Tag: rajinikanth

  • ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ: ಡಿಸ್ಚಾರ್ಜ್‌ ಬಳಿಕ ಸೂಪರ್‌ಸ್ಟಾರ್‌ ಮೊದಲ ಪೋಸ್ಟ್‌

    ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ: ಡಿಸ್ಚಾರ್ಜ್‌ ಬಳಿಕ ಸೂಪರ್‌ಸ್ಟಾರ್‌ ಮೊದಲ ಪೋಸ್ಟ್‌

    ನೆಚ್ಚಿನ ನಟ ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳು ಮತ್ತು ಆತ್ಮೀಯರಿಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ (RajiniKanth) ಕೃತಜ್ಞತೆ ಸಲ್ಲಿಸಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ನಾನು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ನನ್ನ ಎಲ್ಲಾ ರಾಜಕೀಯ ಮಿತ್ರರಿಗೆ, ನನ್ನ ಎಲ್ಲಾ ಚಿತ್ರರಂಗದ ಗೆಳೆಯರಿಗೆ, ನನ್ನ ಎಲ್ಲಾ ಹಿತೈಷಿಗಳಿಗೆ, ಪತ್ರಿಕಾ ಮತ್ತು ಮಾಧ್ಯಮದವರಿಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನನ್ನು ಪ್ರೀತಿಸುವ, ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ವೃತ್ತ’ ಸಿನಿಮಾಗೆ ಪ್ರಸೆಂಟ್ ಮಾಡಲು ಬಂದ ನೀನಾಸಂ ಸತೀಶ್

    ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ, ಪ್ರೀತಿಯ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಹೃತ್ಪೂರ್ವಕ ಧನ್ಯವಾದಗಳು. ಅಮಿತಾಬ್‌ ಬಚ್ಚನ್‌ ಅವರ ಪ್ರೀತಿ, ಕಾಳಜಿಗೆ ನನ್ನ ಹೃದಯ ಸ್ಪರ್ಶಿಸಿದೆ ಎಂದು ತಲೈವಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

    ಅನಾರೋಗ್ಯದ ಕಾರಣ ರಜನಿಕಾಂತ್ ಅವರನ್ನು ಸೆ.30 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟ್ರಾನ್ಸ್‌ಕ್ಯಾಥೆಟರ್ ವಿಧಾನವನ್ನು ಬಳಸಿ ಚಿಕಿತ್ಸೆ ನೀಡಲಾಯಿತು. ಇದನ್ನೂ ಓದಿ: ಅ.7ಕ್ಕೆ ಭೈರತಿ ರಣಗಲ್ ಚಿತ್ರದ ‘ಕಾವಲಿಗ’ ಲಿರಿಕಲ್ ಸಾಂಗ್

    ರಜನಿಕಾಂತ್ ಕೊನೆಯದಾಗಿ ಕಾಣಿಸಿಕೊಂಡಿದ್ದು ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್‌ ನಿರ್ದೇಶಿಸಿದ್ದ ಲಾಲ್ ಸಲಾಮ್ ಸಿನಿಮಾದಲ್ಲಿ. ಇದರಲ್ಲಿ ತಲೈವಾ ಅತಿಥಿ ಪಾತ್ರ ಮಾಡಿದ್ದರು. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ದರು.

    ರಜನಿಕಾಂತ್ ಮುಂದಿನ ಬಹುನಿರೀಕ್ಷಿತ ಚಿತ್ರ ‘ಕೂಲಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‌ನಲ್ಲಿ ರಜನಿಕಾಂತ್ ಆಕ್ಷನ್-ಆಧಾರಿತ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಬೆಂಬಲ ನೀಡಿದೆ. ಇದನ್ನೂ ಓದಿ: ದೀಪಿಕಾ ದಾಸ್ ನಟನೆಯ ‘ಪಾರು ಪಾರ್ವತಿ’ ಸಾಂಗ್ ರಿಲೀಸ್

  • ಅಮಿತಾಭ್ ಬಚ್ಚನ್ ಪಾತ್ರ ಪರಿಚಯಿಸಿದ ವೆಟ್ಟೈಯನ್: ಸತ್ಯದೇವ ಆದ ಬಿಗ್ ಬಿ

    ಅಮಿತಾಭ್ ಬಚ್ಚನ್ ಪಾತ್ರ ಪರಿಚಯಿಸಿದ ವೆಟ್ಟೈಯನ್: ಸತ್ಯದೇವ ಆದ ಬಿಗ್ ಬಿ

    ಭಾರತೀಯ ಸಿನಿಮಾ ರಂಗದ ದಿಗ್ಗಜರುಗಳಾದ ರಜನಿ ಮತ್ತು ಅಮಿತಾಭ್ ಬಚ್ಚನ್ (Amitabh Bachchan) ವೆಟ್ಟೈಯನ್‍ (Vettaiyan)ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಹಲವು ವರ್ಷಗಳ ನಂತರ ಈ ಜೋಡಿ ಕಾಣಿಸಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಜೊತೆಗೆ ಅಮಿತಾಭ್ ಇಲ್ಲಿ ಯಾವ ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಕೂಡ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಈ ಸಿನಿಮಾದಲ್ಲಿ ಅಮಿತಾಭ್‍ ಅವರು ಸತ್ಯದೇವ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಸಣ್ಣ ತುಣುಕೊಂದನ್ನು ನಿರ್ಮಾಣ ಸಂಸ್ಥೆ ರಿಲೀಸ್ ಮಾಡಿದೆ. ಪಾತ್ರದ ಪರಿಚಯವನ್ನೂ ಈ ಮೂಲಕ ನಿರ್ಮಾಪಕರು ಮಾಡಿದ್ದಾರೆ. ರಜನಿ ಜೊತೆ ಆತ್ಮೀಯವಾಗಿರೋ ದೃಶ್ಯ ಕೂಡ ಅದರಲ್ಲಿದೆ.

