Tag: Rajiv Gandhi

  • ತಮಿಳುನಾಡು | ರಾಜೀವ್ ಗಾಂಧಿ ಹಂತಕನನ್ನ ಹಾಡಿ ಹೊಗಳಿದ ದಳಪತಿ ವಿಜಯ್

    ತಮಿಳುನಾಡು | ರಾಜೀವ್ ಗಾಂಧಿ ಹಂತಕನನ್ನ ಹಾಡಿ ಹೊಗಳಿದ ದಳಪತಿ ವಿಜಯ್

    – ಈಳಂ ತಮಿಳಿಗರ ಪರ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಕರೆ

    ಚೆನ್ನೈ: ಶ್ರೀಲಂಕಾದ ತಮಿಳರ ಸಮಸ್ಯೆ ಬಗ್ಗೆ ಮಾತನಾಡುವ ವೇಳೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ವಿಜಯ್‌ ವಿವಾದಿತ ಹೇಳಿಕೆಯೊಂದನ್ನ ನೀಡಿದ್ದಾರೆ. ಮಾತನಾಡುವ ವೇಳೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi) ಹತ್ಯೆಯ ಹಿಂದಿನ ಸೂತ್ರಧಾರಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ವೇಲುಪಿಳ್ಳೈ ಪ್ರಭಾಕರನ್‌ನನ್ನು (Velupillai Prabhakaran) ಹೊಗಳಿದ್ದಾರೆ.

    2026ರ ವಿಧಾನಸಭಾ ಚುನಾವಣೆಗಾಗಿ ವಿಜಯ್‌ (Thalapathy Vijay) ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿ ತಮಿಳುನಾಡಿನ ನಾಗಪಟ್ಟಣಂನಲ್ಲಿ ನಡೆದ ಸಮಾವೇಶದಲ್ಲಿ ಶ್ರೀಲಂಕಾದ ತಮಿಳರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವೇಲುಪಿಳ್ಳೈ ಪ್ರಭಾಕರನ್‌ ʻಈಳಂʼ ತಮಿಳರ ಸಮುದಾಯಕ್ಕೆ ತಾಯಿಯಂತೆ. ಹಾಗಾಗಿ ಲಂಕಾ ತಮಿಳರ ಸಮಸ್ಯೆ ತಮಿಳುನಾಡಿನಲ್ಲಿ ಅದ್ರಲ್ಲೂ ನಾಗಪಟ್ಟಣಂನಂತಹ ಪ್ರದೇಶಗಳ ಮೀನುಗಾರರಲ್ಲಿ ಭಾವನಾತ್ಮಕವಾಗಿದೆ ಎಂದಿದ್ದಾರೆ. ʻಈಳಂʼ ಎನ್ನುವುದು ಶ್ರೀಲಂಕಾದ ಆ ಪ್ರದೇಶವನ್ನು ಸೂಚಿಸುವ ಹೆಸರು.

    ಅಲ್ಲದೇ, ಶ್ರೀಲಂಕಾ ಹಾಗೂ ವಿಶ್ವದ ವಿವಿಧೆಡೆ ಇರುವ ನಮ್ಮ ಈಳಂ ತಮಿಳರು ಇಂದು ಮಾತೃ ವಾತ್ಸಲ್ಯ ತೋರಿಸಿದ ನಾಯಕನನ್ನ ಕಳೆದುಕೊಂಡು ಬಳಲುತ್ತಿದ್ದಾರೆ. ಅವರಿಗಾಗಿ ನಾವಿಂದು ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಕರೆ ನೀಡಿದ್ದಾರೆ.

    1990ರ ದಶಕದಿಂದ ಭಾರತದಲ್ಲಿ ನಿಷೇಧಿಸಲ್ಪಟ್ಟ ಎಲ್‌ಟಿಟಿಇ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಶಸ್ತ್ರ ಪಡೆಯಾಗಿತ್ತು. ಆದ್ರೆ 2009ರಲ್ಲಿ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸುವವರೆಗೂ ಅದು ದಶಕಗಳ ಕಾಲ ಸ್ವತಂತ್ರ ತಮಿಳು ರಾಜ್ಯ ಸ್ಥಾಪಿಸಲು ಹೋರಾಡಿತ್ತು. ಅದೇ ವರ್ಷ ವೇಲುಪಿಳ್ಳೈ ಪ್ರಭಾಕರನ್‌ ರನ್ನ ಶ್ರೀಲಂಕಾ ಸೇನೆ ಕೊಂದಿತು.

    ರಾಜೀವ್‌ ಗಾಂಧಿ ಹತ್ಯೆ ಹಿಂದಿನ ಮಾಸ್ಟರ್‌?
    1991 ರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಹಿಂದೆ ಎಲ್‌ಟಿಟಿಇ ಇದೆ ಎಂದು ಆರೋಪಿಸಲಾಗಿದೆ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಎಲ್‌ಟಿಟಿಇ ಮಹಿಳಾ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರಭಾಕರನ್‌ ಆದೇಶಿಸಿದ್ದಾರೆ ಎಂದು ಹೇಳಲಾಗಿತ್ತು. ಇನ್ನು, 2011ರ ಸಂದರ್ಶನವೊಂದರಲ್ಲಿ, ಎಲ್‌ಟಿಟಿಇಯ ಖಜಾಂಚಿ ಮತ್ತು ಅದರ ಮುಖ್ಯ ಶಸ್ತ್ರಾಸ್ತ್ರ ಸಂಪಾದನೆದಾರರಾಗಿದ್ದ ಕುಮಾರನ್ ಪತ್ಮನಾಥನ್ ಅವರು ರಾಜೀವ್ ಗಾಂಧಿಯನ್ನು ಹತ್ಯೆಗೈದ ವೇಲುಪಿಳ್ಳೈ ಪ್ರಭಾಕರನ್ ಅವರ ತಪ್ಪಿಗೆ ಭಾರತದ ಕ್ಷಮೆಯಾಚಿಸಿದ್ದರು.

    2009ರಲ್ಲಿಯೇ ಪ್ರಭಾಕರನ್‌ ಹತ್ಯೆ; ಶ್ರೀಲಂಕಾ
    ಶ್ರೀಲಂಕಾ ಸರ್ಕಾರ ಮೇ 2009ರಲ್ಲಿಯೇ ಪ್ರಭಾಕರನ್ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು. ಅದಲ್ಲದೇ ಪ್ರಭಾಕರನ್‌ ಹಾಗೂ ಅವರ ಮಗನ ಡಿಎನ್‌ಎ ಹೊಂದಾಣಿಕೆಯಾಗಿತ್ತು ಎಂದು ಶ್ರೀಲಂಕಾ ಸೇನೆ ಹೇಳಿಕೆ ನೀಡಿತ್ತು. ಮುಲ್ಲೈತೀವು ಪ್ರದೇಶದ ನಾಂತಿಕಡಲ್ ತೀರದಲ್ಲಿ ಎಲ್‌ಟಿಟಿಇ ಮುಖ್ಯಸ್ಥನ ಶವ ಪತ್ತೆಯಾಗಿತ್ತು ಎಂದು ವರದಿಗಳು ಹೇಳಿದ್ದವು. ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ದೇಹವನ್ನು ಆತನ ಇಬ್ಬರು ಮಾಜಿ ಸಹಚರರು ಗುರುತಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

    ಆದ್ರೆ ಎಲ್‌ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್‌ ಇನ್ನೂ 2023ರಲ್ಲಿ ಆತ ಜೀವಂತವಾಗಿದ್ದು, ಅವರ ಕುಟುಂಬದ ಜೊತೆ ಜೀವಿಸುತ್ತಿದ್ದಾನೆ ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಪಜಾ ನೆಡುಮಾರನ್‌ ಹೇಳಿದ್ದರು. ಆದ್ರೆ ಆತ ಜೀವಂತವಾಗಿರುವ ಸುಳಿವು ಎಲ್ಲಿಯೂ ಸಿಕ್ಕಿರಲಿಲ್ಲ.

    ಇನ್ನೂ ವಿಜಯ್‌ ಲಂಕಾದ ತಮಿಳರಿಗೆ ಬೆಂಬಲ ನೀಡುತ್ತಿರುವುದು ಇದೇ ಮೊದಲೇನಲ್ಲ. 2008ರಲ್ಲೂ ಸಮುದಾಯದ ಸದಸ್ಯರನ್ನ ಹತ್ಯೆ ಖಂಡಿಸಿ ಚೆನ್ನೈನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

  • ಯುವಕರಿಗೆ ಮತದಾನದ ಹಕ್ಕು, ತಂತ್ರಜ್ಞಾನ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ: ಡಿಕೆಶಿ

    ಯುವಕರಿಗೆ ಮತದಾನದ ಹಕ್ಕು, ತಂತ್ರಜ್ಞಾನ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ: ಡಿಕೆಶಿ

    ಬೆಂಗಳೂರು: ದೇಶದ ಯುವಕರಿಗೆ ಹದಿನೆಂಟನೇ ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು, ತಂತ್ರಜ್ಞಾನ ಕ್ರಾಂತಿ ಮಾಡಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.

