Tag: rajinikanth

  • ರಜನಿ ಬಯೋಪಿಕ್: ಧನುಷ್ ಆಸೆ ಈಡೇರೋದು ಅನುಮಾನ

    ರಜನಿ ಬಯೋಪಿಕ್: ಧನುಷ್ ಆಸೆ ಈಡೇರೋದು ಅನುಮಾನ

    ಹೆಸರಾಂತ ನಟ ರಜನಿಕಾಂತ್  (Rajinikanth) ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಂತೆಯೇ , ಈ ಸಿನಿಮಾದಲ್ಲಿ ರಜನಿ ಪಾತ್ರ ಮಾಡೋರು ಯಾರು ಎನ್ನುವ ಚರ್ಚೆ ಶುರುವಾಗಿದೆ. ರಜನಿಕಾಂತ್ ಅವರ ಬಯೋಪಿಕ್ ಬಂದರೆ, ಅವರ ಪಾತ್ರವನ್ನು ನಾನು ಮಾಡುತ್ತೇನೆ ಎಂದು ಧನುಷ್ (Dhanush) ಹೇಳಿದ್ದರು. ಸದ್ಯದ ಪರಿಸ್ಥಿತಿಯಂತೆ ಅವರಿಗೆ ಆ ಪಾತ್ರ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

    ತಮಿಳು ಸಿನಿಮಾ ರಂಗದಲ್ಲಿ ಓಡಾಡುತ್ತಿರುವ ಹೆಸರಿನ ಪ್ರಕಾರ ರಜನಿ ಅವರ ಪಾತ್ರವನ್ನು ಶಿವಕಾರ್ತಿಕೇಯನ್ (Shivakarthikeyan) ನಿರ್ವಹಿಸಲಿದ್ದಾರಂತೆ. ಹಾಗಾಗಿ ಧನುಷ್ ಅವರಿಗೆ ಈ ಪಾತ್ರ ಸಿಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಈ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ತಯಾರಿಸಿರುವ ಸಾಜಿದ್ ನಾಡಿಯಾದ್ವಾಲ್ (Sajid Nadiadwal) ಅವರು ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.

    ಹಲವಾರು ವರ್ಷಗಳಿಂದ ರಜನಿ ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಕ್ಕಿ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ಬರಬಹುದು. ಅದು ಹಲವು ಭಾಷೆಗಳಲ್ಲೂ ನಿರ್ಮಾಣ ಆಗಬಹುದು.

     

    ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರು ಮಾತ್ರ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ರಜನಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಹುದು.

  • ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ಕ್ಷಿಣದ ಹೆಸರಾಂತ ನಟ ರಜನಿಕಾಂತ್ (Rajinikanth) ನಟನೆಯ ಕೂಲಿ (Coolie) ಸಿನಿಮಾ ತಂಡಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ilayaraja) ನೋಟಿಸ್ (Notice) ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಸಂಗೀತ ಸಂಯೋಜನೆಯನ್ನು ಅನುಮತಿ ಇಲ್ಲದೇ ಬಳಸಿದ್ದಾರೆ ಎಂದು ನೋಟಿಸ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.

    ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ವಾ ವಾ ಪಾಕಂ ವಾ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಲಾಗಿದೆ. ಇದಕ್ಕೆ ತಮ್ಮ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

     

    ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ ಕೂಡ ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು. ಈಗ ಮತ್ತೆ ಲೋಕೇಶ್ ತಪ್ಪು ಮಾಡಿದ್ದಾರೆ.

  • ನಟ ರಜನಿಕಾಂತ್ ಬಯೋಪಿಕ್ ಮಾಡಲು ತಯಾರಿ

    ನಟ ರಜನಿಕಾಂತ್ ಬಯೋಪಿಕ್ ಮಾಡಲು ತಯಾರಿ

    ಹೆಸರಾಂತ ನಟ ರಜನಿಕಾಂತ್  (Rajinikanth) ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ತಯಾರಿಸಿರುವ ಸಾಜಿದ್ ನಾಡಿಯಾದ್ವಾಲ್ (Sajid Nadiadwal) ಅವರು ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.