    ರಜನಿಕಾಂತ್ (Rajanikanth) ನಟನೆಯ ‘ಲಾಲ್ ಸಲಾಂ’ (Lal Salaam) ಸಿನಿಮಾ ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಆದರೂ, ಅಂದುಕೊಂಡಷ್ಟು ಚಿತ್ರಕ್ಕೆ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗಲಿಲ್ಲ. ಮೊದಲ ದಿನ ಗಳಿಕೆ ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿತ್ತು. ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ತಲೈವ ಘೋಷಿಸಿದ್ದರು. ಅದೇ ವೆಟ್ಟೈಯನ್.

    ‘ವೆಟ್ಟೈಯನ್’ ಲಾಲ್ ಸಲಾಂ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯೇ ಬಂಡವಾಳ ಹೂಡುತ್ತಿದೆ. ಈ ಸಿನಿಮಾಗೆ ಶೇಕಡ 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಇನ್ನುಳಿದ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ರಜನಿಕಾಂತ್ ಮಾಹಿತಿ ನೀಡಿದ್ದರು.

     

    ‌’ವೆಟ್ಟೈಯನ್’ ತಲೈವ ಅವರು ನಟಿಸುತ್ತಿರುವ 170ನೇ ಸಿನಿಮಾ. ಟೈಟಲ್ ಟೀಸರ್ ನೋಡಿದ ಎಲ್ಲರೂ ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಗೆ ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

  • ರಜನಿ ನಟನೆಯ ‘ಕೂಲಿ’ ಚಿತ್ರದ ದೃಶ್ಯ ಲೀಕ್ : ಗರಂ ಆದ ಡೈರೆಕ್ಟರ್

    ರಜನಿ ನಟನೆಯ ‘ಕೂಲಿ’ ಚಿತ್ರದ ದೃಶ್ಯ ಲೀಕ್ : ಗರಂ ಆದ ಡೈರೆಕ್ಟರ್

    ಜನಿಕಾಂತ್‍ ಮತ್ತು ಉಪೇಂದ್ರ ಕಾಂಬಿನೇಷನ್ ನ ಕೂಲಿ ಸಿನಿಮಾದ ಶೂಟಿಂಗ್‍ ನೆಡೀತಾ ಇದೆ. ಈ ನಡುವೆ ಶಾಕ್ ನೀಡುವಂತಹ ಸುದ್ದಿ ಹೊರ ಬಿದ್ದಿದೆ. ಚಿತ್ರದ ಪ್ರಮುಖ ದೃಶ್ಯವನ್ನೇ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಈ ನಡೆಗೆ ನಿರ್ದೇಶಕ ಲೋಕೇಶ್ ಕನಗರಾಜು (Lokesh Kanagaraju) ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ತಂಡದ ಶ್ರಮ ಮತ್ತು ಹಣವನ್ನು ಹೀಗೆ ಹಾಳು ಮಾಡಬೇಡಿ ಎಂದಿದ್ದಾರೆ.

    ಕೂಲಿ ಸ್ಪೆಷಲ್ ಏನು?

    ಹುನಿರೀಕ್ಷಿತಕೂಲಿ‘ (Coolie) ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಹೈಪ್ ಕ್ರಿಯೆಟ್ ಮಾಡ್ತಿದೆ. ರಜನಿಕಾಂತ್ (Rajanikanth) ಜೊತೆ ಉಪೇಂದ್ರ ನಟಿಸುವ ಬಗ್ಗೆ ಅಫಿಷಿಯಲ್ ಅನೌನ್ಸ್ಮೆಂಟ್ಸಿಕ್ಕ ಬೆನ್ನಲ್ಲೇ ಈಗ ಮತ್ತೊಂದು ಕ್ರೆಜಿ ಅಪ್ಡೇಟ್ ಹೊರಬಿದ್ದಿದೆ. 30 ವರ್ಷಗಳ ನಂತರ ತಲೈವಾ ಮತ್ತು ಆಮೀರ್ ಖಾನ್ (Aamir Khan) ಕೂಲಿ ಚಿತ್ರಕ್ಕಾಗಿ ಒಂದಾಗ್ತಿದ್ದಾರೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    1995ರಲ್ಲಿಆತಂಕ್ ಹಿ ಆತಂಕ್ಎಂಬ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಆಮೀರ್ ಜೊತೆಯಾಗಿ ನಟಿಸಿದ್ದರು. ಈಗ ಹೊಸ ಪ್ರಾಜೆಕ್ಟ್ ಕೂಲಿ ಚಿತ್ರಕ್ಕಾಗಿ ತಲೈವಾ ಜೊತೆ ಬಾಲಿವುಡ್ ನಟ ಆಮೀರ್ ಖಾನ್ ಸ್ಪೆಷಲ್ ರೋಲ್ನಲ್ಲಿ ನಟಿಸ್ತಾರೆ ಎನ್ನಲಾಗಿದೆ. ಇದು ಜಸ್ಟ್ ಗಾಳಿ ಸುದ್ದಿನಾ ಅಥವಾ ರಿಯಲ್ ಸುದ್ದಿನಾ ಎಂಬುದರ ಕುರಿತು ಚಿತ್ರತಂಡವೇ ತಿಳಿಸಬೇಕಿದೆ.

    ಆದರೆ ಆಮೀರ್ ಖಾನ್ರನ್ನು ಡೈರೆಕ್ಟರ್ ಲೋಕೇಶ್ ಕನಕರಾಜ್ ಟೀಮ್ ಸಂಪರ್ಕಿಸಿದೆ ಎನ್ನಲಾಗಿದೆ. ಪಾತ್ರದ ಬಗ್ಗೆ ಕೇಳಿ ನಟ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಇನ್ನೂ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ‌ ಸುದ್ದಿ ನಿಜವಾಗಲಿ ಮತ್ತೊಮ್ಮೆ ಇಬ್ಬರೂ ಒಟ್ಟಿಗೆ ನೋಡುವ ಭಾಗ್ಯ ನಮಗೆ ಸಿಗಲಿ ಎಂದು ಫ್ಯಾನ್ಸ್ಆಶಿಸುತ್ತಿದ್ದಾರೆ.