    ಬೆಂಗಳೂರಿನ (Bengaluru) ಕಂಠೀರವ ಸ್ಟೇಡಿಯಂ ಬಳಿ ಭಾನುವಾರ ಏರ್ಪಡಿಸಿದ್ದ `ರನ್ ಫಾರ್ ರಾಜೀವ್’ (Run for Rajiv) ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಕೂಡ ಚಿಕ್ಕ ವಯಸ್ಸಿನಲ್ಲಿ 10 ರಿಂದ 15 ಕಿ.ಮೀ. ಓಡುತ್ತಿದ್ದೆ. ಇದೇ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ರಾಜೀವ್ ಗಾಂಧಿ ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮ್ಮ ದೇಶದ ಯುವಕರಿಗೆ 21 ವರ್ಷಕ್ಕೆ ಮತದಾನದ ಹಕ್ಕು ನೀಡಲಾಗಿತ್ತು. ಅದನ್ನು 18 ವರ್ಷಕ್ಕೆ ಇಳಿಸಿದ್ದು ರಾಜೀವ್ ಗಾಂಧಿ ಅವರು. ಈ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು ಎಂದರು. ಇದನ್ನೂ ಓದಿ: ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು: ವಿಜಯೇಂದ್ರ ಕಿಡಿ

    ರಾಜೀವ್ ಗಾಂಧಿ ಅವರು ನಾವು 16ನೇ ವಯಸ್ಸಿಗೆ ಎಸ್‌ಎಸ್‌ಎಲ್‌ಸಿ ಪಾಸಾದ ಯುವಕರನ್ನು ದೇಶದ ಗಡಿ ಕಾಯಲು ಸೇನೆಗೆ ನೇಮಿಸುತ್ತೇವೆ. ಅದೇ ರೀತಿ ಪ್ರಜಾಪ್ರಭುತ್ವ ಕಾಯಲು ಅವರಿಗೆ ಮತದಾನದ ಹಕ್ಕು ನೀಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೂ ಜನಪ್ರತಿನಿಧಿಗಳು ಆಯ್ಕೆ ಆಗಬೇಕು ಎಂದು ಹೇಳಿದರೆಂದು ವಿವರಿಸಿದರು. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

    ನಾನು ವಿದ್ಯಾರ್ಥಿಯಾಗಿದ್ದಾಗ ಎನ್‌ಎಸ್‌ಯುಐ ನಾಯಕನಾಗಿದ್ದೆ. ಆಗ ನಮ್ಮ ಬಳಿ ಫೋನ್ ಇರಲಿಲ್ಲ. ಲ್ಯಾಂಡ್ ಲೈನ್ ಸಂಪರ್ಕ ಪಡೆಯಲು 3 ರಿಂದ 4 ವರ್ಷ ಕಾಯಬೇಕಿತ್ತು. ತಂತ್ರಜ್ಞಾನ ಕ್ರಾಂತಿ ಮೂಲಕ ಇಂದು ನಿಮ್ಮೆಲ್ಲರ ಕೈಗೆ ಮೊಬೈಲ್ ಬರುವಂತೆ ಮಾಡಿರುವುದೇ ರಾಜೀವ್ ಗಾಂಧಿ. ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಧೀಮಂತ ನಾಯಕರ ನೆನಪಲ್ಲಿ ನೀವು ಹೆಜ್ಜೆ ಹಾಕಲು ಬಂದಿದ್ದೀರಿ. ನಿಮಗೆ ಅಭಿನಂದನೆಗಳು ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರು-ಬೆಂಗಳೂರು ರೈಲು ಸಂಚಾರ ಮಾರ್ಗದಲ್ಲಿ ಗುಡ್ಡ ಕುಸಿತ – ರಾತ್ರಿಯಿಡೀ ತೆರವು ಕಾರ್ಯ

    ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಎಂಬ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ, ಆರೋಗ್ಯ, ಐಶ್ವರ್ಯ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.

    ಬೆಂಗಳೂರು ಈಗ ಗ್ರೇಟರ್ ಬೆಂಗಳೂರು (Greater Bengaluru) ಆಗಿದೆ. ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತಿದೆ ಎಂದರು. ಇದು ಸಾಧ್ಯವಾಗಿದ್ದು ನಿಮ್ಮೆಲ್ಲರಿಂದ ಎಂದು ತಿಳಿಸಿದರು.

    ರಾಜೀವ್ ಗಾಂಧಿ ಅವರ ನೆನಪಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಯುವಕರು ಭಾಗವಹಿಸಿದ್ದು, ನಮ್ಮ ಯುವ ನಾಯಕರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

  • ನೆಹರೂ ಕಾಲದಿಂದ ರಾಹುಲ್‌ವರೆಗೂ ಕಾಂಗ್ರೆಸ್‌ ಮೀಸಲಾತಿ ವಿರೋಧಿ – ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್

    ನೆಹರೂ ಕಾಲದಿಂದ ರಾಹುಲ್‌ವರೆಗೂ ಕಾಂಗ್ರೆಸ್‌ ಮೀಸಲಾತಿ ವಿರೋಧಿ – ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್

    ಬೆಂಗಳೂರು: ರಾಹುಲ್ ಗಾಂಧಿಯವರ (Rahul Gandhi) ಮೀಸಲಾತಿ (Reservation) ವಿರೋಧಿ ಹೇಳಿಕೆಯು ಅವರ ಕುಟುಂಬದ ಚಿಂತನೆಯ ಮುಂದುವರಿದ ಭಾಗ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್ (Guru Prakash Paswan) ಅವರು ವಿಶ್ಲೇಷಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಜವಾಹರಲಾಲ್ ನೆಹರೂ ಅವರು 1961ರಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಯಾವುದೇ ರೀತಿಯ ಮೀಸಲಾತಿಯನ್ನು ತಾವು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದನ್ನು ಉಲ್ಲೇಖಿಸಿದರು. ನೆಹರೂ ಅವರ ಪತ್ರವನ್ನೂ ಪ್ರದರ್ಶಿಸಿದರು. ಮೀಸಲಾತಿ ಸಮುದಾಯದಿಂದ ಅಸಮರ್ಥತೆ, ದ್ವಿತೀಯ ದರ್ಜೆಯ ಅಧಿಕಾರಿಗಳ ಆಯ್ಕೆ ಆಗಲಿದೆ ಎಂದಿದ್ದುದನ್ನು ಗುರುಪ್ರಕಾಶ್ ಪಾಸ್ವಾನ್ ವಿವರಿಸಿದರು.

    ಪ್ರಧಾನಿ, ಮುಖ್ಯಮಂತ್ರಿಗಳ ಇಂಥ ಮನಸ್ಥಿತಿ ಇದ್ದಾಗ ಮೀಸಲಾತಿ ಮೂಲಕ ಉದ್ಯೋಗ ಭರ್ತಿ ಆಗುವುದು ಹೇಗೆ? ಬ್ಯಾಕ್‍ಲಾಗ್ ಇರದಿರಲು ಸಾಧ್ಯವೇ ಎಂದು ಕೇಳಿದರು. ಇಂದಿರಾ ಗಾಂಧಿಯವರು ಕೆಂಪು ಕೋಟೆಯಿಂದ ತಮ್ಮ ಭಾಷಣದಲ್ಲಿ ಜಾತಿವಾದ ಈ ದೇಶದಿಂದ ದೂರವಾಗಬೇಕು ಎಂದಿದ್ದರು. ರಾಜೀವ್ ಗಾಂಧಿಯವರು (Rajiv Gandhi) ಸಂಸತ್ತಿನ ಸದನದಲ್ಲಿ ಮಂಡಲ್ ಆಯೋಗದ ಮೀಸಲಾತಿ ಶಿಫಾರಸನ್ನು ವಿರೋಧಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಮುನಿರತ್ನ‌ ವಿರುದ್ಧ ಸರ್ಕಾರ ಪೂರ್ವಾಗ್ರಹಪೀಡಿತ ದ್ವೇಷದ ರಾಜಕಾರಣ ಮಾಡ್ತಿದೆ: ಸಿ.ಟಿ.ರವಿ

    ದೇಶವನ್ನು ಜಾತಿ ಸಂಘರ್ಷದತ್ತ ತಂದಿದ್ದೀರಿ ಎಂದು ರಾಜೀವ್ ಅವರು ನುಡಿದಿದ್ದರು. ವಿದೇಶಿ ನೆಲದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಅಂತ್ಯೋದಯ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣ- ಅಭಿವೃದ್ಧಿಗೆ ಬಿಜೆಪಿ ಒತ್ತು ಕೊಡುತ್ತಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ, ಪರಿಶಿಷ್ಟ ಜಾತಿ, ಪಂಗಡಗಳ, ಹಿಂದುಳಿದ ವರ್ಗಗಳ ಜನಾದೇಶ ಲಭಿಸುತ್ತಿದೆ. ಬಿಜೆಪಿ ವತಿಯಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ತಂತ್ರ ಮತ್ತು ಮೀಸಲಾತಿ ವಿರೋಧಿ ಮನಸ್ಥಿತಿ ವಿರುದ್ಧ ರಾಷ್ಟ್ರಾದ್ಯಂತ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

    ರಾಹುಲ್‌ ಗಾಂಧಿ ಹೇಳಿದ್ದೇನು?
    ಅಮೆರಿಕ ಪ್ರವಾಸದ ಸಮಯದಲ್ಲಿ ರಾಹುಲ್‌ ಗಾಂಧಿ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದರು. ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚನೆ ಮಾಡಲಿದೆ. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದು ಅವರು ಉತ್ತರಿಸಿದ್ದರು.

  • ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ

    ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ, ನಾನು ಕಾಂಗ್ರೆಸ್ ಪ್ರತಿನಿಧಿ: ಡಿಕೆಶಿ

    ಬೆಂಗಳೂರು: ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ. ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿ. ಹೀಗಾಗಿ ಕುಮಾರಸ್ವಾಮಿ ಪ್ರಕರಣದ ಬಗ್ಗೆ ತಿಳಿದುಕೊಂಡು ಆನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.

    ಕುಮಾರಸ್ವಾಮಿ (H.D.Kumaraswamy) ವಿರುದ್ಧ ದೋಷಾರೋಪ ಪಟ್ಟಿಯನ್ನು ಎಸ್ಐಟಿ ರಾಜ್ಯಪಾಲರಿಗೆ ಸಲ್ಲಿಸಿದ್ದು, ಈ ವಿಚಾರದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಏನಿರಬಹುದು ಎಂಬುದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರಿಂದ ರಾಜ್ಯಪಾಲರ ನಿಂದನೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಸಾಕ್ಷಿ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು SIT ಪತ್ರ ಬರೆದಿದೆ: ಸಿದ್ದರಾಮಯ್ಯ

    ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರ ಆಲೋಚನೆಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ. ಆದ ಕಾರಣ ಪ್ರತಿ ವರ್ಷ ಇವರ ಜನ್ಮದಿನವನ್ನು ಬಿಬಿಎಂಪಿಯಿಂದ ನಡೆಸಬೇಕು ಎಂದು ಆದೇಶ ನೀಡಲಾಗುವುದು. ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್ ವರೆಗೆ ನಾಯಕರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ರಾಜೀವ್ ಗಾಂಧಿಯವರ ನೂತನ ಪ್ರತಿಮೆ ನಿರ್ಮಾಣಕ್ಕೆ ಸಹಿ ಹಾಕಿದೆ. ದಿನೇಶ್ ಗುಂಡೂರಾವ್ ಅವರ ಇಚ್ಛೆಯಂತೆ, ಅವರ ಕ್ಷೇತ್ರ ವ್ಯಾಪ್ತಿಯ ಶೇಷಾದ್ರಿಪುರಂ ಸಿಗ್ನಲ್ ಮುಕ್ತ ಜಂಕ್ಷನ್‌ಗೆ ರಾಜೀವ್ ಗಾಂಧಿ ಹೆಸರಿಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

    18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ತಿದ್ದುಪಡಿ, ಐಟಿ ಬಿಟಿ ಬೆಳವಣಿಗೆಗೂ ಇವರೇ ಕಾರಣ. ಇಂದು ಎಲ್ಲರ ಬಳಿ ಎರಡೆರಡು ಮೊಬೈಲ್‌ಗಳಿವೆ. ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಟಿಯ ಟೆಲಿಫೋನ್ ಕ್ರಾಂತಿ. ದೇಶದ ಸಮಗ್ರತೆ ಐಕ್ಯತೆ ಶಾಂತಿಗಾಗಿ ನೆಹರೂ ಕುಟುಂಬ ದುಡಿದಿದೆ. ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ವಿಚಾರಗಳನ್ನು ನಾವು ಮರೆಯಬಾರದು ಎಂದಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿದ ಶ್ರುತಿ

  • ಇಂದು ರಾಜೀವ್‌ ಗಾಂಧಿ 33 ನೇ ಪುಣ್ಯತಿಥಿ- ಖರ್ಗೆ, ಸೋನಿಯಾ ಸೇರಿದಂತೆ ಗಣ್ಯರಿಂದ ಪುಷ್ಪ ನಮನ

    ಇಂದು ರಾಜೀವ್‌ ಗಾಂಧಿ 33 ನೇ ಪುಣ್ಯತಿಥಿ- ಖರ್ಗೆ, ಸೋನಿಯಾ ಸೇರಿದಂತೆ ಗಣ್ಯರಿಂದ ಪುಷ್ಪ ನಮನ

    ನವದೆಹಲಿ: ಇಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ (Rajiv Gandhi) 33 ನೇ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಯವರು ʼವೀರ ಭೂಮಿʼಯಲ್ಲಿ ರಾಜೀವ್‌ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಸಚಿನ್ ಪೈಲಟ್, ಪಿ ಚಿದಂಬರಂ, ಕೆಸಿ ವೇಣುಗೋಪಾಲ್ ಸೇರಿದಂತೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಕೂಡ ಇವರಿಗೆ ಸಾಥ್‌ ನೀಡಿದರು.

    ಇತ್ತ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕೂಡ ರಾಜೀವ್ ಗಾಂಧಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನನ್ನ ನಮನಗಳು ಎಂದು ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಪಾಸ್‍ಪೋರ್ಟ್ ರದ್ದು ಮಾಡಲು ಚಿಂತನೆ

    ರಾಜೀವ್ ಗಾಂಧಿ ಹತ್ಯೆ: 1991 ರ ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ಬಾಂಬ್ ದಾಳಿಯ ಮೂಲಕ ರಾಜೀವ್‌ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಹಂತಕರ ಜೊತೆಗೆ ಕನಿಷ್ಠ 14 ಮಂದಿ ಮೃತಪಟ್ಟಿದ್ದರು. ಆ ಬಳಿಕದಿಂದ ವಿಪಿ ಸಿಂಗ್ ಸರ್ಕಾರವು ಪ್ರತಿ ವರ್ಷ ಮೇ 21ನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸುವಂತೆ ಘೋಷಣೆ ಮಾಡಿತ್ತು. ಸದ್ಯ ಈ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಂದ ಭಯೋತ್ಪಾದನೆಯನ್ನು ತೊಡೆದುಹಾಕಲು ಪ್ರತಿಜ್ಞೆ ಮಾಡಲಾಗುತ್ತದೆ.

  • ರಾಜೀವ್‌ ಗಾಂಧಿ ಹತ್ಯೆ, ಪಂಜಾಬ್‌ ಹಿಂಸಾಚಾರ… ಸಮಸ್ಯೆಗಳ ಸುಳಿಯಲ್ಲೇ ನಡೆದ 10ನೇ ‘ಲೋಕ’ ಸಮರ

    ರಾಜೀವ್‌ ಗಾಂಧಿ ಹತ್ಯೆ, ಪಂಜಾಬ್‌ ಹಿಂಸಾಚಾರ… ಸಮಸ್ಯೆಗಳ ಸುಳಿಯಲ್ಲೇ ನಡೆದ 10ನೇ ‘ಲೋಕ’ ಸಮರ

    – ನಾಲ್ಕು ದಶಕಗಳ ಬಳಿಕ ಕರ್ನಾಟಕದಲ್ಲಿ ಅರಳಿದ ಕಮಲ
    – ಮೈಸೂರಲ್ಲಿ ಒಡೆಯರ್‌ ವಿರುದ್ಧ ಗೆದ್ದ ದೇವರಾಜ ಅರಸು ಪುತ್ರಿ

    ಪಬ್ಲಿಕ್‌ ಟಿವಿ ವಿಶೇಷ
    ಅದು 90 ರ ದಶಕ. ಮಂಡಲ್‌ ಆಯೋಗ ವರದಿ ವಿರುದ್ಧ ಹಿಂಸಾಚಾರ. ಅಯೋಧ್ಯೆ (Ayodhya) ರಾಮಜನ್ಮಭೂಮಿ ವಿವಾದ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi) ಹತ್ಯೆ, ಪಂಜಾಬ್‌ ಪ್ರತ್ಯೇಕತಾವಾದಿಗಳ ಹಿಂಸಾಚಾರ.. ಸಾಲು ಸಾಲು ಸಮಸ್ಯೆಗಳ ನಡುವೆಯೇ 10ನೇ ಸಾರ್ವತ್ರಿಕ ಚುನಾವಣೆ ನಡೆಯಿತು.