    ಹಲವಾರು ವರ್ಷಗಳಿಂದ ರಜನಿ ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಕ್ಕಿ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ಬರಬಹುದು. ಅದು ಹಲವು ಭಾಷೆಗಳಲ್ಲೂ ನಿರ್ಮಾಣ ಆಗಬಹುದು.

     

    ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರು ಮಾತ್ರ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ರಜನಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಹುದು.

  • ರಜನಿಕಾಂತ್‌ಗೆ ವಿಲನ್‌ ಆದ ರಾಣಾ ದಗ್ಗುಬಾಟಿ

    ರಜನಿಕಾಂತ್‌ಗೆ ವಿಲನ್‌ ಆದ ರಾಣಾ ದಗ್ಗುಬಾಟಿ

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ‘ಲಾಲ್ ಸಲಾಂ’ (Lal Salam) ಸಿನಿಮಾ ಸೋಲಿನ ನಂತರ ವೆಟ್ಟೈಯಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಲೈವಾ ಸಿನಿಮಾದಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana Daggubati) ನಟಿಸಿದ್ದಾರೆ. ರಜನಿಕಾಂತ್‌ ಮುಂದೆ ರಾಣಾ ಅಬ್ಬರಿಸಿದ್ದಾರೆ.

    ‘ಜೈ ಭೀಮ್’ (Jai Bhim) ಖ್ಯಾತಿಯ ಜ್ಞಾನ್‌ವೇಲ್ ನಿರ್ದೇಶನದ ‘ವೆಟ್ಟೈಯಾನ್’ ಸಿನಿಮಾಗೆ ಸಾಥ್‌ ನೀಡಿದ್ದಾರೆ. ಚಿತ್ರೀಕರಣ ಕೂಡ ಬಿರುಸಿನಿಂದ ನಡೆಯುತ್ತಿದೆ. ರಜನಿಕಾಂತ್‌ ಮುಂದೆ ರಾಣಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ತಲೈವಾ ಮುಂದೆ ನೆಗೆಟಿವ್‌ ಶೇಡ್‌ನಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

    ಅಂದಹಾಗೆ, ರಜನಿಕಾಂತ್ ನಟನೆಯ 170ನೇ ಸಿನಿಮಾ ವೆಟ್ಟೈಯಾನ್ ಇದೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ. ಇದನ್ನೂ ಓದಿ:ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್

    ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ‘ಪೊನ್ನಿಯಿನ್ ಸೆಲ್ವನ್’ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ‘ವೆಟ್ಟೈಯಾನ್’ ಸಿನಿಮಾ ನಿರ್ಮಿಸುತ್ತಿದೆ.

  • ಬಹುಕಾಲದ ಗೆಳೆಯ ದ್ವಾರಕೀಶ್ ನೆನೆದ ರಜನಿಕಾಂತ್

    ಬಹುಕಾಲದ ಗೆಳೆಯ ದ್ವಾರಕೀಶ್ ನೆನೆದ ರಜನಿಕಾಂತ್

    ದ್ವಾರಕೀಶ್ (Dwarakish) ಮತ್ತು ರಜನಿಕಾಂತ್ (Rajinikanth) ಬಹುಕಾಲದ ಗೆಳೆಯರು. ದ್ವಾರಕೀಶ್ ಹೇಳಿದವರಿಗೆ ರಜನಿಕಾಂತ್ ಕಾಲ್ ಶೀಟ್ ಕೊಡುತ್ತಿದ್ದರು ಎಂದು ಸ್ವತಃ ದ್ವಾರಕೀಶ್ ಅವರೇ ಹೇಳಿದ್ದಾರೆ. ಅಡ್ಡ ವಾರಿಸು ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದರೆ, ಈ ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. 1983ರಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಆನಂತರ ನೀ ಬರೆದ ಕಾದಂಬರಿ, ಗುಂಗುವಾ ಸೇರಿದಂತೆ ಹಲವು ಚಿತ್ರಗಳಲ್ಲಿಇಬ್ಬರೂ ಕೆಲಸ ಮಾಡಿದ್ದಾರೆ. ಹಾಗೆ ಇವರ ಸ್ನೇಹವಿತ್ತು.