     

    ಕೂಲಿಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ರಜನಿಕಾಂತ್ ಜೊತೆ ಶ್ರುತಿ ಹಾಸನ್ (Shruti Haasan), ಉಪೇಂದ್ರ (Upendra) ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.

  • ರಜನಿಕಾಂತ್ ಮುಂದೆ ಅಬ್ಬರಿಸಲಿದ್ದಾರೆ ಅಕ್ಕಿನೇನಿ ನಾಗಾರ್ಜುನ

    ರಜನಿಕಾಂತ್ ಮುಂದೆ ಅಬ್ಬರಿಸಲಿದ್ದಾರೆ ಅಕ್ಕಿನೇನಿ ನಾಗಾರ್ಜುನ

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಮುಂದಿನ ಚಿತ್ರ `ಕೂಲಿ’. ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ ಈ ಚಿತ್ರ ಫಸ್ಟ್ ಲುಕ್ ಟೀಸರ್‌ನಿಂದ ಭಾರೀ ಗಮನ ಸೆಳೆದಿತ್ತು. ಇದೀಗ ಚಿತ್ರೀಕರಣದ ಆರಂಭವಾಗಿದ್ದು ತಾರಾಗಣದ ಒಂದೊಂದೇ ಸುದ್ದಿಯನ್ನ ಟೀಮ್ ಅಧಿಕೃತವಾಗಿ ರಿಲೀಸ್ ಮಾಡುತ್ತಿದೆ. ಇದೀಗ `ಕೂಲಿ’ ತಂಡಕ್ಕೆ ಹೊಸ ಸ್ಟಾರ್ ನಟನ ಎಂಟ್ರಿಯಾಗಿದೆ. ಆ ಸ್ಟಾರ್ ನಟರೇ ಅಕ್ಕಿನೇನಿ ನಾಗಾರ್ಜುನ.

    `ಕೂಲಿ’ (Cooley) ಸಿನಿಮಾ ಮಲ್ಟಿಸ್ಟಾರರ್ ಆಗುತ್ತಿದೆ. ಸಾಮಾನ್ಯವಾಗಿ ಲೋಕೇಶ್ ಕನಕರಾಜ್ ಮಲ್ಟಿಸ್ಟಾರ್ ಸೇರಿಸಿ ಎಲ್ಲಾ ಪಾತ್ರಕ್ಕೂ ನ್ಯಾಯ ಕೊಡುವ ಕೆಲಸ ಅಚ್ಚುಕಟ್ಟಾಗಿ ಮಾಡ್ತಾರೆ. ಅದೇ ನಂಬಿಕೆಯಲ್ಲೇ ಬಹುಶಃ `ಕೂಲಿ’ ಚಿತ್ರಕ್ಕೆ ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಒಪ್ಪಿಕೊಂಡಿರುವ ಸಾಧ್ಯತೆ ಇದೆ. ಖುದ್ದು ನಾಗಾರ್ಜುನ (Nagarjuna) ಈ ವಿಷಯವನ್ನ ಅಧಿಕೃತವಾಗಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಘೋಸಿಷಿಸಿಕೊಂಡಿದ್ದಾರೆ.

    ನಾಗಾರ್ಜುನ ಎಂಟ್ರಿಗೂ ಮುನ್ನವೇ ಕೂಲಿ ಜೊತೆಗೆ ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ಕೂಡ ಕೈ ಜೋಡಿಸಿದ್ದರು. ರಜನಿಕಾಂತ್ ಜೊತೆ ನಟಿಸೋದನ್ನ ಕನ್ಫರ್ಮ್ ಮಾಡಿದ್ದರು ಉಪ್ಪಿ. ಇದೀಗ ನಾಗಾರ್ಜುನ ಪಾತ್ರದ ಫಸ್ಟ್ ಲುಕ್ ಫೋಟೋ ಕೂಡ ರಿಲೀಸ್ ಆಗಿದ್ದು ಸಿಮೊನ್ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸ್ಕೊಳ್ಳಲಿದ್ದಾರೆ. ಬಂಗಾರದ ವಾಚ್ ಧರಿಸಿ ಪೋಸ್ ಕೊಟ್ಟಿದ್ದಾರೆ ನಾಗಾರ್ಜುನ. ಇನ್ನು ಮಲಯಾಳಂನಿಂದ ಸೌಬಿನ್ ಶಾಹಿರ್ ಕೂಡ `ಕೂಲಿ’ ಚಿತ್ರದಲ್ಲಿದ್ದಾರೆ. ಅಲ್ಲಿಗೆ ಎಲ್ಲಾ ಇಂಡಸ್ಟ್ರಿಯಿಂದಲೂ ಒಬ್ಬೊಬ್ಬ ಸ್ಟಾರ್‌ಗಳನ್ನ ತಂದಿದ್ದಾರೆ ಲೋಕೇಶ್ ಕನಕರಾಜ್. ಚಿತ್ರಕ್ಕೆ ನಾಯಕಿಯಾಗಿ ಶ್ರುತಿ ಹಾಸನ್ ಇತ್ತೀಚೆಗಷ್ಟೇ ಟೀಮ್ ಸೇರಿಕೊಂಡಿದ್ದಾರೆ.