    1990 ರ ಸಂದರ್ಭದಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಜೋರಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್‌.ಕೆ.ಅಡ್ವಾಣಿ (L.K.Advani) ದೇಶಾದ್ಯಂತ ‘ರಥಯಾತ್ರೆ’ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರು ಅಡ್ವಾಣಿ ಅವರ ರಥಯಾತ್ರೆಯನ್ನು ತಡೆದರು. ಇದು ಜನತಾ ದಳ ನೇತೃತ್ವದ ಸರ್ಕಾರ ಪತನಕ್ಕೆ ಕಾರಣವಾಯಿತು. ಪ್ರಧಾನಿ ವಿ.ಪಿ.ಸಿಂಗ್‌ ಸರ್ಕಾರ ಕೇವಲ 16 ತಿಂಗಳಿಗೆ ಅಧಿಕಾರ ಕಳೆದುಕೊಂಡಿತು. ದಳದಲ್ಲೇ ಇದ್ದ ಚಂದ್ರಶೇಖರ್‌ ಅವರು ಹೊರಬಂದು ಕಾಂಗ್ರೆಸ್‌ ಬೆಂಬಲದೊಂದಿಗೆ 6-7 ತಿಂಗಳ ಕಾಲ ಪ್ರಧಾನಿಯಾದರು. ಆಗ ಮತ್ತೆ 1991 ರಲ್ಲಿ ಹತ್ತನೇ ಲೋಕಸಭಾ ಚುನಾವಣೆ ನಡೆಯಿತು. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

    ಮಂಡಲ್‌-ಮಂದಿರ ಸಮಸ್ಯೆ
    ವಿಪಿ ಸಿಂಗ್ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ಜಾತಿಗಳಿಗೆ (ಒಬಿಸಿ) 27% ರಷ್ಟು ಮೀಸಲಾತಿ ಕಲ್ಪಿಸಿ ಮಂಡಲ್ ಆಯೋಗದ ವರದಿ ಜಾರಿಗೊಳಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು. ದೆಹಲಿ ಮತ್ತು ಸುತ್ತಮುತ್ತಲಿನ ಅನೇಕ ವಿದ್ಯಾರ್ಥಿಗಳು ಬೆಂಕಿ ಹಚ್ಚಿಕೊಂಡರು.

    ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವೂ ಭುಗಿಲೆದ್ದಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವನ್ನೇ ಬಿಜೆಪಿ ಆಗಿನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತು. ಮಂದಿರ ವಿಷಯವು ದೇಶದ ಅನೇಕ ಭಾಗಗಳಲ್ಲಿ ಹಲವಾರು ಗಲಭೆಗಳಿಗೆ ಕಾರಣವಾಯಿತು. ಮತದಾರರು ಜಾತಿ ಮತ್ತು ಧಾರ್ಮಿಕ ಆಧಾರದ ಮೇಲೆ ಧ್ರುವೀಕರಣಗೊಂಡರು. ನ್ಯಾಶನಲ್ ಫ್ರಂಟ್ ಛಿದ್ರವಾಗುವುದರೊಂದಿಗೆ, ಕಾಂಗ್ರೆಸ್ (ಐ) ಅತಿ ಹೆಚ್ಚು ಸ್ಥಾನಗಳಿಸಿ, ಅಲ್ಪಸಂಖ್ಯಾತ ಸರ್ಕಾರವನ್ನು ರಚಿಸುವ ಮೂಲಕ ಧ್ರುವೀಕರಣದ ಹೆಚ್ಚಿನ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

    ರಾಜೀವ್‌ ಗಾಂಧಿ ಹತ್ಯೆ
    1991 ರ ಮೇ 20 ರಂದು ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನ ನಡೆಯಿತು. ಅದಾದ ಒಂದು ದಿನದ ನಂತರ ಶ್ರೀಪೆರಂಬದೂರಿನಲ್ಲಿ ಮಾರ್ಗತಮ್ ಚಂದ್ರಶೇಖರ್ ಪರ ಪ್ರಚಾರ ಮಾಡುವಾಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು. ಉಳಿದ ಚುನಾವಣಾ ದಿನಗಳನ್ನು ಜೂನ್ ಮಧ್ಯದವರೆಗೆ ಮುಂದೂಡಲಾಯಿತು. ಅಂತಿಮವಾಗಿ ಮತದಾನವು ಜೂನ್ 12 ಮತ್ತು 15 ರಂದು ನಡೆಯಿತು.

    ರಾಜೀವ್‌ ಗಾಂಧಿ ಹತ್ಯೆಗೂ ಮುನ್ನ 534 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಅವರ ಹತ್ಯೆಯ ನಂತರ ಉಳಿದ ಕ್ಷೇತ್ರಗಳಿಗೆ ವೋಟಿಂಗ್‌ ಆಯಿತು. ಮೊದಲ ಹಂತದಲ್ಲಿ ಕಾಂಗ್ರೆಸ್ (ಐ) ಬಹುತೇಕ ನಾಶವಾಯಿತು. ಆದರೆ ರಾಜೀವ್‌ ಗಾಂಧಿ ಹತ್ಯೆಯ ನಂತರ ಸಹಾನುಭೂತಿ ಅಲೆ ಕಾಂಗ್ರೆಸ್‌ ಕೈ ಹಿಡಿಯಿತು.

    27 ದಿನದ ಚುನಾವಣೆ
    1991 ರ ಮೇ 20 ರಿಂದ ಜೂನ್‌ 15 ರ ವರೆಗೆ ಮತದಾನ (27 ದಿನ) ನಡೆಯಿತು.

    145 ಪಕ್ಷಗಳು
    9 ರಾಷ್ಟ್ರೀಯ, 27 ಪ್ರಾದೇಶಿಕ ಪಕ್ಷಗಳು ಸೇರಿದಂತೆ 145 ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

    ಒಟ್ಟು ಕ್ಷೇತ್ರಗಳು: 524‌

    ಒಟ್ಟು ಅಭ್ಯರ್ಥಿಗಳು: 8,668
    ಮಹಿಳಾ ಅಭ್ಯರ್ಥಿಗಳು: 326 (37)

    ಮತದಾರರ ವಿವರ
    ಒಟ್ಟು: 49,83,63,801
    ಪುರುಷರು: 26,18,32,499
    ಮಹಿಳೆಯರು: 23,65,31,302

    ಮತದಾನ ಪ್ರಮಾಣ
    ವೋಟ್‌ ಮಾಡಿದವರು: 28,27,00,942
    ವೋಟಿಂಗ್: 56.73%

    ಜಮ್ಮು-ಕಾಶ್ಮೀರ, ಪಂಜಾಬ್‌ಗೆ ಇಲ್ಲ ಚುನಾವಣೆ!
    ಪ್ರತ್ಯೇಕತಾವಾದಿ ಹಿಂಸಾಚಾರದಿಂದ ನಲುಗಿದ ಪಂಜಾಬ್‌ನಲ್ಲಿ 1991 ರ ಜೂನ್‌ 17 ರಂದು ಬಂದೂಕುಧಾರಿಗಳು ಸುಮಾರು 126 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಪ್ರತ್ಯೇಕ ರೈಲುಗಳಲ್ಲಿ ನಡೆದ ಹತ್ಯೆಯನ್ನು ಸಿಖ್ ಉಗ್ರಗಾಮಿಗಳು ನಡೆಸಿದ್ದರು ಎಂದು ಪೊಲೀಸ್ ವರದಿಗಳು ತಿಳಿಸಿವೆ. ಹಿಂಸಾಚಾರದ ಬೆಳವಣಿಗೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿಲ್ಲ. 1992 ರ ಫೆಬ್ರವರಿ 19 ರಂದು ಪಂಜಾಬ್‌ನಲ್ಲಿ ಚುನಾವಣೆಗಳು ನಡೆದವು. ಆಗ ಕಾಂಗ್ರೆಸ್‌ 13 ರಲ್ಲಿ 12 ಸ್ಥಾನಗಳನ್ನು ಗೆದ್ದಿತು. ಆ ಮೂಲಕ ಲೋಕಸಭೆಯಲ್ಲಿ ತನ್ನ ಸಂಖ್ಯೆಯನ್ನು 232 ರಿಂದ 244 ಕ್ಕೆ ಹೆಚ್ಚಿಸಿಕೊಂಡಿತು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಕಾಂಗ್ರೆಸ್‌ – 232
    ಬಿಜೆಪಿ – 120
    ಸಿಪಿಐ – 14
    ಸಿಪಿಎಂ – 35
    ಜನತಾ ದಳ – 59
    ಜೆಪಿ – 5
    ಇತರೆ – 56

    ಮತ್ತೆ ಕಾಂಗ್ರೆಸ್‌ ಸರ್ಕಾರ
    10 ನೇ ಸಾರ್ವತ್ರಿಕ ಚುನಾವಣೆಯಲ್ಲಿಯೂ ಯಾವ ಪಕ್ಷಕ್ಕೂ ಜನ ಬಹುಮತ ನೀಡಲಿಲ್ಲ. ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್‌, ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಕರ್ನಾಟಕದಲ್ಲಿ ಏನಾಗಿತ್ತು?
    ಕಾಂಗ್ರೆಸ್‌ – 23
    ಬಿಜೆಪಿ – 4
    ಜೆಪಿ – 1