    ಈ ಸ್ನೇಹಕ್ಕೆ ಕುರುಹು ಎನ್ನುವಂತೆ ತಮ್ಮಿಬ್ಬರ ಸ್ನೇಹವನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಜನಿ, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ. ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು ಹಾಗೂ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ. ಅವರಿಗೆ ಭಾವ ಪೂರ್ಣ ಸಂತಾಪ ಎಂದು ಬರೆದುಕೊಂಡಿದ್ದಾರೆ.

     

    ಹಿರಿಯ ನಟ ದ್ವಾರಕೀಶ್ ಅವರ ನಿಧನಕ್ಕೆ ಹಿರಿಯ ನಿರ್ದೇಶಕ ಭಾರ್ಗವ್ ಕೂಡ ಸಂತಾಪ ಸೂಚಿಸಿದ್ದಾರೆ. ದ್ವಾರಕೀಶ್ ಅವರ ಸಂಬಂಧಿಯೂ ಆಗಿರುವ ಭಾರ್ಗವ್, ಅಗಲಿದ ದ್ವಾರಕೀಶ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ, ನಾನು ಮತ್ತು ದ್ವಾರಕೀಶ್ ಬಾಲ್ಯದ ಸ್ನೇಹಿತರು. ಸ್ಕೂಲ್ ಕಾಲೇಜು ಶಿಕ್ಷಣ ಒಟ್ಟಿಗೆ ಕಲಿತಿದ್ದೇವೆ. ಕಾಲೇಜು ದಿನಗಳಿಂದಾನೇ ದ್ವಾರಕೀಶ್ ಗೆ ನಟನಾ ಆಸಕ್ತಿ. ಅವ್ರ ಅಣ್ಣ ಮೈಸೂರಲ್ಲಿ ಅಂಗಡಿ ಹಾಕಿ ಕೊಟ್ಟಿದ್ರು. ಅಂಗಡಿ ಬಿಟ್ಟು ಬೆಂಗಳೂರಿಗೆ ನಟ ಆಗೋಕೆ ಬಂದ್ರು. ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನನ್ಗೆ ಅವ್ನು ಅನ್ನದಾತ ಅವ್ನಿಂದ್ಲೇ ನಾನು ಚಿತ್ರರಂಗಕ್ಕೆ ಬಂದೆ . ದ್ವಾರಕೀಶ್ ನನ್ ಗುರು ಅನ್ನದಾತ ಎಂದು ಭಾರ್ಗವ್ ಭಾವುಕ ಮಾತುಗಳನ್ನು ಆಡಿದ್ದಾರೆ.

