Tag: rajiv kumar

  • ಫೆ.18ಕ್ಕೆ ರಾಜೀವ್ ಕುಮಾರ್ ನಿವೃತ್ತಿ – ಯಾರಾಗ್ತಾರೆ ಮುಂದಿನ ಮುಖ್ಯ ಚುನಾವಣಾ ಆಯುಕ್ತ?

    ಫೆ.18ಕ್ಕೆ ರಾಜೀವ್ ಕುಮಾರ್ ನಿವೃತ್ತಿ – ಯಾರಾಗ್ತಾರೆ ಮುಂದಿನ ಮುಖ್ಯ ಚುನಾವಣಾ ಆಯುಕ್ತ?

    ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ (CEC) ರಾಜೀವ್‌ ಕುಮಾರ್‌ (Rajiv Kumar) ಅವರ ಅಧಿಕಾರ ಅವಧಿ ಇದೇ ಫೆ.18ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣಾ ಆಯುಕ್ತರ ಹೆಸರನ್ನು ಅಂತಿಮಗೊಳಿಸಲು ಪ್ರಧಾನಿ ಮಟ್ಟದ ಉನ್ನತ ಮಟ್ಟದ ಆಯ್ಕೆ ಸಮಿತಿ ಸೋಮವಾರ ಸಭೆ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಪಿಎಂ ಮೋದಿ (PM Modi), ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದ್ದಾರೆ. ಪ್ರಧಾನಿಗಳ ಅಧಿಕೃತ ನಿವಾಸದಲ್ಲೇ ಸಭೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಮೊದಲು ಸರ್ಚಿಂಗ್‌ ಕಮಿಟಿಯಿಂದ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರನ್ನು ಸಮಿತಿ ಶಿಫಾರಸು ಮಾಡಲಿದೆ. ನಂತರ ಅಧ್ಯಕ್ಷರು ಶಿಫಾರಸಿನ ಆಧಾರದ ಮೇಲೆ ಮುಂದಿನ ಸಿಇಸಿಯನ್ನು ನೇಮಿಸಲಿದ್ದಾರೆ. ಇದನ್ನೂ ಓದಿ: ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ

    ರಾಜೀವ್ ಕುಮಾರ್ ನಂತರ ಜ್ಞಾನೇಶ್ ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದು, ಅವರ ಅಧಿಕಾರ ಅವಧಿಯು ಜನವರಿ 26, 2029ರ ವರೆಗೆ ಇದೆ. ನಂತರದಲ್ಲಿ ಸುಖಬೀರ್ ಸಿಂಗ್ ಸಂಧು ಇದ್ದಾರೆ.

    ರಾಜೀವ್‌ ಕುಮಾರ್‌ ಮುಂದಿನ ನಡೆ ಏನು?
    ನಿವೃತ್ತಿ ಬಳಿಕ ತಮ್ಮ ಮುಂದಿನ ನಡೆ ಏನೆಂಬುದನ್ನು ಈಗಾಗಲೇ ರಾಜೀವ್‌ ಕುಮಾರ್‌ ಬಹಿರಂಗಪಡಿಸಿದ್ದಾರೆ. ನಿವೃತ್ತಿ ಬಳಿಕ ಮುಂದಿನ ನಾಲ್ಕೈದು ತಿಂಗಳು ಹಿಮಾಲಯಕ್ಕೆ ತೆರಳುವುದಾಗಿ ಹೇಳಿದ್ದಾರೆ. ನನಗೆ ಸ್ವಲ್ಪ ಏಕಾಂತ ಮತ್ತು ಸ್ವಯಂ ಅಧ್ಯಯನ ಬೇಕಿರುವುದರಿಂದ ಆತ್ಮಾವಲೋಕನ ಮಾಡಿಕೊಳ್ಳುವತ್ತ ಕಾಲ ಕಳೆಯುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉದಯಗಿರಿ ಗಲಭೆ ಕೇಸ್‌ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್‌ ಕ್ರಮ ಆಗುತ್ತಾ? – ಪರಮೇಶ್ವರ್‌ ಹೇಳಿದ್ದೇನು?

  • 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ

    64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ

    – ನಗದು, ಮದ್ಯ ಡ್ರಗ್ಸ್‌ ಸೇರಿ 10,000 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

    ನವದೆಹಲಿ: ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿಗೂ ಅಧಿಕ ಜನರು ಮತದಾನ ಮಾಡಿದ್ದು, ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election Commission Of India) ತಿಳಿಸಿದೆ.