    ಕರುನಾಡಲ್ಲಿ ಅರಳಿದ ಕಮಲ
    ಕರ್ನಾಟಕದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ 1991 ರಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಕಮಲವನ್ನು ಅರಳಿಸಿತು. ಬೆಂಗಳೂರು ಗ್ರಾಮಾಂತರದಿಂದ ವೆಂಕಟಗಿರಿ ಗೌಡ, ಬೀದರ್‌ – ರಾಮಚಂದ್ರ ವೀರಪ್ಪ, ಮಂಗಳೂರು – ವಿ.ಧನಂಜಯ ಕುಮಾರ್‌, ತುಮಕೂರು – ಮಲ್ಲಿಕಾರ್ಜುನಯ್ಯ ಗೆಲುವು ದಾಖಲಿಸಿದರು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

    ಒಡೆಯರ್ vs ಅರಸು‌
    ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ (Congress) ತೊರೆದಿದ್ದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ (Srikantadatta Nrasimharaja Wadiyar) 1991 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು (Chandraprabha Urs) ವಿರುದ್ಧ ಸ್ಪರ್ಧಿಸಿ ಒಡೆಯರ್‌ ಸೋತಿದ್ದರು. ಈ ಕ್ಷೇತ್ರದಲ್ಲಿ ಗೆದ್ದಿದ್ದ ಏಕೈಕ ಮಹಿಳೆ ಎನ್ನುವ ಹೆಗ್ಗಳಿಕೆ ಈವರೆಗೂ ಚಂದ್ರಪ್ರಭಾ ಅರಸು ಅವರ ಹೆಸರಲ್ಲಿಯೇ ಇದೆ.

  • 1984: ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್‌ಗೆ ‘400+ ಪಾರ್’

    1984: ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್‌ಗೆ ‘400+ ಪಾರ್’

    – ರಾಜಕಾರಣಕ್ಕೆ ಮೈಸೂರು ಒಡೆಯರ್ ಎಂಟ್ರಿ
    – ಪಂಜಾಬ್, ಅಸ್ಸಾಂಗೆ ನಡೆಯಲಿಲ್ಲ ಚುನಾವಣೆ!

    80 ರ ದಶಕ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸ್ಥಿತ್ಯಂತರ ಕಂಡ ಕಾಲ. ಈ ಅವಧಿಯಲ್ಲಿ ರಾಜಕೀಯ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಆರನೇ ಪಂಚವಾರ್ಷಿಕ ಯೋಜನೆಯಿಂದಾದ ಆರ್ಥಿಕ ಸುಧಾರಣೆಗಳು, ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಭೀಕರ ಹತ್ಯೆಯ ಅನುಕಂಪದ ಅಲೆಯಲ್ಲಿ ಜರುಗಿದ 1984 ಚುನಾವಣೆಯು ಕಾಂಗ್ರೆಸ್ (Congress) ಚಾರಿತ್ರಿಕ ಗೆಲುವಿಗೆ ಸಾಕ್ಷಿಯಾಯಿತು.

    ಆರ್ಥಿಕ ಉದಾರೀಕರಣ ಪ್ರಾರಂಭ
    1980 ರಲ್ಲಿ ಮತ್ತೆ ಐತಿಹಾಸಿಕ ಗೆಲುವು ಸಾಧಿಸಿದ್ದ ಇಂದಿರಾ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಏನಾದರು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ 6ನೇ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿದರು. ಆರ್ಥಿಕ ಸ್ವಾವಲಂಬನೆ ಗುರಿಯೊಂದಿಗೆ ಯೋಜನೆ ಪ್ರಾರಂಭಿಸಿದರು. ಪರಿಣಾಮವಾಗಿ 1982 ರಲ್ಲಿ ನಬಾರ್ಡ್ (NABARD) ಸ್ಥಾಪನೆಯಾಯಿತು. ಈ ಯೋಜನೆಯಿಂದ ಆರ್ಥಿಕ ಉದಾರೀಕರಣ ಪ್ರಾರಂಭವಾಯಿತು. ಅಲ್ಲಿವರೆಗೆ ಇದ್ದ ಜವಾಹರಲಾಲ್ ನೆಹರೂ ಅವರ ಸಮಾಜವಾದ ಪರಿಕಲ್ಪನೆ ಅಂತ್ಯಗೊಂಡಿತು. ಬದಲಾಗಿ ಉದಾರವಾದದ ನೀತಿಗಳು ಜಾರಿಯಾದವು. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

    ಖಲಿಸ್ತಾನ ಚಳವಳಿ
    ದೇಶದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿದ್ದ ಇಂದಿರಾ ಗಾಂಧಿಗೆ ಪಂಜಾಬ್‌ನಲ್ಲಿ ನಡೆಯುತ್ತಿದ್ದ ಪ್ರತ್ಯೇಕ ರಾಷ್ಟ್ರ ಹೋರಾಟದ ಖಲಿಸ್ತಾನ ಚಳವಳಿ ನಿದ್ದೆಗೆಡಿಸಿತ್ತು. ಬಿಂದ್ರನ್‌ವಾಲೆ ನೇತೃತ್ವದಲ್ಲಿ ಸಿಖ್ ಹೋರಾಟಗಾರರ ಪಡೆ ರಚಿಸಲಾಗಿತ್ತು. ಈ ಪಡೆ ಸ್ವರ್ಣ ಮಂದಿರವನ್ನು ತಮ್ಮ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು, ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿತ್ತು. 1984 ರಲ್ಲಿ ಬಿಂದ್ರನ್‌ವಾಲೆ ನೇತೃತ್ವದ ಹೋರಾಟಗಾರರ ಗುಂಪು ದಾಳಿಗೆ ಮುಂದಾಯಿತು. ಸ್ವರ್ಣ ಮಂದಿರದ ಆವರಣದಲ್ಲಿ ನೂರಾರು ಭಕ್ತರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಪ್ರತ್ಯೇಕತಾವಾದಿಗಳ ಜೊತೆ ಪ್ರಧಾನಿ ಇಂದಿರಾ ನಡೆಸಿದ ಮಾತುಕತೆ ವಿಫಲವಾಯಿತು. ಆಗ 1984 ರ ಜೂನ್ 6 ರಂದು ಸೇನಾ ಕಾರ್ಯಾಚರಣೆಗೆ ಪ್ರಧಾನಿ ಆದೇಶಿಸಿದರು. ಅದನ್ನೇ ‘ಆಪರೇಷನ್ ಬ್ಲೂಸ್ಟಾರ್’ (Operation Blue Star) ಎಂದು ಕರೆಯಲಾಯಿತು.

    ಆಪರೇಷನ್ ಬ್ಲೂಸ್ಟಾರ್
    ಭಾರತೀಯ ಸೇನೆ ಫಿರಂಗಿಗಳನ್ನು ಬಳಸಿಕೊಂಡು ಸ್ವರ್ಣಮಂದಿರದ ಆವರಣದ ಗೋಡೆಯನ್ನು ಕೆಡವಿ ಒಳನುಗ್ಗಿತು. ಬಿಂದ್ರನ್‌ವಾಲೆ ಮತ್ತು ಸಂಗಡಿಗರನ್ನು ಹತ್ಯೆ ಮಾಡುವವರೆಗೂ ಕಾರ್ಯಾಚರಣೆ ಮುಂದುವರಿಯಿತು. ಜೂನ್ 9 ರ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ನಾಗರಿಕರು ಮತ್ತು ಸೈನಿಕರು ಸೇರಿ ನೂರಾರು ಮಂದಿ ಹತರಾದರು.

    ಇಂದಿರಾ ಗಾಂಧಿ ಹತ್ಯೆ
    ಆಪರೇಷನ್ ಬ್ಲೂಸ್ಟಾರ್‌ಗೆ ಪ್ರತೀಕಾರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ಖರು ಹತ್ಯೆ ಮಾಡಿದರು. 1984 ರ ಅಕ್ಟೋಬರ್ 31 ರಂದು ಇಂದಿರಾ ಗಾಂಧಿ ಅವರ ಅಂಗರಕ್ಷಕ ಪಡೆಯಲ್ಲಿದ್ದ ಇಬ್ಬರು ಸಿಖ್ ಕಮಾಂಡೊಗಳೇ, ಇಂದಿರಾ ಅವರನ್ನು ಗುಂಡಿಟ್ಟು ಕೊಂದರು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

    ಮರುಗಿದ ಭಾರತ
    ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಹತ್ಯೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ಇಂದಿರಾ ಹತ್ಯೆ ಪ್ರತೀಕಾರವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಿಖ್ಖರನ್ನು ಹತ್ಯೆ ಮಾಡಲಾಯಿತು. ಅಂದಾಜು 3,000 ಜನರು ಬಲಿಯಾಗಿದ್ದಾರೆ ಎನ್ನಲಾಗಿದೆ. ಇತ್ತ ಇಂದಿರಾ ಉತ್ತರಾಧಿಕಾರಿಯಾದ ರಾಜೀವ್ ಗಾಂಧಿ (Rajiv Gandhi) ಲೋಕಸಭೆ ವಿಸರ್ಜಿಸಿ 1984 ರಲ್ಲಿ ಚುನಾವಣೆಗೆ ಹೋದರು.