  • ರಜನಿ 171ನೇ ಸಿನಿಮಾದ ಫಸ್ಟ್ ಲುಕ್ ಔಟ್: ತಲೈವಾ ಅವತಾರಕ್ಕೆ ಕುಣಿದ ಫ್ಯಾನ್ಸ್

    ರಜನಿ 171ನೇ ಸಿನಿಮಾದ ಫಸ್ಟ್ ಲುಕ್ ಔಟ್: ತಲೈವಾ ಅವತಾರಕ್ಕೆ ಕುಣಿದ ಫ್ಯಾನ್ಸ್

    ಜನಿಕಾಂತ್ (Rajinikanth) ನಟನೆಯ 171ನೇ ಸಿನಿಮಾದ ಫಸ್ಟ್ ಲುಕ್ (First Look) ರಿಲೀಸ್ ಆಗಿದೆ. ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanakaraj)  ಅವರೇ ತಮ್ಮ ಸೋಷಿಯಲ್ ಮೀಡಿಯಾದ ಪೇಜ್ ನಲ್ಲಿ ಫಸ್ಟ್ ಲುಕ್ ಅನ್ನು ಪೋಸ್ಟ್ ಮಾಡಿದ್ದಾರೆ. ಬಂಗಾರದ ವಾಚ್ ಅನ್ನು ಬೇಡಿ ಮಾಡಿಕೊಂಡು ಸಖತ್ ಲುಕ್ ನಲ್ಲಿ ರಜನಿ ಕಾಣಿಸಿಕೊಂಡಿದ್ದಾರೆ. ತಲೈವಾ ಅವತಾರ ಕಂಡು ಫ್ಯಾನ್ಸ್ ಕುಣಿದಿದ್ಧಾರೆ.

    ಈ ಸಿನಿಮಾ ಕುರಿತಂತೆ ಭಾರೀ ಭಾರೀ ಸುದ್ದಿಗಳು ಹೊರ ಬರುತ್ತಿವೆ. ಅದರಲ್ಲೂ ತಾರಾಗಣದ ಕುರಿತಂತೆ ರೋಚಕ ವಿಷಯಗಳು ಕೇಳುತ್ತಿವೆ. ಅವುಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ಥ್ರಿಲ್ ಅನುಭವಿಸುತ್ತಿದ್ದಾರೆ ರಜನಿ ಫ್ಯಾನ್ಸ್. ಇದೀಗ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದ್ದು ರಜನಿ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಕೂಡ ಪಾತ್ರ ಮಾಡಲಿದ್ದಾರೆ.

    ‘ಜೈಲರ್’ (Jailer) ಸಿನಿಮಾದ ಭರ್ಜರಿ ಸಕ್ಸಸ್ ನಂತರ ರಜನಿಕಾಂತ್ ಸಿನಿಮಾ ಆಯ್ಕೆಯಲ್ಲಿ ಮತ್ತಷ್ಟು ಚ್ಯುಸಿಯಾಗಿದ್ದಾರೆ. ಹೀಗಿರುವಾಗ ತಮ್ಮ 171ನೇ ಚಿತ್ರಕ್ಕೆ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿದ್ದಾರೆ. ತಲೈವಾ ಮುಂದೆ ಅಬ್ಬರಿಸಲು ನಟ ರಾಘವ್ ಲಾರೆನ್ಸ್ ಕೂಡ ಸಜ್ಜಾಗಿದ್ದಾರೆ.

    ರಜನಿಕಾಂತ್ ಅವರ 171ನೇ ಚಿತ್ರದಲ್ಲಿ ವಿಲನ್‌ಗೂ ಕೂಡ ತೂಕವಾಗಿರುವಂತಹ ಪಾತ್ರವಿದ್ದು, ತಲೈವಾ ಮುಂದೆ ಅಬ್ಬರಿಸೋಕೆ ರಾಘವ್ ಸೂಕ್ತ ಎಂದೇನಿಸಿ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಹಾಗಾಗಿ ರಾಘವ್ ವಿಶೇಷ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

     

    ತಲೈವಾ ನಟಿಸಿದ್ದ ಚಂದ್ರಮುಖಿ ಸಿನಿಮಾದ ಮುಂದಿನ ಭಾಗ ಚಂದ್ರಮುಖಿ 2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ (Raghava Lawrence) ನಾಯಕನಾಗಿ ನಟಿಸಿದ್ದರು. ಮೊದಲ ಚಂದ್ರಮುಖಿ ಸಿನಿಮಾದಲ್ಲಿ ರಜನೀಕಾಂತ್ ನಿರ್ವಹಿಸಿದ್ದ ಪಾತ್ರವನ್ನೇ ರಾಘವ್ ನಿರ್ವಹಿಸಿದ್ದರು.  ರಜನಿಕಾಂತ್ 171ನೇ ಸಿನಿಮಾ, ಲೋಕೇಶ್ ಕನಗರಾಜ್ ಅವರ 6ನೇ ಸಿನಿಮಾ ಆಗಲಿದೆ. ರಜನೀಕಾಂತ್‌ಗೆ ನಿರ್ದೇಶಿಸಲಿರುವ ಮೊದಲ ಸಿನಿಮಾ ಇದಾಗಿದ್ದು, ರಾಘವ್ ಲಾರೆನ್ಸ್-ತಲೈವಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿದ್ದಾರೆ.