     

    `ಕೂಲಿ’ ಸಿನಿಮಾದಲ್ಲಿ ಉಪೇಂದ್ರ ಕಾಳೀಶ ಹೆಸರಿನ ಪಾತ್ರದಲ್ಲಿ ಕಾಣಿಸ್ಕೊಳ್ಳಲಿದ್ದಾರೆ. ಈ ಹಿಂದೆ ಉಪ್ಪಿಯ ಕ್ಯಾರೆಕ್ಟರ್ ರಿವೀಲ್ ಮಾಡಿತ್ತು ಕೂಲಿ ಟೀಮ್. ಇನ್ನು ಉಪೇಂದ್ರ ಅಕ್ಟೋಬರ್ ಕೊನೆಯಲ್ಲಿ ತಂಡ ಜೊತೆ ಸೇರಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ `ಯುಐ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇರುವ ಉಪ್ಪಿಗೆ ಕೂಲಿ ಟೀಮ್ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ಒಟ್ನಲ್ಲಿ ಕೂಲಿ ಟೀಮ್ ಬೃಹತ್ತಾಗಿದೆ. ಅಭಿಮಾನಿಗಳ ನಿರೀಕ್ಷೆಯೂ ದುಪ್ಪಟ್ಟಾಗುತ್ತಿದೆ.

  • ಕ್ಷಮಿಸಿ, ಹೇಮಾ ಸಮಿತಿ ವರದಿ ಬಗ್ಗೆ ನನಗೆ ಗೊತ್ತೇ ಇಲ್ಲ – ತಲೈವಾ ರಿಯಾಕ್ಷನ್‌

    ಕ್ಷಮಿಸಿ, ಹೇಮಾ ಸಮಿತಿ ವರದಿ ಬಗ್ಗೆ ನನಗೆ ಗೊತ್ತೇ ಇಲ್ಲ – ತಲೈವಾ ರಿಯಾಕ್ಷನ್‌

    ಚೆನ್ನೈ: ಮಲಯಾಳಂ ಸಿನಿ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿರೋ ಹೇಮಾ ವರದಿ (Hema Committee report), ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ (Sexual Assault) ಕುರಿತಂತೆ ಬಹಿರಂಗವಾಗಿ ನಟಿಯರು ಮಾತಾಡುತ್ತಿದ್ದಾರೆ. ಜೊತೆಗೆ ದೂರುಗಳು ದಾಖಲಾಗುತ್ತಿವೆ.

    ಈ ನಡುವೆ ನಟ ರಜನಿಕಾಂತ್ (Rajinikanth) ಸಹ ಪ್ರತಿಕ್ರಿಯೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ಜಸ್ಟೀಸ್‌ ಹೇಮಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ನನಗೆ ಗೊತ್ತಿಲ್ಲ. ತಮಿಳುನಾಡಿನಲ್ಲಿ ಅಂತಹ ಸಮಿತಿ ರಚಿಸಬೇಕೆಂಬ ಬೇಡಿಕೆಯ ಬಗ್ಗೆಯೂ ನನಗೆ ಮಾಹಿತಿ ಇಲ್ಲ, ಕ್ಷಮಿಸಿ ಎಂದು ನಟ ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ಗಾಗಿ ಬಟ್ಟೆ, ಡ್ರೈಪ್ರೂಟ್ಸ್ ತಂದ ವಿಜಯಲಕ್ಷ್ಮಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ದರ್ಶನ್‌ಗೆ ಅಭಯ

    ಮಲಯಾಳ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ತಾರತಮ್ಯ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ವರದಿ ಬಹಿರಂಗಗೊಂಡ ಬೆನ್ನಲ್ಲೇ ಕಲಾವಿದರ ಸಂಘಕ್ಕೆ ಅಧ್ಯಕ್ಷ ನಟ ಮೋಹನ್‌ಲಾಲ್, ಇತರ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್‌

    ಕಳೆದ ಒಂದು ದಿನದ ಹಿಂದೆಯಷ್ಟೇ ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ (Mohanlal) ಮೌನ ಮುರಿದು ಮಾತನಾಡಿದ್ದರು. ಮಲಯಾಳಂ ಚಿತ್ರರಂಗದ ಯಾವುದೇ ಪವರ್‌ ಗ್ರೂಪ್‌ನಲ್ಲಿ (ಶಕ್ತಿ ಬಣ) ನಾನು ಗುರುತಿಸಿಕೊಂಡಿಲ್ಲ. ಅಂತಹ ಬಣಗಳ ಅಸ್ತಿತ್ವದ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಅಂತ. ಹೇಮಾ ಸಮಿತಿ ವರದಿ ಬಿಡುಗಡೆ ಮಾಡಿರುವುದು ಸರ್ಕಾರ ಉತ್ತಮ ನಿರ್ಧಾರವಾಗಿದೆ ಅಂತ ಹೇಳಿದ್ದರು. ಇದನ್ನೂ ಓದಿ: ಕೇರಳ ಚಿತ್ರರಂಗ ಆಯ್ತು, ಟಾಲಿವುಡ್‌ನಲ್ಲೂ ಕಂಪನ; ʻದಿ ವಾಯ್ಸ್ ಆಫ್ ವುಮನ್ʼ ವರದಿ ಬಹಿರಂಗಕ್ಕೆ ಸಮಂತಾ ಒತ್ತಾಯ!

    ಅಲ್ಲದೇ ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಗೆ, ವರದಿ ಬಿಡುಗಡೆಯಾದ ಬೆನ್ನಲ್ಲೇ ಕಲಾವಿದರ ಸಂಘದ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಯಿತು. ಸಂಘದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಾಕ್ಷಿಗಳಿದ್ದರೆ ಶಿಕ್ಷಿಸಲಿ ಎಂದು ಸಹ ಆಗ್ರಹಿಸಿದ್ದರು.