    ಪಂಜಾಬ್, ಅಸ್ಸಾಂ ಬಿಟ್ಟು ಉಳಿದ ರಾಜ್ಯಗಳಿಗೆ ಚುನಾವಣೆ
    80 ರ ದಶಕದಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನ ಮತ್ತು ಅಸ್ಸಾಂನಲ್ಲಿ ವಿದೇಶಿಗರ ವಿರುದ್ಧ ಚಳವಳಿ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ರಾಜ್ಯಗಳನ್ನು ಹೊರತುಪಡಿಸಿ ಲೋಕಸಭಾ ಚುನಾವಣೆ ನಡೆಸಲಾಯಿತು. ಇಂದಿರಾ ಹತ್ಯೆಯಿಂದ ಮರುಗಿದ್ದ ಜನತೆ ರಾಜೀವ್ ಗಾಂಧಿ ಅವರನ್ನು ಬೆಂಬಲಿಸಿದರು. ಪರಿಣಾಮವಾಗಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ಚಾರಿತ್ರಿಕ ಜಯ ದಾಖಲಿಸಿತ್ತು.

    5 ದಿನ ಚುನಾವಣೆ
    1984 ರ ಲೋಕಸಭಾ ಚುನಾವಣೆಯು ಡಿಸೆಂಬರ್ 24 ರಿಂದ 28 ರ ವರೆಗೆ ಐದು ದಿನಗಳ ಕಾಲ ನಡೆಯಿತು. 28 ರಾಜ್ಯಗಳ 514 ಸ್ಥಾನಗಳಿಗೆ ಚುನಾವಣೆ ನಡೆಯಿತು.

    ಎಷ್ಟು ಪಕ್ಷಗಳ ಸ್ಪರ್ಧೆ?
    7 ರಾಷ್ಟ್ರೀಯ, 17 ಪ್ರಾದೇಶಿಕ ಪಕ್ಷಗಳು ಸೇರಿದಂತೆ ಒಟ್ಟು 33 ಪಕ್ಷಗಳು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

    ಮತದಾರರ ಸಂಖ್ಯೆ
    ಒಟ್ಟು ಮತದಾರರು: 37,95,40,608
    ಪುರುಷರು: 19,67,30,499
    ಮಹಿಳೆಯರು: 18,28,10,109

    ಮತ ಚಲಾವಣೆ ಆಗಿದ್ದೆಷ್ಟು?
    ಮತ ಚಲಾಯಿಸಿದವರು: 24,12,46,887
    ಮತ ಪ್ರಮಾಣ: 63.56%

    ಕಣದಲ್ಲಿದ್ದ ಅಭ್ಯರ್ಥಿಗಳು
    ಒಟ್ಟು ಅಭ್ಯರ್ಥಿಗಳು: 5,312
    ಮಹಿಳಾ ಅಭ್ಯರ್ಥಿಗಳು: 162 (ವಿಜೇತರು 42 ಮಂದಿ)

    ಕಾಂಗ್ರೆಸ್‌ಗೆ 404 ಸ್ಥಾನ
    ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 400 ಕ್ಕೂ ಹೆಚ್ಚು ಸ್ಥಾನ ಮತ್ತು 50% ಕ್ಕಿಂತ ಹೆಚ್ಚು ಮತಗಳನ್ನು ಪಡೆದು ಐತಿಹಾಸಿಕ ಗೆಲುವು ಸಾಧಿಸಿತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಮಾಡಿರದ ಸಾಧನೆ ಇದಾಗಿದೆ.

    ಅತಿ ದೊಡ್ಡ ವಿಪಕ್ಷ ಯಾವುದು?
    ಟಿಡಿಪಿಯು ಅತಿ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಈ ಪಕ್ಷ 30 ಸ್ಥಾನಗಳನ್ನು ಗೆದ್ದುಕೊಂಡಿತು. ಹೊಸದಾಗಿ ಸ್ಥಾಪಿಸಲಾದ ಬಿಜೆಪಿ (ಜನಸಂಘದ ಉತ್ತರಾಧಿಕಾರಿ ಪಕ್ಷ) ಕೇವಲ ಎರಡು ಸ್ಥಾನಗಳನ್ನು ಗೆದ್ದಿತು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

    ಬಿಜೆಪಿಗೆ ಕೇವಲ 2 ಸ್ಥಾನ!
    ಆಗ ತಾನೆ ಉದಯವಾಗಿದ್ದ ಬಿಜೆಪಿ ಪಕ್ಷ ಇಡೀ ದೇಶದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು. ಎ.ಕೆ.ಪಟೇಲ್‌ ಮತ್ತು ಚೆಂದುಪಾಟ್ಲ ಜಂಗಾ ರೆಡ್ಡಿ ಹೆಸರಿನ ಈ ಇಬ್ಬರು ಗೆಲುವು ಸಾಧಿಸಿದ್ದರು.

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಕಾಂಗ್ರೆಸ್ – 404
    ಜನತಾ ಪಕ್ಷ – 10
    ಬಿಜೆಪಿ – 2
    ಸಿಪಿಐ(ಎಂ) – 22
    ಟಿಡಿಪಿ – 30
    ಎಐಎಡಿಎಂಕೆ – 12
    ಸಿಪಿಐ – 6
    ಇತರೆ – 23
    ಪಕ್ಷೇತರ – 5

    ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಕಾಂಗ್ರೆಸ್ – 24
    ಜನತಾ ಪಕ್ಷ – 4

    ರಾಜಕೀಯಕ್ಕೆ ಮೈಸೂರು ಒಡೆಯರ್‌ ಎಂಟ್ರಿ
    ಕರ್ನಾಟಕದಲ್ಲಿ ರಾಜವಂಶಸ್ಥರ ರಾಜಕೀಯ ಪ್ರವೇಶಕ್ಕೆ ಆಗಿನ ಮೈಸೂರು-ಕೊಡಗು ಕ್ಷೇತ್ರ ಮುನ್ನುಡಿ ಬರೆಯಿತು. 1984 ರಲ್ಲಿ ಪ್ರಥಮ ಬಾರಿಗೆ ಆಗಿನ ಮೈಸೂರು ಒಡೆಯರ್ ಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು.

  • ತಾಯಿಯನ್ನು ನೋಡದೆ 32 ಆಯ್ತು, ತಂದೆಯ ಕೊನೆಗಾಲದಲ್ಲಿ ಜೊತೆ ಇರಲು ಆಗಲಿಲ್ಲ- ರಾಜೀವ್ ಗಾಂಧಿ ಹಂತಕನ ಭಾವನಾತ್ಮಕ ಪತ್ರ

    ತಾಯಿಯನ್ನು ನೋಡದೆ 32 ಆಯ್ತು, ತಂದೆಯ ಕೊನೆಗಾಲದಲ್ಲಿ ಜೊತೆ ಇರಲು ಆಗಲಿಲ್ಲ- ರಾಜೀವ್ ಗಾಂಧಿ ಹಂತಕನ ಭಾವನಾತ್ಮಕ ಪತ್ರ

    ಚೆನ್ನೈ: ನನ್ನ ತಾಯಿಯನ್ನು ನೋಡದೆ 32 ವರ್ಷಗಳು ಕಳೆದಿವೆ. ನನ್ನ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಅದು ನನ್ನನ್ನು ತುಂಬಾ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹಂತಕರಲ್ಲಿ ಒಬ್ಬನಾದ ಶ್ರೀಲಂಕಾದ (Sri Lanka) ಟಿ.ಸುಥೆಂತಿರರಾಜ ತಮಿಳುನಾಡಿನ (Tamil Nadu) ಕಾರಾಗೃಹದ ವಿಶೇಷ ಶಿಬಿರದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ.