  • ರಜನಿಕಾಂತ್ ಬಯೋಪಿಕ್: ನಾನೇ ಆ ಪಾತ್ರ ಮಾಡುವೆ ಎಂದ ಧನುಷ್

    ರಜನಿಕಾಂತ್ ಬಯೋಪಿಕ್: ನಾನೇ ಆ ಪಾತ್ರ ಮಾಡುವೆ ಎಂದ ಧನುಷ್

    ಸಂಗೀತ ಮಾಂತ್ರಿಕ ಇಳಯರಾಜ ಬಯೋಪಿಕ್ ಬರುತ್ತಿರುವ ಬೆನ್ನಲ್ಲೇ ರಜನಿಕಾಂತ್ (Rajinikanth) ಬಯೋಪಿಕ್ ಕುರಿತು ಚರ್ಚೆಯಾಗುತ್ತಿದೆ. ಒಂದು ವೇಳೆ ರಜನಿ ಅವರ ಬಯೋಪಿಕ್ (Biopic) ಬಂದರೆ, ಆ ಪಾತ್ರವನ್ನು ತಾವೇ ಮಾಡುವ ಹಂಬಲವನ್ನು ವ್ಯಕ್ತ ಪಡಿಸಿದ್ದಾರೆ ನಟ ಧನುಷ್. ಮೊನ್ನೆಯಷ್ಟೇ ಸಂಗೀತ ಮಾಂತ್ರಿಕ ಇಳಯರಾಜ ಅವರ ಬಯೋಪಿಕ್‍ ಚಿತ್ರಕ್ಕೆ ಚಾಲನೆ ದೊರೆತಿದೆ. ಮೂಲ ಅದು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದರೂ, ಕನ್ನಡದಲ್ಲೂ ಈ ಚಿತ್ರವನ್ನು ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

    ಕನ್ನಡದಲ್ಲೂ (Kannada) ಇಳಯರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಸಾಕಷ್ಟು ಚಿತ್ರಗಳಿವೆ. ಕನ್ನಡದೊಂದಿಗೆ ಅವರ ಜೀವನ ಬೆಸೆದುಕೊಂಡಿದೆ. ಹಾಗಾಗಿ ಕನ್ನಡದಲ್ಲೂ ಚಿತ್ರವನ್ನು ಡಬ್ ಮಾಡುತ್ತಾರಂತೆ. ಈ ಸಿನಿಮಾದ ಕಥೆಯಲ್ಲಿ ಕನ್ನಡಿಗರು ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

    ನಿನ್ನೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಕಮಲ್ ಹಾಸನ್ (Kamal Haasan) ಮತ್ತು ಇಳಯರಾಜ ಅವರೇ ಬಿಡುಗಡೆ ಮಾಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    ಇಳಯರಾಜ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ನಟ ಧನುಷ್ (Dhanush) ಅವರು ಆ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದು ಕೂಡ ನಿಜವಾಗಿದೆ. ಧನುಷ್ ಅವರೇ ಇಳಯರಾಜ ಪಾತ್ರವನ್ನು ಮಾಡಲಿದ್ದಾರೆ. ಇಂದು ಅವರು ಕೂಡ ಸಮಾರಂಭಕ್ಕೆ ಆಗಮಿಸಿದ್ದರು.