  • ರಜನಿಯಿಂದಾಗಿ ಹೊಸಬರಿಗೆ ಅವಕಾಶ ಸಿಗ್ತಿಲ್ಲ: ದೊರೈ ಸಿಡಿಸಿದ ಬಾಂಬ್

    ರಜನಿಯಿಂದಾಗಿ ಹೊಸಬರಿಗೆ ಅವಕಾಶ ಸಿಗ್ತಿಲ್ಲ: ದೊರೈ ಸಿಡಿಸಿದ ಬಾಂಬ್

    ರಾಜಕಾರಣಿಗಳನ್ನು ಆಗಾಗ್ಗೆ ಟೀಕಿಸಿ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಈ ಬಾರಿ ಡಿಎಂಕೆ ಮುಖಂಡ ದೊರೆಐ ಮುರುಗನ್ (Dorai Murugan) ಅವರ ಬಗ್ಗೆ ಮಾತನಾಡಿ, ವಿವಾದವನ್ನು (Controversy) ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ದೊರೆ ಜೊತೆಗಿನ ಸ್ನೇಹದ ಬಗ್ಗೆಯೂ ಮಾತಾಡಿ ತಿಪ್ಪೆ ಸಾರಿಸುವಂಥ ಕೆಲಸ ಮಾಡಿದ್ದಾರೆ.

    ಪುಸ್ತಕ ಬಿಡುಗಡೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್, ಅದೇ ವೇದಿಕೆಯ ಮೇಲಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಹೊಗಳಿದ್ದರು. ತಂದೆ ಕರುಣಾನಿಧಿ ನಿಧನದ ನಂತರ ಪಕ್ಷವನ್ನು ಅದ್ಭುತವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ತಮಿಳುನಾಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೆಲವರನ್ನು ನಿಭಾಯಿಸೋದರಲ್ಲಿ ಹೈರಾಣಾಗಿದ್ದಾರೆ ಎಂದು  ಮಾತನಾಡುತ್ತಾ ದೊರೈ ಮುರುಗನ್‍ ಅವರನ್ನ ಎಳೆತಂದಿದ್ದಾರೆ ರಜನಿ.

    ಕರುಣಾನಿಧಿ ಅವರ ಕಣ್ಣಲ್ಲೇ ಬೆರಳಾಡಿಸಿದೋರು ದೊರೈ ಮುರುಗನ್. ಇಂಥವರು ಡಿಎಂಕೆ ಪಕ್ಷದಲ್ಲಿದ್ದಾರೆ. ಹಿರಿಯರಾಗಿದ್ದಾರೆ. ಅವರನ್ನು ನಿಭಾಯಿಸೋದು ಕಷ್ಟ. ಹಿರಿಯರ ಕಾರಣದಿಂದಾಗಿ ಹೊಸಬರು ರಾಜಕಾರಣಕ್ಕೆ ಬರೋಕೆ ಆಗುತ್ತಿಲ್ಲ ಎಂದು ದೊರೈಯನ್ನು ಟೀಕಿಸಿದ್ದಾರೆ. ರಜನಿಯ ಈ ಮಾತಿಗೆ ದೊರೈ ಮುರುಗನ್ ಕೂಡ ಎದುರೇಟು ಕೊಟ್ಟಿದ್ದಾರೆ.

    ರಜನಿಕಾಂತ್ ಗೆ ಹಲ್ಲು ಉದುರಿವೆ. ತಲೆ ಬೆಳ್ಳಗಾಗಿದೆ. ವಯಸ್ಸೂ ಆಗಿದೆ. ಆದರೂ, ಇನ್ನೂ ನಟಿಸ್ತಾ ಇದ್ದಾರೆ. ಇವರು ನಟಿಸೋದನ್ನ ನಿಲ್ಲಿಸಿದರೆ ಹೊಸಬರಿಗೆ ಅವಕಾಶ ಸಿಗಲಿದೆ. ಇವರಿಂದಾಗಿ ಹೊಸ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ. ದೊರೈ ಮಾತಿಗೆ ರಜನಿ ಪ್ರತ್ಯುತ್ತರ ನೀಡಿ ದೊರೈ ನನ್ನ ಬಹುಕಾಲದ ಸ್ನೇಹಿತರು. ಅವರು ಏನೇ ಅಂದರೂ, ನನಗೆ ಬೇಸರವಾಗಲ್ಲ ಅಂದಿದ್ದಾರೆ.

  • ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್

    ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್

    ಕಾಲಿವುಡ್ ಗಲ್ಲಿಯಿಂದ ಕುತೂಹಲದ ಸುದ್ದಿಯೊಂದು ತೂರಿಬಂದಿತ್ತು. ರಜನಿಕಾಂತ್ ಮುಂದಿನ `ಕೂಲಿ’  (Coolie) ಸಿನಿಮಾದಲ್ಲಿ ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ನಟಿಸುತ್ತಾರೆ ಎನ್ನುವುದೇ ಆ ಸುದ್ದಿಯ ಆಳವಾಗಿತ್ತು. ಇದೀಗ ಈ ವಿಚಾರವನ್ನ ಕನ್ಫರ್ಮ್ ಮಾಡಿದ್ದಾರೆ ಉಪೇಂದ್ರ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುವುದು ಸಹಜ, ರಜನಿಕಾಂತ್ (Rajinikanth)  ಜೊತೆ ನಟಿಸುವ ಅವಕಾಶವನ್ನ ಉಪೇಂದ್ರ ಮಿಸ್ ಮಾಡಿಕೊಳ್ಳದಿರಲು ಸಿದ್ಧವಿಲ್ವಂತೆ. ಕಾರಣ ಇದೇ ಅಕ್ಟೋಬರ್‌ನಲ್ಲಿ ಶುರುವಾಗುವ `ಕೂಲಿ’ ಎರಡನೇ ಶೆಡ್ಯೂಲ್ ಚಿತ್ರೀಕರಣದಲ್ಲಿ ಉಪೇಂದ್ರ (Upendra)  ಎಂಟ್ರಿಯಾಗಲಿದ್ದಾರೆ.

    ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ರಜನಿಕಾಂತ್‌ಗೆ ನಿರ್ದೇಶಿಸುತ್ತಿರುವ ದೊಡ್ಡ ಪ್ರಾಜೆಕ್ಟ್ ಕೂಲಿ.  ಲೋಕೇಶ್ ಸಿನಿಮಾ ಅಂದ್ರೆ ಇಡೀ ಭಾರತದಾದ್ಯಂತ ಕ್ರೇಜ಼್ ಹೆಚ್ಚು. ಇಂತಹ ಕ್ರೇಜೀ಼ ನಿರ್ದೇಶಕನ ಜೊತೆ ಕ್ರೇಜ಼್ ಕಾ ಬಾಪ್ ರಜನಿಕಾಂತ್ ಕೈ ಜೋಡಿಸಿಬಿಟ್ಟರೆ ಅದೆಂತಹ ರೋಚಕ ಪ್ರಾಜೆಕ್ಟ್ ಆಗಿರಬೇಡ. ಅದುವೇ ಈ `ಕೂಲಿ’ ಸಿನಿಮಾ. ಈ ಬಿಗ್ ಪ್ರಾಜೆಕ್ಟ್ನಲ್ಲಿ ಉಪೇಂದ್ರ ಬಹುಮುಖ್ಯ ಪಾತ್ರ ಮಾಡಲಿದ್ದಾರೆ.

    ಕಾಂಬಿನೇಶನ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟಿಸಿರುವ `ಕೂಲಿ’. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ ಅತಿಥಿ ಪಾತ್ರವಲ್ಲ ಬದಲಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಕಾಲಿವುಡ್ ಮೂಲೆಯಿಂದ ಉಪ್ಪಿ ನಟಿಸುತ್ತಿರುವ ಸುದ್ದಿಯೇನೋ ಬಂದಿತ್ತು. ಆದರೆ ಇದುವರೆಗೂ ಈ ವಿಚಾರವನ್ನ ಉಪೇಂದ್ರ ಒಪ್ಪಿಕೊಂಡಿರಲಿಲ್ಲ. ಇದೀಗ ಖಾಸಗಿ ಪತ್ರಿಕೆಯೊಂದಕ್ಕೆ ಉಪೇಂದ್ರ ದೂರವಾಣಿ ಸಂದರ್ಶನದಲ್ಲಿ ತಾವು ನಟಿಸುತ್ತಿರುವ ಸುದ್ದಿ ಕನ್ಫರ್ಮ್ ಮಾಡಿದ್ದಾರೆ. ಅಲ್ಲಿಗೆ ಸೂಪರ್‌ಸ್ಟಾರ್‌ಗಳ ಮುಖಾಮುಖಿ ಒಂದೇ ಚಿತ್ರದಲ್ಲಾಗುತ್ತೆ.

     

    ಹಿಂದೆ ರಜನಿಯ `ಜೈಲರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿ ಭಾರೀ ಗಮನ ಸೆಳೆದಿದ್ದರು. ಅದೇ ರೀತಿ ಇನ್ನೋರ್ವ ಕನ್ನಡದ ಸ್ಟಾರ್ ಮೇಲೆ ರಜನಿಕಾಂತ್ ದೃಷ್ಟಿ ಬಿದ್ದಿದೆ. ಉಪೇಂದ್ರ ಕೂಡ ಈಗಾಗ್ಲೇ ಕಾಲಿವುಡ್-ಟಾಲಿವುಡ್‌ಗಳಲ್ಲಿ ಚಿರಪರಿಚಿತ ಕನ್ನಡದ ನಟ. ಹೀಗೆ ಉಪೇಂದ್ರರನ್ನ ಎರಡನೇ ಬಹುಮುಖ್ಯ ಪಾತ್ರವನ್ನಾಗಿ ಡಿಸೈನ್ ಮಾಡಲಾಗಿದೆ ಅನ್ನೋದು ಸದ್ಯಕ್ಕೆ ಬಂದಿರುವ ವಿಚಾರ. ಇನ್ನು ಉಪೇಂದ್ರ ಕೂಡ ರಜನಿಕಾಂತ್ ಜೊತೆ ಸ್ಕ್ರೀನ್‍್ ಶೇರ್ ಮಾಡಿಕೊಳ್ಳಲು ಬಹಳ ಉತ್ಸುಕರಾಗಿರುವ ವಿಚಾರ ಹೇಳ್ಕೊಂಡಿದ್ದಾರೆ. `ಯುಐ’ ಚಿತ್ರ ತೆರೆಕಂಡ ಬಳಿಕ ಕೂಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ಉಪೇಂದ್ರ `ಕೂಲಿ’ ತಂಡ ಸೇರ್ತಾರೆ ಎನ್ನಲಾಗುತ್ತಿದೆ.

  • ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ

    ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ

    ಹೆಸರಾಂತ ನಟ ರಜನಿಕಾಂತ್ (Rajinikanth) ಹಿಮಾಲಯಕ್ಕೆ ಹೋಗುವ ಮುನ್ನ ‘ನಾನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬಹುದಾ ಎನ್ನುವ ಪ್ರಶ್ನೆಗೆ ಅವರು ಮಾತನಾಡಲು ನಿರಾಕರಿಸಿದ್ದರು. ಈಗ ಹಿಮಾಲಯದಿಂದ ಬಂದಿರೋ ರಜನಿ, ಮೂವರು ಪ್ರಮುಖ ಮುಖಂಡರಿಗೆ ಶುಭಾಶಯ ಕೋರಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi), ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K. Stalin) ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ರಜನಿಕಾಂತ್ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಎನ್.ಡಿ.ಎ ಮಿತ್ರಕೂಟಕ್ಕೂ ಅವರು ಗೆಲುವಿನ ಶುಭಾಶಯಗಳನ್ನು ತಿಳಿಸಿದ್ದಾರೆ.

     

    ಒಂದು ವಾರಗಳ ಕಾಲ ಹಿಮಾಲಯದ ಪ್ರವಾಸದಲ್ಲಿದ್ದ ರಜನಿಕಾಂತ್, ಅಲ್ಲಿನ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ತಮ್ಮ ಇಷ್ಟದ ಗುಹೆಯಲ್ಲಿ ಧ್ಯಾನದಲ್ಲಿ ಮಗ್ನರಾಗಿದ್ದರು. ಈಗ ಅಲ್ಲಿಂದ ರಜನಿ ವಾಪಸ್ಸಾಗಿದ್ದಾರೆ.