    ಸೂರ್ಯನ ಬೆಳಕು (Sunlight) ಕೂಡ ನಮ್ಮ ದೇಹವನ್ನು ಸ್ಪರ್ಶಿಸುವುದಿಲ್ಲ. ನಮ್ಮ ತಾಯ್ನಾಡಿಗೆ ಮರಳಲು ಬೆಂಬಲವಾಗಿ ಪ್ರಪಂಚದಾದ್ಯಂತದ ಇರುವ ತಮಿಳಿಯನ್ನರು ಧ್ವನಿ ಎತ್ತಬೇಕು ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ವಾಪಸ್ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಗುರುತಿನ ಪುರಾವೆಯನ್ನು ನವೀಕರಿಸಲು ಚೆನ್ನೈನಲ್ಲಿರುವ ಶ್ರೀಲಂಕಾ ಡೆಪ್ಯುಟಿ ಹೈಕಮಿಷನ್ ಕಚೇರಿಗೆ ಪ್ರವೇಶ ನೀಡುವಂತೆ ಆತ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅರೆಸ್ಟ್

    ಸುಪ್ರೀಂನಿಂದ ಬಿಡುಗಡೆಯಾದರೂ, ಕಳೆದ ಆರು ತಿಂಗಳಿನಿಂದ ತಿರುಚ್ಚಿ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ವಿಶೇಷ ಶಿಬಿರದಲ್ಲಿ (Trichy Central Prison campus) ನನ್ನನ್ನು ಇರಿಸಲಾಗಿದೆ. ವಿಶೇಷ ಶಿಬಿರದಲ್ಲಿ 120 ಕ್ಕೂ ಹೆಚ್ಚು ವಿದೇಶಿಯರು ವಾಸಿಸುತ್ತಿದ್ದಾರೆ. ಅವರಲ್ಲಿ ಸುಮಾರು 90 ಮಂದಿ ಶ್ರೀಲಂಕಾದಿಂದ ಬಂದವರು. ಇಲ್ಲಿ ತಮಿಳರು, ಶ್ರೀಲಂಕಾದವರು, ಮುಸ್ಲಿಮರು ಎಂಬ ಭೇದವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಸಂಬಂಧಿಕರು ಮಾತ್ರ ಶಿಬಿರದಲ್ಲಿದ್ದವರನ್ನು ಭೇಟಿಯಾಗಬಹುದು. ಭಾರತದಲ್ಲಿ ನನ್ನ ಸಂಬಂಧಿ ಯಾರಿದ್ದಾರೆ? ನಮಗೆ ಫೋನ್‍ನಲ್ಲಿ ಮಾತಾಡಲು ಅವಕಾಶವಿಲ್ಲ. ನನ್ನ ಮನವಿ ತಪ್ಪಾಗಿದ್ದರೆ ನನ್ನನ್ನು ಯಾರೂ ಬೆಂಬಲಿಸುವ ಅಗತ್ಯವಿಲ್ಲ ಎಂದು ಬರೆದಿದ್ದಾನೆ.

    ಶ್ರೀಲಂಕಾದ ಪ್ರಜೆಯಾಗಿರುವ ಸಂತನ್ ಅಲಿಯಾಸ್ ಟಿ.ಸುಥೆಂತಿರರಾಜ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ 7 ಅಪರಾಧಿಗಳಲ್ಲಿ ಒಬ್ಬನಾಗಿದ್ದಾನೆ. ಆತನನ್ನು ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ 2022ರ ನ.11 ರಂದು ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಜೊತೆಯಲ್ಲಿ ತಿರುಚ್ಚಿ ಕೇಂದ್ರ ಕಾರಾಗೃಹದ ಕ್ಯಾಂಪಸ್‍ನಲ್ಲಿರುವ ವಿಶೇಷ ಶಿಬಿರದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ – ಸೇನೆಯಿಂದ ಶೋಧ ಕಾರ್ಯ

  • ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ

    ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ

    – ಬಿಜೆಪಿ ಪಕ್ಷ ಸಂಘಟನೆಗಾಗಿ ಚುನಾವಣೆ ಮುಂದೂಡುತ್ತಿದೆ

    ಯಾದಗಿರಿ: ಅಪರೇಷನ್ ಕಮಲ ಬಿಜೆಪಿಯ (BJP) ಹುಟ್ಟುಗುಣ. ದೇಶದಲ್ಲಿ ಆಪರೇಷನ್ ಮಾಡಿರುವ ಸಂಖ್ಯೆಯ ಲೆಕ್ಕ ತೆಗೆದರೆ ಬಿಜೆಪಿ ಗಿನ್ನಿಸ್ ರೆಕಾರ್ಡ್ ಆಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಯಾದಗಿರಿಯ (Yadagiri) ಗುರುಮಠಕಲ್‍ನಲ್ಲಿ ವ್ಯಂಗ್ಯವಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ  (Siddaramaiah) ಕ್ಷೇತ್ರ ಹುಡುಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ವಿರೋಧ ಪಕ್ಷದ ನಾಯಕರು, ಸಿಎಂ ಆಗಿದ್ದವರು. 224 ಕ್ಷೇತ್ರದಲ್ಲಿ ರೋಡ್ ಶೋ, ಸಭೆ ಮಾಡುತ್ತಾರೆ. ಈಗ ಅವರ ಮೇಲೆ ಅನುಕಂಪ ತೋರಿಸಬೇಡಿ. ನಿಮ್ಮ ಅನುಕಂಪ ನಮಗೆ ಬೇಡ ಎಂದು ಡಿಕೆ ಶಿವಕುಮಾರ್ ಹೇಳಿದ್ದು ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ

    ರಾಜಕಾರಣಿಗಳಿಗೆ ಸೋಲು ಗೆಲುವು ಎನ್ನುವುದು ಎಲ್ಲರಿಗೂ ಆಗಿದೆ. ಸಿದ್ದರಾಮಯ್ಯ ಎರಡು-ಮೂರು ಬಾರಿ ಸೋತಿದ್ದಾರೆ. ನಾನು ಸಹ ಎರಡರಿಂದ ಮೂರು ಸಲ ಸೋತಿದ್ದೇನೆ. ಸೋಲು ಗೆಲುವು ಜನರ ಕೈಯಲ್ಲಿದೆ. ಜನ ಬೇಕಾದಾಗ ಆಯ್ಕೆ ಮಾಡುತ್ತಾರೆ. ಬೇಡ ಎಂದಾದರೆ ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

    ಬಿಜೆಪಿ ಸರ್ಕಾರದಿಂದ ಹಿಂದೆಂದೂ ಕಾಣದ ಜಾಹಿರಾತುಗಳು ಪ್ರತಿನಿತ್ಯ ಬರುತ್ತಿವೆ. ಜಾಹಿರಾತಿಗೆ ಕೊಟ್ಟ ಆಸಕ್ತಿಯನ್ನು ಕೆಲಸದ ವಿಚಾರದಲ್ಲಿ ತೋರಿಸಬೇಕಾಗಿತ್ತು. ಇದರಿಂದ ರಾಜ್ಯದಲ್ಲಿ ಸ್ವಲ್ಪ ಜನರ ವಿಶ್ವಾಸವಾದರೂ ಗಳಿಸಬಹುದಿತ್ತು. ಈ ಜಾಹಿರಾತುಗಳಿಂದ ಜನತೆಯ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದಿದ್ದಾರೆ.

    ಇಂದು ರಾಜ್ಯಕ್ಕೆ ಅಮಿತ್ ಶಾ (Amit Shah) ಬಂದಿದ್ದಾರೆ. ಚುನಾವಣೆ ಸಮೀಪದಲ್ಲಿ ಪ್ರತಿನಿತ್ಯ ಕೇಂದ್ರ ಸಚಿವರು ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಇಂತಹ ಹೊಸ ಪದ್ಧತಿಯನ್ನು ಬಿಜೆಪಿ ಪಕ್ಷ ಪ್ರಾರಂಭ ಮಾಡಿದೆ. ಸಾಧನೆ ಹೇಳಿಕೊಳ್ಳಲು ಕೆಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ರಾಜ್ಯಕ್ಕೆ ದೊರಕಿಲ್ಲ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಸಣ್ಣ ಸಣ್ಣ ಯೋಜನೆಗಳನ್ನು ಉದ್ಘಾಟನೆ ಮಾಡಲು ಕೇಂದ್ರ ಸಚಿವರು ಬರುತ್ತಿದ್ದಾರೆ. ವಿಶ್ವದಲ್ಲಿಯೇ ನಂಬರ್ ಒನ್ ಪಕ್ಷವೆಂದು ಬಿಂಬಿಸಿಕೊಂಡವರಿಗೆ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ಇದರಿಂದ ಅಯ್ಯೋ ಎನಿಸಿ ಅನುಕಂಪ ಹುಟ್ಟುತ್ತಿದೆ ಎಂದು ಕುಟುಕಿದ್ದಾರೆ.

    ಬಿಜೆಪಿಯಿಂದ ಕಾಂಗ್ರೆಸ್ ಕಡೆ ವಲಸೆ ಆರಂಭವಾಗಿದೆ. ಇಲ್ಲಿಯವರೆಗೆ ಕಾಂಗ್ರೆಸ್‍ನಿಂದ (Congress) ಬಿಜೆಪಿ ಕಡೆ ವಲಸೆ ಆಗುತ್ತಿತ್ತು. ಮತ್ತೆ ಚುನಾವಣೆ ಬಳಿಕ ಬಿಜೆಪಿ ಆಪರೇಷನ್ ಕಮಲ ನಡೆಸುತ್ತದೆ. ಕಾಂಗ್ರೆಸ್ ಚುನಾವಣೆಗೂ ಪೂರ್ವದಲ್ಲೇ ಆಪರೇಷನ್ ಹಸ್ತ ಮಾಡ್ತಿದ್ದಾರೆ. ಗುರುಮಠಕಲ್ ಕ್ಷೇತ್ರದಲ್ಲಿ ಆಪರೇಷನ್ ಮಾಡಲಾಗಿದೆ ಎಂದು ಎಂದು ಚಿಂಚನಸೂರ ವಿರುದ್ಧ ಕಿಡಿಕಾರಿದ್ದಾರೆ.