     

    ತಮ್ಮ ತಂದೆಯ ಜೀವನವನ್ನು ಆಧರಿಸಿದ ಸಿನಿಮಾ ಮಾಡುವುದಾದರೆ, ಆ ಪಾತ್ರದಲ್ಲಿ ನಾನು ಧನುಷ್ ಅವರನ್ನು ಕಾಣಲು ಬಯಸುತ್ತೇನೆ ಎಂದು ಈ ಹಿಂದೆಯೇ ಇಳಯರಾಜ (Ilayaraja) ಅವರ ಪುತ್ರ ಯುವನ್ ಶಂಕರ್ ರಾಜ್ ಹೇಳಿದ್ದರು. ತಮ್ಮ ತಂದೆಯನ್ನು ಧನುಷ್ ಅವರಲ್ಲಿ ಕಾಣಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದರು. ಅದು ಈಗ ನಿಜವಾಗಿದೆ.

  • ಕಮಲ್ ಹಾಸನ್, ರಜನಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ

    ಕಮಲ್ ಹಾಸನ್, ರಜನಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ

    ಮೇಕೆದಾಟು (Mekedatu) ಯೋಜನೆ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಮತ್ತೆ ಕಲಾವಿದರನ್ನು ಎಳೆತಂದಿದ್ದಾರೆ. ಮೇಕೆದಾಟು ಪರವಾಗಿ ನಡೆದ ಹೋರಾಟದಲ್ಲಿ ಮಾತನಾಡಿರುವ ವಾಟಾಳ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಕೆದಾಟು ಯೋಜನೆ ವಿರೋಧಿಸಿ ಮಾತನಾಡಿದ್ದಾರೆ. ಪ್ರಣಾಳಿಕೆಯಲ್ಲಿ ಯೋಜನೆಗೆ ಅಡೆತಡೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ವಿರೋಧಿಸುತ್ತೇನೆ ಎಂದಿದ್ದಾರೆ ವಾಟಾಳ್.

    ಈ ಕುರಿತಂತೆ ಕನ್ನಡದ ನಟರೂ ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ ಸ್ಟಾಲಿನ್ ಅವರನ್ನು ರಜನಿಕಾಂತ್ (Rajinikanth), ಕಮಲ್ ಹಾಸನ್ (Kamal Haasan) ಭೇಟಿ ಮಾಡಿ ಮೇಕೆದಾಟು ಯೋಜನೆಗೆ ತಡೆ ನೀಡಬಾರದು ಎಂದು ಮನವಿ ಮಾಡುವಂತೆ ಕೇಳಿದ್ದಾರೆ. ಹಾಗೆ ಮಾಡದೇ ಹೋದರೆ, ಇಬ್ಬರೂ ಕರ್ನಾಟಕಕ್ಕೆ ಬರಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

     

    ಕನ್ನಡಪರ ಹೋರಾಟಗಳ ವಿಚಾರದಲ್ಲಿ ಹೆಚ್ಚೆಚ್ಚು ರಜನಿಕಾಂತ್ ಅವರನ್ನು ಎಳೆತರಲಾಗುತ್ತದೆ. ಈ ಬಾರಿ ಕಮಲ್ ಹಾಸನ್ ಜೊತೆಯಾಗಿದ್ದಾರೆ. ಈ ಹಿಂದೆಯೇ ಕನ್ನಡದ ವಿಚಾರದಲ್ಲಿ ರಜನಿಕಾಂತ್ ಅವರ ಚಿತ್ರಗಳನ್ನು ತಡೆಹಿಡಿಯಲಾಗಿದೆ. ಹಾಗಾಗಿ ರಜನಿ ಈ ಹೋರಾಟದಲ್ಲಿ ಪ್ರಮುಖವಾಗಿ ಕಂಡಿದ್ದಾರೆ.