  • ‘ಜ್ಯೂನಿಯರ್ಸ್’ ವಿರುದ್ಧ ತೊಡೆ ತಟ್ಟಿದ ತಲೈವಾ

    ‘ಜ್ಯೂನಿಯರ್ಸ್’ ವಿರುದ್ಧ ತೊಡೆ ತಟ್ಟಿದ ತಲೈವಾ

    ನ್ನಡ ಅಷ್ಟೇ ಅಲ್ಲ ಪರಭಾಷೆಯಲ್ಲೂ ಸ್ಟಾರ್‌ಗಳ ಚಿತ್ರ ಬರುವುದು ಅಪರೂಪ ಆಗಿದೆ. ಈ ನಡುವೆ ಓರ್ವ ಬಿಗ್‌ಸ್ಟಾರ್ ಇನ್ನೋರ್ವ ಬಿಗ್‌ಸ್ಟಾರ್ ಎದುರು ತೊಡೆ ತಟ್ಟಲು ಸಿದ್ಧವಾಗಿಬಿಟ್ಟರೆ ಅದಕ್ಕಿಂತ ಸ್ಟಾರ್‌ವಾರ್ ಇನ್ನೊಂದಿಲ್ಲ. ಇದೀಗ ಅಂಥದ್ದೇ ಸ್ಟಾರ್‌ವಾರ್‌ಗೆ ನಾಂದಿ ಹಾಡಿದ್ದಾರೆ ತಲೈವಾ. ಹೌದು ಜೂ.ಎನ್‌ಟಿಆರ್ (Jr. NTR) ಎದುರು ತೊಡೆ ತಟ್ಟಿ ಥಿಯೇಟರ್ ಯುದ್ಧಕ್ಕೆ ಇಳಿದಿದ್ದಾರೆ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth). ಹೀಗೆ ಸ್ಟಾರ್ ಸಿನಿಮಾಗಳು ಒಂದೇ ವಾರ ರಿಲೀಸ್ ಆದರೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು.

    ಮುಂದಿರುವ ದೊಡ್ಡ ಹಬ್ಬವೆಂದರೆ ಅದು ದಸರಾ. ದಸರಾ ಅಂದ್ರೆ ರಜಾದಿನಗಳು ಹೆಚ್ಚಿರುತ್ತೆ. ಹೀಗಾಗಿ ಇದೇ ತಿಂಗಳನ್ನ ಜೂ.ಎನ್‌ಟಿಆರ್ ಬಹುನಿರೀಕ್ಷಿತ ಚಿತ್ರ `ದೇವರ ಪಾರ್ಟ್-1′ (Devara) ರಿಸರ್ವ್ ಮಾಡಿಕೊಂಡಿತ್ತು. ಅಕ್ಟೋಬರ್ 10ಕ್ಕೆ `ದೇವರ’ ರಿಲೀಸ್ ಘೋಷಣೆಯಾಗಿ ತಿಂಗಳೇ ಉರುಳಿದೆ. ಆದರೆ ಜೂ.ಎನ್‌ಟಿಆರ್‌ಗೆ ಟಕ್ಕರ್ ಕೊಡಲು ಎಂಟ್ರಿ ಕೊಟ್ಟಿದ್ದಾರೆ ರಜನಿಕಾಂತ್. ಜೈಲರ್ ಬಳಿಕ ತಲೈವಾ  ಅಭಿನಯದ ಹೈವೋಲ್ಟೇಜ್ ಚಿತ್ರ `ವೆಟೈಯನ್’ ಕೂಡ ಅಕ್ಟೋಬರ್ 10ಕ್ಕೆ ರಿಲೀಸ್ ಆಗುವುದು ಆಲ್‌ಮೋಸ್ಟ್ ಕನ್ಫರ್ಮ್. ದೇವರ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗ್ತಿರುವ 300 ಕೋಟಿ ಬಜೆಟ್ ಚಿತ್ರವಾಗಿದ್ರೆ `ವೆಟೈಯನ್’ (Vetaiyan) ಕೂಡ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗ್ತಿರುವ 160 ಕೋಟಿ ಬಜೆಟ್ ಚಿತ್ರ.

    ಸೂಕ್ತ ವೆಕೇಷನ್‌ಗಾಗಿ ಕಾದಿದ್ದ `ವೈಟೈಯನ್’ ಟೀಮ್ ದಸರಾವನ್ನೇ ಬೆಸ್ಟ್ ಎಂದು ತೀರ್ಮಾನಿಸಿ ಆ ದಿನವನ್ನೇ ಘೋಷಣೆ ಮಾಡಿದೆ. ಇದರಿಂದಾಗಿ ದೇವರ ಚಿತ್ರತಂಡಕ್ಕೆ ತೀವ್ರ ಆಘಾತವಾಗಿದೆ. ಯಾವುದೇ ಪೈಪೋಟಿ ಬೇಡ ಎಂದು `ದೇವರ’ ತಂಡ ಮುಂಚೆಯೇ ರಿಲೀಸ್ ಡೇಟ್ ಘೋಷಿಸಿದ್ದರೂ ಸ್ಪರ್ಧೆ ಕೊಡಲು ಬಾಕ್ಸಾಫೀಸ್‌ನ ಸುಲ್ತಾನನನ್ನೇ ಕಣಕ್ಕಿಳಿಸಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಅಂದಹಾಗೆ ವೆಟೈಯನ್ ತಮಿಳು ದೇವರ ತೆಲುಗು ಮೂಲದ ಚಿತ್ರ. ಆದರೂ ಇದು ಪ್ಯಾನ್ ಇಂಡಿಯಾ ಚಿತ್ರ ಅನ್ನೋದೇ ಮುಖ್ಯ ವಿಷಯ. ಒಂದು ದೊಡ್ಡ ಚಿತ್ರಕ್ಕೇ ಥಿಯೇಟರ್ ಸಮಸ್ಯೆ ಎದುರಾಗೋ ಸಮಯದಲ್ಲಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ಕಣಕ್ಕಿಳಿದರೆ ಸಿನಿಪ್ರೇಮಿಗಳ ಮುಂದೆ ಆಫ್ಷನ್ ಬರುತ್ತೆ. ಹೀಗಾಗಿ ಒಂದಕ್ಕೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಆಗುವ ಸಂಭವವೂ ಇರುತ್ತೆ.

