಸೆ ನೀಡಿದ್ದೇನೆ. ಕೊಟ್ಟ ಭರವಸೆಯನ್ನು ಈಡೇರಿಸುತ್ತೇನೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್

    ಆರೋಗ್ಯ ಸಂಪದ್ಭರಿತ ದೇಶವಾಗಬೇಕು: ಭಾರತ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ಟಾಪ್‌-5 ದೇಶಗಳಲ್ಲಿಯೂ ಒಂದಾಗಬೇಕು. ಅಭಿವೃದ್ಧಿ ಹೊಂದಿದ ಭಾರತದಲ್ಲಿ ಆರೋಗ್ಯ ಸೌಲಭ್ಯಗಳ ಮಟ್ಟ ಹೇಗಿರುತ್ತದೆ ಎಂಬುದನ್ನು ನಾವು ಈಗ ನೋಡುತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಪ್ರದೇಶಗಳಿಗೂ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ಗಳನ್ನು ವಿಸ್ತರಿಸಿದ್ದೇವೆ. ಹಿಂದೆ ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು 309 ರಿಂದ 706ಕ್ಕೆ ಕೊಂಡೊಯ್ಯಲಾಗಿದೆ. ಎಂಬಿಬಿಎಸ್ ಮತ್ತು ಮೆಡಿಕಲ್ ಪಿಜಿ ಸೀಟುಗಳ ಸಂಖ್ಯೆ 50,000 ದಿಂದ 1 ಲಕ್ಷಕ್ಕೆ ಹೆಚ್ಚಿದೆ ಎಂದು ಶ್ಲಾಘಿಸಿದರು.

  • ಪ್ರಧಾನಿ ಮೋದಿ ಮೊದಲ ಬಾರಿಗೆ ಶಾಸಕರಾಗಿ ಗುಜರಾತ್‌ ವಿಧಾನಸಭೆಗೆ ಕಾಲಿಟ್ಟು 22 ವರ್ಷ

    ಪ್ರಧಾನಿ ಮೋದಿ ಮೊದಲ ಬಾರಿಗೆ ಶಾಸಕರಾಗಿ ಗುಜರಾತ್‌ ವಿಧಾನಸಭೆಗೆ ಕಾಲಿಟ್ಟು 22 ವರ್ಷ

    -2002 ರ ಫೆ.24 ರಂದು ರಾಜ್‌ಕೋಟ್‌ನಿಂದ ಗೆದ್ದು ಮೋದಿ ಅಸೆಂಬ್ಲಿಗೆ ಎಂಟ್ರಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಕೀಯ ಅಖಾಡದಲ್ಲಿ ಮೊದಲ ಬಾರಿಗೆ ಗೆಲುವು ದಾಖಲಿಸಿ ವಿಧಾನಸಭೆಗೆ ಎಂಟ್ರಿ ಕೊಟ್ಟು ಇಲ್ಲಿಗೆ 22 ವರ್ಷಗಳು ತುಂಬಿವೆ. ಮೋದಿ ಅವರ ರಾಜಕೀಯ ಜೀವನದ ಮೈಲುಗಲ್ಲುಗಳ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    2002 ರಲ್ಲಿ ಇದೇ ದಿನ (ಫೆ.24) ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ವಿಧಾನಸಭೆಯ ಸದಸ್ಯರಾದರು. ರಾಜ್‌ಕೋಟ್‌ನಿಂದ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಅವರು ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ (2001) ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹುದ್ದೆಯಲ್ಲಿ ಮುಂದುವರಿಯಲು ಆರು ತಿಂಗಳೊಳಗೆ ಶಾಸಕಾಂಗ ಸಭೆಯ ಸದಸ್ಯರಾಗಬೇಕಾಗಿತ್ತು. ಈ ರಾಜ್‌ಕೋಟ್ ಉಪಚುನಾವಣೆ ಅವರಿಗೆ ಅವಕಾಶ ನೀಡಿತ್ತು. ಇದನ್ನೂ ಓದಿ: ಪ್ರಧಾನಿಯಿಂದ ಭಾನುವಾರ ದೇಶದ ಅತಿ ಉದ್ದದ ತೂಗುಸೇತುವೆ ʻಸುದರ್ಶನ ಸೇತುʼ ಲೋಕಾರ್ಪಣೆ