  • ಪೊಲಿಟಿಕಲ್ ಪ್ರಶ್ನೆಗೆ ಉತ್ತರಿಸದ ರಜನಿಕಾಂತ್

    ಪೊಲಿಟಿಕಲ್ ಪ್ರಶ್ನೆಗೆ ಉತ್ತರಿಸದ ರಜನಿಕಾಂತ್

    ಜನಿಕಾಂತ್ ರಾಜಕಾರಣಕ್ಕೆ ಬರಲು ಆಸಕ್ತಿ ತೋರಿದ್ದಾರೆ ಎಂದು ಹಲವು ವರ್ಷಗಳಿಂದ ಸುದ್ದಿ ಬರುತ್ತಲೇ ಇದೆ. ಆದರೂ, ರಜನಿ ಈವರೆಗೂ ಆ ಕುರಿತಂತೆ ನಿಲುವು ತಗೆದುಕೊಂಡಿಲ್ಲ. ಆದರೆ, ಇತ್ತೀಚೆಗಷ್ಟೇ ತಮಿಳು ಸಿನಿಮಾ ರಂಗದಿಂದ ನಟರು ರಾಜಕಾರಣಕ್ಕೆ ಬರುವ ವಿಷಯ ಭಾರೀ ಸದ್ದು ಮಾಡುತ್ತಿದೆ. ಈ ಕುರಿತಂತೆ ರಜನಿಕಾಂತ್ ಗೆ ಪ್ರಶ್ನೆ ಮಾಡಿದ್ದಾರೆ ಮಾಧ್ಯಮವರು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದೇ ಕಾರು ಏರಿದ್ದಾರೆ ತಲೈವ. ರಾಜಕೀಯ ಪ್ರಶ್ನೆ ಕೇಳಬೇಡಿ ಎಂದು ಮನವಿ ಮಾಡಿದ್ದಾರೆ.

    ನಟ ದಳಪತಿ ವಿಜಯ್ ರಾಜಕಾರಣಕ್ಕೆ ಅಧಿಕೃತವಾಗಿ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಸಹಜವಾಗಿಯೇ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ಅವರಿಗೆ ಹೆಸರಾಂತ ನಟ ರಜನಿಕಾಂತ್ (Rajinikanth) ಅಭಿನಂದನೆ ಸಲ್ಲಿಸಿದ್ದಾರೆ. ರಾಜಕಾರಣಕ್ಕೆ ಶುಭಾಶಯ ತಿಳಿಸಿದ್ದಾರೆ.

    ವಿಜಯ್ ದಳಪತಿ (Vijay Thalapathy) ಅವರು ಸಾಕಷ್ಟು ಸಮಯದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ‘ತಮಿಳಿಗ ವೆಟ್ರಿ ಕಳಗಂ’ (TVK) ಎಂಬ ಪಕ್ಷ ಸ್ಥಾಪಿಸಿ ವಿಜಯ್ ರಾಜಕೀಯ (Politics) ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಈ ಹಿಂದೆ ಅವರು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

    ನೀವು ನಿಜ ಜೀವನದಲ್ಲಿ ಮುಖ್ಯಮಂತ್ರಿಯಾದರೆ ಏನಾಗುತ್ತದೆ ಎಂದು ಕೇಳಲಾಗಿತ್ತು. ಈ ಪ್ರಶ್ನೆ ವಿಜಯ್, ಸಿಎಂ ಆದರೆ ʻನಾನು ಎಂದಿಗೂ ನಟಿಸುವುದಿಲ್ಲ’ ಎಂದು ಉತ್ತರಿಸಿದ್ದರು. ರಾಜಕೀಯಕ್ಕೆ ವಿಜಯ್ ಎಂಟ್ರಿ ಕೊಟ್ಟಿರೋ ಬೆನ್ನಲ್ಲೇ ಸಿಎಂ ಸ್ಥಾನದ ಕುರಿತು ನೀಡಿದ್ದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

     