    `ಜೈಲರ್’ ಬಳಿಕ ರಜನಿಕಾಂತ್ ತೆರೆ ಮೇಲೆ ಅಬ್ಬರಿಸೋಕೆ ಬರ್ತಿರುವ ಚಿತ್ರ `ವೆಟೈಯನ್’ ಆಗಿದ್ರೆ ಆರ್‌ಆರ್‌ಆರ್ ಯಶಸ್ಸಿನ ಬಳಿಕ ಸುದೀರ್ಘ ಮೂರು ವರ್ಷದ ಗ್ಯಾಪ್ ಬಳಿಕ ತೆರೆಗೆ ಬರ್ತಿರುವ ಜೂ.ಎನ್‌ಟಿಆರ್ ಅಭಿನಯದ ಚಿತ್ರ `ದೇವರ’. ಇವೆರಡೂ ಸದ್ಯದ ಗಲ್ಲಾಪೆಟ್ಟಿಗೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಲಿಸ್ಟ್ನಲ್ಲಿ ಮುಂಚೂಣಿಯಲ್ಲಿರುವ ಚಿತ್ರಗಳು. ಇಂತಹ ಚಿತ್ರಗಳೇ ಒಂದೇ ದಿನಾಂಕವನ್ನ ಅಂಟಿಕೊಂಡಂತೆ ಚಿಕ್ಕಪುಟ್ಟ ಬಜೆಟ್ ಸಿನಿಮಾಗಳಿಗೆ ದಿಕ್ಕುದೆಸೆ ಇಲ್ಲದಂತಾಗುತ್ತೆ. ಆದರೂ ಅನಿವಾರ್ಯ. ಈಗಾಗ್ಲೇ ಕನ್ನಡದಲ್ಲಿ ಧ್ರುವ ಸರ್ಜಾರ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಅಕ್ಟೋಬರ್ ತಿಂಗಳಲ್ಲೇ ರಿಲೀಸ್ ದಿನಾಂಕ ಘೋಷಿಸಿದೆ. ಹಿಂದಿಯಲ್ಲೂ ಬಿಗ್‌ಸ್ಟಾರ್ ಚಿತ್ರಗಳು ಇದೇ ದಿನಾಂಕ ಗುರಿ ಇಟ್ಟುಕೊಂಡಿದೆ ಎನ್ನಲಾಗುತ್ತೆ. ಹೀಗಾಗಿ ಈ ದಸರಾ ಹಬ್ಬಕ್ಕೆ ಥಿಯೇಟರ್‌ನಲ್ಲಿ ಪಟಾಕಿ ಸೌಂಡ್ ಕೊಂಚ ಹೆಚ್ಚೇ ಇರುತ್ತೆ.

  • ಶೂಟಿಂಗ್ ಸೆಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ರಜನಿ-ಅಮಿತಾಭ್

    ಶೂಟಿಂಗ್ ಸೆಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ರಜನಿ-ಅಮಿತಾಭ್

    ಭಾರತೀಯ ಸಿನಿಮಾ ರಂಗದ ದಿಗ್ಗಜರುಗಳಾದ ರಜನಿ ಮತ್ತು ಅಮಿತಾಭ್ ಬಚ್ಚನ್ (Amitabh Bachchan) ಅವರ ಸಮಾಗಮಾ ಆಗಿದೆ. ಕೌನ್ ಬನೇಗಾ ಕರೋಡ್ಪತಿ ಶೂಟಿಂಗ್ ನಲ್ಲಿ  ಬ್ಯುಸಿಯಾಗಿದ್ದ ಅಮಿತಾಭ್ ಈಗ ವೆಟ್ಟೈಯನ್ (Vettaiyan) ಚಿತ್ರದ ಶೂಟಿಂಗ್ (Shooting) ನಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋವನ್ನು ನಿರ್ಮಾಣ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ರಜನಿಕಾಂತ್ (Rajanikanth) ನಟನೆಯ ‘ಲಾಲ್ ಸಲಾಂ’ (Lal Salaam) ಸಿನಿಮಾ ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಆದರೂ, ಅಂದುಕೊಂಡಷ್ಟು ಚಿತ್ರಕ್ಕೆ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗಲಿಲ್ಲ. ಮೊದಲ ದಿನ ಗಳಿಕೆ ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿತ್ತು. ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ತಲೈವ ಘೋಷಿಸಿದ್ದರು. ಅದೇ ವೆಟ್ಟೈಯನ್.

    ‘ವೆಟ್ಟೈಯನ್’ ಲಾಲ್ ಸಲಾಂ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯೇ ಬಂಡವಾಳ ಹೂಡುತ್ತಿದೆ. ಈ ಸಿನಿಮಾಗೆ ಶೇಕಡ 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಇನ್ನುಳಿದ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ರಜನಿಕಾಂತ್ ಮಾಹಿತಿ ನೀಡಿದ್ದರು.

     

    ‌’ವೆಟ್ಟೈಯನ್’ ತಲೈವ ಅವರು ನಟಿಸುತ್ತಿರುವ 170ನೇ ಸಿನಿಮಾ. ಟೈಟಲ್ ಟೀಸರ್ ನೋಡಿದ ಎಲ್ಲರೂ ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಗೆ ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.