    ಎಐಸಿಸಿ ಅಧ್ಯಕ್ಷರ ವಿರುದ್ಧ ತೊಡೆ ತಟ್ಟಿದವರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್‍ಗೆ ಬರಬಾರದು. ಇದರಿಂದ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಎಂದು ಗೊತ್ತಾಗುತ್ತದೆ. ಕಾಂಗ್ರೆಸ್‍ನವರು ತಮಗೆ ಮೋಸ ಮಾಡಿದವರನ್ನು ಮತ್ತೆ ತಬ್ಬಿಕೊಂಡಿದ್ದಾರೆ. 15 ದಿನಗಳ ಕಾಲ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗುತ್ತಾರೆ ಎಂದಿದ್ದಾರೆ.

    ನೀತಿ ಸಂಹಿತೆ ಜಾರಿ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಸಂಘಟನೆ ಆಗಬೇಕು. ಅದಕ್ಕೆ ನೀತಿ ಸಂಹಿತೆ ಇನ್ನೂ ಜಾರಿ ಮಾಡಿಲ್ಲ. ಪಕ್ಷ ಸಂಘಟನೆ ಆಗಿದೆ ಎಂದು ಖಾತ್ರಿಯಾಗುವವರೆಗೂ ಚುನಾವಣೆ ಮುಂದಕ್ಕೆ ತಳ್ಳುತ್ತಾರೆ. ಮೋದಿಯವರ (Narendra Modi) ಕಾರ್ಯಕ್ರಮಗಳು ಮುಗಿದ ಮೇಲೆಯೇ ನೀತಿ ಸಂಹಿತೆ ಜಾರಿ ಮಾಡುತ್ತದೆ. ಸಂವಿಧಾನಿಕ ಸಂಸ್ಥೆಗಳು ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಮಟ್ಟದಲ್ಲಿ ಈ ರೀತಿ ನಡೆಯುತ್ತಿದೆ. ಅವರ ಮನಸ್ಸಿಗೆ ಬಂದಂತೆ ಚುನಾವಣೆ ನಿರ್ಧಾರ ಮಾಡುತ್ತಾರೆ ಎಂದು ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಾಲ್ಕು ವರ್ಷ ಬಿಜೆಪಿ ಸರ್ಕಾರ ಕೆಲಸ ಮಾಡದೇ ಈಗ ಸಮುದಾಯಗಳಿಗೆ ನಿಗಮಗಳನ್ನು ನೀಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ನಿಗಮ ಮಾಡಿ ಆರ್ಥಿಕವಾಗಿ ಶಕ್ತಿ ತುಂಬಿದ್ದರೆ ಒಪ್ಪಬಹುದಿತ್ತು. ಚುನಾವಣೆಗೆ ಹೋಗುವ ಮುನ್ನ ಪ್ರಾಧಿಕಾರ ಮಾಡಿ ಪ್ರಯೋಜನವೇನು ಎಂದು ಬಿಜೆಪಿ ನಾಯಕರಿಗೆ ಕುಟುಕಿದ್ದಾರೆ.

    ರಾಹುಲ್ ಗಾಂಧಿಯವರಿಗೆ (Rahul Gandhi) ಶಿಕ್ಷೆ ಪ್ರಕಟವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಯಾರೆಲ್ಲ ಏನೇನು ಪದ ಬಳಕೆ ಮಾಡಿದ್ದಾರೆ ಎಂಬುದು ಗೊತ್ತಿದೆ. ರಾಜೀವ್ ಗಾಂಧಿ (Rajiv Gandhi) ಅವರನ್ನು ಚೋರ್ ಎಂದು ಕರೆದಾಗ ಅರೆಸ್ಟ್ ಆಗಿತ್ತಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 12 ಗಂಟೆಗೊಮ್ಮೆ ಸ್ಥಳ ಬದಲಾವಣೆ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಅಮೃತ್‌ಪಾಲ್ ಸಿಂಗ್

  • ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹತ್ಯೆ ಆಕಸ್ಮಿಕವಷ್ಟೇ: ಉತ್ತರಾಖಂಡ ಸಚಿವ

    ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹತ್ಯೆ ಆಕಸ್ಮಿಕವಷ್ಟೇ: ಉತ್ತರಾಖಂಡ ಸಚಿವ

    ಡೆಹ್ರಾಡೂನ್: ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಇಂದಿರಾ ಗಾಂಧಿ (Indira Gandhi) ಹಾಗೂ ರಾಜೀವ್ ಗಾಂಧಿ (Rajiv Gandhi) ಅವರ ಹತ್ಯೆಗಳು ಆಕಸ್ಮಿಕವಷ್ಟೇ ಎಂದು ಉತ್ತರಾಖಂಡದ (Uttarakhand) ಸಚಿವ ಗಣೇಶ್ ಜೋಶಿ (Ganesh Joshi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಬುದ್ಧಿಮತ್ತೆಗೆ ವಿಷಾದಿಸುತ್ತೇನೆ. ಆದರೆ ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಾವರ್ಕರ್ ಹಾಗೂ ಚಂದ್ರಶೇಖರ್ ಆಜಾದ್ ಅವರಂತಹ ಅನೇಕರು ಈ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಗಾಂಧಿ ಕುಟುಂಬದ ಸದಸ್ಯರೊಂದಿಗೆ ನಡೆದಿದ್ದು ಆಕಸ್ಮಿಕವಷ್ಟೇ. ಆಕಸ್ಮಿಕಕ್ಕೂ ಹಾಗೂ ಹುತಾತ್ಮಕ್ಕೂ ಬಹಳ ವ್ಯತ್ಯಾಸವಿದೆ ಎಂದರು.

    ಶ್ರೀನಗರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ (Congress) ನಾಯಕನ ಭಾಷಣ ಕುರಿತು ಪ್ರತಿಕ್ರಿಯಿಸಿ, ಒಬ್ಬರ ಬುದ್ಧಿವಂತಿಕೆಯ ಮಟ್ಟಕ್ಕೆ ಅನುಗುಣವಾಗಿ ಮಾತ್ರ ಮಾತನಾಡಬಹುದು ಎಂದು ತಿಳಿಸಿದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸುಗಮವಾಗಿ ಮುಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಲ್ಲುತ್ತದೆ. ಮೋದಿ ನೇತೃತ್ವದಲ್ಲಿ 370ನೇ ವಿಧಿಯನ್ನು ರದ್ದುಪಡಿಸದಿದ್ದರೆ ಹಾಗೂ ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಮರಳದಿದ್ದರೆ ರಾಹುಲ್ ಗಾಂಧಿ (Rahul Gandhi) ಅವರು ಲಾಲ್ ಚೌಕ್‍ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

    ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ತಮ್ಮ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ಬಗ್ಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದ ಕ್ಷಣಗಳನ್ನು ನೆನಪಿಸಿಕೊಂಡು, ಹಿಂಸಾಚಾರವನ್ನು ಪ್ರಚೋದಿಸುವವರಿಗೆ ಆ ನೋವು ಎಂದಿಗೂ ಅರ್ಥವಾಗುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!

    ಆ ಕರೆ ಬಂದಾಗ ಆ ನೋವು ಮೋದಿ, ಅಮಿತ್ ಶಾ, ಬಿಜೆಪಿ ಮತ್ತು ಆರ್‌ಎಸ್‍ಎಸ್‍ನಂತಹ ಹಿಂಸಾಚಾರವನ್ನು ಪ್ರಚೋದಿಸುವವರಿಗೆ ಈ ನೋವು ಎಂದಿಗೂ ಅರ್ಥವಾಗುವುದಿಲ್ಲ. ಒಬ್ಬ ಸೈನಿಕನ ಕುಟುಂಬಕ್ಕೆ ಆ ನೋವು ಅರ್ಥವಾಗುತ್ತದೆ. ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಯ ಕುಟುಂಬಕ್ಕೆ ಅರ್ಥವಾಗುತ್ತದೆ. ಕಾಶ್ಮೀರಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂದಿದ್ದರು. ಇದನ್ನೂ ಓದಿ: ನಾಗರಹಾವು ಹಿಡಿದು ಜೆಡಿಎಸ್ ಅಭ್ಯರ್ಥಿ ಗೆಲುವಿನ ಬಗ್ಗೆ ಭವಿಷ್ಯ ನುಡಿದ ವ್ಯಕ್ತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k