    ಸದ್ಯ ‘ತಮಿಳಿಗ ವೆಟ್ರಿ ಕಳಗಂ’ ಪಕ್ಷ ವಿಜಯ್ ಸ್ಥಾಪಿಸಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರ ಮುಂದಿನ ನಡೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಕಳೆದ ನವೆಂಬರ್‌ನಲ್ಲಿ ತ್ರಿಷಾ ಜೊತೆಗಿನ ವಿಜಯ್ ದಳಪತಿ ಸಿನಿಮಾ ರಿಲೀಸ್ ಆದ್ಮೇಲೆ ಹೊಸ ಚಿತ್ರಗಳನ್ನು ವಿಜಯ್ ಒಪ್ಪಿಕೊಂಡಿದ್ದಾರೆ. ವಿಜಯ್ ಹೊಸ ಪಕ್ಷದ ಕೆಲಸದ ಜೊತೆಗೆ ಸಿನಿಮಾ ಮಾಡುವ ಹುಮ್ಮಸಿನಲ್ಲಿದ್ದಾರೆ.

  • ರಜನಿ ನಟನೆಯ ‘ಲಾಲ್‍ ಸಲಾಂ’ಗೆ ಮಿಶ್ರ ಪ್ರತಿಕ್ರಿಯೆ

    ರಜನಿ ನಟನೆಯ ‘ಲಾಲ್‍ ಸಲಾಂ’ಗೆ ಮಿಶ್ರ ಪ್ರತಿಕ್ರಿಯೆ

    ಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾದಲ್ಲಿ ರಜನಿ ಸಖತ್ ಸ್ಟೈಲೀಶ್ ಆಗಿ ಕಂಡಿದ್ದಾರೆ. ಖಡಕ್ ಡೈಲಾಗ್ ಹೊಡೆದಿದ್ದಾರೆ. ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ, ಅಂದುಕೊಂಡಷ್ಟು ಚಿತ್ರಕ್ಕೆ ಮೊದಲ ದಿನ ಪ್ರತಿಕ್ರಿಯೆ ನೀಡಿಲ್ಲ.  ಮೊದಲ ದಿನ ಗಳಿಕೆ (Box Office) ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿದೆ.

    ಜೈಲರ್’ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಲಾಂ’ (Lal Salaam) ರಿಲೀಸ್ ಆಗುತ್ತಿರುವುದಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಿರ್ದೇಶಿಸಿದ್ದಾರೆ. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಘ್ನೇಶ್, ಲಿವಿಂಗ್ಸ್ಟನ್, ಸೆಂಥಿಲ್, ಜೀವಿತಾ, ಕೆ.ಎಸ್. ರವಿಕುಮಾರ್ ಮತ್ತು ತಂಬಿ ರಾಮಯ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

    ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಗೆ ಮಾಂತ್ರಿಕ ಎ. ಆರ್. ರೆಹಮಾನ್  ಸಂಗೀತ ಸಂಯೋಜನೆ, ವಿಷ್ಣು ರಂಗಸಾಮಿ ಛಾಯಾಗ್ರಹಣ ಮತ್ತು ಬಿ. ಪ್ರವೀಣ್ ಭಾಸ್ಕರ್ ಸಂಕಲನ ಒಳಗೊಂಡಿದೆ.

     

    ಲಾಲ್‌ ಸಲಾಂ ಚಿತ್ರವನ್ನು ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್‌ ನಿರ್ಮಿಸಿದ್ದು, ತಮಿಳುನಾಡಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಹಕ್ಕನ್ನು ರೆಡ್ ಜೈಂಟ್ ಸಂಸ್ಥೆ ಪಡೆದುಕೊಂಡಿದೆ. ಕನ್ನಡ, ತೆಲುಗು, ಹಿಂದಿ ಜತೆಗೆ ಮಲಯಾಳಂನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಿದೆ. ಅಂದಹಾಗೇ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಇದು 3ನೇ ಸಿನಿಮಾ.