    2024ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾ ದಿನವೇ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಪಿ.ರಾಜೀವ್‌ ಕುಮಾರ್‌ (P Rajiv Kumar) ಈ ಬಾರಿ 64.2 ಕೋಟಿಗೂ ಅಧಿಕ ಮತದಾರರು (Voters) ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಮಹಿಳೆಯರೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    ದೇಶಾದ್ಯಂತ 64.2 ಕೋಟಿಗೂ ಅಧಿಕ ಜನ ಹಕ್ಕು ಚಲಾಯಿಸಿದ್ದಾರೆ. ಇದು G7 ರಾಷ್ಟ್ರಗಳಿಗಿಂತ 1.5 ಪಟ್ಟು ಹಾಗೂ 27 ಯುರೋಪಿಯನ್‌ ರಾಷ್ಟ್ರಗಳಿಗಿಂತಲೂ (European Nations) 2.5 ಪಟ್ಟು ಹೆಚ್ಚಾಗಿದೆ. ಅಲ್ಲದೇ ದೇಶದಲ್ಲಿ 31 ಕೋಟಿ ಮಹಿಳಾ ಮತದಾರರು ಮತ ಚಲಾಯಿಸಿದ್ದು, ಇದೇ ಮೊದಲಬಾರಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ಪಿ.ರಾಜೀವ್‌ ಕುಮಾರ್‌ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರ ಪ್ರಭುಗಳಿಗೆ ಆಯೋಗದ ಅಧಿಕಾರಿಗಳು ಎದ್ದುನಿಂತು ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.

    2024ರ ಲೋಕಸಭಾ ಚುನಾವಣೆ ಕರ್ತವ್ಯ ನಿರ್ವಹಣೆಗೆ ಸುಮಾರು 4 ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಿಮಾನಗಳನ್ನು ಬಳಸಲಾಗಿದೆ. 39 ಕೇಂದ್ರಗಳಲ್ಲಿ ಮಾತ್ರವೇ ಮರುಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರವು ಕಳೆದ 4 ದಶಕಗಳಲ್ಲಿ ದಾಖಲೆಯ ಶೇ.58.58 ಮತ್ತು ಕಾಶ್ಮೀರದಲ್ಲಿ ಶೇ.51.05 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ಈ ಬಾರಿ ಡ್ರಗ್ಸ್‌, ನಗದು, ಚಿನ್ನಾಭರಣ ಸೇರಿ ದಾಖಲೆಯ 10,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ ಇದರ ಪ್ರಮಾಣ 3,500 ಕೋಟಿ ರೂ.ಗಳಷ್ಟಿತ್ತು.

  • Lok Sabha Election 2024: ಮತದಾನ ನಡೆಯುವ ದಿನ ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಣೆ

    Lok Sabha Election 2024: ಮತದಾನ ನಡೆಯುವ ದಿನ ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಣೆ

    ಬೆಂಗಳೂರು: ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಹಾಗಾಗಿ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಎರಡೂ ದಿನವೂ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

    ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ಹಾಗೂ 2ನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಈ ದಿನಗಳಂದು ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿರುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಪ್ರತಿಯೊಬ್ಬರು ಮತದಾನ ಮಾಡಲಿ ಎಂಬ ಉದ್ದೇಶದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದನ್ನೂ ಓದಿ: Lok Sabha Election 2024 – 7 ಹಂತದಲ್ಲಿ ಚುನಾವಣೆ, ಜೂನ್‌ 4 ರಂದು ಮತ ಎಣಿಕೆ

    1ನೇ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಮತದಾನ?
    ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (SC), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (SC), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

    2ನೇ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಮತದಾನ?
    ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ (SC), ಕಲಬುರಗಿ (SC), ರಾಯಚೂರು (ST), ಬೀದರ್‌, ಕೊಪ್ಪಳ, ಬಳ್ಳಾರಿ (ST), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಇದನ್ನೂ ಓದಿ: ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

    ಮೊದಲ ಹಂತ
    ನಾಮಪತ್ರ ಸಲ್ಲಿಕೆಗೆ ಕೊನೇ ದಿನ – ಏ.04
    ನಾಮಪತ್ರ ಪರಿಶೀಲನೆ – ಏ.05
    ನಾಮಪತ್ರ ಹಿಂಪಡೆಯಲು ಕೊನೆ ದಿನ – ಏ.08
    ಮತದಾನ – ಏ.26
    ಮತ ಎಣಿಕೆ – ಜೂನ್‌ 4

    2ನೇ ಹಂತ
    ಅಧಿಸೂಚನೆ ಪ್ರಕಟ – ಏ.12
    ನಾಮಪತ್ರ ಸಲ್ಲಿಕೆಗೆ ಕೊನೆ ದಿನ – ಏ.19
    ನಾಮಪತ್ರ ಪರಿಶೀಲನೆ – ಏ.20
    ನಾಮಪತ್ರ ಹಿಂಪಡೆಯಲು ಕೊನೆ ದಿನ – ಏ.22
    ಮತದಾನ – ಮೇ 7
    ಮತ ಎಣಿಕೆ – ಜೂನ್‌ 4

  • PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

    PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

    ನವದೆಹಲಿ: ನಿಷೇಧಿತ ಪಿಎಫ್‌ಐ (PFI) ಸಂಘಟನೆಯೊಂದಿಗೆ ಎಸ್‌ಡಿಪಿಐ (SDPI) ಯಾವುದೇ ಸಂಬಂಧ ಹೊಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗ (Election Commission) ಸ್ಪಷ್ಟನೆ ನೀಡಿದೆ.

    ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರ ಪಿಎಫ್‌ಐ (PFI) ಸಂಘಟನೆಯನ್ನು ನಿಷೇಧಿಸಿತು. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಪಿಎಫ್‌ಐ ಹಾಗೂ ಅದರ 8 ಅಂಗ ಸಂಸ್ಥೆಗಳನ್ನು ನಿಷೇಧಿಸಿತು. ಇದನ್ನೂ ಓದಿ: ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್‌ ಖರೀದಿಸಿ, ದಾನ

    ಎಸ್‌ಡಿಪಿಐ ಎಲ್ಲಾ ಅಗತ್ಯ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಪಿಎಫ್‌ಐ ನೊಂದಿಗೆ ಯಾವುದೇ ನಂಟಿರುವುದು ಕಂಡುಬಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ (Rajiv Kumar) ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ಈ ಕುರಿತು ಮಾತನಾಡಿರುವ ಅವರು, ಪಿಎಫ್‌ಐ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ನಮಗೆ ತಿಳಿದಿದೆ. ಆದರೆ ಎಸ್‌ಡಿಪಿಐ ಎಲ್ಲಾ ರೀತಿಯ ಅಗತ್ಯ ದಾಖಲೆ ಸಲ್ಲಿಸಿದ್ದು, ಈವರೆಗೂ ಪಿಎಫ್‌ಐನೊಂದಿಗೆ ಯಾವುದೇ ಸಂಪರ್ಕ ಹೊಂದಿರುವುದು ಕಂಡುಬಂದಿಲ್ಲ. ಎಸ್‌ಡಿಪಿಐ ಕಡೆಯಿಂದ ಲೋಪವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

    2009ರ ಜೂನ್ 21ರಂದು ಎಸ್‌ಡಿಪಿಐ ಅಸ್ತಿತ್ವಕ್ಕೆ ಬಂದಿದ್ದು, 2010 ಏಪ್ರಿಲ್ 13ರಂದು ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದೆ. ಇಲ್ಲಿಯವರೆಗೆ ಎಸ್‌ಡಿಪಿಐ ಕರ್ನಾಟಕ, ಕೇರಳ, ತಮಿಳುನಾಡು, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಆಂಧ್ರಪ್ರದೇಶಗಳಲ್ಲಿ ಸದಸ್ಯರನ್ನು ಹೊಂದಿದ್ದು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಆದಿವಾಸಿಗಳು ಸೇರಿದಂತೆ ಎಲ್ಲ ವರ್ಗದ ನಾಗರಿಕರ ಪ್ರಗತಿಗಾಗಿ ಶ್ರಮಿಸುತ್ತಿದೆ ಎಂದು ಪಕ್ಷ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ

    ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ

    ನವದೆಹಲಿ: ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಗುರುವಾರ ನೇಮಕಗೊಂಡಿದ್ದಾರೆ.

    ಹಾಲಿ ಸುಶೀಲ್ ಚಂದ್ರ ಅವರ ಅಧಿಕಾರವಧಿ ಮೇ 14ಕ್ಕೆ ಮುಗಿಯಲಿದೆ. ಮೇ 15 ರಂದು ರಾಜೀವ್‌ ಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಇದನ್ನೂ ಓದಿ: ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ: ಕೋರ್ಟ್‌

    ಸಚಿವಾಲಯದ ಅಧಿಸೂಚನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು, ರಾಜೀವ್‌ ಕುಮಾರ್‌ ಅವರಿಗೆ ಶುಭಾಶಯ ತಿಳಿಸಿದ್ದಾರೆ.

    ರಾಜೀವ್‌ ಕುಮಾರ್‌ ಅವರು 2020ರಿಂದ ಈವರೆಗೂ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 1984ನೇ ಬ್ಯಾಚ್‌ನ ಜಾರ್ಖಂಡ್‌ ಕೇಡರ್‌ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ಅಂಧ ವ್ಯಕ್ತಿ ಮಗಳ ಕನಸ್ಸನ್ನು ಕೇಳಿ ಮೋದಿ ಭಾವುಕ – ವೀಡಿಯೋ ವೈರಲ್