    ಮೋದಿ ರಾಜಕೀಯ ಜೀವನದ ವೀಡಿಯೋವನ್ನು ‘ಮೋದಿ ಆರ್ಕೈವ್’ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದು ಆರ್ಕೈವಲ್ ಫೋಟೋಗಳು, ವೀಡಿಯೋಗಳು ಮತ್ತು ವೃತ್ತಪತ್ರಿಕೆ ತುಣುಕುಗಳ ಮೂಲಕ ಪ್ರಧಾನಿಯವರ ರಾಜಕೀಯ ಜೀವನ ಪ್ರಯಾಣವನ್ನು ವಿವರಿಸುತ್ತದೆ. ರಾಜ್‌ಕೋಟ್‌ನಲ್ಲಿ ಅವರು ನಾಮಪತ್ರ ಸಲ್ಲಿಸುವ, ಪ್ರಚಾರ ಮಾಡುವ ಮತ್ತು ಭಾಷಣ ಮಾಡುವ ಕ್ಲಿಪ್‌ಗಳು ಮತ್ತು ಚಿತ್ರಗಳ ಚಿತ್ರಣವು ವೀಡಿಯೋದಲ್ಲಿದೆ.

    ಇದನ್ನು ಪಿಎಂ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಕ್ಷಣಗಳ ನೆನಪಿಸಿಕೊಂಡು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ‘ರಾಜ್‌ಕೋಟ್ ಯಾವಾಗಲೂ ನನ್ನ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿರುತ್ತದೆ. ಈ ನಗರದ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನನ್ನ ಮೊದಲ ಚುನಾವಣಾ ಗೆಲುವನ್ನು ನನಗೆ ನೀಡಿದರು. ಅಂದಿನಿಂದ ನಾನು ಯಾವಾಗಲೂ ಕೆಲಸ ಮಾಡಿದ್ದೇನೆ. ಜನತಾ ಜನಾರ್ದನ್ ಅವರ ಆಶಯಗಳಿಗೆ ನ್ಯಾಯ ಒದಗಿಸಬೇಕು ಎಂದು ಮೋದಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೊಂದು ಮುಸ್ಲಿಮರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

    ಇದೇ ಹೊತ್ತಿನಲ್ಲಿ ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದು ಕಾಕತಾಳಿಯ ಎಂದು ಕೂಡ ಮೋದಿ ಹೇಳಿಕೊಂಡಿದ್ದಾರೆ.

  • India vs England, 3rd Test Day 3 – ಜೈಸ್ವಾಲ್ ಶತಕ; ಟೀಂ ಇಂಡಿಯಾಗೆ 322 ರನ್‍ಗಳ ಮುನ್ನಡೆ

    India vs England, 3rd Test Day 3 – ಜೈಸ್ವಾಲ್ ಶತಕ; ಟೀಂ ಇಂಡಿಯಾಗೆ 322 ರನ್‍ಗಳ ಮುನ್ನಡೆ

    ರಾಜ್‍ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಶತಕದ ನೆರವಿನಿಂದ ಟೀಂ ಇಂಡಿಯಾ (Team India) ಮೂರನೇ ದಿನದಾಟದ ಅಂತ್ಯಕ್ಕೆ 322 ರನ್‍ಗಳ ಮುನ್ನಡೆ ಸಾಧಿಸಿದೆ.

    3ನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 19 ರನ್ ಗಳಿಸಿ ಔಟಾದರು. ನಂತರ ಜೈಸ್ವಾಲ್ ಮತ್ತು ಶುಭಮನ್ ಗಿಲ್ (Shubman Gill) ಉತ್ತಮ ಜೊತೆಯಾಟವಾಡಿದರು. ಇದನ್ನೂ ಓದಿ: 112 ರನ್‌ಗಳಿಗೆ 8 ವಿಕೆಟ್‌ ಉಡೀಸ್‌; ಸಿರಾಜ್‌ ಮಿಂಚಿನ ದಾಳಿಗೆ ಆಂಗ್ಲ ಪಡೆ ಕಂಗಾಲು, ಭಾರತಕ್ಕೆ ಮುನ್ನಡೆ

    ಜೈಶ್ವಾಲ್ 103 (133 ಬಾಲ್, 5 ಸಿಕ್ಸರ್, 9 ಫೋರ್) ಸಿಡಿಸಿ ಮಿಂಚಿದರು. ಆಟದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಶುಭಮನ್ ಗಿಲ್ ಅರ್ಧಶತಕ ಬಾರಿಸಿ (64) ಆಟವಾಡುತ್ತಿದ್ದಾರೆ.

    ಭಾರತ: (ಮೊದಲ ಇನ್ನಿಂಗ್ಸ್) 445 ಮತ್ತು 196/2 (ಎರಡನೇ ಇನ್ನಿಂಗ್ಸ್)
    ಇಂಗ್ಲೆಂಡ್: 319 (ಮೊದಲ ಇನ್ನಿಂಗ್ಸ್) ಇದನ್ನೂ ಓದಿ: ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